National

ಕಾಂಗ್ರೆಸ್ಸಿಗರ ಕಂಗಳೊಳಗೆ ಮೋದಿ ಗೆಲುವಿನ ಮಿಂಚು!

ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ನೀವು ಊಹಿಸಲಾಗದ ಘಟನೆಗಳನೇಕ ನಡೆಯುತ್ತಿವೆ. ಒಂದೆಡೆ ಮೋದಿಯ ಮರು ಅಧಿಕಾರಗ್ರಹಣ ನಿಶ್ಚಿತವಾಗುತ್ತಿದ್ದಂತೆ ಕಾಂಗ್ರೆಸ್ಸು ಪತರಗುಟ್ಟಿದ್ದರೆ, ಇತ್ತ ಶತಾಯ-ಗತಾಯ ಮೋದಿಯನ್ನು ತಡೆಯಲು ಪ್ರಯತ್ನಿಸುತ್ತಿರುವ ಕ್ರಿಶ್ಚಿಯನ್ ಮಿಷನರಿಗಳು ಇರುವ ಎಲ್ಲ ಜಾಲವನ್ನು ಹರಡಿಸಿ ಕುಂತುಬಿಟ್ಟಿವೆ. ಆದರೆ, ಇವರ್ಯಾರಿಗೂ ಗೊತ್ತಿಲ್ಲದ ಒಂದೇ ಒಂದು ಸಂಗತಿಯೆಂದರೆ ಈ ಬಾರಿ ಇವರು ಹಿಂದೂಧರ್ಮವನ್ನು ವಿಘಟಿಸಲು ಪ್ರಯತ್ನಿಸಿದಷ್ಟು ಅದು ಜೋರಾಗಿಯೇ ಸಂಘಟಿತವಾಗುತ್ತಿದೆ ಮತ್ತು ಈ ಬಾರಿಯ ಒಟ್ಟುಗೂಡುವಿಕೆ ಹಿಂದೆಂದಿಗಿಂತಲೂ ಬಲವಾಗಿದೆ.

