National

ಕಮ್ಯುನಿಸ್ಟ್ ಪಾರ್ಟಿಯ ಕಛೇರಿಗೆ ಹೆಣ್ಣುಮಕ್ಕಳು ಹೋಗಲು ಹೆದರುವುದೇಕೆ ಎಂದು ಈಗ ಗೊತ್ತಾಯ್ತು!!

21 ವರ್ಷದ ಯುವತಿ ಕೇರಳದ ಪಲಕ್ಕಡ್ ಜಿಲ್ಲೆಯ ಚಿರಪ್ಲುಸೆರಿಯಲ್ಲಿ ತನ್ನ ಮೇಲೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತನೊಬ್ಬ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ಆಕೆಯ ಹೇಳಿಕೆಯ ಪ್ರಕಾರ ಆಕೆಯ ಮೇಲೆ ಸಿಪಿಐಎಮ್ ನ ಪಕ್ಷದ ಕಛೇರಿಯಲ್ಲೇ ಅತ್ಯಾಚಾರವೆಸಗಲಾಗಿದೆ.

ಪೊಲೀಸರು ಈ ದೂರಿನ ಆಧಾರದ ಮೇಲೆ ತನಿಖೆಯನ್ನು ಆರಂಭಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಪೊಲೀಸರಿಗೆ ರಸ್ತೆ ಬದಿಯಲ್ಲಿ ನವಜಾತ ಶಿಶುವೊಂದು ದೊರೆತಿತ್ತು. ಮಗುವಿನ ತಾಯಿಯನ್ನು ಪತ್ತೆ ಹಚ್ಚಿದ ಪೊಲೀಸರು ಆಕೆಯನ್ನು ವಿಚಾರಣೆ ನಡೆಸುವ ಸಂದರ್ಭದಲ್ಲಿ ತನ್ನ ಮೇಲೆ 10 ತಿಂಗಳ ಹಿಂದೆ ಆದ ಅತ್ಯಾಚಾರದ ಕುರಿತು ದೂರು ನೀಡಿದ್ದಾರೆ.

ಕಾಲೇಜು ಮಾಗ್ಜೈನ್ ನ ಕೆಲಸವೊಂದಕ್ಕಾಗಿ ಆಕೆ ಸಿಪಿಐಎಮ್ ಕಛೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು ಎಂದಾಕೆ ಹೇಳಿದ್ದಾರೆ. ಸಿಪಿಐಎಮ್ ನ ಸ್ಥಳೀಯ ನಾಯಕನೊಬ್ಬ ಆಕೆ ಸ್ಟುಡೆಂಟ್ ಫೆಡರೇಷನ್ ಆಫ್ ಇಂಡಿಯಾದ ಕಾರ್ಯಕರ್ತೆಯಾಗಿದ್ದು ಆಕೆಯ ಕುಟುಂಬ ಪಕ್ಷದೊಂದಿಗೆ ಹತ್ತಿರದ ಸಂಬಂಧವನ್ನು ಹೊಂದಿದೆ ಎಂದಿದ್ದಾನೆ. ಕಾಂಗ್ರೆಸ್ಸಿನ ನಾಯಕ ರಮೇಶ್ ಚೆನ್ನಿಥಲ ಪಕ್ಷದ ಕಛೇರಿಗಳು ಅತ್ಯಾಚಾರದ ಕೇಂದ್ರಗಳಾಗಿವೆ ಎಂದು ಸಿಪಿಐಎಮ್ ನ ಮೇಲೆ ಹರಿಹಾಯ್ದಿದ್ದಾರೆ.

ಸಿಪಿಐ ಮಾವೊ ಪಕ್ಷದ ಕಥೆ ಇದಾದರೆ, ಅತ್ತ ಸಿಪಿಐನ ನಾಯಕನ ಮಗ ಮೊಹಮ್ಮದ್ ರೋಷನ್ ಅಪ್ರಾಪ್ತ ಬಾಲಕಿಯೊಬ್ಬಳನ್ನು ಮನೆಯಿಂದ ಅಪಹರಿಸಿಕೊಂಡು ಹೋಗಿದ್ದಾನೆ. ಈ ಬಾಲಕಿ ಮೂಲತಃ ರಾಜಸ್ಥಾನದವಳಾಗಿದ್ದು ಮನೆಯಲ್ಲಿ ತಂದೆ-ತಾಯಿಯ ಮೇಲೆ ಹಿಂಸಾಚಾರವೆಸಗಿ ಆಕೆಯನ್ನು ಎಳೆದುಕೊಂಡು ಹೋಗಿದ್ದಾನೆ ರೋಷನ್. ಪೊಲೀಸರ ವರದಿಯ ಪ್ರಕಾರ ಆಕೆಯನ್ನು ರಾಜ್ಯದಿಂದ ಹೊರಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿರಬಹುದು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅದಾಗಲೇ ಮೂವರನ್ನು ಬಂಧಿಸಲಾಗಿದೆ. ಆದರೆ ಮುಖ್ಯ ಆರೋಪಿ ಸಿಪಿಐ ನಾಯಕನ ಮಗ ಇನ್ನೂ ಪೊಲೀಸರ ಕೈಗೆ ಸಿಕ್ಕುಬಿದ್ದಿಲ್ಲ!

ಸದಾ ಜೀವಪರತೆ, ಸಮಾನತೆ, ಮಹಿಳಾ ಸಬಲೀಕರಣ ಎಂಬ ವಿಷಯದ ಕುರಿತು ಮಾತನಾಡಿ ಜನರನ್ನು ಮೋಸಗೊಳಿಸುವ ಎಡಪಕ್ಷಗಳು, ಸೋ ಕಾಲ್ಡ್ ಬುದ್ಧಿಜೀವಿಗಳು, ಮಹಿಳಾ ಹೋರಾಟಗಾರರು ಈ ರೀತಿಯ ಪ್ರಕರಣಗಳು ಬೆಳಕಿಗೆ ಬಂದಾಗ ಮೌನಕ್ಕೆ ಶರಣಾಗಿಬಿಡುತ್ತಾರೆ. ಇವರದ್ದು ಯಾವಾಗಲೂ ‘ಸೆಲೆಕ್ಟೀವ್ ಹೋರಾಟವೇ’.

ಜೀವಪರ ಹೋರಾಟಗಾರರು ಈ ಪ್ರಕರಣದ ಕುರಿತು ಕೊನೆಪಕ್ಷ ಮಾತನಾಡುತ್ತಾರಾ ಎಂಬುದೇ ಮುಖ್ಯಪ್ರಶ್ನೆ! ಇವರ ಹೋರಾಟವೆಲ್ಲಾ ಅತ್ಯಾಚಾರವೆಸಗುವವನ ಮತ್ತು ಅತ್ಯಾಚಾರಕ್ಕೆ ಒಳಗಾಗುವವರ ಜಾತಿ-ಮತ-ಪಕ್ಷಗಳ ಮೇಲೆ ನಿರ್ಧರಿತವಾಗುತ್ತವೆ. ಜಮ್ಮು-ಕಾಶ್ಮೀರದಲ್ಲಿ ಅತ್ಯಾಚಾರ ಪ್ರಕರಣ ನಡೆದಾಗ ಬೀದಿಯಲ್ಲಿ ನಿಂತು ಕ್ಯಾಂಡಲ್ ಲೈಟ್ ಮಾರ್ಚ್ ಮಾಡಿ, ಪೋಸ್ಟರ್ ಹಿಡಿದು ಕೂಗಾಡಿದವರೆಲ್ಲಾ ಈಗ ತಮಗೆ ಸಂಬಂಧವೇ ಇಲ್ಲದಂತೆ ಕುಳಿತಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top