National

ಕಾಂಗ್ರೆಸ್ಸು ಕಾರ್ಗಿಲ್ ವಿಜಯೋತ್ಸವ ಬೇಡವೆಂದಿತ್ತು!

-ಚಕ್ರವರ್ತಿ ಸೂಲಿಬೆಲೆ

ಕನರ್ಾಟಕದ ಮೂಲೆ ಮೂಲೆಯಲ್ಲಿ ಕಾಗರ್ಿಲ್ನ ವಿಜಯದ ಸಂಭ್ರಮ ಬಲು ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು. 20 ವರ್ಷಗಳ ಹಿಂದೆ ಈ ದೇಶದ ವೀರ ಸೈನಿಕರು ಕಡಿದಾದ ಬೆಟ್ಟಗಳಲ್ಲಿ ಅಡಗಿ ಕುಳಿತಿದ್ದ ಪಾಕಿ ದುಷ್ಟರನ್ನು ಸದೆಬಡಿದು ಭಾರತದ ಕೀತರ್ಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಕಣ್ಣು ಕೋರೈಸುವಂತೆ ಹಾರಿಸಿದ್ದರು. ಒಂದೇ ಒಂದು ಯುದ್ಧ ವಿಮಾನ ಗಡಿ ದಾಟದಂತೆ ನೋಡಿಕೊಳ್ಳುತ್ತಾ ಗಡಿ ರೇಖೆಯೊಳಗೆ ಅಡಗಿ ಕುಳಿತಿದ್ದ ಪಾಕಿಗಳನ್ನು ಹುಡು-ಹುಡುಕಿ ಕೊಂದು ಕೊನೆಗೆ ಅಲ್ಲಿನ ಸಕರ್ಾರ ಗೋಗರೆದಿದ್ದರಿಂದ ಅವರಿಗೆ ಸೇಫ್ ಪ್ಯಾಸೇಜ್ ಅನ್ನೂ ಕೊಡಲಾಗಿತ್ತು. ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಅಟಲ್ ಬಿಹಾರಿ ವಾಜಪೇಯಿ ಕಾಗರ್ಿಲ್ನ ವಿಜಯೋತ್ಸವವನ್ನು ಬಿಟ್ಟೂ ಬಿಡದೇ ಆಚರಿಸುತ್ತಾ ಇಡಿಯ ದೇಶ ಪ್ರಾಣತ್ಯಾಗ ಮಾಡಿದ ಸೈನಿಕರನ್ನು ಪ್ರಾಣದ ಹಂಗುತೊರೆದು ಕಾದಾಡಿದವರನ್ನು ಬಹುವಾಗಿ ಗೌರವಿಸುವಂತೆ ಮಾಡಿಬಿಟ್ಟಿದ್ದರು. ಬಹುಶಃ ಪತ್ರಕರ್ತರೂ ಕೂಡ ಗಡಿ ತುದಿಯಲ್ಲಿ ನಿಂತು ವರದಿ ಮಾಡಿದ ಮೊದಲ ಯುದ್ಧ ಇದೇ ಇರಬೇಕು. ಹೀಗಾಗಿಯೇ ಕಾಗರ್ಿಲ್ನ ಬೆಟ್ಟದ ಕೊರಕಲುಗಳ ನಡುವಿಂದ ಸೈನಿಕರ ಶೌರ್ಯದ ಕಥನಗಳು ಈಗಲೂ ಜನಮನದಲ್ಲಿ ಸದ್ದು ಮಾಡುತ್ತವೆ. ಆದರೆ 2004 ರಲ್ಲಿ ಅಟಲ್ಜೀಯವರ ಸಕರ್ಾರ ಬಿದ್ದು ಹೋದೊಡನೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸು ಮಾಡಿದ ಮೊದಲ ಕೆಲಸ ಕಾಗರ್ಿಲ್ ವಿಜಯೋತ್ಸವದ ಆಚರಣೆಯನ್ನು ನಿಲ್ಲಿಸಿದ್ದು. ಬರಿ ನಿಲ್ಲಿಸಿದ್ದಷ್ಟೇ ಅಲ್ಲ. 2009 ರಲ್ಲಿ ಕಾಂಗ್ರೆಸ್ಸಿನ ಸಂಸದ ರಾಷೀದ್ ಅಲ್ವಿ ‘ಕಾಗರ್ಿಲ್ ವಿಜಯ ಸಂಭ್ರಮಿಸಬೇಕಾದಂಥ ಯುದ್ಧವೇನಲ್ಲ. ಏಕೆಂದರೆ ಅದು ನಮ್ಮದೇ ಗಡಿ ಭಾಗದಲ್ಲಿ ನಡೆದಂಥ ಕದನ. ಅದನ್ನು ಯುದ್ಧವೆಂದೂ ಕರೆಯಲಾಗದು. ಅದನ್ನು ವಿಜಯವೆಂಬಂತೆ ಆಚರಿಸಬೇಕಾಗಿರುವುದು ಬಿಜೆಪಿ ಮಾತ್ರ ದೇಶವಲ್ಲ’ ಎಂದಿದ್ದರು. ಅದೇ ವರ್ಷ ರಾಜ್ಯ ಸಭಾ ಸದಸ್ಯರಾಗಿದ್ದ ರಾಜೀವ್ ಚಂದ್ರಶೇಖರ್ ಸಂಸತ್ತಿನ ಸಭೆಯಲ್ಲಿ ಮಾತನಾಡಿ ಕಾಗರ್ಿಲ್ ವಿಜಯ ದಿವಸವನ್ನು ಸಕರ್ಾರಿ ಗೌರವದೊಂದಿಗೆ ಆಚರಿಸಬೇಕೆಂದು ವಿನಂತಿಸಿಕೊಂಡಿದ್ದರು. ಅಷ್ಟೇ ಅಲ್ಲದೇ, ಆ ವರ್ಷ ಕಾಗರ್ಿಲ್ ವಿಜಯಕ್ಕೆ 10 ನೇ ವರ್ಷವಾಗಿದ್ದರಿಂದ ಅದನ್ನು ಬರಿಯ ಗೆಲುವೆಂಬಂತೆ ಬಿಂಬಿಸದೆ ದೇಶದ ಸಾವಿರಾರು ತರುಣರಿಗೆ ಸೈನ್ಯಕ್ಕೆ ಸೇರಲು ಪ್ರೇರಣೆಯಾಗುವಂತೆ ಮಾಡಬೇಕೆಂದು ವಿನಂತಿಸಿಕೊಂಡಿದ್ದರು. ಅವರೇ ರಕ್ಷಣಾ ಇಲಾಖೆಗೂ, ರಕ್ಷಣಾ ಮಂತ್ರಿಗೂ ಪತ್ರ ಬರೆದು ಪ್ರತೀ ವರ್ಷ ಇದನ್ನು ಉತ್ಸವದಂತೆೆ ಆಚರಿಸಬೇಕೆಂದು ಕೇಳಿಕೊಂಡೂ ಇದ್ದರು. ಈ ಪತ್ರಕ್ಕೆ ಪ್ರತಿಫಲವಾಗಿ 2010 ರಲ್ಲಿ ರಕ್ಷಣಾ ಮಂತ್ರಿ ಎ.ಕೆ ಆಂಟನಿ ಆ ವರ್ಷ ಅಮರ್ ಜವಾನ್ ಜ್ಯೋತಿಯ ಬಳಿ ಕಾಗರ್ಿಲ್ ವಿಜಯೋತ್ಸವವನ್ನು ಆಚರಿಸಲಾಗುವುದೆಂದು ಹೇಳಿಕೆಯನ್ನೂ ಕೊಟ್ಟಿದ್ದರು.

ಸೈನಿಕರು ಕದನ ಭೂಮಿಯಲ್ಲಿ ಕಾದಾಡುವಾಗ ಪ್ರಧಾನಮಂತ್ರಿ ಯಾರೆಂದು ನೋಡಿಕೊಂಡು ಬಡಿದಾಡುವುದಿಲ್ಲ. ಶತ್ರುಗಳ ಎದೆಗೆ ಗುಂಡು ಹೊಡೆಯುವಾಗ ದೇಶವನ್ನಾಳುತ್ತಿರುವ ಪಕ್ಷ ಯಾವುದೆಂಬುದು ಅವರಿಗೆ ಮುಖ್ಯವಾಗುವುದಿಲ್ಲ. ಎದುರಾಳಿಗಳ ಗುಂಡಿಗೆ ಎದೆ ಚಾಚಿ ನಿಲ್ಲುವಾಗ ಆಳುತ್ತಿರುವ ಪ್ರಧಾನಿ ಇಟಲಿಯವನೋ ಭಾರತದವನೋ ಎಂದೂ ನೆನಪಿಟ್ಟುಕೊಳ್ಳುವುದಿಲ್ಲ. ಅವರಿಗೆ ಭಾರತದ ಒಂದಿಂಚೂ ಭೂಮಿಯನ್ನು ಶತ್ರುಗಳಿಗೆ ಬಿಟ್ಟುಕೊಡುವುದಿಲ್ಲವೆಂಬ ಹಠವಷ್ಟೇ. ಅದಕ್ಕಾಗಿಯೇ ಅವರು ಹುಚ್ಚಿಗೆ ಬಿದ್ದು ಕಾದಾಡುವುದು. ಗುಂಡೇಟು ತಿಂದು ಮಲಗಿರುವ ಪ್ರತಿಯೊಬ್ಬ ಸೈನಿಕನೂ ಎದುರಾಳಿಗಳ ಗುಂಡನ್ನು ಎದೆಗೆ ತಿಂದವನೇ ಹೊರತು ಬೆನ್ನಿಗಲ್ಲ. ಹೀಗಿರುವಾಗಲೂ ಅವನನ್ನು ಪಕ್ಷವಾಗಿ, ಜಾತಿಯಾಗಿ, ಪ್ರಾಂತವಾಗಿ ವಿಭಜಿಸುವ ಹೀನ ಗುಣ ಕಾಂಗ್ರೆಸ್ಸಿನದ್ದು ಮಾತ್ರ. ಸ್ವಾತಂತ್ರ್ಯ ಬಂದಾಗಿನಿಂದಲೂ ವಿಭಜನೆಯ ಮೇಲೇ ಸೌಧ ಕಟ್ಟಿರುವುದು ಕಾಂಗ್ರೆಸ್ಸಿಗರು. ದೇಶ ಹಿಂದೂಸ್ತಾನ ಮತ್ತು ಪಾಕಿಸ್ತಾನವೆಂದು ಇಬ್ಭಾಗವಾಗಿರದಿದ್ದರೆ ನೆಹರು ಪ್ರಧಾನಿಯಾಗಿರುತ್ತಿರಲಿಲ್ಲ. ಮುಸಲ್ಮಾನರ ತುಷ್ಟೀಕರಣ ಮಾಡುತ್ತ ಅವರನ್ನು ಮತ ಬ್ಯಾಂಕಾಗಿ ಪರಿವರಿತರ್ಿಸದೇ ಹೋಗಿದ್ದಿದ್ದರೆ ಕಾಂಗ್ರೆಸ್ಸು ಮತ್ತೆ ಮತ್ತೆ ಚುನಾವಣೆಗಳನ್ನು ಗೆಲ್ಲುತ್ತಲೇ ಇರಲಿಲ್ಲ. ಹಿಂದೂಗಳ ಒಗ್ಗಟ್ಟು ಭಾಜಪಕ್ಕೆ ಶಕ್ತಿ ತುಂಬುತ್ತಿದೆ ಎಂದು ಗೊತ್ತಾದಾಗಲೇ ಅವರು ಜಾತಿಗಳ ಲೆಕ್ಕಾಚಾರ ಶುರುಮಾಡಿದರು. ಕೊನೆಗೆ ಸೈನ್ಯದೊಳಗೂ ಜಾತಿಯನ್ನು ಗುರುತಿಸಿ ಮೀಸಲಾತಿಯ ಮಾತೆತ್ತತೊಡಗಿದರು. ಇಂಥ ಅಯೋಗ್ಯರಿಗೆ ಕಾಗರ್ಿಲ್ನಲ್ಲಿ ಸೈನಿಕರ ಗೆಲುವನ್ನು ಸಂಭ್ರಮಿಸಬೇಕು ಎನಿಸುವುದೇ ಇಲ್ಲ.

ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ರನ್ನು ಕಾಂಗ್ರೆಸ್ಸಿನ ನಾಯಕ ಸಂದೀಪ್ ದೀಕ್ಷಿತ್ ಬೀದಿ ಬದಿಯ ಗೂಂಡಾ ಎಂದು ಕರೆದಿದ್ದನ್ನು ಯಾರು ಮರೆಯಲು ಸಾಧ್ಯ ಹೇಳಿ! ಇಷ್ಟಕ್ಕೂ ಅವರು ಸೇನಾ ಮುಖ್ಯಸ್ಥರನ್ನು ಜರಿದಿದ್ದು ಏಕೆ ಗೊತ್ತಾ? ಬಿಪಿನ್ ರಾವತ್ರು ಪಾಕಿಸ್ತಾನಕ್ಕೆ ಕಟುವಾದ ಶಬ್ದಗಳಲ್ಲಿ ಎಚ್ಚರಿಕೆ ಕೊಟ್ಟಿದ್ದರು ಎಂಬ ಒಂದೇ ಕಾರಣಕ್ಕೆ. ಇದೇ ಕಾಂಗ್ರೆಸ್ಸು ಭಾರತೀಯ ಸೇನೆ ಸಜರ್ಿಕಲ್ ಸ್ಟ್ರೈಕ ನಡೆಸಿದಾಗ ಈ ಬಗೆಯ ದಾಳಿ ನಡೆದಿದ್ದೇ ಸುಳ್ಳು ಎಂದು ವಾದಿಸಿತ್ತು. ಒಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್ಸಿನ ಬೆಂಬಲ ಪಡೆದ ಕೆಲವು ಅಯೋಗ್ಯರು ಈ ದಾಳಿಗೆ ಪುರಾವೆಗಳನ್ನು ಕೊಡಿ ಎಂದೂ ಕೇಳಿಬಿಟ್ಟರು. ತೀರಾ ಇತ್ತೀಚೆಗೆ ಸಜರ್ಿಕಲ್ ದಾಳಿಯ ಪುರಾವೆಗಳೂ ವಿಡಿಯೊ ಸಮೇತ ಹೊರಬಂದಾಗ ಮಾತನಾಡಿದವರೆಲ್ಲರ ಬಾಯಿ ಕಟ್ಟಿಹೋಗಿತ್ತು. ಕೆಲವೊಮ್ಮೆ ಕಾಂಗ್ರೆಸ್ಸು ಭಾರತೀಯ ಸೇನೆಯ ಬೆಂಬಲಕ್ಕೆ ನಿಂತಿದೆಯೋ ಅಥವಾ ಪಾಕಿಸ್ತಾನಿ ಸೇನೆಯನ್ನು ಆರಾಧಿಸುವುದೋ ಎಂಬುದೇ ಅರಿವಾಗುವುದಿಲ್ಲ!


