National

ಕನಸುಗಳನ್ನು ನನಸು ಮಾಡುವ ಮೋಡಿಗಾರ!

ಒಂದು ವರ್ಷದ ಹಿಂದೆ ನನ್ನ ಕನಸಿನ ಕನರ್ಾಟಕ ಎಂದು ಹೊಸ ಕನರ್ಾಟಕದ ನಿಮರ್ಾಣದ ಕಲ್ಪನೆ ಕಟ್ಟಿಕೊಂಡಿದ್ದೆವು. ಆ ಮೂಲಕ ಪ್ರತಿ ಜಿಲ್ಲೆಗಳಲ್ಲೂ ಯಾವ ಬಗೆಯ ಕನಸುಗಳನ್ನು ಕಟ್ಟಬೇಕೆಂಬ ಕಲ್ಪನೆಯನ್ನು ಜನರೆದುರಿಗೆ ಬಿಚ್ಚಿಟ್ಟಿದ್ದೆವು. ದೊಡ್ಡ ಮಟ್ಟದಲ್ಲಿ ಇದು ನನಸಾಗುವುದೋ ಇಲ್ಲವೋ, ಆದರೆ ಸಣ್ಣ ಹಂತದಲ್ಲಿ ಅಂದರೆ ಹಳ್ಳಿಗಳ ಮಟ್ಟದಲ್ಲಿ ಇದರ ಪ್ರಭಾವ ಖಂಡಿತ ಆಗುವುದೆಂಬ ವಿಶ್ವಾಸ ನಮಗಿತ್ತು. ಮಾದರಿಯಾಗಬೇಕೆಂಬ ಕಲ್ಪನೆ ನಗರಗಳಿಗಿರುವುದು ಬಲು ಕಷ್ಟ. ಆದರೆ, ಪ್ರತಿಯೊಂದು ಹಳ್ಳಿಯೂ ಸಮರ್ಥ ನಾಯಕರು ಸಿಕ್ಕರೆ ಮಾದರಿಯಾಗಲು ಹವಣಿಸುತ್ತಿರುತ್ತದೆ. ಅದಾಗಲೇ ಅನೇಕ ಗ್ರಾಮಗಳು ಸಾಲುಗಟ್ಟಿ ‘ನಮ್ಮ ಗ್ರಾಮವನ್ನು ಮಾದರಿ ಮಾಡಲು ಸಹಕಾರ ನೀಡಿ’ ಎಂದು ನಮ್ಮನ್ನು ಕೇಳಿಕೊಳ್ಳುತ್ತಿವೆ. ಹಾಗೆ ಕೇಳಿಕೊಳ್ಳುವವರಿಗೂ ನಾವು ಹಣವನ್ನೋ ವಸ್ತುವನ್ನೋ ಕೊಡುವುದಿಲ್ಲ. ಬದಲಿಗೆ ಜನರ ಸಹಕಾರವನ್ನು ಬಳಸಿ ಅದೇ ಗ್ರಾಮವನ್ನು ಪುನರ್ರೂಪಿಸುವ ಪ್ರಯತ್ನ ಮಾಡುತ್ತೇವೆ ಎಂಬುದರ ಅರಿವಿದೆ. ಹಾಗಿದ್ದಾಗ್ಯೂ ಶ್ರಮ ಹಾಕಲು ಅವರು ಮುಂದೆ ಧಾವಿಸಿ ಬರುತ್ತಾರೆ.

ಅದೇ ಆತ್ಮವಿಶ್ವಾಸವನ್ನು ತುಂಬುವಂಥದ್ದು, ಏಕೆಂದರೆ ಈ ದೇಶದ ಸಾಮಾನ್ಯ ಪ್ರಜೆ ಬದಲಾವಣೆಗೆ ಹಾತೊರೆದು ನಿಂತಿದ್ದಾನೆ. ಆತ ಹೊಸತನ್ನು ಬಯಸುತ್ತಿದ್ದಾನೆ. ದುದರ್ೈವವಶಾತ್ ಅವನೊಳಗೆ ಕನಸುಗಳನ್ನು ತುಂಬಿ ಅದನ್ನು ಸಾಕಾರಗೊಳಿಸಲು ಬೇಕಾದ ಶಕ್ತಿಯನ್ನು ಅವನಿಗೆ ನೀಡಬೇಕಾಗಿರುವ ನಾಯಕನೇ ಸಮಷ್ಟಿಯ ಕನಸುಗಳಿಲ್ಲದೇ ಸ್ವಾರ್ಥದ ರಾಡಿಯಲ್ಲಿ ಹೊಲಸಾಗಿದ್ದಾನೆ.