ಇತ್ತೀಚೆಗೆ ಟ್ವಿಟರ್ ಸಿಇಒ ಜ್ಯಾಕ್ ಭಾರತಕ್ಕೆ ಬಂದಿದ್ದರು. ರಾಹುಲ್, ಮೋದಿ ಮತ್ತು ದಲೈಲಾಮಾರನ್ನು ಭೇಟಿ ಮಾಡಿ ಆ ಚಿತ್ರಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಅಲ್ಲಿಯವರೆಗೂ ಎಲ್ಲವೂ ಸುಸೂತ್ರವಾಗಿಯೇ ಇತ್ತು. ಭಾರತದಿಂದ ಹೊರಡುವುದಕ್ಕೂ ಮುನ್ನ ಕೊನೆಯ ಚರಣದಲ್ಲಿ ಆತ ಒಂದಷ್ಟು ದೇಶದ ತುಂಬಾ ಹೆಸರು ಮಾಡಿರುವ ಮಹಿಳಾ ಹೋರಾಟಗಾರರನ್ನು ಭೇಟಿ ಮಾಡಿದ. ಆ ಹೊತ್ತಿನಲ್ಲಿ ಅವನೊಂದಿಗೆ ಟ್ವಿಟರ್ನ ಅಮೃತಾ ತ್ರಿಪಾಟಿ ಮತ್ತು ಅದರ ಕಾನೂನು ಪ್ರಮುಖರಾದ ವಿಜಯಾ ಗಡ್ಡೆ ಇದ್ದರು. ನಾಲ್ಕು ಗೋಡೆಗಳ ಮಧ್ಯೆ ಸುದೀರ್ಘಕಾಲ ಚಚರ್ೆ ನಡೆದ ನಂತರ ಇವರೆಲ್ಲರೂ ಗ್ರೂಪ್ ಫೋಟೊ ಒಂದಕ್ಕೆ ಪೋಸು ನೀಡಿದರು. ಹಾಗೆ ಎಲ್ಲರೂ ಫೋಟೊ ತೆಗೆದುಕೊಳ್ಳುವಾಗ ಜ್ಯಾಕ್ ತನಗೆ ಕೊಟ್ಟಿದ್ದ ಉಡುಗೊರೆಯ ಪೋಸ್ಟರ್ ಅನ್ನು ಕೈಯಲ್ಲಿ ಹಿಡಿದಿದ್ದ. ಅದರ ಮೇಲೆ ಹೆಣ್ಣುಮಗಳೊಬ್ಬಳು ಬ್ರಾಹ್ಮಣರು ಮಹಿಳಾ ಶೋಷಕರೆಂದು ಕರೆಯುವ ಬರಹವಿತ್ತು. ಪತ್ರಕತರ್ೆ ಅನ್ನಾ ವಿಟಿಕಾಡ್ ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ‘ಟ್ವಿಟರ್ ಮುಖ್ಯಸ್ಥನೊಂದಿಗೆ ಭಾರತದ ಸ್ಥಿತಿಗತಿಗಳ ಕುರಿತಂತೆ ಸಾಕಷ್ಟು ಚಚರ್ೆ ಮಾಡಲಾಯ್ತು, ಜೊತೆಗೆ ಈ ಚಚರ್ೆ ಸುತ್ತಿ ಬಳಸಿಯಾದ ಚಚರ್ೆಯಾಗಿರದೇ ನೇರವಂತಿಕೆಯಿಂದ ಕೂಡಿತ್ತು’ ಎಂದೂ ಬರೆದುಕೊಂಡಿದ್ದಳು. ಇದು ಬಲುದೊಡ್ಡ ಗಲಾಟೆಗೆ ಕಾರಣವಾಯ್ತು. ಭಾರತವಷ್ಟೇ ಅಲ್ಲದೇ ಜಾಗತಿಕ ಮಟ್ಟದಲ್ಲೂ ಟ್ವಿಟರ್ ಮುಖ್ಯಸ್ಥನ ಈ ದುರಹಂಕಾರಿ ವರ್ತನೆಯ ಕುರಿತಂತೆ ಆಕ್ರೋಶ ವ್ಯಕ್ತವಾಗಿದ್ದಲ್ಲದೇ ಸಂಜೆಯಾಗುವುದರೊಳಗೆ ಜ್ಯಾಕ್ನದೇ ಅಲ್ಲದೇ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರ ಜನ್ಮವನ್ನೂ ಟ್ವೀಟಿಗರು ಜಾಲಾಡಿಬಿಟ್ಟರು. ಅಚ್ಚರಿಯೇನು ಗೊತ್ತೇ? ಈ ಬಾರಿ ಬ್ರಾಹ್ಮಣರ ಪರವಾಗಿ ನಿಂತು ಟ್ವಿಟರ್ನ ವಿರುದ್ಧ ಕೂಗಾಡಿದವರೆಲ್ಲಾ ಬ್ರಾಹ್ಮಣರೇ ಆಗಿರಲಿಲ್ಲ. ಕಳೆದ ಎರಡು ಶತಮಾನಗಳಿಂದ ಬ್ರಾಹ್ಮಣ ಮತ್ತು ದಲಿತರ ನಡುವಿನ ಅಂತರವನ್ನು ಹೆಚ್ಚಿಸುವ ದೃಷ್ಟಿಯಿಂದಲೇ ಬೆರಕೆ ಸಿದ್ಧಾಂತಗಳನ್ನೆಲ್ಲಾ ಪ್ರತಿಪಾದಿಸಿದ ಕ್ರಿಶ್ಚಿಯನ್ನರಿಗೆ ಇದು ನುಂಗಲಾರದ ಹೊಡೆತವಾಗಿತ್ತು. ವ್ಯವಸ್ಥಿತವಾಗಿ ಬ್ರಾಹ್ಮಣರನ್ನು ಬೈದೂ-ಬೈದು ಅವರೆಂದಿಗೂ ತಲೆಯೆತ್ತದಂತೆ ಮಾಡಿಬಿಟ್ಟಿದ್ದ ಕ್ರಿಶ್ಚಿಯನ್ ಮಿಷನರಿಗಳು ಮತ್ತು ಅದರ ಬೆಂಬಲಕ್ಕೆ ನಿಂತ ಲಿಬರಲ್ ಪತ್ರಕರ್ತರು ಈಗ ಮಣ್ಣು ತಿನ್ನುವ ಸರದಿ ಬಂದಿತ್ತು. ಬ್ರಾಹ್ಮಣರ ಪರವಾಗಿ ಈ ಪರಿಯದ್ದೊಂದು ಟ್ವೀಟಾಕ್ರೋಶ ವ್ಯಕ್ತವಾಗುವುದೆಂದು ಯಾರೂ ಎಣಿಸಿರಲಿಲ್ಲ. ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಯ್ತೆಂದರೆ ಟ್ವಿಟರ್ ಸಂಜೆಯ ವೇಳೆಗೆ ತಾನೇ ಅಧಿಕೃತವಾಗಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ತೇಪೆ ಹಚ್ಚಬೇಕಾದ ಪರಿಸ್ಥಿತಿ ಬಂತು.

