National

ಕಾಂಗ್ರೆಸ್ ಬಿತ್ತಿದ ಹಿಂದೂ ಭಯೋತ್ಪಾದನೆ ಎಂಬ ಹಸಿಸುಳ್ಳು!!

ವಿಶೇಷ ನ್ಯಾಯಾಲಯ ಸ್ವಾಮಿ ಅಸೀಮಾನಂದರ ವಿರುದ್ಧ ಇದ್ದ ಭಯೋತ್ಪಾದನೆಯ ಪ್ರಕರಣವನ್ನು ಕೈಬಿಡುವುದರೊಂದಿಗೆ ಕಾಂಗ್ರೆಸ್ಸಿನ ಮತ್ತೊಂದು ಮುಖವಾಡ ಕಳಚಿದಂತಾಗಿದೆ. 2007ರಲ್ಲಿ ಸಂಝೋತಾ ಎಕ್ಸ್ಪ್ರೆಸ್ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದರು ಭಯೋತ್ಪಾದನೆಯ ಸೂತ್ರಧಾರರೆಂದು ಬಂಧಿಸಲ್ಪಟ್ಟಿದ್ದರು. ಸಂಝೋತಾ ವಾರಕ್ಕೆರಡು ಬಾರಿ ದೆಹಲಿ ಮತ್ತು ಲಾಹೋರ್ಗಳನ್ನು ಬೆಸೆಯುವ ರೈಲು. ನಾಲ್ಕು ಬೋಗಿಗಳು ಕಾಯ್ದಿರಿಸಿದವಾಗಿದ್ದರೆ ಉಳಿದ ಮೂರು ಸಾಮಾನ್ಯ ಬೋಗಿಗಳು. ಫೆಬ್ರವರಿ 18ರ ಮಧ್ಯರಾತ್ರಿ ರೈಲು ಪಾನಿಪತ್ನ ದಿವಾನಾ ದಾಟಿದೊಡನೆ ಸಾಮಾನ್ಯ ಬೋಗಿಗಳಲ್ಲಿ ಇಡಲಾಗಿದ್ದ ಬಾಂಬು ಸಿಡಿದು ಸುಮಾರು 70 ಜನ ತೀರಿಕೊಂಡರು. ಹೀಗೆ ಸತ್ತವರಲ್ಲಿ ಬಹುತೇಕರು ಪಾಕಿಸ್ತಾನಿಯೆರೇ ಆಗಿದ್ದರು. ವಿಚಾರಣೆ ಆರಂಭವಾದಾಗ ಬಾಂಬುಗಳನ್ನು ಸೂಟ್ಕೇಸ್ನಲ್ಲಿಡಲಾಗಿತ್ತು ಎಂಬ ಮಾಹಿತಿ ಹೊರಬಂತು. ಅಂದಿನ ದಿನಗಳಲ್ಲಿ ಪಾಕಿಸ್ತಾನ ಮತ್ತು ಭಾರತ ಎರಡೂ ಸಕರ್ಾರವನ್ನು ಬೆಚ್ಚಿ ಬೀಳಿಸಿದ ಪ್ರಕರಣವಿದು. ಬಹುಶಃ ಭಾರತೀಯರು ಮತ್ತು ಹಿಂದೂಗಳೇ ಸತ್ತಿದ್ದರೆ ಎರಡೂ ರಾಷ್ಟ್ರಗಳು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಪಾಕಿಸ್ತಾನಿಯರನ್ನೇ ಗುರಿಯಾಗಿರಿಸಿಕೊಂಡು ಈ ದಾಳಿ ಮಾಡಲಾಗಿತ್ತಾದ್ದರಿಂದ ಭಾರತವಂತೂ ಅಚ್ಚರಿಗೊಳಗಾಗಿತ್ತು, ಪಾಕಿಸ್ತಾನ ಆಶ್ಚರ್ಯದ ನಟನೆ ಮಾಡುತ್ತಿತ್ತು. ಸಹಜವಾಗಿಯೇ ಪಾಕಿಸ್ತಾನದತ್ತ ಇದ್ದ ಅನುಮಾನ ಆರಂಭದ ತನಿಖೆಗಳಲ್ಲಿ ಒಂದಷ್ಟು ಗೆಲುವನ್ನು ಸಾಧಿಸಿಕೊಟ್ಟಿತು. ಸೂಟ್ಕೇಸನ್ನು ಬಿಸಾಡಿದ ವ್ಯಕ್ತಿ ಸಿಕ್ಕುಬಿದ್ದಿದ್ದ. ಅವನನ್ನು ಹಿಡಿದು ವಿಚಾರಣೆ ನಡೆಸಿದಾಗ ಆತ ಪಾಕಿಸ್ತಾನ ಪ್ರಜೆಯೆಂದೂ ಸೂಕ್ತವಾದ ಪಾಸ್ಪೋಟರ್್ಗಳಿಲ್ಲದೇ ಭಾರತಕ್ಕೆ ಬಂದಿದ್ದನೆಂದೂ ಗೊತ್ತಾಯ್ತು. ಆದರೆ ಪೊಲೀಸರು ಅವನು ಕುಡಿದಿದ್ದಾನೆ ಎಂಬ ಹೇಳಿಕೆಯನ್ನು ಕೊಟ್ಟು ಬಿಟ್ಟುಬಿಟ್ಟರು! ಮುಂದೆ ಸೂಟ್ಕೇಸನ್ನು ಮಾರಾಟ ಮಾಡಿದ್ದ ಇಂಡೋರ್ನ ಇಬ್ಬರು ವ್ಯಾಪಾರಿಗಳನ್ನು ಬಂಧಿಸಲಾಯ್ತು. ಅವರಿಂದ ಬಹುಮುಖ್ಯ ಮಾಹಿತಿಯೇನೂ ಸಿಗಲಿಲ್ಲ. ಆದರೆ ಈ ಬಾಂಬುಗಳು ಸಿಡಿಯುವ ಮುನ್ನ ರೈಲು ಸ್ವಲ್ಪ ಗತಿಯನ್ನು ನಿಧಾನ ಮಾಡಿದಾಗ ಅದರಿಂದ ಇಳಿದು ಹೋದ 25ರ ತರುಣನೊಬ್ಬನನ್ನು ಆನಂತರ ಬಂಧಿಸಿ ವಿಚಾರಣೆಯೂ ನಡೆಸಲಾಗಿತ್ತು.


ಈ ವೇಳೆಗಾಗಲೇ ಕಾಂಗ್ರೆಸ್ಸು ಇದನ್ನು ಹಿಂದೂಗಳ ತಲೆಗೆ ಕಟ್ಟಿ ಹೇಗಾದರೂ ಮಾಡಿ ಹಿಂದೂಭಯೋತ್ಪಾದನೆ ಎಂಬ ವಿಷಬೀಜವನ್ನು ಬಿತ್ತಿ ಭಯೋತ್ಪಾದನೆಗೂ ಇಸ್ಲಾಮಿಗೂ ಇರುವ ಸಂಬಂಧವನ್ನು ಮುಗಿಸಿಬಿಡಬೇಕೆಂಬ ಹೊಂಚು ಹಾಕುತ್ತಿತ್ತು. ಇದಕ್ಕೆ ಪೂರಕವಾಗಿ ಬೇಕಾಗಿರುವ ಯಾವ ಮಾಹಿತಿಯೂ ಅವರಿಗೆ ಸಿಗುತ್ತಿರಲಿಲ್ಲ ಅಷ್ಟೇ. ಸಿಕ್ಕ ಎಲ್ಲಾ ಮಾಹಿತಿಗಳೂ ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕ ಸಂಘಟನೆಗಳತ್ತಲೇ ತಿರುಗಿದ್ದವು. ಅವೆಲ್ಲವನ್ನೂ ಬದಿಗಿಟ್ಟು ಭಯೋತ್ಪಾದಕ ನಿಗ್ರಹ ದಳ ಹಿಂದೂಗಳನ್ನು ಗುರಿಯಾಗಿಸುವ ಪ್ರಯತ್ನದಲ್ಲಿ ನಿರತವಾಗಿದ್ದವು. ನವೆಂಬರ್ 2008ಕ್ಕೆ ಈ ಕೇಸಿನಲ್ಲಿ ಸೈನ್ಯದಲ್ಲಿ ಉದ್ಯೋಗಿಯಾಗಿದ್ದ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತರನ್ನು ಬಂಧಿಸಲಾಯ್ತು. ಅವರನ್ನು ಹಿಂದೂ ರಾಷ್ಟ್ರೀಯವಾದಿ ಗುಂಪಿಗೆ ಸೇರಿದ ಅಭಿನವ ಭಾರತದ ಸದಸ್ಯರೆಂದು ಗುರುತಿಸಲಾಯ್ತು. ಅವರೇ ಇದರ ಸೂತ್ರಧಾರನೆಂದು ಬಿಂಬಿಸಲು ಬೇಕಾದಷ್ಟು ತಯಾರಿಯನ್ನೂ ಮಾಡಿಕೊಳ್ಳಲಾಯ್ತು. ಆನಂತರ ಸಿಕ್ಕ ಮಾಹಿತಿಯ ಪ್ರಕಾರ ಸಕರ್ಾರ ಕರ್ನಲ್ ಪುರೋಹಿತರ ವಿರುದ್ಧ ಈ ರೀತಿಯ ತೀಕ್ಷ್ಣ ಆರೋಪಗಳನ್ನು ಮಾಡುತ್ತಿರುವಾಗ ಸೇನೆಯ ಗೂಢಚರ ವಿಭಾಗ ಕರ್ನಲ್ ಪುರೋಹಿತರನ್ನು ಒಂದಷ್ಟು ಸೂಕ್ಷ್ಮ ಮಾಹಿತಿಯ ಸಂಗ್ರಹಕ್ಕಾಗಿಯೇ ನೇಮಿಸಿತ್ತು ಎಂಬುದು ಬೆಳಕಿಗೆ ಬಂತು. ಸೈನ್ಯವೂ ಗೃಹಸಚಿವರಿಗೆ ಅಧಿಕೃತವಾಗಿ ಪತ್ರ ಬರೆದು ಪುರೋಹಿತರು ಯಾವ ಕಾರಣಕ್ಕಾಗಿ ನೇಮಕಗೊಳಿಸಲ್ಪಟ್ಟಿದ್ದರು ಎಂಬುದನ್ನು ವಿವರಿಸಿತ್ತು. ಕಾಂಗ್ರೆಸ್ಸಿನ ಮನ ಕರಗಲಿಲ್ಲ. ಪುರೋಹಿತರನ್ನು ಮನಸೋ ಇಚ್ಛೆ ಥಳಿಸಲಾಯ್ತು. ಯಾತನಾಮಯ ಬದುಕಿಗೆ ಅವರನ್ನು ದೂಡಲಾಯ್ತು. ಕತ್ತಲಕೋಣೆಯಲ್ಲಿ ಕೊಳೆಯುವಂತೆ ಮಾಡಲಾಯ್ತು. ಟ್ಯಾಂಕರುಗಳಂತೆ ಇದ್ದ ಸೆಲ್ಗಳಲ್ಲಿ ಅವರನ್ನು ಕೂಡಿಹಾಕಲಾಯ್ತು. ಅಷ್ಟಾದರೂ ಅವರಿಂದ ಒಂದೇ ಒಂದು ಮಾಹಿತಿಯನ್ನು ಹೊರಗೆಳೆಯಲಾಗಲಿಲ್ಲ. ಆದರೆ ಸಕರ್ಾರ ಹಠಕ್ಕೆ ಬಿದ್ದಿತ್ತು. ಈ ವೇಳೆಗಾಗಲೇ ಅಮೇರಿಕಾದ ಗೂಢಚರ ಇಲಾಖೆ ಲಷ್ಕರ್-ಎ-ತಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ನಂತಹ ಸಂಘಟನೆಗಳು ಈ ಘಟನೆಗೆ ಕಾರಣವೆಂದು ಮಾಹಿತಿಯನ್ನು ಕೇಂದ್ರಸಕರ್ಾರಕ್ಕೆ ನೀಡಿದ್ದಲ್ಲದೇ ಭಾರತ ಈ ಕುರಿತಂತೆ ಯಾವ ನಿರ್ಣಯವನ್ನೂ ಕೈಗೊಳ್ಳದೇ ಹೋದಾಗ 2009ರಲ್ಲಿ ಇದರ ಸೂತ್ರಧಾರನಾದ ಆರೀಫ್ ಕಸ್ಮಾನಿಗೆ ನಿರ್ಬಂಧ ಹೇರಿತು. ಅಮೇರಿಕಾದ ಗೂಢಚರ್ಯ ಇಲಾಖೆಯ ಪ್ರಕಾರ ಆತನೇ ಈ ಇಡಿಯ ಬಾಂಬ್ದಾಳಿಯ ಸೂತ್ರಧಾರಿಯಾಗಿದ್ದ!


