National

ಚೀನಾ ಅಧಿಕಾರಿಗಳ ಭೇಟಿ ಮಾಡಿದ್ದೇಕೆ ರಾಹುಲ್?!

ಇದು ಸತತ ನಾಲ್ಕನೇ ಬಾರಿ. ಚೀನಾ ಮೌಲಾನಾ ಮಸೂದ್ ಅಜರ್ನ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸುವ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಪ್ರಸ್ತಾವಕ್ಕೆ ತನ್ನ ವಿಟೊ ಅಧಿಕಾರ ಪ್ರಯೋಗಿಸಿದೆ. ಸಹಜವಾಗಿಯೇ ಇದು ಜಗತ್ತೆಲ್ಲವನ್ನೂ ಕೆರಳುವಂತೆ ಮಾಡಿದೆ. ಆಶ್ಚರ್ಯವೆಂದರೆ ಈ ಬಾರಿ ಈ ಪ್ರಸ್ತಾವದ ಮಂಡನೆ ಮಾಡಿದ್ದು ಭಾರತ ಅಲ್ಲವೇ ಅಲ್ಲ. ಪಾಕಿಸ್ತಾನದ ದೌರ್ಜನ್ಯವನ್ನು ಧಿಕ್ಕರಿಸಿ ಮಾತನಾಡಿದ್ದು ಸ್ವತಃ ಫ್ರಾನ್ಸ್! ಅದರ ಬೆಂಬಲಕ್ಕೆ ಜಗತ್ತಿನ ಎಲ್ಲಾ ರಾಷ್ಟ್ರಗಳೂ ಇದ್ದವು, ಚೀನಾ ಒಂದನ್ನು ಬಿಟ್ಟು. ತಾನು ಹೀಗೆ ಮೌಲಾನಾರಿಗೆ ಬೆಂಬಲಿಸುತ್ತೇನೆಂದು ಚೀನಾ ಸೂಕ್ಷ್ಮವಾಗಿ ತಿಳಿಸಿಯೇ ಇತ್ತು. ಅದರ ಮೇಲೆ ಒತ್ತಡ ಹೇರುವ ಭಾರತದ ಪ್ರಯತ್ನಗಳೇನು ಕಡಿಮೆ ಆಗಿರಲಿಲ್ಲ. ಜಗತ್ತಿನ ಇತರೆ ರಾಷ್ಟ್ರಗಳು ಸಾಕಷ್ಟು ಪ್ರಭಾವ ಬೀರಲು ಯತ್ನಿಸಿದ್ದವು. ಅಷ್ಟಾಗಿಯೂ ಚೀನಾ ಧಿಮಾಕಿನ ನಿರ್ಣಯ ಕೈಗೊಂಡಿದೆ ಎಂದರೆ ಹಿಂದೆ ಬಲುದೊಡ್ಡ ಕಾರಣವೇ ಇರಬಹುದು.