ಈ ಇಡಿಯ ಪ್ರಕರಣದಲ್ಲಿ ಕಾಂಗ್ರೆಸ್ಸು ಒಂದೂ ಮಾತನಾಡದೇ ಶಾಂತವಾಗಿತ್ತು. ತನ್ನನ್ನು ತಾನು ಜನಿವಾರಧಾರಿ ಬ್ರಾಹ್ಮಣನೆಂದುಕೊಳ್ಳುವ ರಾಹುಲನಿಗೆ ಈ ಒಟ್ಟಾರೆ ಪ್ರಕರಣ ಇರಿಸು-ಮುರಿಸುಂಟು ಮಾಡಿತ್ತೋ ಇಲ್ಲವೋ ದೇವರೇ ಬಲ್ಲ. ಆದರೆ ಈ ಎಡಪಂಥೀಯ ಬುದ್ಧಿಜೀವಿಗಳ ಮತ್ತು ಕ್ರಿಶ್ಚಿಯನ್ ಮಿಷನರಿಗಳಷ್ಟೇ ಮೂರ್ಖತನದಿಂದ ತನ್ನ ಅಧ್ಯಕ್ಷತೆಯಲ್ಲಿರುವ ಪಕ್ಷ ಕೂಡ ವತರ್ಿಸುತ್ತಿದೆ ಎಂಬುದನ್ನು ಆತ ಗಮನಿಸಿರಲಿಕ್ಕೆ ಸಾಕು. ನಾಲ್ಕೂ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ನೇತಾರರು ಕೊಡುತ್ತಿರುವ ಹೇಳಿಕೆಗಳೇ ಇದಕ್ಕೆ ಸಾಕ್ಷಿ. ಮನೀಷ್ ತಿವಾರಿ ಟ್ವಿಟರ್ನ ಆಡಳಿತಾಧಿಕಾರಿಯ ಬೆಂಬಲಕ್ಕೆ ನಿಂತು ಆತ ಮಾಡಿದ್ದನ್ನು ಪತ್ರಿಕಾಗೋಷ್ಠಿ ಕರೆದು ಸಮಥರ್ಿಸಿಕೊಂಡಿದ್ದಾರೆ. ಒಟ್ಟಾರೆ ಕಾಂಗ್ರೆಸ್ಸು ಮುಂದೇನು ಮಾಡಬೇಕೆಂದು ತಿಳಿಯದೇ ಗೊಂದಲಕ್ಕೆ ಬಿದ್ದಂತೆ ವತರ್ಿಸುತ್ತಿತ್ತು. ಹಾಂಗತ ಕಾಂಗ್ರೆಸ್ಸಿಗೆ ಬ್ರಾಹ್ಮಣರ ಬಗ್ಗೆ ದ್ವೇಷವಿದೆ ಎಂದರೆ ತಪ್ಪಾದೀತೇನೋ! ಅವರಿಗೆ ಯಾರ ಬಗ್ಗೆ ದ್ವೇಷವೂ ಇಲ್ಲ, ಪ್ರೀತಿಯೂ ಇಲ್ಲ. ಅವರಿಗೆ ಬೇಕಿರುವುದು ಮತಗಳಷ್ಟೇ. ಮಧ್ಯಪ್ರದೇಶದ ಚುನಾವಣಾ ರ್ಯಾಲಿಯೊಂದರಲ್ಲಿ ಬ್ರಾಹ್ಮಣರ ನಡುವೆ ಮಾತನಾಡುತ್ತಾ ಕಾಂಗ್ರೆಸ್ ನಾಯಕನೊಬ್ಬ ಮೋದಿ, ಉಮಾಭಾರತಿ, ಸಾಧ್ವಿ ಋತಂಬರಾ ಈ ಮೂವರೂ ಕೆಳಜಾತಿಯಿಂದ ಬಂದಿದ್ದು, ಇವರಿಗೆ ಹಿಂದೂಧರ್ಮದ ಬಗ್ಗೆ ಮಾತನಾಡುವ ಅಧಿಕಾರವಿಲ್ಲವೆಂದು ಹೇಳಿರುವುದಲ್ಲದೇ ಹಿಂದೂಧರ್ಮ ಬ್ರಾಹ್ಮಣರ ಸ್ವತ್ತು ಎಂದು ನೆರೆದಿದ್ದವರ ಮುಂದೆ ಬಡಾಯಿ ಕೊಚ್ಚುಕೊಂಡುಬಿಟ್ಟಿದ್ದಾನೆ. ಹೇಳಿದೆನಲ್ಲಾ, ಸೋಲಿನ ತೂಗುಗತ್ತಿ ತಲೆಯ ಮೇಲೆ ಓಲಾಡುತ್ತಿರುವಂತೆ ಕಾಂಗ್ರೆಸ್ಸು ಹೊಸ ಹೊಸ ತಪ್ಪುಗಳನ್ನು ಮಾಡುತ್ತಲೇ ಇದೆ. ಒಂದೆಡೆ ಪುರುಷ ಪ್ರಧಾನ್ಯ ವ್ಯವಸ್ಥೆಯನ್ನು ಬ್ರಾಹ್ಮಣರ ಕೊಡುಗೆಯೆಂದು ಜರಿಯುವ ಕಾಂಗ್ರೆಸ್ಸು ಮತ್ತೊಂದೆಡೆ ವೋಟು ಸಿಗುವುದೆನ್ನುವ ಕಾರಣಕ್ಕಾಗಿ ಹಿಂದೂಧರ್ಮದ ಅಧಿಕೃತ ವಕ್ತಾರರೇ ಬ್ರಾಹ್ಮಣರು ಎಂದು ಹೇಳಿದೆ. ಎರಡೂ ಹೇಳಿಕೆಗಳನ್ನು ಒಟ್ಟುಗೂಡಿಸಿ ನೋಡಿದರೆ ಬ್ರಾಹ್ಮಣರು ಹೇಳಿದ್ದು ಮಾತ್ರ ಸತ್ಯ ಎನ್ನುವುದಾದರೆ ಪುರುಷ ಪ್ರಧಾನ್ಯ ವ್ಯವಸ್ಥೆಯೂ ಸತ್ಯ ಮತ್ತು ಅದು ಹಿಂದೂಧರ್ಮದಲ್ಲಿರುವ ಕೊಳೆ ಎಂಬುದನ್ನು ಒಪ್ಪಿಕೊಳ್ಳುವ ಕಾಂಗ್ರೆಸ್ಸು ಮತ್ತೆ ಹಿಂದೂಧರ್ಮವನ್ನು ಧಿಕ್ಕರಿಸುವ, ಅವಹೇಳನ ಮಾಡುವ ಕೆಲಸ ಮಾಡುತ್ತಿದೆ ಎಂದಾಯ್ತು. ಈ ಪ್ರಶ್ನೆಗಳನ್ನು ಕೇಳಿದರೆ ಖಂಡಿತ ಅವರು ಉತ್ತರಿಸಲಾರರು.