ಒಟ್ಟಾರೆ ಪ್ರಕರಣ ಪಾಕಿಸ್ತಾನ ಮತ್ತು ಭಾರತದ ಬಾಂಧವ್ಯವನ್ನು ಕೆಡಿಸುವ ದೃಷ್ಟಿಕೋನವನ್ನು ಮೇಲ್ನೋಟಕ್ಕೆ ಹೊಂದಿದ್ದರೆ ಆಂತರ್ಯದಲ್ಲಿ ಇದಕ್ಕೆ ಹಿಂದೂಗಳೇ ಕಾರಣರೆಂದು ಬಿಂಬಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಜನರ ಕಣ್ಣಿನಲ್ಲಿ ದೋಷಿಯಾಗಿಸಬೇಕೆಂಬ ಪ್ರಯತ್ನವೂ ಇತ್ತು. ಆನಂತರ ಪ್ರಕಟಗೊಂಡ ವಿಕಿಲೀಕ್ಸ್ನ ಮಾಹಿತಿಯನ್ನು ನಂಬುವುದಾದರೆ ಹಿಂದೂಗಳನ್ನು ಭಯೋತ್ಪಾದಕರೆಂದು ಕರೆಯುವ ಈ ಪ್ರಯತ್ನ ಜಾಗತಿಕ ಮಟ್ಟದಲ್ಲಿ ಭಾರತದ ಗೌರವವನ್ನು ಸಾಕಷ್ಟು ಕಡಿಮೆ ಮಾಡಿತ್ತು. ಕರ್ನಲ್ ಶ್ರೀಕಾಂತ್ ಪುರೋಹಿತರ ಕುರಿತು ಸೇನೆಯ ವಿಚಾರಣೆ ನಡೆದಾಗ 59ಕ್ಕೂ ಹೆಚ್ಚು ಸಾಕ್ಷಿಗಳು ಪುರೋಹಿತ್ ಅವರ ಪರವಾಗಿ ಸಾಕ್ಷಿ ನುಡಿದಿದ್ದು ಕಾಂಗ್ರೆಸ್ಸಿನ ಒಟ್ಟಾರೆ ಪ್ರಯತ್ನಕ್ಕೆ ತಣ್ಣೀರೆರೆಚಿತ್ತು. ಇವರ ಪಾತ್ರವನ್ನು ಪ್ರಮಾಣೀಕರಿಸಲು ಅವರೀಗ ಮತ್ತೊಬ್ಬ ಸಮರ್ಥ ವ್ಯಕ್ತಿಯನ್ನು ಹುಡುಕಾಡುತ್ತಿದ್ದರು. ಅದು ಸ್ವಾಮಿ ಅಸೀಮಾನಂದರ ರೂಪದಲ್ಲಿ ಸಿಕ್ಕಿತು. 2010ರ ಡಿಸೆಂಬರ್ನಲ್ಲಿ ಸ್ವಾಮಿ ಅಸೀಮಾನಂದರನ್ನು ಪೂರ್ಣ ಸಾಕ್ಷಿಯಿದೆ ಎನ್ನುತ್ತಾ ಬಂಧಿಸಿದ ರಾಷ್ಟ್ರೀಯ ತನಿಖಾ ದಳ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿತ್ತು. ಗುಜರಾತಿನಲ್ಲಿ ತನ್ನ ಚಟುವಟಿಕೆಯ ಮೂಲಕ ಕ್ರಿಶ್ಚಿಯನ್ನರಾಗಿ ಮತಾಂತರಗೊಂಡಿದ್ದ ಬುಡಕಟ್ಟು ಜನಾಂಗದವರನ್ನು ಮರಳಿ ಮಾತೃಧರ್ಮಕ್ಕೆ ಕರೆತಂದಿದ್ದ ಸ್ವಾಮೀಜಿಯವರ ವಿರುದ್ಧ ಸಹಜವಾಗಿಯೇ ಕೋಪವಿತ್ತು. ಅದನ್ನು ತೀರಿಸಿಕೊಳ್ಳಲು ಇದು ಸದವಕಾಶ. ಹಾಗೆಯೇ ಕರ್ನಲ್ ಪುರೋಹಿತರಿಗೆ ಮಾರ್ಗದರ್ಶನ ಮಾಡಿ ಪ್ರೇರೇಪಣೆ ಕೊಟ್ಟಿದ್ದು ಇವರೇ ಎಂದು ಹೇಳುವ ಮೂಲಕ ಮುಸಲ್ಮಾನರಿಗೆ ಭಯೋತ್ಪಾದನೆಗೆ ಕುರಾನ್ ಪ್ರೇರಣೆ ಎನ್ನುವುದಾದರೆ ಹಿಂದೂಗಳಿಗೆ ಕಾವಿಧಾರಿಗಳು ಪ್ರೇರಣೆಯಾಗುತ್ತಾರೆ ಎಂಬುದನ್ನು ಸಾಬೀತುಪಡಿಸಲು ಕಾಂಗ್ರೆಸ್ಸು ಹವಣಿಸುತ್ತಿತ್ತು. ಅಸೀಮಾನಂದರಿಗೆ ನಾವ್ಯಾರೂ ಊಹಿಸಲಾಗದಷ್ಟು ಕಿರುಕುಳ ನೀಡಲಾಯ್ತು. ಆಗಿನ ದಿನಗಳಲ್ಲಿ ಅವರು ನ್ಯಾಯಾಲಯದ ಮುಂದೆ ತಮಗೆ ನೀಡಿದ ಕಿರುಕುಳಗಳನ್ನು ಹೇಳಿಕೊಳ್ಳುವಾಗ ಎಂಥವರ ಕಣ್ಣಲ್ಲೂ ನೀರು ಬರುತ್ತಿತ್ತು. ಈ ಎಲ್ಲಾ ಕಿರುಕುಳಗಳ ಪರಿಣಾಮವಾಗಿಯೇ ಅವರು ಪೊಲೀಸರು ಹೇಳಿದ ಹೆಸರುಗಳನ್ನು ತಮ್ಮೊಂದಿಗೆ ಸ್ಫೋಟಕ್ಕೆ ಸಹಕರಿಸಿದವರು ಎಂದು ಅನಿವಾರ್ಯವಾಗಿ ಒಪ್ಪಿಕೊಂಡರು. ತನಿಖಾ ದಳ ಈ ಹೆಸರುಗಳ ಮೂಲಕ ನೇರವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನೇ ಸಿಲುಕಿಸುವ ಪ್ರಯತ್ನ ನಡೆಸುತ್ತಿತ್ತು. ಅವರ ಕಣ್ಣು ನೆಟ್ಟಿದ್ದುದು ಸಂಘದ ಪ್ರಚಾರಕರಾದ ಇಂದ್ರೇಶ್ ಕುಮಾರ್ ಅವರ ಮೇಲೆ! ಆದರೆ ದೇಶದಾದ್ಯಂತ ಈ ವಿರುದ್ಧ ನಡೆದ ಪ್ರತಿಭಟನೆಯಿಂದಾಗಿ ಗಾಬರಿಗೊಂಡ ಕಾಂಗ್ರೆಸ್ಸು ಈ ಯೋಜನೆಯನ್ನು ಕೈಬಿಡಬೇಕಾಗಿ ಬಂತು. ಅಷ್ಟೇ ಅಲ್ಲ, ಕರ್ನಲ್ ಪುರೋಹಿತ್ ಮತ್ತು ಸ್ವಾಮಿ ಅಸೀಮಾನಂದರ ವಿರುದ್ಧ ಕಾಂಗ್ರೆಸ್ಸು ಹೇಳಲು ಪ್ರಯತ್ನಿಸುತ್ತಿದ್ದ ಯಾವ ಸುಳ್ಳುಗಳನ್ನೂ ಭಾರತ ಒಪ್ಪಲು ಸಿದ್ಧವಿರಲಿಲ್ಲ. ಇದು ಅವರಿಗೆ ಸಾಕಷ್ಟು ಹೊಡೆತ ಉಂಟುಮಾಡಿತ್ತು.


ಆಗಲೇ ಪದೇ-ಪದೇ ಹಿಂದೂ ಭಯೋತ್ಪಾದನೆ ಎನ್ನುವ ಪದವನ್ನು ಕಾಂಗ್ರೆಸ್ಸಿಗರು ಬಳಸಿ ಅದನ್ನು ಜನಮಾನಸದಲ್ಲಿ ಉಳಿಸುವ ಪ್ರಯತ್ನ ಮಾಡುತ್ತಿದ್ದರು. ಸಂಝೋತಾ ಪ್ರಕರಣದ ಒಂದು ವರ್ಷದೊಳಗೆ ಮಾಲೆಂಗಾವ್ನಲ್ಲಿ ನಡೆದ ಮತ್ತೊಂದು ಬಾಂಬ್ಸ್ಫೋಟ ಕಾಂಗ್ರಸ್ಸಿನ ಈ ಕಲ್ಪನೆಗಳಿಗೆ ನೀರೆರೆದಿತ್ತು.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top