National

ಜೈ ಶ್ರೀರಾಮ್ ಇವರಿಗೆ ಅಸಲಿಮಿರ್ಚಿ!!

ಜೈ ಶ್ರೀರಾಮ್.
ಈ ಒಂದು ಘೋಷಣೆ ಎಲ್ಲರ ಎದೆಯಲ್ಲಿ ಬೆಂಕಿ ಹುಟ್ಟಿಸಲು ಸಾಕು. ಪಶ್ಚಿಮ ಬಂಗಾಳದ ಚುನಾವಣೆಯ ಹೊತ್ತಲ್ಲಿ ಈ ಘೋಷಣೆಗೆ ದೀದಿ ತೋರಿದ ಪ್ರತಿಕ್ರಿಯೆಯೇ ಇದು ವ್ಯಾಪಕವಾಗಲು ಕಾರಣವಾಗಿಬಿಟ್ಟಿತು. ದೀದಿಯ ನಂಬಿಕೆ-ಆಸ್ಥೆಗಳ ಬಗ್ಗೆ ಅನೇಕ ಮಾತುಗಳಿವೆ. ಆಕೆ ನಮಾಜ್ ಮಾಡುತ್ತಾರೆಂದು ಕೆಲವರು ಹೇಳಿದರೆ ಇನ್ನೂ ಕೆಲವರು ದುಗರ್ಾ ಸಪ್ತಶತಿ ಪಾರಾಯಣ ಮಾಡುತ್ತಾರೆ ಎಂದು ಹೇಳುತ್ತಾರೆ. ಒಟ್ಟಾರೆಯಾಗಿ ಆಕೆಯ ಕುರಿತಂತಹ ಗೊಂದಲಗಳು ಮಾತ್ರ ಎಂದಿಗೂ ಮುಗಿಯದಿರುವಂಥದ್ದು. ಎಡಪಂಥೀಯರಿಂದ ಅಧಿಕಾರವನ್ನು ಕಸಿದ ದೀದಿ ಮುಸಲ್ಮಾನರ ಓಲೈಕೆ ಮಾಡಬೇಕೆಂಬ ಧಾವಂತಕ್ಕೆ ಬಿದ್ದವರು. ಪಶ್ಚಿಮಬಂಗಾಳದಲ್ಲಿ ಎಡಪಂಥೀಯರ ಕಥೆ ಇಂದು ಪೂರ್ಣ ಮುಗಿದಿರುವುದು ನಿಜವಾದರೂ ಬಹುಶಃ ಅವರಷ್ಟೇ ಕೆಟ್ಟ ಆಡಳಿತದ ಪರ್ವ ಅಲ್ಲಿ ನಡೆಯುತ್ತಿದೆ. ಎಡಪಂಥೀಯರ ಕಾಲದಲ್ಲಿ ಉಡುಗಿ ಹೋಗಿದ್ದ ಹಿಂದೂಗಳ ಧಾಮರ್ಿಕ ಭಾವನೆ ದೀದಿಯ ಕಾಲದಲ್ಲೇನೂ ಎದ್ದೆದ್ದು ಕುಣಿದಾಡಲಿಲ್ಲ. ರೋದನೆ ಮುಂದುವರೆಯಿತಷ್ಟೇ. ಅದಕ್ಕೆ ಮುಸಲ್ಮಾನರ ದಬ್ಬಾಳಿಕೆಯೂ ಸೇರಿಕೊಂಡಿತ್ತು. ಬದಲಾವಣೆಯ ಕೆಂಡ ಒಳಗೆ ಧಗಧಗನೆ ಉರಿಯುತ್ತಿತ್ತು. ಮೇಲೆ ಹೆದರಿಕೆಯ ಬೂದಿಯಷ್ಟೇ ಆವರಿಸಿಕೊಂಡಿತ್ತು. ಯಾವಾಗ ಮೋದಿ ಮತ್ತು ಅಮಿತ್ಶಾ ಆ ಬೂದಿಯನ್ನು ಊದಿದರೋ ಒಳಗಿನ ಕೆಂಡ ಪ್ರಜ್ವಲಿಸಲಾರಂಭಿಸಿತು. ಆಗ ಶುರುವಾಗಿದ್ದೇ ಜೈ ಶ್ರೀರಾಮ್ ತಾಕಲಾಟ!

