National

ಚುನಾವಣೆಯ ರಂಗು ಎಷ್ಟು ಬೇಗ ಬದಲಾಯಿತಲ್ಲವೇ!

ಚುನಾವಣೆಯ ಕಾವು ಈಗ ಜೋರಾಗುತ್ತಿದೆ. ಹಾಗಂತ ನಮ್ಮ ಅಕ್ಕ-ಪಕ್ಕಗಳಲ್ಲಿ ಅದರ ಬಿಸಿ ಖಂಡಿತವಾಗಿಯೂ ಗೋಚರಿಸುತ್ತಿಲ್ಲ. ಎಲ್ಲವೂ ಸಹಜವಾಗಿ ನಡೆಯುತ್ತಿದೆ. ಅದಕ್ಕೆ ಎರಡು ಪ್ರಮುಖ ಕಾರಣಗಳು. ಮೊದಲನೆಯದು ಪ್ರತಿಪಕ್ಷಗಳಿಗೆ ಮೋದಿ ಪ್ರಧಾನಿಯಾಗುವುದು ಖಾತ್ರಿ ಎಂಬುದರ ಜ್ಞಾನವಿದೆ. ತುಂಬಾ ಪ್ರಯತ್ನಿಸಿ ಸೋಲುವುದರಲ್ಲಿ ಅವರಿಗೆ ಯಾವ ಆಸಕ್ತಿಯೂ ಕಾಣುತ್ತಿಲ್ಲ. ಎರಡನೆಯದು ಸ್ವತಃ ಭಾಜಪಕ್ಕೆ ಮೋದಿ ಮತ್ತೆ ಪ್ರಧಾನಿಯಾಗುವುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ. ಹೀಗಾಗಿ ಗೆಲುವಿಗೆ ತುಂಬಾ ಪ್ರಯಾಸ ಪಡಬೇಕಾದ ಅಗತ್ಯವಿಲ್ಲ. ಒಟ್ಟಾರೆ ನೆಲದ ಮೇಲೆ ಮಾತ್ರ ಯಾವ ಚಟುವಟಿಕೆಗಳೂ ತೀವ್ರಗತಿಯಲ್ಲಿ ನಡೆಯುತ್ತಿರುವುದು ಕಣ್ಣಿಗೆ ಬೀಳುತ್ತಿಲ್ಲ. ಚುನಾವಣಾ ತಜ್ಞ ಯಶವಂತ್ ದೇಶ್ಮುಖ್ ಹೇಳಿರುವಂತೆ ಇದು ಅತ್ಯಂತ ಸಾಮಾನ್ಯವಾದ ಚುನಾವಣೆಯಾಗಿರಲಿದೆ. ರಾಹುಲ್ ತಾನೇ ಪ್ರಧಾನಿಯಾಗುವ ಭ್ರಮೆಯನ್ನು ತನ್ನೊಳಗೇ ಪೋಷಿಸಿಕೊಂಡು ಜನರೊಳಗೆ ಭರವಸೆ ಮೂಡಿಸುವ ಪ್ರಯತ್ನ ಸಾಕಷ್ಟು ಮಾಡಿದ್ದಾನೆ. ಆದರೆ ಆತನನ್ನು ಪ್ರಧಾನಿ ಎಂದು ಒಪ್ಪಿಕೊಳ್ಳಲು ಬೇರೆಯವರು ಬಿಡಿ ಸ್ವತಃ ಕಾಂಗ್ರೆಸ್ಸಿಗರಿಗೂ ಮನಸ್ಸಿಲ್ಲ. ಅದರಲ್ಲೂ ಬಿಜೆಪಿ ನರೇಂದ್ರಮೋದಿಯಂತಹ ಸಮರ್ಥ ನಾಯಕನನ್ನು ಮುಂದಿರಿಸಿರುವಾಗ ಅದಕ್ಕೆದುರಾಗಿ ರಾಹುಲ್ನನ್ನು ಪ್ರಧಾನಿಯ ವಸ್ತು ಎಂದು ಯಾರಿಗಾದರೂ ಒಪ್ಪಿಕೊಳ್ಳಲು ಹೇಗೆ ಸಾಧ್ಯ ಹೇಳಿ!


