National

ಚಿದಂಬರಂಗೆ ಸಿಕ್ಕಿದ್ದು ಜಾಮೀನು, ಕ್ಲೀನ್ಚಿಟ್ ಅಲ್ಲ!!

ಪಿ.ಚಿದಂಬರಂ ಕೊನೆಗೂ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಕಾಂಗ್ರೆಸ್ಸಿನ ಪಡಸಾಲೆಗಳಲ್ಲಿ ಸಂಭ್ರಮವೋ ಸಂಭ್ರಮ. ಕಪಿಲ್ ಸಿಬಲ್ ಸತ್ಯಮೇವ ಜಯತೇ ಎಂದು ಟ್ವೀಟ್ ಮಾಡಿದ್ದು ಎಂಥವರಲ್ಲೂ ನಗೆಯುಕ್ಕಿಸಲು ಸಾಕಾಗಿತ್ತು. ನ್ಯಾಯಾಲಯ ಚಿದಂಬರಂಗೆ ಕೊಟ್ಟಿರುವುದು ಜಾಮೀನಷ್ಟೇ, ಕ್ಲೀನ್ ಚಿಟ್ ಅಲ್ಲ! ಆದರೆ ಈ ಹಿಂದೆಯೂ ನಂಬಿಸಿಕೊಂಡು ಬಂದಿರುವಂತೆ ಕಾಂಗ್ರೆಸ್ಸು ಇದನ್ನು ಕ್ಲೀನ್ಚಿಟ್ ಎಂದೇ ಜನರಿಗೆ ಒಪ್ಪಿಸಿಬಿಟ್ಟರೆ ಅಚ್ಚರಿ ಪಡಬೇಡಿ. ಇತ್ತೀಚೆಗೆ ಜನರ ಮಾನಸಿಕತೆಯೂ ವಿಚಿತ್ರವಾಗುತ್ತಿದೆ. ಭ್ರಷ್ಟರನ್ನು ಜೈಲಿಗೆ ತಳ್ಳಬೇಕು ಎಂಬ ಧಾವಂತ ಎಲ್ಲರಿಗೂ ಇದೆ. ಆದರೆ ಅದೇ ಭ್ರಷ್ಟರು ಜೈಲಿನಿಂದ ಹೊರಬಂದಾಗ ಯಾರಿಗೂ ಸಿಗದಷ್ಟು ಅದ್ದೂರಿಯ ಸ್ವಾಗತ ಕೊಡಲಾಗುತ್ತಿದೆ. ಎ.ರಾಜಾ 2ಜಿ ಹಗರಣದ ಜೈಲು ವಾಸದಿಂದ ಹೊರಬಂದಾಗ ಆತನನ್ನು ಗೌರವಿಸಿದ ರೀತಿ ವಿಚಿತ್ರವಾಗಿತ್ತು ಎನ್ನುವುದು ಒಂದಾದರೆ ಅದೇ ರಾಜ ಕಂಟ್ರೋಲರ್ ಆಡಿಟರ್ ಜನರಲ್ ವಿನೋದ್ ರಾಯ್ ಅವರನ್ನು ಕಾಂಟ್ರ್ಯಾಕ್ಟ್ ಕಿಲ್ಲರ್ ಎಂದು ಜರಿದು ಅವರನ್ನು ಮುಗಿಸಿಬಿಡಬೇಕು ಎಂದೂ ಕೂಗಾಡಿದ್ದರು. ಅದು ಮರೆತೇ ಹೋಗಿದ್ದರೆ ಡಿ.