National

ಕೊರೋನಾ ಹೊರಗೆ, ರಾಮಾಯಣ ಒಳಗೆ!

80ರ ದಶಕದ ಕೊನೆಯ ಭಾಗ. ರಮಾನಂದ ಸಾಗರರ ರಾಮಾಯಣ ದೂರದರ್ಶನದಲ್ಲಿ ಬೆಳಗಿನ ಹೊತ್ತು ಪ್ರಸಾರವಾಗುತ್ತಿತ್ತು. ಅದೊಂದು ಅಘೋಷಿತ ಕಫ್ಯರ್ೂ ನಿಮರ್ಾಣವಾಗುತ್ತಿದ್ದ ಹೊತ್ತು. ಮೊದಲ ಎಂಟ್ಹತ್ತು ನಿಮಿಷಗಳ ಜಾಹಿರಾತು ಮುಗಿದಮೇಲೆ ಅಡೆತಡೆಯಿಲ್ಲದ ದೃಶ್ಯ ನೋಡಲು ಸಿಗುತ್ತಿತ್ತು. ಊರಿನ ಅಂಗಡಿಗಳು ತೆರೆಯುವ ವೇಳೆಯಿಂದ ಹಿಡಿದು ಕ್ಯಾಬಿನೆಟ್ಟಿನ ಅತೀ ಮುಖ್ಯ ಮೀಟಿಂಗ್ನವರೆಗೂ ಈ ಸಮಯಕ್ಕೆ ಹೊಂದಾಣಿಸಿಕೊಂಡೇ ಮಾಡಲಾಗುತ್ತಿತ್ತು! ರಾಮಾಯಣ ಅಷ್ಟು ಭಾರತೀಯ ಚಿಂತನೆಗಳಲ್ಲಿ ಹಾಸುಹೊಕ್ಕಾಗಿರುವಂಥದ್ದು. ಯಾರು ಎಷ್ಟೇ ಅಲ್ಲಗಳೆದರೂ ರಾಮಾಯಣವನ್ನು ಧಿಕ್ಕರಿಸುತ್ತೇವೆಂದು ನಿಶ್ಚಯ ಮಾಡುವವರೂ ಚೆನ್ನಾಗಿರುವ ಅಣ್ಣ-ತಮ್ಮಂದಿರ ಬಾಂಧವ್ಯವನ್ನು ನೋಡಿದಾಕ್ಷಣ ‘ರಾಮ-ಲಕ್ಷ್ಮಣರಂತೆ ಇದ್ದಾರೆ ನೋಡು’ ಎಂದೇ ಹೇಳುತ್ತಾರೆ. ಎಡಪಂಥೀಯ ವಿಚಾರಧಾರೆಗಳಿಗೆ ಬಲಿಬಿದ್ದು ರಾವಣನ ಪೂಜೆ ಮಾಡುವವರೂ ರಾವಣ-ಕುಂಭಕರ್ಣರಂತೆ ಇದ್ದಾರೆ ಎಂದು ಹೇಳಿಬಿಡುವುದಿಲ್ಲ. ಇದು ಅಂತನರ್ಿಹಿತವಾಗಿರುವ ರಾಮಾಯಣದೊಲವು. ಅಪ್ಪನಿಗೆ ತಕ್ಕ ಮಗನಾಗಿ ಇಂದ್ರಜಿತ್ ಇದ್ದಾಗಲೂ ತಂದೆ-ಮಕ್ಕಳ ಬಾಂಧವ್ಯಕ್ಕೆ ದಶರಥ-ರಾಮರೇ ಸಮರ್ಥ ಉದಾಹರಣೆಯಾಗುವುದು. ಎದೆ ಮೇಲೆ ಕೈ ಇಟ್ಟುಕೊಂಡು ಹೇಳಿ ಲಾಕ್ಡೌನ್ ಅವಧಿಯನ್ನು ಎಷ್ಟು ಜನ ‘ಇದೊಳ್ಳೆ ವನವಾಸ’ ಎಂದುದ್ಘರಿಸುವುದಿಲ್ಲ! ಬಹುತೇಕ ಮಾಧ್ಯಮಗಳು ಮನೆಯೊಳಗೇ ಇರಿ ಎಂಬುದನ್ನು ಮೋದಿ ಎಳೆದ ಲಕ್ಷ್ಮಣರೇಖಾ ಎಂದೇ ಬರೆದವಲ್ಲವೇ? ಹೀಗಾಗಿಯೇ ಜಗತ್ತಿನ ಯಾವುದೇ ಮಹಾಕಾವ್ಯಗಳಿಗಿಂತಲೂ ಹೆಚ್ಚು ದೀರ್ಘವಾಗಿ, ಹೆಚ್ಚು ಆಳವಾಗಿ ಆವರಿಸಿಕೊಂಡಿರುವ ಸಾಹಿತ್ಯ ರಾಮಾಯಣವೇ ಎನ್ನುವುದರಲ್ಲಿ ಜಾಗತಿಕ ಮಟ್ಟದ ವಿದ್ವಾಂಸರಲ್ಲೂ ಅನುಮಾನವಿಲ್ಲ. ಸುಮ್ಮನೆ ಅವಗಹನೆಗೆಂದು ಹೇಳಬೇಕೆಂದರೆ, ವಾಲ್ಮೀಕಿ ರಾಮಾಯಣದ ಏಳು ಕಾಂಡಗಳು 24,000 ಶ್ಲೋಕಗಳನ್ನೊಳಗೊಂಡಿದೆ. ಇದು ಜಗತ್ತಿನ ಮಹಾಕಾವ್ಯಗಳೆಂದು ಗುರುತಿಸಲ್ಪಡುವ ಇಲಿಯಡ್ ಮತ್ತು ಒಡಿಸ್ಸಿ ಎರಡನ್ನೂ ಸೇರಿಸಿ ಅದರ ನಾಲ್ಕು ಪಟ್ಟಿನಷ್ಟಾಗುತ್ತದೆ. ಕ್ರಿಶ್ಚಿಯನ್ನರ ಬೌದ್ಧಿಕ ಆಕ್ರಮಣಕ್ಕೆ ಒಳಗಾದ ನಂತರವೂ ರಾಮಾಯಣ ಬರೆಯಲ್ಪಟ್ಟು ಮೂರು ಸಾವಿರ ವರ್ಷಗಳಾಯ್ತು ಎನ್ನುತ್ತಾರೆ. ವಿಜ್ಞಾನಿಗಳು ದೃಢಪಡಿಸುವ ಲೆಕ್ಕದ ಆಧಾರದ ಮೇಲೆ ಎಂಟೇ ಸಾವಿರ ವರ್ಷವಾಯ್ತು ಎಂದು ಭಾವಿಸುವುದಾದರೂ ಅಷ್ಟು ದೀರ್ಘಕಾಲದಿಂದಲೂ ರಾಮ-ರಾವಣರು, ಸೀತೆ-ಹನುಮರು, ಭಾರತದ ಸ್ಮೃತಿ ಪಟಲದಲ್ಲಿ ಉಳಿದು ಹೋಗಿರುವುದು ಅಚ್ಚರಿಯೇ ಸರಿ!


ವಾಲ್ಮೀಕಿ ರಾಮಾಯಣವನ್ನು ಬರೆಯಲುಪಕ್ರಮಿಸಿದ್ದೇ ಬಲು ವಿಶಿಷ್ಟವಾದ ಸಂಗತಿ. ಸಮಾಗಮಕ್ಕೆ ಸಿದ್ಧತೆ ನಡೆಸಿಕೊಂಡಿದ್ದ ಕ್ರೌಂಚ ಪಕ್ಷಿಗಳಲ್ಲಿ ಬೇಡನ ಬಾಣಕ್ಕೆ ತಾಕಿ ಒಂದು ಪಕ್ಷಿ ಸತ್ತು ಬಿದ್ದಾಗ ಹುಟ್ಟಿಕೊಂಡ ಶೋಕ ಕಾವ್ಯದ ಮೊದಲ ಹೆಜ್ಜೆಯಾಗಿ ಶ್ಲೋಕ ರೂಪವನ್ನು ಪಡೆಯಿತಂತೆ. ಅಲ್ಲಿಂದಾಚೆಗೆ ಅದೇ ಛಂದಸ್ಸಿನಲ್ಲಿ ರೂಪುಗೊಂಡ ಈ ಮಹಾಕಾವ್ಯ ಆನಂತರ ಸಂಸ್ಕೃತದಲ್ಲೇ ಭಿನ್ನ-ಭಿನ್ನ ರೂಪಾಂತರಗಳನ್ನು ಪಡೆಯಿತು. ವಾಲ್ಮೀಕಿ ಆದಿಕವಿ ಎಂದು ಗೌರವಿಸಲ್ಪಟ್ಟರಲ್ಲದೇ ರಾಮನನ್ನು ತಮ್ಮದ್ದೇ ದೃಷ್ಟಿಕೋನದಿಂದ ನೋಡಿದ ಜನ ಆತನ ವ್ಯಕ್ತಿತ್ವವನ್ನು ಭಿನ್ನ-ಭಿನ್ನ ಸ್ವರೂಪಗಳಲ್ಲಿ ಸಮಾಜದ ಮುಂದಿರಿಸಿದರು. ತುಳಸೀದಾಸರ ರಾಮಚರಿತ ಮಾನಸ ಉತ್ತರ ಭಾರತದಲ್ಲಿ ಇಂದಿಗೂ ಹಾಸುಹೊಕ್ಕಾಗಿರುವಂಥದ್ದು. ತಮಿಳಿನ ಕಂಬ ರಾಮಾಯಣ ದಕ್ಷಿಣದಲ್ಲಿ ವಾಲ್ಮೀಕಿ ರಾಮಾಯಣಕ್ಕೆ ಸಂವಾದಿಯಾಗಿ ನಿಲ್ಲುವಂಥದ್ದು. ಒಟ್ಟಾರೆ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ರಾಮ ಭಾರತವನ್ನು ಪ್ರತಿನಿಧಿಸುವ ಮೂತರ್ಿಯಾಗಿ ನಿಲ್ಲುತ್ತಾನೆ.


