National

ಎಡಪಕ್ಷಗಳಿಗೆ ಬಂಗಾಳದಲ್ಲಾದ ಗತಿ ಈಗ ಕೇರಳದಲ್ಲಿ!

ಎಡಪಂಥೀಯರು ಹೀಗೆ ತಬ್ಬಿಬ್ಬಾಗಿ ಮುಂದೇನು ಮಾಡಬೇಕೆಂದು ತೋಚದೇ ಕೈಚೆಲ್ಲಿಬಿಡುವುದು ಬಹಳ ಅಪರೂಪ. ಪ್ರತಿ ಚುನಾವಣೆಗೊಮ್ಮೆ ಸುಳ್ಳು-ಸುಳ್ಳು ವಾದಗಳನ್ನು ಜನರ ಮುಂದಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುವುದರಲ್ಲಿ ಅವರು ನಿಸ್ಸೀಮರು. ಹಿಂದೊಮ್ಮೆ ಜೆಎನ್ಯುನಲ್ಲಿ ತುಕಡೆ ಗ್ಯಾಂಗಿನ ಹೋರಾಟ ದೇಶವ್ಯಾಪಿ ಅಬ್ಬರವೆಬ್ಬಿಸಿತ್ತು. ಉತ್ತರ ಪ್ರದೇಶದ ಚುನಾವಣೆಗೂ ಮುನ್ನ ಶುರುವಾದ ಅಸಹಿಷ್ಣುತೆಯ ಚಚರ್ೆ ಅವಾಡರ್್ ವಾಪ್ಸಿಯಾಗಿ ಪರಿವರ್ತನೆಗೊಂಡು ಜಗತ್ತಿನಲ್ಲೆಲ್ಲಾ ಚಚರ್ೆಗೆ ಬಂದಿತ್ತು. ಕಥುವಾದಲ್ಲಿ ನಡೆದ ಅತ್ಯಾಚಾರದ ಸತ್ಯಾಸತ್ಯತೆ ಅರಿವಿದ್ದೂ ಅದನ್ನು ಹಿಂದೂ ವಿರೋಧಿಯಾಗಿ ಮಾರ್ಪಡಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಒಂದು ವರ್ಷದ ತಯಾರಿಯ ನಂತರ ಮಹಾರಾಷ್ಟ್ರದ ಕೋರೆಗಾಂವ್ನಲ್ಲಿ ದಲಿತರನ್ನು ಮರಾಠರ ವಿರುದ್ಧ ಕದನಕ್ಕೆ ಪ್ರೇರೇಪಿಸಿಬಿಟ್ಟಿದ್ದರು. ಉತ್ತರ ಮತ್ತು ದಕ್ಷಿಣ ಭಾರತವನ್ನು ಹಿಂದಿ ಮುಂದಿರಿಸಿಕೊಂಡು ಒಡೆಯಲು ಯತ್ನಿಸುವ ಇವರು, ಉತ್ತರದಲ್ಲಿ ಹಿಂದಿ ಭಾಷಿಗರಲ್ಲೇ ಒಡಕು ತರಲು ಯಶಸ್ವಿಯಾಗಿಬಿಟ್ಟಿದ್ದಾರೆ. ಒಟ್ಟಾರೆ ಪ್ರತೀ ಚುನಾವಣೆಗೂ ಮುನ್ನ ಯಾವುದಾದರೊಂದು ವಿಚಾರ ಹಿಡಿದು ಜನಮಾನಸದಲ್ಲಿ ಉತ್ಪಾತವೆಬ್ಬಿಸುವುದರಲ್ಲಿ ಮತ್ತು ಅದನ್ನು ದಕ್ಕಿಸಿಕೊಳ್ಳುವುದರಲ್ಲಿ ಅವರು ಚಾಲಾಕಿಗಳೇ ಸರಿ. ಮೊದಲ ಬಾರಿಗೆ ಅವರಿಗೊಂದು ಬಲವಾದ ಪ್ರತಿರೋಧ ಶಬರಿಮಲೆಯ ರೂಪದಲ್ಲಿ ಎದುರಾಗಿದೆ!


