International

ಚೀನಾ… ಜಗತ್ತು ನಿನ್ನನ್ನು ಎಂದಿಗೂ ಕ್ಷಮಿಸಲಾರದು…!!!

ಚೀನಾ ದೇಶದಿಂದ ಉಂಟಾದ ಕೊರೋನಾ ಎಂಬ ಮಹಾಮಾರಿಯಿಂದ ಜಗತ್ತಿನ ರಾಜಕಾರಣ ಮತ್ತು ಚೀನಾದ ಸ್ಥಾನಮಾನ ಪಲ್ಲಟಗೊಂಡಿದೆ. ಕೊರೋನಾ ಕಾಣಿಸಿಕೊಂಡದ್ದು ಮೊದಲು ಚೀನಾದಲ್ಲಿ ೨೦೧೯ರ ನವೆಂಬರ್ ನಲ್ಲಿ. ೨೦೨೦ರ ಜನವರಿ ತನಕ ಚೀನಾ ಈ ಮಹಾಮಾರಿಯ ಕುರಿತು ಯಾವುದೇ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳದ ಕಾರಣ ಭಾರತ ಸೇರಿದಂದೆ ಇಡೀ ಜಗತ್ತು ಇಂದು ನಷ್ಟ ಅನುಭವಿಸುತ್ತಿದೆ. ಇದಕ್ಕೆ ಚೀನಾ ದೇಶವೇ ಹೊಣೆ ಮತ್ತು ಶಿಕ್ಷಾರ್ಹ. ಮುಂದೊಂದು ದಿನ, ಈ ಮಹಾಮಾರಿಗೆ ಜಗತ್ತು ಅಂತ್ಯ ಹಾಡಿಯೇ ತೀರುತ್ತದೆ. ಅದರಲ್ಲಿ ಅನುಮಾನವಿಲ್ಲ. ಆ ಪರಿಸ್ಥಿತಿಯಲ್ಲಿ ಪಾಶ್ಚಾತ್ಯ ದೇಶದೊಂದಿಗಿನ ಚೀನಾ ದೇಶದ ಸಂಬಂಧ ಮೊದಲಿನ ತರಹ ಆಗುವುದು ಖಂಡತ ಅನುಮಾನವಿದೆ. ಈಗಾಗಲೇ ಅಂಟಿಬಯೋಟಿಕ್ಸ್ ಔಷಧಿಗಾಗಿ ಶೇ ೯೭ ಅವಲಂಭಿತವಾಗಿರುವ ಅಮೇರಿಕಾ, ಚೀನಾದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ಮುಂದಾಗಿದೆ.

 