ಸಹಿಷ್ಣುತೆಯ ಕಥೆಗಳನ್ನು ಊರ ತುಂಬಾ ಹೇಳಿಕೊಂಡು ತಿರುಗಾಡುವ ಉದಾರವಾದಿಗಳು ಈ ಘೋಷಣೆಯನ್ನು ದೀದಿ ಏಕೆ ಕಂಠಮಟ್ಟ ವಿರೋಧಿಸಿದರು ಎಂಬುದನ್ನು ಮಾತ್ರ ಪ್ರಶ್ನಿಸುವುದಿಲ್ಲ. ಆದರೆ ಇದನ್ನೇ ಮುಂದಿಟ್ಟುಕೊಂಡು ಆನಂತರ ದೇಶದಾದ್ಯಂತ ಹಿಂದುಗಳು ಜೈ ಶ್ರೀರಾಮ್ ಎನ್ನುವುದನ್ನು ಬಿಟ್ಟೂಬಿಡದೇ ಪ್ರಶ್ನಿಸಿದರು. ನಾವು ಈ ಘೋಷಣೆ ಕೂಗುವುದೇ ಮುಸಲ್ಮಾನರಿಗೆ ಹೆದರಿಕೆ ಹುಟ್ಟಿಸಲು ಎಂಬಂತಹ ಮಾತುಗಳನ್ನಾಡಲು ಹಿಂಜರಿಯಲಿಲ್ಲ. ಅದರ ಪರಿಣಾಮವಾಗಿಯೇ ಎರಡನೇ ಹಂತದ ಅಸಹಿಷ್ಣುತೆಯ ಪರ್ವ ಶುರುವಾಯ್ತು. ದೇಶದಾದ್ಯಂತ ಎಲ್ಲಿ ಮುಸಲ್ಮಾನರು ತೀರಿಕೊಂಡರೂ ಅದಕ್ಕೆ ಕಾರಣವೇ ಈ ಘೋಷಣೆ ಎನ್ನಲಾಯ್ತು. ಕೆಲವು ಕಡೆಯಲ್ಲಂತೂ ಸುದ್ದಿ ವಾಹಿನಿಗಳಲ್ಲಿ ಹೆಸರು ಬರಬೇಕೆಂದೇ ಕೆಲವರು ಈ ಕುರಿತು ಸುಳ್ಳು ಹೇಳಿದ್ದು ವರದಿಯಾಯ್ತು. ಮಸೀದಿಯೊಂದರ ಆವರಣದಲ್ಲಿ ಆಟವಾಡುತ್ತಿದ್ದ ಮುಸಲ್ಮಾನ ಬಾಲಕರು ತಮ್ಮ-ತಮ್ಮಲ್ಲೇ ಕಿತ್ತಾಟ ನಡೆಸಿ ಹೊಡೆದಾಡಿಕೊಂಡಿದ್ದಕ್ಕೆ ಜೈ ಶ್ರೀರಾಮ್ ಘೋಷಣೆ ಕೂಗದಿರುವುದೇ ಕಾರಣ ಎಂಬ ಬಣ್ಣ ಬಳಿಯಲಾಯಿತಾದರೂ ಆನಂತರ ಅದು ಆಟದ ಕಾರಣಕ್ಕಾಗಿಯೇ ಆದ ಗಲಾಟೆ ಎಂಬುದು ಮತ್ತು ಗಲಾಟೆ ನಡೆದಿದ್ದ ಎರಡು ಮುಸಲ್ಮಾನ ತರುಣರ ಗುಂಪಿನ ನಡುವೆಯೇ ಎಂಬುದೂ ಬೆಳಕಿಗೆ ಬಂತು. ಈ ನಡುವೆ ಅನೇಕ ಕಡೆ ಮುಸಲ್ಮಾನ ತರುಣರು ಪುಟ್ಟ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದು ವರದಿಯಾಯ್ತು. ಗುಜರಾತ್ನಲ್ಲಿ ದಲಿತರನ್ನು ಬಡಿದು ಕೊಂದಿದ್ದು ವರದಿಯಾಯ್ತು. ಅದ್ಯಾವುದಕ್ಕೂ ಪ್ರತಿಕ್ರಿಯಿಸದ ಈ ಲಿಬರಲ್ಗಳು ಒಟ್ಟುಗೂಡಿ ದೇಶದಲ್ಲಿ ಹಿಂದೂಗಳ ಕಾರಣಕ್ಕಾಗಿ ಅಸಹಿಷ್ಣುತೆ ಇದೆ ಎಂಬುದನ್ನು ಬಹಿರಂಗ ಪತ್ರ ಬರೆಯುವ ಮೂಲಕ ತೋಡಿಕೊಂಡರು. ಈ ಹಿಂದೆ ಉತ್ತರಪ್ರದೇಶದ ಚುನಾವಣೆಗೂ ಮುನ್ನ ಅವರ ಈ ಪ್ರಕ್ರಿಯೆ ಯಶಸ್ವಿಯಾಗಿತ್ತು. ಈ ಬಾರಿ ಹಾಗಿಲ್ಲ. ಜನ ಯಾವ ಅವಾಡರ್ು ವಾಪ್ಸಿಯನ್ನೂ ಈ ಬಾರಿ ನಂಬಲು ಸಿದ್ಧರಿಲ್ಲ. ಈ ಕೆಲವು ಬುದ್ಧಿಜೀವಿಗಳೇ ಹಾಗೆ. ಕಾಂಗ್ರೆಸ್ ಸಕರ್ಾರಕ್ಕೆ ತೊಂದರೆಯುಂಟಾದಾಗ, ಬಿಜೆಪಿಯ ಗೆಲುವು ಅಬಾಧಿತವೆನಿಸಿದಾಗ ಮಾತ್ರ ಮಾತನಾಡುತ್ತಾರೆ. ಉಳಿದಂತೆ ಪರಮ ಮೌನಕ್ಕೆ ಶರಣಾಗುತ್ತಾರೆ. ಕನರ್ಾಟಕದಲ್ಲೂ ಖ್ಯಾತ ಲೇಖಕರೊಬ್ಬರು ಇತ್ತೀಚೆಗೆ ಅತೃಪ್ತ ಶಾಸಕರ ಕುರಿತಂತೆ ಹೇಳಿಕೆ ಕೊಟ್ಟಿದ್ದು ನೆನಪಿದೆ ತಾನೇ? ಅವರಿಗೆ 37 ಸೀಟು ಪಡೆದ ಕುಮಾರಸ್ವಾಮಿಯವರು ಕಾಂಗ್ರೆಸ್ಸಿನ ಸಹಕಾರದೊಂದಿಗೆ ಅಧಿಕಾರ ನಡೆಸಿದಾಗ ಅನೈತಿಕತೆಯ ಛಾಯೆ ಕಂಡುಬಂದಿರಲಿಲ್ಲ. ಈಗ ಅದು ಕಣ್ಣಿಗೆ ರಾಚುತ್ತಿದೆ. ಅದರರ್ಥ ಸಮಸ್ಯೆ ಇರುವುದು ಬುದ್ಧಿಜೀವಿಗಳ ವ್ಯಕ್ತಿತ್ವದಲ್ಲೇ ಹೊರತು ಜನರ ಆಲೋಚನೆಯಲ್ಲಲ್ಲ.

