International

ಚೀನಾ-ಅಮೇರಿಕಾ ಛದ್ಮಯುದ್ಧದಲ್ಲಿ ಭಾರತದ ಪಾತ್ರವೇನು?

ಇತ್ತೀಚೆಗೆ ಚೀನಾ ಗಡಿ ಕ್ಯಾತೆ ತೆಗೆದು ಭಾರತೀಯ ಸೈನಿಕರನ್ನು ಹೆದರಿಸುವ ಪ್ರಯತ್ನ ಮಾಡಿದ್ದು ಗೊತ್ತೇ ಇರುವಂಥದ್ದು. ಈ ಹಿಂದೆ ಭೂತಾನಿನ ಗಡಿ ಡೋಕ್ಲಾಮಿನಲ್ಲೂ ಇದೇ ರೀತಿ ಪ್ರಯತ್ನಕ್ಕೆ ಚೀನಾ ಕೈಹಾಕಿ ಏನೂ ದಕ್ಕದೇ ಮರಳಿ ಹೋಗಿತ್ತು. ಆದರೆ ಸುಮ್ಮನಿರದ ದೈತ್ಯ ಡೋಕ್ಲಾಮಿನವರೆಗೂ ಬಲವಾದ ರಸ್ತೆಯನ್ನು ನಿಮರ್ಾಣ ಮಾಡಿಕೊಂಡು ತನ್ನ ಕೆಡುಕು ಬುದ್ಧಿಯನ್ನು ಸಾಬೀತುಪಡಿಸಿಕೊಂಡಿತು. ಈಗ ಅದೇ ರೀತಿಯ ಪ್ರಯತ್ನವೊಂದನ್ನು ಸಿಕ್ಕಿಂನ ಭಾಗದಲ್ಲೂ, ಪ್ಯಾಂಗಾಂಗ್ನ ಹತ್ತಿರದಲ್ಲೂ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಬಾರಿಯ ಈ ಗಡಿ ಕದನ ಕಳೆದ ಬಾರಿಯಂತೆ ಕಣ್-ಕಣ್ ಮಿಲಾಯಿಸುವುದಷ್ಟೇ ಅಲ್ಲದೇ ಕೈ-ಕೈ ಕೂಡಿಸುವವರೆಗೂ ಹೋಗಿತ್ತು ಎನ್ನಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಕರೋನಾ ಕಾರಣಕ್ಕೋಸ್ಕರ ಛೀಮಾರಿಗೊಳಗಾಗುತ್ತಿರುವ ಚೀನಾ ಇಂಥದ್ದೊಂದು ಪ್ರಯತ್ನವನ್ನು ಮಾಡುತ್ತಿರುವುದಾದರೂ ಏಕೆ? ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ.