ಕೊರೋನಾ ಮಹಾಮಾರಿಯಿಂದ ನಷ್ಟ ಮೊದಲು ಅನುಭವಿಸಿದ್ದು ಏಷ್ಯಾ ಖಂಡ. ಥೈಲಾಂಡ್ ಮತ್ತು ದಕ್ಷಿಣ ಕೊರಿಯಾದಲ್ಲಿ ಮೊದಲ ಬಾರಿಗೆ ಕೊರೋನಾ, ಚೀನಾ ದೇಶದ ಹೊರಗೆ ಕಾಣಿಸಿಕೊಳ್ಳುತ್ತದೆ. ಆಗ ಮಾತ್ರ ಚೀನಾ ಜನವರಿ ೨೧ ರಂದು ತನ್ನ ‘ಪೀಪಲ್ಸ್ ಡೈಲಿ’ ಪತ್ರಿಕೆಯಲ್ಲಿ ಈ ಪಿಡುಗು ಸಂಕ್ರಾಮಿಕ ಎಂದು ಪ್ರಕಟಿಸುತ್ತದೆ. ಇದನ್ನು ಸ್ವತಃ ಚೀನಾದ ಅದ್ಯಕ್ಷ ಕ್ಸೀ ಜೀಪಿಂಗ್ ಒಪ್ಪಿಕೊಳ್ಳುತ್ತಾನೆ. ಅಷ್ಟು ಹೊತ್ತಿಗಾಗಲೇ ಕೊರೋನಾ ಹರಡಲು ಶುರುವಾಗಿ ೨ ತಿಂಗಳುಗಳು ಕಳೆದು ಹೋಗಿತ್ತು. ಜಗತ್ತು ಅನುಭವಿಸಬೇಕಾದ ಪ್ರಾಣ ನಷ್ಟಕ್ಕೆ ಚೀನಾ ನಾಂದಿ ಹಾಡಿತ್ತು. ಚೀನಾದ ಮತ್ತೊಂದು ಪತ್ರಿಕೆ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ಪ್ರಕಾರ ನವೆಂಬರ್ ೧೭ ರಿಂದ ಮೊದಲ್ಗೊಂಡು ಪ್ರತಿದಿವಸ ೧-೫ ಜನ ಪ್ರಾಣ ಕಳೆದುಕೊಂಡಿದ್ದರು. ಆದರೆ ಚೀನಾ, ಜನವರಿ ೨೧ರ ವರೆಗೆ ಈ ವಿಚಾರವನ್ನು ಜಗತ್ತಿನಿಂದ ಮುಚ್ಚಿಟ್ಟಿತ್ತು. ಮೊದಲ ೨-೩ ವಾರದಲ್ಲಿ ಎಚ್ಚೆತ್ತುಕೊಂಡಿದ್ದಲ್ಲಿ ಶೇ ೯೫ರಷ್ಟು ಕರೋನಾದ ಹರಡುವಿಕೆಯನ್ನು ಚೀನಾ ತಡೆಯಬಹುದಿತ್ತು. ‘Communist Party of China’ಗೆ ತನ್ನ ರಾಜಕೀಯ ಲಾಭ ಮತ್ತು ಖ್ಯಾತಿಯ ಬಗ್ಗೆ ಚಿಂತೆ ಇತ್ತೇ ಹೊರತು ನರಳುತ್ತಿರುವ ಜನರ ಬಗೆಗಾಗಲಿ ಅಥವಾ ಕೊರೋನ ಹರಡುವುದರ ಬಗೆಗಾಗಲಿ ಇರಲಿಲ್ಲ. ಜಗತ್ತಿಗೆ ಇದು ಚೀನಾ ವೈರಸ್ ಎಂಬ ವಿಚಾರ ಹರಡಿಬಿಟ್ಟರೆ ತನ್ನ ಘನತೆ ಮತ್ತು ಗೌರವಕ್ಕೆ ಕುತ್ತು ಬರುತ್ತದೆ ಎಂಬ ಚಿಂತೆ ಚೀನಾಕ್ಕೆ ಕಾಡಿತ್ತು. ಅವರು ಕೊರೋನಾವನ್ನು ಹುಟ್ಟುಹಾಕಿದ್ದಲ್ಲದೇ ಅದು ತಮ್ಮ ದೇಶದಿಂದ ಹರಡಿದ್ದೇ ಅಲ್ಲ, ಈ ಪಿಡುಗು ಆಕಸ್ಮಿಕ ಎಂದು ಪ್ರಚಾರ ಮಾಡಲು ಮುಂದಾಯಿತು, ಮತ್ತೊಂದು ಹೆಜ್ಜೆ ಮುಂದೆಹೋಗಿ ಈ ಪಿಡುಗಿಗೆ ಅಮೇರಿಕಾ ಕಾರಣ ಎಂದು ಚೀನಾದ ಎಂಜಲು ತಿನ್ನವ ಜಗತ್ತಿನ ಪತ್ರಿಗೆಗಳನ್ನು ಬಳಸಲು ಶುರುಮಾಡಿತು.

