National

ಕಾಂಗ್ರೆಸ್ಸಿಗರ ಕಂಗಳಲ್ಲಿ ಮಿಂಚುತ್ತಿದೆ ಭವಿಷ್ಯದ ಸೋಲು!!

ನಿನ್ನೆ ಬೆಂಗಳೂರಿಗೆ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ 2019 ರ ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಬಂದಿದ್ದರು. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕಿಗೆ ರಾಹುಲ್ ಆಗಮಿಸುತ್ತಿದ್ದಂತೆ ಟೆಕ್ಕಿಗಳು ಮೋದಿ ಮೋದಿ ಎಂಬ ಘೋಷಣೆಯನ್ನು ಕೂಗಿದ್ದಾರೆ. ಹೀಗೆ ಘೋಷಣೆ ಕೂಗಿದವರ ಮೇಲೆ ಕಾಂಗ್ರೆಸ್ಸಿನ ಬೆಂಬಲಿಗರು ಮುಗಿಬಿದ್ದಿದ್ದಾರೆ ಅಷ್ಟೇ ಅಲ್ಲದೇ ಪೊಲೀಸರೂ ಮೋದಿ ಪರ ಘೋಷಣೆ ಕೂಗಿದವರನ್ನು ಬಂಧಿಸಿದ್ದಾರೆ.

ರಾಹುಲ್ ಸೋಮವಾರ ಬೆಂಗಳೂರಿನ ಉದ್ಯಮಿಗಳೊಂದಿಗೆ ಸಂವಾದ ನಡೆಸಲು ಮಾನ್ಯತಾ ಟೆಕ್ ಪಾರ್ಕಿಗೆ ಧಾವಿಸಿದ್ದ. ಅಲ್ಲಿದ್ದ ಟೆಕ್ಕಿಗಳು ‘ಮೋದಿ ಮೋದಿ’ ಎಂಬ ಘೋಷಣೆ ಕೂಗುತ್ತಲೇ ರಾಹುಲ್ ಗಾಬರಿಗೊಳಗಾಗಿದ್ದು ಕಂಡು ಬಂತು. ಟೆಕ್ಕಿಗಳು ‘ಗೋ ಬ್ಯಾಕ್ ರಾಹುಲ್’ ಘೋಷಣೆಯನ್ನೂ ಕೂಗಿದ್ದಾರೆ. ಇದು ಜೋರಾಗುತ್ತಿದ್ದಂತೆ ಕಾಂಗ್ರೆಸ್ಸಿನ ಕೆಲವರು ಟೆಕ್ಕಿಗಳ ಮೇಲೆ ಮುಗಿಬಿದ್ದಿದ್ದಾರೆ. ಈ ಸಮಯದಲ್ಲಿ ಟೆಕ್ಕಿಗಳನ್ನು ರಕ್ಷಿಸಬೇಕಿದ್ದ ಪೊಲೀಸರು, ಅವರನ್ನೇ ಬಂಧಿಸಿ ಎಳೆದೊಯ್ದಿದ್ದಾರೆ.

ರಾಹುಲ್ ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತವೆ. ಸ್ವತಃ ಕೆಪಿಸಿಸಿ ರಾಹುಲ್ ರವರನ್ನು ಕರ್ನಾಟಕದಲ್ಲಿ ಸ್ಪರ್ಧಿಸಲು ಆಹ್ವಾನಿಸಿದೆ. ಈ ವಿಷಯ ಹೊರಬರಂದ ಕೆಲವೇ ದಿನಗಳಲ್ಲಿ ಬೆಂಗಳೂರಿನ ಟೆಕ್ಕಿಗಳು ರಾಹುಲ್ ಗೆ ಸರಿಯಾದ ಅವಮರ್ಯಾದೆ ಮಾಡಿದ್ದಾರೆ!

