Desi

ಕ್ರಾಂತಿಕಾರಿಗಳಿಗೆ ದುರ್ಗಾಭಾಬಿಯಾಗಿದ್ದ ಧೀರಮಾತೆ ದುರ್ಗಾವತಿದೇವಿ!

ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನೇ ತಾವು ಅಪರ್ಿಸಿಕೊಂಡ ಕ್ರಾಂತಿಕಾರಿಗಳು ಎಂದಾಕ್ಷಣ ನೆನಪಾಗುವುದು ಭಗತ್ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಆಜಾದ್ ಇವರುಗಳು. ಬಹಳ ಪರಿಚಿತವಲ್ಲದೇ ಹೋದರೂ ಈ ಎಲ್ಲಾ ಹೆಸರುಗಳೊಡನೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಥನವನ್ನು ಓದಿದವರ ಮನಃಪಟಲದಲ್ಲಿ ಹಾದುಹೋಗುವ ಹೆಸರೇ ದುರ್ಗಾವತಿದೇವಿ!

ದುಗರ್ಾವತಿ ದೇವಿ ಬಂಗಾಳದ ಹೆಣ್ಣುಮಗಳು. ಈಕೆ 1907, ಅಕ್ಟೋಬರ್ 7 ರಂದು ಅಲಹಾಬಾದ್ನಲ್ಲಿ ಹುಟ್ಟಿದ್ದು. ಹುಟ್ಟಿನಿಂದಲೂ ಆಕೆಯ ಬದುಕು ಸಂಘರ್ಷದ್ದೇ. ಹುಟ್ಟಿದ ಹತ್ತು ತಿಂಗಳಿಗೇ ಆಕೆಯ ತಾಯಿ ತೀರಿಕೊಂಡರು. ಇದಾದ ಕೆಲವು ಸಮಯದಲ್ಲಿಯೇ ತಂದೆ ಸಂನ್ಯಾಸ ಸ್ವೀಕರಿಸಿದರು! ಸಂಬಂಧಿಕರೊಡನೆ ಆಗ್ರಾಗೆ ಬಂದು ನೆಲೆಸಿ ತನ್ನ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದಳು. ಅತ್ಯಂತ ಧೈರ್ಯವಂತಳಾಗಿ ಬೆಳೆದಳು.


ಬಾಲ್ಯವಿವಾಹ ಹೆಚ್ಚು ಹೆಚ್ಚು ಜಾರಿಯಲ್ಲಿದ್ದ ಕಾಲವದು. ಹೀಗಾಗಿ ದುಗರ್ಾವತಿ ದೇವಿಯ ವಿವಾಹವಾದಾಗ ಆಕೆಗೆ ಕೇವಲ ಹನ್ನೊಂದು ವರ್ಷ! ಆಕೆ ಮದುವೆಯಾದದ್ದು ‘ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್’ನ ಕಾರ್ಯಕರ್ತ ಭಗವತಿಚರಣ್ ವೋಹ್ರಾನನ್ನು. ಅಲ್ಲಿಂದಾಚೆಗೆ ಆಕೆಯ ಕ್ರಾಂತಿಯ ಬದುಕು ಶುರುವಾಯಿತು. ನೌಜವಾನ್ ಭಾರತ್ ಸಭಾದ ಸಕ್ರಿಯ ಕಾರ್ಯಕರ್ತಳೂ ಆದಳು. ದುಗರ್ಾವತಿ ದೇವಿಯವರು ಸ್ವಾತಂತ್ರ್ಯದ ಹೋರಾಟದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದ್ದು ಕತರ್ಾರ್ ಸಿಂಗ್ ಸರಾಬಾ ಅವರ 11ನೇ ಪುಣ್ಯತಿಥಿಯ ಸಂದರ್ಭದಲ್ಲಿ. ಇಲ್ಲಿಂದಾಚೆಗೆ ಆಕೆ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಪಾಲಿಗೆ ‘ದುಗರ್ಾಭಾಬಿ’ಯಾದಳು!