ಚೀನಾದ ‘Wet Market’ಗಳಲ್ಲಿ ಕಾಡು ಪ್ರಾಣಿಗಳನ್ನು ಕೊಂದು ತಿನ್ನುವ ಚಿತ್ರ ಮತ್ತು ವಿಡಿಯೋಗಳು ಎಲ್ಲಾ ಕಡೆ ಹರಿದಾಡಲು ಶುರಿವಾಯಿತು. ಈ ಪ್ರಕ್ರಿಯೆ ಕುರಿತು ಚೀನಾದ ವೈದ್ಯರೇ ಬಹಳ ಹಿಂದಿನಿಂದಲೂ ಎಚ್ಚರಿಸಿದ್ದರು. ಆದರೆ, ಈ ಎಚ್ಚರಿಕೆ ಬಿಜಿಂಗ್ನ ರಾಜಕೀಯ ಮತ್ತು ಜನತೆ ಬೆಲೆಕೊಡಲಿಲ್ಲ.  ೨೦೦೨-೦೩ ರಲ್ಲಿ Severe Acute Respiratory Syndrome (SARS) ಎಂಬ ಸಾಂಕ್ರಾಮಿಕ ಖಾಯಿಲೆ ಶುರುವಾಗಿದ್ದೆ ಚೀನಾದಲ್ಲಿ ಎಂಬುದನ್ನು ಇಲ್ಲಿ ನೆನೆಯಬಹುದು. ೨೦೦೭ ರಲ್ಲಿ ಅಮೇರಿಕಾದ ಪತ್ರಿಕೆಯೊಂದರಲ್ಲಿ ಸಾರ್ಸ್ ಎಂಬುದು ಬಾವುಲಿ ಮತ್ತು ಇತರ ಸಸ್ತನಿಗಳನ್ನು (mammals) ತಿನ್ನುವುದರಿಂದ ಮತ್ತು ಇದಕ್ಕೆ ಕಾರಣವಾದ ಚೀನಾ ಜನಜೀವನದ ಬಗ್ಗೆ ಒಂದು ಲೇಖನ ಹೊರತಂದಿತ್ತು.  ಈ ರೀತಿ ತಿನ್ನುವುದರಿಂದಾಗಿ ಮತ್ತು ಲ್ಯಾಬ್ಗಳಲ್ಲಿ ನಡೆಯುವ ಪ್ರಯೋಗಗಳಿಂದಾಗಿ ಹರಡಬಹುದಾದ ವೈರಸ್ ಗಳ ಭಯಾನಕತೆಯ ಬಗ್ಗೆ ಆ ಲೇಖನ ಮತ್ತಷ್ಟು ಬೆಳಕು ಚೆಲ್ಲಿತ್ತು. ಆಗಲೂ ಚೀನಾ ಎಚ್ಚೆತ್ತುಕೊಳ್ಳಲಿಲ್ಲ! ಹಾಗೆ ಗಮನಿಸಿದಲ್ಲಿ, ಚೀನಾದಲ್ಲಿ ನಡಿದ ಜೈವಿಕ ಪ್ರಯೋಗಗಳಿಂದ ಕೊರೋನಾ ಎಂಬ ವೈರಸ್ ಬಾವುಲಿಗಳಿಂದ ಹೊರಹೊಮ್ಮುತ್ತದೆ ಎಂದು ಅಕ್ಟೋಬರ್ ೨೦೧೯ ರಲ್ಲೇ ತಿಳಿದುಬಂದಿತ್ತು ಎಂದು ‘ಚೈನಾ ಡೈಲಿ’ ಎಂಬ ಪತ್ರಿಕೆಯೊಂದು ಹೇಳಿತ್ತು. ಚೀನಿಯರು ಪ್ರಾಣಿಗಳನ್ನು ಈ ರೀತಿ ತಿನ್ನುವ ಪ್ರಕ್ರಿಯೆಯಿಂದಾಗಿ ಕಾಡು ಪ್ರಾಣಿಗಳಲ್ಲಿ ಇರಬಹುದಾದ ವೈರಸ್ಗಳು ಮನುಷ್ಯರನ್ನು ಆವರಿಸುತ್ತದೆ ಮತ್ತು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳು ಕೂಡ ನಾಷವಾಗುತ್ತದೆ. ಈ ರೀತಿ ನರಿ, ನಾಯಿ, ಹಾವು ಮತ್ತಿತರ ಕಾಡು ಪ್ರಾಣಿಗಳನ್ನು ಬೆಯಿಸಿ ತಿನ್ನುವ ಚೀನಾ ಸಂಸ್ಕೃತಿ ಅವರಿಗೂ ಮತ್ತು ಜಗತ್ತಿಗೆ ಮಾರಕ ಎಂಬುದು ಅವರ ತಲೆಗೆ ಹೋಗುತ್ತಿಲ್ಲ.

