National

ಕಾಂಗ್ರೆಸ್ಸಿಗೆ ಪ್ರಯಾಗರಾಜವನ್ನೂ ವಿರೋಧಿಸುವ ಧೈರ್ಯವಿಲ್ಲ!

ಹಿಂದೂಗಳ ಪವಿತ್ರ ಕ್ಷೇತ್ರವಾಗಿದ್ದ ಕುಂಭಸ್ಥಾನ ಪ್ರಯಾಗಕ್ಕೆ ಹಳೆಯ ಕಳೆ ಮರಳಿ ಬಂದಿದೆ. ಹೆಸರು ಬದಲಾಗುವುದರಿಂದ ಏನೊಂದೂ ಬದಲಾಗದೆಂಬುದು ಸತ್ಯ. ಆದರೆ ಆ ಹೆಸರಿನೊಂದಿಗೆ ಜೋಡಿಸಿಕೊಂಡಿರುವ ಭಾವನೆಗಳಿರುತ್ತವಲ್ಲಾ ಅವು ಮುಂಚೂಣಿಗೆ ಬರುವುದಂತೂ ನಿಜ. ನಮ್ಮೆಲ್ಲ ಎಡಪಂಥೀಯ ಇತಿಹಾಸಕಾರರು ಒಂದು ವರ್ಗವನ್ನೇ ಓಲೈಸುವ ತುಷ್ಟೀಕರಣದ ಇತಿಹಾಸವನ್ನು ನಮಗೆ ಹೇಳಿಕೊಟ್ಟು ಮೋಸ ಮಾಡಿಬಿಟ್ಟರು. ನಿಜವಾದ ಇತಿಹಾಸವನ್ನು ಅರಿಯಲಾಗದೇ ತೊಳಲಾಡುತ್ತಿರುವ ತರುಣ ಪೀಳಿಗೆಯನ್ನು ಸೃಷ್ಟಿಸಿಬಿಟ್ಟಿದ್ದರು. ಪಟ್ಟಭದ್ರ ಹಿತಾಸಕ್ತಿಗಳ ಕೈಯಿಂದ ಮಾಧ್ಯಮಗಳು ಜಾರಿಬಿದ್ದು ಸಾಮಾಜಿಕ ಜಾಲತಾಣಗಳು ವ್ಯಾಪಕಗೊಂಡಮೇಲೆ ಈ ಎಲ್ಲಾ ಇತಿಹಾಸಕಾರರ ಸುಳ್ಳುಗಳು ಬಯಲಿಗೆ ಬರುತ್ತಿವೆ. ಕಳೆದ 70 ವರ್ಷಗಳಿಂದ ನಮಗೆ ಅಕ್ಬರ್ನನ್ನು ಮಹಾನಾಯಕ ಎಂದೂ ಎಲ್ಲಾ ಮತಗಳ ಸಮನ್ವಯತೆಯ ಪ್ರತಿಪಾದಕನೆಂದೂ ಬಿಂಬಿಸಲಾಯ್ತು. ಆದರೆ ರಜಪೂತರ ರಾಣಿಯರನ್ನೇ ವಿವಾಹವಾಗಿ ಸಮನ್ವಯತೆ ಸಾಧಿಸಲೆತ್ನಿಸುತ್ತಿದ್ದ ಆತ ಎಂದಿಗೂ ತನ್ನ ಹೆಣ್ಣುಮಕ್ಕಳನ್ನು ರಜಪೂತ ರಾಜರಿಗೆ ಕೊಟ್ಟು ಮದುವೆ ಮಾಡಲಿಲ್ಲವೆಂಬುದೇ ಸೋಜಿಗ! ಹಾಗೆ ನೋಡಿದರೆ ಲವ್ಜಿಹಾದ್ ಅನ್ನು ಕಾನೂನಿನ ವ್ಯಾಪ್ತಿಗೆ ತಂದುಕೊಂಡ ಮೊದಲಿಗ ಆತನೇ ಇರಬೇಕು ಅಥವಾ ಲವ್ಜಿಹಾದ್ ಮಾಡಿಯೂ ಇತಿಹಾಸಕಾರರಿಂದ ಪ್ರಶಂಸೆಗೊಳಗಾದವನೂ ಆತನಿರಬಹುದು. ಈ ವಿಷಯ ಈಗೇಕೆಂದರೆ ಇಂಥ ಸರ್ವಪಂಥ ಸಮನ್ವಯಿ ಅಕ್ಬರ್ 1575 ರಲ್ಲಿ ಒಮ್ಮೆ ಪ್ರಯಾಗಕ್ಕೆ ಭೇಟಿಕೊಟ್ಟನಂತೆ. ಗಂಗೆ-ಯಮುನೆಯರ ನಡುವೆ ವಿಶಿಷ್ಟವಾಗಿ ಬೆಳೆದು ನಿಂತಿರುವ ಈ ನಗರ ಆತನ ಮನಸೂರೆಗೊಂಡಿತು. ತತ್ಕ್ಷಣ ಆತ ತನ್ನವರಿಗೆ ಆದೇಶಿಸಿ ಅಲ್ಲಿಯೇ ಒಂದು ಕೋಟೆ ಕಟ್ಟಲು ಹೇಳಿದ. ಇಡಿಯ ನಗರವನ್ನು ಇಲ್ಲಹಾಬಾಸ್ ಅಥವಾ ಇಲ್ಲಹಾಬಾದ್ ಎಂದು ಮರುನಾಮಕರಣ ಮಾಡಿದ. ಹಾಗೆಂದು ಟೌನ್ ಪ್ಲಾನಿಂಗ್ ರೀಜನರೇಶನ್ ಆಫ್ ಸಿಟೀಸ್ ಕೃತಿಯನ್ನು ಬರೆದಿರುವ ಅಶುತೋಷ್ ಜೋಶಿ ಹೇಳುತ್ತಾರೆ. ಕೆಲವು ಇತಿಹಾಸಕಾರರು ಅಕ್ಬರ್ನ ಮಗ ಜಹಂಗೀರನ ಕಾಲಕ್ಕೆ ಹೆಸರು ಬದಲಾಗಿರಬಹುದೆಂದು ಅಂದಾಜಿಸುತ್ತಾರೆ. ಆದರೆ ಪ್ರೊಫೆಸರ್ ಮ್ಯಾಕ್ಲಿಯಾನ್ ಅಕ್ಬರ್ ಕಾಲಕ್ಕೆ ಇಲ್ಲಿ ಮುದ್ರಣಗೊಂಡಿದ್ದ ನಾಣ್ಯಗಳ ಮೇಲೆ ಇಲ್ಲಹಾಬಾದ್ ಎಂಬ ಉಲ್ಲೇಖವಿದ್ದುದನ್ನು ಗುರುತಿಸುತ್ತಾರೆ. ಹೀಗಾಗಿ ಅಕ್ಬರ್ನ ಕಾಲಕ್ಕೆ ಈ ಹೆಸರು ಬದಲಾಗಿತ್ತೆಂಬುದರಲ್ಲಿ ಯಾವ ಸಂಶಯವೂ ಉಳಿಯಲಾರದು. ಎಲ್ಲಾ ದೃಷ್ಟಿಯಿಂದಲೂ, ಯಾವ ಸಿದ್ಧಾಂತವನ್ನೊಪ್ಪಿಕೊಂಡರೂ ಈ ನಗರದ ಮೂಲ ಹೆಸರು ಪ್ರಯಾಗವೇ. ಅಕ್ಬರ್ ಬದಲಾಯಿಸಿದ್ದು ಎನ್ನುವುದಾದರೆ 1575 ರವರೆಗೂ ಪ್ರಯಾಗವಾಗಿತ್ತು. ಜಹಂಗೀರ್ ಬದಲಾಯಿಸಿದ್ದಾದರೆ ಕನಿಷ್ಠ 1600 ವರೆಗಾದರೂ ಪ್ರಯಾಗವೇ ಆಗಿತ್ತು. ಈ ಹಿನ್ನೆಲೆಯಲ್ಲಿ ಹೆಸರನ್ನು ಬದಲಾಯಿಸಿದ್ದು ಹೊಸ ಹೆಸರು ಕೊಟ್ಟಿದ್ದಲ್ಲ ಬದಲಿಗೆ ಮೂಲಕ್ಕೆ ಮರಳಿದೆಂಬುದು ಖಾತ್ರಿ.


ಪ್ರಯಾಗದ ಹೆಸರಂತೂ ವೇದ-ಪುರಾಣ, ಮಹಾಭಾರತ, ರಾಮಾಯಣಗಳಲ್ಲೂ ಇವೆ. ಋಗ್ವೇದದಲ್ಲೂ ಇದರ ಉಲ್ಲೇಖ ಬರುವುದೆಂದು ಹೇಳಲಾಗುತ್ತದೆ. ಮಹಾಭಾರತ ಈ ನಗರದ ಕುರಿತಂತೆ ಉಲ್ಲೇಖ ಮಾಡುತ್ತಾ ಗಂಗಾ-ಯಮುನೆಯರು ಸಂಗಮಿಸುವ ಈ ಸ್ಥಳದಲ್ಲಿಯೇ ಬ್ರಹ್ಮ ಒಂದು ಯಾಗ ಮಾಡಿದ್ದರಿಂದ ಇದಕ್ಕೆ ಪ್ರಯಾಗ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ. ಬ್ರಹ್ಮ ಇಲ್ಲಿ ಹತ್ತು ಅಶ್ವಮೇಧಗಳ ಯಜ್ಞ ಮಾಡಿದ್ದನಂತೆ. ಮುಂದಿನ ದಿನಗಳಲ್ಲಿ ಇದು ಬರಿ ಗಂಗೆ-ಯಮುನೆಯರ ಸಂಗಮವೆಂದು ಗುರುತಿಸಲ್ಪಡದೇ ಗುಪ್ತಗಾಮಿನಿ ಸರಸ್ವತಿಯ ಸೇರುವಿಕೆಯೊಂದಿಗೆ ತ್ರಿವೇಣಿ ಸಂಗಮವೆಂದೂ ಪೂಜಿಸಲ್ಪಡಲಾರಂಭಿಸಿತು. ಹೀಗಾಗಿಯೇ ನಾಸಿಕ್, ಹರಿದ್ವಾರಗಳಲ್ಲೆಲ್ಲಾ ಕುಂಭವು ನಡೆಯುವುದಾದರೂ ಪ್ರಯಾಗದ ಕುಂಭಕ್ಕೆ ಅತಿ ವಿಶಿಷ್ಟವಾದ ಮಹತ್ವವಿದೆ. ಮುಸಲ್ಮಾನರ ಆಳ್ವಿಕೆ ನಂತರ ಬಂದ ಬ್ರಿಟೀಷರು ಹಿಂದೂಗಳ ಈ ನಂಬಿಕೆ, ಆಸ್ಥೆಗಳನ್ನು ಉಳಿಸುವುದರಿಂದ ಕ್ರೈಸ್ತ ಮತ ವಿಸ್ತರಣೆಗೆ ಪ್ರತಿಕೂಲ ಪರಿಸ್ಥಿತಿ ನಿಮರ್ಾಣವಾಗುವುದೆಂದರಿತು ಇವುಗಳಿಗೆಲ್ಲಾ ಬೆಲೆಯೇ ಕೊಡಲಿಲ್ಲ. ಅದರ ಪರಿಣಾಮವಾಗಿಯೇ ಪ್ರಯಾಗ ಪ್ರಭೆ ಸಕರ್ಾರಿ ಬೆಂಬಲದೊಂದಿಗೆ ಹರಡುವುದಿರಲಿ ಬದಲಿಗೆ ಇಲಹಾಬಾದ್ ಅಲಹಾಬಾದ್ ಆಗಿ ಅಪಭ್ರಂಶಗೊಂಡು ನಗರ ಬಲವಾಗುತ್ತಾ ಹೋಯ್ತು. ಸ್ವಾತಂತ್ರ್ಯಾನಂತರ ನಮ್ಮನ್ನಾಳಿದ ಪಕ್ಷಗಳು ತುಷ್ಟೀಕರಣದ ಭಾವನೆಯಿಂದಲೇ ನರಳಿದ್ದರಿಂದ ಮತ್ತು ಕಮ್ಯುನಿಸ್ಟ್ ಪ್ರಣೀತ ಸುಳ್ಳು ಇತಿಹಾಸದ ಆಧಾರದ ಮೇಲೆಯೇ ನಾಡು ಕಟ್ಟಲು ಪ್ರಯತ್ನಿಸಿದ್ದರಿಂದ ಹೆಸರುಗಳನ್ನು ಮೂಲ ಸ್ವರೂಪಕ್ಕೆ ತರುವುದಿರಲಿ ಆ ಕುರಿತಂತೆ ಮಾತನಾಡಲೂ ಬೆದರಿದವು.


ಹಿಂದೂಧರ್ಮದ ಶಕ್ತಿಯೇ ಅದು. ಜನ ತಮ್ಮ ಭಕ್ತಿಯನ್ನು ಕಳೆದುಕೊಳ್ಳಲಿಲ್ಲ. ಆಕ್ರಮಕರ ಕಾಲದಲ್ಲಿ ತೀವ್ರತೆ ಕಡಿಮೆಯಾಗಿದ್ದಿರಬಹುದು ಆದರೆ ಕುಂಭ ಎಂದಿಗೂ ನಿಲ್ಲಲೇ ಇಲ್ಲ. ಅದರ ಪರಿಣಾಮವಾಗಿಯೇ ಸಕರ್ಾರಿ ಕಡತಗಳಲ್ಲಿ ಅಲಹಾಬಾದ್ ಚಾಲ್ತಿಯಲ್ಲಿದ್ದಿರಬಹುದು. ಆದರೆ ಜನರ ಹೃದಯದಲ್ಲಿ ಪರಮ ಪವಿತ್ರ ತೀರ್ಥಕ್ಷೇತ್ರವಾದ ಪ್ರಯಾಗವೇ ವಿರಾಜಮಾನವಾಗಿತ್ತು. ಜನರ ಆಶೋತ್ತರಗಳನ್ನು ಅರಿತು ಅದಕ್ಕೆ ತಕ್ಕಂತೆ ಪ್ರಯಾಗದ ಕಲ್ಪನೆಯನ್ನು ಮರಳಿ ಜನರ ಕೈಗಿಡಲು ಯೋಗಿ ಆದಿತ್ಯನಾಥರ ರೂಪದಲ್ಲಿ ಸಮರ್ಥ ನಾಯಕನೇ ಬರಬೇಕಾಯ್ತು. ಇತ್ತೀಚೆಗೆ ಅವರು ಕ್ಯಾಬಿನೆಟ್ಟಿನ ನಿರ್ಣಯ ತೆಗೆದುಕೊಂಡು ಅಲಹಾಬಾದನ್ನು ಬದಲಿಸಿ ಪ್ರಯಾಗವೆಂದು ಮರುನಾಮಕರಣ ಮಾಡಿದ್ದಲ್ಲದೇ ಅದು ತಕ್ಷಣ ಎಲ್ಲೆಡೆಯೂ ಪ್ರತಿಧ್ವನಿಸುವಂತೆ ನೋಡಿಕೊಂಡರು. ಅವರ ಒಂದೇ ಒಂದು ನಿರ್ಣಯದಿಂದ ಅಲಹಾಬಾದ್ ಪ್ರಯಾಗರಾಜವಾಗಿ ಬದಲುಗೊಂಡಿತ್ತು. ಆದರೆ ಪ್ರಯಾಗವಲ್ಲದೇ ಪ್ರಯಾಗರಾಜವಾಗಿದ್ದು ಹೇಗೆ? ಅದಕ್ಕೂ ಕಾರಣವಿದೆ. ಪದ್ಮಪುರಾಣದಲ್ಲಿ ಸೂರ್ಯ-ಚಂದ್ರರು ಅವರವರ ಕ್ಷೇತ್ರದಲ್ಲಿ ಹೇಗೆ ಪವಿತ್ರರೋ ಹಾಗೆಯೇ ತೀರ್ಥಗಳ ಕ್ಷೇತ್ರದಲ್ಲಿ ಪ್ರಯಾಗ ಎಂದಿದೆ. ಮತ್ಸ್ಯ ಪುರಾಣದಲ್ಲಿ ಪ್ರತೀ ಜೀವಿಯಲ್ಲಿರುವ ಬ್ರಹ್ಮನನ್ನು ಹೇಗೆ ಪೂಜಿಸಲಾಗುವುದೋ ಹಾಗೆಯೇ ಜ್ಞಾನಿಗಳು ಪ್ರಯಾಗವನ್ನು ಗೌರವಿಸುತ್ತಾರೆ. ನಿಜಕ್ಕೂ ಪ್ರಯಾಗ ಎಲ್ಲ ತೀರ್ಥಗಳ ರಾಜನೆಂದು ಗುರುತಿಸಲ್ಪಡುತ್ತದೆ ಎಂದಿದೆ. ಹೀಗಾಗಿ ಪ್ರಯಾಗ ರಾಜ ಎಂದು ಕರೆದಿರುವುದು ಭಾರತದ ಪೌರಾಣಿಕ ಹಿನ್ನೆಲೆಗೆ ಸಂಬಂಧಿಸಿದಂತೆಯೇ ಇರುವುದರಿಂದ ಅದಕ್ಕೇನೂ ಅಡ್ಡಿಯಿಲ್ಲ.

