National

ಕೇಸರಿ ಬಾವುಟ ಬೇಡ, ಹಲಾಲ್ ಆದ್ರೆ ಓಕೆನಾ?!

ಚೆನ್ನೈನಲ್ಲಿ ಜೈನ್ ಸಮುದಾಯಕ್ಕೆ ಸೇರಿದವರ ಅಂಗಡಿಯೊಂದು ಸ್ಥಳೀಯ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ. ಏಕೆಂದರೆ ಆ ಅಂಗಡಿಯ ಮಾಲೀಕರು ತಾವು ಶುದ್ಧವಾದ ತಿನ್ನುವ ಪದಾರ್ಥಗಳನ್ನು ನೇರ ನಿಮ್ಮ ಮನೆಗೆ ತಲುಪಿಸುತ್ತೇವೆ ಎಂಬ ಹೇಳಿಕೆಯೊಂದಿಗೆ ನಮ್ಮಲ್ಲಿ ಮುಸಲ್ಮಾನ ಕೆಲಸಗಾರರು ಇರುವುದಿಲ್ಲ ಎಂಬ ಹೇಳಿಕೆಯನ್ನೂ ಪ್ರಕಟಿಸಿದ್ದರು. ಕಳೆದ ಕೆಲವಾರು ದಿನಗಳಿಂದ ತಬ್ಲೀಗಿ ಪ್ರಕರಣದ ನಂತರ ದೇಶದಾದ್ಯಂತ ಮುಸಲ್ಮಾನರ ವಿರುದ್ಧ ಒಂದು ಆಂತರಿಕವಾದ ಆಕ್ರೋಶ ತಂತಾನೆ ಬೆಳೆದು ನಿಲ್ಲುತ್ತಿದೆ. ರಾಜ್ಯವೆಲ್ಲಾ ಕರೋನಾದೊಂದಿಗೆ ಜೂಜಾಡುತ್ತಿರುವಾಗ ಹಸಿರು ವಲಯದಲ್ಲೇ ಇದ್ದ ಶಿವಮೊಗ್ಗ ಏಕಾಕಿ 8 ಮುಸಲ್ಮಾನರ ಆಗಮನದಿಂದಾಗಿ ಕೆಂಪು ವಲಯಕ್ಕೆ ತಿರುಗುವ ಭೀತಿಯನ್ನೆದುರಿಸಿತ್ತು. ಆ ಜಿಲ್ಲೆಯ ಯಾವ ಮನೆಯ ಬಾಗಿಲನ್ನು ಬಡಿದರೂ ತಬ್ಲೀಗಿಗಳ ವಿರುದ್ಧ, ಆ ಕಾರಣಕ್ಕೆ ಇಡೀ ಮುಸಲ್ಮಾನರ ವಿರುದ್ಧ ಜನ ಕೊತಕೊತನೇ ಕುದಿಯುತ್ತಿರುವ ಸದ್ದು ಕೇಳಿ ಬರುತ್ತದೆ! ಅದು ಸಹಜವೂ ಹೌದು ಬಿಡಿ. ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಸಾಮಾಜಿಕ ಸಂಬಂಧಗಳನ್ನೆಲ್ಲಾ ಕಡಿದುಕೊಂಡು ವೈರಸ್ನಿಂದ ರಕ್ಷಣೆ ಪಡೆಯಲು ಮನೆಯಲ್ಲೇ ಅಡಗಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಿಸುತ್ತಿರುವಾಗ ಕೆಲವು ಸಾವಿರ ಮುಸಲ್ಮಾನರು ಇಡೀ ದೇಶದ ಸ್ವರೂಪವನ್ನೇ ಹಾಳುಗೆಡವಿಬಿಟ್ಟರಲ್ಲಾ, ಕೋಪಿಸಿಕೊಳ್ಳಬಾರದೆಂದರೆ ಹೇಗೆ? ಈ ಕಾರಣಕ್ಕೇ ಎಲ್ಲೆಡೆ ಅಂಗಡಿಗಳ ಮುಂದೆ ಕೇಸರಿ ಬಾವುಟಗಳು ಈಗ ರಾರಾಜಿಸುತ್ತಿವೆ. ನಮಗೆ ಕರೋನಾ ಇಲ್ಲ ಎಂದು ಹೇಳುವ ಮಾರ್ಗ ಕೇಸರಿ ಬಾವುಟವಾಗಿಬಿಟ್ಟಿದೆ. ಅದರ ಮುಂದುವರಿದ ಭಾಗವೇ ಚೆನ್ನೈನ ಜೈನ್ ಸಮುದಾಯದವರ ಪ್ರಕರಣ.