ಚೀನಾದ ಪ್ರಭಾವದಿಂದಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಚಿ ೧೧ ತನಕ ಕೊರೋನಾವನ್ನು ಸಾಂಕ್ರಾಮಿಕ ಎಂದು ಘೋಷಣೆ ಮಾಡಲಿಲ್ಲ. ಅಷ್ಟರಲ್ಲಿ ಕೊರೋನಾ ಹರಡಬಹುದಾದಷ್ಟೂ ಹರಡಿ ಆಗಿತ್ತು. ಅದರ ದುಷ್ಪರಿಣಾಮವನ್ನು ನಾವಿಂದು ಜಗತ್ತಿನಾದ್ಯಂತ ಕಾಣುತ್ತಿದ್ದೇವೆ. ಹಾಗೆ ನೋಡಿದಲ್ಲಿ ಅಮೇರಿಕಾ ತೈವಾನ್ ನಲ್ಲಿ ನಡೆಸಿದ ಸಮೀಕ್ಷೆ ಮೂಲಕ ವಿಶ್ವ ಆರೋಗ್ಯ ಸಂಸ್ಥೆಗೆ ಇದೊಂದು ಸಾಂಕ್ರಮಿಕ ಎಂದು ಡಿಸೆಂಬರ್ ೩೧ ರಂದು ಎಚ್ಚರಕೊಟ್ಟಿತ್ತು. ಆದರೆ, ಚೀನಾದ ವರದಿಯನ್ನು ಮುಂದಿಟ್ಟುಕೊಂಡು ವಿಶ್ವಸಂಸ್ಥೆ ಜನವರಿ ೧೪ ರಂದು ಸಹ ‘ಕೊರೋನಾ ಸಾಂಕ್ರಾಮಿಕ ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ’ ಎಂದು ತನ್ನ ಟ್ವಿಟ್ಟರ್ ನಲ್ಲಿ ಪ್ರಕಟಿಸಿತು. ಇದು ಸಾಂಕ್ರಾಮಿಕ ಎಂದು ಚೀನಾ ಹೇಳಿದ ನಂತರವಷ್ಟೇ ವಿಶ್ವ ಆರೋಗ್ಯ ಸಂಸ್ಥೆ ಇದೊಂದು ಸಾಂಕ್ರಾಮಿಕ ಎಂದು ಒಪ್ಪಿಕೊಳ್ಳುತ್ತದೆ. ಅಮೇರಿಕಾ, ಇಟಲಿ, ಭಾರತ ಅಂತರಾಷ್ಟ್ರೀಯ ಪ್ರಾಯಾಣ ಮತ್ತು ಗಡಿಗಳನ್ನು ಮುಚ್ಚಿತ್ತು. ಈ ಕ್ರಮವನ್ನು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಟೆದ್ರೋಸ್ ಫ಼ೆಬ್ರವರಿ ೪ ರಂದು ಸಾರ್ವಜನಿಕವಾಗಿ ಖಂಡಿಸುತ್ತಾನೆ. ಬದಲಾಗಿ ಚೀನಾದ ಅಧ್ಯಕ್ಷ ಜೀಪಿಂಗ್ನ ಕ್ರಮ ಮತ್ತು ಕೊರೋನಾ ಕುರಿತ ಚೀನಾದ ಪಾರದರ್ಶಕತೆಯನ್ನು ಹೊಗಳುತ್ತಾನೆ. ಈ ಪರಿಸ್ಥಿತಿಯನ್ನು ರಾಜಾಕೀಯವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಾನೆ.

