National

ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಬಯಲಿಗೆ ಬಂದ ಮೋಸಗಾರರು!

ಕಥುವಾದಲ್ಲಿ ಆಸೀಫಾಳ ಅತ್ಯಾಚಾರದ ಸದ್ದು ಮೊಳಗಿ ತಿಂಗಳುಗಳೇ ಕಳೆದು ಹೋದವು. ಆನಂತರ ಝೀಲಂ ನದಿಯಲ್ಲಿ ಅದೆಷ್ಟು ನೀರು ಹರಿಯಿತೋ ದೇವರೇ ಬಲ್ಲ. ಆದರೆ, ಆಸೀಫಾಳ ಸಾವಿಗೆ ನ್ಯಾಯ ಮಾತ್ರ ದೊರೆತಿಲ್ಲ! ಅವಳ ಸಾವನ್ನು ತಮ್ಮ ಲಾಭಕ್ಕೆ ಬಳಸಿಕೊಂಡು ಬದುಕು ರೂಪಿಸಿಕೊಳ್ಳಲು ಯತ್ನಿಸಿದ್ದ ಅನೇಕರು ಬೆತ್ತಲಾಗಿ ಸಮಾಜದೆದುರು ನಿಂತಿದ್ದಾರೆ ಅಷ್ಟೇ. ಈ ದೇಶದ ಗಲ್ಲಿ-ಗಲ್ಲಿಗಳಲ್ಲೂ ಛದ್ಮ ವೇಷದಲ್ಲಿ ಅಡಗಿ ಕುಳಿತಿರುವ ಅರ್ಬನ್ ನಕ್ಸಲರಿಗೆ ಹಿಂದೂಧರ್ಮವನ್ನು ಹಳಿಯುವ ಮತ್ತು ಭಾರತವನ್ನು ಕೀಳಾಗಿ ಜಗತ್ತಿನ ಮುಂದೆ ಪ್ರಸ್ತುತ ಪಡಿಸುವ ಅಜೆಂಡಾ ಇದೆ. ಈ ಕಾರಣಕ್ಕಾಗಿಯೇ ಅವರಿಗೆ ಅಪಾರ ಸಂಪತ್ತೂ ಹರಿದು ಬರುತ್ತದೆ. ಅನೇಕ ಸಕರ್ಾರೇತರ ಸಂಸ್ಥೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವುದೇ ಈ ಕಾರಣಕ್ಕಾಗಿ. ಇತ್ತೀಚೆಗೆ ಇಂಗ್ಲೆಂಡು ಭಾರತ ತಾನು ಕೊಡುವ ಅನುದಾನದಲ್ಲಿಯೇ ಸರದಾರ್ ಪಟೇಲರ ವಿಗ್ರಹವನ್ನು ನಿಮರ್ಿಸಿದೆ ಎಂದು ಅಲವತ್ತುಕೊಂಡಿತಲ್ಲ, ವಾಸ್ತವ ಸಂಗತಿ ಏನು ಗೊತ್ತೇ? ಇಂಗ್ಲೆಂಡು ಅನುದಾನ ಕೊಡುವುದು ಭಾರತದ ಅಭಿವೃದ್ಧಿಗಲ್ಲ, ಭಾರತವನ್ನು ತುಂಡು ಮಾಡುವ ಈ ಎನ್ಜಿಒಗಳಿಗೆ. ಭಾರತ ಸಕರ್ಾರ ಇಂಗ್ಲೆಂಡಿನಿಂದ ಈ ಬಗೆಯ ಸಹಾಯ ಬೇಡವೆಂದು ಹೇಳಿದರೂ ತನ್ನ ಕೆಲಸವನ್ನು ಮಾಡಿಕೊಳ್ಳಲು ಅದಕ್ಕೆ ಈ ಎನ್ಜಿಒಗಳ ಅಗತ್ಯವಿರುವುದರಿಂದ ಹಣ ಚೆಲ್ಲಿಯಾದರೂ ಇವುಗಳನ್ನು ತಮ್ಮಡಿಯಲ್ಲಿ ಅವರು ಇಟ್ಟುಕೊಳ್ಳುತ್ತಾರೆ. ಅದೇ ಥರದ ಅನೇಕ ಸಂಘಟನೆಗಳಲ್ಲಿ ಕಥುವಾ ಕೇಸಿನ ಹಿಂದೆ ನಿಂತವರೂ ಇದ್ದರು! ಈಗ ಅವರೆಲ್ಲರ ಒಟ್ಟಾರೆ ಬಂಡವಾಳ ಬಯಲಿಗೆ ಬಂದಿದೆ.


ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮೊಹಮ್ಮದ್ ಯೂಸುಫ್, ಆಸೀಫಾಳ ಸಂಬಂಧಿ ಆಕೆಯ ಕೇಸನ್ನು ಪ್ರತಿನಿಧಿಸುತ್ತಿದ್ದ ವಕೀಲೆ ದೀಪಿಕಾ ರಾಜಾವತ್ಳನ್ನು ಕೇಸಿನಿಂದ ಕೈಬಿಟ್ಟಿದ್ದೇನೆಂದು ಹೇಳಿಕೆ ಕೊಟ್ಟಿದ್ದಾರೆ. ಇದೇ ದೀಪಿಕಾ ಕಥುವಾ ರೇಪ್ ಪ್ರಕರಣದಲ್ಲಿ ಆಸೀಫಾಳ ಜೊತೆ ಬಲವಾಗಿ ನಿಂತು ಜಾಗತಿಕ ಮನ್ನಣೆ ಗಳಿಸಿಬಿಟ್ಟಿದ್ದಳು. ಆಕೆಯ ಬೆಲೆ ಅದೆಷ್ಟು ಏರಿತ್ತೆಂದರೆ ಆಕೆಯಷ್ಟು ಧೈರ್ಯವಂತ ಹೆಣ್ಣುಮಗಳು ಮತ್ತೊಬ್ಬಳಿಲ್ಲವೆಂದು ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡಲಾಗಿತ್ತು. ಆಕೆ ಬಲಪಂಥೀಯರಿಂದ ತನಗೆ ಬೆದರಿಕೆಯ ಕರೆ ಬರುತ್ತದೆ ಎಂದು ಹೇಳಿ ಮುಖ್ಯಮಂತ್ರಿಯಿಂದ ಸಕರ್ಾರಿ ಬಂಗಲೆಯನ್ನೂ ಗಿಟ್ಟಿಸಿಕೊಂಡಿದ್ದಳು. ಎಮ್ಮಾ ಥಾಮ್ಸನ್ರಂತಹ ಖ್ಯಾತನಾಮರು ಟ್ವಿಟರ್ನಲ್ಲಿ ಆಕೆಯ ಬೆಂಬಲಕ್ಕೆ ನಿಂತಮೇಲಂತೂ ದೀಪಿಕಾ ಜಾಗತಿಕ ಹೆಸರನ್ನು ಪಡೆದುಬಿಟ್ಟಳು. ಇದೇ ಸಂದರ್ಭದಲ್ಲಿ ಪ್ರಕರಣದ ವಿಚಾರಣೆ ಜಮ್ಮು-ಕಾಶ್ಮೀರದಲ್ಲಿ ನಡೆದರೆ ಪ್ರತಿಭಟನೆಗೆ ನಿಂತಿರುವ ಜನ ಮತ್ತು ಹಿಂದೂವಾದಿಗಳು ವಿಚಾರಣೆಯ ದಿಕ್ಕನ್ನು ಬದಲಿಸಿಬಿಡಬಹುದೆಂದು ಸವರ್ೋಚ್ಚ ನ್ಯಾಯಾಲಯದಲ್ಲಿ ವಾದ ಮಂಡಿಸಿ ಇಡಿಯ ಪ್ರಕರಣವನ್ನು ಹತ್ತಿರದ ನ್ಯಾಯಾಲಯವಾದಂತಹ ಪಠಾನ್ಕೋಟ್ಗೆ ವಗರ್ಾಯಿಸಿಕೊಳ್ಳುವಲ್ಲಿ ಆಕೆ ಸಫಲಳಾಗಿದ್ದಳು. ಹೀಗೆ ಕೇಸು ವಗರ್ಾವಣೆಯಾದದ್ದನ್ನೇ ಕೇಸು ಗೆದ್ದಂತೆ ಬಿಂಬಿಸಿಕೊಂಡು ಆಕೆ ಮೆರೆದಾಡಿದ್ದಳು. ಇದೇ ವೇಳೆಗೆ ಈ ಇಡೀ ಪ್ರಕರಣವನ್ನು ಬೆಳಕಿಗೆ ತಂದ ಹೆಚ್ಚುಗಾರಿಕೆಯಿಂದ ಬೀಗುತ್ತಿದ್ದ ತಾಲಿಬ್ ಹುಸೇನ್ ಮತ್ತು ಜೆಎನ್ಯು ನ ಶಾಶ್ವತ ವಿದ್ಯಾಥರ್ಿ ಶೆಹ್ಲಾ ರಶೀದ್ ಜೊತೆಗೂಡಿ ಗುಂಪು ಕಟ್ಟಿಕೊಂಡರು. ಆಸೀಫಾಳ ಚಿತ್ರ ಮುಂದಿಟ್ಟು ಇಡಿಯ ಪ್ರಕರಣದ ಹೋರಾಟಕ್ಕೆ ಮತ್ತು ಆಕೆಯ ಪರಿವಾರಕ್ಕೆ ಸಹಾಯ ಮಾಡಿರೆಂದು ಜನರ ಮುಂದೆ ಕಣ್ಣೀರಿಟ್ಟಳು. ಒಂದು ಅಂದಾಜಿನ ಪ್ರಕಾರ ಶೆಹ್ಲಾ ಒಬ್ಬಳೇ 40 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದಳು. ಈ ಕುರಿತಂತೆ ಮಾಹಿತಿಗಳು ಹೊರಬಿದ್ದು ಆಕೆಯನ್ನು ಟ್ವಿಟರ್ನಲ್ಲಿ ಪ್ರಶ್ನಿಸಲಾರಂಭಿಸಿದೊಡನೆ ತನ್ನ ಅಕೌಂಟನ್ನೇ ಡಿಲಿಟ್ ಮಾಡಿಕೊಂಡು ಶೆಹ್ಲಾ ಕಾಣೆಯಾಗಿಬಿಟ್ಟಳು. ದುರದೃಷ್ಟಕರ ಸಂಗತಿಯೇನು ಗೊತ್ತೇ? ಈಕೆ ಸಂಗ್ರಹಿಸಿದ ಈ 40 ಲಕ್ಷ ರೂಪಾಯಿಗಳಲ್ಲಿ ಒಂದೇ ಒಂದು ರೂಪಾಯಿ ಆಸೀಫಾಳ ಕುಟುಂಬಕ್ಕೆ ಹೋಗಲಿಲ್ಲ. ಹೋಗಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾದರೂ ಇದನ್ನು ಖಚರ್ು ಮಾಡಿದ್ದಾರಾ ಎಂದರೆ ದೀಪಿಕಾ ಪಠಾನ್ಕೋಟಿನಲ್ಲಿ ವಿಚಾರಣೆಗೆ ಹಾಜರಾಗಿರುವುದೇ 110 ರಲ್ಲಿ 2 ಬಾರಿ ಮಾತ್ರ! ಅಂದರೆ ಆಸೀಫಾಳ ಪ್ರಕರಣದಲ್ಲಿ ವಾದ ಮಾಡಿ ಗೆಲ್ಲುವ ಯಾವ ಸತ್ವವೂ ಇಲ್ಲವೆಂಬುದು ಅವರಿಗೆ ಆರಂಭದಿಂದಲೂ ಗೊತ್ತಿತ್ತು. ಆದರೆ ಆರಂಭದಿಂದಲೂ ಇಡಿಯ ಬಲಪಂಥೀಯರನ್ನು ಭಾವನಾತ್ಮಕವಾಗಿ ಮುಗಿಸಿಬಿಡುವ ಮತ್ತು ನರೇಂದ್ರಮೋದಿಯವರನ್ನು ಜಗತ್ತಿನೆದುರು ತೆಗಳುವ ಪ್ರಯತ್ನ ಇವರದ್ದಾಗಿತ್ತು. ಅದಕ್ಕೆ ಅವರಿಗೆ ಅಡ್ಡಗಾಲಾಗಿದ್ದು ಈ ಪ್ರಕರಣದ ಆರೋಪಿಗಳ ಪರವಾಗಿ ನಿಂತ ಲಾಲ್ ಸಿಂಗ್. ಆತ ಡೋಗ್ರಾ ಸ್ವಾಭಿಮಾನ್ ಸಂಘಟನೆಯನ್ನು ಕಟ್ಟಿ ಜಮ್ಮುವಿನೆಲ್ಲೆಡೆ ಸಜ್ಜನರನ್ನು ಸಂಘಟಿಸಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ. ಇದರಿಂದಾಗಿ ಒಟ್ಟಾರೆ ಪ್ರಕರಣದಲ್ಲಿ ಹುರುಳಿಲ್ಲವೆಂಬುದು ಜನರಿಗೆ ಅರಿವಾದೊಡನೆ ಆರೋಪಿಗಳೆನಿಸಿಕೊಂಡವರ ಪರ ವ್ಯಾಪಕವಾದ ಬೆಂಬಲ ಹರಿದು ಬಂತು. ಮುಂದೇನು ಮಾಡಬೇಕೆಂದು ತೋಚದೆ ಇವರೆಲ್ಲಾ ಒಟ್ಟಾರೆಯಾಗಿ ಹಣವನ್ನು ಪೀಕಿ ಅನುಭವಿಸುವ ಹೇಯಮಟ್ಟಕ್ಕಿಳಿದುಬಿಟ್ಟರು. ಈ ನಡುವೆ ಪ್ರಕರಣದ ಕುರಿತಂತೆ ಹೋರಾಟದ ಮುಂಚೂಣಿಯಲ್ಲಿದ್ದೇನೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ತಾಲಿಬ್ ಹುಸೇನ್ ಸರಣಿ ಅತ್ಯಾಚಾರ ಪ್ರಕರಣಗಳಲ್ಲಿ ಸಿಲುಕಿಕೊಂಡುಬಿಟ್ಟ. ಆತನ ಹತ್ತಿರದ ಸಂಬಂಧಿಯೊಬ್ಬಳು ತಾಲಿಬ್ ಅತ್ಯಾಚಾರ ಮಾಡಿದುದರ ಕುರಿತಂತೆ ಹೇಳಿದ್ದಲ್ಲದೇ ಈ ಪ್ರಕರಣವನ್ನು ಬಯಲಿಗೆ ತಂದರೆ ಕೊಂದುಬಿಡುವುದಾಗಿ ಚಾಕು ತೋರಿಸಿ ಬೆದರಿಸಿದ ಎಂದು ಆರೋಪ ಮಾಡಿದಳು. ಆತನನ್ನು ಬಂಧಿಸಿ ಕಥುವಾದ ಹೀರಾ ನಗರ್ ಜೈಲಿಗೆ ಕಳಿಸಲಾಯ್ತು. ತಾಲಿಬ್ ಒಂದೇ ಕಣ್ಣಲ್ಲಿ ಅತ್ತುಬಿಟ್ಟ. ಆಸೀಫಾಳ ಪರ ನಿಂತಿದ್ದಕ್ಕೆ ಮೋದಿಯೇ ತನ್ನ ವಿರುದ್ಧ ನಡೆಸಿದ ಷಡ್ಯಂತ್ರವಿದು ಎಂದು ಹೇಳಲೂ ಹಿಂದೆ ಮುಂದೆ ನೋಡಲಿಲ್ಲ. ಈ ಅಯೋಗ್ಯರಿಗೆ ತಿನ್ನಬಾರದ್ದನ್ನು ತಿಂದು ಆಮಶಂಕೆ ಶುರುವಾದರೂ ಅದಕ್ಕೆ ಮೋದಿಯೇ ಕಾರಣ ಎಂದು ಹೇಳುವ ಹುಚ್ಚು. ಬಹುಶಃ ಒಂದೇ ಪ್ರಕರಣವಾಗಿದ್ದರೆ ಜನ ಇದನ್ನು ನಂಬಿಯೂ ಬಿಡುತ್ತಿದ್ದರೇನೋ. ಸ್ವತಃ ತಾಲಿಬ್ನ ಹೆಂಡತಿ ತನ್ನ ಗಂಡನ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಮಾಡಿಬಿಟ್ಟಳು. ತಾನು ಹೆಣ್ಣನ್ನು ಹೆತ್ತಿದ್ದಕ್ಕೆ ತನ್ನನ್ನು ಬಿಟ್ಟೇಬಿಟ್ಟ ಎಂಬ ಆಕೆಯ ಆರೋಪ ಗಂಭೀರ ಸ್ವರೂಪದ್ದಾಗಿತ್ತು. ಈ ವಿಚಾರಣೆಯು ನ್ಯಾಯಾಲಯದ ಅಂಗಳಕ್ಕೆ ಹೋಯ್ತು. ಅಷ್ಟಾದರೂ ಸುಮ್ಮನಿರಬಹುದಿತ್ತೇನೋ. ಮೀಟೂ ಅಡಿಯಲ್ಲಿ ಚಚರ್ೆಗಳು ಶುರುವಾದಾಗ ತಾಲಿಬ್ನೊಂದಿಗೆ ಆಸೀಫಾಳಿಗೆ ನ್ಯಾಯ ಬೇಕೆಂದು ಹೋರಾಟ ಮಾಡಿದ ಹೆಣ್ಣುಮಗಳೊಬ್ಬಳು ಈತನ ಕರಾಳ ಚರಿತ್ರೆಯನ್ನು ಬಯಲಿಗೆಳೆದು ಲೇಖನವನ್ನೇ ಬರೆದುಬಿಟ್ಟಳು. ‘ಆಸೀಫಾಳ ವಿಚಾರದಲ್ಲಿ ಈತನೊಂದಿಗೆ ನಿಂತು ಹೋರಾಟ ಮಾಡಿದ್ದಕ್ಕೆ ನನ್ನನ್ನೇ ಅತ್ಯಾಚಾರಗೈದ’ ಎಂಬ ಆಕೆಯ ಅನಾಮಿಕ ಪತ್ರ ಟ್ವಿಟರ್ನಲ್ಲಿ ಭಾರೀ ಸದ್ದನ್ನೇ ಮಾಡಿಬಿಟ್ಡಿತು. ಈತನ ಎಲ್ಲಾ ಕೇಸುಗಳನ್ನೂ ಖುದ್ದು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದ ಖ್ಯಾತ ವಕೀಲೆ ಇಂದಿರಾ ಜೈ ಸಿಂಗ್ ಈತನೊಂದಿಗಿನ ಸಂಬಂಧವನ್ನು ಪೂತರ್ಿ ಕಡಿದುಕೊಂಡುಬಿಟ್ಟಳು. ಆನಂತರವೇ ದೀಪಿಕಾ ಪ್ರಕರಣ ಬಯಲಿಗೆ ಬಂದಿದ್ದು.