ರಾಮಾಯಣವೆನ್ನುವುದು ಭಾರತದ ಒಟ್ಟಾರೆ ಬದುಕಿನ ಸ್ವರೂಪವೇ ಸರಿ. ಅಂದಿನ ಕಾಲದಲ್ಲಿ ಭಾರತದ ಪ್ರಾಮಾಣಿಕತೆ, ಸತ್ಯಸಂಧತೆ, ಇತರರ ಮೇಲಿಟ್ಟಿರುವ ಪ್ರೀತಿ, ಜನರ ವಿಶ್ವಾಸ ಗಳಿಸುವ ರೀತಿ, ರಾಜ ಪ್ರಜೆಗಳೊಂದಿಗೆ ನಡೆಸುವ ವ್ಯವಹಾರ, ಅರ್ಥವ್ಯವಸ್ಥೆ, ಸಮಾಜದಲ್ಲಿ ತ್ಯಾಗಿಗಳಿಗಿದ್ದ ಗೌರವ, ಮಾತೃಭಕ್ತಿ, ಪಿತೃವಾಕ್ಯ ಪರಿಪಾಲನೆ, ಪಾವಿತ್ರ್ಯ ಇಂತಹ ಅನೇಕ ಗುಣಗಳ ಪರಿಚಯ ಮಾಡಿಕೊಡುತ್ತದೆ. ಹಾಗೆ ನೋಡಿದರೆ ಕಾವ್ಯವೊಂದು ಅಂದಿನ ದಿನಗಳ ಪ್ರತಿಬಿಂಬವೋ ಅಥವಾ ಕಾವ್ಯಗಳನ್ನೋದಿ ಜನ ಹಾಗೆ ನಡೆದುಕೊಳ್ಳುತ್ತಾರೋ ಎನ್ನುವುದು ಉತ್ತರ ಸಿಗದ ಪ್ರಶ್ನೆಯೇ. ಆದರೆ ರಾಮಾಯಣದ ವಿಷಯದಲ್ಲಿ ಮಾತ್ರ ಎರಡೂ ಸತ್ಯ. ಅದು ಪ್ರಾಚೀನ ಭಾರತಕ್ಕೆ ಹಿಡಿದ ಕೈಗನ್ನಡಿ ಎಂಬುದು ಒಂದಾದರೆ ಇಂದಿನ ಭಾರತ ತನ್ನನ್ನು ರೂಪಿಸಿಕೊಳ್ಳಬೇಕಾದ ರೀತಿಗೆ ಮಾರ್ಗದಶರ್ಿ ಎಂಬುದು ಮತ್ತೊಂದು. ಲೌಕಿಕವಾಗಿ ರಾಮಾಯಣ ರಾಮನ ಕಥೆ ಎಂದಷ್ಟೇ ಭಾವಿಸಿದರೆ ಸಾಕಷ್ಟು ಮೌಲ್ಯಗಳ ಕಂತೆಯನ್ನು ಕೊಡುವುದೇನೋ ನಿಜ, ಆದರೆ ಈ ಇಡಿಯ ಕಥನಕ್ಕೆ ಅಲೌಕಿಕವಾದ ಬೆರಗೂ ಇದೆ ಎಂಬುದನ್ನು ಅನೇಕರು ಭಿನ್ನ-ಭಿನ್ನ ಸ್ವರೂಪಗಳಲ್ಲಿ ಪ್ರಸ್ತುತಪಡಿಸುತ್ತಾರೆ. ಸ್ವಾಮಿ ವಿವೇಕಾನಂದರು ರಾಮನನ್ನು ಪರಮಾತ್ಮವೆಂದು, ಸೀತೆಯನ್ನು ಜೀವಾತ್ಮ ಎಂದೂ ಗುರುತಿಸುತ್ತಾರೆ. ಈ ದೇಹವೇ ಲಂಕಾಪುರ. ಜೀವಾತ್ಮ ಸೀತೆ ಅದರಲ್ಲಿ ಬಂಧಿ. ಜೀವಾತ್ಮಕ್ಕೆ ಪರಮಾತ್ಮನನ್ನು ಸೇರಿಕೊಳ್ಳುವ ತವಕ, ತಿಪ್ಪರಲಾಗ ಹೊಡೆದರೂ ದೇಹದೊಂದಿಗೆ ತನ್ನನ್ನು ಗುರುತಿಸಿಕೊಳ್ಳಲು ಅದು ಒಪ್ಪುತ್ತಿಲ್ಲ. ಅತ್ತ ಪರಮಾತ್ಮನ ಸೇರಲು ರಾಕ್ಷಸರು ಬಿಡುತ್ತಿಲ್ಲ. ಇನ್ನು ಈ ಲಂಕಾಪುರದೊಳಗೆ ವಿಭೀಷಣನೆಂಬ ಸತ್ವ, ರಾವಣನೆಂಬ ರಜಸ್ಸು ಮತ್ತು ಕುಂಭಕರ್ಣನೆಂಬ ತಮೋ ಗುಣಗಳಿವೆ. ರಾಕ್ಷಸರೊಂದಿಗೆ ಜೀವಾತ್ಮ-ಪರಮಾತ್ಮರ ಮಿಲನಕ್ಕೆ ಇವೂ ಅಡ್ಡಿಯೇ. ಹನುಮಂತನೆಂಬ ಗುರು ಬ್ರಹ್ಮಜ್ಞಾನವೆಂಬ ಪರಮಾತ್ಮನುಂಗುರವನ್ನು ಜೀವಾತ್ಮನಿಗೆ ತೋರಿಸಿ ವಿಶ್ವಾಸ ಮುಂದುವರೆಯುವಂತೆ ಮಾಡುತ್ತಾನೆ. ಇದು ಎಲ್ಲ ಭ್ರಮೆಗಳನ್ನು ಕಳಚಿ ಹಾಕಿ ಜೀವಾತ್ಮ ಮತ್ತು ಪರಮಾತ್ಮನ ಬೆಸುಗೆಗೆ ಬೇಕಾಗಿರುವ ಭೂಮಿಕೆಯನ್ನು ನಿಮರ್ಾಣ ಮಾಡಿಕೊಡುತ್ತದೆ. ಸ್ವಾಮಿ ವಿವೇಕಾನಂದರು ಇಡಿಯ ರಾಮಾಯಣವನ್ನು ಶ್ರೀಕೃಷ್ಣನ ಗೀತಾಸಾರಕ್ಕೆ ಜೋಡಿಸಿ ಹೇಳುವುದು ಅದೆಷ್ಟು ಮೋಹಕವಲ್ಲವೇ?!


ಈ ಮೋಹ ಭಾರತೀಯ ಇತಿಹಾಸವನ್ನೇ ತಿರುಚಿ ತನ್ನಿಚ್ಛೆಗೆ ತಕ್ಕಂತೆ ಬಳಸಿಕೊಂಡ ಜೆಎನ್ಯು ಪ್ರೊಫೆಸರ್ ರೊಮಿಲಾ ಥಾಪರ್ರನ್ನೂ ಬಿಡಲಿಲ್ಲ. ಅವರು ರಾವಣ ಅಪಹರಿಸಿಕೊಂಡು ಹೋದದ್ದು ಸೀತೆಯ ನೆರಳನ್ನೇ ಹೊರತು ಸೀತೆಯನ್ನಲ್ಲ. ಅದು ಮಾಯಾರೂಪ ಎಂಬ ಅದ್ವೈತದ ಚಿಂತನೆಯನ್ನು ತನ್ನ ‘ಕಲ್ಚರಲ್ ಪಾಸ್ಟ್ಸ್’ ಎಂಬ ಪುಸ್ತಕದಲ್ಲಿ ವಿವರಿಸುತ್ತಾರಲ್ಲದೇ ಕಾಡಿನಲ್ಲಿ ಲಕ್ಷ್ಮಣ ಮತ್ತು ರಾಮರ ನಡುವೆ ಆಕೆ ಇದ್ದದ್ದು ಜೀವಾತ್ಮ ಮತ್ತು ಪರಮಾತ್ಮರ ನಡುವಿನ ಮಾಯಾ ಸ್ವರೂಪದಲ್ಲಿ ಎಂದೂ ಹೇಳುತ್ತಾರೆ. ಬಹುಶಃ ಸೀತೆ ಇಡೀ ರಾಮಾಯಣದಲ್ಲಿ ಎಲ್ಲರನ್ನೂ ಸೆಳೆಯುವ ವ್ಯಕ್ತಿತ್ವ. ರಾಮನ ಯಾತ್ರೆ ಎಂಬ ಅರ್ಥದಲ್ಲಿ ರಾಮಾಯಣ ಎನ್ನುವ ಹೆಸರಿರುವುದು ನಿಜವಾದರೂ ಕಥನದ ಕೊನೆಯಲ್ಲಿ ಮನಸ್ಸಿನಲ್ಲುಳಿಯುವುದು ಸೀತೆಯೇ. ಸ್ವಾಮಿ ವಿವೇಕಾನಂದರೇ ಒಂದೆಡೆ ಉದ್ಗರಿಸುತ್ತಾ, ಜಗತ್ತಿನ ಅಷ್ಟೂ ಪುಸ್ತಕಗಳನ್ನು ತೆಗೆದು ನೋಡಿದರೂ ಸೀತೆಯಂತಹ ಮತ್ತೊಂದು ವ್ಯಕ್ತಿತ್ವ ಸಿಗಲು ಸಾಧ್ಯವೇ ಇಲ್ಲ. ಅಷ್ಟು ವಿಭಿನ್ನ ಮತ್ತು ವಿಶೇಷ ಆಕೆ ಎನ್ನುತ್ತಾರಲ್ಲದೇ ಜಗತ್ತಿನಲ್ಲಿ ರಾಮನಂಥವರು ಬೇಕಾದಷ್ಟು ಸಿಗಬಹುದು ಆದರೆ ಸೀತೆ ಮಾತ್ರ ಒಬ್ಬಳೇ ಎನ್ನುತ್ತಾರೆ! ಆಕೆ ಭಾರತೀಯ ಸ್ತ್ರೀತ್ವದ ಆದರ್ಶ, ಕಾಣ್ಕೆ ಎಂದೆಲ್ಲಾ ಆಕೆಯನ್ನು ಕೊಂಡಾಡುತ್ತಾರೆ. ಆಕೆ ಪಾವಿತ್ರ್ಯಕ್ಕಿಂತಲೂ ಪವಿತ್ರ. ಎಲ್ಲ ನೋವುಗಳನ್ನು ತಾಳ್ಮೆಯಿಂದ ಗೊಣಗಾಟವಿಲ್ಲದೇ ಸಹಿಸಿಕೊಂಡವಳು. ಭಾರತದ ಪ್ರತಿಯೊಬ್ಬ ಹೆಣ್ಣುಮಗಳ ರಕ್ತದ ಕಣಕಣದಲ್ಲೂ ಆಕೆ ಹರಿಯುತ್ತಿದ್ದಾಳೆ ಎಂಬುದನ್ನೂ ಅವರು ಗುರುತಿಸುತ್ತಾರೆ. ಮಹಾತ್ಮಾ ಗಾಂಧೀಜಿಯವರು ಈ ಕಾರಣಕ್ಕೇ ಭಾರತದ ಸ್ತ್ರೀಯರು ಶಕ್ತಿಗಾಗಿ ಮತ್ತು ಮಾರ್ಗದರ್ಶನಕ್ಕಾಗಿ ಸೀತಾ, ದ್ರೌಪದಿ, ಸಾವಿತ್ರಿ, ದಮಯಂತಿಯರತ್ತ ದೃಷ್ಟಿ ಹಾಯಿಸಬೇಕೇ ಹೊರತು ಗ್ರೀಕ್ ಪುರಾಣಗಳ ಅಮೇಜಾನ್, ಪ್ರೂಡ್ಗಳತ್ತ ಅಲ್ಲ ಎಂದು ಹೇಳುತ್ತಾರೆ. ಗಾಂಧೀಜಿಯವರ ರಾಮರಾಜ್ಯದ ಕಲ್ಪನೆ ರಾಮಾಯಣದಿಂದಲೇ ಸ್ವೀಕಾರ ಮಾಡಿರುವಂಥದ್ದು. ಗಾಂಧೀಜಿಯವರನ್ನು ಸದಾ ಉಲ್ಲೇಖಿಸುವ ಕಾಂಗ್ರೆಸ್ಸಿಗರು ರಾಮರಾಜ್ಯ ಎಂಬ ಪದದಿಂದಲೇ ಉರಿದುಬೀಳುತ್ತಾರೆ ಎಂಬುದು ನಿಜಕ್ಕೂ ಹಾಸ್ಯಾಸ್ಪದವಾದ ಸಂಗತಿ!


ರಾಮಾಯಣ ಇಷ್ಟು ಸಾವಿರ ವರ್ಷಗಳಿಂದ ಉಳಿದು ಬಂದ ನಂತರವೂ ಅದು ಗೊಡ್ಡು ಪುರಾಣವಾಗಿ ಕೇವಲ ಕಥಾನಕವಾಗಿ ನಮ್ಮ ಮುಂದೆ ಪ್ರಸ್ತುಗೊಂಡಿದ್ದು ಯಾವಾಗ? ಅದಕ್ಕೊಂದು ಹಿನ್ನೆಲೆ ಇದೆ. ನಂದಿತಾ ಕೃಷ್ಣನ್ ಓಪನ್ ಮ್ಯಾಗ್ಜಿನ್ನಲ್ಲಿ ಈ ಕುರಿತಂತೆ ಸೂಕ್ಷ್ಮ ಉಲ್ಲೇಖ ಮಾಡುತ್ತಾರೆ. 19ನೇ ಶತಮಾನದ ಆರಂಭದಲ್ಲಿ ಭಾರತಕ್ಕೆ ಬಂದಿದ್ದ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಗಳು ಇಲ್ಲಿನ ಈ ಕಥಾನಕಗಳಿಂದ ಸಾಕಷ್ಟು ಪ್ರಭಾವಕ್ಕೆ ಒಳಗಾಗಿದ್ದರಂತೆ. ವಾರನ್ ಹೇಸ್ಟಿಂಗ್ಸ್ ಇಂಗ್ಲೀಷರಿಗಾಗಿ ಭಾರತವನ್ನು ಗೆದ್ದುಕೊಟ್ಟರೂ ಹಿಂದುತ್ವದ ಚಿಂತನೆಗಳು ಅವನನ್ನು ಗೆದ್ದುಬಿಟ್ಟಿದ್ದವಂತೆ. ಇಂಗ್ಲೀಷರ ಬ್ರಾಹ್ಮಣೀಕರಣ ಎಂದು ಇದನ್ನು ಸಂಬೋಧಿಸಲಾಗುತ್ತದೆ. 1806 ಮತ್ತು 08ರ ನಡುವೆ ಈಸ್ಟ್ ಇಂಡಿಯಾ ಕಂಪೆನಿ ಭಾರತದಿಂದ ಮರಳಿ ಬರುತ್ತಿರುವ ಬ್ರಿಟೀಷ್ ಅಧಿಕಾರಿಗಳಿಗಾಗಿ ಒಂದು ಚಚರ್ೆಯನ್ನು ಏರ್ಪಡಿಸಿತ್ತಂತೆ. ಹಿಂದೂಗಳ ನೈತಿಕ ಪ್ರಜ್ಞೆ, ಅವರಲ್ಲಿನ ಮೌಲ್ಯಗಳು ಇದರ ಕುರಿತಂತೆ ಈ ಅಧಿಕಾರಿಗಳ ಗ್ರಹಿಕೆಯನ್ನು ಅರಿಯುವ ಪ್ರಯತ್ನ ಅದು. ಕೆಲವರಂತೂ ನೂರು ಪುಟಗಳನ್ನು ಮೀರಬಲ್ಲಷ್ಟು ಪ್ರಬಂಧಗಳನ್ನೇ ಬರೆದು ಸಮಪರ್ಿಸಿದರಂತೆ. ಇದನ್ನು ನೋಡಿ ಗಾಬರಿಗೊಂಡ ಅಲ್ಲಿನ ಅಧಿಕಾರಿ ಗಣ ಈ ಭಾವನೆಯನ್ನು ತೊಡೆದು ಹಾಕಲೆಂದೇ 1813ರಲ್ಲಿ ಜೆ.ಎಸ್.