ಚೀನಾ ಜಗತ್ತಿನ ಅನೇಕ ರಾಷ್ಟ್ರಗಳನ್ನು ತನ್ನತ್ತ ಸೆಳೆದುಕೊಂಡಿರೋದು ಸಾಲ ಕೊಡುವ ಮೂಲಕವೇ. ಇದು ಪಕ್ಕಾ ಬಡ್ಡಿ ಬಂಗಾರಮ್ಮನ ಶೈಲಿಯೇ. ಸಾಲ ಕೊಡುವುದು ತೀರಿಸಲಾಗದೇ ಇದ್ದಾಗ ಕಿರುಕುಳ ಕೊಡುವುದು. ಕೊನೆಗೆ ಆ ರಾಷ್ಟ್ರದ ಆಸ್ತಿಯನ್ನು ವಶಪಡಿಸಿಕೊಳ್ಳುವುದು. ಹೀಗಾಗಿಯೇ ಶ್ರೀಲಂಕಾ ಭಾರತದತ್ತ ವಾಲಿದ್ದು, ಮಾಲ್ಡೀವ್ಸ್ ಭಾರತದ ಸಹಕಾರ ಕೇಳಿ ಬಂದಿದ್ದು, ಬಾಂಗ್ಲಾದೇಶ ಚೀನಾದ ಸಹವಾಸ ಸಾಕೆಂದಿದ್ದು. ಆಫ್ರಿಕಾ ಖಂಡದ ಕೆಲವು ರಾಷ್ಟ್ರಗಳಂತೂ ಅದಾಗಲೇ ಬಬರ್ಾದಾಗಿಯೇ ಹೋಗಿವೆ. ಚೀನಾದ ಈ ಆಟ ಜಗತ್ತಿಗೆಲ್ಲಾ ಈಗ ಅರಿವಾಗಿ ಹೋಗಿದೆ. ಬಡ ರಾಷ್ಟ್ರಗಳನ್ನು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವಂತೆ ಮಾಡಿ ಆನಂತರ ಅವು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಹಾಗೆ ಮಾಡುವ ಚೀನಾದ ಕುಟಿಲನೀತಿ ಈಗ ಗುಪ್ತವಾಗೇನೂ ಉಳಿದಿಲ್ಲ. ಅದೇ ರೀತಿ ಚೀನಾ ಪಾಕಿಸ್ತಾನವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಒನ್ ಬೆಲ್ಟ್ ಒನ್ ರೋಡ್ ಯೋಜನೆಯ ನೆಪದಲ್ಲಿ ಅದು ಪಾಕಿಸ್ತಾನದಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆಯ ಭರವಸೆ ಕೊಟ್ಟಿದೆ. ಇದರ ಮೂಲಕ ಪಾಕಿಸ್ತಾನದಲ್ಲಿ ಅಪಾರ ಪ್ರಮಾಣದ ಮೂಲಸೌಕರ್ಯದ ಅಭಿವೃದ್ಧಿಯ ಕುರಿತಂತೆ ಅದು ಮಾತಾಡಿದೆ. ಇದರ ಬಹುಪಾಲು ಹೊರೆಯನ್ನು ಹೊರಲಿರುವುದು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಬಲೂಚಿಸ್ತಾನಗಳೇ. ಆದರೆ ಲಾಭವನ್ನುಣ್ಣುವುದು ಮಾತ್ರ ಪಾಕಿಸ್ತಾನದ ಮುಖ್ಯಭೂಮಿ. ಹೀಗಾಗಿಯೇ ಚೀನಾದ ಈ ಯೋಜನೆಗೆ ಬಲೂಚಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯಾನಕವಾದ ವಿರೋಧವಿದೆ. ಆದರೆ ಮುಖ್ಯ ಪಾಕಿಸ್ತಾನದಲ್ಲಾಗುವ ಅಭಿವೃದ್ಧಿಯ ಕಾರಣಕ್ಕಾಗಿ ಅಧಿಕಾರಕ್ಕೆ ಬಂದವಯರ್ಾರೂ ಚೀನಾವನ್ನು ಎದುರು ಹಾಕಿಕೊಳ್ಳಲು ಸಿದ್ಧರೇ ಇಲ್ಲ.
