State

ಕರ್ನಾಟಕ ಕಾಂಗ್ರೆಸ್ ನಲ್ಲಿ ದಲಿತ ವಿರೋಧಿ ನೀತಿ- ಉಪಮುಖ್ಯಮಂತ್ರಿ ಅಸಮಾಧಾನ!!

ಕರ್ನಾಟಕ ಕಾಂಗ್ರೆಸ್ಸಿನಲ್ಲಿ ದಲಿತ ಮುಖ್ಯಮಂತ್ರಿ ವಿಚಾರದ ಕುರಿತು ಅಸಮಾಧಾನ ವ್ಯಕ್ತವಾಗಿದೆ. ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ತಾನು ದಲಿತ ಎಂಬ ಕಾರಣಕ್ಕೇ ತನಗೆ ಮೂರು ಬಾರಿ ಮುಖ್ಯಮಂತ್ರಿ ಪದವಿಯನ್ನು ತಿರಸ್ಕರಿಸಲಾಯ್ತು ಎಂದಿದ್ದಾರೆ.

ದಾವಣಗೆರೆಯ ಚಲವಾದಿ ಸಮುದಾಯವನ್ನು ಕುರಿತು ಮಾತನಾಡುತ್ತಿದ್ದ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ತಾನು ದಲಿತ ಸಮುದಾಯದವನಾದ್ದರಿಂದ ತನಗೆ ಮುಖ್ಯಮಂತ್ರಿ ಪದವಿ ನೀಡಲಿಲ್ಲವೆಂದೂ ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಯಿತೆಂದೂ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಈ ರೀತಿಯ ದಮನೀಯ ನೀತಿ ತಮಗೆ ಅಸಮಾಧಾನ ತಂದಿದೆ. ದೊಡ್ಡ ದೊಡ್ಡ ಪೋಸ್ಟ್ ಗಳಿಗೆ ದಲಿತರನ್ನು ತರದೇ ಅವಮಾನ ಮಾಡುತ್ತಿದ್ದಾರೆ. ಸರ್ಕಾರಿ ಹಂತಗಳಲ್ಲೂ ದಲಿತರ ವಿರುದ್ಧ ಭೇದ-ಭಾವ ಮಾಡುತ್ತಿದ್ದಾರೆ. ಮೀಸಲಾತಿ ಇದ್ದರೂ ಬಡ್ತಿಯ ವಿಚಾರ ಬಂದಾಗ ದಲಿತರೆಂಬ ಕಾರಣಕ್ಕೆ ತಿರಸ್ಕರಿಸಲಾಗುತ್ತಿದೆ ಎಂದಿದ್ದಾರೆ ಜಿ.ಪರಮೇಶ್ವರ್ ಅವರು.

ಮುಂದುವರೆದು ಅವರು ಕಾಂಗ್ರೆಸ್ಸಿನ ದಲಿತ ನಾಯಕರಾದ ಪಿ.ಕೆ ಬಸವಲಿಂಗಪ್ಪ, ಕೆ.ಎಚ್.ರಂಗನಾಥ್ ಮತ್ತು ಪ್ರಸ್ತುತ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರನ್ನೂ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಿಲ್ಲ. ಮೂವರಿಗೂ ಮುಖ್ಯಮಂತ್ರಿಯಾಗುವ ಅರ್ಹತೆಯಿದ್ದರೂ ಅವರು ದಲಿತ ಎಂಬ ಕಾರಣಕ್ಕೆ ತುಳಿಯಲ್ಪಟ್ಟಿದ್ದಾರೆ ಎಂದರು.

ಸಮಾಜದಲ್ಲಿರುವ ಅಸ್ಪೃಶ್ಯತೆಯ ಕುರಿತು ಮಾತನಾಡುತ್ತಾ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಇದು ಹೆಚ್ಚಾಗಿದ್ದು ದಲಿತರಿಗೆ ಸಂವಿಧಾನವೇ ಹಕ್ಕು ನೀಡಿದ ನಂತರವೂ ಮಂದಿರ, ಹೊಟೆಲ್ಲುಗಳಿಗೆ ಬಿಡಲಾಗುತ್ತಿಲ್ಲ ಎಂದಿದ್ದಾರೆ. ‘ನಮ್ಮ ಸರ್ಕಾರ ಮುಂದಿನ ವಾರ ಬಡ್ತಿ ವಿಷಯದಲ್ಲಿ ಮೀಸಲಾತಿ ತರಲಿದೆ’ ಎಂದು ಹೇಳಿದ್ದಾರೆ.

ಪರಮೇಶ್ವರ್ ಅವರ ಈ ಮಾತು ಪಕ್ಷದೊಳಗಿನ ದಲಿತ ವಿಚಾರದ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ. ಪಕ್ಷದ ಪ್ರಮುಖ ನಾಯಕನೊಬ್ಬನ ಈ ರೀತಿಯ ಹೇಳಿಕೆ ಪಕ್ಷಕ್ಕೆ ಖಂಡಿತ ಹೊಡೆತ ಬೀಳಲಿದೆ!

Click to comment

Leave a Reply

Your email address will not be published. Required fields are marked *

Most Popular

To Top