ಮಿಲ್ ಮತ್ತು ಚಾಲ್ಸರ್್ ಗ್ರ್ಯಾಂಟ್ರನ್ನು ಬ್ರಿಟೀಷ್ ಭಾರತದ ಇತಿಹಾಸ ಬರೆಯಲು ನೇಮಿಸಿದರು. ಅದರಲ್ಲಿ ಎಲ್ಲ ಸಂಸ್ಕೃತ ಸಾಹಿತ್ಯವನ್ನು ಗೊಡ್ಡು ಪುರಾಣವೆಂದು ಜರಿಯಲಾಯ್ತು, ರಾಮ-ಕೃಷ್ಣರನ್ನು ಕಾಲ್ಪನಿಕ ವ್ಯಕ್ತಿ ಎಂದು ಕರೆಯಲಾಯ್ತು, ಅನೈತಿಕ ಆಚಾರಗಳು ಇವೆಲ್ಲಾ ಎಂದು ಬಿಂಬಿಸುವ ಪ್ರಯತ್ನ ಮಾಡಲಾಯ್ತು. ಮತ್ತು ಭಾರತಕ್ಕೆ ಬರಬೇಕಿರುವ ಪ್ರತಿಯೊಬ್ಬ ಅಧಿಕಾರಿಯೂ ಇದನ್ನು ಓದಲೇಬೇಕೆಂದು ತಾಕೀತೂ ಮಾಡಲಾಯ್ತು! ತಮಗಿಂತಲೂ ಪ್ರಬಲವಾದ ಮತ್ತು ಆಳಕ್ಕೆ ಬೇರೂರಿರುವ ಸಂಸ್ಕೃತಿಯೊಂದು ಜಗತ್ತಿನಲ್ಲಿದೆ ಎಂಬುದನ್ನು ಕ್ರಿಶ್ಚಿಯನ್ನರು ಒಪ್ಪುವುದಾದರೂ ಹೇಗೆ? ಅವರ ಜಗತ್ತು ಶುರುವಾಗುವುದೇ ಕ್ರಿಸ್ತನೊಂದಿಗಲ್ಲವೇ? ಅದಕ್ಕಿಂತಲೂ ಮುಂಚಿನ ಯಾವುದೇ ಸಾಹಿತ್ಯವೂ ಸಾಹಿತ್ಯವೇ ಅಲ್ಲ ಎಂಬ ಅವರ ಅವೈಜ್ಞಾನಿಕ ವಾದವನ್ನು ಭಾರತದ ವಿಜ್ಞಾನದ ವಿದ್ಯಾಥರ್ಿಗಳೂ ಇಂದಿಗೂ ನಂಬುತ್ತಾರೆಂಬುದೇ ದುರಂತಕಾರಿ ಸಂಗತಿ. ರಾಮ ನಡೆದಾಡಿದ ದಾರಿಯನ್ನು ವಾಲ್ಮೀಕಿ ಸಾಹಿತ್ಯ ಮತ್ತು ಇಂದಿನ ಭೂಗೋಳದೊಂದಿಗೆ ತುಲನೆ ಮಾಡಿ ನೋಡಿದರೆ ಅಚ್ಚರಿ ಅನಿಸುವಷ್ಟು ಸಾಮ್ಯತೆ ಕಂಡು ಬರುತ್ತದೆ. ವಾಲ್ಮೀಕಿ ವಿವರಿಸಿರುವ ಕಾಡಿನ ಮರಗಳು, ಪ್ರಾಣಿಗಳ ಪ್ರಭೇದಗಳು ಇಂದಿಗೂ ಕಾಣಸಿಗುತ್ತವೆ. ದಾರಿಯುದ್ದಕ್ಕೂ ಅವರು ವಿವರಿಸಿರುವ ಬುಡಕಟ್ಟು ಜನಾಂಗದ ಇಂದಿನ ಪೀಳಿಗೆ ನೋಡಲು ಸಿಗುವುದಷ್ಟೇ ಅಲ್ಲದೇ ಆಯಾ ಜನಾಂಗಗಳಿಗೆ ತಾವು ರಾಮನ ಪಾದಸ್ಪರ್ಶದಿಂದ ಪುನೀತಗೊಂಡ ಸ್ಥಳದಲ್ಲಿ ಇದ್ದೇವೆ ಎಂಬ ಭಾವನೆ ಈಗಲೂ ಇದೆ. ಹಂಪಿ ನಮ್ಮ ಪಾಲಿಗೆ ಪವಿತ್ರಕ್ಷೇತ್ರ. ಸಮಸ್ಯೆ ಬರುವುದು ಹನುಮಂತನ ವಿಚಾರದಲ್ಲೇ. ಮಂಗವೊಂದು ಹಾರಲು ಸಾಧ್ಯವೇ ಎಂಬುದನ್ನು ಆಡಿಕೊಂಡು ನಗುತ್ತಾರೆ. ಆದರೆ ರಾಮಾಯಣದಲ್ಲಿ ಆಂಜನೇಯನನ್ನು ಮಂಗವೆಂದು ಕರೆದಿಲ್ಲ, ಬದಲಿಗೆ ವಾನರ ಅಥವಾ ವನನರ ಎಂದೇ ಹೇಳಲಾಗುತ್ತದೆ. ಅದೊಂದು