ಸ್ವಲ್ಪ ಹಿಂದೆ ತಿರುಗಿ ನೋಡಿ. ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಬಂದಾಗ ದೇಶದ ಅಲೆ ಮೋದಿಯವರ ವಿರುದ್ಧವಾಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಬಿಜೆಪಿಯ ಸ್ಥಳೀಯ ನಾಯಕರುಗಳೆಲ್ಲಾ ಮೂಲೆ ಹಿಡಿದು ಕುಳಿತು ಒಬ್ಬೊಬ್ಬರೇ ಕಣ್ಣೀರು ಹಾಕಿರಲಿಕ್ಕೂ ಸಾಕು. ಸ್ವಂತದ್ದೇನೂ ಸಾಧಿಸದೇ ಮೋದಿಯವರ ಚರಿಷ್ಮಾದ ಬಲದ ಮೇಲೆಯೇ ಅಧಿಕಾರವನ್ನು ಪಡೆದುಕೊಂಡ ಆಕಸ್ಮಿಕ ಎಂಪಿಗಳೆಲ್ಲಾ ಆಗ ಹೆದರಿಬಿಟ್ಟಿದ್ದರು. ಆದರೆ ತನ್ನ ವಿರುದ್ಧವಾಗಿದ್ದ ಅಲೆಯನ್ನು ಸತತ ಪರಿಶ್ರಮದಿಂದ ತನ್ನ ಪರವಾಗಿ ಪರಿವತರ್ಿಸಿಕೊಳ್ಳುವಲ್ಲಿ ಮೋದಿ ಮಾಡಿದ ಸಾಧನೆ ಅನೂಹ್ಯವಾದದ್ದು. ಮೂರು ರಾಜ್ಯಗಳನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಡುವ ಸ್ಥಿತಿ ಬಂದಾಗ ಮೋದಿ ವಿಚಲಿತರಾಗಿದ್ದು ನಿಜ. ಆದರೆ ಆ ಸೋಲನ್ನು ಮೆಟ್ಟಿಲಾಗಿ ಪರಿವತರ್ಿಸಿಕೊಳ್ಳುವಲ್ಲಿ ಮುಂದಿನ ಆರು ತಿಂಗಳ ನೀಲನಕಾಶೆಯನ್ನು ಸಿದ್ಧಪಡಿಸಿಕೊಂಡು ಅವರು ಒಂದೊಂದಾಗಿ ಅದನ್ನು ಪೂರೈಸಿಕೊಂಡ ರೀತಿ ರಾಜಕೀಯ ಶಾಸ್ತ್ರದ ಪ್ರತಿಯೊಬ್ಬ ವಿದ್ಯಾಥರ್ಿಯೂ ಹತ್ತಿರದಿಂದ ಗಮನಿಸಬೇಕಾದುದು. ತಮಗೆ ಸಿಕ್ಕ ಸೋಲಿನಿಂದ ಧೃತಿಗೆಟ್ಟ ಕಾರ್ಯಕರ್ತರನ್ನು ಮೊದಲು ಹುರಿದುಂಬಿಸಬೇಕಾದ ಅಗತ್ಯ ಅವರಿಗಿತ್ತು. ತಮ್ಮ ಎಲ್ಲಾ ಬಜೆಟ್ಗಳಲ್ಲೂ ಯಾವುದೇ ಉಚಿತ ಘೋಷಣೆಗಳನ್ನು ಮಾಡದ ನರೇಂದ್ರಮೋದಿ ಚುನಾವಣೆಗೆ ಪೂರ್ವ ಬಜೆಟ್ನಲ್ಲಿ ಭಾರೀ ದೊಡ್ಡ ಕೊಡುಗೆಗಳನ್ನು ಕೊಡಲೇಬೇಕಿತ್ತು. ಅದು ನೆಲಮಟ್ಟದಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಮತ್ತೊಮ್ಮೆ ಮತದಾರರೆದುರು ಹೋಗಿ ನಿಲ್ಲುವ ಶಕ್ತಿ ತುಂಬಬೇಕೆಂಬುದೂ ಅವರ ಅರಿವಿನಲ್ಲಿತ್ತು. ಅಷ್ಟೇ ಅಲ್ಲ, ಹೀಗೆ ಘೋಷಿಸುತ್ತಿರುವ ಯೋಜನೆಗಳು ಕಾಂಗ್ರೆಸ್ಸಿನ ಚುನಾವಣಾ ಬೇಡಿಕೆಯ ಘೋಷಣೆಗಳಾಗಿರದೇ ಅದು ಹೊಚ್ಚ ಹೊಸತಾಗಿರೇಬೇಕೆಂಬ ಸ್ಪಷ್ಟ ಕಲ್ಪನೆಯೂ ಅವರಿಗಿತ್ತು. ಹಾಗೇನಾದರೂ ನರೇಂದ್ರಮೋದಿ ತಮ್ಮ ಬಜೆಟ್ನಲ್ಲಿ ರೈತರ ಸಾಲಮನ್ನಾ ಎಂದು ಒಂದು ಲಕ್ಷಕೋಟಿಯನ್ನು ಮೀಸಲಾಗಿಟ್ಟುಬಿಟ್ಟಿದ್ದರೂ ಅದರ ಶ್ರೇಯವೆಲ್ಲಾ ಕಾಂಗ್ರೆಸ್ಸಿಗೇ ಹೋಗುತ್ತಿತ್ತೇ ಹೊರತು, ಮೋದಿಗಲ್ಲ. ರಾಹುಲ್ನ ಒತ್ತಡಕ್ಕೆ ಮಣಿದು ಮೋದಿ ಈ ಕೆಲಸ ಮಾಡಿದ್ದಾರೆ ಎಂಬುದನ್ನು ಕಾಂಗ್ರೆಸ್ಸು ಚುನಾವಣಾ ಅಸ್ತ್ರವಾಗಿಯೇ ಬಳಸಿಕೊಂಡುಬಿಡುತ್ತಿತ್ತು. ಹಾಗೆ ಯಾವ ಕೆಲಸಕ್ಕೂ ಬಾರದ ರಾಹುಲ್ ಮೋದಿಯನ್ನು ಮಣಿಸಿದ ಕೀತರ್ಿಗೆ ಪಾತ್ರನಾಗಿಬಿಡುತ್ತಿದ್ದ. ನರೇಂದ್ರಮೋದಿ ಗುಜರಾತಿನ ನೀರು ಕುಡಿದವರು. ರೈತರ ಸಾಲಮನ್ನಾ ಆಲೋಚನೆಯನ್ನೂ ಮುಂದಕ್ಕೆ ತರದೇ ಕೃಷಿ ಸಮ್ಮಾನ ನಿಧಿ ಘೋಷಿಸಿ ಬಡರೈತರಿಗೆ ವರ್ಷಕ್ಕೆ 6000 ರೂಪಾಯಿಯನ್ನು ನೇರವಾಗಿ ತಲುಪಿಸುವ ಯೋಜನೆ ಘೋಷಿಸಿಬಿಟ್ಟರು. ಇದು ಚಿಕ್ಕ ಬಾಪ್ತು ಎಂಬುದು ನಿಜವಾದರೂ ಸಾಲಮನ್ನಾ ಎಂಬ ಹೆಸರಿನಲ್ಲಿ ತನ್ನ ಕೈಗೆ ಏನೂ ಸಿಗದೆ ಕೊರಗುತ್ತಿದ್ದ ರೈತ ಈಗ ಒಂದಷ್ಟು ಹಣವನ್ನು ನೋಡುವಂತಾಯ್ತಲ್ಲ, ಅದೇ ಅವನಿಗೆ ಹೆಮ್ಮೆ. ಮೋದಿ ರೈತರ ಮನಸ್ಸನ್ನು ಗೆದ್ದಾಗಿತ್ತು. ಅಸಂಘಟಿತ ವಲಯದ ಶ್ರಮಿಕರಿಗೆ ತಿಂಗಳಿಗೆ 3000 ರೂಪಾಯಿಯಷ್ಟು ನಿವೃತ್ತಿ ವೇತನ ಘೋಷಿಸಿದ ಮೇಲಂತೂ ಕಮ್ಯುನಿಸ್ಟರೇ ಪ್ರಾಬಲ್ಯ ಹೊಂದಿದ್ದ ಕಾಮರ್ಿಕ ಸಂಘಟನೆಗಳು ಮಾತು ನಿಲ್ಲಿಸಿ ಮೌನಕ್ಕೆ ಹೊರಳಿದ್ದವು. ಈ ಬಜೆಟ್ನಲ್ಲಿ ನರೇಂದ್ರಮೋದಿ ಘೋಷಿಸಿದ ಯೋಜನೆಗಳನ್ನು ಕೆಳಹಂತದಲ್ಲಿ ಕಾರ್ಯಕರ್ತ ಸಂಭ್ರಮಿಸುತ್ತಿದ್ದರೆ ಅತ್ತ ಕಾಂಗ್ರೆಸ್ಸು ಇದನ್ನು ವಿರೋಧಿಸುವ ಮಾರ್ಗಗಳಿಲ್ಲದೇ ಚಡಪಡಿಸುತ್ತಿತ್ತು. ಮೋದಿ ನಿಧಾನವಾಗಿ ತಮ್ಮ ಸಾರ್ವಜನಿಕ ಸಭೆಗಳನ್ನು ಆರಂಭಿಸಿಕೊಂಡರು. ಕಾರ್ಯಕರ್ತರೊಂದಿಗೆ, ಜನರೊಂದಿಗೆ ನೇರ ಸಂವಾದಕ್ಕಿಳಿದರು. ಐದು ವರ್ಷಗಳ ಸಾಧನೆಯನ್ನು ಮುಕ್ತವಾಗಿ ಪಟ್ಟಿಮಾಡಲಾರಂಭಿಸಿದರು. ವಿದೇಶ ಪ್ರವಾಸಗಳನ್ನು ಹೆಚ್ಚು-ಕಡಿಮೆ ನಿಲ್ಲಿಸಿಯೇಬಿಟ್ಟರು. ಮತ್ತೆ ಮೋದಿ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಕಾಶ್ಮೀರದಲ್ಲಿ ಪುಲ್ವಾಮಾ ದಾಳಿಯಾಯ್ತು. ಈ ದಾಳಿಯ ನಂತರ ಒಂದು ಬಗೆಯಲ್ಲಿ ನರೇಂದ್ರಮೋದಿ ಸಕರ್ಾರದ ವಿರುದ್ಧ ಅಸಮಾಧಾನದ ಹೊಗೆ ಎದ್ದ ಸ್ಥಳಗಳಲ್ಲೂ ಕೂಡ ಜನ ಒಂದಾಗಲಾರಂಭಿಸಿದರು. ಬಹುಶಃ ಭಾರತ ಕಂಡ ಅತ್ಯುಗ್ರ ರಾಷ್ಟ್ರಭಕ್ತಿಯ ಪರ್ವಕಾಲ ಅದು. ಜಾತಿ-ಮತ-ಪಂಥ-ಭೇದಗಳನ್ನು ಮರೆತು ಜನ ರಾಷ್ಟ್ರೀಯತೆಯ ಛತ್ರಛಾಯೆಯಲ್ಲಿ ಒಂದಾದರು. ಸೈನಿಕರ ಕುರಿತಂತಹ ಗೌರವದ ಭಾವನೆಗಳು ಜನರ ಹೃದಯವನ್ನು ಆವರಿಸಿಕೊಂಡವು. ಈ ಹೊತ್ತಿನಲ್ಲಿ ಮಾತನಾಡಿಕೊಂಡು ಅವಹೇಳನಕ್ಕೀಡಾದ ಪ್ರತಿಪಕ್ಷಗಳು ಮೌನಕ್ಕೆ ಶರಣಾಗಿದ್ದು ನಿಜ. ಆದರೆ ಈ ರಾಷ್ಟ್ರೀಯತೆಯ ಹೆಮ್ಮೆಯ ಭಾವನೆ ದೀರ್ಘಕಾಲ ನಿಲ್ಲುವಂತದ್ದಾಗಿರಲಿಲ್ಲ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಪ್ರತಿಪಕ್ಷಗಳು ಇದೇ ವಿಚಾರವನ್ನು ಆಧಾರವಾಗಿರಿಸಿಕೊಂಡು ಸಕರ್ಾರದ ಮೇಲೆ ದಾಳಿ ಮಾಡುವ ಎಲ್ಲ ಸಾಧ್ಯತೆಗಳೂ ಇದ್ದವು. ಅದರಲ್ಲೂ ಪಾಕಿಸ್ತಾನದ ವಿರುದ್ಧ ಸೂಕ್ತ ಕಾಯರ್ಾಚರಣೆ ನಡೆಸದೇ ಹೋದರಂತೂ ಪ್ರತಿಪಕ್ಷಗಳು ಮುಗಿಬಿದ್ದುಬಿಡುತ್ತಿದ್ದವು. ಯಾರೆಲ್ಲಾ ಇಂದು ಸೈನಿಕ ಕಾಯರ್ಾರಚರಣೆಯನ್ನು ನರೇಂದ್ರಮೋದಿ ಬಳಸಿಕೊಳ್ಳಬಾರದೆಂದು ಹೇಳುತ್ತಿದ್ದಾರೋ ಅವರೆಲ್ಲಾ ಸೈನಿಕ ಕಾಯರ್ಾಚರಣೆಯಾಗದೇ ಹೋಗಿದ್ದಿದ್ದರೆ ಮೋದಿಯವರ ವಿರುದ್ಧ ಅದನ್ನೇ ಅಸ್ತ್ರವಾಗಿ ಬಳಸುತ್ತಿದ್ದರು. ಮೋದಿ ಇದ್ಯಾವುದನ್ನೂ ಗಣನೆಗೆ ತಂದುಕೊಳ್ಳಲಿಲ್ಲ. ಅವರ ಕಣ್ತಪ್ಪಿಸಿ ನಡೆದ ಈ ಘಟನೆಗೆ ಸರಿಯಾದ ಪ್ರತೀಕಾರ ಆಗಲೇಬೇಕಿತ್ತು ಮತ್ತು ಅದಕ್ಕಾಗಿ ಕಾಯಲು ಪುರಸೊತ್ತೂ ಇರಲಿಲ್ಲ. ವಾತಾವರಣ ಪರಿಪಕ್ವವಾಗಿತ್ತು.