ಈ ಕಾರಣಕ್ಕಾಗಿಯೇ ನರೇಂದ್ರಮೋದಿ ಒಬ್ಬ ಭಿನ್ನ ನಾಯಕ ಎನಿಸೋದು. ಕಳೆದ ಮೇ ತಿಂಗಳಲ್ಲಿ ಪ್ರಧಾನಮಂತ್ರಿಗಳು ಪೂರ್ವದ 135 ಕಿ.ಮೀ ಪೆರಿಫೆರಲ್ ಎಕ್ಸ್ಪ್ರೆಸ್ ವೇಯನ್ನು ಲೋಕಾರ್ಪಣೆ ಮಾಡಿದ್ದರು. ಈಗ ಪಶ್ಚಿಮದ ಪೆರಿಫೆರಲ್ ಎಕ್ಸ್ಪ್ರೆಸ್ ವೇ ಲೋಕಾರ್ಪಣೆಗೈದಿದ್ದಾರೆ. ಈ ಎರಡೂ ದಿಕ್ಕಿನ ಈ ಮಾರ್ಗಗಳು ದೆಹಲಿಯ ಮೇಲಿನ ಟ್ರ್ಯಾಫಿಕ್ಕನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಲಿವೆ. ನರೇಂದ್ರಮೋದಿಯವರೇ ಕೈಗೆತ್ತಿಕೊಂಡ ಯೋಜನೆ 910 ದಿನಗಳಲ್ಲಿ ಪೂರ್ಣಗೊಂಡು ಒಂದು ಬಗೆಯಲ್ಲಿ ದಾಖಲೆಯನ್ನೇ ನಿಮರ್ಿಸಿತ್ತು. ಎರಡೂ ಪೆರಿಫೆರಲ್ ರಸ್ತೆಗಳು ಸೇರಿಕೊಂಡು ಒಟ್ಟಾರೆ 270 ಕಿ.ಮೀನಷ್ಟಾಗಿದ್ದು 183 ಕಿ.ಮೀನಷ್ಟು ಹರಿಯಾಣಾ ಒಂದರಲ್ಲೇ ಹಾದುಹೋದರೆ ಉಳಿದ 87 ಕಿ.ಮೀ ಉತ್ತರಪ್ರದೇಶದ ಮೂಲಕ ಹಾದು ಹೋಗುತ್ತದೆ. ಆದರೆ ವಿಷಯ ಅದಲ್ಲ.
ವಾಸ್ತವವಾಗಿ ಈ ದೆಹಲಿಗೆ ಸಂಬಂಧಪಟ್ಟ ರಿಂಗ್ರೋಡಿನ ಕನಸನ್ನು ಕಂಡವರು ಅಟಲ್ ಬಿಹಾರಿ ವಾಜಪೇಯಿ. ಆದರೆ ಜಮೀನು ಖರೀದಿಯೇ ಮೊದಲಾದ ಗೊಂದಲಗಳಿಂದ ಈ ಹಿಂದಿನ ಸಕರ್ಾರಗಳು ಯೋಜನೆಯನ್ನು ಮುಂದುವರೆಸುವಲ್ಲಿ ಸೋತು ಹೋಗಿದ್ದವು. ಹರಿಯಾಣಾದಲ್ಲಿ ಬಿಜೆಪಿ ಸಕರ್ಾರ ಬಂದೊಡನೆ ಮೋದಿಯವರ ಆದೇಶದಂತೆ ಮುಖ್ಯಮಂತ್ರಿ ಖಟ್ಟರ್ ಈ ಯೋಜನೆಯನ್ನು ವೇಗವಾಗಿ ನಿರ್ವಹಿಸಬೇಕಾದ ಯೋಜನೆಯೆಂದು ಗಣಿಸಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಂಡು ನಾಲ್ಕೇ ವರ್ಷಗಳಲ್ಲಿ ಕೇಂದ್ರ ಸಕರ್ಾರದ ಸಹಕಾರದೊಂದಿಗೆ ಯೋಜನೆಯನ್ನೂ ಸಂಪೂರ್ಣಗೊಳಿಸಿಬಿಟ್ಟರು. ಅಷ್ಟೇ ಅಲ್ಲದೇ, ಈ ರಸ್ತೆಯ ಅಕ್ಕಪಕ್ಕದಲ್ಲಿರುವ 50 ಸಾವಿರ ಹೆಕ್ಟೇರ್ ಜಮೀನನ್ನು ಹರಿಯಾಣಾ ಸಕರ್ಾರ ಬಳಸಿಕೊಂಡು ಅದಕ್ಕೆ ಹೊಂದಿಕೊಂಡಿರುವ 8 ಜಿಲ್ಲೆಗಳನ್ನು ಅಭಿವೃದ್ಧಿಪಡಿಸುವ ಭರ್ಜರಿ ಯೋಜನೆಯನ್ನು ಹಾಕಿಕೊಂಡಿದೆ. ನರೇಂದ್ರಮೋದಿಯವರ ಈ ಪರಿಯ ಅಭಿವೃದ್ಧಿಯ ತುಡಿತದಿಂದಾಗಿಯೇ ಅವರಿಂದು ಈ ನಾಡಿನ ಜನರ ಕಣ್ಮಣಿಯಾಗಿರೋದು. ಯಾವ ಯೋಜನೆಯನ್ನು ಕೈಗೆತ್ತಿಕೊಳ್ಳುವಾಗಲೂ ಅವರು ಅದಕ್ಕಿರುವ ಭಿನ್ನ ಭಿನ್ನ ಆಯಾಮಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಸ್ವಾತಂತ್ರ್ಯ ಬಂದ 70 ವರ್ಷಗಳಲ್ಲಿ ನಾವು ಸಮರ್ಥ ರಸ್ತೆಗಳನ್ನೂ ನಿಮರ್ಾಣ ಮಾಡಿಕೊಳ್ಳಲಾಗದೇ ಹೆಣಗಾಡುತ್ತಿದ್ದೇವೆ. ಮೊದಲ ಬಾರಿಗೆ ಅಟಲ್ ಜೀ ಅಧಿಕಾರಕ್ಕೆ ಬಂದಾಗಲೇ ನಮಗೆ ರಾಜಮಾರ್ಗಗಳ ಪರಿಭಾಷೆ ಅರ್ಥವಾಗಿದ್ದು. ಟೋಲ್ಗೆ ಹಣ ಕಟ್ಟಿದರೂ ಪರವಾಗಿಲ್ಲ ವೇಗವಾಗಿ ಗುರಿ ತಲುಪುವುದು ಮುಖ್ಯ ಎಂಬುದು ನಮಗೆ ಅರ್ಥವಾಗಿದ್ದು ಅವರ ಕಾಲದಲ್ಲೇ. ನಮ್ಮ ಬಹುತೇಕ ಸಮಯ ರೈಲು, ಬಸ್ಸುಗಳ ಯಾತ್ರೆಯಲ್ಲೇ ಕಳೆದು ಹೋಗುತ್ತಿರುವಾಗ ನಮ್ಮದ್ದೇ ಪಕ್ಕದ ರಾಷ್ಟ್ರಗಳಾದ ಜಪಾನ್, ಚೀನಾಗಳು ಬುಲೆಟ್ ಟ್ರೈನ್ ಬಳಕೆ ಆರಂಭಿಸಿದ್ದವು. ನಿಧಾನಗತಿಯ ಕಾರಣದಿಂದಾಗಿಯೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಧರ್ಿಸಲಾಗದೇ ನಾವು ಹಿನ್ನಡೆ ಅನುಭವಿಸಿದ್ದೆವು. ಅಟಲ್ಜೀ ಅದಕ್ಕೊಂದು ಪರಿಹಾರವನ್ನು ಸೂಚಿಸಿ ವೇಗವಾಗಿ ಕೆಲಸ ಮಾಡುವುದಕ್ಕೆ ಪ್ರೇರಣೆಯನ್ನು ಕೊಟ್ಟರು. ಮತ್ತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸು ಈ ಅಭಿವೃದ್ಧಿಯ ಕುರಿತಂತೆ ದಿವ್ಯ ಮೌನ ತಾಳಿತು. ಈ ದೇಶದ ರೈಲ್ವೇ ಮಂತ್ರಿಗಳಾಗಿದ್ದ ಲಾಲೂ ಪ್ರಸಾದ್ ಯಾದವ್ ರೈಲ್ವೇ ಇಲಾಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಉಳಿತಾಯ ಮಾಡಿದ್ದರೆಂಬ ಖ್ಯಾತಿಗೇನೋ ಪಾತ್ರರಾದರು. ಆದರೆ ಅವರ ಅವಧಿಯಲ್ಲಿ ರೈಲ್ವೇ ಇಲಾಖೆ ನಯಾಪೈಸೆಯಷ್ಟೂ ಆಧುನಿಕತೆಯ ಸ್ಪರ್ಶಕ್ಕೆ ಒಳಗಾಗಲಿಲ್ಲವೆಂಬುದೂ ಅಷ್ಟೇ ಸತ್ಯ. ಈಗ ನೋಡಿ, ರೈಲ್ವೇ ಇಲಾಖೆ ಎಷ್ಟು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಇರುವ ಹಳಿಗಳನ್ನೇ ಅಭಿವೃದ್ಧಿ ಪಡಿಸಿ ರೈಲುಗಳನ್ನು ಇನ್ನೂ ವೇಗಕ್ಕೆ ಓಡಿಸುವ ರೈಲ್ವೇ ಇಲಾಖೆಯ ಪ್ರಯತ್ನವಂತೂ ಸಾಕಷ್ಟು ಯಶಸ್ಸು ಕಂಡಿದೆ.