ಕೆ ಶಿವಕುಮಾರ್ ಜಾಮೀನು ಪಡೆದು ಜೈಲಿನಿಂದ ಹೊರಬಂದಾಗಿನ ಘಟನೆಗಳನ್ನು ನೆನಪಿಸಿಕೊಳ್ಳಿ. ವಿಮಾನ ನಿಲ್ದಾಣದಿಂದ ಹಿಡಿದು ಕನಕಪುರದವರೆಗೂ ಜನಸಾಗರವೇ ತುಂಬಿತ್ತಲ್ಲದೇ ಮುಗಿಲೆತ್ತರದ ಸೇಬುವಿನ ಹಾರ ಶಿವಕುಮಾರರ ಕೊರಳಿಗೇರಿಸಿ ಜನ ಕೇಕೆ ಹಾಕಿ ಕುಣಿದಿದ್ದರು. ಇದೇ ಜನ ಜೈಲಿನೊಳಗೆ ಈ ಆರೋಪಿಗಳು ಕಷ್ಟ ಅನುಭವಿಸುತ್ತಿರುವಾಗ ಕುಹಕದ ನಗೆಯನ್ನೂ ನಕ್ಕಿದ್ದರು. ಅದಕ್ಕೆ ಮಾನಸಿಕತೆಯೇ ವಿಚಿತ್ರವಾದ್ದು ಎಂದು ಹೇಳಿದ್ದು. ತಮ್ಮ ನಾಯಕರು ಜೈಲಿನಲ್ಲಿ ಸಂಕಟ ಅನುಭವಿಸುವುದನ್ನು ಆನಂದಿಸುವ ಜನರೇ ಅವರು ಬಂದಾಗ ಸಂಭ್ರಮಕ್ಕೂ ನಿಲ್ಲುತ್ತಾರೆ. ಚಿದಂಬರಂ ಕೂಡ ಇದಕ್ಕೆ ಹೊರತಾಗಿರುವಂಥವರಲ್ಲ. ದೀಪಾವಳಿಯ ಪಟಾಕಿಗಳನ್ನು ಪರಿಸರದ ಹೆಸರೆತ್ತಿ ವಿರೋಧಿಸಿದವರೆಲ್ಲಾ ಚಿದಂಬರಂರ ಆಗಮನಕ್ಕೆ ಸಂಭ್ರಮಿಸಿ ಅದನ್ನೇ ಸಿಡಿಸಿದ್ದರು. ದುರಂತವೆಂದರೆ ಈ ರೀತಿಯ ಸಂಭ್ರಮಾಚರಣೆ ಕಾಂಗ್ರೆಸ್ಸಿಗೆ ಮಾತ್ರವಲ್ಲದೇ ಎಲ್ಲ ಪಕ್ಷಗಳಲ್ಲೂ ವ್ಯಾಪಿಸಿಕೊಂಡಿದೆ!

