National

ಜಿಎಸ್ಟಿ ಲಾಗೂ ಆಗುವುದಕ್ಕೂ ಸರಕು ಸಾಗಾಣೆಯ ಟ್ರಕ್ಕು 100 ಕಿ.ಮೀ ಹೆಚ್ಚು ಕ್ರಮಿಸುವುದಕ್ಕೂ ಸಂಬಂಧ ಇದೆ ಗೊತ್ತಾ?!

ಜಿಎಸ್‌ಟಿ ಜಾರಿಯಾದ ನಂತರ ದೇಶದಲ್ಲಿ ಟ್ರಕ್‌ಗಳು ಕ್ರಮಿಸುತ್ತಿರುವ ದೂರ ದಿನಕ್ಕೆ ಅಂದಾಜು 100 ರಿಂದ 150 ಕಿಲೋಮೀಟರ್ ನಷ್ಟು ಹೆಚ್ಚಾಗಿದೆ ಎಂದು ಸಂಚಾರಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.‌ 2017 ರ‌ ಜುಲೈ 1 ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಜಾರಿಗೊಳಿಸಲಾಯ್ತು.

ಸರ್ಕಾರ ಜಿಎಸ್‌ಟಿಯನ್ನು ಜಾರಿಗೊಳಿಸಿದ ಆರೇ ತಿಂಗಳಲ್ಲಿ ಅದರಿಂದಾಗುತ್ತಿರುವ ಲಾಭಗಳು ಹೊರಬಂದಿವೆ. ಜಿಎಸ್‌ಟಿ ಜಾರಿಗೊಳಿಸುತ್ತಿದ್ದಂತೆ ಟ್ರಕ್ಕೊಂದು ಕ್ರಮಿಸಬಹುದಾದ ಅಂದಾಜು ದೂರ ದಿನಕ್ಕೆ 400 ರಿಂದ 450 ಕಿಲೋಮೀಟರ್ ಆಗಿದೆ ಎಂದು ಟಿಸಿಐ ಎಕ್ಸ್‌ಪ್ರೆಸ್‌ನ ಸಿಇಒ ಪಿ.ಸಿ ಶರ್ಮ ಹೇಳಿದ್ದಾರೆ.‌ ಜಿಎಸ್‌ಟಿ ಬಂದ ನಂತರ ಟ್ರಕ್ಕುಗಳು ಕ್ರಮಿಸುವ ದೂರ ಅಂದಾಜು 100-150 ಕಿಲೋಮೀಟರ್‌‌‌ನಷ್ಟು ಹೆಚ್ಚಾಗಿದೆ ಎಂದು ಟೈಗರ್ ಲಾಜಿಸ್ಟಿಕ್ಸ್‌ನ ಚೇರ್‌ಮನ್ ಹರ್‌ಪ್ರೀತ್ ಸಿಂಗ್ ಮಲ್ಹೋತ್ರಾ ಹೇಳಿದ್ದಾರೆ.‌ ಇದಕ್ಕೂ ಮೊದಲು ಹಲವು ಚೆಕ್ ಪಾಯಿಂಟ್‌ಗಳು, ಆಕ್ಟ್ರಾಯ್‌, ಇನ್ನೂ ಹತ್ತು ಹಲವು ತಡೆಗಳು ಇದ್ದ ಕಾರಣ ಟ್ರಕ್ಕುಗಳು 10-12 ಗಂಟೆ ಚಲಿಸುತ್ತಿದ್ದವು ಮತ್ತು ದಿನಕ್ಕೆ 300 ರಿಂದ 350 ಕಿಲೋಮೀಟರ್ ಮಾತ್ರ ಚಲಿಸುತ್ತಿದ್ದವು. ‘ದೆಹಲಿಯಿಂದ ಬೆಂಗಳೂರಿಗೆ ಚಲಿಸುತ್ತಿದ್ದ ನಮ್ಮ ಟ್ರಕ್ಕುಗಳು 5 ರಿಂದ 6 ಕಡೆಗಳಲ್ಲಿ ನಿಲ್ಲುತ್ತಿದ್ದವು ಮತ್ತು ಪ್ರತಿ ಸಲ ನಿಂತಾಗಲೂ ಕನಿಷ್ಠ ಪಕ್ಷ 5 ಗಂಟೆ ಸಮಯ ಹಾಳಾಗುತ್ತಿತ್ತು’ ಎನ್ನುತ್ತಾರೆ ಶರ್ಮ ಅವರು.