ಇನ್ನು ಕಳೆದ 7 ದಶಕಗಳಲ್ಲಿ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಗಡಿ ಭಾಗದ ರಸ್ತೆಗಳಿಗೂ ಮೋದಿ ಬಂದೊಡನೆ ಜೀವ ಬಂದುಬಿಟ್ಟಿದೆ. ಮನಮೋಹನ್ ಸಿಂಗರ ಅಧಿಕಾರಾವಧಿಯಲ್ಲಿ ಭಾರತದ ಅಕ್ಕಪಕ್ಕದಲ್ಲಿದ್ದ ರಾಷ್ಟ್ರಗಳ ಸ್ನೇಹವನ್ನು ಸಂಪಾದಿಸಿಕೊಂಡು ಅವುಗಳಿಗೆ ಸಾಲವನ್ನೂ ಕೊಟ್ಟು ಅಭಿವೃದ್ಧಿಯ ಕನಸುಗಳನ್ನು ಹೆಣೆದುಕೊಟ್ಟು ಚೀನಾ ನಮಗೊಂದು ಚಿನ್ನದ ಉರುಳು ಹಾಕುವ ಪ್ರಯತ್ನ ಮಾಡಿತ್ತು. ಮೋದಿ ಅದಕ್ಕೆ ಉತ್ತರಿಸಿದ್ದು ಹೇಗೆ ಗೊತ್ತೇನು? ಗಡಿ ಭಾಗದ ನಮ್ಮ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಲ್ಲದೇ ಅಕ್ಕಪಕ್ಕದ ರಾಷ್ಟ್ರಗಳಿಗೆ ಹೋಗಲು ರಸ್ತೆ ಅಭಿವೃದ್ಧಿಯ ಕಾರ್ಯಕ್ಕೆ ಕೈ ಹಾಕಿದರು. ಚೀನಾದೆಡೆಗೆ ವಾಲಬಹುದಾಗಿದ್ದ ರಾಷ್ಟ್ರಗಳೆಲ್ಲವನ್ನೂ ಪ್ರೀತಿಯಿಂದಲೇ ತಮ್ಮ ತೆಕ್ಕೆಗೆ ಸೆಳದುಕೊಂಡು ಚೀನಾವನ್ನು ಏಕಾಂಗಿಯಾಗಿಸಿದರು. ಇತ್ತೀಚೆಗೆ ಮಾಲ್ಡೀವ್ಸ್ಗೆ ಭೇಟಿಕೊಟ್ಟ ಮೋದಿ ಹೊಸ ಅಧ್ಯಕ್ಷರೊಂದಿಗೆ ಆಪ್ತವಾಗಿ ಮಾತುಕತೆ ನಡೆಸಿದ್ದು ಚೀನಾದ ಹೊಟ್ಟೆಯಲ್ಲಿ ಬೆಂಕಿ ಹಾಕಿರುವಂತ ಪ್ರಸಂಗವೇ. ಚೀನಾದ ಗೆಳೆಯರ ಪಟ್ಟಿಯಲ್ಲಿದ್ದ ಮಾಲ್ಡೀವ್ಸ್ ಅನ್ನೂ ಮೋದಿ ಈಗ ಕಿತ್ತುಕೊಂಡಿದ್ದಾರೆ. ಪಟೇಲರ ವಿಗ್ರಹವನ್ನು ಮುಂದಿಟ್ಟುಕೊಂಡು ಆಳಿಗೊಂದರಂತೆ ಮಾತನಾಡಿದ ಅಯೋಗ್ಯರು ಈ ಅಭಿವೃದ್ಧಿ ಕಾರ್ಯದ ಕುರಿತಂತೆ ಅದೇನು ಮಾತುನಾಡುತ್ತಾರೋ ಕೇಳಬೇಕಿದೆ. ಇಷ್ಟಕ್ಕೂ ಪಟೇಲರ ಪ್ರತಿಮೆ ದಿನೇ ದಿನೇ ಸಾವಿರಾರು ಜನ ಯಾತ್ರಿಕರನ್ನು ಆಕಷರ್ಿಸುತ್ತಿದೆ. ಕನಸುಗಳನ್ನು ಬಿತ್ತಿ ಭರ್ಜರಿ ಬೆಳೆ ತೆಗೆಯೋದು ಅಂದರೆ ಹೀಗೇನೇ!

ಮೋದಿ ನಿಸ್ಸಂಶಯವಾಗಿ ಒಬ್ಬ ಅದ್ಭುತ ಕನಸುಗಾರ ಮತ್ತು ಆ ಕನಸುಗಳನ್ನು ನನಸು ಮಾಡಬಲ್ಲ ಸಮರ್ಥ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top