ಕಾಂಗ್ರೆಸ್ ನಾಯಕ ಕಮಲ್ನಾಥ್ ಇತ್ತೀಚೆಗೆ ಮುಸಲ್ಮಾನರ ನಡುವೆ ಮಾತನಾಡುತ್ತಾ 80 ಪ್ರತಿಶತ ಮುಸಲ್ಮಾನರು ವೋಟು ಕೊಟ್ಟರೂ ಕಾಂಗ್ರೆಸ್ಸು ಗೆಲ್ಲಲಾರದು. 90 ಪ್ರತಿಶತ ಮುಸಲ್ಮಾನರ ವೋಟು ಬೇಕೇ ಬೇಕು ಎಂದಿದ್ದಾನೆ. ನೆರೆದಿದ್ದವರಲ್ಲಿ ಹಿಂದೂಧರ್ಮದ ಕುರಿತಂತೆ ಆರ್ಎಸ್ಎಸ್ನ ಕುರಿತಂತೆ ಭಯ ಹುಟ್ಟಿಸುವ ವಿಚಾರಗಳನ್ನು ಹೇಳಿ ಒಮ್ಮೆ ಅಧಿಕಾರಕ್ಕೆ ಬಂದರೆ ಇವರೆಲ್ಲರನ್ನೂ ಒಂದು ಕೈ ನೋಡಿಕೊಳ್ಳುತ್ತೇನೆ ಎಂದುಬಿಟ್ಟಿದ್ದಾರೆ. ಏನಿದರ ಅರ್ಥ? ಹಿಂದೂಗಳ ಮಾರಣಹೋಮ ನಡೆಸುತ್ತೇವೆಂಬ ಎಚ್ಚರಿಕೆಯನ್ನು ಕೊಡುತ್ತಿದ್ದಾರೋ ಅಥವಾ ಭಾರತವನ್ನು ಪಾಕಿಸ್ತಾನ ಮಾಡಿಬಿಡುವ ಭರವಸೆ ಕೊಡುತ್ತಿದ್ದಾರೋ!

