International

ಚೀನಾ ವಿರುದ್ಧದ ಹೋರಾಟದಲ್ಲಿ ನಾವೇ ಸೈನಿಕರು!

ಭಾರತಕ್ಕೆ ಕರೋನಾಕ್ಕಿಂತಲೂ ಗಂಭೀರವಾದ ರಕ್ಷಣಾ ಸವಾಲು ಬಂದೊದಗಿದೆ. ಲಡಾಖ್ನ ಭಾಗದಿಂದ ಚೀನಾ ಒಳನುಗ್ಗುವ ತಯಾರಿ ನಡೆಸಿದ್ದು ಈಗ ಗುಟ್ಟಾಗೇನೂ ಉಳಿದಿಲ್ಲ. ಅದು ಬಹುಶಃ ತನ್ನ ಸರ್ವಋತು ಮಿತ್ರ ಪಾಕಿಸ್ತಾನವನ್ನು ಭಾರತದ ಅಚಾನಕ್ಕು ದಾಳಿಯಿಂದ ರಕ್ಷಿಸುವ ಪ್ರಯತ್ನವಷ್ಟೇ ಆಗಿತ್ತು ಎನಿಸುತ್ತದೆ. ಆದರೆ ಕಳೆದ ಎರಡು ವಾರಗಳಲ್ಲಿ ಭಾರತ ನೀಡಿರುವ ಪ್ರತಿಕ್ರಿಯೆ ಬೇರೆಯದ್ದೇ ದಿಕ್ಕಿನತ್ತ ಬೊಟ್ಟು ಮಾಡುತ್ತಿದೆ.


ಈ ಎರಡು ವಾರಗಳಲ್ಲಿ ಭಾರತ ಕಾಶ್ಮೀರದಲ್ಲಿ 22 ಜನ ಭಯೋತ್ಪಾದಕರನ್ನು ಕೊಂದು ಬಿಸಾಡಿದೆ. ಕಳೆದೆರಡು ದಿನಗಳಲ್ಲೇ ಒಂಭತ್ತು ಜನರನ್ನು ಜನ್ನತ್ಗೆ ಕಳಿಸಲಾಗಿದೆ. 14 ದಿನಗಳಲ್ಲಿ ಒಂಭತ್ತು ದೊಡ್ಡ ದೊಡ್ಡ ಕಾಯರ್ಾಚರಣೆಗಳು ನಡೆದಿದ್ದು, ಆರು ಜನ ಮುಖ್ಯ ಕಮ್ಯಾಂಡರ್ಗಳನ್ನೇ ಹೊಡೆದುರುಳಿಸಲಾಗಿದೆ. ಇದು ಭಯೋತ್ಪಾದಕ ಪಾಳಯಕ್ಕೆ ನುಂಗಲಾರದ ತುತ್ತಾದರೆ ಪಾಕಿಸ್ತಾನಕ್ಕೆ ಸಹಿಸಲಾಗದ ಅವಮಾನ. ಹಾಗಂತ ಸಮಸ್ಯೆ ಮುಗಿಯಿತೆಂದೇನೂ ಇಲ್ಲ. 400 ಜನ ಭಯೋತ್ಪಾದಕರು ಚೀನಾದ ಆದೇಶದಂತೆ ಭಾರತಕ್ಕೆ ನುಸುಳಲು ಸಿದ್ಧವಾಗಿ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಕಾದುಕೊಂಡು ಕುಳಿತಿದ್ದಾರೆ. 150 ರಿಂದ 250ರವರೆಗೆ ಭಯೋತ್ಪಾದಕರು ಕಾಶ್ಮೀರಕ್ಕೆ ಬರುವ ಸಿದ್ಧತೆ ನಡೆಸಿದ್ದರೆ ಉಳಿದವರು ಜಮ್ಮು ಭಾಗವನ್ನು ಹೊಕ್ಕಲು ಕಾಯುತ್ತಿದ್ದಾರೆ. ಪಿಒಕೆಯನ್ನು ಭಾರತ ಆದಷ್ಟು ಬೇಗ ವಶಕ್ಕೆ ತೆಗೆದುಕೊಳ್ಳದೇ ಹೋದಲ್ಲಿ ಹೀಗೆ ಒಳನುಸುಳುವವರ ಸಂಖ್ಯೆ ಹೆಚ್ಚುತ್ತಲೇ ಹೋಗಲಿದೆ. ಏಕೆಂದರೆ ಪಿಒಕೆಯಲ್ಲಿ ತಾನು ಹೂಡಿರುವ ಹಣವನ್ನು ಉಳಿಸಿಕೊಳ್ಳಬೇಕೆಂದರೆ ಭಾರತ ಪಿಒಕೆ ಕುರಿತಂತೆ ಆಲೋಚನೆಯೂ ಮಾಡದಂತೆ ನೋಡಿಕೊಳ್ಳಬೇಕೆಂಬುದು ಚೀನಾದ ಉದ್ದೇಶ. ಅದಕ್ಕಾಗಿಯೇ ಅದು ಮಾಡುತ್ತಿರುವ ಕಸರತ್ತು ಒಂದೆರಡಲ್ಲ. ಈಗಾಗಲೇ ನುಸುಳುಕೋರರ ಮೇಲೆ ಹಣ ಹೂಡಿದೆ. ಅಷ್ಟೇ ಅಲ್ಲ, ಭಾರತದ ಒಳಗಿರುವಂತಹ ಈ ಪ್ರತ್ಯೇಕತಾವಾದಿಗಳಿಗೆ ಸಾಕಷ್ಟು ಹಣ ಚೆಲ್ಲಿ ಅವರ ಮೂಲಕ ಅಂತರಂಗದಲ್ಲಿ ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆದಿದೆ. ಇದರಿಂದಾಗಿಯೇ ಸಿಎಎ ವಿರುದ್ಧದ ಪ್ರತಿಭಟನೆಗಳು ಯಶಸ್ಸು ಕಾಣಲು ಸಾಧ್ಯವಾಗಿದ್ದು. ಸಂಡೇ ಗಾಡರ್ಿಯನ್ ಎಡಪಕ್ಷಗಳು ಮತ್ತು ಕಾಂಗ್ರೆಸ್ಸು ನಿರುದ್ಯೋಗ ಹೆಚ್ಚುತ್ತಿರುವುದರ ವಿರುದ್ಧ ಬಲುದೊಡ್ಡ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಕುರಿತಂತೆ ವರದಿ ಮಾಡಿದೆ. ಕರೋನಾದಂತಹ ರೋಗ ವ್ಯಾಪಿಸಿಕೊಂಡಾಗ ಇಡಿಯ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿವೆ. ನಿರುದ್ಯೋಗವಂತೂ ಭಾರತಕ್ಕಷ್ಟೇ ಅಲ್ಲ, ಕರೋನಾದ ಮಾತೃಭೂಮಿಯಾದ ಚೀನಾಕ್ಕೂ ಕೆಟ್ಟದ್ದಾಗಿ ಕಾಡುತ್ತಿದೆ. ಹೀಗಿರುವಾಗ ಈ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಟ ನಡೆಸುವುದೆಂದರೆ ಅದು ರಾಜಕೀಯ ಪ್ರೇರಿತವಲ್ಲದೇ ಮತ್ತೇನೂ ಅಲ್ಲ. ಮತ್ತು ಇದರ ಹಿಂದೆ ಭಾರತವನ್ನು ಅಸ್ಥಿರಗೊಳಿಸುವ ದೊಡ್ಡ ಹುನ್ನಾರವಿರುವುದು ಎಂಥವನಿಗೂ ಅರಿವಾದೀತು. ಈ ಕಠಿಣ ಸಂದರ್ಭದಲ್ಲಿ ಇಡಿಯ ಜಗತ್ತು ಭಾರತದ ಜೊತೆ ನಿಂತಿರುವಾಗ ನಮ್ಮ ವಿರುದ್ಧವಾಗಿ ಕತ್ತಿ ಮಸಿಯುತ್ತಿರುವುದು ಚೀನಾ ಅಥವಾ ಪಾಕಿಸ್ತಾನ ಮಾತ್ರ. ಈ ಪ್ರತ್ಯೇಕತಾವಾದಿಗಳಿಗೆ ಹಣ ಕೊಡುವಷ್ಟು ಶ್ರೀಮಂತಿಕೆ ಪಾಕಿಸ್ತಾನಕ್ಕಿಲ್ಲವೆಂಬುದು ಎಂಥವನಿಗೂ ಗೊತ್ತು. ಹೀಗಿರುವಾಗ ನಿಸ್ಸಂಶಯವಾಗಿ ಇವರೆಲ್ಲರೂ ಕುಣಿಯುತ್ತಿರುವುದು ಚೀನಾದ ತಾಳಕ್ಕೇ ಎಂದು ಕಣ್ಮುಚ್ಚಿ ಹೇಳಬಹುದು. ಒಟ್ಟಾರೆ ಈ ರಾಷ್ಟ್ರವನ್ನು ಚೀನಾದೆದುರು ಗುಟುರು ಹಾಕಲಿಕ್ಕೆ ಸಾಧ್ಯವಾಗದ ಸ್ಥಿತಿಯಲ್ಲಿ ನಿಲ್ಲಿಸಬೇಕೆಂಬುದೇ ಇವರೆಲ್ಲರ ಹುನ್ನಾರ!