ಈಗ ವಿಚಾರಕ್ಕೆ ಬರೋಣ. ಚಿದಂಬರಂ ಜಾಮೀನು ಪಡೆದು ಹೊರಬಂದಿರುವುದು ಐಎನ್ಎಕ್ಸ್ನ ಕೇಸಿನಲ್ಲಿ ಮಾತ್ರ. ಇದು ಇಂದ್ರಾಣಿ ಮುಖಜರ್ಿ ಹೊರಹಾಕಿದ ಕಟುಸತ್ಯಗಳ ಕಾರಣಕ್ಕೆ ಅವರ ಮೇಲೆ ಜಡಿಯಲಾಗಿದ್ದ ಕೇಸು. ಮೊದಲ ಬಾರಿಗೆ ಐಎನ್ಎಕ್ಸ್ ಮೀಡಿಯಾದ ಕೇಸು ದಾಖಲಾಗಿದ್ದು 2008ರಲ್ಲಿ. ಹಣಕಾಸು ಸಚಿವಾಲಯದ ಅಡಿಯಲ್ಲಿರುವ ಫೈನಾನ್ಶಿಯಲ್ ಇಂಟೆಲಿಜೆನ್ಸ್ ಯುನಿಟ್ ಐಎನ್ಎಕ್ಸ್ ಮಿಡಿಯಾದ 300ಕೋಟಿ ರೂಪಾಯಿಯ ಅವ್ಯವಹಾರವನ್ನು ಬಯಲಿಗೆಳೆದಿತ್ತು. ಪೀಟರ್ ಮತ್ತು ಇಂದ್ರಾಣಿ ಮುಖಜರ್ಿ ಮಾರಿಷಸ್ನಲ್ಲಿ ಈ ಕಂಪೆನಿಯನ್ನು ತೆರೆದು ಅದರ ಮೂಲಕ ಭಾರತದಲ್ಲಿ ಹಣಹೂಡಿ ತೆರಿಗೆ ವಂಚಿಸುವ ಕೆಲಸಕ್ಕೆ ಕೈ ಹಾಕಿದ್ದರು. ತೆರಿಗೆ ಇಲಾಖೆ ಈ ಕೇಸನ್ನು ಎನ್ಫೋಸರ್್ಮೆಂಟ್ ಡೈರೆಕ್ಟೊರೇಟ್ಗೆ ಹಸ್ತಾಂತರಿಸುತ್ತಿದ್ದಂತೆ ಫಾರಿನ್ ಎಕ್ಸ್ಚೆಂಜ್ ಮ್ಯಾನೇಜ್ಮೆಂಟ್ ಆ್ಯಕ್ಟ್(ಫೇಮಾ)ದ ಅಡಿಯಲ್ಲಿ ಕೇಸು ದಾಖಲಿಸಲಾಯ್ತು. ಆಗೆಲ್ಲಾ ಚಿದಂಬರಂಗೂ ಇದಕ್ಕೂ ಯಾವ ನಂಟೂ ಕಂಡುಬಂದಿರಲಿಲ್ಲ. ಅದಾದ ಕೆಲವು ವರ್ಷಗಳ ನಂತರ ಚಿದಂಬರಂನ ಮಗ ಕಾತರ್ಿಯ ಕಂಪೆನಿಗೆ ಸಂಬಂಧಪಟ್ಟ ಕೆಲವು ದಾಖಲೆಗಳನ್ನು ಅಧಿಕಾರಿಗಳು ಅಧ್ಯಯನ ಮಾಡುತ್ತಿರುವಾಗ ಹಾವಿನ ಬುಟ್ಟಿಯೇ ತೆರೆದಂತಾಗಿತ್ತು. ಕಾತರ್ಿಯ ಆಡಿಟರ್ನ ಕಂಪ್ಯೂಟರ್ನ ದಾಖಲೆಗಳಲ್ಲಿ ಐಎನ್ಎಕ್ಸ್ ಮಿಡಿಯಾದೊಂದಿಗಿರುವ ಸಂಬಂಧ ನಿಚ್ಚಳವಾಗಿತ್ತು. ಐಎನ್ಎಕ್ಸ್ನಿಂದ ಕಾತರ್ಿಯ ಕಂಪೆನಿಗೆ ದೊಡ್ಡ ಮೊತ್ತದ ಹಣ ಸಂದಾಯವಾಗುವುದಕ್ಕೂ ಫಾರಿನ್ ಇನ್ವೆಸ್ಟ್ಮೆಂಟ್ ಪ್ರಮೋಷನ್ ಬೋಡರ್ಿನ ಲೈಸೆನ್ಸು ಐಎನ್ಎಕ್ಸ್ಗೆ ಸಿಗುವುದಕ್ಕೂ ದಿನಾಂಕಗಳು ತಾಳೆ ಹೊಂದುತ್ತಿದ್ದವು. ಈ ಅನುಮಾನ ಬಲವಾಗಲು ಕಾರಣವೇನು ಗೊತ್ತೇ? ಆ ಹೊತ್ತಿನಲ್ಲಿ ದೇಶದ ಹಣಕಾಸು ಸಚಿವರಾಗಿದ್ದುದು ಸ್ವತಃ ಚಿದಂಬರಂ. ಇದರ ಆಧಾರದ ಮೇಲೆಯೇ ಅಪ್ಪ-ಮಕ್ಕಳಿಬ್ಬರ ಮನೆ-ಕಛೇರಿಗಳನ್ನು ಹುಡುಕಾಡಲಾಯ್ತು ಮತ್ತು ಸಿಕ್ಕ ಸಾಕ್ಷಿಗಳ ಆಧಾರದ ಮೇಲೆ ಕೇಸುಗಳನ್ನೂ ಜಡಿಯಲಾಯ್ತು.

2007ರಲ್ಲಿ ಐಎನ್ಎಕ್ಸ್ ಮಿಡಿಯಾ ವಿದೇಶೀ ಹೂಡಿಕೆಗೆ ಅನುಮತಿ ಕೇಳಲು ಹೋದಾಗ ಅದಕ್ಕೆ ಅನುಮತಿ ಸಿಕ್ಕಿದ್ದು ನಾಲ್ಕುವರೆ ಕೋಟಿಗೆ ಮಾತ್ರ. ಆದರೆ ಅದಾಗಲೇ ಈ ಸಂಸ್ಥೆ 305ಕೋಟಿ ರೂಪಾಯಿಯನ್ನು ಇಲ್ಲಿ ಹೂಡಿಯಾಗಿತ್ತು. 2008ರಲ್ಲಿ ಈ ಕುರಿತ ವಿಚಾರಣೆ ಆರಂಭವಾದಾಗ ಸೂಕ್ಷ್ಮ ಅರಿತ ಇಂದ್ರಾಣಿ ಚಿದಂಬರಂ ಸಹಕಾರ ಪಡೆಯಬೇಕೆಂದು ನಿರ್ಧರಿಸಿದರು. ಅದಕ್ಕೆ ಅವರಿಗೆ ರಾಜಮಾರ್ಗವಾಗಿ ಸಿಕ್ಕಿದ್ದು ಕಾತರ್ಿ ಚಿದಂಬರಂ. ಮುಲಾಜಿಲ್ಲದೇ ಕಾತರ್ಿ 10ಲಕ್ಷ ಡಾಲರ್ಗಳನ್ನು ವಿದೇಶೀ ಬ್ಯಾಂಕಿನ ತನ್ನ ಖಾತೆಗೆ ಜಮೆ ಮಾಡುವಂತೆ ಕೇಳಿಕೊಂಡ. ಇದು ಕಷ್ಟವಾಗಬಹುದು ಎಂದು ಪೀಟರ್ ಹೇಳಿದಾಗ ಕಾತರ್ಿ ತನ್ನದ್ದೇ ಕಂಪೆನಿಗಳಾಗಿರುವ ಚೆಸ್ ಮ್ಯಾನೇಜ್ಮೆಂಟ್ ಮತ್ತು ಅಡ್ವಾಂಟೇಜ್ ಸ್ಟ್ರಾಟಜಿಕ್ಗಳಿಗೆ ಈ ದುಡ್ಡನ್ನು ಕೊಡುವಂತೆ ಕೇಳಿಕೊಂಡ. ಈ ದುಡ್ಡಿನಲ್ಲೇ ಮುಂದೆ ಕಾತರ್ಿ ಸ್ಪೈನ್ನಲ್ಲಿ ಟೆನಿಸ್ ಕ್ಲಬ್ಅನ್ನು, ಯುಕೆಯಲ್ಲಿ ಎರಡು ಬಂಗಲೆಗಳನ್ನು ಮತ್ತು ಭಾರತದಲ್ಲೂ ಸಾಕಷ್ಟು ಆಸ್ತಿಯನ್ನು ಕೊಂಡುಕೊಂಡ. 2017ರ ಜೂನ್ನಲ್ಲಿ ಈ ಎಲ್ಲಾ ಸಾಕ್ಷಿಗಳ ಆಧಾರದ ಮೇಲೆ ಗೃಹಖಾತೆ ಕಾತರ್ಿಯ ವಿರುದ್ಧ ಲುಕ್ಔಟ್ ಸಕ್ಯರ್ುಲಾರ್ ಅನ್ನು ಹೊರಡಿಸಿತು. ತನ್ನ ತಾನು ಉಳಿಸಿಕೊಳ್ಳಲು ಕಾತರ್ಿ ಮದ್ರಾಸ್ ನ್ಯಾಯಾಲಯಕ್ಕೆ ಹೋದ, ಜಾಮೀನು ಪಡೆದ ಕೂಡ. ಆದರೆ ಸವರ್ೋಚ್ಚ ನ್ಯಾಯಾಲಯದಲ್ಲಿ ಮದ್ರಾಸ್ ನ್ಯಾಯಾಲಯದ ತಡೆಯಾಜ್ಞೆಗೇ ತಡೆ ಸಿಕ್ಕಿತು. ಅಲ್ಲದೇ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗುವಂತೆ ಕಾತರ್ಿಗೆ ಆದೇಶಿಸಿತು. ಒಂದು ದಿನದ ಪೊಲೀಸ್ ಕಸ್ಟಡಿ, ಮೂರು ದಿನದ ಸಿಬಿಐ ಕಸ್ಟಡಿ ಮತ್ತು ಹನ್ನೆರಡು ದಿನದ ನ್ಯಾಯಾಂಗದ ಕಸ್ಟಡಿಯಿಂದ ಕೊನೆಗೂ ಕಾತರ್ಿಗೆ ಜಾಮೀನು ದಕ್ಕಿತು. ಈ ನಡುವೆಯೇ ಅವರಪ್ಪ ಪಿ.ಚಿದಂಬರಂ ನಿರೀಕ್ಷಣಾ ಜಾಮೀನಿಗೆ ಅಜರ್ಿ ಸಲ್ಲಿಸಿ ಕೂತಿದ್ದರು. ಅದು ಐಎನ್ಎಕ್ಸ್ ಮಿಡಿಯಾದ ಹಣ ದುರುಪಯೋಗದ ಕೇಸು ತನ್ನ ಕೊರಳನ್ನು ಸುತ್ತುವುದು ಖಾತ್ರಿ ಎಂದು ಗೊತ್ತಾದಮೇಲೆ! ಆ ವೇಳೆಗಾಗಲೇ ಎನ್ಫೋಸರ್್ಮೆಂಟ್ ಡೈರೆಕ್ಟೊರೇಟ್ ಕಾತರ್ಿಗೆ ಸೇರಿದ 54ಕೋಟಿ ರೂಪಾಯಿಯ ದೇಶ-ವಿದೇಶಗಳಲ್ಲಿನ ಆಸ್ತಿಯನ್ನು ಜಫ್ತು ಮಾಡಿತು. ಇವೆಲ್ಲವನ್ನೂ ದ್ವೇಷದ ರಾಜಕಾರಣ ಎಂದು ಚಿದಂಬರಂ ಹೇಳಿದ್ದಲ್ಲದೇ ಐಎನ್ಎಕ್ಸ್ ಪ್ರಕರಣದಲ್ಲಿ ತನ್ನ ಪಾತ್ರಕ್ಕೆ ಸಾಕ್ಷಿಗಳೇ ಇಲ್ಲವೆಂದು ಹೇಳುತ್ತಿದ್ದರು. ಇದಾದ ಕೆಲವು ತಿಂಗಳಲ್ಲಿ ಇಂದ್ರಾಣಿ ಮುಖಜರ್ಿ ಸಿಬಿಐಗೆ ಮಾಫಿ ಸಾಕ್ಷಿಯಾಗಿ ಚಿದಂಬರಂ ತನ್ನಿಂದ ಹಣ ಸ್ವೀಕರಿಸಿದ್ದು ನಿಜ ಎಂದು ಒಪ್ಪಿಕೊಂಡುಬಿಟ್ಟಳು. ಅದರೊಟ್ಟಿಗೆ ಚಿದಂಬರಂ ನಿರೀಕ್ಷಣಾ ಜಾಮೀನು ನಿರಾಕರಿಸಲ್ಪಟ್ಟಿತು. ಜೈಲಿಗೆ ತಳ್ಳಲ್ಪಟ್ಟ ಚಿದಂಬರಂ ನೂರೈದು ದಿನಗಳ ಕಾಲ ಕೋಟರ್ಿನಿಂದ ಕೋಟರ್ಿಗೆ ಅಲೆದಾಡುತ್ತಲೇ ಉಳಿದರು. ಪ್ರಭಾವಿ ವ್ಯಕ್ತಿಯಾಗಿದ್ದರಿಂದ ಇರುವ ಸಾಕ್ಷ್ಯವನ್ನೆಲ್ಲಾ ನಾಶಮಾಡಬಹುದೆಂದು ಅಧಿಕಾರಿಗಳು ಹೇಳಿರುವ ಮಾತನ್ನು ಒಪ್ಪಿಕೊಂಡೇ ನಡೆದಿದ್ದ ನ್ಯಾಯಾಲಯ ಕೊನೆಗೂ ಜಾಮೀನು ಕೊಟ್ಟಿತು. ಹಾಗಂತ ಚಿದಂಬರಂ ಮೇಲಿರುವ ಆರೋಪ ಇದೊಂದೇ ಅಲ್ಲ. 2ಜಿ ಹಗರಣದಲ್ಲೂ ತನ್ನ ಮಗನಿಗೆ ಅನುಕೂಲವಾಗುವ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆಂಬ ಗಂಭೀರ ಆರೋಪದ ವಿಚಾರಣೆಯೂ ನಡೆಯುತ್ತಿದೆ. ಏರ್ಸೆಲ್ ಟೆಲಿವೆಂಚಸರ್್ಗೆ ಲೈಸನ್ಸ್ ಕೊಡಿಸಲು ತನ್ನ ಮಗನ ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ಕಂಪೆನಿಗೆ ಶೇಕಡಾ 5ರಷ್ಟು ಪಾಲುದಾರಿಕೆಯನ್ನು ಅವರು ಕೇಳಿದ್ದರೆಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆಯುತ್ತಿವೆ. ರಾಬಟರ್್ ವಾದ್ರಾನೊಂದಿಗೆ ಸೇರಿ ಕಾತರ್ಿ ಏರ್ಸೆಲ್ ಮ್ಯಾಕ್ಸಿಸ್ ಅಲ್ಲದೇ ಉತ್ತರಪ್ರದೇಶದ ರಾಷ್ಟ್ರೀಯ ಗ್ರಾಮೀಣ ಸುರಕ್ಷಾ ಯೋಜನೆಯಲ್ಲೂ ಹಗರಣ ಮಾಡಿರುವುದು ಈಗ ಬೆಳಕಿಗೆ ಬಂದಿದೆ. ಚಿದಂಬರಂನ ಪತ್ನಿ ನಳಿನಿ ಚಿದಂಬರಂ ಕೂಡ ಸಾಮಾನ್ಯರೇನಲ್ಲ. 2004ರಲ್ಲಿ ಸೆಂಟ್ರಲ್ ಬೋಡರ್್ ಆಫ್ ಡೈರೆಕ್ಟ್ ಟ್ಯಾಕ್ಸಸ್ನ ಪರವಾಗಿ ವಕೀಲರಾಗಿ ವಾದಿಸಲಿಕ್ಕೆ ಬಂದದ್ದು ಆಕೆಯೇ. ಮುಂದೆ ಈ ಕುರಿತ ಹಗರಣ ಬಯಲಾದಾಗ ತೆರಿಗೆ ಇಲಾಖೆ ತನಗೆ ಕೊಟ್ಟಿದ್ದ ಒಂದು ಲಕ್ಷ ರೂಪಾಯಿಯನ್ನು ಮರಳಿಸುತ್ತೇನೆಂದು ಆಕೆ ಎಲ್ಲರ ಮುಂದೆ ಕೇಳಿಕೊಂಡಿದ್ದರು.

