National

ಕಥುವಾ ಅತ್ಯಾಚಾರದ ನೆಪದಲ್ಲಿ ಲೂಟಿ ಮಾಡಿದವರ್ಯಾರು ಗೊತ್ತೇ?!

ಕಥುವಾದಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಬಾಲಕಿಯ ಪರ ನಿಲ್ಲುತ್ತೇನೆಂದು ಬಂದ, ರಾತ್ರೋ-ರಾತ್ರಿ ಸೆಲೆಬ್ರಿಟಿಯಾದ ವಕೀಲೆ ದೀಪಿಕಾ ಸಿಂಗ್ ರಜವತ್ ಅವರನ್ನು ಬಾಲಕಿಯ ಕುಟುಂಬದವರೇ ಈಗ ಆಕೆ ತಮಗೆ ವಕೀಲೆಯಾಗುವುದು ಬೇಡವೆಂದು ತಿರಸ್ಕರಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಬಾಲಕಿಯ ತಂದೆ ಮತ್ತು ದೂರುದಾರ ಮೊಹಮ್ಮದ್ ಯುಸುಫ್ ಪಠಾನ್ ಕೋಟ್ ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಆಕೆಗೆ ನೀಡಿದ್ದ ಪವರ್ ಆಫ್ ಅಟಾರ್ನಿಯನ್ನೂ ಹಿಂಪಡೆಯುತ್ತಿರುವುದಾಗಿ ಮೊಹಮ್ಮದ್ ಯೂಸುಫ್ ತಿಳಿಸಿದ್ದಾರೆ.

ಕಥುವಾದಲ್ಲಾದ ಅತ್ಯಾಚಾರ ಹಲವು ವಾರಗಳವರೆಗೆ ದೇಶದ ಎಲ್ಲಾ ಮಾಧ್ಯಮಗಳಲ್ಲೂ ಸುದ್ದಿಯಲ್ಲಿತ್ತು ಮತ್ತು ದೀಪಿಕಾಳನ್ನು ಈ ಕೇಸಿನ ಹೀರೊ ಎಂದೇ ಗುರುತಿಸಲಾಗಿತ್ತು. ದೀಪಿಕಾ ಈ ವಿಚಾರಣೆಯನ್ನು ಕೈಗೆತ್ತುಕೊಂಡಿರದಿದ್ದರೆ ಬಾಲಕಿಗೆ ನ್ಯಾಯ ಸಿಗುವುದು ಅನುಮಾನವೇ ಎನ್ನುವಷ್ಟರ ಮಟ್ಟಿಗೆ ಆಕೆಯನ್ನು ಈ ಕೇಸಿನ ಪ್ರಮುಖಳೆಂದು ಬಿಂಬಿಸಲಾಗಿತ್ತು. ಹಾಲಿವುಡ್ ನ ಸ್ಟಾರ್ ‘ದೀಪಿಕಾ ಸಿಂಗ್ ಳಿಗೆ ಎಲ್ಲಾ ಶಕ್ತಿ’ ಎಂದು ಟ್ವೀಟ್ ಮಾಡಿದ ನಂತರವಂತೂ ಆಕೆ ವಿದೇಶದ ಮಾಧ್ಯಮಗಳಲ್ಲೂ ಸೂಪರ್ ಸ್ಟಾರ್ ಆಗಿಬಿಟ್ಟಳು. ಅಷ್ಟಕ್ಕೇ ನಿಲ್ಲಲಿಲ್ಲ. ಇಂಡಿಯನ್ ಮರ್ಚೆಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಮಹಿಳಾ ಸಂಘ ದೀಪಿಕಾಳನ್ನು ವರ್ಷದ ಮಹಿಳೆ ಎಂದು ಗುರುತಿಸಿ ಗೌರವಿಸಿತೂ ಕೂಡ!