ಹಾಗಂತ ಚೀನಾ ಈ ಬಾರಿ ತೆರೆಯ ಹಿಂದೆಯಷ್ಟೇ ಕೆಲಸ ಮಾಡುತ್ತಿಲ್ಲ. ಸ್ವತಃ ಕದನಭೂಮಿಗೆ ಬಂದು ಲಡಾಖ್ ಭಾಗದಲ್ಲಿ ಭಾರತದ ವಿರುದ್ಧ ಗುಟುರು ಹಾಕುತ್ತಾ ನಿಂತಿದೆ. ಡೋಕ್ಲಾಂನಲ್ಲಿ ಸಮರ್ಥವಾದ ಪ್ರತಿದಾಳಿ ಸಂಘಟಿಸಿದ್ದ ಭಾರತ ಈ ಬಾರಿಯೂ ಹಾಗೇ ಮಾಡಿದೆ. ಚೀನಾ ಎಂದೊಡನೆ ಹೆದರಬೇಕಾದ ಸ್ಥಿತಿ ಖಂಡಿತ ಇಲ್ಲ. ವಾಸ್ತವವಾಗಿ ಜಗತ್ತಿನ ಯಾವ ರಾಷ್ಟ್ರಗಳೊಂದಿಗೂ ನೇರಯುದ್ಧಕ್ಕಿಳಿದು ಪೂರ್ಣಪ್ರಮಾಣದ ಗೆಲುವನ್ನು ಸಾಧಿಸಿರುವ ಅನುಭವ ಚೀನಾಕ್ಕಿಲ್ಲವೇ ಇಲ್ಲ. ಭಾರತಕ್ಕೆ ಹಾಗಲ್ಲ. ಪಾಕಿಸ್ತಾನದೊಂದಿಗೆ ನಾಲ್ಕು ಬಾರಿ ಯುದ್ಧದಲ್ಲಿ ಪೂರ್ಣವಿಜಯ ಸಾಧಿಸಿರುವುದಲ್ಲದೇ, 1967ರಲ್ಲಿ ಚೀನಾಕ್ಕೆ ಸೂಕ್ತ ಪಾಠವನ್ನೂ ಕಲಿಸಿ ಕಳಿಸಿತ್ತು. ಜಗತ್ತಿನ ಅನೇಕ ಶಾಂತಿಪಡೆಗಳಲ್ಲಿ ನಮ್ಮವರ ಕದನ ಕಲಿತನ ಕೊಂಡಾಡಲ್ಪಡುವಂಥದ್ದು. ವಿಶ್ವದ ಅನೇಕ ರಾಷ್ಟ್ರಗಳೊಂದಿಗೆ ಸಮರಾಭ್ಯಾಸದಲ್ಲಿ ನಿರತವಾಗಿರುವ ಭಾರತೀಯ ಪಡೆಗಳು ನಿಸ್ಸಂಶಯವಾಗಿ ಚೀನಾಕ್ಕಿಂತಲೂ ಒಂದು ಕೈ ಮೇಲು. ಈಗಂತೂ ಆಸ್ಟ್ರೇಲಿಯಾ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ತಂಟೆಯನ್ನು ತಡೆಯಲು ನಮ್ಮೊಂದಿಗೆ ಕೈಜೋಡಿಸುವ ಮಾತನ್ನಾಡುತ್ತಿದೆ. ಅತ್ತ ಅಮೇರಿಕಾ ಚೀನಾದ ವಿರುದ್ಧ ಕೂಗಾಡುತ್ತಿರುವುದರಿಂದ ಅದಕ್ಕೆ ಪ್ರತಿಯಾಗಿ ಭಾರತವನ್ನು ಜಿ7 ರಾಷ್ಟ್ರಗಳ ಸಭೆಗೆ ಆಹ್ವಾನಿಸಿದೆ. ಈ ಬಾರಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ಹುದ್ದೆಯೊಂದಕ್ಕೆ ಭಾರತೀಯರೇ ಆಯ್ಕೆಯಾಗಿದ್ದಾರೆ. ಸೆಕ್ಯುರಿಟಿ ಕೌನ್ಸಿಲ್ನಲ್ಲೂ ನಮ್ಮ ಕೂಗಿಗೆ ಈಗ ಬೆಲೆ ಬಂದಿದೆ. ಒಂದೇ ಮಾತಲ್ಲಿ ಹೇಳಬೇಕೆಂದರೆ ನಾವೀಗ ಮೊದಲಿಗಿಂತಲೂ ಬಲಗೊಂಡಿದ್ದೇವೆ. ಹೀಗಾಗಿ ಚೀನಾದ ಆಟ ಅಂದುಕೊಂಡಷ್ಟು ಸುಲಭವಾಗಿ ನಡೆಯಲಾರದು!

ಗಡಿಯಲ್ಲಿ ಬಂದೂಕು ಹಿಡಿದ ಸೈನಿಕರು ಗೆಲುವು ತಂದುಕೊಟ್ಟುಬಿಡುತ್ತಾರೆ. ಆದರೆ ನಮ್ಮ ನಡುವೆಯೇ ಇದ್ದುಕೊಂಡು ಕವನ ಗೀಚಿತ್ತಲೋ, ಲೇಖನಗಳನ್ನು ಬರೆಯುತ್ತಲೋ ಭಾರತವನ್ನು ತುಂಡು ಮಾಡುವ ಷಡ್ಯಂತ್ರ ರಚಿಸುವವರನ್ನು ಮಾತ್ರ ನಾವೇ ವಿಚಾರಿಸಿಕೊಳ್ಳಬೇಕು. ಗಡಿಗೆ ಬಂದಿರುವ ಅಪಾಯವನ್ನು ಭಾರತದೊಳಗೆ ಸರಿಪಡಿಸಬೇಕು.


ಚೀನಾ ನಿಜಕ್ಕೂ ಭಯಾನಕವಾದ ಸಂಕಟವನ್ನೆದುರಿಸುತ್ತಿದೆ. ಅಲ್ಲಿನ ವಸ್ತುಗಳು ಈಗ ರಫ್ತಾಗುತ್ತಿಲ್ಲ. ಚೀನಾ ಸುಳ್ಳು ಹೇಳುತ್ತದೆ, ಮೋಸ ಮಾಡುತ್ತದೆ ಎಂಬ ಸಂಗತಿ ಈಗ ಸೋಷಿಯಲ್ ಮೀಡಿಯಾಗಳಲ್ಲಿನ ಮಾತುಕತೆಯಾಗಷ್ಟೇ ಉಳಿದಿಲ್ಲ, ಚೀನಾದ ನಿಜಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಚೀನಾದ ಮೇಲಿನ ನಿರ್ಭರತೆಯನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನವನ್ನು ಎಲ್ಲಾ ರಾಷ್ಟ್ರಗಳೂ ಮಾಡುತ್ತಿವೆ. ಹೀಗಿರುವಾಗ ಭಾರತ ಬಲವಾಗಿ ಬೆಳೆದು ನಿಲ್ಲುವ ಪ್ರಯತ್ನ ಮಾಡಿಬಿಟ್ಟರೆ ಏಷ್ಯಾದ ಸದೃಢ ಶಕ್ತಿಯಾಗಿ ನಿಲ್ಲುವಲ್ಲಿ ಅನುಮಾನವೇ ಇಲ್ಲ ಮತ್ತು ಏಷ್ಯಾದ ಸಶಕ್ತರೆನಿಸಿಕೊಂಡವರು ಜಗತ್ತಿನ ಪ್ರಮುಖ ನಾಯರಾಗುತ್ತಾರೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top