ಕಳೆದ ಡಿಸೆಂಬರ್ನಲ್ಲಿ ತನ್ನದ್ದೇ ಪ್ರಯೋಗಾಲಯದಲ್ಲಿ ಸಿದ್ಧಪಡಿಸಿದ ವೈರಸ್ಗೆ ತಾನೇ ಮೊದಲ ಬಲಿಯಾಗಬಹುದೆಂದು ಚೀನಾ ಕನಸು-ಮನಸಿನಲ್ಲೂ ಎಣಿಸಿರಲಿಕ್ಕಿಲ್ಲ. ವುಹಾನಿನ ಪ್ರತಿ ಮನೆಯನ್ನೂ ಖಾಲಿ ಮಾಡಿಸಿ ನಿರ್ಜನವಾಗಿರುವಂತಹ ಆ ಪ್ರದೇಶದ ಮೂಲಕ ವೈರಸ್ ಅನ್ನು ಇಲ್ಲವಾಗಿಸುವ ಪ್ರಯತ್ನಕ್ಕೆ ಚೀನಾ ದೊಡ್ಡ ಪ್ರಮಾಣದಲ್ಲೇ ಕೈ ಹಾಕಿತ್ತು. ಜಾಗತಿಕ ಮಟ್ಟದಲ್ಲಿ ಈ ರೋಗವನ್ನು ನಿಯಂತ್ರಿಸಲಾಗದ ಅವಮಾನಕ್ಕೆ ತುತ್ತಾಗುತ್ತೇನೆಂದು ಹೆದರಿ ತನ್ನ ಜನರನ್ನು ಬಲಿಕೊಟ್ಟಾದರೂ ಆದಷ್ಟು ಬೇಗ ವೈರಸ್ನ ಮೇಲೆ ಹಿಡಿತ ಸಾಧಿಸುವ ಪ್ರಯತ್ನವನ್ನು ಅದು ಮಾಡಿತು. ವಿಶ್ವ ಆರೋಗ್ಯ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಈ ರೋಗ ವಿಶ್ವಕ್ಕೆಲ್ಲಾ ಹಬ್ಬುವಂತೆ ಮಾಡುವಲ್ಲಿ ಅದರ ಪಾತ್ರ ಬಲುದೊಡ್ಡದಾಗಿತ್ತು. ತನ್ನ ಎರಡು ಕಣ್ಣು ಹೋದರೂ ಪರವಾಗಿಲ್ಲ ಇತರರ ಒಂದು ಕಣ್ಣನ್ನಾದರೂ ತೆಗೆಯಬೇಕೆಂಬ ರಾಕ್ಷಸೀ ಪ್ರವೃತ್ತಿ ಅದರದ್ದು! ಆದರೆ ಈ ಧಾವಂತದಲ್ಲಿ ಚೀನಾ ತನ್ನ ಜನರೆದುರು ಮಂಕಾಗಿಬಿಟ್ಟಿತು. ಚೀನಾದ ಅಧ್ಯಕ್ಷ ಆಳ್ವಿಕೆಯ ಅವಧಿಯ ಕುರಿತಂತೆ ಯಾವ ಗೊಂದಲವಿಲ್ಲದಿದ್ದರೂ ಈ ವೈರಸ್ಸು ಶಿ-ಜಿನ್ಪಿಂಗ್ರ ವೈಯಕ್ತಿಕ ವರ್ಚಸ್ಸನ್ನಂತೂ ದೊಡ್ಡಮಟ್ಟದಲ್ಲಿ ಕಡಿಮೆ ಮಾಡಿಬಿಟ್ಟಿದೆ. ಒಂದೆಡೆ ಪ್ರಾಣ ಕಳಕೊಂಡವರ ಪರಿವಾರದವರ ಪರಿತಪನ. ಮತ್ತೊಂದೆಡೆ ದೊಡ್ಡ ಮಟ್ಟದಲ್ಲಿ ಉದ್ಯೋಗಹೀನರಾದವರ ದುಃಖ. ಇನ್ನು ಆಥರ್ಿಕ ಹಿನ್ನಡೆ ರಾಷ್ಟ್ರವನ್ನು ದುಃಸ್ಥಿತಿಯತ್ತ ಒಯ್ಯುತ್ತಿರುವುದು ಚೀನಾದ ಪಾಲಿಗೆ ಒಳ್ಳೆಯ ಸುದ್ದಿಯಂತೂ ಅಲ್ಲ. ಜಗತ್ತಿನಾದ್ಯಂತ ಚೀನೀ ವಸ್ತುಗಳ ಬೇಡಿಕೆ ಕುಸಿಯುತ್ತಿರುವುದು ಮತ್ತು ಅದಕ್ಕೆ ಪಯರ್ಾಯವಾಗಿ ಆಯಾ ದೇಶಗಳು ದೇಸೀ ಚಿಂತನೆಗೆ ವಾಲುತ್ತಿರುವುದು ಚೀನಾ ನಂಬಿಕೊಂಡ ಆಥರ್ಿಕ ಸಿದ್ಧಾಂತಕ್ಕೆ ವಿರುದ್ಧವಾದ್ದು. ಈಗ ಚೀನಾಕ್ಕಿರುವ ಉಪಾಯ ಒಂದೇ ಆಗಿತ್ತು. ಅದು ಅಲ್ಲಿನ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸುವುದು ಮಾತ್ರ.


