National

ಕಾಂಗ್ರೆಸ್ಸಿನ ನೇತೃತ್ವ ರಾಹುಲ್ಗೆ ಹುಲಿ ಸವಾರಿ!

ಸೋನಿಯಾ. ಈ ದೇಶದ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಹತ್ತು ವರ್ಷಗಳ ಕಾಲ ಗುರುತಿಸಿಕೊಂಡವರು. ಆಕೆಯ ಅದೃಷ್ಟಕ್ಕೆ ಏನೆನ್ನಬೇಕೋ ದೇವರೇಬಲ್ಲ. ಇಟಲಿಯ ಟುರೀನ್ ಬಳಿಯ ಅಬರ್ಾಸ್ಯಾನೊ ಎಂಬ ಹಳ್ಳಿಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಹೆಣ್ಣುಮಗಳೊಬ್ಬಳು ಭಾರತದ ಅತ್ಯಂತ ಪ್ರಭಾವಿ ಕುಟುಂಬಕ್ಕೆ ಸೊಸೆಯಾಗಿ ಬರುತ್ತಾಳೆಂದು ಯಾರೂ ಊಹಿಸಿರಲಿಲ್ಲ. ತಂದೆ ಕಟ್ಟಡಗಳನ್ನು ಕಟ್ಟುವ ಮೇಸ್ತ್ರಿಯಾಗಿದ್ದ. ಮೂರು ಹೆಣ್ಣುಮಕ್ಕಳು ಅವನಿಗೆ. ಆಂಟೋನಿಯೋ ಮಾಯ್ನೋ ಎಂಬ ಹೆಸರಿನ ಈ ಹೆಣ್ಣುಮಗಳು 18 ಆದಾಗ ಇಂಗ್ಲೀಷ್ ಅಧ್ಯಯನಕ್ಕೆಂದು ಕೇಂಬ್ರಿಡ್ಜ್ಗೆ ಬಂದಳು. 1965ರಲ್ಲಿ ಇಂಗ್ಲೆಂಡಿನಲ್ಲಿ ಆಕೆ ಅದೇ ಯುನಿವಸರ್ಿಟಿಯಲ್ಲಿ ಇಂಜಿನಿಯರ್ ಅಧ್ಯಯನಕ್ಕೆಂದು ಬಂದಿದ್ದ ರಾಜೀವ್ನನ್ನು ಭೇಟಿಯಾದಳು. ಅವರ ಭೇಟಿಯ ಪ್ರೇಮ ಪ್ರಕರಣದ ವಿವರಗಳು ಹೆಚ್ಚು-ಹೆಚ್ಚು ಲಭ್ಯವಿಲ್ಲವಾದರೂ ಅದು ಮೊದಲ ನೋಟದ ಪ್ರೇಮವೆಂಬುದನ್ನು ಸೋನಿಯಾ ಹೇಳಿಕೊಂಡಿದ್ದಾರೆ. ಆದರೆ, ಹೀಗೊಂದು ಸಂಬಂಧ ಕುದುರುವುದು ಸುಲಭವಿರಲಿಲ್ಲ. ಪ್ರಧಾನಮಂತ್ರಿಯಾಗಿದ್ದ ಅಜ್ಜ, ಪ್ರಭಾವಿ ಸ್ಥಾನದಲ್ಲಿದ್ದ ಅಮ್ಮ, ಇವರ ಛಾಯೆಯಲ್ಲಿ ಬೆಳೆದು ವಿದೇಶಿ ಹೆಣ್ಣುಮಗಳೊಬ್ಬಳನ್ನು ಮದುವೆಯಾಗುವುದು ಸಲೀಸಾದ ಸಂಗತಿಯಾಗಿರಲಿಲ್ಲ. ಹೀಗಾಗಿ ಪ್ರೇಮಪ್ರಕರಣ ತೆವಳುತ್ತಲೇ ಸಾಗಿತೆಂದು ಹೇಳುತ್ತಾರೆ. ಬಹುಶಃ ಸೋನಿಯಾಳನ್ನು ಪಡೆಯಲೆಂದೇ ರಾಜೀವ್ ರಾಜಕೀಯದಿಂದ ದೂರವಿರುವ ನಿಶ್ಚಯವನ್ನೂ ಮಾಡಿದ್ದಿರಬಹುದು. ಅದಕ್ಕೆ ತನ್ನ ಭವಿಷ್ಯದ ರಾಜಕೀಯ ವಾರಸುದಾರಿಕೆ ಸಂಜಯ್ನದ್ದೇ ಎಂದು ಇಂದಿರಾ ನಿರ್ಧರಿಸಿಬಿಟ್ಟಿದ್ದರೆನಿಸುತ್ತದೆ. ಈ ಹಿಂದೆ ಇದೇ ಅಂಕಣದಲ್ಲಿ ಹೇಳಿದಂತೆ ಸಂಜಯ್ ಏಕಾಕಿ ಅಧಿಕಾರವನ್ನು ಕೈಗೆ ತೆಗೆದುಕೊಳ್ಳುವ ಪ್ರಯತ್ನ ಆರಂಭಿಸಿದ್ದು ಈ ಹೊತ್ತಿನಲ್ಲಿಯೇ. ಕಾಂಗ್ರೆಸ್ಸಿನ ಹಿರಿಯ ನಾಯಕರ ಕಣ್ಣು ಕೆಂಪಾಗಿದ್ದೂ ಕೂಡ ಆಗಲೇ. ಸೋನಿಯಾರ ತಂದೆಗೆ ಈ ಸಂಬಂಧ ಅಷ್ಟಾಗಿ ಇಷ್ಟವಿರಲಿಲ್ಲ ಎನ್ನಲಾಗುತ್ತದೆ. ಬಲುದೊಡ್ಡ ಕುಟುಂಬಕ್ಕೆ ಸೊಸೆಯಾಗಿ ಹೋಗುವುದು ಸಮಸ್ಯೆಯನ್ನು ಮೈಮೇಲೆಳೆದುಕೊಂಡಂತೆ ಎಂಬುದು ಅವರ ಅಭಿಮತವಿದ್ದಿರಬೇಕು. ಆದರೆ ಸೊಸೆಗೆ ಇಂದಿರಾ ಬಲುಬೇಗ ಹೊಂದಿಕೊಂಡರು. ಮೋದಿಯವರಿಗೆ ಕಠಿಣ ಪ್ರಶ್ನೆಗಳನ್ನು ಕೇಳುವ ತವಕ ವ್ಯಕ್ತಪಡಿಸುವ ಪತ್ರಕರ್ತರನೇಕರು ಸೋನಿಯಾರಿಗೆ ಕೇಳಿದ ಪ್ರಶ್ನೆಗಳು ಅತ್ತೆ-ಸೊಸೆಯರ ಸಂಬಂಧದ ಕುರಿತಾದದ್ದೇ ಎಂಬುದನ್ನು ನೆನಪಿಡಬೇಕು. ರಾಜ್ದೀಪ್ ಸರದೇಸಾಯ್ಯಂತೂ ಪಿಜ್ಜಾ-ಪರಾಠಾಗಳ ಹೊಂದಾಣಿಕೆಯಾಗಿದ್ದು ಹೇಗೆ? ಎಂಬ ಪ್ರಶ್ನೆಯನ್ನು ಹೊಸ ಸಂಶೋಧನೆ ಎಂಬಂತೆ ಕೇಳುತ್ತಾರೆ. ಆದರೆ ಸೋನಿಯಾ ಮೇನಕಾಳಿಗಿಂತಲೂ ಅತ್ತೆಗೆ ಹತ್ತಿರವಾದದ್ದಂತೂ ನಿಜ. ಆಗಲೂ ಕೂಡ ಆಕೆ ರಾಜಕೀಯದ ಇಚ್ಛೆಯನ್ನು ತೋರಿಸಿದ್ದು ಇತಿಹಾಸವನ್ನು ಅವಲೋಕಿಸಿದಾಗಂತೂ ಕಂಡುಬರುವುದಿಲ್ಲ. ಸ್ವತಃ ರಾಜೀವ್ನನ್ನು ರಾಜಕೀಯಕ್ಕೆ ಹೋಗದಂತೆ ತಡೆದುದಲ್ಲದೇ ಸೋನಿಯಾ ತನ್ನ ಮಕ್ಕಳನ್ನು ರಾಜಕಾರಣದ ಪಡಸಾಲೆಯಿಂದ ದೂರವೇ ಇಟ್ಟು ಬೆಳಕಿಗೆ ಬರದಂತೆ ತಡೆಹಿಡಿದಿದ್ದರು. ಇಂದಿರಾಗಾಂಧಿಯ ಸಾವಿನೊಂದಿಗೆ ಪರಿಸ್ಥಿತಿ ಬದಲಾಯ್ತು. ರಾಜೀವ್ ಅನಿವಾರ್ಯವಾಗಿ ರಾಜಕಾರಣದ ಮುಂಚೂಣಿಗೆ ಬರಬೇಕಾಯ್ತು. ಇದು ರಷ್ಯಾದ ಗೂಢಚಾರರ ಆಲೋಚನೆ, ಅವರಿಗೆ ತಕ್ಕಂತೆ ಇಲ್ಲಿನ ರಾಜಕೀಯ ಪರಿಸ್ಥಿತಿಯನ್ನು ರೂಪಿಸಲಾಯ್ತು ಎಂದೆಲ್ಲಾ ಸಿದ್ಧಾಂತಗಳು ಮಾರುಕಟ್ಟೆಯಲ್ಲಿ ಓಡಾಡುತ್ತವೆ. ಸತ್ಯ-ಸುಳ್ಳುಗಳನ್ನು ಹಂಸಕ್ಷೀರ ನ್ಯಾಯದಂತೆ ಪ್ರತ್ಯೇಕಿಸಿ ಹೇಳುವುದು ಬಲುಕಠಿಣ. ಆದರೆ ರಾಜೀವ್ ರಾಜಕೀಯಕ್ಕೆ ಹೋಗದಂತೆ ತಡೆಯುವ ಪ್ರಯತ್ನ ಮಾಡಿದ್ದು ಸೋನಿಯಾರೇ ಎಂಬುದು ಮಾತ್ರ ಮೇಲ್ನೋಟಕ್ಕೆ ಗೋಚರವಾಗುತ್ತದೆ! ರಾಜೀವ್ ಪ್ರಧಾನಿಯಾಗಿ ಹೆಚ್ಚು ಯಶ ಕಂಡವರಲ್ಲ. ಅಧಿಕಾರ ಹೇಗೆ ನಡೆಸಬೇಕೆಂಬುದನ್ನು ಕಲಿತು ಪ್ರಯೋಗಿಸುವುದರಲ್ಲೇ ಅವರ ಅಂತ್ಯ ಬಂದಾಗಿತ್ತು. ಅತ್ಯಂತ ದಾರುಣವಾದ ರೀತಿಯಲ್ಲಿ ಶ್ರೀಪೆರಂಬುದೂರ್ನಲ್ಲಿ ರಾಜೀವ್ ಕೊಲ್ಲಲ್ಪಟ್ಟರು. ಯಾವುದರ ಆತಂಕ ಸೋನಿಯಾರಿಗಿತ್ತೋ ಅದು ಕೊನೆಗೂ ನಡೆದುಹೋಯ್ತು. ಆಕೆ ಈಗ ಪೂರ್ಣಪ್ರಮಾಣದಲ್ಲಿ ಮುಖ್ಯವಾಹಿನಿಗೆ ಬರದೇ ತನ್ನ ಮಕ್ಕಳೊಂದಿಗೆ ಕಾಲ ಕಳೆದುಕೊಂಡಿರಬೇಕೆಂದು ಬಯಸಿದ್ದಿರಬಹುದು. ಆಗಲೇ ಪಿ.ವಿ ನರಸಿಂಹರಾಯರು ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿದು ಬಲವಾದ ಕಾಂಗ್ರೆಸ್ ನಿಮರ್ಾಣಕ್ಕೆ ಪ್ರಯತ್ನ ಆರಂಭಿಸಿದ್ದು. ಗಾಂಧಿ ಪರಿವಾರಕ್ಕೆ ಇದರಿಂದ ಸಮಸ್ಯೆ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಆ ಪರಿವಾರವನ್ನು ನಂಬಿಕೊಂಡ ಹಿರಿಯ ನಾಯಕರುಗಳಿಗೆ ಮಾತ್ರ ಕಸಿವಿಸಿಯಾಗುತ್ತಲೇ ಇತ್ತು. ಎಷ್ಟು ಬಾರಿ ಓಲೈಸುವ ಯತ್ನ ಮಾಡಿದರೂ ಸೋನಿಯಾ ಮುಖ್ಯಭೂಮಿಕೆಗೆ ಬರುವುದು ಕಾಣುತ್ತಿರಲಿಲ್ಲ. ಸೀತಾರಾಂ ಕೇಸರಿ ಪರಿವಾರದ ಭಜಕಮಂಡಲಿಯನ್ನು ಪೂರ್ಣಪ್ರಮಾಣದಲ್ಲಿ ಮಟ್ಟಹಾಕಿಬಿಡುತ್ತಾರೆಂಬ ಅರಿವು ಮೂಡಿದಾಗಲೇ ಸೋನಿಯಾರನ್ನು ರಾಜಕೀಯಕ್ಕೆ ಎಳೆತರುವ ಪ್ರಯತ್ನ ಪೂರ್ಣಗೊಂಡಿದ್ದು. ಸೀತಾರಾಂ ಕೇಸರಿಯವರನ್ನು ಶೌಚಾಲಯದಲ್ಲೇ ಬಂಧಿಸಿ ಸೋನಿಯಾ ಅಧ್ಯಕ್ಷಗಾದಿ ಏರಿ ಕುಳಿತುಬಿಟ್ಟರು. ಅಲ್ಲಿಯವರೆಗೆ ಪರಿವಾರದ ಮುಷ್ಠಿಯಿಂದ ಹೊರಗುಳಿದಿದ್ದ ಕಾಂಗ್ರೆಸ್ಸನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡುಬಿಟ್ಟರು. ಆರಂಭಿಕ ದಿನಗಳು ಖುಷಿಕೊಡುವಂಥದ್ದೇನೂ ಆಗಿರಲಿಲ್ಲ. ಚುನಾವಣೆಗಳಲ್ಲಿ ಕಾಂಗ್ರೆಸ್ಸು ಕುಚರ್ಿಯ ಹತ್ತಿರಕ್ಕೂ ಬರದೇ ಅನಿವಾರ್ಯವಾಗಿ ಪ್ರತಿಪಕ್ಷವಾಗಬೇಕಾಗಿ ಬಂತು. ಅಟಲ್ಜೀ ಮೂರು ಬಾರಿ ಪ್ರಧಾನಿಯಾದರು. ಆಗೆಲ್ಲಾ ಕಾಂಗ್ರೆಸ್ಸು ಬದಲಾವಣೆಯ ಪರ್ವಕ್ಕೆ ತೆರೆದುಕೊಳ್ಳಬಹುದಿತ್ತು. ಪರಿವಾರದಡಿಯಲ್ಲಿ ಪಕ್ಷವನ್ನಿಟ್ಟುಕೊಳ್ಳುವುದರಿಂದ ಆಗಬಹುದಾಗಿದ್ದ ಲಾಭವನ್ನು ಅನುಭವಿಸಿದ್ದ ಸೋನಿಯಾ ಬಲವಾಗಿ ಆತುಕೊಂಡರು. ಎಲ್ಲಾ ಪಕ್ಷಗಳೊಂದಿಗೂ ಆಕೆಯದ್ದು ಸೌಹಾರ್ದ ಸಂಬಂಧವೇ ಇತ್ತು. ಅಟಲ್ಜೀ ಎಂದಿಗೂ ಸೋನಿಯಾರನ್ನು ಅಥವಾ ಪರಿವಾರವನ್ನು ಸಿಕ್ಕಿಸಿಹಾಕುವ ಕೆಲಸವನ್ನೇ ಮಾಡಲಿಲ್ಲ. ಅವರ ವಿರುದ್ಧ ನಡೆಸಬಹುದಾಗಿದ್ದ ಎಲ್ಲಾ ವ್ಯಾಜ್ಯಗಳನ್ನು ಬದಿಗಿಟ್ಟು ಕಾಂಗ್ರೆಸ್ ಮಾಡುವಂತೆ ದ್ವೇಷದ ರಾಜಕಾರಣ ಮಾಡುವುದಿಲ್ಲವೆಂದು ರಾಷ್ಟ್ರಕ್ಕೆ ತೋರಿಸಿಕೊಟ್ಟರು. ಕೆಲವು ಮೂಲಗಳನ್ನು ನಂಬುವುದಾದರೆ ಸೋನಿಯಾ- ರಾಹುಲ್ರನ್ನು ಅತ್ಯಂತ ಕಠಿಣ ಸಂದರ್ಭಗಳಿಂದ ರಕ್ಷಿಸಿದವರೇ ಅಟಲ್ಜೀ!


ಸೋನಿಯಾರ ಅದೃಷ್ಟ ಚೆನ್ನಾಗಿತ್ತು. 2004ರಲ್ಲಿ ಅಟಲ್ಜೀ ಚುನಾವಣೆ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿರುವಾಗಲೇ ಬಿಜೆಪಿ ಸೋತು ಕಾಂಗ್ರೆಸ್ಸು ಅಧಿಕಾರದ ಹತ್ತಿರಕ್ಕೆ ಬಂದುಬಿಟ್ಟಿತು. ಸೋನಿಯಾರ ಬದುಕಿನ ಅದೃಷ್ಟ ಈಗ ಕೆಲಸಮಾಡಲಾರಂಭಿಸಿತು. ಅದು ಯಾವಾಗಲೂ ಹಾಗೆಯೇ. ಆರಂಭದಲ್ಲಿ ರಾಜೀವ್ರನ್ನು ಮದುವೆಯಾಗಿದ್ದು ಅದೃಷ್ಟವೋ ದುರದೃಷ್ಟವೋ ಎಂದು ನಿರ್ಧರಿಸಲಾಗದ ಪರಿಸ್ಥಿತಿಯಿಂದ ಆಕೆ ಈಗ ಭಾರತವನ್ನಾಳುವ ಕುಚರ್ಿಯ ಮೇಲೆ ಕುಳಿತುಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದರು.

ಕಾಂಗ್ರೆಸ್ಸಿಗರು ಸೋನಿಯಾ ಪ್ರಧಾನಿ ಪಟ್ಟವನ್ನು ತ್ಯಾಗಮಾಡಿದರೆಂದೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ಭಾರತದ ನಾಗರಿಕತೆಯನ್ನೂ ಕೂಡ ತಡವಾಗಿ ಪಡೆದುಕೊಂಡ ಸೋನಿಯಾ ಪ್ರಧಾನಿಯಾಗುವ ಅರ್ಹತೆ ಕಳೆದುಕೊಂಡಿದ್ದರು. ಅಬ್ದುಲ್ ಕಲಾಂರು ಇದನ್ನು ವಿವರಿಸಿದ ನಂತರ ಆಕೆ ಈ ಆಸೆಯನ್ನು ಕೈಬಿಡಬೇಕಾಯ್ತೆಂದು ಆ ಹೊತ್ತಿನಲ್ಲಿ ತಿರುಗಾಡುತ್ತಿದ್ದ ಸುದ್ದಿ.

ಮುಂದಿನ ಹತ್ತು ವರ್ಷದಲ್ಲಿ ಕಾಂಗ್ರೆಸ್ಸನ್ನು ಸಮರ್ಥವಾಗಿ ಕಟ್ಟುವ ಎಲ್ಲಾ ಅವಕಾಶಗಳೂ ಅವರಿಗಿದ್ದವು. ಸಮರ್ಥರಾಗಿದ್ದ ಪ್ರಣಬ್ ಮುಖಜರ್ಿಯಂಥವರನ್ನು ಪ್ರಧಾನಿ ಮಾಡಿ ಮತ್ತೊಬ್ಬ ಶಕ್ತನನ್ನು ಕಾಂಗ್ರೆಸ್ಸಿನ ಅಧ್ಯಕ್ಷ ಪದವಿಗೇರಿಸಿಬಿಟ್ಟಿದ್ದರೆ ಅವರೆಲ್ಲರಿಗೂ ಮಾರ್ಗದರ್ಶನ ಮಾಡುತ್ತಲೇ ಸೋನಿಯಾ ಪ್ರಭಾವಿ ಪಕ್ಷವಾಗಿ ಕಾಂಗ್ರೆಸ್ಸನ್ನು ಉಳಿಸಿಕೊಳ್ಳಬಹುದಿತ್ತು. ಹಾಗಾಗಲಿಲ್ಲ. ಆಕೆ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಛಾಯಾ ಪ್ರಧಾನಮಂತ್ರಿಯಾಗಿ ಕ್ಯಾಬಿನೆಟ್ ನಿರ್ಣಯಗಳನ್ನು ತನ್ನ ಮನೆಯಲ್ಲೇ ತೆಗೆದುಕೊಳ್ಳುವ ಸೂಪರ್ ಪ್ರೈಮ್ ಮಿನಿಸ್ಟರ್ ಆಗಿ ಅಧಿಕಾರವನ್ನು ಕೇಂದ್ರೀಕರಿಸಿಬಿಟ್ಟರು. ಇದು ಮತ್ತೆ ಕಾಂಗ್ರೆಸ್ಸಿನಲ್ಲಿ ಗುಲಾಮೀ ಮಾನಸಿಕತೆ ಅವತರಿಸಲು ಕಾರಣವಾಯ್ತು. ಈ ಹತ್ತು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ಸು ಎರಡು ಬಾರಿ ದೇಶವನ್ನು ಆಳ್ವಿಕೆ ಮಾಡಿದ್ದು ನಿಜವಾದರೂ ಜನರಿಗೆ ಬೇಕಾದ ಪಕ್ಷವಾಗಿ ರೂಪುಗೊಳ್ಳುವಲ್ಲಿ ಸೋತುಹೋಯ್ತು. ಯುಪಿಎ ಎರಡನೇ ಅವಧಿಯಲ್ಲಂತೂ ಮೈತುಂಬ ಭ್ರಷ್ಟಾಚಾರವಾಗಿ ಮತ್ತೆ ಮೂರನೇಬಾರಿಗೆ ಪಕ್ಷ ಬರುವುದು ಅಸಾಧ್ಯ ಎನ್ನುವ ವಾತಾವರಣವೇ ನಿಮರ್ಾಣಗೊಂಡಿತು. ಇವೆಲ್ಲಕ್ಕೂ ಮುಖ್ಯ ಹೊಣೆಗಾರಿಕೆ ಸೋನಿಯಾರದ್ದೇ. ಒಪ್ಪಿಕೊಳ್ಳಲೇಬೇಕಲ್ಲ. ಕಾಂಗ್ರೆಸ್ಸಿನಲ್ಲಿ ಗೆಲುವನ್ನು ಪರಿವಾರಕ್ಕೆ, ಸೋಲನ್ನು ಇತರರಿಗೆ ಹಂಚುವ ಪರಿಪಾಠ ಇದ್ದೇ ಇದೆ! ಬಹುಶಃ ನರೇಂದ್ರಮೋದಿ ಚುನಾವಣಾ ಕಣಕ್ಕೆ ಬರದೇ ಹೋಗಿದ್ದರೆ ಇವತ್ತು ಪರಿಸ್ಥಿತಿ ಭಿನ್ನವಾಗಿಯೇ ಇರುತ್ತಿತ್ತು. ಗುಲಾಮಿ ಮಾನಸಿಕತೆಯ ಕಾಂಗ್ರೆಸ್ಸಿನಿಂದ ಭಾರತವನ್ನು ಮುಕ್ತಗೊಳಿಸಬೇಕೆಂದು ಅವರು ಕೊಟ್ಟ ಘೋಷಣೆ ಬಲುಬೇಗ ತರುಣರನ್ನು ಮುಟ್ಟಿತು. 2014ರಲ್ಲಿ ಸೋನಿಯಾ ನೇತೃತ್ವದ ಕಾಂಗ್ರೆಸ್ಸು ಇತಿಹಾಸದಲ್ಲಿ ಹೀನಾಯ ಸ್ಥಿತಿಯನ್ನು ತಲುಪಿ ಅವಮಾನಕರ ಪ್ರಸಂಗ ನಿಮರ್ಾಣಗೊಂಡಿತು. ಒಟ್ಟು ಲೋಕಸಭಾ ಸೀಟುಗಳಲ್ಲಿ ಶೇಕಡಾ ಹತ್ತರಷ್ಟನ್ನೂ ಪಡೆಯಲಾಗದ ಈ ಸ್ಥಿತಿಗೆ ಕಾರಣರ್ಯಾರು? ಸೋನಿಯಾರೇ ಅಲ್ಲವೇನು! ಹೋಗಲಿ, ನರೇಂದ್ರಮೋದಿ ಜಯಭೇರಿ ಬಾರಿಸಿದ ನಂತರ ಅವರ ಮೇಲೆ ದಾಳಿಗೈಯ್ಯಲೆಂದೇ ತಮ್ಮೆಲ್ಲಾ ಪತ್ರಕರ್ತರನ್ನು ಬಳಸಿಕೊಂಡು ಸುಳ್ಳುಗಳ ಪ್ರಚಾರ ಮಾಡುತ್ತಾ ಕುಳಿತುಬಿಟ್ಟರಲ್ಲಾ ಸೋನಿಯಾ ಆಗಲಾದರೂ ಎಚ್ಚೆತ್ತುಕೊಂಡು ಕಾಂಗ್ರೆಸ್ ಮರು ನಿಮರ್ಾಣಕ್ಕೆ ಕೈಹಾಕಬೇಕಿತ್ತು. ಸೂಕ್ತ ವ್ಯಕ್ತಿಯನ್ನು ಆರಿಸಿ ಕಾಂಗ್ರೆಸ್ಸಿನ ಚುಕ್ಕಾಣಿ ಕೈಗೆ ಕೊಟ್ಟು ದೇಶವ್ಯಾಪಿ ಪ್ರವಾಸ ಮಾಡುತ್ತಾ ಕಾಂಗ್ರೆಸ್ಸಿನ ಮರುನಿಮರ್ಾಣಕ್ಕೆ ಪ್ರಯತ್ನ ಹಾಕುವುದನ್ನು ಬಿಟ್ಟು ತನ್ನ ಮಗ ರಾಹುಲ್ನನ್ನೇ ಅಧ್ಯಕ್ಷಗಿರಿಗೆ ತಂದು ಕಾಂಗ್ರೆಸ್ಸಿನ ಸಮಾಧಿ ಮಾಡಿದರು. ರಾಹುಲ್ ಈ ಹುದ್ದೆಗೆ ಯಾವ ದಿಕ್ಕಿನಿಂದಲೂ ಸೂಕ್ತರಲ್ಲವೆಂಬುದು ಆಕೆಗೆ ಗೊತ್ತಿಲ್ಲದ ಸಂಗತಿಯಲ್ಲ. ಆದರೆ ಪರಿವಾರದ ತೆಕ್ಕೆಯಿಂದ ಕಾಂಗ್ರೆಸ್ಸನ್ನು ಬಿಟ್ಟುಕೊಟ್ಟರೆ ನರಸಿಂಹರಾಯರು ಮತ್ತು ಸೀತಾರಾಂ ಕೇಸರಿಯವರ ಕಾಲದಲ್ಲಿ ಆದಂತೆ ಆಗಿಬಿಡಬಹುದೆಂಬ ಹೆದರಿಕೆ ಅವರನ್ನೆಷ್ಟು ಕಾಡಿತೆಂದರೆ ಕಾಂಗ್ರೆಸ್ಸು ಮರುನಿಮರ್ಾಣಗೊಳ್ಳಬಲ್ಲ ಎಲ್ಲ ಅವಕಾಶವನ್ನೂ ಕಳೆದುಕೊಂಡುಬಿಟ್ಟಿತು.


ಸೋನಿಯಾರಿಗೆ ತನ್ನ ಮಕ್ಕಳ ರಕ್ಷಣೆಯ ಅವ್ಯಕ್ತ ಭಯ ಕಾಡುತ್ತದೆ ಎನಿಸುತ್ತದೆ. ಮಗನನ್ನು ಮುಂಚೂಣಿಗೆ ತರುವ ಮುನ್ನ ಆಕೆ ಸಾಕಷ್ಟು ಗೊಂದಲಕ್ಕೆ ಒಳಗಾಗಿರಲು ಸಾಕು. ಮಗಳನ್ನಂತೂ ಮೋದಿ ಗೆದ್ದುಬಿಡುತ್ತಾರೆಂಬ ಹೆದರಿಕೆಯಿಂದಲೇ ಎಳೆದುತಂದದ್ದೇ ಹೊರತು ಬೇರೆ ಯಾವ ಕಾರಣವೂ ಇರಲು ಸಾಧ್ಯವಿಲ್ಲ. ಕಾಂಗ್ರೆಸ್ಸನ್ನು ಮುಗಿಸುವ ಸೋನಿಯಾರ ಪ್ರಯತ್ನವನ್ನು ಪೂರ್ಣಪ್ರಮಾಣದಲ್ಲಿ ಬೆಂಬಲಿಸಿದ್ದು ರಾಹುಲ್. ಬಹುಶಃ ಇತಿಹಾಸದಲ್ಲಿ ರಾಹುಲ್ ಇದೇ ಪಟ್ಟವನ್ನು ಅಲಂಕರಿಸುತ್ತಾರೆ. ರಾಹುಲ್ ಕಾಂಗ್ರೆಸ್ಸಿನ ಚುಕ್ಕಾಣಿ ತೆಗೆದುಕೊಂಡಾಗ ಕಾಂಗ್ರೆಸ್ಸಿನ ಪರಿಸ್ಥಿತಿ ಎಷ್ಟು ಕೆಟ್ಟದ್ದಾಗಿತ್ತೋ ಭಾಜಪ ಅಷ್ಟೇ ಪ್ರಭಾವಿ ಸ್ಥಿತಿಯಲ್ಲಿತ್ತು. ಜೊತೆಗೆ ತನ್ನ ಹಿಂದಿನವರು