National

ಕಡಿಸಿಕೊಂಡವರಿಗೆ ಮಾತ್ರವೇ ಅದರ ಅನುಭವ!

ರಾಷ್ಟ್ರೀಯವಾದಿಗಳು ಮತ್ತೆ ಮುನ್ನೆಲೆಗೆ ಬರುತ್ತಿದ್ದಾರೆ. ರಾಷ್ಟ್ರ ನಾಯಕರುಗಳಿಗೆ ಭಾರತ ಗೌರವ ಕೊಡುವುದಿಲ್ಲವೆಂಬ ಕೂಗು ಅನೇಕ ವರ್ಷಗಳಿಂದ ಕೇಳಿ ಬರುತ್ತಿತ್ತು. ಈಗ ಸದ್ದಡಗುತ್ತಿದೆ. ವಾಸ್ತವವಾಗಿ ಗೌರವ ಕೊಡದೇ ಸತಾಯಿಸುತ್ತಿದ್ದುದು ಭಾರತೀಯರಲ್ಲ, ಕಾಂಗ್ರೆಸ್ಸಿನ ಆಡಳಿತ. ಒಂದು ಪರಿವಾರವನ್ನು ರಕ್ಷಿಸಲೋಸುಗ ಕಾಂಗ್ರೆಸ್ಸು ಉಳಿದೆಲ್ಲ ರಾಷ್ಟ್ರ ಪುರುಷರನ್ನು ನೇಪಥ್ಯಕ್ಕೆ ಸರಿಸಿಬಿಟ್ಟಿತು. ಸುಭಾಷ್ ಚಂದ್ರ ಬೋಸರ ಸಾವನ್ನು ಮರೆಮಾಚಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಸಾವಿಗೆ ಕಾರಣವಾದರು. ಸರದಾರ್ ಪಟೇಲರನ್ನು ಕುಚರ್ಿಯಿಂದ ದೂರವಿಟ್ಟಿದ್ದಲ್ಲದೇ ಅವರು ತೀರಿಕೊಂಡ ನಂತರ ಗೌರವದಿಂದ ಕಾಣಲಿಲ್ಲ. ಆಥರ್ಿಕ ಸಂಕಷ್ಟದಿಂದ ಭಾರತವನ್ನು ಪಾರು ಮಾಡಲು ಅತ್ಯಂತ ಕಠಿಣ ನಿಧರ್ಾರ ಕೈಗೊಂಡ ಪಿ.ವಿ ನರಸಿಂಹರಾಯರು ತೀರಿಕೊಂಡ ನಂತರವೂ ಶವವನ್ನೂ ಬಲು ಕೆಟ್ಟದಾಗಿ ನಡೆಸಿಕೊಳ್ಳಲಾಯ್ತು. ಗಾಂಧಿ ಪರಿವಾರ ಮತ್ತು ಅವರುಗಳಿಗೆ ಆಪ್ತವಾಗಿದ್ದ ಜನ ಮಾತ್ರ ಈ ದೇಶದಲ್ಲಿ ಗೌರವ ಪಡೆದು ಮೆರೆದಾಡಿದ್ದು. ಇಲ್ಲದಿದ್ದರೆ ಪ್ರತಿಭಾ ಪಾಟೀಲ್ರಂಥವರು ರಾಷ್ಟ್ರಪತಿಯಾಗುವುದು ಸಾಧ್ಯವೇ ಇರಲಿಲ್ಲ.


ಈಗ ಚಿತ್ರ ಬದಲಾಗುತ್ತಿದೆ. ಸುಭಾಷ್ ಚಂದ್ರ ಬೋಸರು ಭಾರತದ ಮೊದಲ ಪ್ರಧಾನಿ ಎಂಬ ಅಭಿದಾನಕ್ಕೆ ಪಾತ್ರವಾದ 75 ವರ್ಷಗಳ ನಂತರ ಕೆಂಪುಕೋಟೆಯಲ್ಲಿ ತಿರಂಗ ಹಾರಿಸಲಾಯ್ತು. ಅವರ ಸಾವಿನ ರಹಸ್ಯಗಳು ಈಗ ಬೆಳಕಿಗೆ ಬರುತ್ತಿವೆ. ಸರದಾರ್ ಪಟೇಲರಂತೂ ಬದುಕಿದ್ದಾಗ ಹೇಗೆ ಅಚಲ ಬಂಡೆಯಂತಿದ್ದರೋ ತೀರಿಕೊಂಡ ಅನೇಕ ದಶಕಗಳ ನಂತರ ಮತ್ತೆ ಬಂಡೆಯಾಗಿಯೇ ಗುಜರಾತಿನಲ್ಲಿ ನಿಲ್ಲುತ್ತಿದ್ದಾರೆ. ಹೌದು. ಭಾರತದ ಚೂರು ಚೂರಾಗುವುದನ್ನು ತಡೆಗಟ್ಟಿ ಈಗಿರುವಷ್ಟು ಭೂಪ್ರದೇಶವನ್ನು ನಮಗುಳಿಸಿಕೊಟ್ಟ ಗಟ್ಟಿಗ ಆತ. ಮೌಂಟ್ ಬ್ಯಾಟನ್ರೊಂದಿಗೆ ಚಚರ್ೆ ಮಾಡುವಾಗ ‘ಭಾರತವೆಂಬ ಹಣ್ಣಿನ ಬುಟ್ಟಿಯನ್ನು ಕೊಡುವಾಗ ಒಂದೇ ಒಂದು ಹಣ್ಣು ಕಡಿಮೆಯಾದರೂ ನಾನದನ್ನು ಒಪ್ಪಲಾರೆ’ ಎಂದು ಮಾತು ಮುರಿದು ಎದ್ದಿದ್ದ ತಾಕತ್ತು ಪಟೇಲರದ್ದು. ದೇಶ ವಿಭಜನೆಯ ಚಚರ್ೆ ಬಂದಾಹ ಮೌಂಟ್ ಬ್ಯಾಟನ್ ತಮ್ಮ ಜೇಬಿನಲ್ಲಿರುವ ಚೀಟಿ ತೋರಿಸಿ ‘ವಿಭಜನೆಗೆ ನೆಹರೂ ಆದಿಯಾಗಿ ಎಲ್ಲರೂ ಒಪ್ಪಿಕೊಂಡಿದ್ದಾರೆ, ಅವರೆಲ್ಲರೂ ನನ್ನ ಜೇಬಿನಲ್ಲಿದ್ದಾರೆ. ಒಪ್ಪಿಸಲು ಕಠಿಣವಾಗುತ್ತಿರುವುದು ನಿಮ್ಮನ್ನು ಮಾತ್ರ’ ಎಂದಿದ್ದರು. ಪಟೇಲರೊಬ್ಬರಿಲ್ಲದೇ ಹೋಗಿದ್ದರೆ ಜಿನ್ನಾ ನೆಹರೂರಿಂದ ತಮಗೆ ಬೇಕಾದ್ದನ್ನೆಲ್ಲ ಪಡೆದುಕೊಂಡು ಬಿಡುತ್ತಿದ್ದರು. ಅವರಿಲ್ಲದೇ ಹೋಗಿದ್ದರೆ ಗ್ವಾಲಿಯರ್, ತಿರುವಾಂಕೂರು ಮೊದಲಾದ ಮಹಾರಾಜರುಗಳೆಲ್ಲ ಪ್ರತ್ಯೇಕತೆಯ ಬಾವುಟ ಹಾರಿಸುತ್ತಿದ್ದರು. ಅವರಿಲ್ಲವಾಗಿದ್ದರೆ ಕಾಶ್ಮೀರ ಹೈದರಾಬಾದ್ ಜುನಾಗಡಗಳು ಪಾಕಿಸ್ತಾನದ ತೋಳ್ತೆಕ್ಕೆಯಲ್ಲಿರುತ್ತಿತ್ತು. ಅವರಿಲ್ಲವಾಗಿದ್ದರೆ ತಮ್ಮ ಹಿತಾಸಕ್ತಿಯನ್ನು ಸಾಧಿಸಿಕೊಳ್ಳಲು ಮೈಮರೆಯುವ ಅಯೋಗ್ಯರು ಸ್ವಾತಂತ್ರ್ಯದ ಹೊಸ್ತಿಲಲ್ಲೇ ಭಾರತವನ್ನು ನುಂಗಿ ನೊಣೆದು ಬಿಡುತ್ತಿದ್ದರು.


