International

ಕಳಪೆ ಕಿಟ್ ಕೊಟ್ಟು ಕೈತೊಳೆದುಕೊಂಡ ಚೀನಾಕ್ಕೆ ಒಂದು ರೂಪಾಯಿ ಕಳಕೊಳ್ಳದೆ ಪಾಠ ಕಲಿಸಿತು ಭಾರತ!

ಭಾರತ ಸರ್ಕಾರ 250 ರೂಪಾಯಿ ಕೊಟ್ಟು ಖರೀದಿಸಬಹುದಾಗಿದ್ದ ಆ್ಯಂಟಿ-ಬಾಡಿ ಟೆಸ್ಟ್ ಕಿಟ್‌ಗೆ 600 ರೂಪಾಯಿಗಳನ್ನು ಕೊಟ್ಟು ಭ್ರಷ್ಟಾಚಾರ ಮಾಡಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ವಿಷಯದ ಕುರಿತ ಸತ್ಯಾಸತ್ಯತೆಯೇನು!?
ಭಾರತ ಸರ್ಕಾರ ICMR ಮೂಲಕ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 27 ರಂದು 5 ಲಕ್ಷ ರ್ಯಾಪಿಡ್ ಆ್ಯಂಟಿ-ಬಾಡಿ ಟೆಸ್ಟ್ ಕಿಟ್‌ಗಳನ್ನು ಚೀನಾದ ವೋಂಡ್ಫೊ ಕಂಪೆನಿಯಿಂದ ಖರೀದಿಸಲು ಮುಂದಾಯಿತು. ಕೋವಿಡ್-19 ಸೋಂಕಿತರ ಪರೀಕ್ಷೆಗೆ ಈ ಕಿಟ್‌ ಅನ್ನು ಬಳಸಲಾಗುತ್ತದೆ. ICMR ನ‌ ಪ್ರಕಾರ ಇದರಲ್ಲಿ ರಕ್ತದ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆ ಮಾಡಬಹುದು. ಕೊರೋನಾ ಸೋಂಕಿತ ವ್ಯಕ್ತಿ ಆ್ಯಂಟಿ ಬಾಡಿ ಅಂದರೆ ಸೋಂಕಿನ ವಿರುದ್ಧ ಹೋರಾಡುವ ಕಣಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದಾನೋ ಇಲ್ಲವೋ ಎಂಬುದನ್ನು ಇದು ತಿಳಿಸುತ್ತದೆ. ಇದರ ಒಪ್ಪಂದ ICMR ಮತ್ತು ಆರ್ಕ್ ಫಾರ್ಮಸುಟಿಕಲ್ಸ್ ನಡುವೆ ನಡೆಯಿತು. ರಾಜ್ಯ ಸರ್ಕಾರಗಳು ಈ ಕಿಟ್‌ಗೆ ಬೇಡಿಕೆ ಸಲ್ಲಿಸಿದ್ದವು.
ಈ ಟೆಸ್ಟ್ ಕಿಟ್‌ಗಳು ಭಾರತಕ್ಕೆ ಬಂದ ನಂತರ ತಿಳಿದದ್ದು ಇವುಗಳ ಗುಣಪಟ್ಟ ಅತ್ಯಂತ ಕಳಪೆಯಾಗಿದೆ ಎಂದು! ತಕ್ಷಣವೇ ICMR ಎಲ್ಲಾ ರಾಜ್ಯಸರ್ಕಾರಗಳಿಗೂ ಈ ಟೆಸ್ಟ್‌ಕಿಟ್‌ಗಳನ್ನು ಬಳಸದಿರುವಂತೆ ಆದೇಶ ಹೊರಡಿಸಿತು.  ಇದನ್ನು ಭಾರತಕ್ಕೆ 600 ರೂಪಾಯಿಗಳಿಗೆ ರಫ್ತು ಮಾಡಿದ ಫಾರ್ಮಸಿ ಸಂಸ್ಥೆ ಅಸಲಿಗೆ ಚೀನಾದಿಂದ 245 ರೂಪಾಯಿಗಳಿಗೆ ಕೊಂಡುಕೊಂಡಿತ್ತು! ಅಂದೆ ಬರೋಬ್ಬರಿ 60 ಪ್ರತಿಶತ ಹೆಚ್ಚು!