ವಾಟ್ಸಪ್ನಲ್ಲಿ ಬಂದ ಜಾಹೀರಾತಿನ ಆಧಾರದ ಮೇಲೆ ತಾನೇ ಮುಂದಾಗಿ ದೂರು ದಾಖಲಿಸಿಕೊಂಡ ಸ್ಥಳೀಯ ಪೊಲೀಸರು ಈ ಕಾರಣಕ್ಕಾಗಿಯೇ ಅಂಗಡಿಯ ಮಾಲೀಕರನ್ನು ಬಂಧಿಸಿಬಿಟ್ಟರು. ಅಲ್ಲಿಯವರೆಗೂ ಈ ವಿಚಾರ ಚಚರ್ೆಗೆ ಬಂದಿರಲಿಲ್ಲ. ಬಂಧನವಾದೊಡನೆ ಇಡೀ ದೇಶ ಈ ಕುರಿತಂತೆ ಚಚರ್ೆಗೆ ನಿಂತುಬಿಟ್ಟಿತು. ಈ ಹಿಂದೆ ಮುಂಬೈನಲ್ಲಿ ಮನೆಗೆ ಆಹಾರವಸ್ತು ತಂದುಕೊಡುವ ಡೆಲಿವರಿ ಬಾಯ್ ಒಬ್ಬ ಮುಖಕ್ಕೆ ಮಾಸ್ಕ್ ಹಾಕಿರಲಿಲ್ಲ ಮತ್ತು ಆಹಾರ ಪದಾರ್ಥವನ್ನು ವಿತರಿಸಲು ಬೇಕಾದ ಯಾವ ನಿಯಮವನ್ನೂ ಅನುಸರಿಸಿರಲಿಲ್ಲ ಎಂಬ ಕಾರಣಕ್ಕೆ ಆತನಿಂದ ವಸ್ತು ಸ್ವೀಕರಿಸುವುದನ್ನು ನಿರಾಕರಿಸಿದ್ದರು. ಆ ವ್ಯಕ್ತಿ ಸುಮ್ಮನಿರದೇ ತಾನು ಮುಸಲ್ಮಾನನೆಂಬ ಕಾರಣಕ್ಕೆ ತನ್ನಿಂದ ಸ್ವೀಕರಿಸುತ್ತಿಲ್ಲವೆಂದು ರಂಪಾಟ ಮಾಡಿಬಿಟ್ಟ. ಪಾಪ, ತನ್ನ ಆರೋಗ್ಯದ ದೃಷ್ಟಿಯಿಂದ ಈ ನಿಧರ್ಾರ ಕೈಗೊಂಡ ವ್ಯಕ್ತಿಯ ಬಂಧನವೂ ಆಗಿಬಿಡ್ತು. ಆದರೆ ದೇಶದಾದ್ಯಂತ ಚಚರ್ೆಯೊಂದಕ್ಕೆ ಇದು ನಾಂದಿ ಹಾಡಿತು. ಅದು ಜನರ ಮನಸ್ಸಿನಿಂದ ಮಾಸುವ ಮೊದಲೇ ಚೆನ್ನೈನ ಪ್ರಕರಣ ಬೆಳಕಿಗೆ ಬಂತು. ಇಡಿಯ ದೇಶದಲ್ಲಿ ಈಗ ಜನ ಕೇಳುತ್ತಿರುವ ಪ್ರಶ್ನೆ ಒಂದೇ. ಹಲಾಲ್ ಮಾಂಸವನ್ನು ಮಾರಾಟ ಮಾಡುತ್ತೇವೆ ಎಂದು ಹೇಳುವ ಅಂಗಡಿಗಳಿಗೆ ಅನುಮತಿ ಕೊಡಬಹುದಾದರೆ ಧಾಮರ್ಿಕ ವಿಧಿಯಲ್ಲಿ ಆಹಾರ ಪದಾರ್ಥ ತಯಾರು ಮಾಡುತ್ತೇವೆನ್ನುವ ಅಂಗಡಿಗೆ ಅನುಮತಿ ಏಕಿಲ್ಲ? ಅಂತ. ಇದರ ಆಳವನ್ನು ಅರಿಯಬೇಕೆಂದರೆ ಹಲಾಲ್ ಮಾಂಸದ ಕುರಿತಂತೆ ಸ್ವಲ್ಪ ತಿಳಿದುಕೊಳ್ಳುವುದೊಳಿತು.