ಯಾವುದೇ ರಾಷ್ಟ್ರವಾಗಲೀ ರಾಷ್ಟ್ರೀಯತೆಯ ಪ್ರಶ್ನೆ ಬಂದಾಗ ಇರುವ ದುಃಖವನ್ನೆಲ್ಲಾ ಮರೆತು ಒಂದಾಗಿಬಿಡುತ್ತದೆ. ಕರೋನಾವನ್ನೆದುರಿಸಲು ಅಮೇರಿಕಾಕ್ಕೆ ಶಕ್ತಿ ತುಂಬುತ್ತಿರುವುದು ‘ಚೀನಾದ ಷಡ್ಯಂತ್ರ’ ಎಂಬ ವಿಚಾರವೇ. ನಾವು ಜಾತಿ-ಮತ-ಪಂಥಗಳನ್ನು ಮರೆತು ಒಗ್ಗಟ್ಟಾಗಲು ಪಾಕಿಸ್ತಾನದ ಷಡ್ಯಂತ್ರ ಕಾರಣವಾಗುತ್ತದೆ. ಸಜರ್ಿಕಲ್ ಸ್ಟ್ರೈಕ್, ಏರ್ಸ್ಟ್ರೈಕ್ಗಳು, ಕಾಗರ್ಿಲ್ನಂತಹ ಕದನಗಳು ನಮ್ಮನ್ನು ಬಲವಾಗಿ ಬಂಧಿಸುತ್ತವೆ. ಹಾಗೆಯೇ ಚೀನಾಕ್ಕೂ. ಈಗಾಗಲೇ ತೈವಾನ್ನಿಂದ, ಹಾಂಕ್ಕಾಂಗ್ನಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿರುವ ಚೀನಾಕ್ಕೆ ಜಪಾನ್ ಕೂಡ ತಲೆನೋವಾಗಿ ಪರಿಣಮಿಸಿದೆ. ಚೀನಾವನ್ನು ಎದುರಿಸಲು ಜಪಾನ್ ಸರ್ವಸನ್ನದ್ಧಗೊಳ್ಳುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲೂ ಶಸ್ತ್ರಾಸ್ತ್ರ ಕೊಳ್ಳುವಿಕೆಗೆ ದೊಡ್ಡ ಮೊತ್ತದ ಹಣವನ್ನು ನಿಗಧಿಗೊಳಿಸುವ ಮೂಲಕ ಜಪಾನ್ ಚೀನಾದೆದುರು ಗುಟುರು ಹಾಕಲಾರಂಭಿಸಿದೆ. ಭಾರತವೇನೂ ಕಡಿಮೆ ಇಲ್ಲ. ಚೀನಾಕ್ಕೆ ಹೊಂದಿಕೊಂಡ ಲೈನ್ ಆಫ್ ಆಕ್ಚ್ಯುಲ್ ಕಂಟ್ರೋಲ್ ಉದ್ದಕ್ಕೂ ಭರದಿಂದ ರಸ್ತೆ ನಿಮರ್ಾಣದ ಕಾಮಗಾರಿಯನ್ನು ನಡೆಸುತ್ತಿದೆ. ಚೀನಾ ನಮ್ಮಿಂದ ವಶಪಡಿಸಿಕೊಂಡಿರುವ ಆಕ್ಸಾಯ್ಚಿನ್ಗೆ ಬಲು ಹತ್ತಿರದಲ್ಲಿರುವ 38ಸಾವಿರ ಚದರ ಕಿ.ಮೀ ರಸ್ತೆಗಳನ್ನು 19 ವರ್ಷಗಳ ನಂತರ ಪೂರ್ಣಗೊಳಿಸಿದ್ದೇವೆ. 2000ದಲ್ಲಿ ಆರಂಭವಾದ ಈ ಕಾಮಗಾರಿ 12 ವರ್ಷಗಳೊಳಗೆ ಮುಗಿಯಬೇಕಿತ್ತು. 2011ರಲ್ಲಿ ರಸ್ತೆ ವಿಚಾರಣೆಯನ್ನು ಕೈಗೆತ್ತಿಕೊಂಡಾಗ ಬೆಟ್ಟಗಳ ಮೇಲೆ ನಿಮರ್ಾಣವಾಗಬೇಕಾದ ರಸ್ತೆ ನದಿಯ ತಟದ ಮೇಲೆ ನಿಮರ್ಾಣಗೊಂಡಿದ್ದು ಪ್ರತಿವರ್ಷ ಪ್ರವಾಹದ ಹೊತ್ತಲ್ಲಿ ಹಾಳಾಗಿಹೋಗುತ್ತದೆಂಬ ಸುದ್ದಿ ಬೆಳಕಿಗೆ ಬಂತು. ಹೀಗಾಗಿ ವರ್ಷದ ಮೂರು ತಿಂಗಳುಗಳ ಕಾಲ ಉಪಯೋಗಕ್ಕೆ ಬಾರದ ಈ ರಸ್ತೆ ಸೈನಿಕರ ವಿಶ್ವಾಸಕ್ಕೆ ಪಾತ್ರವಾದುದಲ್ಲವೆನಿಸಿತು. ಜೊತೆಗೆ ಬಾರ್ಡರ್ ರೋಡ್ ಆರ್ಗನೈಸೇಷನ್ಗೆ ರಸ್ತೆ ನಿಮರ್ಾಣದ ಸೂಚನೆ ಕೊಡುವುದು ರಕ್ಷಣಾ ಇಲಾಖೆಯಾದರೆ ಹಣ ಬರುವುದು ಮಾತ್ರ ಸಾರಿಗೆ ಇಲಾಖೆಯಿಂದ. ಎರಡು ಇಲಾಖೆಗಳ ನಡುವೆ ಬೆಂದು ಹೋಗುತ್ತಿದ್ದ ಈ ಸಂಸ್ಥೆ ರಸ್ತೆ ನಿಮರ್ಾಣದ ಕಾರ್ಯದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸುತ್ತಿತ್ತು. ಮೋದಿ ಅಧಿಕಾರಕ್ಕೆ ಬಂದೊಡನೆ ಈ ಸಂಸ್ಥೆಯನ್ನು ಪೂರ್ಣ ರಕ್ಷಣಾ ಇಲಾಖೆಯಡಿಯಲ್ಲಿ ತಂದು ಅಧಿಕಾರವನ್ನು ಏಕತ್ರಗೊಳಿಸಿದರು. ಡೋಕ್ಲಾಮ್ನ ಕಿತ್ತಾಟ ಮುಗಿಯುತ್ತಿದ್ದಂತೆ ಚೀನಾದ ಗಡಿಗೆ ಹೊಂದಿಕೊಂಡ 100 ಕಿ.ಮೀವರೆಗಿನ ರಸ್ತೆ ನಿಮರ್ಾಣಕ್ಕೆ ಅರಣ್ಯ ಇಲಾಖೆಯ ಅನುಮತಿ ಅಗತ್ಯವಿಲ್ಲವೆಂಬ ಕಾನೂನು ತಂದರು. ಡೋಕ್ಲಾಮಿನಲ್ಲಿ ಕಿರಿಕಿರಿ ನಡೆಯುತ್ತಿರುವಾಗಲೇ ಈ ಸಂಸ್ಥೆಗೆ ಹೆಚ್ಚಿನ ಆಥರ್ಿಕ ಅಧಿಕಾರವನ್ನು ಕೊಟ್ಟು ರಸ್ತೆ ನಿಮರ್ಾಣವನ್ನು ವೇಗಗೊಳಿಸಲು