ಚೀನಾಕ್ಕೂ ಒಂದು ಸಮಸ್ಯೆಯಿದೆ. ಈ ಕಾಮಗಾರಿಯನ್ನು ಪಾಕಿಸ್ತಾನದ ಮೇಲಿನ ವಿಶ್ವಾಸದಿಂದಲೇ ಅದು ಆರಂಭಿಸಿದ್ದು. ಅದಾಗಲೇ ಸಾಕಷ್ಟು ಹೂಡಿಕೆಯನ್ನೂ ಮಾಡಿಬಿಟ್ಟಿದೆ. ಆದರೆ ಭಯೋತ್ಪಾದಕರ ಕೇಂದ್ರ ನೆಲೆಯಾಗಿರುವ ಪಾಕಿಸ್ತಾನ ಧರ್ಮದ ಅಫೀಮನ್ನು ಕುಡಿದಿರುವುದರಿಂದ ಅಲ್ಲಿ ವಿಕಾಸಕ್ಕಿಂತ ಕುರಾನಿಗೇ ಹೆಚ್ಚು ಮೌಲ್ಯ. ಒಂದು ವೇಳೆ ಮೌಲಾನಾನ ಜೈಶ್-ಎ-ಮೊಹಮ್ಮದ್ ಚೀನಾ ವಿರೋಧಕ್ಕೆ ನಿಂತು ಆ ರಾಷ್ಟ್ರವನ್ನು ನಾಶಮಾಡಬೇಕೆಂದೆತ್ನಿಸಿದರೆ ಅದು ಚೀನಾಕ್ಕೆ ನುಗ್ಗಬೇಕೆಂದಿಲ್ಲ ಬದಲಿಗೆ ಈ ರಸ್ತೆಗಳನ್ನು ಧ್ವಂಸಗೊಳಿಸಿದರೆ ಸಾಕು, ಅದರ ನಿಮರ್ಾಣಕ್ಕೆಂದು ಬರುವ ಚೀನಿ ಕಾಮರ್ಿಕ, ಸೈನಿಕರನ್ನು ಅಲ್ಲಲ್ಲಿ ಕೊಂದು ಮುಗಿಸಿದರಾಯ್ತು. ಚೀನಾದ ಹಣ ಅಷ್ಟೂ ನೀರುಪಾಲು. ಮಹತ್ವಾಕಾಂಕ್ಷೆಯ ಯೋಜನೆಗಳು ಮುರುಟಿಕೊಂಡು ಬಿದ್ದಂತೆಯೇ. ಇದು ಗೊತ್ತಿದ್ದೇ ಚೀನಾ ಜಗತ್ತನ್ನು ಎದುರು ಹಾಕಿಕೊಂಡಾದರೂ ಮೌಲಾನಾ ಮಸೂದ್ ಅಜರ್ಗೆ ಬೆಂಬಲ ಕೊಡುತ್ತಿದೆ.


ಅನೇಕ ಪತ್ರಿಕೆಗಳು, ಮಾಧ್ಯಮಗಳು ಜೊತೆಗೆ ಕಾಂಗ್ರೆಸ್ಸು ಇದನ್ನು ಮೋದಿಯವರ ರಾಜತಾಂತ್ರಿಕ ಸೋಲು ಎಂದು ಬಣ್ಣಿಸುತ್ತಿವೆ. ಆದರೆ ಈ ಒಟ್ಟಾರೆ ವಿಚಾರದಲ್ಲಿ ಸೋತಿದ್ದು ಭಾರತವಲ್ಲ, ಜಗತ್ತಿನ ಬಲಾಢ್ಯ ರಾಷ್ಟ್ರಗಳು. ಹೀಗಾಗಿಯೇ ಈ ನಿರ್ಣಯ ಹೊರಬಿದ್ದೊಡನೆ ಅಮೇರಿಕಾ ಚೀನಾದೆದುರು ಗುಟುರು ಹಾಕಿ ಪದೇ ಪದೇ ಹೀಗೆ ಮಾಡುತ್ತಿದ್ದರೆ ನಾವು ಬೇರೆಯದೇ ಮಾರ್ಗವನ್ನು ತುಳಿಯುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದೆ. ಭದ್ರತಾ ಸಮಿತಿಯ ಬಹುತೇಕ ರಾಷ್ಟ್ರಗಳು ಚೀನಾದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಇದು ಭಾರತದ ಪಕ್ಷವನ್ನು ಬಲಗೊಳಿಸಿದೆಯಷ್ಟೇ ಅಲ್ಲದೇ ಚೀನಾವನ್ನು ಭಯೋತ್ಪಾದಕ ರಾಷ್ಟ್ರದ ಬೆಂಬಲಿಗರೆಂದು ಜಗತ್ತು ಒಪ್ಪುವ ಅನಿವಾರ್ಯತೆಗೆ ತಂದು ನಿಲ್ಲಿಸಿದೆ.

ಇಷ್ಟಕ್ಕೂ ಈಗ ಕೇಳಬೇಕಾಗಿರುವ ಒಂದಷ್ಟು ಪ್ರಶ್ನೆಗಳಿವೆ. ಶಶಿತರೂರ್ ತಮ್ಮ ಕೃತಿಯಲ್ಲಿ ಉಲ್ಲೇಖಿಸಿರುವಂತೆ ಭಾರತಕ್ಕೆ ಸಿಗಬೇಕಿದ್ದ ಭದ್ರತಾ ಸಮಿತಿಯ ಸ್ಥಾನವನ್ನು ನೆಹರೂ ಚೀನಾಕ್ಕೆ ಬಿಟ್ಟುಕೊಟ್ಟಿದ್ದು ನಿಜವೇ? ಹಾಗೆ ನೆಹರೂ ಬಿಟ್ಟುಕೊಟ್ಟಿದ್ದರೆ ಅದು ಕಾಂಗ್ರೆಸ್ಸಿನ ಮಹಾಪರಾಧಗಳಲ್ಲಿ ಒಂದೆಂದು ಗಣಿಸಲ್ಪಡಬೇಕಲ್ಲವೇ? ಅದೇ ಭದ್ರತಾ ಸಮಿತಿಯಲ್ಲಿ ನಾವಿಂದು ಸ್ಥಾನ ಪಡೆಯಲು ಹೆಣಗಾಡುತ್ತಿರುವ ಪರಿಸ್ಥಿತಿ ನೋಡಿದರೆ ಈ ದೇಶದಲ್ಲೊಂದು ಮಹಾಪ್ರಮಾದವಲ್ಲವೇ? ಕಾಂಗ್ರೆಸ್ಸು ಇದಕ್ಕೆ ಇಂದು ಉತ್ತರಿಸುವುದೇ ಅಥವಾ ರಫೇಲ್ ಏಕೆ ಬೇಕು ಎಂಬ ಪ್ರಶ್ನೆಯನ್ನು ಕೇಳಿಕೊಂಡೇ ಕಾಲ ತಳ್ಳಿಬಿಡುವುದೇ?
ಅದರೊಟ್ಟಿಗಿನ ಇನ್ನೊಂದು ಪ್ರಶ್ನೆ ರಾಹುಲ್ ಮತ್ತು ಚೀನಾದ ಸಂಬಂಧದ್ದು. ನಿರುದ್ಯೋಗದ ಕುರಿತ ಒಂದು ಪ್ರಶ್ನೆಗೆ ಉತ್ತರಿಸುತ್ತಾ ರಾಹುಲ್ ಚೀನಾದಲ್ಲಿ ಎಲ್ಲವೂ ಸ್ವಯಂಚಾಲಿತ ರೂಪಕ್ಕೆ ಬಂದರೂ ಅಲ್ಲಿನ ಉದ್ಯೋಗಗಳಿಗೆ ಧಕ್ಕೆಯಾಗಿಲ್ಲ. ಭಾರತದಲ್ಲಿ ಹಾಗಾಗಿಲ್ಲ ಎಂದು ಹೇಳುತ್ತಾ ಕೈಲಾಸಕ್ಕೆ ಹೋದಾಗ ಭೇಟಿಯಾಗಿದ್ದ ಚೀನೀ ಅಧಿಕಾರಿಗಳು ಇದನ್ನು ತಿಳಿಸಿದರೆಂದು ಬಾಯ್ತಪ್ಪಿ ಹೇಳಿಬಿಟ್ಟಿದ್ದ. ಜನರ ಮತಗಳಿಂದ ಆಯ್ಕೆಯಾದ ಒಬ್ಬ ಎಂಪಿ ರಾಹುಲ್. ಈ ದೇಶದ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷವೊಂದರ ರಾಷ್ಟ್ರಾಧ್ಯಕ್ಷನೂ ಹೌದು. ಜೊತೆಗೆ ವಿರೋಧಪಕ್ಷ ಆತನದ್ದೇ ಎಂಬುದನ್ನು ಮರೆಯುವಂತಿಲ್ಲ. ಹೀಗಿರುವಾಗ ದೇಶದ ಶತ್ರುರಾಷ್ಟ್ರವಾದ ಚೀನಾದ ಅಧಿಕಾರಿಗಳನ್ನು ಭೇಟಿ ಮಾಡುವ ಮುನ್ಸೂಚನೆಯನ್ನು ಸಕರ್ಾರಕ್ಕೆ ಕೊಡದೇ, ಭೇಟಿ ಮಾಡಿದ ನಂತರ ಸಕರ್ಾರಕ್ಕೆ ತಿಳಿಸದೇ ಮುಚ್ಚಿಟ್ಟಿದ್ದು ಏತಕ್ಕಾಗಿ? ನರೇಂದ್ರಮೋದಿಯನ್ನು ಸೋಲಿಸಲು ಚೀನಾದೊಡನೆ ಗುಪ್ತವಾದ ಮಾತುಕತೆ ನಡೆಸಲು ಹೊರಟಿದ್ದರೇ ರಾಹುಲ್? ಈ ಗುಪ್ತ ಮಾತುಕತೆಯಲ್ಲಿಯೇ ಪುಲ್ವಾಮಾದಾಳಿಯ ಬೀಜವೂ ಅಡಗಿತ್ತೇ? ಮೌಲಾನಾ ಮಸೂದ್ ಅಜರ್ನನ್ನು ಚೀನಾ ಬೆಂಬಲಿಸುತ್ತಿರುವ ಪರಿ ನೋಡಿದರೆ ಆತ ಚೀನಾದ ಸಾಕುನಾಯಿಯೇ ಆಗಿರಬೇಕು. ಚೀನಾ ಹೇಳಿದ ಕೆಲಸವನ್ನೆಲ್ಲಾ ಚಾಚೂ ತಪ್ಪದೇ ಮಾಡುವವನಾಗಿರಬೇಕು. ಹೀಗಾಗಿಯೇ ಪಾಕಿಸ್ತಾನ ಸೇನಾಧ್ಯಕ್ಷ ಜನರಲ್ ಬಾಜ್ವಾಗೂ ಗೊತ್ತಿಲ್ಲದಂತೆ ಪುಲ್ವಾಮಾ ದಾಳಿ ನಡೆದಿದೆ ಎನ್ನುವ ಸುದ್ದಿ ತಲ್ಲಣಗೊಳ್ಳಲು ಕಾರಣವಾಗಿತ್ತು. ಪಾಕಿಸ್ತಾನದ ಸಕರ್ಾರವನ್ನು ನಿಯಂತ್ರಿಸೋದು ಸೇನೆಯೇ ಎಂಬುದು ಯಾರಿಗೂ ಹೊಸ ವಿಚಾರವಲ್ಲ. ಈ ಸೇನೆಯ ಅಡಿಯಲ್ಲಿಯೇ ಎಲ್ಲಾ ಭಯೋತ್ಪಾದಕ ಸಂಘಟನೆಗಳಿರುವುದು ಜಗತ್ತಿಗೆ ತಿಳಿಯದ ವಿಚಾರವೇನಲ್ಲ. ಭಾರತದ ಮೇಲಿನ ಮೊದಲ ದಾಳಿಯಿಂದ ಕಾಗರ್ಿಲ್ನವರೆಗಿನ ಎಲ್ಲ ಕದನವೂ ಭಯೋತ್ಪಾದಕ ವೇಶದಲ್ಲಿನ ಪಾಕಿಸ್ತಾನಿ ಸೈನಿಕರು ನಡೆಸಿದ್ದೇ. ಹೀಗಿರುವಾಗ ಸೇನೆಯ ಅವಗಾಹನೆಗೆ ಬರದಂತೆ ನಡೆದ ಈ ಪುಲ್ವಾಮಾ ದಾಳಿಯಲ್ಲಿ ಮತ್ಯಾರದ್ದಾದರೂ ಪಾತ್ರ ಇರಲೇಬೇಕಲ್ಲ! ಮತ್ತು ಆ ರಾಷ್ಟ್ರ ಚೀನಾವೇ ಆಗಿರಬೇಕು. ಹೀಗಾಗಿ ಚೀನಾ ಮೌಲಾನಾನನ್ನು ಉಳಿಸಲು ಮತ್ತೊಮ್ಮೆ ಪ್ರಯತ್ನಿಸಿರೋದು. ಹಾಗೇನಾದರೂ ಮೌಲಾನಾ ವಿರುದ್ಧ ಅದು ನಿಂತರೆ ಆತ ಜಗತ್ತಿಗೆ ಚೀನಾದ ಗುಟ್ಟುಬಿಟ್ಟುಕೊಡುವ ಸಾಧ್ಯತೆಗಳು ಇಲ್ಲದಿಲ್ಲ. ಚೀನಾಕ್ಕೆ ಮೌಲಾನಾ ಈಗ ಅನಿವಾರ್ಯ. ಪ್ರಶ್ನೆಯಿರುವುದು ಈಗ ರಾಹುಲ್ ಚೀನಾದ ಅಧಿಕಾರಿಗಳೊಂದಿಗೆ ಪುಲ್ವಾಮಾ ದಾಳಿಯ ಕುರಿತಂತೆಯೇ ಚಚರ್ೆ ನಡೆಸಿದ್ದ ಎಂಬುದು ಮಾತ್ರ. ಹಿಂದೊಮ್ಮೆ ದೆಹಲಿಯಲ್ಲಿ ಚೀನಾದ ರಾಜತಾಂತ್ರಿಕರನ್ನು ಭೇಟಿ ಮಾಡಿ ಅದನ್ನು ಯಾರಿಗೂ ತಿಳಿಸದೇ ಮುಚ್ಚಿಟ್ಟಿದ್ದ ರಾಹುಲ್. ಚೀನಾ ಅಧಿಕಾರಿಗಳೇ ಅದನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪ್ರಕಟಿಸಿದ ನಂತರ ಜಗಜ್ಜಾಹೀರಾಯ್ತು. ಇದನ್ನೇಕೆ ಮುಚ್ಚಿಟ್ಟಿರಿ ಎಂದು ಕೇಳಿದರೆ ರಾಹುಲ್ ಬಳಿ ಆಗ ಉತ್ತರವಿರಲಿಲ್ಲ. ಈಗ ಹರಡಿರುವ ಚುಕ್ಕಿಗಳನ್ನು ಸೇರಿಸಿದರೆ ಪುಲ್ವಾಮಾದ ಚಿತ್ತಾರ ಎದ್ದು ಕಾಣುತ್ತಿದೆ.


