National

ಜಮ್ಮು-ಕಾಶ್ಮೀರದಲ್ಲಿ ವೀರಮರಣ ಹೊಂದಿದ್ದ ಯೋಧನ ಪತ್ನಿ ಈಗ ಭಾರತೀಯ ಸೇನೆಗೆ ಸೇರ್ಪಡೆ!!

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರೊಡನೆ ಕಾದಾಡುತ್ತಾ ತೀರಿಕೊಂಡ ರೈಫಲ್ ಮ್ಯಾನ್ ನ ವೀರಪತ್ನಿ ಸಂಗೀತ ಮಲ್ ಈಗ ಚೆನ್ನೈನ ಆಫಿಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಉತ್ತೀರ್ಣರಾಗಿ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದಾರೆ!

ಹೌದು. ಗೋರ್ಖಾ ರೈಫಲ್ಸ್ ನಲ್ಲಿ ರೈಫಲ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿಶಿರ್ ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಭಯೋತ್ಪಾದಕರನ್ನು ಹುಡು-ಹುಡುಕಿ ಕೊಲ್ಲುವ ಕೆಲಸದಲ್ಲಿ ನಿರತರಾಗಿದ್ದರು. ಸಪ್ಟೆಂಬರ್ 2015 ರಲ್ಲಿ ಭಯೋತ್ಪಾದಕರೊಡನೆ ನಡೆದ ಗುಂಡಿನ ಚಕಮಕಿಯಲ್ಲಿ ಅವರು ವೀರಮರಣ ಹೊಂದಿದರು. 2013 ರಲ್ಲಿ ಸಂಗೀತ-ಶಿಶಿರ್ ಮದುವೆಯಾಗಿದ್ದರು. ಸಂಗೀತ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದರೂ ಕೂಡ. ಪತಿಯು ತೀರಿಕೊಂಡ ನಂತರ ತನ್ನ ಕೆಲಸವನ್ನು ಬಿಟ್ಟು ಅತ್ತೆಯನ್ನು ನೋಡಿಕೊಳ್ಳುವ ಕಾರ್ಯದಲ್ಲಿ ನಿರತರಾದರು ಸಂಗೀತ!

ಸಂಗೀತಳಿಗೆ ಇದೇ ಸಮಯದಲ್ಲಿ ಮತ್ತೊಂದು ಸಂಕಟ ಎದುರಾಯಿತು. ಅನಾರೋಗ್ಯದ ಕಾರಣದಿಂದ ಆಕೆಗೆ ಗರ್ಭಪಾತವಾಯ್ತು. ‘ನನ್ನ ತಾಯಿ ಆಕೆಯನ್ನು ಇನ್ನಷ್ಟು ಓದುವಂತೆ ಪ್ರೇರೇಪಿಸಿದರಲ್ಲದೇ, ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರುವಂತೆಯೂ ಉತ್ಸಾಹ ತುಂಬಿದರು’ ಎನ್ನುತ್ತಾರೆ ಶಿಶಿರ್ ಅವರ ಸಹೋದರ ಸುಷಾಂತ್. 2016 ರಲ್ಲಿ ರಾಣಿಖೇಟ್ ನಲ್ಲಿ ಶಿಶಿರ್ ಅವರಿಗೆ ಭಾರತೀಯ ಸೇನೆ ಮರಣಾ ನಂತರ ಸೇನಾ ಮೆಡಲ್ ಅನ್ನು ನೀಡಿ ಗೌರವಿಸಿತು. ಈ ಪ್ರಶಸ್ತಿಯನ್ನು ಸ್ವೀಕರಿಸಲು ತೆರಳಿದ್ದ ಸಂಗೀತ ಅವರಿಗೆ ತಾವೂ ಸೇನೆಗೆ ಸೇರಿ ತಾಯಿ ಭಾರತಿಗಾಗಿ ಸೇವೆ ಸಲ್ಲಿಸಬೇಕೆಂಬ ಪ್ರೇರಣೆ ಉಂಟಾಯಿತು.

ಛಲ ಬಿಡದೇ ಸಂಗೀತ ಅವರು ಹಗಲೂ-ರಾತ್ರಿ ಪರಿಶ್ರಮ ಹಾಕಿ ಆಫಿಸರ್ಸ್ ಟ್ರೈನಿಂಗ್ ಅಕಾಡೆಮಿಯ ಪರೀಕ್ಷೆಯಲ್ಲಿ ಪಾಸಾದರು. ಕಟ್ಟುನಿಟ್ಟಿನ ತರಬೇತಿಯ ನಂತರ ಶಾರ್ಟ್ ಸರ್ವೀಸ್ ಕಮಿಷನ್ ನಲ್ಲಿ ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆ ಇವರನ್ನು ಆಯ್ಕೆ ಮಾಡಿದೆ.

ತನ್ನ ಪತಿಯ ಕೆಲಸವನ್ನು ತಾನು ಪೂರ್ಣಗೊಳಿಸುವ, ತಾಯಿ ಭಾರತಿಯ ಸೇವೆಯನ್ನು ಮಾಡುವ ಕಾರ್ಯದಲ್ಲಿ ಸಂಗೀತ ಅವರು ನಿರತರಾಗಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top