ಆದರೆ ಈಗ ಬೆಳಕಿಗೆ ಬಂದಿರುವ ವಿಷಯವೆಂದರೆ ಪಠಾನ್ ಕೋಟ್ ಸೆಷನ್ಸ್ ನಲ್ಲಿ ನಡೆದ ವಿಚಾರಣೆಯನ್ನು ಕೇವಲ 2 ಬಾರಿ ಹಾಜರಾಗಿದ್ದಾರೆ. ಸುಪ್ರೀಂಕೋರ್ಟಿನ ಆದೇಶದ ಮೇರೆಗೆ ನ್ಯಾಯಮೂರ್ತಿ ಡಾ. ತೇಜ್ವಿಂದರ್ ಸಿಂಗ್ ಅವರು ವಿಚಾರಣೆಯನ್ನು ಪ್ರತಿನಿತ್ಯವೂ ನಡೆಸುತ್ತಿದ್ದರು. ಕಳೆದ ಐದುವರೆ ತಿಂಗಳಲ್ಲಿ ಒಟ್ಟು 110 ವಿಚಾರಣೆಗಳಾಗಿವೆ. ಆದರೆ ಈ ಕೇಸನ್ನು ಮುನ್ನಡೆಸಬೇಕಿದ್ದ ಸೆಲೆಬ್ರಿಟಿ ವಕೀಲೆ ದೀಪಕ್ ಸಿಂಗ್ ಕೇವಲ 2 ಬಾರಿಯಷ್ಟೇ ಹಾಜರಿದ್ದರು ಎಂದು ಮೊಹಮ್ಮದ್ ಯೂಸುಫ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ಯೂಸುಫ್ ಅವರ ಪ್ರಕಾರ, ದೀಪಿಕಾ ಸಿಂಗ್ ಅವರಿಗೆ ಪಠಾನ್ ಕೋಟ್ ನಲ್ಲಿ ಜೀವಬೆದರಿಕೆ ಇರುವುದರಿಂದ ಆಕೆ ಅಲ್ಲಿಗೆ ಬರುತ್ತಿಲ್ಲವೆಂದು ಆಕೆಯೇ ಹೇಳಿರುವುದಾಗಿ ತಿಳಿಸಿದ್ದಾರೆ. ಯೂಸುಫ್ ಈ ವಿಚಾರವನ್ನು ನ್ಯಾಯಾಲಯದ ಮುಂದಿರಿಸಿ ಆಕೆಯನ್ನು ಕೈಬಿಡುವುದಾಗಿ ತಿಳಿಸಿದ್ದಾರೆ.

ಆಶ್ಚರ್ಯಕರ ವಿಷ0ಯವೆಂದರೆ, ಈ ಪ್ರಕರಣವನ್ನು ಬಾಲಕಿಯ ಕುಟುಂಬದವರು ತಮಗೆ ಮತ್ತು ದೀಪಿಕಾರಿಗೆ ಜಮ್ಮು-ಕಾಶ್ಮೀರದಲ್ಲಿ ಜೀವ ಬೆದರಿಕೆ ಇರುವುದರಿಂದ ಪ್ರಕರಣವನ್ನು ಬೇರೆಡೆಗೆ ವರ್ಗಾಯಿಸಬೇಕೆಂದು ಅರ್ಜಿ ಸಲ್ಲಿಸಿದ್ದರೆ. ಇದನ್ನು ಪರಿಗಣಿಸಿ ಸುಪ್ರೀಂಕೋರ್ಟು ಕಥುವಾ ಅತ್ಯಾಚಾರದ ಪ್ರಕರಣವನ್ನು ಪಠಾನ್ ಕೋಟ್ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಿದ್ದಾಗ ಕೇಸನ್ನು ಗೆದ್ದಷ್ಟೇ ದೀಪಿಕಾ ಸಂತೋಷಪಟ್ಟಿದ್ದರು. ಅಷ್ಟೇ ಅಲ್ಲದೇ, ‘ಈಗ ಮಗುವಿಗೆ ನ್ಯಾಯ ಸಿಗುತ್ತದೆ’ ಎಂಬ ಹೇಳಿಕೆಯನ್ನು ಮಾಧ್ಯಮಗಳೆದುರು ನೀಡಿದ್ದರು. ಪ್ರಕರಣ ಸುರಕ್ಷಿತವಾದ ಮತ್ತು ಶಾಂತಿಯುತ ಸ್ಥಳಕ್ಕೆ ವರ್ಗಾಯಿಸಲ್ಪಟ್ಟಿದೆ ಎಂದು ಸುಪ್ರೀಂಕೋರ್ಟಿಗೆ ಧನ್ಯವಾದ ಅರ್ಪಿಸಿದ್ದರೂ ಕೂಡ. ಇದೀಗ ಇದ್ದಕ್ಕಿದ್ದಂತೆ ಆಕೆಗೆ ಪಠಾನ್ ಕೋಟ್ ಸುರಕ್ಷಿತವಲ್ಲದ ಸ್ಥಳವಾಗಿರುವುದು ಆಶ್ಚರ್ಯವೇ ಸರಿ!