ವಿಶೇಷವಾದ ಪ್ರಭೇದ ಎಂಬ ಭಾವದಲ್ಲಿ. ಏಸುಕ್ರಿಸ್ತ ನೀರಿನ ಮೇಲೆ ನಡೆದಿದ್ದನ್ನು ಬಹಳ ಹೆಮ್ಮೆಯಿಂದ ಓದುವ ಜನಕ್ಕೆ ಆಂಜನೇಯ ನೀರಿನ ಮೇಲೆ ಹಾರಿದ ಎಂದು ನಂಬುವುದು ಕಷ್ಟ! ಇರಲಿ ಬಿಡಿ. ರಾಮೇಶ್ವರದಿಂದ ಲಂಕೆಗೆ ನಿಮರ್ಿಸಲ್ಪಟ್ಟಿರುವ ಸೇತುವೆ ಮಾನವನಿಂದ ನಿಮರ್ಾಣಗೊಂಡಿದ್ದು ಎಂಬುದಕ್ಕೆ ಉಪಗ್ರಹಗಳೂ ಸೇರಿದಂತೆ ಅನೇಕ ಅಧ್ಯಯನಗಳು ಪುಷ್ಟಿಕೊಡುತ್ತವೆ. ಶ್ರೀಲಂಕಾ 30ಕ್ಕೂ ಹೆಚ್ಚು ಕ್ಷೇತ್ರಗಳನ್ನು ರಾಮಾಯಣಕ್ಕೆ ಸಂಬಂಧ ಪಟ್ಟಿದ್ದೆಂದು ಗುರುತಿಸಿ ಸಮಾಜದ ಮುಂದಿಟ್ಟಿದೆ. ಅಲ್ಲಿನ ಜನಕ್ಕೆ ಈಗಲೂ ಸೀತೆಯ ಮೇಲೆ ಅಪಾರ ಗೌರವ. ಇಷ್ಟೆಲ್ಲಾ ಇರುವಾಗಲೂ ಕೆಲವರಿಗೆ ರಾಮ, ರಾಮಾಯಣಗಳನ್ನು ಕಂಡರೆ ಅಲಜರ್ಿ. ಏಕೆ ಗೊತ್ತೇನು? ಒಂದು ಸಾವಿರ ವರ್ಷಗಳ ಕಾಲದ ಮುಸಲ್ಮಾನರ ಬರ್ಬರ ಆಡಳಿತ, ಸುಮಾರು 400 ವರ್ಷಗಳ ಕಾಲ ಕ್ರಿಶ್ಚಿಯನ್ನರ ಘೋರ ಆಡಳಿತದ ನಡುವೆಯೂ ರಾಮನನ್ನು ಹಿಂದೂವಿನ ಮನಸ್ಸಿನಿಂದ ಒಂದಿಂಚೂ ಅಲುಗಾಡಿಸಲು ಸಾಧ್ಯವಾಗಲಿಲ್ಲ. ಈಗಲೂ ರಾಮಮಂದಿರವೆಂದರೆ ನಿದ್ದೆ ಕಣ್ಣಲ್ಲೂ ಅವನು ಎದ್ದು ಕುಳಿತುಕೊಳ್ಳುತ್ತಾನೆ. ರಾಮನವಮಿ ಅವನಿಗೆ ಅತ್ಯಂತ ಪವಿತ್ರ. ನಮ್ಮೂರಿಗೆ ರಾಮ ಬಂದು ಹೋಗಿದ್ದ ಎಂದು ಹೇಳಿಕೊಳ್ಳುವುದಕ್ಕೆ ಈ ದೇಶದ ಏಳು ಲಕ್ಷ ಹಳ್ಳಿಗಳಿಗೂ ಆಸ್ಥೆ ಇದೆ. ಅಷ್ಟೇ ಅಲ್ಲ, ಈಗಲೂ ರಾಮ-ಸೀತೆಯರ ಹೆಸರನ್ನು ತಮ್ಮ ಮಕ್ಕಳಿಗೆ ಇಡುವಾಗ ಹೆಮ್ಮೆ ಪಡುತ್ತಾರೆ. ವಿದ್ರೋಹಿಗಳಿಗೆ ಚೆನ್ನಾಗಿ ಗೊತ್ತು ರಾಮನನ್ನು ಹಿಂದುವಿನ ಹೃದಯದಿಂದ ತೆಗೆಯದಿದ್ದರೆ ಹಿಂದುತ್ವವನ್ನು ಕೊನೆಗಾಣಿಸುವುದು ಕಷ್ಟ ಅಂತ. ಆದರೇನು ಮಾಡುವುದು? ಪ್ರತೀ ಕಾಲಘಟ್ಟದಲ್ಲೂ ರಾಮ ಹೇಗೋ ನುಸುಳಿಕೊಂಡು ಬಂದು ಹಿಂದೂವಿನ ಹೃದಯದಲ್ಲಿ ಮತ್ತೆ ಪ್ರತಿಷ್ಠಾಪಿತನಾಗಿಬಿಡುತ್ತಾನೆ. ಈಗ ಕೊರೋನಾ ಲಾಕ್ಡೌನ್ ರೂಪದಲ್ಲಿ!


