International

ಕೊರೋನಾ ಗುಣಪಡಿಸುತ್ತೇನೆಂದು ಬಡಾಯಿ ಕೊಚ್ಚಿದ ಕ್ರೈಸ್ತ ಹೀಲರ್ ನ ಕಥೆ ಭಯಾನಕ!

ಜನರನ್ನು ವೇದಿಕೆ ಮೇಲೆ ಕರೆಸಿ, ಅವರ ಮೇಲೆ ಕೈಯಿಟ್ಟು, ಅವರಲ್ಲಿ ಶಕ್ತಿ ಸಂಚಾರವಾಗುತ್ತಿದೆ ಎಂದು ಹೇಳಿ, ಅವರಲ್ಲಿದ್ದ ರೋಗವನ್ನು ಗುಣಮಾಡಿದ್ದೇನೆ ಎಂದು ಹೇಳುವ ಹಲವು ಪಾಸ್ಟರ್‌ಗಳ ವಿಡಿಯೊಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ಕ್ರಿಶ್ಚಿಯನ್ ಪಾಸ್ಟರ್‌ಗಳು ಜನರಲ್ಲಿ ಏಸುವಿನ ಕುರಿತು ಭಕ್ತಿ ಹೆಚ್ಚಿಸುವ, ಜನರನ್ನು ಮತಾಂತರಗೊಳಿಸುವ ಸಲುವಾಗಿಯೇ ಈ ರೀತಿಯ ಹಲವು ಶೋಗಳನ್ನು ನಡೆಸಿಕೊಡುತ್ತಾರೆ. ರೋಗಿಗಳಲ್ಲಿರುವ ರೋಗವನ್ನು ಪಾಸ್ಟರ್ ಗುಣಪಡಿಸಿಬಿಡುತ್ತಾನೆ ಎಂಬುದನ್ನು ನಂಬಿಸುವ ಪ್ರಯತ್ನ ಮಾಡುತ್ತಾರೆ.

ಆಫ್ರಿಕಾದ ಕ್ಯಾಮರೂನ್‌ನಲ್ಲಿ ಇದೇ ರೀತಿಯ ಘಟನೆಯಿಂದ ಸ್ವತಃ ಪ್ಯಾಸ್ಟರ್ ತೀರಿಕೊಂಡಿದ್ದಾನೆ. ಹೌದು. ಇದು ಈಗ ಎಲ್ಲೆಲ್ಲೂ ತಾಂಡವನೃತ್ಯ ನಡೆಸುತ್ತಿರುವ ಚೀನಾದ ಕರೋನಾ ವೈರಸ್‌ಗೆ ಸಂಬಂಧಿಸಿದ ಕಥೆಯೇ! ಫ್ರಾಂಕ್ಲಿನ್ ಎಂಡಿಫರ್ ಎನ್ನುವ 39 ವರ್ಷದ ಪ್ಯಾಸ್ಟರ್ ಕೋವಿಡ್‌-19 ಗೆ ತುತ್ತಾಗಿ ನಿಧನ ಹೊಂದಿದ್ದಾರೆ. ಇವರು 2018 ರಲ್ಲಿ ಮಧ್ಯ ಆಫ್ರಿಕಾದ ಕ್ಯಾಮರೂನ್‌ನಲ್ಲಿ ಅಧ್ಯಕ್ಷ ಪದವಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ಆದರೆ ಚುನಾವಣೆಯಲ್ಲಿ ಸೋತು, ತನ್ನ ಪಾಸ್ಟರ್ ವೃತ್ತಿಯಲ್ಲೇ ಮುಂದುವರೆದ.

ಪಾಸ್ಟರ್ ಫ್ರಾಂಕ್ಲಿನ್ ಮಧ್ಯ ಆಫ್ರಿಕಾದಲ್ಲಿ ಕರೋನಾ ಸೋಂಕು ಪತ್ತೆಯಾಗುತ್ತಿದ್ದಂತೆ ತನ್ನ ಅನುಯಾಯಿಗಳಲ್ಲಿ ತಾನು ಅದನ್ನು ಹೀಲ್ ಮಾಡಿ ಅವರನ್ನು ಗುಣಪಡಿಸುವುದಾಗಿ ಹೇಳಿದ್ದ. ಕೋವಿಡ್ ಸೋಂಕು ದೃಢಪಟ್ಟಿದ್ದ ಹಲವರು ಪಾಸ್ಟರ್‌ ಆರಂಭಿಸಿದ್ದ ಕಿಂಗ್‌ಶಿಪ್ ಇಂಟರ್‌ನ್ಯಾಷನಲ್ ಮಿನಿಸ್ಟ್ರೀಸ್ ಚರ್ಚ್‌ಗೆ ಬಂದಿದ್ದರು. ಈತ ಅವರ ತಲೆಯ ಮೇಲೆ ಕೈಯಿಟ್ಟು ಕರೋನಾ ವೈರಸ್ ಅನ್ನು ಹೀಲ್ ಮಾಡಿ, ಅವರಿಗೆ ಭರವಸೆಕೊಟ್ಟು ಮನೆಗೆ ಕಳಿಸುತ್ತಿದ್ದನಂತೆ. ಕೆಲವೇ ದಿನಗಳಲ್ಲಿ ಪಾಸ್ಟರ್ ಫ್ರಾಂಕ್ಲಿನ್‌ನಲ್ಲಿ ಕರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಪರೀಕ್ಷೆಗೊಳಪಡಿಸಿದಾಗ ಆತನಲ್ಲಿ ಸೋಂಕು ದೃಢಪಟ್ಟಿದೆ.

ಸೋಂಕು ದೃಢಪಟ್ಟ ಒಂದು ವಾರದೊಳಗೇ ಪಾಸ್ಟರ್ ಫ್ರಾಂಕ್ಲಿನ್‌ಗೆ ಶ್ವಾಸಕೋಶ ತೊಂದರೆ ಕಾಣಿಸಿಕೊಂಡಿದೆ. ತಕ್ಷಣ ಅವರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದರೂ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ! ಅನುಯಾಯಿಗಳು ಆತನನ್ನು ಪ್ರವಾದಿ ಎಂದೇ ಕರೆಯಿತ್ತಿದ್ದರಂತೆ. ಕರೋನಾ ಗುಣಪಡಿಸುವುದಾಗಿ ಹೇಳಿ ತಾನೇ ಅದಕ್ಕೆ ತುತ್ತಾಗಿ ಮೃತಪಟ್ಟಿದ್ದಾನೆಂದು ಹಲವು ಅನುಯಾಯಿಗಳು ಅಲವತ್ತುಕೊಂಡಿದ್ದಾರೆ.

ಕುರಾನ್ ಓದುವವರಿಗೆ ಕರೋನಾ ಬರುವುದಿಲ್ಲ, ಕರೋನಾವನ್ನು ಹೀಲ್ ಮಾಡಿ ಓಡಿಸಿಬಿಡಬಹುದು ಎಂಬೆಲ್ಲಾ ಮೂಢನಂಬಿಕೆಗಳು ನಡುವೆಯೇ ವಿಶ್ವದಾದ್ಯಂತ ಕರೋನಾ ಸೋಂಕು ಅದಾಗಲೇ 50 ಲಕ್ಷ ಗಡಿಯಲ್ಲಿದೆ. ಮೂಢನಂಬಿಕೆಗಳನ್ನು ಬದಿಗೊತ್ತಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಇದಕ್ಕೆ ಸದ್ಯಕ್ಕಿರುವ ಪರಿಹಾರ!

Click to comment

Leave a Reply

Your email address will not be published. Required fields are marked *

Most Popular

To Top