ಒಂದೇ ಒಂದು ಸಂತೋಷದ ಸಂಗತಿಯೆಂದರೆ ಈ ಬಾರಿ ಈ ಬುದ್ಧಿಜೀವಿಗಳ ಆಟ ನಡೆಯಲಿಲ್ಲ. ಬಹಿರಂಗವಾದ ಈ ಪತ್ರವನ್ನು ಅವರು ಬರೆದೊಡನೆ ಉಳಿದವರೆಲ್ಲಾ ತಿರುಗಿ ಬಿದ್ದರು. ಎಲ್ಲ ಮಾಧ್ಯಮಗಳೂ ಬುದ್ಧಿಜೀವಿಗಳ ಈ ಇಬ್ಬಂದಿತನದ ಕುರಿತಂತೆ ಮುಲಾಜಿಲ್ಲದೇ ಆಡಿಕೊಂಡವು. ಕಂಗನಾ ರೌನತ್ ಸೇರಿದಂತೆ ಅನೇಕರು ಇದಕ್ಕೆ ಪ್ರತಿಯಾಗಿ ಪತ್ರವನ್ನು ಬರೆದು ದೇಶದ ಪರವಾಗಿ ನಿಂತರು. ಬುದ್ಧಿಜೀವಿಗಳ ದ್ವಂದ್ವ ನೀತಿಯ ಕುರಿತಂತೆ ಎಲ್ಲರ ಗಮನ ಸೆಳೆದರು. ಹೌದಲ್ಲವೇ ಮತ್ತೇ? ಮುಸಲ್ಮಾನರ ಸಾವಿಗೆ ಬಾಯಿ ಬಡಿದುಕೊಳ್ಳುವ ಇವರೆಲ್ಲಾ ಮುಸಲ್ಮಾನರ ಆಕ್ರಮಣಕ್ಕೆ ಹಿಂದುಗಳು ತೀರಿಕೊಂಡಾಗ ಸುಮ್ಮನಿರುತ್ತಾರೆ ಏಕೆ? ಅಂದರೆ ಇವರ ಕಾಳಜಿ ಜೀವಪರವಲ್ಲ, ಒಂದು ಜಾತಿ ವಿಶೇಷದ ಪರ. ಮೊದಲ ಬಾರಿಗೆ ಇವರು ಈ ರೀತಿಯದ್ದೊಂದು ಪ್ರಯೋಗ ಮಾಡಿದಾಗ ದೇಶ ಗಾಬರಿಗೊಂಡಿತ್ತು. ಅದು ಬಿಹಾರದ ಚುನಾವಣೆಯಲ್ಲಿ ಭರ್ಜರಿ ಕೆಲಸವನ್ನೂ ಮಾಡಿತ್ತು. ಮೋದಿಯವರ ವಿರುದ್ಧ ನಡೆದ ಈ ಷಡ್ಯಂತ್ರ ಬೆಳಕಿಗೆ ಬರಲು ಸ್ವಲ್ಪ ಸಮಯವನ್ನೇ ತೆಗೆದುಕೊಂಡಿತ್ತು. ಇದು ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಲು ಹೂಡಿದ ತಂತ್ರವೆಂದು ಅರಿವಾದೊಡನೆ ಭಾರತೀಯ ವಿಶೇಷವಾಗಿ ಹಿಂದೂ ಗಾಬರಿಗೊಂಡ. ತನ್ನ ನಾಲಿಗೆಯನ್ನು ತಾನೇ ಕಚ್ಚಿಕೊಳ್ಳದೇ ಅವನಿಗೆ ಬೇರೆ ದಾರಿಯೇ ಇರಲಿಲ್ಲ. ಇದು ಅವನೊಳಗಿನ ಜಾಗೃತಿಯನ್ನು ಹೆಚ್ಚು ಮಾಡಿತು. ಹೀಗಾಗಿಯೇ ಈಗ ಆತ ಮೋಸ ಹೋಗಲು