ಹೌದು. ಲಾಕ್ಡೌನ್ ಶುರುವಾದ ಆರಂಭದಲ್ಲೇ ಕೇಂದ್ರಸಕರ್ಾರ ರಾಮಾಯಣವನ್ನು ಮರುಪ್ರಸಾರ ಮಾಡುವ ನಿಧರ್ಾರ ಕೈಗೊಂಡಿತ್ತು. ಜನ ಮತ್ತೆ-ಮತ್ತೆ ಪರಿವಾರ ಸಮೇತರಾಗಿ ಕುಳಿತು ನೋಡಿದರು. ಈ ಹಿಂದೆ ಪ್ರಸಾರವಾದ ಕಾಲದಲ್ಲಿ ನಾವೊಂದು ಬದಲಾವಣೆಯ ಕಾಲಘಟ್ಟದಲ್ಲಿದ್ದೆವು. ಆಗತಾನೇ ಜೀನ್ಸುಗಳು ವಕ್ಕರಿಸಿಕೊಂಡಿದ್ದವು. ಬ್ಯಾಗಿ ಪ್ಯಾಂಟು, ದೇಹಕ್ಕೆ ಅಂಟಿಕೊಳ್ಳುವ ಶಟರ್ು, ಉದ್ದನೆಯ ಕೂದಲುಗಳ ಕಾಲ ಅದು. ರಾಮಾಯಣ ಎಲ್ಲರ ಮನಸ್ಸನ್ನು ಆವರಿಸಿತ್ತು. ಈಗ ಮತ್ತೊಂದೇ ಹಂತ. ಸದಾಕಾಲ ಇಂಟರ್ನೆಟ್ಟಿಗೆ ಅಂಟಿಕೊಂಡಿರುವ ಜನಾಂಗ. ಭಾರತೀಯವಾದ್ದನ್ನೆಲ್ಲಾ ಧಿಕ್ಕರಿಸಬೇಕೆಂಬ ಜೆಎನ್ಯುವಾದಿಗಳ ಮಾತುಗಳನ್ನು ಕೇಳಿ ಬೆಳೆದಿರುವ ಜನಾಂಗ. ಭಗವಂತ ಹೊರಗೆ ಕೊರೋನಾ ಬಿಟ್ಟು ಒಳಗೆ ನಮ್ಮನ್ನು ಕೂರಿಸಿ ಭಾರತೀಯ ಪರಂಪರೆ-ಮೌಲ್ಯಗಳ ಪಾಠ ಮಾಡುತ್ತಿದ್ದಾನೆ. ಮೊನ್ನೆ ಒಂದು ದಿನವಂತೂ ರಾಮಾಯಣ ಏಳೂವರೆ ಕೋಟಿಗೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿತು. ಜಗತ್ತಿನಲ್ಲಿ ಇದುವರೆಗೂ ಅತ್ಯಂತ ಹೆಚ್ಚು ನೋಡಲ್ಪಟ್ಟ ಧಾರವಾಹಿ ಎರಡು ಕೋಟಿ ಜನರಿಂದ ಎಂದು ಹೇಳುತ್ತಾರೆ. ಅದರ ನಾಲ್ಕು ಪಟ್ಟು ಹೆಚ್ಚು ವೀಕ್ಷಣೆಗೊಳಗಾಗಿರುವ ರಾಮಾಯಣ ಭಾರತದ ದಿಕ್ಕು ಯಾವುದೆಂಬುದನ್ನು ಸ್ಪಷ್ಟವಾಗಿ ಸಾರಿ ಹೇಳಿದೆ! ಕಾಕತಾಳೀಯವೋ ಏನೋ ಸೀತಾನವಮಿಯ ದಿನ ಲವಕುಶರು ರಾಮನ ಬಳಿಬಂದು ಸೀತೆಯ ದುಃಖವನ್ನು ತೋಡಿಕೊಳ್ಳುವ ಅಂಕ ಪ್ರಸಾರವಾಗಿತ್ತು. ಕಂಗಳಲ್ಲಿ ನೀರಾಡದೇ ಅದನ್ನು ನೋಡಿದವರೇ ಇಲ್ಲ. ಭಾರತ ಮತ್ತೆ-ಮತ್ತೆ ತನ್ನ ಪರಂಪರೆಗೆ ಬೆಸೆದುಕೊಳ್ಳುವ ರೀತಿಯೇ ಇದು. ಮತ್ತೆ ಈ ರಾಷ್ಟ್ರ ವಿಶ್ವಗುರುವಾಗುತ್ತದೆ ಎಂಬುದಕ್ಕೆ ಇವುಗಳೇ ಸಾಕ್ಷಿ ಮತ್ತು ಧೈರ್ಯ ತುಂಬೋದು!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top