National

ಜನಸಾಮಾನ್ಯರಿಗೂ ಮೋದಿ ಯುಗದಲ್ಲಿ ಪ್ರಶಸ್ತಿಗಳು ಸಿಗುವುದು ಸಾಧ್ಯ!!

ನರೇಂದ್ರಮೋದಿ ಬಂದನಂತರ ಆಗಿರುವ ಅತ್ಯಂತ ಮಹತ್ವದ ಬದಲಾವಣೆ ಎಂದರೆ ಪ್ರಶಸ್ತಿಗಳನ್ನು ಕೊಡುವುದರಲ್ಲಿ ಯಾರ ವಶೀಲಿಬಾಜಿಯೂ ನಡೆಯದಿರುವುದು. ಕಳೆದ 5 ವರ್ಷಗಳಲ್ಲಿ ಈ ದೇಶದ ಮೂಲೆ ಮೂಲೆಗಳಲ್ಲಿರುವ ಸಾಧಕರನ್ನು ಗುರತಿಸಿ ಅವರಿಗೆ ದೇಶದ ಅತ್ಯುನ್ನತ ಗೌರವವನ್ನು ನೀಡಲು ಸಾಧ್ಯವಾಗಿರುವುದೇ ಅಪರೂಪದ ಸಂಗತಿ. ಹಾರ್ವಡರ್್ನಲ್ಲಿ, ಆಕ್ಸ್ಫಡರ್್ನಲ್ಲಿ ಓದಿದವರು ಪ್ರಧಾನಿಯಾದರೆ ಅವರು ತಮ್ಮ ಮೂಗಿನ ನೇರಕ್ಕೇ ಆಲೋಚಿಸಿ ಅಂಥವರನ್ನೇ ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ. ಬಡಜನರ ನಡುವಿನಿಂದ ಎದ್ದು ಬಂದ ಮೋದಿಯಂಥವರು ಮಾತ್ರ ಸಮಸ್ತರ ಕಲ್ಯಾಣಕ್ಕೆ ಶ್ರಮಿಸಿದ ಮಹಾತ್ಮರನ್ನು ಗುರುತಿಸಬಲ್ಲರು. ಮೋದಿಯವರ ಈ ಪ್ರಯತ್ನ ಶುರುವಾದಾಗಿನಿಂದಲೂ ಶ್ರೇಷ್ಠ ವ್ಯಕ್ತಿಗಳ ಆಯ್ಕೆಯ ಪ್ರಕ್ರಿಯೆಗೆ ಜನಸಾಮಾನ್ಯರ ನಡುವಿನಿಂದಲೇ ಸಾವಿರಾರು ಹೆಸರುಗಳು ಆಯ್ಕೆ ಸಮಿತಿಗೆ ಬರುತ್ತಿವೆ. ಈ ಯಾವುದೇ ಪ್ರಕ್ರಿಯೆಯಲ್ಲೂ ಸ್ಥಳೀಯ ಶಾಸಕರು, ಮಂತ್ರಿಗಳು, ಪುಢಾರಿಗಳು ಭಾಗವಹಿಸುವಂತಿಲ್ಲ. ಮೊದಲೆಲ್ಲಾ ಹಾಗಿರಲಿಲ್ಲ. ತಮ್ಮ ಕ್ಷೇತ್ರದಲ್ಲಿ ತಮಗೆ ಬೇಕಾದ ವ್ಯಕ್ತಿಯ ಹೆಸರನ್ನು ತೆಗೆದುಕೊಂಡು ಹೋಗಿ ಶಾಸಕರು ಒತ್ತಡ ಹಾಕಿ ಪ್ರಶಸ್ತಿ ಪಡೆದುಕೊಂಡು ಬರುತ್ತಿದ್ದರು. ಅದೂ ಸರಿಯೇ. ಪ್ರಶಸ್ತಿಯ ಗೌರವವನ್ನು ಹೆಚ್ಚಿಸಬೇಕಾದ ಜವಾಹರ್ಲಾಲ್ ನೆಹರೂ ತಮಗೆ ತಾವೇ ಭಾರತರತ್ನ ಕೊಡಿಸಿಕೊಂಡ ಮೇಲೆ ಅದರ ಮೌಲ್ಯವೇನುಳಿಯಿತು ಹೇಳಿ! ಅಪ್ಪನ ಹಾದಿಯಲ್ಲೇ ನಡೆದ ಇಂದಿರಾ ಕೂಡ ತನ್ನ ಕೊರಳಿಗೆ ತಾನೇ ಭಾರತರತ್ನ ಹಾಕಿಕೊಂಡಿದ್ದಳು. ಅಕಾಲಮೃತ್ಯುವಿಗೆ ಒಳಗಾಗದೇ ಹೋಗಿದ್ದರೆ ರಾಜೀವ್ಗಾಂಧಿಯೂ ಅದನ್ನೇ ಮಾಡಿರುತ್ತಿದ್ದರೇನೋ. ಎಲ್ಲವನ್ನೂ ಕಾಂಗ್ರೆಸ್ಸಿನ ಕೈಗೇ ಬಿಟ್ಟುಬಿಟ್ಟಿದ್ದರೆ ಇಟಲಿಯ ಸೋನಿಯಾ ಭಾರತರತ್ನವಾಗಲು ಬಹಳ ಕಾಲ ಬೇಕಾಗುತ್ತಿರಲಿಲ್ಲ. ಆದರೀಗ ಈ ಎಲ್ಲಾ ಆಯ್ಕೆ ಪ್ರಕ್ರಿಯೆಗಳಲ್ಲೂ ಜನರ ಅಭಿಪ್ರಾಯಕ್ಕೆ ಮನ್ನಣೆಯಿದೆ. ಈ ವರ್ಷ ಪದ್ಮಪ್ರಶಸ್ತಿಗಳಿಗೆ ದಾಖಲೆಯ 50,000 ಹೆಸರುಗಳು ಬಂದಿದ್ದವು. ಇವು 2014ರಲ್ಲಿ ಬಂದ ಪಟ್ಟಿಗಿಂತಲೂ ಕನಿಷ್ಠಪಕ್ಷ 20 ಪಟ್ಟು ಹೆಚ್ಚು. ಗೃಹ ಸಚಿವಾಲಯದ ವರದಿಯ ಪ್ರಕಾರ ಮೋದಿ ಅಧಿಕಾರ ಸ್ವೀಕಾರ ಮಾಡುವ ಮುನ್ನ ಬಂದ ಹೆಸರುಗಳ ಸಂಖ್ಯೆ 2200 ಮಾತ್ರ. ಈ 50,000 ಹೆಸರುಗಳನ್ನು ಗಮನಿಸಿ ಅಧ್ಯಯನ ಮಾಡಿ ಅವುಗಳನ್ನು ಪದ್ಮವಿಭೂಷಣ, ಪದ್ಮಭೂಷಣ ಪದ್ಮಶ್ರೀ ಎಂದು ಪ್ರತ್ಯೇಕಿಸುವ ಕಾರ್ಯಕ್ಕೆ ಒಂದು ಸಮಿತಿಯನ್ನೇ ನೇಮಕ ಮಾಡಲಾಗುತ್ತದೆ. ಹೀಗೆ ಬಂದ ಹೆಸರುಗಳನ್ನು ಮತ್ತೊಮ್ಮೆ ಕೂಲಂಕಶವಾಗಿ ಪರೀಕ್ಷಿಸಿ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಿ ಮಂತ್ರಿ ಮಂಡಲದ ಸದಸ್ಯರ ಮುಂದಿರಿಸಿ ಒಪ್ಪಿಗೆ ಪಡೆದು ರಾಷ್ಟ್ರಪತಿಗಳ ಸಹಿ ಪಡೆಯಲಾಗುತ್ತದೆ. ಅನೇಕರು ಇದು ಒಂದು ವಾರದ, ನಾಲ್ಕಾರು ದಿನಗಳ ಪ್ರಕ್ರಿಯೆ ಎಂದು ಭಾವಿಸುತ್ತಾರೆ. ಶಾಲೆಯೊಂದರಲ್ಲಿ ಶ್ರೇಷ್ಠ ವಿದ್ಯಾಥರ್ಿ ಪ್ರಶಸ್ತಿ ಕೊಡುವಾಗಲೇ ಒಂದು ವರ್ಷಗಳ ಕಾಲ ಆತನನ್ನು ಗಮನಿಸಲಾಗುತ್ತದೆ ಎಂದಾದರೆ ಭಾರತರತ್ನ ಆದಿಯಾಗಿ ಪದ್ಮ ಪ್ರಶಸ್ತಿಗಳವರೆಗೆ ಎರಡು ಮೂರು ದಿನಗಳಲ್ಲಿ ಆಯ್ಕೆ ಪ್ರಕ್ರಿಯೆ ಮುಗಿಸಲು ಸಾಧ್ಯವೇ ಇಲ್ಲ. ಇದೊಂದು ಸುದೀರ್ಘ ಚಚರ್ೆ. ಹಿಂದಿನ ಸಕರ್ಾರಗಳು ಆಯ್ಕೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಧಾಷ್ಟ್ರ್ಯದಿಂದಲೇ ತಮಗೆ ಬೇಕಾದವರನ್ನು ಆಯ್ಕೆ ಮಾಡಿ ಮೆರೆದಾಡಿವೆ. ಅದಕ್ಕೆ ಮೊದಲ ಮಾರ್ಗದರ್ಶಕರಾಗಿ ನಿಂತವರೇ ಜವಾಹರ್ಲಾಲ್ ನೆಹರೂ. ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಆಯ್ಕೆಯ ಮಾನದಂಡಗಳನ್ನೆಲ್ಲಾ ಎಚ್ಚರಿಕೆಯಿಂದಲೇ ನಿರ್ವಹಿಸಲಾಗಿದೆ. ಹೀಗಾಗಿ ಪ್ರಶಸ್ತಿ ಪಡೆದ ಕೆಲವರನ್ನು ಬಲಪಂಥೀಯರೆಂದು ಜರಿಯಬಹುದೇ ವಿನಃ ಯೋಗ್ಯರಲ್ಲವೆಂದು ಇದುವರೆಗೂ ಯಾರೂ ಯಾರ ಬಗ್ಗೆಯೂ ಹೇಳಿಲ್ಲ. ಈ ಬಾರಿ ನಾಲ್ಕು ಜನರಿಗೆ ಪದ್ಮವಿಭೂಷಣ, 14 ಜನರಿಗೆ ಪದ್ಮಭೂಷಣ ಮತ್ತು 94 ಪದ್ಮಶ್ರೀ ಪ್ರಶಸ್ತಿಯ ಜೊತೆಗೆ ಮೂವರಿಗೆ ಭಾರತರತ್ನ ಗೌರವವನ್ನೂ ಸಮಪರ್ಿಸಲಾಗಿದೆ. ಇಷ್ಟಕ್ಕೂ ಪ್ರತೀ ವರ್ಷ ಮೂರಕ್ಕಿಂತಲೂ ಹೆಚ್ಚು ಜನರಿಗೆ ಭಾರತರತ್ನ ಕೊಡುವಂತಿಲ್ಲ. ನಿಯಮದ ಪ್ರಕಾರ ಪದ್ಮ ಪ್ರಶಸ್ತಿ ಸ್ವೀಕಾರ ಮಾಡಿದ 5 ವರ್ಷಗಳ ಒಳಗೆ ಭಾರತರತ್ನದಂತಹ ಮಹತ್ವದ ಪ್ರಶಸ್ತಿ ಕೊಡುವಂತಿಲ್ಲ. ಆದರೆ ಬಲು ಮಹತ್ವದ ವ್ಯಕ್ತಿಯಾಗಿದ್ದರೆ ಈ ನಿಯಮವನ್ನು ಸಡಿಲಗೊಳಿಸಬಹುದು. ಭಾರತರತ್ನದ ಪ್ರಶಸ್ತಿಯೇ ಚಚರ್ೆಗಳ ಮೂಲಕ ಒಂದು ತಿಂಗಳ ಮೊದಲಾದರೂ ನಿಶ್ಚಯವಾಗುತ್ತದೆ ಮತ್ತು ಪ್ರಶಸ್ತಿ ಸ್ವೀಕೃತರಿಗೆ ಕೆಲವು ದಿನಗಳ ಮುನ್ನವೇ ಸೂಚಿಸಲಾಗಿರುತ್ತದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಯಾವ ಬದಲಾವಣೆಯೂ ಅಸಾಧ್ಯ ಎಂಬುದು ಸಹಜವಾಗಿಯೇ ಅರಿವಾಗುವ ಸಂಗತಿ.

ಅದು ಬಿಡಿ. ಈ ವರ್ಷ ಪದ್ಮಪ್ರಶಸ್ತಿಗಳಲ್ಲಿ ಬಹುದೊಡ್ಡ ಪಾಲು ಪಡೆದಿರುವುದು ಕೃಷಿಕರು. 9 ರಾಜ್ಯಗಳಿಂದ 12 ಜನ ಕೃಷಿಕರನ್ನು ಆಯ್ಕೆ ಮಾಡಲಾಗಿದೆ. ಈ ಕೃಷಿಕರಲ್ಲಿ ಬಹುತೇಕರು ಪಾರಂಪರಿಕ ಕೃಷಿ ಪದ್ಧತಿಯನ್ನು ಅನುಸರಿಸುತ್ತಿರುವುದಲ್ಲದೇ ಅತ್ಯಾಧುನಿಕವಾದ ವೈಜ್ಞಾನಿಕ ತಂತ್ರಗಳನ್ನೂ ಅಳವಡಿಸಿಕೊಂಡಿದ್ದಾರೆ. ಭರತ್ ಭೂಷಣ್ ತ್ಯಾಗಿ, ರಾಮಶರಣ್ ವಮರ್ಾ, ವೆಂಕಟೇಶ್ವರ್ರಾವ್ ಯಡಿಪಳ್ಳಿ ಇವರೆಲ್ಲರೂ ಆಧುನಿಕ ತಂತ್ರಜ್ಞಾನವನ್ನು ಬಳಸಿದ ಕೃಷಿಕರಾದರೆ, ಕಮಲಾ ಪೂಜಾರಿ, ರಾಜ್ಕುಮಾರಿ ದೇವಿ, ಬಾಬುಲಾಲ್ ದಹಿಯಾ, ಹುಕುಮ್ಚಂದ್ ಪತಿದಾರ್ ಇವರು ಪಾರಂಪರಿಕ ಕೃಷಿ ಪದ್ಧತಿಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಇಷ್ಟೇ ಅಲ್ಲದೇ ಕೆಲವೊಂದು ಬೆಳೆಗಳಲ್ಲಿ ವಿಶೇಷ ಪರಿಣಿತಿ ಹೊಂದಿರುವ ಕನ್ವಲ್ಸಿಂಗ್ ಚೌಹಾಣ್, ವಲ್ಲಭಬಾಯಿ ವಸ್ರಂಭಾಯಿ, ಜಗದೀಶ್ಪ್ರಸಾದ್ ಪಾರೀಖ್ ಇವರನ್ನು ಆಯ್ಕೆ ಮಾಡಲಾಗಿದೆ. ಕೃಷಿಕರನೇಕರು ಅಥವಾ ಅವರ ಪರವಾಗಿ ಮೊಸಳೆ ಕಣ್ಣೀರು ಸುರಿಸುತ್ತಿರುವ ಅನೇಕ ರಾಜಕೀಯ ನಾಯಕರು ಸಾಲಮನ್ನಾ ಮಾಡುವುದೇ ಕೃಷಿಕರಿಗೆ ಮಾಡುವ ಉಪಕಾರ ಎಂದು ಭಾವಿಸಿರುವಾಗ ನರೇಂದ್ರಮೋದಿ ಈ ಕೃಷಿಕರ ಆತ್ಮಗೌರವವನ್ನು ಹೆಚ್ಚಿಸುವ ಸ್ಪಷ್ಟ ಕೆಲಸ ಮಾಡುತ್ತಿದ್ದಾರೆ. ವಾಸ್ತವವಾಗಿ ಆಗಬೇಕಾಗಿರುವುದೂ ಅದೇ. ಸಮರ್ಥ ಕೃಷಿಕನನ್ನು ಸಮಾಜ ಗುರುತಿಸಿ ಅವರಿಗೂ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂಬುದು ಅರಿವಾಗಬೇಕು. ಇಲ್ಲದೇ ಹೋದರೆ ಶ್ರೇಷ್ಠ ಪ್ರಶಸ್ತಿಗಳೆಲ್ಲಾ ಕ್ರಿಕೆಟ್ ಪಟುಗಳಿಗೆ, ಸಿನಿಮಾ ತಾರೆಗಳಿಗೆ ಮತ್ತು ರಾಜಕಾರಣಿಗಳಿಗೆ ಮಾತ್ರ ದಕ್ಕುತ್ತದೆ ಎಂಬ ಭಾವನೆ ಸಮಾಜದ ಏಳ್ಗೆಗೆ ಖಂಡಿತ ಒಳ್ಳೆಯದಲ್ಲ. ಹೀಗೆ ಪ್ರಶಸ್ತಿಗೆ ಭಾಜನರಾದ ಈ ವ್ಯಕ್ತಿಗಳನ್ನು ಅವರ ಊರುಗಳಲ್ಲಿ, ತಾಲೂಕು, ಜಿಲ್ಲೆಗಳಲ್ಲಿ ಅಕ್ಕಪಕ್ಕದ ರಾಜ್ಯಗಳಲ್ಲಿ ಕರೆದು ಸನ್ಮಾನಿಸುತ್ತಾರಲ್ಲಾ ಆಗ ಅವರು ಕೃಷಿಯ ಮಹತ್ವವನ್ನು ಜನರಿಗೆ ವಿವರಿಸುತ್ತಾರೆ. ಇದು ಮುಂದಿನ ಪೀಳೆಗೆಯ ತರುಣರಿಗೆ ಕೃಷಿಯನ್ನು ಬದುಕಾಗಿ ಸ್ವೀಕರಿಸುವಲ್ಲಿ ಪ್ರೇರಣೆ ನೀಡುವಂಥದ್ದು. ಹೊಸ ಪೀಳಿಗೆಯ ಜನ ಉತ್ಸಾಹದಿಂದ ಬಂದರೆಂದರೆ ಅಲ್ಲಿಗೆ ಇಡಿಯ ಕೃಷಿ ಪರಂಪರೆ ಮತ್ತೊಮ್ಮೆ ಉದ್ದೀಪ್ತವಾದಂತೆಯೇ. ದೂರದೃಷ್ಟಿಯೆನ್ನುವದು ಇದನ್ನೇ. ಮೀನು ತಿನ್ನಿಸುವುದು ಸೇವೆಯಲ್ಲ, ಆದರೆ ಮೀನನ್ನು ಹಿಡಿಯಲು ಕಲಿಸುವುದು ನಿಜವಾದ ಸೇವೆ ಎನ್ನುವ ಮಾತಿದೆಯಲ್ಲಾ, ಹಾಗೆ ಇದು. ಅಪ್ಪನ ಸಾಲಮನ್ನಾ ಮಾಡಿಬಿಡುವುದು ದೊಡ್ಡ ಕೆಲಸವಲ್ಲ. ಆದರೆ, ಆತ ಮಾಡಿದ ಕೆಲಸದ ಕುರಿತಂತೆ ಮಗನ ಕಂಗಳಲ್ಲಿ ಕನಸು ಬಿತ್ತುವುದು ನಿಜವಾದ ಕೆಲಸ. ಮೋದಿ ಅದನ್ನೇ ಮಾಡುತ್ತಿದ್ದಾರೆ. ಈ ಬಾರಿ ಪದ್ಮಪ್ರಶಸ್ತಿ ಪಡೆದವರಲ್ಲಿ ಪಶು ಆರೈಕೆಗೆ ಸಂಬಂಧಪಟ್ಟವರು ಸೇರಿದ್ದಾರೆ. ಮೀನುಗಾರಿಕೆಗೆ ಸಂಬಂಧಪಟ್ಟವರಿದ್ದಾರೆ. 