ಪ್ರಧಾನಿ ನೆಹರೂ ತಮ್ಮ ಮೂಗಿನ ನೇರಕ್ಕೆ ಸಕರ್ಾರ ನಡೆಸುವಾಗಲೂ ಪಟೇಲರು ಕಿವಿಮಾತು ಹೇಳುತ್ತಿದ್ದರು ಅಗತ್ಯ ಬಿದ್ದರೆ ಕಿವಿ ಹಿಂಡುತ್ತಿದ್ದರು. ಅವರ ದೂರದೃಷ್ಟಿ ಬಲು ತೀಕ್ಷ್ಣವೇ ಆಗಿತ್ತು. ಚೀನಾದೊಂದಿಗಿನ ಯುದ್ಧವನ್ನ ಬಲು ಮುಂಚಿತವಾಗಿಯೇ ಆಲೋಚಿಸಿ ಪ್ರಧಾನಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದರು. ದೇಶವೆಲ್ಲಾ ಸದರ್ಾರ್ ಪಟೇಲರ ಇಚ್ಛಾಶಕ್ತಿಯನ್ನು ಕೊಂಡಾಡುತ್ತಿದ್ದರೆ ನೆಹರೂ ಒಳ ಒಳಗೇ ಕೈ ಕೈ ಹಿಸುಕಿಕೊಳ್ಲುತ್ತಿದ್ದರು. ಅನೇಕ ಬಾರಿ ತಾನು ರಾಜಿನಾಮೆ ಕೊಟ್ಟುಬಿಡುತ್ತೇನೆ ಎಂದು ಹೆದರಿಸಿ ಪಟೇಲರು ಮೌನಕ್ಕೆ ಶರಣಾಗುವಂತೆ ಮಾಡಿಬಿಡುತ್ತಿದ್ದರು. ಗಾಂಧೀಜಿಯ ಮಾನಸ ಪುತ್ರರಾಗಿದ್ದ ನೆಹರೂರೊಂದಿಗೆ ಪ್ರೀತಿಯ ಸಂಬಂಧ ಇಟ್ಟುಕೊಳ್ಳುತ್ತೇನೆಂದು ಗಾಂಧೀಜಿಗೆ ಮಾತು ಕೊಟ್ಟಿದ್ದೇ ಮುಳುವಾಯ್ತು. ರಾಷ್ಟ್ರಕ್ಕೆ ಸಂಬಂಧಪಟ್ಟ ಅನೇಕ ವಿಚಾರಗಳಲ್ಲಿ ಅವರು ತಮ್ಮ ಕಠಿಣ ನಿಲುವನ್ನು ಸಡಿಲಿಸಬೇಕಾಗಿ ಬಂದುಬಿಟ್ಟಿತು. ಅವರ ಕೊನೆಯ ದಿನಗಳು ಈ ನೋವಿನಿಂದಲೇ ಕಳೆದಂಥವು. ದುರದೃಷ್ಟವೆಂದರೆ ಪಟೇಲರ ಈ ವ್ಯಕ್ತಿತ್ವವನ್ನು ಸ್ವತಃ ಕಾಂಗ್ರೆಸ್ಸು ಮುನ್ನೆಲೆಗೆ ತರಲಿಲ್ಲ. ತಮ್ಮದ್ದೇ ನಾಯಕನೊಬ್ಬನನ್ನು ಮೂಲೆಗುಂಪು ಮಾಡಿ ಅವರ ಪರಿಶ್ರಮದ ಸಮಾಧಿಯ ಮೇಲೆ ಸೌಧವನ್ನು ಕಟ್ಟಿಕೊಂಡು ಗಾಂಧಿ ಪರಿವಾರದ ನಾಯಕರು ಮೆರೆದಾಡಿಬಿಟ್ಟರು. ಆಗೆಲ್ಲಾ ಅವರಿಗೆ ಗೊತ್ತಿರದಿದ್ದ ಒಂದೇ ಒಂದು ಅಂಶವೆಂದರೆ ಪಟೇಲರದ್ದೇ ಗುಜವರಾತಿನಿಂದ ಅವರದ್ದೇ ಅಂಶಗಳನ್ನು ಮೈಗೂಡಿಸಿಕೊಂಡ ಒಬ್ಬ ಸಮರ್ಥ ನಾಯಕ ದೇಶವನ್ನು ಆಳಬಹುದು ಎನ್ನೋದು. ಹೌದು. ನರೇಂದ್ರಮೋದಿ ಅನೇಕರ ಪಾಲಿಗೆ ಸರದಾರ್ ಪಟೇಲರು ಎಂದೇ ಎನಿಸುತ್ತಾರೆ. ರಾಷ್ಟ್ರ ಹಿತಕ್ಕೆ ಕಠಿಣ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಮತ್ತು ಅದನ್ನು ಜನರಿಗೆ ಒಪ್ಪಿಸುವಲ್ಲಿ ಅವರದ್ದು ಬಲವಾದ ಸಾಧನೆ. ಇದೇ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಲೇ ಸರದಾರ್ ಪಟೇಲರ ಗೌರವಕ್ಕೆಂದು ಸುಮಾರು 200 ಮೀಟರ್ ಎತ್ತರದ ಸರದಾರ್ ಪಟೇಲರ ವಿಗ್ರಹವನ್ನು ನರ್ಮದಾ ಸರೋವರದ ಅಣೇಕಟ್ಟಿನ ಮೇಲೆ ನಿಮರ್ಿಸುವ ಸಂಕಲ್ಪ ಮಾಡಿದರು. ಸರಿಸುಮಾರು 3000 ಕೋಟಿ ರೂಪಾಯಿಯ ಈ ಯೋಜನೆಯಲ್ಲಿ ಬರಿಯ ವಿಗ್ರಹವಷ್ಟೇ ಅಲ್ಲದೇ ಪ್ರವಾಸೋದ್ಯಮದ ಅಭಿವೃದ್ಧಿಗೆಂದು ಭಿನ್ನ ಭಿನ್ನ ಯೋಜನೆಗಳನ್ನು ರೂಪಿಸಲಾಗಿದೆ. ಜಗತ್ತಿನ ಅತ್ಯಂತ ಎತ್ತರದ ಮೂತರ್ಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸರದಾರ್ ಪಟೇಲರ ಈ ವಿಗ್ರಹ ಭಾರತದ ಇಂಜಿನಿಯರಿಂಗ್ ಅದ್ಭುತವೆಂದು ಕೊಂಡಾಡಲಾಗುತ್ತಿದೆ. ಇತ್ತೀಚೆಗೆ ಸಾಧುಗಳೊಬ್ಬರು ದುಬೈನಲ್ಲಿ 2000 ಕೋಟಿ ರೂಪಾಯಿ ವೆಚ್ಚದಲ್ಲಿ ಮಂದಿರವೊಂದರ ನಿಮರ್ಾಣವಾಗುತ್ತಿರುವುದನ್ನು ತಪ್ಪೆಂದು ಜರಿದಿದ್ದರು. ಅಷ್ಟು ಹಣವನ್ನು ಬಡವರಿಗೆ ಹಂಚಿದ್ದರೆ ಒಳಿತಾಗಿರುತ್ತಿತ್ತು ಎಂದೂ ಹೇಳಿದ್ದರು. ಆದರೆ ತಮಗೊಂದು ಮಠ ಕಟ್ಟಿಕೊಂಡು ವೈಭವದ ಬದುಕನ್ನು ಬದುಕುವ ಮಠಾಧೀಶರಗಳ ಬಗ್ಗೆ ಇವರುಗಳು ಚಕಾರ ಎತ್ತಲಾರರು. ಹೋಗಲಿ ವಿದೇಶದಲ್ಲಿ ಮಂದಿರ ನಿಮರ್ಾಣವಾಗುವುದೆಂದರೆ ಭಾರತೀಯತೆಯ ಕುರುಹನ್ನು ಜಗತ್ತಿನಾದ್ಯಂತ ವಿಸ್ತರಿಸುವುದು ಎಂಬ ಸಾಮಾನ್ಯ ಅರಿವೂ ಇಲ್ಲವಲ್ಲ ಇವರಿಗೆ. ಈ ಮೂತರ್ಿಯ ಕಲ್ಪನೆಯೂ ಹಾಗೆಯೇ. ಜಾಗತಿಕ ಮಟ್ಟದಲ್ಲಿ ಅತ್ಯಂತ ಎತ್ತರದ ಮೂತರ್ಿ ಎಲ್ಲಿದೆ ಎಂದಾಗ ಇನ್ನು ಮುಂದೆ ಭಾರತದ ಹೆಸರೇ ಬರುತ್ತದೆ. ಅದನ್ನು ನೋಡಲೆಂದು ಜಗತ್ತಿನ ಮೂಲೆ ಮೂಲೆಯಿಂದ ಪ್ರವಾಸಿಗರು ಬರುತ್ತಾರಲ್ಲಾ ಅದು ಭಾರತದ ಒಟ್ಟಾರೆ ಆದಾಯವನ್ನೆ ಹೆಚ್ಚಿಸುತ್ತದೆ. ಮೋದಿ ಒಂದೇ ಕಲ್ಲಿಗೆ ಎರಡು ಹಕ್ಕಿ ಬೀಳಿಸಿದ್ದಾರೆ. ಮೊದಲನೆಯದು ಜಗತ್ತಿನ ಭೂಪಟದಲ್ಲಿ ಭಾರತ ಕಂಗೊಳಿಸುವಂತೆ ಮಾಡಿ ಭಾರತದ ಸ್ವಾಭಿಮಾನವನ್ನು ಸಾವಿರಾರು ಮೀಟರ್ ಎತ್ತರಕ್ಕೆ ಏರಿಸಿದ್ದರೆ ಎರಡನೆಯದು ಸರದಾರ್ ಪಟೇಲರ ಇತಿಹಾಸವನ್ನು ಜಗತ್ತಿಗೆ ಮುಟ್ಟಿಸುವ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಿದ್ದಾರೆ.