ಹಲಾಲ್ ಎಂದರೆ ಇಸ್ಲಾಮಿನಲ್ಲಿ ಅನುಮತಿಸಲಾಗಿರುವಂತಹ ಸಂಗತಿಗಳು. ನಿಷೇಧಕ್ಕೊಳಪಟ್ಟಿರುವಂಥವನ್ನು ಹರಾಮ್ ಎನ್ನುತ್ತಾರೆ. ಯಾವ ಆಹಾರ ಪದಾರ್ಥವನ್ನು ತಿನ್ನಬೇಕು, ತಿನ್ನುವ ಮುನ್ನ ಅದನ್ನು ಹೇಗೆ ಕತ್ತರಿಸಬೇಕು, ಇವೆಲ್ಲವೂ ಕುರಾನ್ ಮತ್ತು ಹದೀಸ್ಗಳಲ್ಲಿ ಹೇಳಿರುವಂತೆ ಮಾಡಲ್ಪಟ್ಟರೆ ಮಾತ್ರ ತಿನ್ನಲು ಯೋಗ್ಯವಾದಂಥವು. ಇಲ್ಲವಾದರೆ ಹರಾಮ್ ಆದುದನ್ನು ತಿಂದರೆ ಆತನ ಪ್ರಾರ್ಥನೆಯನ್ನು ಭಗವಂತ ಕೇಳಲಾರೆ ಎಂದೂ ಹೇಳಲಾಗುತ್ತದೆ. ಹಲಾಲ್ನ ವ್ಯಾಪ್ತಿ ತಿನ್ನುವ ಪದಾರ್ಥಕ್ಕಷ್ಟೇ ಅಲ್ಲ, ಸೌಂದರ್ಯವರ್ಧಕಗಳು, ಔಷಧಿಗಳು ಮುಂತಾದವನ್ನೂ ಒಳಗೊಳ್ಳುತ್ತದೆ. ಇಸ್ಲಾಮಿನ ಪ್ರಕಾರ ಎಲ್ಲಾ ಜೀವಿಗಳೂ ಶ್ರೇಷ್ಠವಾದವೇ. ಯಾವುದಾದರೊಂದು ಪ್ರಾಣಿ ಮನುಷ್ಯನಿಗಾಗಿ ತನ್ನ ಜೀವವನ್ನು ಕೊಡುತ್ತಿದೆ ಎಂದರೆ ಭಗವಂತನ ಹೆಸರು ಹೇಳಿ ಅದನ್ನು ಪಡೆದುಕೊಳ್ಳಬೇಕು ಎಂಬುದು ನಿಯಮ. ಹೀಗಾಗಿ ಹಲಾಲ್ ಮಾಡುವಾಗ ಪ್ರಾಣಿಯನ್ನು ಕತ್ತರಿಸುವ ಮುನ್ನ ‘ಬಿಸ್ಮಿಲ್ಲಾ’ ಎಂದು ಹೇಳಲಾಗುತ್ತದೆ. ‘ದೇವರ ಹೆಸರಿನಲ್ಲಿ’ ಎಂಬುದು ಅದರ ಅರ್ಥ. ಇದರೊಂದಿಗೆ ಇನ್ನೂ ಕೆಲವು ಕಠಿಣ ನಿಯಮಗಳನ್ನು ಹಲಾಲ್ ಮಾಡುವಾಗ ಅನುಸರಿಸಬೇಕಾಗುತ್ತದೆ. ಮೊದಲನೆಯದಾಗಿ ಈ ರೀತಿ ಪ್ರಾಣಿಯನ್ನು ಕತ್ತರಿಸುವವ ವಯಸ್ಕ ಮುಸಲ್ಮಾನನೇ ಆಗಿರಬೇಕು. ಆನಂತರ ಆ ಪ್ರಾಣಿಯನ್ನು ಕತ್ತರಿಸುವ ಮುನ್ನ ಬಿಸ್ಮಿಲ್ಲಾ ಎಂದು ಹೇಳಿ ಅದರ ಕುತ್ತಿಗೆಯನ್ನು ಕತ್ತರಿಸಬೇಕು. ಹೀಗೆ ಕತ್ತರಿಸುವಾಗ ಚಾಕು ಚೂಪಾಗಿದ್ದು