2013ರಲ್ಲಿ ಚಿದಂಬರಂ ಮೇಲೆ ರಾಮ್ಜೇಠ್ಮಲಾನಿ ಎನ್ಡಿಟಿವಿಯೊಂದಿಗೆ ಸೇರಿ 5000ಕೋಟಿ ರೂಪಾಯಿಯನ್ನು ಮಾರಿಷಸ್ ಮಾರ್ಗದ ಮೂಲಕ ಭಾರತಕ್ಕೆ ನ್ಯಾಯವಿರೋಧಿ ಮಾರ್ಗದ ಮೂಲಕ ಒಳತಂದಿದ್ದಾರೆಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿಯೇ ಎನ್ಡಿಟಿವಿ ಮುಖ್ಯಸ್ಥರಾದ ಪ್ರಣಯ್ರಾಯ್ ಮತ್ತು ರಾಧಿಕಾರಾಯ್ ಈಗಲೂ ವಿಚಾರಣೆ ಎದುರಿಸುತ್ತಿದ್ದಾರೆ. ಇಲ್ಲಿಯೂ ಕೂಡ ಚಿದಂಬರಂ ಪಾತ್ರ ಇರುವುದು ಗೊತ್ತಾದರೆ ಮರಳಿ ಜೈಲಿಗೆ ಹೋಗಬೇಕಾಗಿ ಬರಬಹುದು. 2004ರಲ್ಲಿ ಚಿದು ಹಣಕಾಸು ಸಚಿವರಾಗುವುದಕ್ಕೂ ಮುನ್ನ ವೇದಾಂತ ಕಂಪೆನಿಯ ವಕೀಲರ ತಂಡದಲ್ಲಿದ್ದರು. ಈ ಕಂಪೆನಿ ವಿದೇಶೀ ಹಣವನ್ನು ಭಾರತಕ್ಕೆ ಮೋಸದ ಮಾರ್ಗದಿಂದ ತಂದ ಆರೋಪವನ್ನು ಎದುರಿಸುತ್ತಿತ್ತು. ಅದರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಲು ನಿಂತಿದ್ದು ಚಿದಂಬರಂ ಎಂಬ ಜಾಮೀನಿನ ಮೇಲೆ ಈಗ ಹೊರಗಿರುವ ಇದೇ ಕಾಂಗ್ರೆಸ್ಸಿಗನೇ. ಒಟ್ಟಾರೆ ರಾಷ್ಟ್ರದ ವಿಚಾರದಲ್ಲಷ್ಟೇ ಅಲ್ಲ, ತನ್ನ ಕ್ಷೇತ್ರದಲ್ಲೂ ಚಿದು ಖಳನಾಯಕನೇ. 2009ರಲ್ಲಿ ಶಿವಗಂಗಾದಲ್ಲಿ ಚುನಾವಣೆ ನಡೆದಾಗ ತನ್ನ ಪ್ರತಿಸ್ಪಧರ್ಿ ಅಣ್ಣಾ ಡಿಎಮ್ಕೆಯ ರಾಜಾಕಣ್ಣಪ್ಪನನ್ನು ಸೋಲಿಸಬೇಕೆಂದು ತಿಪ್ಪರಲಾಗ ಹೊಡೆದಿದ್ದರು. ಕೊನೆಗೂ ಚಿದು ಸೋತು ಕಣ್ಣಪ್ಪನ್ ಗೆದ್ದರು. ಹಾಗೆ ಅಧಿಕೃತ ಪ್ರಕಟಣೆಯೂ ಹೊರಬಿತ್ತು, ಟಿವಿ ರೇಡಿಯೋಗಳಲ್ಲಿ ಸುದ್ದಿಯೂ ಆಯ್ತು. ಕೆಲವೇ ಗಂಟೆಗಳಲ್ಲಿ ಎಲ್ಲವೂ ಬದಲಾಗಿ ಚಿದಂಬರಂ ಗೆದ್ದರೆಂದು ಅಧಿಕೃತ ಹೇಳಿಕೆಯನ್ನು ಮತ್ತೊಮ್ಮೆ ಹೊರಡಿಸಲಾಯ್ತು. ಚಿದು ಸ್ಪಷ್ಟವಾಗಿ ಅನೈತಿಕ ಮಾರ್ಗದ ಮೂಲಕ ಗೆಲುವು ತಮ್ಮದಾಗಿಸಿಕೊಂಡಿದ್ದರು. ಇಂದು ತಮ್ಮ ಸೋಲನ್ನು ಇವಿಎಮ್ಗಳ ಮೇಲೆ ಹೊರೆಸುವ ಕಾಂಗ್ರೆಸ್ಸಿಗರು ಅಂದು ಈ ಅನೈತಿಕ ಗೆಲುವನ್ನೂ ಸಂಭ್ರಮಿಸಿಬಿಟ್ಟಿದ್ದರು. ಸಂಭ್ರಮಿಸಲು ಕಾಂಗ್ರೆಸ್ಸಿಗೆ ಕಾರಣವೇನು ಬೇಕಿಲ್ಲ ಬಿಡಿ!