ಹಾಗೆ ಒಂದು ನಿಮಿಷ ಕುಳಿತುಕೊಂಡು ವಿರೋಧ ಪಕ್ಷ ಕಾಂಗ್ರೆಸ್ಸಿನ ಸ್ಥಿತಿಯನ್ನು ಗಮನಿಸಿ. ಮೂತರ್ಿ ನಿಮರ್ಾಣ ಕಾರ್ಯವನ್ನು ಸಮಥರ್ಿಸುವಂತಿಲ್ಲ ಏಕೆಂದರೆ ಅದು ಮೋದಿ ಮಾಡಿದ ಕೆಲಸ. ವಿರೋಧಿಸುವಂತಿಲ್ಲ ಏಕೆಂದರೆ ಸರದಾರ್ ಪಟೇಲ್ ಕಾಂಗ್ರೆಸ್ಸಿನದ್ದೇ ನಾಯಕ. ಮೋದಿಯವರ ಕೆಲಸಗಳು ಕಾಂಗ್ರೆಸ್ಸಿಗೆ ಚೇಳು ಕಡಿದಂತಾಗಿರುವುದು ಈ ಕಾರಣಕ್ಕೆ. ಮೊನ್ನೆಯೇ ಶಶಿತರೂರ್ ಹೇಳಿದಾರಲ್ಲಾ ಮೋದಿಯೆಂದರೆ ಶಿವಲಿಂಗದ ಮೇಲಿನ ಚೇಳಿದ್ದಂತೆ ಅಂತ. ಕಡಿಸಿಕೊಂಡವರಿಗೆ ಅನುಭವ ಚೆನ್ನಾಗಿಯೇ ಇದೆ.

-ಚಕ್ರವರ್ತಿ ಸೂಲಿಬೆಲೆ

 

1 Comment

1 Comment

  1. Adarsh

    October 31, 2018 at 8:59 am

    Awesome

Leave a Reply

Your email address will not be published. Required fields are marked *

Most Popular

To Top