National

ಜಮ್ಮು-ಕಾಶ್ಮೀರದಲ್ಲಿ ಭಾರತದ ಹಿಡಿತ ಬಲವಾಗುತ್ತಿದೆ. ಏಕೆ ಗೊತ್ತಾ?!

2018 ರಲ್ಲಿ 253 ಭಯೋತ್ಪಾದಕರನ್ನು ಜಮ್ಮು-ಕಾಶ್ಮೀರದಲ್ಲಿ ನಡೆದ ಎನ್ ಕೌಂಟರ್ ಗಳಲ್ಲಿ ಕೊಲ್ಲಲಾಗಿದೆ ಎಂಬ ವರದಿಯನ್ನು ಗೃಹ ಸಚಿವಾಲಯ ಬಿಡುಗಡೆಗೊಳಿಸಿದೆ. 2017 ರಲ್ಲಿ 213, 2016 ರಲ್ಲಿ 150, 2015 ರಲ್ಲಿ 108 ಭಯೋತ್ಪಾದಕರನ್ನು ಕೊಲ್ಲಲಾಗಿತ್ತು. 17 ಭಯೋತ್ಪಾದಕರನ್ನು 2018 ರಲ್ಲಿ ಬಂಧಿಸಲಾಗಿದೆ. 2017 ರಲ್ಲಿ 18 ಉಗ್ರರನ್ನು ಸೇನೆ ಬಂಧಿಸಿತ್ತು.

ಭಯೋತ್ಪಾದಕರ ವಿರುದ್ಧ ಜೀರೊ ಟಾಲರೆನ್ಸ್ ನೀತಿ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಹೊಸಕಿ ಹಾಕುವಲ್ಲಿ ಭಾರತೀಯ ಸೇನೆ ತೋರಿದ ಸಾಹಸ ಉಗ್ರರನ್ನು ನಿಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು ಎಂದು ಹೇಳಲಾಗಿದೆ. ಒಂದು ಮಾಹಿತಿಯ ಪ್ರಕಾರ ಜಮ್ಮು-ಕಾಶ್ಮೀರದಲ್ಲಿ ಇನ್ನೂ 300 ಉಗ್ರರು ಕಾರ್ಯನಿರತರಾಗಿದ್ದಾರೆ ಮತ್ತು ಅವರಿಗೆ ಸ್ಥಳೀಯರೇ ಸಹಾಯ ನೀಡುತ್ತಿದ್ದಾರೆ.

ನಿನ್ನೆ ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ರಾಜ್ಯ ಗೃಹ ಸಚಿವಾಲಯ ಮಂತ್ರಿ ಹಂಸರಾಜ್ ಆಹಿರ್ ಅವರು ರಾಜ್ಯದಲ್ಲಿ ಯುವಶಕ್ತಿಯನ್ನು ಮುಖ್ಯವಾಹಿನಿಗೆ ತರಲು ಯುವಜನರಿಗೆ ಉದ್ಯೋಗಾವಕಾಶ ಮತ್ತು ಯುತ್ ಎಕ್ಸ್ಚೇಂಜ್ ಕಾರ್ಯಕ್ರಮಗಳನ್ನೂ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ. 2015 ರಲ್ಲಿ ಪ್ರಧಾನಮಂತ್ರಿ ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ 80,068 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಯುವಜನರಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ ಸ್ಪೆಷಲ್ ಇಂಡಸ್ಟ್ರಿ ಇನಿಶಿಯೆಟಿವ್, ಪದವಿ ಮತ್ತು ಡಿಪ್ಲೊಮಾ ಶಿಕ್ಷಣ ಪಡೆದವರಿಗೆ ಉದ್ಯೋಗಾವಕಾಶ, ಕೌಶಲ್ಯ ಅಭಿವೃದ್ಧಿಯ ತರಗತಿಗಳು, ಶಾಲಾ-ಕಾಲೇಜುಗಳನ್ನು ಅರ್ಧದಲ್ಲಿಯೇ ಬಿಟ್ಟವರಿಗೆ ವಿವಿಧ ಉದ್ಯೋಗಾವಕಾಶ ಹೀಗೆ ಹಲವು ರೀತಿಯ ಯೋಜನೆಗಳನ್ನು ಸರ್ಕಾರವೂ ಜಾರಿಗೊಳಿಸಿದೆ. 12 ನೇ ತರಗತಿಯನ್ನು ಪಾಸು ಮಾಡಿದ ವಿದ್ಯಾರ್ಥಿಗಳು ಜಮ್ಮು-ಕಾಶ್ಮೀರದಿಂದ ಹೊರಗೆ ಓದಲು ಬಯಸಿದರೆ ಅವರಿಗೆ ಧನಸಹಾಯವನ್ನೂ ಸರ್ಕಾರ ಒದಗಿಸುತ್ತಿದೆ.