ಜತೀಂದ್ರನಾಥ್ ದಾಸ್ ಅವರನ್ನು ಬ್ರಿಟೀಷ್ ಸಕರ್ಾರ ಜೈಲಿಗಟ್ಟಿತ್ತು. ಜೈಲಿನಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಆಂಗ್ಲ ಸಕರ್ಾರ ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿತ್ತು. ಜತೀಂದ್ರನಾಥ್ ಅವರು ಜೈಲಿನಲ್ಲಿ ಯುರೋಪ್ ಖೈದಿಗಳಂತೆ ತಮಗೂ ಸಮಾನ ಹಕ್ಕು ಬೇಕೆಂದು ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದರು. 63ನೇ ದಿನ ಇವರು ತೀರಿಕೊಂಡರು. ಜತೀಂದ್ರನಾಥ್ ಅವರ ಅಂತಿಮ ಸಂಸ್ಕಾರದ ಯಾತ್ರೆಯನ್ನು ದುಗರ್ಾಭಾಬಿ ಲಾಹೋರಿನಿಂದ ಕೋಲ್ಕತ್ತಾದವರೆಗೆ ಮುನ್ನಡೆಸಿದ್ದರು!


ಇದರ ಜೊತೆ-ಜೊತೆಗೆ ದುಗರ್ಾವತಿಯವರು ತಮ್ಮಲ್ಲಿರುವ ಜ್ಞಾನವನ್ನು ಬೇರೆಯವರಿಗೂ ಹಂಚಬೇಕೆಂದು ಶಾಲೆಯನ್ನು ತೆರೆಯಲು ಮುಂದಾದರು. ಅವರು ಶಾಲೆ ತೆರೆದಾಗ ಬರುತ್ತಿದ್ದುದು ಕೇವಲ ನಾಲ್ಕು ವಿದ್ಯಾಥರ್ಿಗಳು. ಬರು-ಬರುತ್ತಾ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಾ ಸಾಗಿತು! ಕ್ರಾಂತಿಕಾರಿಗಳ ಪ್ರತಿ ಯೋಜನೆಯಲ್ಲೂ ದುಗರ್ಾಭಾಬಿಯ ಸಹಾಯ ಎದುರಾಗುತ್ತಿತ್ತು. ಬಾಂಬನ್ನು ತಯಾರಿಸುವ ಕಲೆಯನ್ನೂ ದುಗರ್ಾವತಿ ಕಲಿತುಕೊಂಡರು.
ಸೈಮನ್ ಕಮೀಷನ್ನನ್ನು ವಿರೋಧಿಸಿ ನಡೆದ ಸಭೆಗೆ ದುಗರ್ಾವತಿ ದೇವಿ ಅಧ್ಯಕ್ಷ ಸ್ಥಾನವನ್ನು ವಹಿಸಿದರು. ಈ ಸಭೆಯಲ್ಲಿಯೇ ಸ್ಕಾಟ್ನನ್ನು ಹತ್ಯೆಗೈಯ್ಯುವ ಶಪಥ ಮಾಡಿದರು ಭಗತ್ಸಿಂಗ್ ಮತ್ತು ಸುಖದೇವ್. ಆದರೆ ಗುರಿ ತಪ್ಪಿತು. ತಪ್ಪಿದ ಗುರಿ ಸ್ಯಾಂಡಸರ್್ನನ್ನು ಬಲಿತೆಗೆದುಕೊಂಡಿತು. ಈ ಹತ್ಯೆಯ ಆರೋಪದಡಿಯಲ್ಲಿ ಆಂಗ್ಲ ಸಕರ್ಾರ ಭಗತ್ಸಿಂಗ್ ಮತ್ತು ಸುಖದೇವ್ರನ್ನು ಜೈಲಿಗಟ್ಟಲು ಕಾದು ಕುಳಿತಿತ್ತು. ಆದರೆ, ಮಾರುವೇಷದಲ್ಲಿದ್ದ ಭಗತ್ನ ಪತ್ನಿಯಾಗಿ ನಟಿಸಿ, ಅವರಿಬ್ಬರೂ ಸುರಕ್ಷಿತವಾಗಿ ತಪ್ಪಿಸಿಕೊಳ್ಳುವಂತೆ ಮಾಡಿದವರು ಈ ಧೀರಮಾತೆ ದುಗರ್ಾಭಾಬಿ! ಇವರು ತನ್ನ ಆಭರಣಗಳನ್ನೂ ಮಾರಿ ಭಗತ್ಸಿಂಗ್ ಮತ್ತವರ ಸಂಗಡಿಗರ ನೆರವಿಗೆ ನಿಂತರು! ಈ ಹೊತ್ತಿನಲ್ಲಿಯೇ ಭಗವತಿ ಚರಣ್ ತೀರಿಕೊಂಡ. ಧೃತಿಗೆಡದ ದುಗರ್ಾದೇವಿ ತನ್ನ ಕ್ರಾಂತಿ ಹೆಜ್ಜೆಯನ್ನು ಮುನ್ನಡೆಸಿದಳು!

