National

ಜಮತ್-ಎ-ಇಸ್ಲಾಮಿ ಸಂಘಟನೆ ಮೇಲೆ ಐದು ವರ್ಷ ನಿಷೇಧ!

ಕೇಂದ್ರ ಸರ್ಕಾರ ಗುರುವಾರದಂದು ಭಯೋತ್ಪಾದನೆ ನಿಗ್ರಹ ಕಾನೂನಿನಡಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಐದು ವರ್ಷದವರೆಗೆ ಜಮತ್-ಎ-ಇಸ್ಲಾಮಿ ಸಂಘಟನೆಯನ್ನು ನಿಷೇಧಿಸಿದೆ.

ಗೃಹ ವ್ಯವಹಾರಗಳ ಸಚಿವಾಲಯ ನಿನ್ನೆ ಪ್ರಧಾನಮಂತ್ರಿಯವರೊಡನೆ ನಡೆದ ಸುದೀರ್ಘ ಸಭೆಯ ನಂತರ ಈ ನೊಟಿಫಿಕೇಷನ್ ಅನ್ನು ಜಾರಿಗೊಳಿಸಿದೆ. ವರದಿಯ ಪ್ರಕಾರ ಅಕ್ರಮ ಚಟುವಟಿಕೆಗಳ (ನಿಷೇಧ) ಕಾಯ್ದೆಯಡಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉಗ್ರ ಸಂಘಟನೆಯೊಂದಿಗೆ ಈ ಸಂಘಟನೆಗೆ ಹತ್ತಿರದ ಸಂಬಂಧವಿದೆ ಎಂಬ ಕಾರಣಕ್ಕೆ ಅದನ್ನು ನಿಷೇಧಿಸಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಈ ಸಂಘಟನೆ ತೀವ್ರಗಾಮಿಗಳಿಗೆ, ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದೆ!

ಭಾರತದ ಸಮಗ್ರತೆಗೆ ಧಕ್ಕೆ ತರುವಂತಹ ಕೆಲಸವನ್ನು ಈ ಸಂಘಟನೆ ಮಾಡುತ್ತಿದೆ ಎಂದು ನೊಟಿಸ್ ನಲ್ಲಿ ಹೇಳಲಾಗಿದೆ. ಫೆಬ್ರವರಿ 22 ಮತ್ತು 23 ರಂದು ಜಮ್ಮು-ಕಾಶ್ಮೀರದ ಪೊಲೀಸರು ಜಮತ್-ಎ-ಇಸ್ಲಾಮಿನ 100 ಕಾರ್ಯಕರ್ತರನ್ನು ಬಂಧಿಸಿದ್ದರು. ಬಂಧಿತರಲ್ಲಿ ಸಂಘಟನೆಯ ಮುಖ್ಯಸ್ಥರಾದ ಅಬ್ದುಲ್ ಹಮೀದ್ ಫಯಾಜ್ ಮತ್ತು ಅಡ್ವೊಕೇಟ್ ಜಾಹಿದ್ ಅಲಿ ಇದ್ದರು!

ಪುಲ್ವಾಮಾ ದಾಳಿಯ ನಂತರ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ತಡೆಯುವ ನಿಟ್ಟಿನಲ್ಲಿ ಹಲವು ಕಾರ್ಯಾಚರಣೆ ನಡೆಯುತ್ತಿದೆ. ಈ ನಿಷೇಧವನ್ನು ಗೃಹ ಸಚಿವರು ಅನುಮೋದಿಸಬೇಕಿದೆ.

ಕಾಶ್ಮೀರದಲ್ಲಿ ಡೋಗ್ರಾ ವಿರೋಧಿ ಚಳುವಳಿಯಾದಾಗ ಈ ಜಮತ್ ಸಂಘಟನೆ ಹುಟ್ಟಿಕೊಂಡಿದ್ದು. ಈ ಸಂಘಟನೆ ಮೌಲಾನಾ ಮೌದುದಿಯ ಆದರ್ಶದ ಮೇಲೆ ನಡೆಯುತ್ತಿದೆ. ಆತ ಬ್ರಿಟೀಷ್ ಆಡಳಿತವನ್ನು ವಿರೋಧಿಸಿದ್ದನಾದರೂ ಭಾರತವನ್ನು ವಿಭಜಿಸಿ ಪಾಕಿಸ್ತಾನವನ್ನು ಕಟ್ಟುವ ಮುಸ್ಲೀಂ ಲೀಗ್ ನ ಯೋಜನೆಗೆ ಬೆಂಬಲ ನೀಡಿದ್ದ. ವಿಭಜನೆಯ ಸಂದರ್ಭದಲ್ಲಿ ಇವರು ಪಾಕಿಸ್ತಾನದ ಪರವಾಗಿ ನಿಂತಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top