ಆ ಪ್ರಾಣಿಯ ಕನಿಷ್ಠಪಕ್ಷ ಎರಡು ರಕ್ತನಾಳಗಳನ್ನು, ಕಂಠದಭಾಗವನ್ನು ಕತ್ತರಿಸಬೇಕು. ಆದರೆ ಬೆನ್ನಹುರಿಯನ್ನು ಕತ್ತರಿಸುವಂತಿಲ್ಲ. ಕುತ್ತಿಗೆಯ ಭಾಗದಿಂದಲೇ ಎಲ್ಲಾ ರಕ್ತ ಹೊರಹೋಗುವಂತೆ ನೋಡಿಕೊಂಡು ಪ್ರಾಣಿ ಪೂರ್ಣ ಸತ್ತಿದೆ ಎಂದಮೇಲೆ ಮುಂದಿನ ಹಂತಕ್ಕೆ ಕೈ ಹಾಕಬೇಕು. ಇದರೊಟ್ಟಿಗೆ ಪ್ರಾಣಿಯನ್ನು ಕೊಲ್ಲುವ ಮುನ್ನ ಅದನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಇನ್ನೊಂದು ಪ್ರಾಣಿಯನ್ನು ಕೊಲ್ಲುವಾಗ ಅದು ಎದುರಿಗಿರಬಾರದು ಇಂಥದ್ದೆಲ್ಲಾ ನಿಯಮಗಳನ್ನು ಹೇಳಿದ್ದಾರೆ. ಬಹುಶಃ ಈಗ ಭಯೋತ್ಪಾದಕರು ತಾವು ವಶಕ್ಕೆ ಪಡಕೊಂಡವರನ್ನು ಕುತ್ತಿಗೆಯ ಮೂಲಕವೇ ಕತ್ತರಿಸುವುದೇಕೆಂದು ನಿಮಗೆ ಅರ್ಥವಾಗಿರಬಹುದು! ಅವರುಗಳೆಲ್ಲಾ ಸಾಯಿಸುವುದನ್ನು ಕಲಿತಿರುವುದೇ ಹಾಗೆ. ಬಿಡಿ, ಅದು ಮತವೊಂದರೆ ಕ್ರೌರ್ಯದ ಪರಮಾವಧಿ! ಆದರೆ, ಇಲ್ಲಿ ನಾವು ಕೇಳಬೇಕಾದ ಪ್ರಶ್ನೆ ಎಂದರೆ ನಿಯಮದ ಪ್ರಕಾರ ಹಲಾಲ್ ಮಾಡಬೇಕಾದವನು ಮುಸಲ್ಮಾನನೇ ಆಗಿರಬೇಕು ಎಂಬುದಾದರೆ ಹಲಾಲ್ ಸಟರ್ಿಫಿಕೇಟ್ ಪಡೆದ ಪ್ರತಿಯೊಂದು ಅಂಗಡಿಯೂ ತಾವು ಮುಸಲ್ಮಾನರನ್ನೇ ಕೆಲಸಕ್ಕಿಟ್ಟುಕೊಂಡಿದ್ದೇವೆ ಎಂದು ಸಾರಿ ಹೇಳಿದಂತೆ. ಅವರುಗಳ ಮೇಲೆ ಇದುವರೆಗೂ ಶಿಕ್ಷೆ ಏಕಾಗಿಲ್ಲ? ಹಿಂದುಗಳನ್ನು ಮಾತ್ರ ಕೆಲಸಕ್ಕಿಟ್ಟುಕೊಂಡಿದ್ದೇನೆ ಎಂದು ಹೇಳುವ ವ್ಯಕ್ತಿಯನ್ನು ಬಂಧಿಸುವ ಪೊಲೀಸರು ಮುಸಲ್ಮಾನರಿಂದ ಮಾತ್ರ ಕತ್ತು ಕಡಿಸುತ್ತೇನೆ ಎಂದು ಹೇಳುವವರನ್ನು ಬಂಧಿಸುವುದಿಲ್ಲವೇಕೆ?

