National

ಕಾಂಗ್ರೆಸ್ಸಿಗೆ ಹೆಣ್ಣುಮಕ್ಕಳನ್ನು ಕಂಡರೆ ಏಕಿಷ್ಟು ದ್ವೇಷ? ಉತ್ತರಿಸುತ್ತಾರಾ ರಾಹುಲ್!?

ಸದಾ ಮಹಿಳಾ ಸಬಲೀಕರಣದ ಕುರಿತು ಭಾಷಣ ಬಿಗಿಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ನ ನಿಜ ರೂಪವೀಗ ಜಗತ್ತಿಗೆ ಸ್ಪಷ್ಟವಾಗಿ ಅರಿವಾಗುತ್ತಿದೆ. ರಾಹುಲ್ ನಿನ್ನೆ ರಾಜಸ್ಥಾನದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಎಂದಿನಂತೆ ರಫೇಲ್ ಒಂದು ಹಗರಣವೆಂದು ಆರೋಪಿಸಿದ್ದಾನೆ. ಅಷ್ಟೇ ಅಲ್ಲದೇ, ಈ ಬಾರಿ ಆತ ’56 ಇಂಚಿನ ಪ್ರಧಾನಮಂತ್ರಿಯವರು ಮಹಿಳೆಯೊಬ್ಬರಿಗೆ ತನ್ನ ರಕ್ಷಣೆ ಮಾಡುವಂತೆ ಕೇಳಿದ್ದಾರೆ’ ಎಂಬ ಮಾತುಗಳನ್ನಾಡಿದ್ದಾರೆ.‌

ಇದು ರಕ್ಷಣಾ ಮಂತ್ರಿ‌ ನಿರ್ಮಲಾ ಸೀತಾರಾಮನ್‌ರವರು ತನ್ನ ಅಷ್ಟೂ ಪ್ರಶ್ನೆಗೆ ಉತ್ತರ ಕೊಟ್ಟ ನಂತರ ಹತಾಶೆಗೊಂಡ ರಾಹುಲನ ಬಾಯಿಂದ ಬಂದ ಮಾತುಗಳು. ತಾನು ಭಾರತದ ಮೊದಲ‌ ಮಹಿಳಾ ರಕ್ಷಣಾ ಸಚಿವರಿಗೆ ಈ ಮಾತನ್ನು ಹೇಳುತ್ತಿರುವೆನೆಂಬ ಕನಿಷ್ಠ ಎಚ್ಚರಿಕೆಯೂ ಆತನಲ್ಲಿಲ್ಲವೆಂಬುದೇ ಆಶ್ಚರ್ಯ!

ಇದೇ ರಾಹುಲ್ 2017 ರಲ್ಲಿ ಗುಜರಾತ್‌ನ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ ‘ ಎಂದಾದರೂ ಆರ್‌ಎಸ್‌ಎಸ್ ಶಾಖೆಗಳಲ್ಲಿ ಮಹಿಳೆಯರನ್ನು ಶಾರ್ಟ್ಸ್‌ನಲ್ಲಿ ನೋಡಿರುವಿರಾ? ನಾನಂತೂ ನೋಡಿಲ್ಲ’ ಎಂಬ ನೀಚ ಮಾತುಗಳನ್ನಾಡಿದ್ದರು. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರದ ಪ್ರಧಾನಮಂತ್ರಿ ಅಭ್ಯರ್ಥಿಯಾಗಬೇಕಿರುವ ವ್ಯಕ್ತಿಗೆ ಮಹಿಳೆಯರ ಮೇಲಿರುವ ಗೌರವ ಈ ಮಟ್ಟದ್ದು. ರಾಹುಲ್‌ ನಿರ್ಮಲಾ ಸೀತಾರಾಮನ್ ಬಗ್ಗೆ ಹೇಳಿರುವ ಮಾತುಗಳು ಹೊರಬರುತ್ತಿದ್ದಂತೆ ಹಲವು ಟ್ವೀಟಿಗರು, ಮಹಿಳೆಯರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನ್ಯಾಷನಲ್ ವುಮೆನ್ ಕಮಿಷನ್‌ನ ಮುಖ್ಯಸ್ಥೆ ರೇಖಾ ಶರ್ಮಾ ಅವರು ಇದಕ್ಕೆ ಪ್ರತಿಕ್ರಿಯಿಸುತ್ತಾ, ‘ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ರಕ್ಷಣಾ ಸಚಿವೆಯನ್ನು ದುರ್ಬಲಳೆಂದು ಕರೆದಿದ್ದಾನೆ. ಆತ ಮಹಿಳೆಯರು ದುರ್ಬಲರೆಂದು ಭಾವಿಸಿದ್ದಾನೆಯೇ?’ ಎಂದಿದ್ದಾರೆ. ಕಮಿಷನ್ ತನ್ನ ಅಧಿಕೃತ ಟ್ವಿಟರ್ ಅಕೌಂಟಿನಿಂದ ರಾಹುಲ್‌ನಿಗೆ ನೋಟಿಸ್ ಕಳಿಸುವುದಾಗಿ ತಿಳಿಸಿತ್ತು. ಇಂದು ರಾಹುಲ್‌ಗೆ ನೋಟಿಸ್ ಅನ್ನು ಕಳಿಸಲಾಗಿದೆ.

ನೋಟಿಸ್‌ನಲ್ಲಿ ರಾಹುಲ್‌ ಮಾಡಿದ ಕಾಮೆಂಟ್‌ಗಳು, ‘ಸ್ತ್ರೀದ್ವೇಷದಿಂದ ಕೂಡಿದ್ದು, ಆಕ್ರಮಣಕಾರಿ, ಅನೈತಿಕವಾಗಿವೆ. ಮಹಿಳೆಯರ ಗೌರವ ಮತ್ತು ಘನತೆಗೆ ಇದು ಧಕ್ಕೆಯುಂಟುಮಾಡುತ್ತವೆ’ ಎಂದು ತಿಳಿಸಲಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಹೇಳಿಕೆ ನೀಡಿರುವುದನ್ನು ಕಮಿಷನ್ ಖಂಡಿಸಿದೆ.

ಪ್ರಧಾನಮಂತ್ರಿ ನರೇಂದ್ರಮೋದಿಯವರೂ ಕೂಡ ರಾಹುಲ್‌ನ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷ ಖಂಡಿತ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ ಮೋದಿಯವರು. ಇಷ್ಟಾಗಿಯೂ ಕೆಲವು ಸೋ ಕಾಲ್ಡ್ ಮಹಿಳಾವಾದಿಗಳು ಬೀದಿಗೆ ಬಂದು ಪೋಸ್ಟರ್ ಹಿಡಿದು ಪ್ರತಿಭಟನೆ ಮಾಡುವುದು ಕಂಡುಬಂದಿಲ್ಲ. ಈ ವಿಚಾರದಲ್ಲಿ ಅವರೆಲ್ಲಾ ದಿವ್ಯಮೌನವಹಿಸಿದ್ದಾರೆ. ಎಂದಿನಂತೆ ಅವರದ್ದು ಸೆಲೆಕ್ಟೀವ್ ಹೋರಾಟವೇ. ರಾಹುಲ್‌ನ ಈ ರೀತಿಯ ಹೇಳಿಕೆಗಳು ಕಾಂಗ್ರೆಸ್ಸಿನ ಸಂಸ್ಕೃತಿ, ಅಲ್ಲಿನ ವಾತಾವರಣವನ್ನು ತೆರೆದಿಟ್ಟಿದೆ.

Click to comment

Leave a Reply

Your email address will not be published. Required fields are marked *

Most Popular

To Top