ಸಿದ್ಧನಿಲ್ಲ. ಗೃಹಸಚಿವರಾಗಿ ಅಮಿತ್ಶಾ ಬೇರೆ ಕುಳಿತಿರುವುದರಿಂದ ಭಾರತವೀಗ ಪೂರ್ಣ ತಯಾರಿಯೊಂದಿಗೆ ಇದೆ. ಈ ರೀತಿಯ ಛದ್ಮಯುದ್ಧಗಳನ್ನು ಖಂಡಿತ ಮುಲಾಜಿಲ್ಲದೇ ಎದುರಿಸಬಲ್ಲೆವು. ನೆನಪಿಡಿ, ಇದು ಸಾಮಾನ್ಯವಾದ ಯುದ್ಧವಲ್ಲ. ಭಾರತವನ್ನು ಜಾಗತಿಕಮಟ್ಟದಲ್ಲಿ ಕೆಳಮಟ್ಟದಲ್ಲಿ ತೋರಿಸುವ ನೀಚ ಮಾದರಿಯ ಕದನ. ನರೇಂದ್ರಮೋದಿ ಅಸಹಿಷ್ಣುತೆಯ ಪರ್ವ ನಡೆಯುವ ಕಾಲಕ್ಕೆ ವಿದೇಶಕ್ಕೆ ಹೋಗಿದ್ದಾಗ ಅಲ್ಲೂ ಕೂಡ ಬಿಬಿಸಿಯವರು ಇದೇ ಪ್ರಶ್ನೆ ಕೇಳಿದ್ದು ನಿಮಗೆ ನೆನಪಿರಬೇಕಲ್ಲ? ಸದಾ ಭಾರತವನ್ನು ಹಳಿಯುತ್ತಾ ಸಾಮಥ್ರ್ಯವನ್ನು ಕುಂದಿಸುವ ಪ್ರಯತ್ನ ಮಾಡುವ ಈ ಬಗೆಯ ಜನರಿಗೆ ಇವರು ಸಾಕಷ್ಟು ಕೊಡುಗೆ ನೀಡುತ್ತಾರೆ. ಈ ಬಾರಿ ಭಾರತೀಯರು ಹಾಗಾಗಲು ಬಿಟ್ಟಿಲ್ಲ. ಎಲ್ಲರೂ ಒಗ್ಗಟ್ಟಾಗಿ ನಿಂತುಕೊಂಡು ಇವರ ಸುಳ್ಳುಗಳನ್ನೇ ಬಟಾಬಯಲು ಮಾಡುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಅರ್ನಬ್ ಗೋಸ್ವಾಮಿಯಂಥವರು ಹಠಕ್ಕೆ ಬಿದ್ದು ಇವರುಗಳ ಬಂಡವಾಳವನ್ನು ಬಯಲಿಗೆಳೆದು ತರುತ್ತಿದ್ದಾರೆ. ಹೀಗಾಗಿಯೇ ಭಾರತವೀಗ ಬಚಾವಾಗಿದೆ. ಇನ್ನೂ ಐದು ವರ್ಷಗಳ ಕಾಲ ಮೋದಿ ಅಧಿಕಾರದಲ್ಲಿರುತ್ತಾರೆ ಎನ್ನುವುದೇ ಈ ಪ್ರತ್ಯೇಕತಾವಾದಿಗಳ ಪಾಲಿಗೆ ನುಂಗಲಾರದ ಬಿಸಿತುಪ್ಪ. ಬರಲಿರುವ ದಿನಗಳಲ್ಲಿ ಇಂತಹ ಅನೇಕ ಆಕ್ರಮಣಗಳು ಎದುರಾಗಲಿವೆ. ನಾವೆಲ್ಲರೂ ಜೊತೆಯಾಗಿರಬೇಕಷ್ಟೇ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top