ಹಿಂದೆ ಚೀನಾ ಸಾರ್ಸ್ ವಿಚಾರವನ್ನೂ ೧ ತಿಂಗಳು ಮುಚ್ಚಿಟ್ಟಿತ್ತು. ಈ ವೈರಸ್ನ ಬಗ್ಗೆ ಎಚ್ಚರಿಸಿದ್ದ ವೈದ್ಯನನ್ನು ೪೫ ದಿನಗಳ ಕಾಲ ಮಿಲಿಟರಿ ಬಂಧನಕ್ಕೆ ಓಳಪಡಿಸಿತ್ತು.  ಕಳೆದ ೧೯ ತಿಂಗಳಲ್ಲಿ, ಆಫ಼್ರಿಕನ್ ಫ಼್ಲೂವನ್ನು ಕಡೆಗಣಿಸಿದ್ದ ಪರಿಣಾಮ ಮಿಲಿಯನ್ಗಟ್ಟಲೆ ಹಂದಿಗಳು ಚೀನಾದಲ್ಲಿ ಕೊಲ್ಲಲ್ಪಟ್ಟಿದೆ. ಏನೇ ಹೇಳಿ, ಆದುನಿಕ ಜಗತ್ತಿನಲ್ಲಿ ಕೊರೋನಾ ಚೀನಾ ಮುಚ್ಚಿಟ್ಟ ಅತ್ಯಂತ ಭಯಾನಕ ಸತ್ಯ. ಕೊರೋನಾ ವಿಚಾರದಲ್ಲಿ ಮೊದಲೇ ಚೀನಾ ವುಹಾನ್ ಒಳಗೊಂಡಂತೆ ತನ್ನ ಎಲ್ಲ ಪ್ರಯಾಣಿಕರಿಗೆ ನಿರ್ಭಂದ ಹೇರಿದ್ದರೆ ಈ ಮಟ್ಟದ ಸಾಂಕ್ರಾಮಿಕತೆ ಮತ್ತು ಅನಾಹುತವನ್ನು ತಡೆಯಬಹುದಿತ್ತು. ಬದಲಾಗಿ ಅಂತರಾಷ್ಟ್ರೀಯ ಪ್ರಾಣವನ್ನು ನಿರ್ಭಂದಿಸಿದ ಅಮೇರಿಕಾ, ಇಟಲಿ, ಭಾರತ ವಿರುದ್ಧ ನಿರಾಶೆ ವ್ಯಕ್ತಪಡಿಸುತ್ತಾ, ವಿಶ್ವಸಂಸ್ಥೆಯ ನಿಲುವಿನ ವಿರುದ್ಧ ಹೊಗಬಾರದು ಎಂದು ಹೇಳುತ್ತಾ ತನ್ನ ವ್ಯಾವಹಾರಿಕ ಕುತ್ಸಿಕ ಬುದ್ಧಿಯನ್ನು ತೋರಿತು. ಇದರ ಕುರಿತು ಚೀನಾದ ವಿದೇಶಾಂಗ ಅಧಿಕಾರಿ ಟಿಟ್ವರ್ ನಲ್ಲಿ ಬರೆದುಕೊಂಡಿದ್ದ. ಇಟಲಿಯಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಚೀನಿಯರು ಸಾರ್ವಜನಿಕ ಸ್ಥಳಗಳಲ್ಲಿ ‘Please hug me, I’m a Chinese not a Virus’ ಎಂದು ಇಟಲಿಯರನ್ನು ತಬ್ಬಿಕೊಳ್ಳುವ ಚಿತ್ರಗಳು ಚೀನಾದ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತದೆ. ಜಗತ್ತು ಚೀನಾವನ್ನು ಪ್ರೀತಿಸುತ್ತದೆ ಎಂಬ ಸಂದೇಶ ಕೊಡುವುದು ಚೀನಾದ ಯೋಚನೆಯಾಗಿತ್ತು.