ಜಮ್ಮು-ಕಾಶ್ಮೀರದಿಂದ ಪಠಾನ್ಕೋಟ್ಗೆ ಪ್ರಕರಣ ವಗರ್ಾವಣೆ ಮಾಡಿಸಿಕೊಂಡಾಗ ತನ್ನೆಲ್ಲಾ ಕೇಸುಗಳನ್ನು ಬಿಟ್ಟು ಪಠಾನ್ಕೋಟ್ಗೆ ಪದೇ ಪದೇ ಹೋಗುವುದು ಸಾಧ್ಯವಿಲ್ಲವೆಂದು ಆಕೆಗೆ ಗೊತ್ತಿರಲಿಲ್ಲವೆಂದೇನಲ್ಲ. ಈ ಕೇಸಿನಲ್ಲಿ ಭಾಗವಹಿಸುವುದನ್ನು ತಪ್ಪಿಸಿಕೊಳ್ಳಲು ಆಕೆ ಮಾರ್ಗ ಹುಡುಕುತ್ತಿದ್ದಳು ಅಷ್ಟೇ. ಪದೇ ಪದೇ ಆಕೆಯ ಮನೆಗೆ ಎಡತಾಕಿದ ಆಸೀಫಾಳ ತಂದೆ ಕೊನೆಗೆ ಬೇಸತ್ತು ಆಕೆಯನ್ನು ಕೇಸಿನಿಂದ ಕೈಬಿಟಿದ್ದೇನೆ ಎಂದು ಹೇಳಿಕೆ ಕೊಟ್ಟಾಗಿದೆ. ಅಲ್ಲಿಗೆ ಆಸೀಫಾಳ ಪ್ರಕರಣದೊಂದಿಗೆ ಗುರುತಿಸಿಕೊಂಡಿದ್ದ ಮೂವರೂ ಕಳ್ಳರೆಂದು ಸಾಬೀತಾಗಿದೆ! ಇನ್ನು ಈ ಕಳ್ಳರನ್ನು ನಂಬಿಕೊಂಡು ಒಂದಷ್ಟು ಜನ ದೊಡ್ಡ ಬರಹಗಾರರಂತೆ ಬಿಂಬಿಸಿಕೊಂಡು ತಮ್ಮನು ತಾವೇ ಸಿಬಿಐ ಸೀರಿಯಲ್ನ ನಾಯಕರಂತೆ ತೋರ್ಪಡಿಸಿಕೊಂಡಿದ್ದರಲ್ಲ, ಅವರೆಲ್ಲಾ ಈಗ ಬಾಲ ಮುದುರಿಕೊಂಡು ಕುಳಿತಿದ್ದಾರೆ. ಆ ಪ್ರಕರಣವಾದಾಗ ನನ್ನ ಸಂಪರ್ಕದಲ್ಲಿದ್ದ ಕೆಲವು ಹೆಣ್ಣುಮಕ್ಕಳು ಇಂತಹ ಹಿಂದುತ್ವ ನಮಗೆ ಬೇಡ ಎಂದು ಆಕ್ರೋಶದಿಂದ ನನ್ನ ಬಳಿ ಅಲವತ್ತುಕೊಂಡಿದ್ದರು. ಈ ಎಡಪಂಥೀಯರ ಉದ್ದೇಶವೂ ಅದೇ ಆಗಿತ್ತು. ಹಿಂದೂಧರ್ಮದ ಕುರಿತಂತ ವಿಷಬೀಜವನ್ನು ಬಿತ್ತಿ ರಾಷ್ಟ್ರೀಯತೆಯ ಮನೋಭೂಮಿಕೆಯನ್ನು ನಾಶ ಮಾಡುವುದು ಅಷ್ಟೇ. ಬಹುಶಃ ಸಾಮಾಜಿಕ ಜಾಲತಾಣಗಳು ಚುರುಕಾಗಿಲ್ಲದೇ ಹೋಗಿದ್ದರೆ ಇವರು ಅಂದುಕೊಂಡದ್ದು ಆಗಿಯೇ ಬಿಡುತ್ತಿತ್ತೇನೋ. ನಿರಪರಾಧಿಗಳಿಗೆ ಶಿಕ್ಷೆಯಾಗಿ ಅವರು ಜೀವನ ಪರ್ಯಂತ ಕಣ್ಣೀರ್ಗರೆಯುವ ಸ್ಥಿತಿ ಹಾಗೆಯೇ ಇರುತ್ತಿತ್ತು.