11 ರಾಜ್ಯಗಳಿಂದ 14 ವೈದ್ಯರುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜನಸಾಮಾನ್ಯರ ನೋವುಗಳಿಗೆ ಪ್ರತಿಸ್ಪಂದಿಸುತ್ತಾ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವ ಅಪರೂಪದ ವೈದ್ಯರುಗಳು ಇದರಲ್ಲಿ ಇದ್ದಾರೆ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಅತ್ಯುತ್ಕೃಷ್ಟ ಗುಣಮಟ್ಟದ ಚಿಕಿತ್ಸೆ ಕೊಡವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವಲ್ಲೂ ಸಮರ್ಥ ನಾಯಕನೇ ಬೇಕು. ಹಾಗಂತ ದೇಶದ ಪ್ರಮುಖ ರಾಜ್ಯಗಳಲ್ಲಲ್ಲದೇ ಜಾರ್ಖಂಡ್, ಲಡಾಕ್, ಅಸ್ಸಾಂ ಮತ್ತು ನಕ್ಸಲ್ ಪೀಡಿತ ಛತ್ತೀಸ್ಗಡದಂತಹ ಸುದೂರದ ಪ್ರದೇಶಗಳಲ್ಲೂ ಸೇವೆಯಲ್ಲಿ ನಿರತರಾಗಿರುವ ವೈದ್ಯರನ್ನೂ ಈ ಬಾರಿ ಗುರುತಿಸಲಾಗಿದೆ. ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರತೀ ವರ್ಷ ಇದ್ದದ್ದೇ. ಆದರೆ ಡಿಜ್ಬೌಟಿಯ ಅಧ್ಯಕ್ಷ ಇಸ್ಮಾಯಿಲ್ ಒಮರ್ ಗೆಲೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಭಾರತೀಯರು ಎಮನ್ ಯುದ್ಧಪೀಡಿತ ಪ್ರದೇಶದಲ್ಲಿ ಸಿಲುಕಿಕೊಂಡು ಯಾತನೆ ಪಡುತ್ತಿದ್ದಾಗ ಅವರನ್ನು ಕಾಪಾಡಲು ಇವರ ಸಹಕಾರ ವಿಶೇಷವಾಗಿ ದೊರೆತಿತ್ತು. ಹೀಗಾಗಿಯೇ ಅವರನ್ನೂ ಕೂಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬಲು ಆನಂದಕೊಟ್ಟ ಈ ಬಾರಿ ಪ್ರಶಸ್ತಿ ಪುರಸ್ಕೃತರೆಂದರೆ ಇಸ್ರೋದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್. ಎ.