National

ಎದೆ ಮೇಲೆ ಪಾಕಿಸ್ತಾನದ ಚಿತ್ರ ಬರೆದುಕೊಂಡಿದ್ದವಳು ಈಗ ಕಾಂಗ್ರೆಸ್ಸಿಗೆ!

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಆರ್ಶಿ ಖಾನ್ ಕಾಂಗ್ರೆಸ್ ಗೆ ಸೇರಿಕೊಂಡಿದ್ದಾಳೆ. ಪಾಕಿಸ್ತಾನದ ಧ್ವಜಗಳನ್ನು ತನ್ನ ಮೈಮೇಲೆ ಬಳಿದುಕೊಂಡು ಹೆಸರುವಾಸಿಯಾಗಿದ್ದ ಈಕೆ ಈಗ ಮಹಾರಾಷ್ಟ್ರ ಕಾಂಗ್ರೆಸ್ಸಿನ ಉಪಾಧ್ಯಕ್ಷೆ!

ಮಾಹಿತಿಯೊಂದರ ಪ್ರಕಾರ ಈಕೆ ಜನಿಸಿದ್ದು ಅಫ್ಘಾನಿಸ್ತಾನದಲ್ಲಿ. ನಾಲ್ಕನೇ ವಯಸ್ಸಿಗೆ ಭಾರತಕ್ಕೆ ಬಂದು ನೆಲೆಸಿದ್ದಳು. ಹಲವು ಬಾರಿ ಈಕೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡು ಪಾಕಿಸ್ತಾನದ ಮೇಲಿನ ತನ್ನ ಪ್ರೀತಿಯನ್ನು ಹೊರಹಾಕಿದ್ದಾಳಷ್ಟೇ ಅಲ್ಲದೇ ತಾನು ಪಾಕಿಸ್ತಾನದ ನಾಗರಿಕತ್ವವನ್ನು ಪಡೆಯಬೇಕೆಂಬ ತನ್ನಾಸೆಯನ್ನು ಸಾರಿ ಹೇಳಿದ್ದಳು.

ಆರ್ಶಿ ಕಾ ಸ್ವಯಂವರ ಎನ್ನುವ ಪಾಕಿಸ್ತಾನಿ ರಿಯಾಲಿಟಿ ಶೋ ಒಂದರಲ್ಲಿ ಈಕೆ ಭಾಗವಹಿಸಲು ನಿರ್ಧರಿಸುತ್ತಾಳೆಂಬ ಮಾತುಗಳೂ ಕೇಳಿಬಂದಿದ್ದವು. ಇದಕ್ಕೆ ಆಕೆಗೆ 2 ಕೋಟಿ ರೂಪಾಯಿ ಆದಾಯವೂ ನಿರ್ಧರಿತವಾಗಿತ್ತು. ಆಶ್ಚರ್ಯವೆಂದರೆ ಆ ಪಾಕಿಸ್ತಾನಿ ಚಾನೆಲ್ ಹೆಸರನ್ನೂ ಮಾತ್ರ ಈಕೆ ಎಲ್ಲಿಯೂ ಹೇಳಿಯೇ ಇಲ್ಲ. ಕೆಲವು ಮೂಲಗಳು ಪ್ರಕಾರ ಆ ಸಮಯದಲ್ಲಿ ವೈರಲ್ ಆಗಿದ್ದ ಫೋಟೊಶೂಟ್ಗಳು ರಿಯಾಲಿಟಿ ಶೋಗಾಗಿ ಅಲ್ಲ, ಗ್ರೀನ್ ಟೆರರ್ ಎಂಬ ಸಿನಿಮಾದ ಫೋಟೊಶೂಟ್ ಆಗಿದ್ದವು. ಜೈಶ್-ಎ-ಮೊಹಮ್ಮದ್ ನಿಂದ ನಿಷೇಧಿತಗೊಂಡಿರುವ ನಿರ್ದೇಶಕ ಮನೀಷ್ ಸಿಂಗ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದರು.