ಮಾಡಿದ ಎಲ್ಲಾ ಪಾಪಕರ್ಮಗಳಿಗೂ ಉತ್ತರ ಕೊಡಬೇಕಾದ ಕಟಕಟೆಯಲ್ಲಿ ನಿಂತಿದ್ದ ರಾಹುಲ್ ಪಕ್ಷವನ್ನು ಮುನ್ನಡೆಸುವ ಹೊಣೆ ಹೊರುವುದು ಸಲೀಸಾದ ಕೆಲಸವಾಗಿರಲಿಲ್ಲ. ಆತ ಹಳೆಯ ಸಾಂಪ್ರದಾಯಿಕ ಶೈಲಿಯ ಎಲ್ಲಾ ಚಿಂತನೆಗಳನ್ನೂ ಬಿಟ್ಟು ಹೊಸ ಮಾದರಿಯೊಂದಕ್ಕೆ ತೆರೆದುಕೊಳ್ಳಬೇಕಿತ್ತು. ಹಾಗಾಗಲಿಲ್ಲ. ಅದೇ ಮುಸ್ಲೀಂ ತುಷ್ಟೀಕರಣ, ಅದೇ ಜಾತಿ ವಿಭಜನೆ, ಅದೇ ಪೊಳ್ಳು ಆಶ್ವಾಸನೆ, ಅದೇ ಸುಳ್ಳುಗಳು! ಕಾಂಗ್ರೆಸ್ಸಿನ ಎಂದಿನ ಚೌಕಟ್ಟಿನಿಂದ ರಾಹುಲ್ ಆಚೆಗೆ ಬರಲೇ ಇಲ್ಲ. ಗುಜರಾತಿನಲ್ಲಿ ಹಿಂದುತ್ವದ ಕಾಡರ್್ ಪ್ರಯೋಗಿಸಿದ್ದರ ಲಾಭ ದೊರೆತ ಮೇಲಂತೂ ಇತರೆಡೆ ಅದನ್ನು ಹೇಗೆ ಬಳಸಿಕೊಳ್ಳಬೇಕೆನ್ನುವ ಗೊಂದಲಕ್ಕೆ ರಾಹುಲ್ ಸಿಕ್ಕಿಬಿದ್ದರು. ತನ್ನ ಆಪ್ತ ವಲಯದಲ್ಲಿ ಕಿರಿಯರನ್ನಿಟ್ಟುಕೊಂಡು ರಾಜಕಾರಣದ ನಿರ್ಣಯ ತೆಗೆದುಕೊಳ್ಳುತ್ತಿದ್ದ ರಾಹುಲ್ ಹಿರಿಯರ ಕೆಂಗಣ್ಣಿಗೆ ಗುರಿಯಾದ್ದಂತೂ ನಿಜ. ಆದರೆ ಕಾಂಗ್ರೆಸ್ಸಿನಲ್ಲಿ ಗುಲಾಮಿತನ ಯಾವ ಮಟ್ಟಕ್ಕಿದೆ ಎಂದರೆ ಯಾವೊಬ್ಬ ಹಿರಿಯರೂ ಮಿಸುಕಾಡದೇ ಅವಡುಗಚ್ಚಿ ಕುಳಿತಿದ್ದರು. ಎಲ್ಲಾ ಬಾಯ್ಬಿಟ್ಟಿರುವುದು ಮೊನ್ನೆ ಲೋಕಸಭೆ ಚುನಾವಣೆಯ ಫಲಿತಾಂಶ ಬಂದ ನಂತರವೇ! ಹಿರಿಯರ ಬೆಂಬಲವಿಲ್ಲದೇ ಕಿರಿಯರೂ ಜೊತೆಗಿಲ್ಲದೇ ಏಕಾಂಗಿಯಾಗಿರುವ ರಾಹುಲ್ಗೆ ಎಲ್ಲವನ್ನೂ ಬಿಟ್ಟು ಓಡಿದರೆ ಸಾಕೆನಿಸುತ್ತಿದೆ. ಆದರೆ ಓಡಿಬಿಟ್ಟರೆ ಮತ್ತೊಬ್ಬ ಸೀತಾರಾಂ ಕೇಸರಿ ಬಂದುಬಿಡುವರೆಂಬ ಹೆದರಿಕೆ. ರಾಹುಲ್ ಪಾಲಿಗೆ ಕಾಂಗ್ರೆಸ್ಸಿನ ಅಧ್ಯಕ್ಷಗಿರಿ ಹುಲಿ ಸವಾರಿಯೇ. ಮೇಲೆ ಕೂರಲು ಮನಸ್ಸಿಲ್ಲ, ಕೆಳಗಿಳಿದರೆ ಆ ಹುಲಿಯೇ ತಿಂದುಬಿಡುತ್ತದೆ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top