ಮೋದಿ ರಾಜತಾಂತ್ರಿಕವಾಗಿ ಪಾಕಿಸ್ತಾನವನ್ನು ಕೆಟ್ಟದಾಗಿಯೇ ಬಡಿದರು. ವ್ಯಾಪಾರ ಉದ್ದಿಮೆಯ ದೃಷ್ಟಿಯಿಂದಲೂ ಪಾಕಿಸ್ತಾನಕ್ಕೆ ನಷ್ಟವಾಗುವಂತೆ ನೋಡಿಕೊಂಡರು. ದಿನಕ್ಕೊಂದು ಕ್ರಮವನ್ನು ಪಾಕಿಸ್ತಾನದ ವಿರುದ್ಧ ತೆಗೆದುಕೊಳ್ಳುತ್ತಾ, ಅದನ್ನು ಭಾರತೀಯರಿಗೆ ತಿಳಿಸುತ್ತಾ ಭಾರತ ಪಾಕಿಸ್ತಾನಕ್ಕಿಂತಲೂ ನೂರು ಪಟ್ಟು ಬಲಾಢ್ಯವಾಗಿದೆ ಎಂಬುದನ್ನು ಸಾಬೀತು ಪಡಿಸುತ್ತಾ ನಡೆದರು. ಆದರೆ ಇವ್ಯಾವುವೂ ಭಾರತದ ಸಾರ್ವಭೌಮತೆಯನ್ನು ತೋರಿಸುವಂತಹ ಕ್ರಮಗಳಾಗಿರಲಿಲ್ಲ. ಜಾಗತಿಕ ಮಟ್ಟದಲ್ಲಿ ಭಾರತದ ಸೈನಿಕರ ಸಾವಿನ ಅನುಕಂಪವನ್ನು ಮತ್ತು ತಮ್ಮ ವ್ಯಾಪಾರ ಸಂಬಂಧದ ಲಾಭವನ್ನು ಚೆನ್ನಾಗಿ ಉಪಯೋಗಿಸಿಕೊಂಡ ಮೋದಿ ಸೈನಿಕರಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದುದರ ಪರಿಣಾಮವಾಗಿ ಪುಲ್ವಾಮಾ ದಾಳಿಯಾದ ಹದಿಮೂರೇ ದಿನಗಳಲ್ಲಿ ಭಾರತ ಪ್ರತಿದಾಳಿಯನ್ನೂ ಸಂಘಟಿಸಿತು. ಪಾಕಿಸ್ತಾನದೊಳಕ್ಕೆ ನುಗ್ಗಿ ನಾವು ನಡೆಸಿದ ವಾಯುದಾಳಿ ಪಾಕಿಸ್ತಾನವನ್ನು ನಡುಗಿಸಿತ್ತಲ್ಲದೇ ಏಷ್ಯಾದಲ್ಲಿ ನಮ್ಮ ಸಾಮಥ್ರ್ಯವನ್ನು ಪುನರ್ಪ್ರತಿಷ್ಠಾಪಿಸಿತು. ಭಾರತೀಯರ ಪಾಲಿಗಂತೂ ಈ ಒಂದು ವಾಯುದಾಳಿ ಎಂತಹ ಅಭಿಪ್ರಾಯವನ್ನು ಮೂಡಿಸಿಬಿಟ್ಟಿತೆಂದರೆ ಜನ ಅನಿವಾರ್ಯವಾಗಿ ಮನಮೋಹನ್ ಸಿಂಗರನ್ನು ಮತ್ತು ನರೇಂದ್ರಮೋದಿಯವರನ್ನು ತುಲನೆ ಮಾಡಿ ನೋಡಲಾರಂಭಿಸಿದರು. ಸಹಜವಾಗಿಯೇ ಮುಂಬೈ ದಾಳಿಯ ಹೊತ್ತಲ್ಲೂ ಪಾಕಿಸ್ತಾನಕ್ಕೆ ದೀರ್ಘದಂಡ ಪ್ರಣಾಮಗಳನ್ನು ಮಾಡುತ್ತಾ ಕಾಲಕಳೆದ ಕಾಂಗ್ರೆಸ್ಸಿಗೂ ಪುಲ್ವಾಮಾ ದಾಳಿಯ ಪಾಪಕ್ಕೆ ಪಾಕಿಸ್ತಾನಕ್ಕೆ ಏರ್ಸ್ಟ್ರೈಕಿನ ಮೂಲಕ ಪಾಠ ಕಲಿಸಿದ ನರೇಂದ್ರಮೋದಿಯವರ ಕೆಚ್ಚೆದೆಯನ್ನು ಹತ್ತಿರದಿಂದ ಗಮನಿಸಿದ ರಾಷ್ಟ್ರಕ್ಕೆ ಮೋದಿಯವರನ್ನು ಆಯ್ಕೆ ಮಾಡಿಕೊಳ್ಳದೇ ಬೇರೆ ಮಾರ್ಗವೇ ಇರಲಿಲ್ಲ. ಪಂಚರಾಜ್ಯಗಳ ಸೋಲಿನ ನಂತರ ಯಾವ ವಾತಾವರಣ ಮೂಡಿತ್ತೋ ಅದೆಲ್ಲವೂ ಪೂರ್ಣ ತಿರುಗಿ ನಿಂತಿತು. ಇದಕ್ಕೆ ಸರಿಯಾಗಿ ಪ್ರತಿಪಕ್ಷಗಳು ಒಂದಾದಮೇಲೆ ಒಂದು ಎಡವಟ್ಟು ಮಾಡಿಕೊಳ್ಳುತ್ತಲೇ ಸಾಗಿದವು. ಏರ್ಸ್ಟ್ರೈಕ್ಗೆ ಕಾಂಗ್ರೆಸ್ಸು ಸಾಕ್ಷಿ ಕೊಡಿ ಎಂದು ಕೇಳಿತ್ತು. ನಮ್ಮದ್ದೇ ವಾಯುಸೇನೆಯನ್ನು ಅವಮಾನಿಸಿ ಸತ್ತವರ ಫೋಟೊ ಏಕಿಲ್ಲ ಎಂದು ಪ್ರಶ್ನಿಸಿತು. ಜನ ಕಾಂಗ್ರೆಸ್ಸನ್ನು ತುಚ್ಛವಾಗಿ ಕಂಡರು. ಇನ್ನದನ್ನು ಮೇಲಕ್ಕೆತ್ತಲು ಯಾರಿಂದಲೂ ಸಾಧ್ಯವಿರಲಿಲ್ಲ. ಮೋದಿ ಅಪ್ಪಟ ರಾಜಕಾರಣಿ ಎನ್ನುವುದನ್ನು ಯಾರೂ ಅಲ್ಲಗಳೆಯುವಂತೆಯೇ ಇಲ್ಲ. ಸಾಕ್ಷಿ ಕೇಳುತ್ತಿರುವ ಕಾಂಗ್ರೆಸ್ಸಿಗೆ ಜನಸಾಮಾನ್ಯರ ಮಧ್ಯೆ ನಿಂತೇ ಪ್ರಶ್ನೆಗಳ ಸುರಿಮಳೆ ಸುರಿಸಿದರು. ವಿಂಗ್ ಕಮ್ಯಾಂಡರ್ ಅಭಿನಂದನ್ ಮಿಗ್-21 ನಿಂದ ಪಾಕಿಸ್ತಾನದ ಎಫ್-16 ಗಳನ್ನು ಹೊಡೆದು ಹಾಕಿದ ನಂತರ ಒಂದೇ ದಿನದಲ್ಲಿ ಅವನನ್ನು ಮರಳಿ ಕರೆತಂದ ನರೇಂದ್ರಮೋದಿ ತಮ್ಮ ತಾಕತ್ತನ್ನು ಜಗತ್ತಿನ ಮುಂದೆ ಪ್ರದಶರ್ಿಸಿದ್ದರೆ ಇತ್ತ ತಮ್ಮ ಭಾಷಣಗಳಲ್ಲಿ ಮಿಗ್-21 ಜಾಗದಲ್ಲಿ ರಫೇಲ್ ಇದ್ದಿದ್ದರೆ ಪಾಕಿಸ್ತಾನದ ವಾಯುನೆಲೆಗಳನ್ನೇ ಧ್ವಂಸಗೊಳಿಸಬಹುದಿತ್ತು ಎಂದು ಹೇಳುವ ಮೂಲಕ ರಾಹುಲ್ಗೆ ಮುಂದೇನೂ ಮಾತನಾಡದಂತೆ ತಡೆಯೊಡ್ಡಿಬಿಟ್ಟಿದ್ದರು. ರಫೇಲ್ ಕೊಂಡುಕೊಳ್ಳುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಾಬೀತುಪಡಿಸಲು ಅನೇಕ ತಿಂಗಳುಗಳಿಂದ ಹೆಣಗಾಡುತ್ತಿದ್ದ ರಾಹುಲ್ಗೆ ನರೇಂದ್ರಮೋದಿ ಕೊಟ್ಟ ಏಟು ಸಹಿಸಿಕೊಳ್ಳುವುದು ಕಷ್ಟವೇ ಆಗಿತ್ತು. ರಫೇಲ್ ರಾಹುಲ್ ತಡೆಯುತ್ತಿರುವುದೇ ಭಾರತೀಯ ವಾಯುಸೇನೆಯನ್ನು ದುರ್ಬಲಗೊಳಿಸಲು ಎಂಬುದು ಕಾಂಗ್ರೆಸ್ಸಿನ ಪಾಲಿಗೆ ಮರಣ ಶಾಸನವೇ ಆಗಿತ್ತು. ಮೋದಿ ಕಾಂಗ್ರೆಸ್ಸನ್ನು ಅವರೇ ತೋಡಿದ ಹಳ್ಳದಲ್ಲಿ ಬೀಳುವಂತೆ ಮಾಡಿ ಯುದ್ಧವನ್ನು ಗೆದ್ದೇಬಿಟ್ಟಿದ್ದಾರೆ.


ಇವೆಲ್ಲವೂ ಮೋದಿಯವರ ರಕ್ಷಣಾತ್ಮಕ ಆಟವಾದರೆ ಕಾಂಗ್ರೆಸ್ಸಿಗೆ ಅವರ ಆಕ್ರಮಣದ ಪರಿಚಯವೂ ಈ ಹೊತ್ತಿನಲ್ಲೇ ಆಗಲಾರಂಭಿಸಿತ್ತು. ದುಬೈನಿಂದ ಕರೆತಂದಿದ್ದ ಕ್ರಿಶ್ಚಿಯನ್ ಮಿಶೆಲ್ ರಫೇಲ್ನ ಹಿಂದಿಕ್ಕಿ ಯುರೋಫೈಟರ್ಗಳನ್ನು ಕೊಂಡುಕೊಳ್ಳುವಲ್ಲಿ ಸಾಕಷ್ಟು ದೊಡ್ಡ ಮೊತ್ತವನ್ನು ಸೋನಿಯಾ ಪರಿವಾರಕ್ಕೆ ನೀಡಲಾಗಿದೆ ಎಂಬ ಸುದ್ದಿಯನ್ನು ಬಾಯ್ಬಿಟ್ಟಿದ್ದ. ಅಷ್ಟೇ ಅಲ್ಲ, ಸಂಜಯ್ ಭಂಡಾರಿ ಎಂಬ ದಲ್ಲಾಳಿಯ ಮೂಲಕ ರಾಹುಲ್ಗೆ ಜಮೀನೊಂದನ್ನು ಕೊಡುಗೆಯಾಗಿ ಕೊಡಲಾಗಿತ್ತು. ಅದನ್ನೇ 400 ಪಟ್ಟು ಹೆಚ್ಚು ಹಣಕ್ಕೆ ಮರಳಿ ಕೊಂಡುಕೊಳ್ಳಲಾಯ್ತು ಎಂಬ ಸುದ್ದಿ ಹೊರಬಂದ ನಂತರ ಕಾಂಗ್ರೆಸ್ಸು ವಿಲವಿಲನೆ ಒದ್ದಾಡಿಬಿಟ್ಟಿತು. ಒಂದೆಡೆ ಚಿದಂಬರಂರ ಕುಟುಂಬ ಮತ್ತೊಂದೆಡೆ ಸೋನಿಯಾ ಕುಟುಂಬ ಹೀಗೆ ತಮ್ಮದ್ದೇ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದರೆ ಪ್ರಿಯಾಂಕ ಜೋರಾಗಿ ಸದ್ದು ಮಾಡುವ ಲಕ್ಷಣಗಳನ್ನು ತೋರುತ್ತಿದ್ದಳು. ಆದರೆ ಕಾರಣಾಂತರಗಳಿಂದ ಆಕೆಯ ಅನೇಕ ರ್ಯಾಲಿಗಳು ಒಂದಾದಮೇಲೊಂದರಂತೆ ರದ್ದಾಗಿದ್ದು ಕಾಂಗ್ರೆಸ್ಸಿನ ಪಾಲಿಗೆ ನುಂಗಲಾರದ ತುತ್ತೇ ಆಗಿತ್ತು. ಇವೆಲ್ಲಾ ಕಳೆದು ಹೊಸ ಬೆಳಕು ಕಾಣುತ್ತದೆನ್ನುವ ವೇಳೆಗೆ ಸರಿಯಾಗಿ ಮಹಾಘಟಬಂಧನ್ನ ಅನೇಕ ಜೊತೆಗಾರರು ಕಾಂಗ್ರೆಸ್ಸಿನೊಂದಿಗೆ ಕಿತ್ತಾಟಕ್ಕೆ ಬಿದ್ದರು. ಒರಿಸ್ಸಾ, ಗುಜರಾತ್, ಉತ್ತರಪ್ರದೇಶವೇ ಮೊದಲಾದ ಕಡೆಗಳಲ್ಲಿ ಕಾಂಗ್ರೆಸ್ಸನ್ನು ಬಿಟ್ಟು ಬಿಜೆಪಿಯತ್ತ ಬರುವ ನಾಯಕರುಗಳ ಸಂಖ್ಯೆ ಹೆಚ್ಚಾಗಲಾರಂಭಿಸಿತು. ಬಿಜೆಪಿ ತನ್ನ ಸಹಯೋಗಿಗಳೊಂದಿಗೆ ಬಾಂಧವ್ಯವನ್ನು ಗಟ್ಟಿಮಾಡಿಕೊಳ್ಳುತ್ತಾ ನಡೆದರೆ ಅತ್ತ ಕಾಂಗ್ರೆಸ್ಸು ಸಹಯೋಗಿಗಳಿಂದ ಮೂಲೆಗುಂಪಾಗಲಾರಂಭಿಸಿತು. ಈಗಂತೂ ಮಹಾಘಟಬಂಧನವೇ ಕಾಂಗ್ರೆಸ್ಸಿಗೆ ಮುಳುವಾಗುವ ಎಲ್ಲ ಲಕ್ಷಣ ಕಾಣುತ್ತಿವೆ. ಕನರ್ಾಟಕದಲ್ಲಿ ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟಿರುವ ಸ್ಥಳಗಳಲ್ಲಿ ಯಾವ ದಳದ ಕಾರ್ಯಕರ್ತರೂ ಕಾಂಗ್ರೆಸ್ಸಿನ ಪರವಾಗಿ ಕೆಲಸ ಮಾಡಲಾರರು. ಹಾಗೆಯೇ ದಳಕ್ಕೆ ಬಿಟ್ಟುಕೊಟ್ಟಿರುವ ಸ್ಥಳಗಳಲ್ಲಿ ಕಾಂಗ್ರೆಸ್ಸಿಗರು ಸುಮ್ಮನಿರಲಿದ್ದಾರೆ. ಇವರಿಬ್ಬರಿಗೂ ಮೋದಿಗೆ ವೋಟು ಕೊಡಲು ಕಾರಣಗಳಿವೆ. ತಮ್ಮ ಪಕ್ಷವಿಲ್ಲದಿದ್ದ ಮೇಲೆ ಮೋದಿಯವರನ್ನು ಆಯ್ಕೆಮಾಡಿ ದೇಶಭಕ್ತರಾಗುವುದೇ ಒಳಿತು ಎಂಬ ಭಾವನೆಗೆ ಅವರೆಲ್ಲಾ ಬಂದುಬಿಟ್ಟರೆ ಕನರ್ಾಟಕದಲ್ಲಿ 20 ಸೀಟುಗಳಿಗೆ ಯಾವ ಮೋಸವೂ ಇಲ್ಲ. ದೇಶದಲ್ಲಿ 300ನ್ನು ದಾಟುವುದು ಬಿಜೆಪಿಗೆ ಕಷ್ಟವಲ್ಲ. ಅದಕ್ಕೇ ಹೇಳಿದ್ದು ಈ ಚುನಾವಣೆ ನಾವಂದುಕೊಂಡಿದ್ದಕ್ಕಿಂತ ಸಹಜವಾದ ಚುನಾವಣೆಯಾಗಿರಲಿದೆ ಮತ್ತು ನಮ್ಮ ಕಲ್ಪನೆಯನ್ನು ಮೀರಿ ನರೇಂದ್ರಮೋದಿ ಗೆಲುವು ಸಾಧಿಸಲಿದ್ದಾರೆ!

– ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top