ಟಿಸಿಐ ಎಕ್ಸ್‌ಪ್ರೆಸ್‌ ಸ್ಥಳೀಯ ಲಾಜಿಸ್ಟಿಕ್ಸ್ ಎಕ್ಸ್‌ಪ್ರೆಸ್‌ ಕಂಪೆನಿಗಳಲ್ಲಿ 4 ಪ್ರತಿಶತದಷ್ಟು ಶೇರನ್ನು ಹೊಂದಿದೆ. ಗ್ರಾಹಕರಾದ ಆಟೊಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಕಂಪೆನಿಗಳಾದ ಹೊಂಡಾ ಮತ್ತು ಮಾರುತಿ, ಔಷಧ ಕಂಪೆನಿಗಳಾದ ಜೈಡಸ್ ಕ್ಯಾಡಿಲ ಮತ್ತು ಡಾ. ರೆಡ್ಡಿಸ್ ಲ್ಯಾಬ್‌ಗಳಿಗೆ ಸರಕನ್ನು ಕಳಿಸಲು ತೆಗೆದುಕೊಳ್ಳುತ್ತಿದ್ದ ಅತ್ಯಂತ ಕಡಿಮೆಯಾಗಿದೆ.‌ ಟೈಗರ್ ಲಾಜಿಸ್ಟಿಕ್ಸ್ ಕೂಡ ಹಲವು ದೊಡ್ಡ ಗ್ರಾಹಕರನ್ನು – ಆಟೊಮೊಬೈಲ್ ಕ್ಷೇತ್ರದಲ್ಲಿ ಹಿರೊ, ಯಮಹಾ, ಸುಜುಕಿ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಎಲ್‌ಜಿ ಮತ್ತು ಸುಕಮ್ ಎಂಬ ಕಂಪೆನಿಗಳನ್ನು ಹೊಂದಿದೆ. ಹಲವು ಸುಂಕಗಳನ್ನು ತೆಗೆದಿರುವುದು‌ ಕೇವಲ ಸಾರಿಗೆ ಕಂಪೆನಿಗಳಿಗಷ್ಟೇ ಅಲ್ಲದೇ ಗ್ರಾಹಕರಿಗೂ ಸಹಾಯವಾಗಿದೆ. ಇದರ ಜೊತೆಗೆ ವಾಹನಗಳ ನಿರ್ವಹಣಾ ಖರ್ಚು 30 ಪ್ರತಿಶತದಷ್ಟು ಕಡಿಮೆಯಾಗಿದೆ. ಸಂಚಾರಕ್ಕ ಎಲ್ಲಿಯೂ ತಡೆಯಿಲ್ಲದ ಕಾರಣ ವಾಹನಗಳ ಮೈಲೇಜ್ ಕೂಡ 10 ರಿಂದ 15 ಪ್ರತಿಶತ ಹೆಚ್ಚಾಗಿದೆ. ‘ಅಧಿಕಾರಿಗಳಿಂದ ಟ್ರಕ್ಕು ಚಾಲಕರು ಒಂದು ರೀತಿಯಲ್ಲಿ ಹಿಂಸಾಚಾರಕ್ಕೊಳಗಾಗುತ್ತಿದ್ದರು. ಈಗದು ನಿಂತಿದೆ. ಏಕೆಂದರೆ ಈಗ ಸರ್ಕಾರಕ್ಕೆ ಹೊರತು ಪಡಿಸಿ ಇನ್ನಾರಿಗೂ ಹಣವನ್ನು ಕಟ್ಟುವ ಅವಶ್ಯಕತೆಯಿಲ್ಲ. ನಮ್ಮ ಟ್ರಕ್ಕುಗಳು ದಿನಕ್ಕೆ 120 ಕಿಲೋಮೀಟರ್ ಹೆಚ್ಚು ದೂರ ಕ್ರಮಿಸುತ್ತಿದೆ’ ಎನ್ನುತ್ತಾರೆ ಮಲ್ಹೋತ್ರಾ ಅವರು.

ದೆಹಲಿ ಮೂಲದ ಸೇಫ್ ಎಕ್ಸ್‌ಪ್ರೆಸ್‌ ಎನ್ನುವ ಲಾಜಿಸ್ಟಿಕ್ಸ್ ಕಂಪೆನಿ 9 ವಿವಿಧ ರೀತಿಯ ಕಂಪೆನಿಗಳಿಗೆ ತನ್ನ ಸೇವೆಯನ್ನು ಸಲ್ಲಿಸುತ್ತಿದೆ. ಅಲ್ಲಿನ ಮುಖ್ಯಸ್ಥರು ಜಿಎಸ್‌ಟಿ ಬಂದ ನಂತರ ತಮ್ಮ ವಾಹನಗಳು 20 ರಿಂದ 30 ಪ್ರತಿಶತ ಹೆಚ್ಚು ದೂರ ಕ್ರಮಿಸುತ್ತಿದೆ ಎಂದು ಹೇಳಿದ್ದಾರೆ.

ಜಿಎಸ್‌ಟಿ ಜಾರಿಗೆ ಬಂದ ನಂತರ ಹಲವು ಉಪಯೋಗಗಳು ಬೆಳಕಿಗೆ ಬಂದಿವೆ. ಇದೀಗ ಸಂಚಾರಿ ಕಂಪೆನಿಗಳು ಜಿಎಸ್‌ಟಿಯಿಂದ ತಮಗಾಗಿರುವ ಈ ವಿಶೇಷ ಲಾಭವನ್ನು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top