ಕೆ ಆ್ಯಂಟನಿ ಮತ್ತು ಅವರ ವಿರೋಧಿಗಳ ಷಡ್ಯಂತ್ರಕ್ಕೆ ಬಲಿಯಾಗಿ ಮಾಡದ ತಪ್ಪನ್ನು ತಲೆಮೇಲೆ ಹೊರಿಸಿಕೊಂಡ ನಂಬಿ ಶತ್ರು ರಾಷ್ಟ್ರಗಳಿಗೆ ರಹಸ್ಯ ಮಾಹಿತಿಯನ್ನು ಮಾರಿದ ಆರೋಪಕ್ಕೆ ಒಳಗಾಗಿಬಿಟ್ಟರು. ಜೈಲಿನಲ್ಲಿ ಅವರು ಕಳೆದ ಯಾತನೆಯ ದಿನಗಳು, ಅಕ್ಕಪಕ್ಕದವರಿಂದ, ಜೊತೆಗಾರರಿಂದ ಅವರು ಅನುಭವಿಸಿದ ಮಾನಸಿಕ ನೋವು, ಇವೆಲ್ಲವೂ ಈ ದೇಶ ಅವರಿಗೆ ಮಾಡಿದ ದ್ರೋಹದ ಸಂಗತಿಗಳು. ಪದ್ಮಪ್ರಶಸ್ತಿ ಅದಕ್ಕೊಂದು ಪ್ರಾಯಶ್ಚಿತ್ತವೆನ್ನುವಂತೆ ಆಗಿದೆ. ಶ್ರೇಷ್ಠ ವಿಜ್ಞಾನಿಯೊಬ್ಬರಿಗೆ ಅವರು ಕಳೆದುಕೊಂಡ ಗೌರವವನ್ನು ಮರಳಿಸಿಕೊಟ್ಟಿದೆ. ಅವರನ್ನು ಆಯ್ಕೆ ಮಾಡಿದ ಸಮಿತಿಗೆ ಮತ್ತು ಸಕರ್ಾರಕ್ಕೆ ಎಷ್ಟು ಅಭಿನಂದನೆಗಳನ್ನು ತಿಳಿಸಿದರೂ ಕಡಿಮೆಯೇ.

ನರೇಂದ್ರಮೋದಿಯವರು ಪದ್ಮಪ್ರಶಸ್ತಿಗಳಿಗಿದ್ದ ಟ್ಯಾಗ್ಲೈನನ್ನು ಸಕರ್ಾರಿ ಪ್ರಶಸ್ತಿ ಎಂಬುದರಿಂದ ಬದಲಾಯಿಸಿ ಜನರ ಪ್ರಶಸ್ತಿ ಎಂದಿಟ್ಟು ಕಾಲವೇ ಆಗಿಹೋಯ್ತು. ಈ ಪ್ರಶಸ್ತಿಗಳನ್ನು ಜನರೇ ಆಯ್ಕೆ ಮಾಡುವಂತಾಗಬೇಕು ಎನ್ನುವುದು ನರೇಂದ್ರಮೋದಿಯವರ ಸ್ಪಷ್ಟವಾದ ಇಚ್ಛೆ. ಪ್ರಶಸ್ತಿಗಳನ್ನು ನೀಡುವಾಗ ವೈಜ್ಞಾನಿಕವಾದ ಆಯ್ಕೆಯ ಕ್ರಮವನ್ನು ಅನುಸರಿಸಲಾಗುವುದೆಂದು ಸಮಿತಿಯವರು ಹೇಳುತ್ತಾರೆ. ಹೀಗಾಗಿಯೇ ಪ್ರಶಸ್ತಿ ಪುರಸ್ಕೃತ ವಿವರಗಳನ್ನು ಓದುವಾಗ ಒಮ್ಮೆ ಎದೆಯುಬ್ಬಿಸಿ ನಿಲ್ಲುವಂತಾಗುತ್ತದೆ. ಇದಕ್ಕೆ ವಿರುದ್ಧವಾಗಿ ಅನೇಕ ರಾಜ್ಯಗಳು ತಾವು ಪ್ರಶಸ್ತಿಗೆ ಆಯ್ಕೆ ಮಾಡುವಾಗ ಮನಸೋ ಇಚ್ಛೆ ಆಯ್ಕೆ ಮಾಡುತ್ತವೆ ಮತ್ತು ಪಟ್ಟಿ ಅದೆಷ್ಟು ದೊಡ್ಡದಿರುತ್ತದೆಂದರೆ ಅಷ್ಟೂ ಜನಕ್ಕೆ ಸನ್ಮಾನ ಮಾಡಿ ಮುಗಿಸುವುದೇ ಒಂದು ಸಾಹಸ ಎನ್ನುವಂತಾಗುತ್ತದೆ. ಬರಿ ರಾಜ್ಯಮಟ್ಟದ್ದಷ್ಟೇ ಅಲ್ಲ. ಜಿಲ್ಲಾಮಟ್ಟದಲ್ಲಿ ಶಿಕ್ಷಕರಿಗೆ ನೀಡುವ ಪ್ರಶಸ್ತಿಯೂ ಕೂಡ ಇದೇ ರೀತಿ ಮೌಲ್ಯವನ್ನು ಕಳೆದುಕೊಂಡು ಸೊರಗಿಹೋಗಿಬಿಟ್ಟಿದೆ. ನವೆಂಬರ್ನಲ್ಲಿ ನೀಡಲಾಗುವ ರಾಜ್ಯೋತ್ಸವ ಪ್ರಶಸ್ತಿಯ ಸ್ಥಿತಿಯೂ ಇದಕ್ಕಿಂತ ಹೊಸತಲ್ಲ. ಅದನ್ನು