ಇದರ ಜೊತೆಗೆ ಭಾನುವಾರ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷೆ ಸೋನಿಯಾರ ಕ್ಷೇತ್ರವಾದ ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ ಮತ್ತೊಂದು ಘಟನೆ ನಡೆದಿದೆ. ಕಾಂಗ್ರೆಸ್ಸಿನ ಬೆಂಬಲಿಗರು ಹಿಂದೂ ಯುವ ವಾಹಿನಿಯ ಸದಸ್ಯನನ್ನು ಸಾರ್ವಜನಿಕರ ಎದುರೇ ಥಳಿಸಿದ್ದಾರೆ. ಭಾನುವಾರ ಪ್ರಿಯಾಂಕ ವಾದ್ರಾ ಅವರು ಚುನಾವಣಾ ಪ್ರಚಾರಕ್ಕಾಗಿ ರಾಯ್ ಬರೇಲಿಗೆ ಬರುವವರಿದ್ದರು. ಅವರನ್ನು ಸ್ವಾಗತಿಸಲು ಕಾಂಗ್ರೆಸ್ಸಿನ ಬೆಂಬಲಿಗರು ಘೋಷಣೆ ಕೂಗುತ್ತಿದ್ದರಲ್ಲದೇ ‘ಚೌಕಿದಾರ್ ಚೋರ್ ಹೈ’ ಎಂಬ ಘೋಷಣೆಯನ್ನೂ ಕೂಗುತ್ತಿದ್ದರೆ. ಇದೇ ಸಂದರ್ಭದಲ್ಲಿ ಹಿಂದೂ ಯುವ ವಾಹಿನಿಯ ಸದಸ್ಯರು ಪ್ರಿಯಾಂಕರ ವಿರುದ್ಧ ಘೋಷಣೆಳನ್ನು ಕೂಗಿದ್ದಾರೆ.

‘ಚೌಕಿದಾರ್ ಚೋರ್ ಹೈ’ ಎಂದು ಕೂಗುತ್ತಿದ್ದುದನ್ನು ಪ್ರಶ್ನಿಸಿದ ಆಶಿಷ್ ಪಾಠಕ್ ಎನ್ನುವವನಿಗೆ ಉತ್ತರ ನೀಡದೇ ಕಾಂಗ್ರೆಸ್ಸಿಗರು ಚೆನ್ನಾಗಿ ಥಳಿಸಿದ್ದಾರೆ. ಆತನನ್ನು ರಸ್ತೆ ಮಧ್ಯಕ್ಕೆ ಎಳೆದುಕೊಂಡು ಬಂದು ಶೂನಿಂದ ಹೊಡೆದಿದ್ದಾರೆ. ನಂತರ ಪಾಠಕ್ ಅವರ ಮೇಲೆ ಕೇಸು ದಾಖಲಿಸಿದ್ದಾನೆ.

ಸದಾ ವಾಕ್ ಸ್ವಾತಂತ್ರ್ಯದ ಕುರಿತು ಉದ್ದುದ್ದ ಭಾಷಣಗಳನ್ನು ಮಾಡುವ ಕಾಂಗ್ರೆಸ್ಸು, ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದು ಪೋಸ್ಟರ್ ಹಿಡಿದು ಬೀದಿಗೆ ಬಂದಿದ್ದ ಕಾಂಗ್ರೆಸ್ಸು ಜನ ತಮಗೆ ಇಷ್ಟವಾದ ನಾಯಕನ ಪರ ಘೋಷಣೆ ಕೂಗುತ್ತಿದ್ದಂತೆ ಅವರ ಮೇಲೆ ಹಲ್ಲೆ ನಡೆಸಿರುವುದು ಕಾಂಗ್ರೆಸ್ಸಿನ ದಯನೀಯ ಸ್ಥಿತಿಯನ್ನು ಎತ್ತಿ ತೋರುತ್ತಿದೆ.

Click to comment

Leave a Reply

Your email address will not be published. Required fields are marked *

Most Popular

To Top