ಹಾಗೆನಿಸಲಿಕ್ಕೆ ಕಾರಣವೂ ಇದೆ. ಕಾಶ್ಮೀರದ ಸಮಸ್ಯೆಯ ವಿಚಾರ ಬಂದಾಗ ಕಾಂಗ್ರೆಸ್ಸು ಯಾವಾಗಲೂ ಆ ರಾಜ್ಯದ ಕೆಲವು ಭಾಗಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕು ಎಂಬ ಧಾಟಿಯಲ್ಲೇ ಮಾತನಾಡುತ್ತದೆ. ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಚಿದಂಬರಂ ಕಾಶ್ಮೀರದ ಕೆಲವು ಭಾಗಗಳಿಗೆ ಪೂರ್ಣ ಸ್ವಾಯತ್ತತೆ ಕೊಟ್ಟು ಅವರಿಗೆ ಶಕ್ತಿ ತುಂಬಬೇಕು ಎಂದು ಹೇಳಿದ್ದರು. ಈಗ ಜಮ್ಮು-ಕಾಶ್ಮೀರಕ್ಕೆ ಕೊಟ್ಟಿರುವ ಸವಲತ್ತುಗಳೇ ಅದನ್ನು ಭಾರತದಿಂದ ಪ್ರತ್ಯೇಕವಾಗಿ ನಿಲ್ಲುವಂತೆ ಮಾಡಿದೆ ಎಂದ ಮೇಲೆ ಇನ್ನೇನಾದರೂ ಕೆಲವು ಭಾಗಗಳಿಗೆ ಪೂರ್ಣ ಸ್ವಾಯತ್ತತೆ ಕೊಟ್ಟರೆ ಕಥೆ ಏನಾಗಬಹುದು ಊಹಿಸಿ. ಆ ಭಾಗಗಳು ಅಕ್ಷರಶಃ ಭಾರತದೊಳಗಿನ ಪಾಕಿಸ್ತಾನವೇ ಆಗಿಬಿಡುತ್ತದೆ. ಕಾಂಗ್ರೆಸ್ಸಿನ ಪಾಲಿಗೆ ಅಪಶಕುನವೇ ಆಗಿಬಿಟ್ಟಿರುವ ಮತ್ತೊಬ್ಬ ಪ್ರಭಾವಿ ನಾಯಕ ಮಣಿಶಂಕರ್ ಅಯ್ಯರ್ ಅದ್ಯಾವಾಗ ಪಾಕಿಸ್ತಾನದಲ್ಲಿರುತ್ತಾರೋ ಎಂದು ಭಾರತಕ್ಕೆ ಬರುತ್ತಾರೋ ಊಹಿಸುವುದೇ ಕಷ್ಟ. ಇನ್ನು ರಮ್ಯಾಳ ಕಥೆ ಕೇಳಲೇಬೇಡಿ. ಪಾಕಿಸ್ತಾನವನ್ನು ಸ್ವರ್ಗವೆಂದು ಕರೆದು, ನನಗೆ ಆ ದೇಶ ಬಹಳ ಇಷ್ಟವಾಯಿತು ಎಂದುಬಿಟ್ಟಳಲ್ಲ, ಒಮ್ಮೆಯಾದರೂ ಅಲ್ಲಿನ ಸಕರ್ಾರದಿಂದ ಮತ್ತು ಸೇನೆಯಿಂದ ಪ್ರೇರೇಪಿತ ಭಯೋತ್ಪಾದಕರ ದಾಳಿಗೆ ಬಲಿಯಾದ ಹುತಾತ್ಮರ ಮನೆಗಳನ್ನು ಆಕೆ ಕಂಡಿದ್ದಾಳಾ? ಕದನ ಭೂಮಿಯಲ್ಲಿ ಪಾಕಿಸ್ತಾನದ ಯುದ್ಧದ ತೆವಲಿಗೆ ಬಲಿಯಾಗಿ ಸಾವಿರಾರು ಯೋಧರು ತಮ್ಮ ತಂದೆ-ತಾಯಿಯರನ್ನು, ಹೆಂಡತಿ-ಮಕ್ಕಳನ್ನು ಬಿಟ್ಟು ವೀರ ಸ್ವರ್ಗವನ್ನಪ್ಪಿದರಲ್ಲ ಅವರುಗಳ ಕುರಿತಂತೆ ಆಕೆಗೆ ಏನಾದರೂ ಗೊತ್ತಿದೆಯೇ? ಅಥವಾ ಪಾಕಿಸ್ತಾನವನ್ನು ಹೊಗಳಿದರೆ ಮುಸಲ್ಮಾನರ ವೋಟು ಖಾತ್ರಿ ಎಂಬುದೊಂದೇ ಭರವಸೆಯಾ!