ಪ್ರಸ್ತುತ ಎನ್ ಡಿ ಎ ಸರ್ಕಾರ ಎಡಪಂಥೀಯ ತೀವ್ರಗಾಮಿ-ಉಗ್ರರನ್ನು ಮಟ್ಟ ಹಾಕಲು ಹಲವು ಕ್ರಮಗಳನ್ನು ಕೈಗೊಂಡಿದೆ. ನಕ್ಸಲರ ಕಪಿಮುಷ್ಠಿಯಾಗಿದ್ದ ಹಲವು ಪ್ರದೇಶಗಳಲ್ಲಿ ಭಾರತೀಯ ಸೇನೆ ವ್ಯಾಪಕ ಕಾರ್ಯಾಚರಣೆಯನ್ನು ನಡೆಸಿ ಭಯೋತ್ಪಾದಕರನ್ನು ಮಟ್ಟಹಾಕಿದೆ. ಗನ್ನನ್ನು ಕೆಳಗಿಳಿಸಿ ನಕ್ಸಲರನ್ನು ಪ್ರಮುಖವಾಹಿನಿಗೆ ತರಲು ರಾಜ್ಯ ಸರ್ಕಾರದ ಸಹಾಯದೊಂದಿಗೆ ಭಾರತೀಯ ಸೇನೆ ಪುನರ್ವಸತಿ ಕಲ್ಪಿಸುವ ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಹಲವು ನಕ್ಸಲರು ತಮ್ಮ ನಕ್ಸಲ್ ಕ್ಯಾಂಪಿನಿಂದ ಹೊರಬಂದು ಪುನರ್ವಸತಿ ಪಡೆದು ಈಗ ಸಮಾಜದಲ್ಲಿ ತಲೆಯೆತ್ತಿ ಬದುಕುತ್ತಿದ್ದಾರೆ.

ನಕ್ಸಲ ಪ್ರದೇಶಗಳಲ್ಲಿ ಸರ್ಕಾರ ರಸ್ತೆ, ರೈಲು ಸಂಚಾರ, ಶಾಲೆ, ವಿದ್ಯುತ್ ಹೀಗೆ ಹಲವು ಮೂಲಸೌಕರ್ಯಗಳ ಅಭಿವೃದ್ಧಿಗೆಂದೇ ದೊಡ್ಡ ಮೊತ್ತದ ಧನಸಹಾಯವನ್ನೂ ಕಲ್ಪಿಸಿದೆ. ಈ ಪ್ರದೇಶಗಳಲ್ಲಿ ತಂತ್ರಜ್ಞಾನ ಮತ್ತು ಮೊಬೈಲ್ ನೆಟ್ವರ್ಕ್ ಅಭಿವೃದ್ಧಿಗೊಳಿಸಿದ್ದು ಅತಿ ಮುಖ್ಯ ಬದಲಾವಣೆಗೆ ಕಾರಣವಾಗಿದೆ. ಇದರ ಸಹಾಯದಿಂದ ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಪಟ್ಟ ಲಾಭವನ್ನು ಪಡೆಯುವಲ್ಲಿ ಜನ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೇ, ತಮ್ಮ ಜೀವನಮಟ್ಟವನ್ನು ಉತ್ತಮಗೊಳಿಸಿಕೊಳ್ಳಲು ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳ ಮಾಹಿತಿಯನ್ನೂ ಅವರು ಕುಳಿತಲ್ಲಿಂದಲೇ ಪಡೆಯುತ್ತಿದ್ದಾರೆ.

ಇತ್ತೀಚೆಗಷ್ಟೇ ಭಾರತೀಯ ಸೇನೆ ದಾಂತೇವಾಡ-ಬಿಜಾಪುರ ಗಡಿಯಲ್ಲಿ ನಡೆದ ನಕ್ಸಲ್ ವಿರೋಧಿ ಆಪರೇಶನ್ ನಲ್ಲಿ ಎಂಟು ಜನ ನಕ್ಸಲರನ್ನು ಕೊಂದು ಹಾಕಿತ್ತು. ಈ ಘಟನೆಯ ಬಳಿಕ ಹಲವು ನಕ್ಸಲರು ಶರಣಾಗತರಾಗಿದ್ದಾರೆ. ಶರಣಾಗತರಾದ ನಕ್ಸಲರು ತಾವು ನಕ್ಸಲ್ ಕ್ಯಾಂಪುಗಳಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುವುದಾಗಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು. ಶರಣಾಗತರಾದ ನಕ್ಸಲರನ್ನು ಜನಸಾಮಾನ್ಯರೊಡನೆ ಬದುಕುವಂತೆ ಮಾಡುವಲ್ಲಿ ಸರ್ಕಾರ ಪುನರ್ವಸತಿ ಶಿಬಿರಗಳನ್ನು ಶುರುಮಾಡಿದೆ. ಹಲವು ಮಾಜಿ ನಕ್ಸಲರು ಈಗ ಮುಖ್ಯವಾಹಿನಿಗೆ ಬಂದಿರುವುದು ತೃಪ್ತಿದಾಯಕ ಸಂಗತಿ.

Click to comment

Leave a Reply

Your email address will not be published. Required fields are marked *

Most Popular

To Top