ಮೊದಲಿಗೆ ಚೀನಾದ ರಾಜತಾಂತ್ರಿಕರನ್ನು ಭೇಟಿಯಾಗಿದ್ದು, ಶಿವಭಕ್ತನೆಂದು ನಾಟಕ ಮಾಡುತ್ತಾ ಕೈಲಾಸ ಯಾತ್ರೆಗೆ ಹೋಗಿ ಚೀನಾದ ಅಧಿಕಾರಿಗಳೊಂದಿಗೆ ಚಚರ್ೆ ನಡೆಸಿದ್ದು, ಈ ಎರಡೂ ಸಂಗತಿಗಳನ್ನು ದೇಶಕ್ಕೆ ಗೊತ್ತಾಗದಂತೆ ಮುಚ್ಚಿಟ್ಟಿದ್ದು, ಪುಲ್ವಾಮಾದ ಘಟನೆಯಾದೊಡನೆ ಮೋದಿ ಯಾವುದೇ ಪ್ರತೀಕಾರ ಕ್ರಮ ಕೈಗೊಳ್ಳದಂತೆ ಕಟ್ಟಿಹಾಕುವ ಯತ್ನ ನಡೆಸಿದ್ದು, ಕೊನೆಗೆ ಪಾಕಿಸ್ತಾನದ ವಿರುದ್ಧ ಭಾರತೀಯ ವಾಯುಸೇನೆ ದಾಳಿ ನಡೆಸಿದಾಗ ಅದನ್ನು ಸುಳ್ಳೆಂದು ಬಿಂಬಿಸಲು ಪ್ರಯತ್ನಿಸಿ ಸೋತಿದ್ದು. ಎಲ್ಲಕ್ಕೂ ಮಿಗಿಲಾಗಿ ಈ ದಾಳಿಯ ಕೇಂದ್ರಬಿಂದುವಾಗಿದ್ದ ಮೌಲಾನಾನನ್ನು ಮಸೂದ್ ಅಜರ್ಜಿ ಎಂದು ಸ್ವಂತ ಮಾವನನ್ನು ಕರೆಯುವಂತೆ ಸಂಬೋಧಿಸಿದ್ದು ಇವೆಲ್ಲವೂ ಯಾವುದೋ ಕಥೆಯನ್ನು ಹೇಳುತ್ತಿವೆ. ರಾಹುಲ್ ಮೊನ್ನೆ ತಾನೆ ಕಾಲೇಜಿನ ವಿದ್ಯಾಥರ್ಿಗಳೊಂದಿಗೆ ಮಾತನಾಡುತ್ತಾ ಕಾನೂನು ಎಲ್ಲರಿಗೂ ಒಂದೇ. ಪ್ರಧಾನಮಂತ್ರಿಯಾದರೂ ಅವರನ್ನು ವಿಚಾರಣೆಗೊಳಪಡಿಸಬೇಕು ಎಂದಿದ್ದ. ಅದು ಸತ್ಯವೇ. ನೆಹರೂ ಮರಿಮಗನಾದರೂ ಈ ವಿಚಾರದಲ್ಲಿ ಮುಲಾಜಿಲ್ಲದೇ ವಿಚಾರಣೆ ನಡೆಸಲೇಬೇಕು ಏಕೆಂದರೆ ಭಾರತಕ್ಕೆ ಸಿಗಬೇಕಿದ್ದ ಭದ್ರತಾಸಮಿತಿಯ ಸ್ಥಾನ ಚೀನಾಕ್ಕೆ ಬಿಟ್ಟುಕೊಟ್ಟಿದ್ದು ನೆಹರೂನೇ ಅಲ್ಲವೇ?!


ಚುನಾವಣೆಯ ದಿನ ಎಚ್ಚರಿಕೆಯಿರಲಿ. ನೀವು ಹಾಕುವ ಮತ ಭಾರತವನ್ನು ಚೀನಾಕ್ಕೆ ಅಡವಿಟ್ಟುಬಿಟ್ಟೀತು. ಹೀಗೆ ಹೇಳಿದ್ದಕ್ಕೆ ಕಾಂಗ್ರೆಸ್ಸಿಗರು ಚುನಾವಣಾ ಆಯೋಗಕ್ಕೆ ನನ್ನ ವಿರುದ್ಧ ದೂರು ಕೊಟ್ಟರೂ ಅಚ್ಚರಿ ಪಡಬೇಕಿಲ್ಲ. ರಾಷ್ಟ್ರಪ್ರಜ್ಞೆಯಿಂದ ಕೆಳಗಿಳಿದು ಪಾತಾಳದಾಳಕ್ಕೆ ಸೇರಿಹೋಗಿರುವ ಜನರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ ಹೇಳಿ?!

– ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top