ಪ್ರಕರಣವನ್ನು ಈಗ ಇಬ್ಬರು ಅನುಭವವುಳ್ಳ ಹಿರಿಯ ವಕೀಲರು ನೋಡುತ್ತಿದ್ದಾರೆ, ಹಾಗಾಗಿ ನನ್ನ ಅವಶ್ಯಕತೆಯಿಲ್ಲವೆಂದು ದೀಪಿಕಾ ನಿಧಾನವಾಗಿ ನುಣುಚಿಕೊಳ್ಳುತ್ತಿದ್ದಾರೆ. ಕಥುವಾ ಪ್ರಕರಣದ ಕುರಿತ ವಿವಾದ ಇದೊಂದೇ ಅಲ್ಲ. ಎಡಪಂಥೀಯ ಹೋರಾಟಗಾರ್ತಿ ಶೆಹ್ಲಾ ರಶೀದ್ ಬಾಲಕಿಯ ಪರ ಕಾನೂನು ಹೋರಾಟಕ್ಕಾಗಿ ಹಣವನ್ನು ಸಂಗ್ರಹಿಸಿ, ಅದರಲ್ಲಿ ಸುಮಾರು 40 ಲಕ್ಷ ರೂಪಾಯಿಯನ್ನು ಆಕೆಯೇ ಬಳಸಿಕೊಂಡಳು ಎಂಬ ಆರೋಪವೂ ಇದೆ. ಆದರೆ ಕೆಲವು ವರದಿಗಳ ಪ್ರಕಾರ ಬಾಲಕಿಯ ಕುಟುಂಬದವರು ಯಾವುದೇ ಹಣವನ್ನು ಸ್ವೀಕರಿಸಿಲ್ಲ. ಪಠಾನ್ ಕೋಟ್ ನಲ್ಲಿ ಪ್ರಕರಣದ ವಿಚಾರಣೆಗೆ ಹೋಗಲು ಬಾಲಕಿಯ ಕುಟುಂಬದವರು ತಮ್ಮ ಜಾನುವಾರನ್ನೂ ಮಾರಿದ್ದಾರೆ. ಶೆಹ್ಲಾಳಿಗೆ ಈ ಕುರಿತು ಟ್ವಿಟರ್ ನಲ್ಲಿ ಪ್ರಶ್ನೆಗಳ ಸುರಿಮಳೆಯಾದಾಗ ಆಕೆ ಉತ್ತರ ನೀಡದೇ ತನ್ನ ಟ್ವಿಟರ್ ಅಕೌಂಟನ್ನೇ ಡಿಲೀಟ್ ಮಾಡಿದ್ದಾಳೆ.

ಈ ಹಿಂದೆ ಕಥುವಾದ ಬಾಲಕಿಗೆ ನ್ಯಾಯ ದೊರಕಲೇಬೇಕೆಂದು ಬೇಡಿಕೆಯಿಟ್ಟಿದ್ದ ವಕೀಲ ಮತ್ತು ಹೋರಾಟಗಾರ ತಾಲಿಬ್ ಹುಸೇನ್ ಮೇಲೆಯೇ ಅತ್ಯಾಚಾರದ ಆರೋಪಗಳು ಕೇಳಿಬಂದಿದ್ದವು. ಆತ ತನ್ನ ಹೆಂಡತಿಯನ್ನು ವರದಕ್ಷಿಣೆಯ ವಿಚಾರದಲ್ಲಿ ಹಿಂಸಿಸಿದ್ದೂ ಬೆಳಕಿಗೆ ಬಂದಿದೆ.

ಒಟ್ಟಿನಲ್ಲಿ ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಬಂದವರೆಲ್ಲಾ ರಾತ್ರೋ ರಾತ್ರಿ ಸ್ಟಾರ್ ಗಳಾದರು. ಯಾರಿಗೂ ಬಾಲಕಿಗೆ ನ್ಯಾಯ ಕೊಡಿಸುವ, ಸತ್ಯಾಂಶವನ್ನು ಬಯಲಿಗೆಳೆಯುವ ತವಕವಿರಲಿಲ್ಲ.

Click to comment

Leave a Reply

Your email address will not be published. Required fields are marked *

Most Popular

To Top