ಇವೆಲ್ಲಕ್ಕಿಂತಲೂ ಮುಖ್ಯವಾದ ವಿಷಯವೆಂದರೆ ಅಲಹಾಬಾದ್ನ ಹೆಸರನ್ನು ಪ್ರಯಾಗರಾಜವೆಂದು ಮರುನಾಮಕರಣ ಮಾಡಿದ್ದರಿಂದ ಗುಲಾಮಿತನದ ಸಂಕೇತವೊಂದು ನಾಶವಾದಂತಾಗಿದೆ. ಪ್ರತಿಯೊಬ್ಬ ಆಕ್ರಮಣಕಾರನೂ ತನ್ನ ಗೆಲುವನ್ನು ಸಾಂಕೇತಿಕವಾಗಿ ದಾಖಲಿಸುವುದು ಹೆಸರು ಬದಲಾಯಿಸುವುದರ ಮೂಲಕ. ಅಲೆಗ್ಸಾಂಡರ್ನ ಆಕ್ರಮಣದ ಕಾಲದಲ್ಲೂ ಆತ ತನ್ನೂರಿಗೆ ಮರಳಿ ಹೋಗುವ ಮುನ್ನ ಇಲ್ಲಿನ ಒಂದಷ್ಟು ನಗರಗಳ ಹೆಸರನ್ನು ಬದಲಾಯಿಸಿದ್ದ. ಆತ ಮರುಳುತ್ತಿದ್ದಂತೆ ಅದನ್ನು ಮರುಸ್ವಾಧೀನ ಪಡಿಸಿಕೊಂಡ ರಾಜರು ಆ ಹೆಸರುಗಳನ್ನು ಬದಲಾಯಿಸಿ ಮೂಲ ಸ್ವರೂಪಕ್ಕೆ ತಂದಿದ್ದರು. ಮುಸಲ್ಮಾನರ ಆಕ್ರಮಣದ ಕಾಲಕ್ಕಂತೂ ಲೆಕ್ಕವಿಲ್ಲದಷ್ಟು ಹೆಸರುಗಳು ಬದಲಾಗಿದ್ದವು. ಬ್ರಿಟೀಷರು ತಾವು ಉಚ್ಚರಿಸಲು ಸಾಧ್ಯವಾಗುವಂತೆ ಇಲ್ಲಿನ ಹೆಸರುಗಳನ್ನು ಬಳಸಿಕೊಳ್ಳುತ್ತಿದ್ದರು. ಅನೇಕ ಹೆಸರುಗಳು ಆಕ್ರಮಣಕಾರಿಗಳು ಹೊರಟ ನಂತರವೂ ಹಾಗೆಯೇ ಉಳಿದುಬಿಟ್ಟವು. ಅದನ್ನು ಬದಲಾಯಿಸುವ ಹೊಣೆಗಾರಿಕೆ ಪ್ರತಿಯೊಂದು ಸಮರ್ಥ ರಾಷ್ಟ್ರಕ್ಕೂ ಇದ್ದದ್ದೇ. ಈ ಬದಲಾವಣೆಗಳು ಮಾತ್ರ ಗುಲಾಮಿತನದ ಸಂಕೇತವನ್ನು ಕಿತ್ತೆಸೆಯುವ ಕೆಲಸ ಮಾಡುತ್ತವೆ. ಯೋಗಿ ಆದಿತ್ಯನಾಥರು ಈಗ ಮಾಡಿರುವುದು ಅದನ್ನೇ.

ಅನೇಕರು ಹೆಸರು ಬದಲಾಯಿಸುವುದರಿಂದ ಏನಾದರೂ ಬದಲಾಗುವುದಾ ಎಂದು ಕೇಳಿದ್ದಾರೆ. ಅದೂ ಸತ್ಯವೇ. ಇಂಗ್ಲೀಷರ ಬಾಯಲ್ಲಿ ಬ್ಯಾಂಗಲೂರಾಗಿದ್ದ ನಮ್ಮೂರು ಬೆಂಗಳೂರು ಆಯಿತು. ಆದರೆ ಬೆಂಗಳೂರಿಗರ ಬದುಕಿನಲ್ಲಿ ಬದಲಾವಣೆ ಬಂತಾ? ಕಲ್ಕತ್ತಾ ಕೋಲ್ಕತ್ತಾ ಆಗಿದ್ದರಿಂದ, ಮದ್ರಾಸ್ ಚೆನ್ನೈ ಆಗಿದ್ದರಿಂದ ಮಹತ್ವದ ಬದಲಾವಣೆಗಳೇನಾದರೂ ಕಂಡವಾ? ಪ್ರಶ್ನೆಗೆ ಉತ್ತರಿಸುವುದು ಕಷ್ಟವಲ್ಲ. ಆದರೆ ಒಂದಂತೂ ಸತ್ಯ. ಕೆಲವು ಹೆಸರುಗಳೊಂದಿಗೆ ಅಲ್ಲಿನ ಇತಿಹಾಸವೂ ಅಡಗಿರುತ್ತದೆ. ಪ್ರಯಾಗದೊಂದಿಗಂತೂ ಸಾವಿರಾರು ವರ್ಷಗಳ ಪರಂಪರೆ, ನಂಬಿಕೆ, ಶ್ರದ್ಧೆ ಎಲ್ಲವೂ ಇದೆ. ಹೀಗಾಗಿ ಈ ಹೆಸರು ಅಗತ್ಯವಾಗಿತ್ತು ಮತ್ತು ಮುಂದಿನ ಪೀಳಿಗೆಗೆ ಭಾರತೀಯ ಇತಿಹಾಸದ ವೈಭವವನ್ನು ತಿಳಿಯುವಂತೆ ಮಾಡಲು ಅನಿವಾರ್ಯವೂ ಆಗಿತ್ತು.