ಸ್ವೀಕರಿಸುವುದಕ್ಕಿಂತ ಬೇಡವೆಂದು ಹೇಳಿ ಗೌರವಕ್ಕೆ ಪಾತ್ರರಾಗುವುದೇ ಒಳ್ಳೆಯದು. ಹೀಗಾಗಿಯೇ ನರೇಂದ್ರಮೋದಿ ಪ್ರಶಸ್ತಿಯ ವ್ಯವಸ್ಥೆಯನ್ನೇ ಬದಲಾಯಿಸಿದ್ದು. ಈ ಐದು ವರ್ಷಗಳಲ್ಲಿ ಪದ್ಮಪ್ರಶಸ್ತಿ ಪುರಸ್ಕೃತರ ವ್ಯಕ್ತಿಚಿತ್ರವನ್ನು ಪ್ರಕಟಿಸಿದರೆ ಅದೇ ಒಂದು ಪ್ರೇರಣಾದಾಯಿ ಕೃತಿ. ಅವನ ಮಾತುಗಳನ್ನು ದಾಖಲಿಸಿದರೆ ಅದು ಅಂತರರಾಷ್ಟ್ರೀಯ ಮಟ್ಟದ ಟೆಡ್ಟಾಕ್ಗೆ ಸಮ!


ಏನೇ ಹೇಳಿ. ಆಯ್ಕೆ ವಿಚಾರದಲ್ಲಿ ನರೇಂದ್ರಮೋದಿ ಅವರನ್ನು ಮೆಚ್ಚಲೇಬೇಕು. ಅಟಲ್ಜಿ ರಾಷ್ಟ್ರಕ್ಕೆ ರಾಷ್ಟ್ರಪತಿಯನ್ನು ಆಯ್ಕೆ ಮಾಡುವಾಗ ಅಬ್ದುಲ್ ಕಲಾಂರನ್ನು ಕರೆತಂದು ಹುದ್ದೆಯ ಘನತೆ-ಗೌರವವನ್ನು ಹೆಚ್ಚಿಸಿದ್ದರು. ಶ್ರೇಷ್ಠರನ್ನು ಗುರುತಿಸುವ ಪ್ರಜ್ಞೆಯನ್ನು ಕಳೆದುಕೊಂಡಿದೆ ಎಂದಾದರೂ ಸರಿಯೇ ಅಬ್ದುಲ್ ಕಲಾಂರನ್ನು ಮುಂದುವರೆಸಿ ಕಾಂಗ್ರೆಸ್ಸು ಕೈ ತೊಳೆದುಕೊಳ್ಳಬುಹುದಿತ್ತು. ಆದರೆ ಹಾಗೆ ಮಾಡಿತೇನು? ಪ್ರತಿಭಾ ಪಾಟೀಲರನ್ನು ರಾಷ್ಟ್ರಪತಿ ಭವನಕ್ಕೆ ಕರೆತಂದು ಕೂರಿಸಿತು. ಒಂದೆಡೆ ಮಾತಾಡದೇ ಹೇಳಿದ್ದನ್ನೆಲ್ಲಾ ಕೇಳುವ ಪ್ರಧಾನಮಂತ್ರಿ, ಮತ್ತೊಂದೆಡೆ ರಬ್ಬರ್ಸ್ಟಾಂಪ್ ರಾಷ್ಟ್ರಪತಿ. ಪ್ರಜಾಪ್ರಭುತ್ವ ಅತ್ಯಂತ ತಳಮಟ್ಟಕ್ಕೆ ಮುಟ್ಟಿದ್ದು ಆ ಹೊತ್ತಿನಲ್ಲೇ. ಪ್ರತಿಭಾಪಾಟೀಲರ ಆಯ್ಕೆಗೆ ಮಾನದಂಡವೇನೆಂಬುದು ಇತರರಿಗಿರಲಿ, ಸ್ವತಃ ಆಕೆಗೂ ಗೊತ್ತಿರಲಿಲ್ಲ. ತನ್ನ ಅವಧಿ ಮುಗಿದು ಮರಳಿ ಹೋಗುವಾಗ ಆಕೆ ದೇಶ-ವಿದೇಶಗಳಲ್ಲಿ ತನಗೆ ಕೊಟ್ಟಿರುವ ಉಡುಗೊರೆಗಳನ್ನು ಹಾಗೆ ಒಯ್ಯಬಾರದೆಂಬ ನಿಯಮವಿದ್ದಾಗಲೂ ಹೊತ್ತೊಯ್ದು ದೇಶಕ್ಕೆ ಅವಮಾನ ಉಂಟುಮಾಡಿದ್ದರು. ಪ್ರಣಬ್ ಮುಖಜರ್ಿಯಂತಹ ವ್ಯಕ್ತಿಯನ್ನು ಕಾಂಗ್ರೆಸ್ಸು ರಾಷ್ಟ್ರಪತಿ ಮಾಡಿದ್ದು ಅವರ ಸಾಧನೆಯನ್ನು ಗುರಿತಿಸಿ ಅಲ್ಲ, ಬದಲಿಗೆ ರಾಹುಲ್ ಪ್ರಧಾನಿಯಾಗಲು ಪ್ರಣಬ್ದಾ ಅಡ್ಡಗಾಲಾಗಬಹುದು ಎಂಬ ಕಾರಣಕ್ಕೆ. ವಿಧಿಲಿಖಿತ ಬೇರೆಯೇ ಇತ್ತು ಬಿಡಿ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರಮೋದಿ ಪ್ರಣಬ್ರೊಂದಿಗೆ ಘನವಾದ ಸಂಬಂಧವನ್ನು ಬೆಸೆದುಕೊಂಡು ಅವರ ನಂತರ ದಲಿತರಾದರೂ ಶ್ರೇಷ್ಠ ಪ್ರಜ್ಞೆಯವರಾದ ರಾಮನ್ನಾಥ್ ಕೋವಿಂದರನ್ನು ಹುಡುಕಿ ಕರೆತಂದರು. ಈ ಎಲ್ಲಾ ಪ್ರಕ್ರ್ರಿಯೆ ಹಿಂದೆ ಗಮನಿಸಲೇಬೇಕಾದ ಅಚ್ಚರಿಯ ಸಂಗತಿಯೊಂದಿದೆ. ರಾಷ್ಟ್ರಪತಿಯ ಆಯ್ಕೆಯೇ ಇರಲಿ, ಭಾರತರತ್ನ ಪದ್ಮಪ್ರಶಸ್ತಿಗಳೇ ಇರಲಿ, ಯಾವ ಸುದ್ದಿಯೂ ಮತ್ತೊಬ್ಬರ ಕಿವಿಗೆ ಹೋಗುವುದಿಲ್ಲ. ಪ್ರಶಸ್ತಿಯ ಮುನ್ನಾ ದಿನವೇ ಪತ್ರಿಕೆಗಳಲ್ಲಿ ಪ್ರಕಟವಾಗುವುದಿಲ್ಲ. ಇಂದಿನ ವ್ಯವಸ್ಥೆಯಲ್ಲೂ ಗೌಪ್ಯತೆಯನ್ನು ಕಾಯ್ದುಕೊಳ್ಳುವ ನರೇಂದ್ರಮೋದಿ ಅವರ ತಾಕತ್ತನ್ನು ಮೆಚ್ಚಲೇಬೇಕು. ಪಾವಿತ್ರ್ಯವನ್ನು ಕಾಯ್ದುಕೊಂಡರೆ ಮಾತ್ರ ಪ್ರಶಸ್ತಿಗೆ ಬೆಲೆ ಎಂಬುದು ನರೇಂದ್ರಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಅರಿವಾಗುತ್ತಿದೆ.

-ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. ಶಶಿಕಲಾ. ಎಸ್.

    January 28, 2019 at 3:38 am

    Very nice. Full of inspiring information. ಇದು ಹೆಚ್ಚು ಜನರನ್ನು ತಲುಪ ಬೇಕು. ಅವರಲ್ಲಿ ಹೊಸ ಭರವಸೆ ಹುಟ್ಟಿಸುತ್ತದೆ. ಪುರಸ್ಕೃತರ ವಿವರಗಳನ್ನೂ ಹಂಚಿಕೊಳ್ಳಿ.ಸರ್ಕಾರದ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ಬಹಳ ಜನರಿಗೆ ತಿಳಿದಿಲ್ಲ. ಕಾನೂನಿನ ನೆರವು ಕುರಿತು ಮಾಹಿತಿ ನೀಡಿ. ಚುನಾವಣಾ ಪ್ರಕ್ರಿಯೆಯಲ್ಲಿ ಹಲವಾರು ಅಮಾಯಕರು ಸಂಚಿಗೆ ಬಲಿಯಾಗುವ ಸಾಧ್ಯತೆ ಇದ್ದು ಎಚ್ಚರಿಕೆ ಕ್ರಮ ಕುರಿತು ಸಹ ನಿಮ್ಮ ಗಮನ ಹರಿಯಲಿ.🙏

Leave a Reply

Your email address will not be published. Required fields are marked *

Most Popular

To Top