ಈಗ ಮುಖ್ಯ ಪ್ರಶ್ನೆ. ಹಿಂದೂಧರ್ಮವನ್ನು ನಾಶಗೈಯ್ಯಬೇಕೆಂಬ ತುಡಿತ ಇವರಿಗಾದರೂ ಏಕೆ? ಹಿಂದೂಧರ್ಮದ ಆಚರಣೆಗಳನ್ನು, ನಂಬಿಕೆಗಳನ್ನು ಯಾರು ಬೇಕಿದ್ದರೂ ಪ್ರಶ್ನಿಸಬಹುದು. ಆದರೆ, ಇತರ ಧಮರ್ೀಯರ ಅವೈಜ್ಞಾನಿಕ ಸಂಗತಿಗಳನ್ನೂ ಪ್ರಶ್ನಿಸುವಂತಿಲ್ಲ. ಒರಿಸ್ಸಾದಲ್ಲಿ ಅಯ್ಯರ್ ವ್ಯಂಗ್ಯವಾಗಿ ಹೇಳಿದ ಮಾತೊಂದು ಆತನನ್ನು ಜೈಲಿಗೇ ತಳ್ಳಿತಲ್ಲದೇ ಅದರ ಕಾರಣಕ್ಕಾಗಿಯೇ ಉಚ್ಚ ಮತ್ತು ಸವರ್ೋಚ್ಚ ನ್ಯಾಯಾಲಯಗಳಲ್ಲಿ ಜಾಮೀನು ಕೂಡ ತಿರಸ್ಕರಿಸಲ್ಪಟ್ಟಿತು. ಆದರೆ ಪ್ರೊಫೆಸರ್ ಭಗವಾನ್ ತನ್ನ ಮನಸ್ಸಿಗೆ ಬಂದಿದ್ದನ್ನೆಲ್ಲಾ ಒದರುತ್ತಾ ಹೋಗುತ್ತಾನೆ. ಆತನ ಬಂಧನ ಮಾತ್ರ ಎಂದಿಗೂ ಆಗುವುದೇ ಇಲ್ಲ. ಉಚ್ಚ ನ್ಯಾಯಾಲಯ ಆತನಿಗೆ ಜಾಮೀನು ಕೊಟ್ಟು ‘ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಿ’ ಎಂದು ಬಿಟ್ಟುಬಿಡುತ್ತದೆ. ಹಾಗೆ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡು ಬಂದವನಿಗೆ ರಾಜ್ಯ ಸಕರ್ಾರ ಪ್ರಶಸ್ತಿ ಘೋಷಣೆ ಮಾಡುತ್ತದೆ. ಹಿಂದೂಧರ್ಮದ ವಿರುದ್ಧದ ಆತನ ಹೇಳಿಕೆಗೆ ಸಕರ್ಾರ ಬೆನ್ತಟ್ಟಿದ ಕ್ರಮವಿದು ಎಂದು ಭಾವಿಸಿದ ಆತ ಮತ್ತೊಂದಷ್ಟು ಹೇಳಿಕೆಯನ್ನು ಕೊಟ್ಟು ಹೆಮ್ಮೆಯಿಂದ ಬೀಗುತ್ತಾನೆ. ಸಂತೋಷ್ ತಮ್ಮಯ್ಯ ಟಿಪ್ಪು ಜಯಂತಿ ಆಚರಿಸಬಾರದು ಎಂಬುದಕ್ಕೆ ಕಾರಣಗಳನ್ನು ಕೊಟ್ಟು ವಿಶ್ಲೇಷಿಸಿದ್ದಕ್ಕೆ ಆತನ ಹಿಂದೆ ಬಿದ್ದು ರಾತ್ರೋ-ರಾತ್ರಿ ಆತನನ್ನು ಬಂಧಿಸಿ ಎಳೆದೊಯ್ಯಲಾಗುತ್ತದೆ. ತನ್ನ ತಾನು ಬುದ್ಧಿಜೀವಿ ಎಂದು ಕರೆದುಕೊಳ್ಳುವ ಪ್ರಭಾ ಬೆಳವಂಗಲ ಯೋಗಿ ಆದಿತ್ಯನಾಥರ ಕುರಿತ ಸುಳ್ಳು ಚಿತ್ರಗಳನ್ನು ತನ್ನ ಫೇಸ್ಬುಕ್ಕಿನ ಗೋಡೆಯ ಮೇಲೆ ಹಾಕಿಕೊಂಡು ಅಪದ್ಧ ಸುದ್ದಿಗಳನ್ನು ಹಬ್ಬಿಸುತ್ತಾಳೆ. ಆಕೆಗೆ ಸಿಗುವ ಅವಾಡರ್ು ಏನು ಗೊತ್ತೇ? ಸ್ವತಃ ಮುಖ್ಯಮಂತ್ರಿ ಆಕೆಯನ್ನು ತನ್ನ ಪಕ್ಕ ಕುಳ್ಳಿರಿಸಿಕೊಂಡು ಮಾಧ್ಯಮಕ್ಕೆ ಪೋಸು ಕೊಡುತ್ತಾರೆ. ಚುನಾವಣೆಯ ಸಂದರ್ಭದಲ್ಲಿ ಜನಿವಾರ ಹಾಕಿಕೊಂಡು ಊರೆಲ್ಲಾ ತಿರುಗಾಡುವ ಕಾಂಗ್ರೆಸ್ಸಿನ ನಾಯಕರುಗಳಿಗೆ ಚುನಾವಣೆ ಮುಗಿದೊಡನೆ ಹಿಂದುತ್ವ ಕಾಲ ಕಸ. ಮಧ್ಯಪ್ರದೇಶದಲ್ಲಿ ರಾಮ ರಥವನ್ನೋಯ್ದು ತಮ್ಮನ್ನು ತಾವು ಹಿಂದೂ ಎಂದು ಬಿಂಬಿಸಿಕೊಳ್ಳುತ್ತಿರುವ ಕಾಂಗ್ರೆಸ್ಸಿಗರು ಕನರ್ಾಟಕದಲ್ಲಿ ಹಿಂದೂಗಳ ಮಾರಣಹೋಮ ನಡೆಸಿದ ಟಿಪ್ಪು ಸುಲ್ತಾನನ ಜಯಂತಿಗೆ ತಮ್ಮ ಮಾನ, ಮಯರ್ಾದೆಗಳನ್ನೂ ಅಡವಿಟ್ಟು ನಿಲ್ಲುತ್ತಾರೆ!

ಇದು ಸಕಾಲ. ಈಗ ಪ್ರಕರಣಗಳ ಒಳಹೊಕ್ಕು ವಿಶ್ಲೇಷಣೆ ನಡೆಸುವುದಲ್ಲದೇ ತಪ್ಪು ಮಾಡುತ್ತಿರುವವರಿಗೆ ಎಚ್ಚರಿಕೆ ಕೊಡಬೇಕಾದ ಕಾಲವು ಬಂದಿದೆ. ಜನರಿಗೆ ಸುಳ್ಳು ಹೇಳಿ ಹಣ ಸಂಗ್ರಹಿಸಿ ಮೋಸ ಮಾಡುವ ಎಡಪಂಥೀಯ ಅರ್ಬನ್ ನಕ್ಸಲರಿಗೆ ಸರಿಯಾದ ಪಾಠ ಕಲಿಸುವ ಹೊತ್ತು ಬಂದಿದೆ. ಆಸೀಫಾಳ ಪ್ರಕರಣದಲ್ಲಿ ಇವರು ವತರ್ಿಸಿದ ರೀತಿ ನಮಗೊಂದು ಸರಿಯಾದ ಪಾಠ. ಸಂತೋಷ್ ತಮ್ಮಯ್ಯನ ಪ್ರಕರಣದಲ್ಲಿ ಸಕರ್ಾರ ನಡೆದುಕೊಂಡ ರೀತಿ ನಮಗೊಂದು ಬಲವಾದ ಎಚ್ಚರಿಕೆ. ಕೇಂದ್ರದಲ್ಲಿ ಬಲವಾದ ಪ್ರಧಾನಿಯಿದ್ದಾಗಲೇ ಹಿಂದೂಗಳ ಪರಿಸ್ಥಿತಿ ಹೀಗಾದರೆ ಇನ್ನು ದುರ್ಬಲ ಪ್ರಧಾನಿಯೊಬ್ಬ ಅಲ್ಲಿ ಬಂದು ಕುಳಿತರೆ ಪರಿಸ್ಥಿತಿ ಏನಾಗಬಹುದು ಹೇಳಿ?! ಊಹಿಸಿಕೊಂಡರೂ ಎದೆ ಝಲ್ಲೆನ್ನುತ್ತದೆ..

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top