ಚಿದಂಬರಂ ಮಾಡಿರುವ ಎಲ್ಲ ತಪ್ಪುಗಳನ್ನು ಕೊನೆಗೊಮ್ಮೆ ಕಾನೂನು ಕ್ಷಮಿಸಿಬಿಡಬಹುದೇನೋ. ಈ ದೇಶದ ಹಿಂದೂ-ಮುಸಲ್ಮಾನರು ಕ್ಷಮಿಸಲಾರರು. ಅಧಿಕಾರಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಚಿದು ಮತ್ತವರ ಗೆಳೆಯರು ಸೇರಿ ಹಿಂದೂ ಭಯೋತ್ಪಾದನೆ ಎಂಬ ಹೊಸಪದವನ್ನೇ ಹುಟ್ಟುಹಾಕಿಬಿಟ್ಟಿದ್ದರು. ಭಯೋತ್ಪಾದನೆ ನಡೆಸುವ ಪುಂಡ ಮುಸಲ್ಮಾನರನ್ನು ತಡೆಗಟ್ಟಿ ಅವರನ್ನು ಸರಿದಾರಿಗೆ ತರಲು ಯತ್ನಿಸಬೇಕಿದ್ದ ಅಧಿಕಾರದಲ್ಲಿದ್ದ ಇವರೆಲ್ಲಾ ಹಿಂದೂಗಳೂ ಭಯೋತ್ಪಾದಕರಾಗಬಲ್ಲರು ಎಂದು ತೋರಿಸುವ ಧಾವಂತದಲ್ಲಿ ಮುಸಲ್ಮಾನರಲ್ಲಿ ಬರಬಹುದಾಗಿದ್ದ ಬದಲಾವಣೆಯನ್ನು ತಡೆದುಬಿಟ್ಟರು. ಹಿಂದೂ ಭಯೋತ್ಪಾದನೆಯನ್ನು ಸಾಬೀತುಪಡಿಸುವ ಭರದಲ್ಲಿ ಸಂಝೋತಾ ಎಕ್ಸ್ಪ್ರೆಸ್ಗೆ ಕಾರಣನಾದ ಆರೀಫ್ ಕಸ್ಮಾನಿ ಮತ್ತು ಮೆಕ್ಕಾ-ಮಸ್ಜಿದ್ ಬಾಂಬ್ ಸ್ಫೋಟಕ್ಕೆ ಕಾರಣನಾದ ಬಿಲಾಲ್ನನ್ನು ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು. ಅದರ ಪರಿಣಾಮವೇ ಮುಂಬೈ ದಾಳಿಯಾಗಿ ಅನೇಕ ಸಾವು-ನೋವುಗಳಾದವು. ಆಗೆಲ್ಲಾ ಚಿದಂಬರಂ ಕೆಟ್ಟದ್ದಾಗಿ ಪ್ರತಿಕ್ರಿಯಿಸುತ್ತಿದ್ದುದಲ್ಲದೇ ಭಾರತೀಯರನ್ನು ತುಚ್ಛವಾಗಿ ಕಂಡಿದ್ದರೂ ಕೂಡ. ಕೋಟರ್ು ಜಾಮೀನು ಕೊಟ್ಟರೂ ಭಾರತೀಯ ಹೃದಯಗಳೆಂದೂ ಅವರನ್ನು ಕ್ಷಮಿಸಲಾರವು. ಅತ್ಯಂತ ಶ್ರೇಷ್ಠ ಮನೆತನಕ್ಕೆ ಸೇರಿದ ಚಿದಂಬರಂ ಹಣಕ್ಕೋಸ್ಕರ ಈ ಮಟ್ಟಿಗಿಳಿಯಬಾರದಿತ್ತು. ಅವರ ತಾತ ಅಣ್ಣಾಮಲೈ ಚೆಟ್ಯಾರ್ ಅಣ್ಣಾಮಲೈ ವಿಶ್ವವಿದ್ಯಾಲಯದ ಮತ್ತು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪೆನಿಯ ಸ್ಥಾಪಕರೂ ಹೌದು. ಬ್ರಟೀಷರಿಂದ ರಾಜಾ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದವರು ಅವರು. ಅಂಥ ಪರಿವಾರದಿಂದ ಬಂದ ಚಿದಂಬರಂ ಈ ಮಟ್ಟಕ್ಕೆ ಇಳಿಯುವುದು ಖಂಡಿತ ಒಳಿತಲ್ಲ!

ಏನೇ ಆಗಲಿ, ಭಾರತದಲ್ಲಿ ದೇಶಕ್ಕೆ ಅನ್ಯಾಯ ಮಾಡಿದವರಿಗೆ ಶಿಕ್ಷೆಯಾಗುತ್ತದೆಂಬ ಭಯ ಹುಟ್ಟುವ ದಿನಗಳು ಆರಂಭವಾಗಿರುವುದು ಸಂತಸದ ಸಂಗತಿ!

-ಚಕ್ರವರ್ತಿ ಸೂಲಿಬೆಲೆ

 

1 Comment

1 Comment

  1. Adarsh

    December 13, 2019 at 9:58 pm

    kall nan maga

Leave a Reply

Your email address will not be published. Required fields are marked *

Most Popular

To Top