ಭಗತ್ಸಿಂಗ್ ಮತ್ತು ಸುಖದೇವ್ರು ಜೈಲಿಗೆ ಹೋದ ನಂತರ ದುಗರ್ಾವತಿ ದೇವಿಯವರು ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ನ ಕಾರ್ಯಶೈಲಿಯ ಬದಲಾವಣೆಯಲ್ಲಿ ನಿರತರಾದರು. ನಂತರ ಸುಮ್ಮನೆ ಕೂರದ ದುಗರ್ಾಭಾಬಿ ಲಾಡರ್್ ಹೈಲಿಯನ್ನು ಹತ್ಯೆಗೈಯ್ಯಲು ಮುಂದಾದರು. ಲಾಡರ್್ ಹೈಲಿಯ ಜೊತೆಗಾರರು ಹತ್ಯೆಗೊಳಗಾದರು; ಆತ ಬದುಕಿಬಿಟ್ಟ. ಆಂಗ್ಲ ಸಕರ್ಾರ ಆಕೆಯನ್ನು ಬಂಧಿಸಿ ಮೂರು ವರ್ಷ ಜೈಲಿಗಟ್ಟಿತು! ನಂತರದ ದಿನಗಳಲ್ಲಿ ಆಕೆಯ ವಿರುದ್ಧ ಹೆಚ್ಚು ಸಾಕ್ಷ್ಯಗಳು ಸಿಗದಿದ್ದ ಕಾರಣ ಬಿಡುಗಡೆಗೊಳಿಸಬೇಕಾಗಿ ಬಂತು.


ಸ್ವಾತಂತ್ರ್ಯಕ್ಕಾಗಿಯೇ ತನ್ನೆಲ್ಲವನ್ನು ಅಪರ್ಿಸಿದ ಜೀವ, ಭಾರತ ಸ್ವಾತಂತ್ರ್ಯಗೊಂಡ ನಂತರ ಸಾಮಾನ್ಯ ಜೀವನವನ್ನು ನಡೆಸಿತು. ಲಕ್ನೋನಲ್ಲಿ ಬಡ ಮಕ್ಕಳಿಗಾಗಿ ಶಾಲೆಯೊಂದನ್ನು ತೆರೆದು ಸೇವೆಯತ್ತ ಹೆಜ್ಜೆ ಹಾಕಿದಳು ಧೀರಮಾತೆ ದುಗರ್ಾವತಿ! 92 ವರ್ಷಗಳ ತುಂಬು ಜೀವನ ನಡೆಸಿದ ದುಗರ್ಾಭಾಬಿ 1999ರ ಅಕ್ಟೋಬರ್ 15 ರಂದು ಗಾಜಿಯಾಬಾದ್ನಲ್ಲಿ ಕೊನೆಯುಸಿರೆಳೆದರು. ಆದರೆ, ಭಾರತಕ್ಕಾಗಿಯೇ ತನ್ನ ಜೀವ ಸವೆಸಿದ ದುಗರ್ಾಭಾಬಿಯನ್ನು ಭಾರತೀಯರು ಇಂದು ಮರೆತು ಕುಳಿತಿದ್ದಾರೆ!!

1 Comment

1 Comment

  1. ಶಶಿಕಲಾ. ಎಸ್.

    May 18, 2019 at 3:34 pm

    Very Sad.

Leave a Reply

Your email address will not be published. Required fields are marked *

Most Popular

To Top