ಈ ನಡುವೆಯೇ ನಗರ ನಕ್ಸಲರನ್ನು ಬಂಧಿಸಿ ವಿಚಾರಣೆ ನಡೆಸಿದ್ದ ಪೊಲೀಸರು ಸ್ಫೋಟಕವಾದ ಸಂಗತಿಯೊಂದನ್ನು ಹೊರಹಾಕಿದ್ದಾರೆ. ಮಧ್ಯಪ್ರದೇಶದ ಕಾಂಗ್ರೆಸ್ ಮುಖವಾಗಿರುವ ದಿಗ್ವಿಜಯ ಸಿಂಗ್ ನಕ್ಸಲರೊಂದಿಗೆ ನೇರ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಅನೇಕ ನಕ್ಸಲರ ಪುಸ್ತಕಗಳಲ್ಲಿ ದಿಗ್ವಿಜಯ ಸಿಂಗರ ಆಪ್ತ ಸಂಖ್ಯೆ ಇರುವುದು ಗಾಬರಿ ಹುಟ್ಟಿಸಿದೆ. ಈ ಕುರಿತಂತೆ ವಿಚಾರಣೆ ನಡೆದರೆ ಜೊಂಡು ಹುಲ್ಲಿನಂತೆ ಕಾಂಗ್ರೆಸ್ಸಿನ ಅನೇಕರು ಗುಂಪು ಗುಂಪಾಗಿ ಜೈಲಿಗೆ ಹೋಗಬೇಕೇನೋ. ಕಳೆದ ಆರೇಳು ದಶಕಗಳಿಂದ ಭಾರತವನ್ನು ತುಂಡುಗೈದು ಜಗತ್ತಿನ ರಾಷ್ಟ್ರಗಳಿಗೆ ಹಂಚಿಬಿಡಬೇಕೆಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಅಯೋಗ್ಯರು ಇವರೆಲ್ಲಾ. ಮುಸಲ್ಮಾನರೆದೆಯಲ್ಲಿ ಹಿಂದೂ ವಿರೋಧಿ ಭಾವನೆಯನ್ನು ಬಲಗೊಳಿಸಿ, ಹಿಂದೂಗಳನ್ನು ಚೂರು-ಚೂರುಗೈದು, ದಲಿತರಿಗೆ ಬ್ರಾಹ್ಮಣರ ಮೇಲೆ ಆಕ್ರೋಶ ಹುಟ್ಟಿಸಿ, ಜಾತಿ-ಜಾತಿಗಳ ಹೆಸರಲ್ಲಿ ಪ್ರತಿಯೊಬ್ಬರೂ ಕಿತ್ತಾಡುವಂತೆ ಮಾಡಿ ಭಾರತದ ಅಸ್ಮಿತೆಯ ನಾಶಕ್ಕೆ ನಿರಂತರವಾಗಿ ಪ್ರಯತ್ನಿಸಿದ ಇವರೆಲ್ಲರ ಬಂಡವಾಳ ಈಗ ಬಯಲಿಗೆ ಬರುತ್ತಿದೆ. ಅನೇಕ ಕಟ್ಟರ್ ಹಿಂದೂಗಳು ಆಗಾಗ ನನ್ನನ್ನು ಪ್ರಶ್ನಿಸುತ್ತಿರುತ್ತಾರೆ. ಮೋದಿ ಹಿಂದೂಗಳಿಗೆ ಏನು ಮಾಡಿದರು ಅಂತ. ಬಹುಶಃ ಕಣ್ಣಿಗೆ ಕಾಣುವ ರಾಮಮಂದಿರ ಕಟ್ಟಲಿಲ್ಲ, ಮಥುರಾ ಕೃಷ್ಣಮಂದಿರ ಬಿಡಿಸಿಕೊಡಲಿಲ್ಲ, ತಾಜ್ಮಹಲ್ ದೇವಸ್ಥಾನ ಎಂದು ಅದಕ್ಕೆ ಮರುನಾಮಕರಣ ಮಾಡಲಿಲ್ಲ ನಿಜ. ಆದರೆ ನಮ್ಮ ಅರಿವಿಗೇ ಬಾರದಂತೆ ನಮ್ಮ ನಡುವೆಯೇ ಇದ್ದು ತಮ್ಮ ಬೇಳೆ ಬೇಯಿಸಿಕೊಳ್ಳಲು ಹಿಂದೂಗಳನ್ನು ಅತ್ಯಂತ ತುಚ್ಛರೆಂದು ಜರಿದು ಹಿಂದುವೆನ್ನಲು ನಾಚಿಕೆ ಪಡುವಂತೆ ಮಾಡಿಬಿಟ್ಟಿದ್ದ ಈ ಅಯೋಗ್ಯರು ಜನರ ಮುಂದೆ ಬೆತ್ತಲಾಗುವಂತೆ ಮಾಡಿಬಿಟ್ಟಿದ್ದಾರೆ. ಈ ಹಿಂದೆ ಇವರುಗಳೆಲ್ಲರ ಕುರಿತಂತೆ ನಾವು ಭಾವನಾತ್ಮಕವಾಗಿ ಭಾಷಣ ಮಾಡುತ್ತಿದ್ದೆವು ನಿಜ. ಆದರೆ ನರೇಂದ್ರಮೋದಿ ಇವರೆಲ್ಲರ ಈ ಘನಂದಾರಿ ಕೆಲಸಗಳಿಗೆ ಸಾಕ್ಷಿಯನ್ನು ತಂದು ಜನರ ಮುಂದಿರಿಸುವಂತೆ ಮಾಡಿಬಿಟ್ಟಿದ್ದಾರೆ. ಇದ್ದುದರಲ್ಲಿ ಮುಸಲ್ಮಾನರೇ ವಾಸಿ. ಕಾಂಗ್ರೆಸ್ಸಿನ ಸ್ಥಿತಿಗತಿಯನ್ನು ಬಲುಬೇಗ ಅಥರ್ೈಸಿಕೊಂಡು ಅನೇಕ ಕಡೆ ಅವರಿಂದ ದೂರಸರಿದು ನಿಂತುಬಿಟ್ಟಿದ್ದಾರೆ. ಹೀಗಾಗಿಯೇ ಕಾಂಗ್ರೆಸ್ಸು ಅವರೆದುರಿಗೆ ಗೋಗರೆಯುವ ಸ್ಥಿತಿಗೆ ಬಂದು ನಿಂತಿರುವುದು.

ಮೋದಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಭಾರತ ಎಂದಾಗ ಅನೇಕರು ಅವರು ಒಂದು ಪಾಟರ್ಿಯನ್ನೇ ಮುಗಿಸುವ ಹೊಂಚು ಹಾಕುತ್ತಿದ್ದಾರೆ ಎಂದು ಭಾವಿಸಿದ್ದರು. ಆದರೆ ಅದು ಹಾಗಲ್ಲ. ಕಾಂಗ್ರೆಸ್ ಮುಕ್ತ ಭಾರತ ಎಂದರೆ ನಕ್ಸಲ್ ಮುಕ್ತ ಭಾರತ, ಜಾತಿವಾದ ಮುಕ್ತ ಭಾರತ, ಸ್ತ್ರೀಶೋಷಣೆ ಮುಕ್ತ ಭಾರತ, ಮತಾಂತರ ಮುಕ್ತ ಭಾರತ, ಭಯೋತ್ಪಾದನೆ ಮುಕ್ತ ಭಾರತ, ಭ್ರಷ್ಟಾಚಾರ ಮುಕ್ತ ಭಾರತ. ಎಷ್ಟೆಲ್ಲಾ ಅರ್ಥಗಳಿವೆ ಗೊತ್ತಾ?! 2019 ಕ್ಕೆ ನಾವು ಇವೆಲ್ಲಕ್ಕೆ ಸಾಕ್ಷಿಯಾಗಲಿದ್ದೇವೆ. ಕಳೆದ ಬಾರಿ ಮೋದಿಯವರ ಗೆಲುವನ್ನು ನಾನು ಅವರ ಕಂಗಳಲ್ಲೇ ಕಂಡಿದ್ದೆ. ಆದರೆ ಈ ಬಾರಿ ಅವರು ಗೆಲ್ಲುವುದನ್ನು ಕಾಂಗ್ರೆಸ್ಸಿಗರ ಕಂಗಳಲ್ಲಿ ಅದಾಗಲೇ ನೋಡುತ್ತಿದ್ದೇನೆ. ಜೈ ಹೋ!

-ಚಕ್ರವರ್ತಿ ಸೂಲೆಬೆಲೆ

Click to comment

Leave a Reply

Your email address will not be published. Required fields are marked *

Most Popular

To Top