ಕೆಲವು ದಿನಗಳಿಂದ ಚೀನಾ ತನ್ನ ಮೇಲಾಗುತ್ತಿರುವ ಟೀಕೆ ಮತ್ತು ಅವರಲ್ಲಿ ಇನ್ನು ಹರಡುತ್ತಿರುವ ಸಂಖ್ಯೆಯನ್ನು ಮುಚ್ಚಿಡುವ ಮತ್ತು ಜಗತ್ತಿನ ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿದೆ.  ಅವರ ದೇಶದಲ್ಲೂ ಸಹ ಪ್ರಾಥಮಿಕ ದಿನಗಳಲ್ಲಿ ಸರ್ಕಾರ ಮಾಡಿದ ನಿರ್ಲಕ್ಷತೆಯ ಬಗ್ಗೆ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಆದರೂ ಸಹ ಅಲ್ಲಿನ ಸರ್ಕಾರ, ಪತ್ರಿಕೆ ಮತ್ತು ಇತರ ಮಾಧ್ಯಮಗಳು ಜೀಪಿಂಗ್ನನ್ನು ಕೊರೋನಾ ವಿರುದ್ದ ತಡೆ ಹಿಡಿಯುತ್ತಿರುವ ಮತ್ತು ದೇಶವನ್ನು ಮುನ್ನಡೆಸುತ್ತಿರುವ ನಾಯಕ ಎಂದು ಬಿಂಬಿಸಲಾಗುತ್ತಿದೆ.  ಮೊದಲೇ ಹೇಳಿದಂತೆ, ತಮ್ಮ ದೇಶದಿಂದ ಹರಡಿದ್ದೇ ಅಲ್ಲ, ಈ ಪಿಡುಗು ಆಕಸ್ಮಿಕ ಎಂಬಂತಹ ವಿಚಾರವನ್ನು ಜಗತ್ತಿನಾದ್ಯಂತ ಹರಡಲು ಖರ್ಚು ಮಾಡುತ್ತಿದೆ. ಭಾರದಲ್ಲಿ ಈ ವಿಚಾರದಲ್ಲಿ NDTV ಚೀನಾ ಅವರ ಪರವಾಗಿ ಕೆಲಸ ಮಾಡುತ್ತಿದೆ. ಚೀನಾ ಈ ಕುರಿತು ಪುಸ್ತಕ ಒಂದನ್ನು ಸಹ ಹೊರತಂದಿದೆ ‘A Battle Against Epidemic: China Combatting COVID-19’. ಈ ಪುಸ್ತಕ ಅದಾಗಲೇ ಇಂಗ್ಲೀಷ್, ಅರಬಿಕ್, ಸ್ಪಾನಿಷ್, ಫ಼್ರೆಂಚ್ ಮತ್ತು ರಷ್ಯನ್ ಭಾಷೆಗಳಿಗೆ ಅನುವಾದಗೊಂಡು ಜಗತ್ತಿಗೆ ಆಮದಾಗಿದೆ. ತಾನು ಹೇಳುವ ಹಸಿ ಸುಳ್ಳುಗಳನ್ನು ಪ್ರಸಾರ ಮಾಡಲು ಟ್ವಿಟ್ಟರ್ ಮತ್ತು ಇತರ ಸಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಳ್ಳುತ್ತಿದೆ. Zhao Lijian, ಎಂಬ ಹೊಸ ಅಧಿಕಾರಿ ಟ್ವಿಟ್ಟರ್ ಮೂಲಕ ತನ್ನದೇ ಆದ ಕಥೆಗಳನ್ನು ಹೆಣೆದು ಬರೆಯುತ್ತಿದ್ದಾನೆ. ಅಕ್ಟೋಬರ್ ೨೦೧೯ ಅಮೇರಿಕಾದ ಆರ್ಮಿ ಅಧಿಕಾರಿಗಳು ಕೊರೋನಾವನ್ನು ವುಹಾನ್ಗೆ ತಂದು ಬಿಟ್ಟರು ಎಂಬತಹ ಮಾತುಗಳನ್ನು ಆತ ಹೇಳುತ್ತಿದ್ದಾನೆ. ಈತ ಪಾಕಿಸ್ತಾನದ ಇಸ್ಲಮಾಬಾದಿನಲ್ಲಿ ಕೆಲಸ ಮಾಡುತ್ತಿದ್ದ ಎಂಬ ಸುದ್ದಿ ಇದೆ.