ಬೇಕಾದ ಮಾರ್ಗ ನಿಮರ್ಿಸಿಕೊಟ್ಟರು. ಹೀಗಾಗಿ 2014ರಿಂದ ಚುರುಕುಗೊಂಡ ಈ ಕಾರ್ಯ ಈಗ ಚೀನಾ ಕಣ್ಣು ಕೆಂಪೇರುವಂತೆ ಮಾಡಿದೆ! ಹೆಚ್ಚು-ಕಡಿಮೆ ಚೀನಾದ ಗಡಿಗೆ ಹೊಂದಿಕೊಂಡ ರಸ್ತೆ ಅಷ್ಟೂ ಮುಗಿದು ಸೈನಿಕರು ತಕ್ಷಣ ಯುದ್ಧಸನ್ನದ್ಧರಾಗಲು ಬೇಕಾದ ವ್ಯವಸ್ಥೆಯನ್ನು ಭಾರತ ಮಾಡಿಕೊಂಡಿದೆ. ಭಾರತ-ಚೀನಾ ಯುದ್ಧ ಈಗ ನೆಹರೂ ಕಾಲದ ಸಂದರ್ಭವನ್ನು ಮರಳಿ ತರಲು ಬಿಡುವುದಿಲ್ಲ. ಈ ಬಾರಿ ಚೀನಾ ದುಸ್ಸಾಹಸಕ್ಕೆ ಕೈ ಹಾಕಿದರೆ ಭಾರತ ಕೊಡುವ ಉತ್ತರ ಭಿನ್ನವಾಗಿರುತ್ತದೆ. ಹೀಗಾಗಿಯೇ ಚೀನಾ ಅಂಜಿದೆ!


ಭಾರತ ಈ ರೀತಿ ತನ್ನ ವಿರುದ್ಧ ಬಲವಾದ ಷಡ್ಯಂತ್ರ ನಡೆಸುತ್ತಿದೆ ಎಂಬುದನ್ನು ತನ್ನ ಜನರಿಗೆ ಹೇಳಿ ಅವರನ್ನು ಒಂದುಗೂಡಿಸುವ ಪ್ರಯತ್ನ ಚೀನಾ ಮಾಡುತ್ತಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ವರದಿಯನ್ನು ಬದಿಗಿಟ್ಟು ಮೇಲ್ನೋಟಕ್ಕೆ ಚೀನಾದ ಪರಿಸ್ಥಿತಿಯನ್ನು ನೋಡಿದರೂ ಅದು ಗೊಂದಲದಲ್ಲಿರುವುದು ಎದ್ದುಕಾಣುತ್ತಿದೆ. ಭಾರತವೇನಾದರೂ ಚೀನಾದ ಈ ಬೆದರಿಕೆಗೆ ಬಗ್ಗದೇ ಪಿಒಕೆಯ ಮೇಲೆ ದಾಳಿ ಮಾಡಿ ಅದನ್ನೊಂದು ಪ್ರತ್ಯೇಕ ರಾಷ್ಟ್ರವಾಗಿಸಿಕೊಟ್ಟರಂತೂ ಚೀನಾ ಮುಖಭಂಗಕ್ಕೆ ಒಳಗಾಗಲಿದೆ. ಅದು ಬಹುಶಃ ಅಮೇರಿಕಾ-ಚೀನಾ ಛದ್ಮಯುದ್ಧದ ಕೊನೆಯ ಹಂತವಾಗಬಹುದೇನೋ. ಹೀಗಾಗಿ ಎಲ್ಲರ ಕಣ್ಣು ಭಾರತದ ಮೇಲೆ ನೆಟ್ಟಿದೆ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top