National

ಜೈಶ್-ಎ-ಮೊಹಮ್ಮದ್ ಜೊತೆ ಸಂಬಂಧವಿದೆ ಎಂದು ಒಪ್ಪಿಕೊಂಡ ಕಶ್ಮೀರಿ ಉಗ್ರರು!!

ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳದವರು ಫೆಬ್ರವರಿ 23 ರಂದು ಸಹರನ್ ಪುರದ ದಿಯೋಬಂದ್ ನಲ್ಲಿ ಇಬ್ಬರು ಕಾಶ್ಮೀರಿ ಯುವಕರನ್ನು ಬಂಧಿಸಿದ್ದರು. ಅವರು ನಿನ್ನೆ ಪುಲ್ವಾಮಾ ದಾಳಿಯನ್ನು ನಡೆಸಿದ ಜೈಶ್-ಎ-ಮೊಹಮ್ಮದ್ ನೊಡನೆ ತಮಗೆ ಸಂಪರ್ಕವಿದೆ ಎಂಬ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಜೈಶ್-ಎ-ಮೊಹಮ್ಮದ್ ಹಲವು ದಾಳಿಗಳನ್ನು ಭಾರತದಲ್ಲಿ ನಡೆಸುವ ಯೋಜನೆಯಿದ್ದದ್ದರಿಂದ ಸೇನೆಗೆ ಹೈ ಅಲರ್ಟ್ ಅನ್ನು ಹಾಕಲಾಗಿತ್ತು!

ಅಷ್ಟೇ ಅಲ್ಲದೇ, ಕುಲ್ಗಾಮ್ ನ ಶಹ್ನವಾಜ್ ಅಹ್ಮದ್ ತೇಲಿ ಮತ್ತು ಪುಲ್ವಾಮಾದ ಆಕಿಬ್ ಅಹ್ಮದ್ ಮಲಿಕ್ ಎಂಬ ಈ ಇಬ್ಬರು ಜೈಶ್-ಎ-ಮೊಹಮ್ಮದ್ ಉಗ್ರರಿಗೆ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಗಾಜಿಯೊಡನೆಯೂ ಸಂಬಂಧವಿತ್ತು. ಆತನನ್ನು ದಾಳಿ ನಡೆದ ನಾಲ್ಕೇ ದಿನದಲ್ಲಿ ಭಾರತೀಯ ಸೇನೆ ಕೊಂದುಬಿಸಾಡಿತ್ತು.

ಇದರ ವಿಚಾರಣೆ ನಡೆಸುತ್ತಿರುವ ಭಯೋತ್ಪಾದಕ ನಿಗ್ರಹ ದಳ ಈ ಇಬ್ಬರಲ್ಲಿ ಒಬ್ಬನ ಫೋನಿನ ವಾಯ್ಸ್ ಮೆಸೇಜನ್ನು ಪರಿಶೀಲನೆ ನಡೆಸಿದೆ. ಅದರಲ್ಲಿ ಬಡಾ ಕಾಮ್ ಅಂದರೆ ದೊಡ್ಡ ಕೆಲಸ ಮತ್ತು ಸಾಮಾನ್ ಅಂದರೆ ವಸ್ತುಗಳು ಎಂಬ ಪದಗಳು ಹೇಳಿರುವುದು ದೊರೆತಿದೆ.

ಉತ್ತರಪ್ರದೇಶದ ಡಿಜಿಪಿ ಓ.ಪಿ ಸಿಂಗ್ ಅವರು ನಾಲ್ಕು ಗಂಟೆಗಳ ಕಾಲ ನಡೆದ ಸುದೀರ್ಘ ವಿಚಾರಣೆಯಲ್ಲಿ ಇಬ್ಬರೂ ತಾವು ಜೈಶ್-ಎ-ಮೊಹಮ್ಮದ್ ಗೆ ಸೇರಿದ್ದವರೆಂದು ಒಪ್ಪಿಕೊಂಡಿದ್ದಾರೆ ಎಂದರು. ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಅಸೀಮ್ ಅರುಣ್ ಅವರು ಶಹ್ನವಾಜ್ ಉಗ್ರರೊಂದಿಗೆ 18 ತಿಂಗಳಿಂದ ಸಂಪರ್ಕದಲ್ಲಿದ್ದರೆ ಆಕಿಬ್ 6 ತಿಂಗಳಿಂದ ಸಂಪರ್ಕದಲ್ಲಿದ್ದರು ಎಂದಿದ್ದಾರೆ.

ಎನ್ ಐ ಎ ಕೂಡ ಪುಲ್ವಾಮಾ ದಾಳಿಯ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುತ್ತಿದೆಯಲ್ಲದೇ ಇಂದು ಭಾರತ ಬೆಳಿಗ್ಗೆ ಪಾಕಿಸ್ತಾನದೊಳಗೆ ಹೋಗಿ ಮೂರು ಕಡೆಗಳಲ್ಲಿ ಉಗ್ರರ ಲಾಂಚ್ ಪ್ಯಾಡುಗಳನ್ನು ಸಂಪೂರ್ಣ ನಾಶಗೊಳಿಸಿದೆ. ಬೆಳಿಗ್ಗೆ 3.45 ರ ಹೊತ್ತಿಗೆ 12 ಮಿರಾಜ್ 2000 ಜೆಟ್ ಗಳು ಪಾಕಿಸ್ತಾನದ ಗಡಿಯೊಳಗೆ ಹೋಗಿ ಬಾಲಾಕೋಟ್, ಚಿಕೋಟಿ ಮತ್ತು ಮುಜಫರಾಬಾದಿನಲ್ಲಿ ಉಗ್ರರ ಕ್ಯಾಂಪುಗಳನ್ನು ಭಗ್ನಗೊಳಿಸಿದೆ.

 

Click to comment

Leave a Reply

Your email address will not be published. Required fields are marked *

Most Popular

To Top