ಇದರಿಂದ ಎಲ್ಲರೂ ICMR ಅನ್ನು, ಭಾರತ ಸರ್ಕಾರವನ್ನು ದೂಷಿಸಲು ಪ್ರಾರಂಭಿಸಿದರು. ದೆಹಲಿಯ ಹೈಕೋರ್ಟ್ ಕೂಡ ಭಾರತ ಎರಡರಷ್ಟು ಹಣ ಕೊಟ್ಟು ಕಿಟ್ ತಂದಿರುವುದರ ವಿರುದ್ಧ ಸರ್ಕಾರಕ್ಕೆ ಪ್ರಶ್ನೆ ಮಾಡಿತು. ಆಗ ಭಾರತ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಾ ಬಿಚ್ಚಿಟ್ಟ ಸತ್ಯವೇನೆಂದರೆ ಚೀನಾದಿಂದ ನೇರವಾಗಿ 245 ರೂಪಾಯಿಗೆ ಖರೀದಿಸಿದ್ದರೆ ಅಷ್ಟೂ ಹಣವನ್ನು ಮುಂಚಿತವಾಗಿಯೇ ಯುಎಸ್ ಡಾಲರ್‌ನಲ್ಲಿ ನೀಡಬೇಕಿತ್ತು. ಅದರ ಗುಣಮಟ್ಟ ಕಳಪೆ ಇದ್ದರೂ ಹಿಂದಿರುಗಿಸುವ ಅವಕಾಶ ಆ ಒಪ್ಪಂದದಲ್ಲಿ ಇರಲಿಲ್ಲವೆಂಬುದು!
ಚೀನಾದ ಮೇಲೆ ಅನುಮಾನವಿದ್ದ ಭಾರತ ಸರ್ಕಾರ ನೇರವಾಗಿ ಖರೀದಿಸದೇ ಕಂಪೆನಿಯೊಂದರ ಜೊತೆಗೆ ಒಪ್ಪಂದ ಮಾಡಿಕೊಂಡಿತು. ಈ ಒಪ್ಪಂದದಲ್ಲಿ ಗುಣಮಟ್ಟ ಕಳಪೆಯಾಗಿದ್ದರೆ ಹಿಂದುರುಗಿಸುವ, ಮುಂಚಿತವಾಗಿಯೇ ಹಣ ನೀಡುವ ಅವಶ್ಯಕತೆಯಿಲ್ಲವೆಂಬ ನಿಯಮವಿದ್ದದ್ದರಿಂದ ಸರ್ಕಾರ ಈ ಖರೀದಿಗೆ ಮುಂದಾಯಿತು. ಭಾರತಕ್ಕೆ ಬಂದ ಕಿಟ್‌ಗಳು ಕಳಪೆ ಎಂದು ತಿಳಿದ ನಂತರ ಸರ್ಕಾರ ಅಷ್ಟೂ ಕಿಟ್‌ಗಳನ್ನು ಹಿಂದಿರುಗಿಸಲು ಮುಂದಾಗಿದೆ.
ಭಾರತ ಸರ್ಕಾರಕ್ಕೆ ಈ ಒಪ್ಪಂದದಿಂದ ಒಂದೇ ಒಂದು ರೂಪಾಯಿ ನಷ್ಟವಾಗಿಲ್ಲವೆಂದೂ, ಬದಲಿಗೆ ಚೀನಾದಿಂದ ನೇರವಾಗಿ ಖರೀದಿಸಿದ್ದರೆ ಅಷ್ಟೂ ಹಣ ನಷ್ಟವಾಗುತ್ತಿತ್ತೆಂದೂ ಸೋಮವಾರ ಸ್ಪಷ್ಟ ಪಡಿಸಿದೆ. ಮೋಸಮಾಡಲು ಬಂದ ಚೀನಾಕ್ಕೆ ಭಾರತ ಸರ್ಕಾರ ಒಂದೇ ರೂಪಾಯಿ ಖರ್ಚಿಲ್ಲದೇ ಸರಿಯಾದ ಪಾಠ ಕಲಿಸಿದೆ. ಭಾರತವೀಗ ಹಳೆಯ ಭಾರತವಾಗಿ ಉಳಿದಿಲ್ಲವೆಂಬುದನ್ನು ಮತ್ತೆ ನೆನಪಿಸಿದೆ!
Click to comment

Leave a Reply

Your email address will not be published. Required fields are marked *

Most Popular

To Top