ಎಂದಿನಂತೆ ಪ್ರತಿಪಕ್ಷವಾಗಿ ಕಾಂಗ್ರೆಸ್ಸು ಯೋಗಿಜೀಯ ಈ ನಡೆಯನ್ನು ವಿರೋಧಿಸಿದೆ. ಹೆಸರುಗಳನ್ನಿಡುವುದರ ಕುರಿತಂತೆ ಕಾಂಗ್ರೆಸ್ಸಿನ ಆಕ್ಷೇಪ ಹಾಸ್ಯಾಸ್ಪದ. ತಮಗೆ ತಾವೇ ಭಾರತರತ್ನ ಕೊಟ್ಟುಕೊಂಡ ಭೂಪರ ಪಕ್ಷವದು. ಸಕರ್ಾರಿ ಯೋಜನೆಗಳಿಗೆಲ್ಲಾ ತಮ್ಮವರದ್ದೇ ಹೆಸರುಗಳನ್ನಿಟ್ಟು ಒಂದು ವಂಶವನ್ನು ಶತ-ಶತಮಾನಗಳ ಕಾಲ ನೆನಪಿಸಿಕೊಳ್ಳಬೇಕೆಂಬ ಪ್ರಯತ್ನ ಮಾಡಿತ್ತಲ್ಲ ಇದು ಅಕ್ಬರಿನಿಗಿಂತಲೂ ಕೆಟ್ಟ ಚಾಳಿ. ಅಗತ್ಯ ಬಿದ್ದಾಗ ಜನಿವಾರ ಹಾಕುವ, ಶಿವ ಮಂದಿರಕ್ಕೆ ಹೋಗುವ, ರಾಮ ವನಗಮನ ಪಥಯಾತ್ರೆ ನಡೆಸುವ ಈ ಮಂದಿಗೆ ಪ್ರಯಾಗ ಮಹಿಮೆ ಅರ್ಥವಾಗುವುದು ಬಲು ಕಷ್ಟವೇ ಸರಿ. ಆದರೆ ಒಂದಂತೂ ಸತ್ಯ ಈ ದೇಶದ ಅವಿಭಾಜ್ಯ ಅಂಗವಾಗಿದ್ದ ಮುಸಲ್ಮಾನರನ್ನು ಇಲ್ಲಿನ ಪರಂಪರೆಯಿಂದಲೇ ದೂರಗೊಳಿಸಿ ತಮ್ಮ ಸ್ವಂತ ನಾಡಿನಲ್ಲೇ ಅನ್ಯ ದೇಶದವರಂತೆ ವ್ಯವಹರಿಸಬೇಕಾದ ಪರಿಸ್ಥಿತಿಯನ್ನು ಅವರಿಗೆ ತಂದವರೇ ಕಾಂಗ್ರೆಸ್ಸಿಗರು. ವಾಸ್ತವವಾಗಿ ರಾಹಲ್ ಮತ್ತವರ ತಂಡಕ್ಕೆ ಅಧಿಕಾರ ಮರಳಿ ಪಡೆಯಬೇಕೇ ಹೊರತು ಯಾರ ಏಳಿಗೆಯೂ ಬೇಕಿಲ್ಲ. ಹೀಗಾಗಿಯೇ ಹಿಂದೂಗಳು ಒಟ್ಟಾಗುತ್ತಿದ್ದಾರೆಂದ ತಕ್ಷಣ ಮುಸಲ್ಮಾನರ ಸೆರಗು ಬಿಟ್ಟು ತಾವು ಹಿಂದೂ ವಿರೋಧಿಯಲ್ಲ ಎಂದು ಹೇಳಿಕೊಳ್ಳಲು ಹೆಣಗಾಡುತ್ತಿದ್ದಾರೆ. ಐದೇ ವರ್ಷದ ಹಿಂದೆ ಇದೇ ಜನ ಮುಸಲ್ಮಾನರನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತಿದ್ದುದನ್ನು ನಾವೇ ಕಣ್ಣಾರೆ ಕಂಡಿದ್ದೆವು. ರಾಮಮಂದಿರ ವಿವಾದವು ಬಗೆ ಹರಿಯುವಂತೆ ಕಂಡಾಕ್ಷಣ ಇದೇ ಕಾಂಗ್ರೆಸ್ಸಿಗರು ಅದನ್ನು ವಿರೋಧಿಸದೇ ಹಿಂದೂ ಪಾಳಯಕ್ಕೆ ಹೋಗಿ ನಿಂತುಬಿಟ್ಟಿದ್ದಾರೆ. ಈಗ ಪ್ರಯಾಗರಾಜವನ್ನೂ ಕೂಡ ಖಡಕ್ಕಾಗಿ ವಿರೋಧಿಸುವ ಧಾಷ್ಟ್ರ್ಯ ಅವರಲ್ಲಿಲ್ಲ! ಅಷ್ಟು ಪಡಪೋಶಿಗಳಂತಾಗಿಬಿಟ್ಟಿದ್ದಾರೆ. ಇದನ್ನೇ ಅಚ್ಛೇದಿನ್ ಎಂದು ಕರೆದಿದ್ದು.

-ಚಕ್ರವರ್ತಿ ಸೂಲಿಬೆಲೆ

1 Comment

1 Comment

Leave a Reply

Your email address will not be published. Required fields are marked *

Most Popular

To Top