ಅನೇಕ ಬಾರಿ ಕಾಂಗ್ರೆಸ್ಸು ಭಾರತದಲ್ಲಿ ಸ್ಫಧರ್ಿಸುವ ಬದಲು ಪಾಕಿಸ್ತಾನಕ್ಕೆ ಚುನಾವಣೆಗೆ ನಿಂತರೆ ಇನ್ನೂ ಹೆಚ್ಚು ಸೀಟು ಗಳಿಸಬಹುದು ಎಂದೆನಿಸುತ್ತದೆ. ಪಾಕಿಸ್ತಾನದ ಮಾಧ್ಯಮಗಳಲ್ಲಿ ರಾತ್ರಿ ಹಗಲಾದರೆ ನರೇಂದ್ರಮೋದಿಯವರ ವಿಚಾರವನ್ನೇ ಮುಂದಿಟ್ಟುಕೊಂಡು ಚಚರ್ೆ ನಡೆಯುತ್ತದೆ. ಆತನಂತ ಪ್ರಧಾನಿ ತಮ್ಮ ದೇಶಕ್ಕೆ ಬೇಕೆಂದು ಅಲ್ಲಿನ ಜನ ಅಪೇಕ್ಷೆ ಪಡುತ್ತಾರೆ. ಇಲ್ಲಿ ವಿರೋಧ ಪಕ್ಷ ಭಾರತವನ್ನೇ ಪಾಕಿಸ್ತಾನ ಮಾಡಿ ತಾವು ಆಳಬೇಕೆಂದು ಬಯಸುತ್ತಾರೆ. ಬಲು ದೌಭರ್ಾಗ್ಯಕರ ಸಂಗತಿ. ರಾಷ್ಟ್ರೀಯತೆಯ ವಿಚಾರದಲ್ಲಿ ಕಾಂಗ್ರೆಸ್ಸು ಕಲಿಯಬೇಕಾದ ಪಾಠ ಬಹಳಷ್ಟಿದೆ. ಈ ವಿಚಾರದಲ್ಲಿ ಭಾಜಪವನ್ನು ಕೆಲವೊಮ್ಮೆ ಒಪ್ಪಲೇಬೇಕು. 2008 ರ ನವೆಂಬರ್ 26 ರಂದು ಮುಂಬೈನಲ್ಲಿ ಭಯೋತ್ಪಾದಕ ದಾಳಿಯಾದಾಗ ಅಂದಿನ ಮನಮಹೋನ್ ಸಿಂಗ್ರ ನಿಷ್ಕ್ರಿಯತೆಯನ್ನು ತೆಗಳುವ ಅವಕಾಶಗಳು ಭಾಜಪಕ್ಕೆ ಸಾಕಷ್ಟಿತ್ತು. ಬೇಹುಗಾರಿಕೆಯ ವೈಫಲ್ಯ, ಭದ್ರತಾ ವೈಫಲ್ಯ ಕೊನೆಗೆ ಕಾಯರ್ಾಚರಣೆಯಲ್ಲಿ ಸಕರ್ಾರದ ನಿರ್ಲಕ್ಷ್ಯ ಇವೆಲ್ಲವನ್ನೂ ಮುಂದಿಟ್ಟುಕೊಂಡು ವಿರೋಧ ಪಕ್ಷವಾಗಿ ಭಾಜಪಾ ಝಾಡಿಸಬೇಕಿತ್ತು. ಆದರೆ ರಾಷ್ಟ್ರಕ್ಕೆ ಸಂಕಟ ಬಂದ ಹೊತ್ತಲ್ಲಿ ಸಕರ್ಾರದ ವಿರುದ್ಧ ನಿಂತರೆ ಅದು ಜಗತ್ತಿಗೆ ಕೆಟ್ಟ ಸಂದೇಶವನ್ನು ಕೊಡುತ್ತದೆಂಬ ಒಂದೇ ಕಾರಣಕ್ಕೆ ಹಾಗೆ ಮಾಡದೇ ಸಕರ್ಾರದ ಮತ್ತು ಸೇನೆಯ ಪರವಾಗಿ ನಿಂತರು. ಅದರ ಪರಿಣಾಮ ಕಾಂಗ್ರೆಸ್ಸು ಮತ್ತೊಮ್ಮೆ ಅಧಿಕಾರಕ್ಕೂ ಬಂದುಬಿಡ್ತು. ಆದರೆ, ಈಗ ಪ್ರತಿಪಕ್ಷವಾಗಿರುವ ಕಾಂಗ್ರೆಸ್ಸು ಸೈನಿಕರ ಕುರಿತಂತೆ ಲಘುವಾಗಿ ಮಾತನಾಡುತ್ತದೆ, ಅವರು ನಡೆಸಿದ ಕಾಯರ್ಾಚರಣೆಯನ್ನು ಲಘುವಾಗಿ ಬಿಂಬಿಸುತ್ತದೆ ಕೊನೆಗೆ ಸೇನಾ ನಾಯಕರ ಕುರಿತಂತೆಯೂ ತನ್ನ ನಾಲಿಗೆಯನ್ನು ಹರಿಬಿಡುತ್ತದೆ. ರಾಷ್ಟ್ರ ಸುರಕ್ಷೆ ಎಂಬ ಪದಗಳ ಅರ್ಥವೇ ಅವರಿಗೆ ಗೊತ್ತಿದ್ದಂತಿಲ್ಲ.

ಕಾಂಗ್ರೆಸ್ಸಿಗೆ ಆಳುವ ತುಡಿತದ ನಡುವೆ ದೇಶಭಕ್ತಿ ರಾಷ್ಟ್ರನಿಷ್ಠೆ ಇವೆಲ್ಲವೂ ಮರೆತೇ ಹೋಗಿದೆ. ನಾಲ್ಕೂವರೆ ವರ್ಷಗಳ ಕಾಲ ಮೋದಿ ನಡೆಸಿರುವ ಆಡಳಿತ ಶೈಲಿ ಕಾಂಗ್ರೆಸ್ಸಿನ ಬಂಡವಾಳವನ್ನು ಜನಸಾಮಾನ್ಯರ ಮುಂದೆ ಬಯಲಿಗೆಳೆದಿಟ್ಟಿದೆ.

Click to comment

Leave a Reply

Your email address will not be published. Required fields are marked *

Most Popular

To Top