ಈ ರೀತಿ ಕೊರೋನಾ ವೈರಸ್ಸನ್ನು ಜಗತ್ತಿನಾದ್ಯಂತ ಹರಡಿದ ನಂತರ ಹಣಕಾಸಿನ ಮತ್ತು ಇತರ ಸಂಬಂಧಗಳನ್ನು ಹಾಳುಮಾಡುವ ಕೆಲಸಕ್ಕೆ ಕೈಹಾಕಿದೆ. ಸ್ಪೇನ್ ಮತ್ತು ಫ಼್ರಾನ್ಸ್ ಸುಮಾರು ೧ ಬಿಲಿಯನ್ ಮಾಸ್ಕ್ಗಳನ್ನು ಚೀನಾಯಿಂದ ತರಿಸಿಕೊಳ್ಳಲು ತಯಾರಿ ಮಾಡಿಕೊಂಡಿದೆ. ಇದರ ನಡುವೆ ಚೀನಾ ಸುಮಾರು ೫೦೦ ಮಿಲಿಯನ್ ಡಾಲರ್ ಅಷ್ಟು ಹಣವನ್ನು ಹೆಚ್ಚಿನ ಬಡ್ಡಿದರಕ್ಕೆ ಸಾಲವಾಗಿ ಶ್ರೀಲಂಕಾಕ್ಕೆ ಕೊಟ್ಟಿದೆ. ಇಂತಹ ಕಠಿಣ ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಹೊರಟಿದೆ. ಚೀನಾ ದೇಶಕ್ಕೆ ಯೋಗ್ಯತೆ ಇದ್ದಲ್ಲಿ ತನ್ನ ರೀತಿಯನ್ನು ಬದಲಾಯಿಸಿಕೊಳ್ಳಬೇಕು. ತನ್ನ ಕುಟಿಲ ನೀತಿಯನ್ನು ಬದಿಗಿಟ್ಟು ಅಂತರಾಷ್ಟ್ರೀಯ ನಿಯಮಗಳಿಗೆ ಬದ್ಧರಾಗಬೇಕು. ಈ ಕೊರೋನಾ ಮಹಾಮಾರಿಯಿಂದ ಆಗಿರುವ ನಷ್ಟಕ್ಕೆಲ್ಲ ಚೀನಾ ದೇಶವೇ ಹೊಣೆ. ಅದರ ನಿರ್ಲಕ್ಷತೆ ಮತ್ತು ಹೀನ ಸಂಸ್ಕೃತಿಯಿಂದ ಎಲ್ಲೆಡೆ ಪ್ರಾಣನಷ್ಟ, ವ್ಯಾವಕಾರಿಹ, ಹಣಕಾಸಿನ ಬಿಕ್ಕಟ್ಟು ಎದುರಾಗಿದೆ. ಇನ್ನಾದರೂ ಚೀನಾ ತನ್ನ ತಪ್ಪುಗಳನ್ನು ತಿದ್ದುಕೊಳ್ಳದಿದಲ್ಲಿ ಜಗತ್ತು ಎಂದಿಗೂ ಚೀನಾವನ್ನು ಕ್ಷಮಿಸಲಾರದು!

-ಕಾರ್ತಿಕ್ ಕಶ್ಯಪ್

1 Comment

1 Comment

Leave a Reply

Your email address will not be published. Required fields are marked *

Most Popular

To Top