ಆದರೆ ಕೆಲವು ಪ್ರತಿಷ್ಠಿತ ಮಾಧ್ಯಮಗಳ ಪ್ರಕಾರ ಇವುಗಳೆಲ್ಲಾ ಪ್ರಚಾರಕ್ಕಾಗಿ ಬಳಸಿದ ಗಿಮಿಕ್ಕುಗಳಷ್ಟೇ! ಈ ಕಥೆಗಳೆಲ್ಲಾ ಫ್ಲಿನ್ ರೆಮೆಡಿಯೊಸ್ ಮಾಧ್ಯಮಗಳ ಮುಂದೆ ಹೇಳಿದ ಕಥೆಗಳು ಇಲ್ಲವೇ ಆತನೇ ನಡೆಸುತ್ತಿರುವ ವೆಬ್ ಸೈಟುಗಳು ಮಾಡಿದ ಸುದ್ದಿಗಳು!

ಫ್ಲಿನ್ ರೆಮೆಡಿಯೊಸ್ ಯಾರು ಗೊತ್ತೇ?! ಇತ್ತೀಚೆಗಷ್ಟೇ ಸುದ್ದಿ ಮಾಡಿದ ಇಂಡಿಯಾಸ್ಕೂಪ್ಸ್.ಕಾಮ್ ವೆಬ್ ಸೈಟ್ ನೆನಪಿರಬೇಕು. ಹೌದು, ಈತ ಕಾಂಗ್ರೆಸ್ಸಿನ ಪರ ಪ್ರಚಾರ ಮಾಡುವ, ಫೇಕುಸುದ್ದಿಗಳನ್ನು ಹರಡಿಸುವ ಅದೇ ವ್ಯಕ್ತಿ. ಪ್ರಧಾನಮಂತ್ರಿಯವರ ಯೋಗ ದಿನಾಚರಣೆಯ ವಿಡಿಯೊಗೆ 35 ಲಕ್ಷ ರೂಪಾಯಿಯನ್ನು ಖರ್ಚು ಮಾಡಿದ್ದರೆಂಬ ಫೇಕ್ ಸುದ್ದಿ, ಕಾಂಗ್ರೆಸ್ ನಾಯಕರಾದ ದಿವ್ಯ ಸ್ಪಂದನ, ಶಶಿ ತರೂರ್, ಪ್ರಶಾಂತ್ ಭೂಷಣ್ ರಂಥವರು ಹಂಚಿಕೊಂಡಿದ್ದ ರಫೇಲ್ ಕುರಿತ ಫೇಕ್ ಸುದ್ದಿಯನ್ನು ಹಬ್ಬಿಸಿದ್ದು ಇದೇ ಇಂಡಿಯಾಸ್ಕೂಪ್ಸ್.ಕಾಮ್ ವೆಬ್ ಸೈಟು!

ಇತ್ತೀಚೆಗಷ್ಟೇ ಓಪಿಂಡಿಯಾ ಎನ್ನುವ ಸಾಮಾಜಿಕ ಜಾಲತಾಣದ ಸೈಟೊಂದು ಇಂಡಿಯಾಸ್ಕೂಪ್ಸ್.ಕಾಮ್ ವೆಬ್ ಸೈಟು ಈ ಹಿಂದೆ ಆರ್ಶಿಖಾನ್ ಫ್ಯಾನ್ಸ್ ಕ್ಲಬ್ ಪೇಜಾಗಿತ್ತು ಎಂಬ ಸತ್ಯವನ್ನು ಹೊರಹಾಕಿ ಅವರನ್ನೆಲ್ಲಾ ಬಯಲಿಗೆಳೆದಿತ್ತು! ಇಷ್ಟೇ ಅಲ್ಲದೇ, ಆರ್ಶಿ ಖಾನ್ ಮತ್ತು ಫ್ಲಿನ್ ಇಬ್ಬರ ಮೇಲೂ ಪಂಡಿತ್ ಜೋಶಿ ಎನ್ನುವವರು ಹಣದೋಚುವ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ.

ಒಟ್ಟಾರೆ ಫೇಕ್ ಸುದ್ದಿಯನ್ನು ಹಬ್ಬಿಸುವ, ಹಣದೋಚಿ ಜೀವನ ನಡೆಸುವ, ಪಾಕಿಸ್ತಾನ ಪ್ರಿಯೆ ಆರ್ಶಿ ಖಾನ್ ಈಗ ಕಾಂಗ್ರೆಸ್ಸಿನ ನಾಯಕಿ!

Click to comment

Leave a Reply

Your email address will not be published. Required fields are marked *

Most Popular

To Top