ಈ ಗಲಾಟೆ ಇಂದಿನದ್ದೇನೂ ಅಲ್ಲ. ಈ ಹಿಂದೆ ಮ್ಯಾಕ್ಡೊನಾಲ್ಡ್ಸ್ನಲ್ಲಿ ಹಲಾಲ್ ಮಾಡಿದ ಮಾಂಸವನ್ನೇ ಮಾರಾಟ ಮಾಡಲಾಗುವುದು ಎಂದಿದ್ದಾಗ ಅನೇಕರು ಗಲಾಟೆ ಮಾಡಿದ್ದರು. ತಮಗೆ ಝಟ್ಕಾ ಮಾದರಿಯಲ್ಲಿ ತಯಾರಿಸಿದ ಮಾಂಸವೇ ಬೇಕೆಂದು ಟ್ವಿಟರ್ನಲ್ಲಿ ಟ್ರೆಂಡ್ ಕೂಡ ಆಗಿತ್ತು. ಝಟ್ಕಾ ಎನ್ನುವುದು ಹಲಾಲ್ನಂತಲ್ಲ. ಒಂದೇ ಏಟಿಗೆ ಪ್ರಾಣಿಯನ್ನು ಕಡಿದು ಅದಕ್ಕೆ ನೋವು ಅರಿವಾಗದಂತೆ ಮಾಡುವ ವಿಧಾನ. ಹಲಾಲ್ನಲ್ಲಿ ಪ್ರಾಣಿ ನರಳುತ್ತಾ ಸಾಯುತ್ತದೆ. ಹೀಗಾಗಿ ಆಸ್ಟ್ರೇಲಿಯಾ, ಇಂಗ್ಲೆಂಡು ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಪ್ರಾಣಿಗಳನ್ನು ಕೊಲ್ಲುವಮುನ್ನ ಪ್ರಜ್ಞೆ ತಪ್ಪಿಸಬೇಕೆಂಬ ನಿಯಮವಿರೋದು. ಆದರೇನು? ತಿನ್ನುವುದೇ ಆಗಿದ್ದರೆ ವಿಕೃತವಾಗಿ ಆನಂದಿಸಿಯೇ ತಿನ್ನಬೇಕೆಂಬ ಜನರು ಅನೇಕರಿದ್ದಾರೆ. ಮಧ್ಯದಲ್ಲಿ ಭಗವಂತನ ಹೆಸರು ಬೇರೆ!


ಕರೋನಾ ಅನೇಕ ಹೊಸ ಚಚರ್ೆಗಳನ್ನು ಹುಟ್ಟು ಹಾಕುತ್ತಿದೆ. ಅದಾಗಲೇ ಸುಬ್ರಮಣಿಯನ್ ಸ್ವಾಮಿ ಧಾಮರ್ಿಕ ರೀತಿಯಲ್ಲಿ ಆಹಾರ ತಯಾರಿಸುವ ಅನುಮತಿ ನೀಡಬೇಕೆಂದು ಕೋಟರ್ಿಗೆ ಹೋಗುತ್ತಿದ್ದಾರೆ. ಭಾರತ 70 ವರ್ಷಗಳ ನಂತರ ಮಗ್ಗಲು ಬದಲಾಯಿಸುತ್ತದೆ! ಕಾದು ನೋಡೋಣ..

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top