ಹೌದು. ಬಂಗಾಳದಲ್ಲಿ ಎಡಪಂಥೀಯರಿಗೆ ಸಿಂಗೂರ್ ಯಾವ ಪರಿಣಾಮವನ್ನುಂಟುಮಾಡಿತ್ತೋ. ಕೇರಳದಲ್ಲಿ ಶಬರಿಮಲೆ ನಿಸ್ಸಂಶಯವಾಗಿ ಅಂಥದ್ದೇ ಫಲಿತಾಂಶ ಕೊಡಲಿದೆ. ಜನಾಕ್ರೋಶ ಕೇರಳದಲ್ಲಿ ಮುಗಿಲು ಮುಟ್ಟಿದೆ. ಕೇರಳ ಮೊದಲಿನಿಂದಲೂ ವಿಚಿತ್ರವಾದ ನಾಡೇ. ಆಚರಣೆಗಳ ವಿಚಾರದಲ್ಲಿ ಅದು ಬಲು ನಿಷ್ಠುರ. ಆಚರಣೆಯ ಹಿಂದಿನ ತತ್ತ್ವಗಳು, ಕಲ್ಪನೆಗಳು ಇವೆಲ್ಲವೂ ಮರೆತೇ ಹೋಗಿ ಬಾಹ್ಯಾಚರಣೆಗಳನ್ನು ಮಾತ್ರ ಬಲು ಜೋರಾಗಿಯೇ ಉಳಿಸಿಕೊಂಡು ಬಿಡುತ್ತದೆ ಅದು. ಮತ್ತಿದು ಈಗಿನ ಕಥೆಯಲ್ಲ. ಶಂಕರಾಚಾರ್ಯರ ಕಾಲದಿಂದಲೂ ನಡೆದು ಬಂದಿದೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಶಂಕರರು ಸಂನ್ಯಾಸ ಸ್ವೀಕಾರ ಮಾಡಿದ್ದು, ತನ್ನ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಿದ್ದು ಎಲ್ಲವೂ ಸ್ಥಳೀಯರ ಬಲವಾದ ಪ್ರತಿರೋಧವನ್ನು ಎದುರಿಸಿದ ನಂತರವೇ! ಸ್ವಾಮಿ ವಿವೇಕಾನಂದರಿಗೆ ಅಲ್ಲಿನ ದೇವಸ್ಥಾನಗಳಲ್ಲಿ ಬ್ರಾಹ್ಮಣ ಸಂನ್ಯಾಸಿಯಲ್ಲ ಎಂಬ ಕಾರಣಕ್ಕೇ ಪ್ರವೇಶವಿರಲಿಲ್ಲ. ವಿವೇಕಾನಂದರ ಕುರಿತಂತಹ ಜೀವನ ಚರಿತ್ರೆಯಲ್ಲಿ ಹಿಂದೂಧರ್ಮದ ಮೇಲಿನ ಅವರ ಅಪಾರ ಜ್ಞಾನವನ್ನು ಗಮನಿಸಿದ ಸ್ಥಳೀಯ ರಾಜಮನೆತನದವರು ದೇವಸ್ಥಾನದೊಳಗೆ ಪ್ರವೇಶ ಕೊಡಿಸಬೇಕೆಂದು ಸಾಕಷ್ಟು ಪ್ರಯುತ್ನ ಪಟ್ಟರೆಂಬ ಉಲ್ಲೇಖ ಬಂದಿದೆ. ಹಾಗಂತ ಆ ರಾಜರು ತಮ್ಮ ಮನೆಗೇ ವಿವೇಕಾನಂದರನ್ನು ಬಿಟ್ಟುಕೊಳ್ಳಲಿಲ್ಲವೆಂದು ಕುಹಕವಾಡುವುದನ್ನು ಮರೆಯುವುದಿಲ್ಲ. ಹೀಗಾಗಿಯೇ ಸ್ವಾಮಿ ವಿವೇಕಾನಂದರು ಕೇರಳವನ್ನು ಹುಚ್ಚಾಸ್ಪತ್ರೆ ಎಂದು ಜರಿದಿದ್ದು. ಇಂತಹ ಕೇರಳದಲ್ಲಿ ಇದ್ದ ಮೇಲು-ಕೀಳು ಭಾವನೆಯನ್ನು ಹೋಗಲಾಡಿಸಲು ಆನಂತರ ನಾರಾಯಣ ಗುರುಗಳೇ ಬರಬೇಕಾಯ್ತು. ಅವರೂ ಕೂಡ ಈ ಪದ್ಧತಿಯನ್ನು ವಿರೋಧಿಸಿದ್ದು ಇರುವ ಮಾರ್ಗವನ್ನು ಪ್ರತಿರೋಧಿಸಿ ಅಲ್ಲ, ಬದಲಿಗೆ ಹೊಸದೇ ಮಾರ್ಗವನ್ನು ರೂಪಿಸಿಕೊಳ್ಳುವ ಮೂಲಕ. ಅಂದರೆ ಒಂದಂತೂ ಸತ್ಯ ಯಾವ ಬದಲಾವಣೆಯೂ ಕೇರಳದಲ್ಲಿ ಸಲೀಸಾಗಿ ಬರಲಾರದು. ಅದಕ್ಕೊಂದು ಸುದೀರ್ಘ ಹೋರಾಟ ನಡೆಯಲೇಬೇಕು. ಶಬರಿಮಲೆ ಅಂಥದ್ದೇ ಹೋರಾಟವೊಂದಕ್ಕೆ ಮುನ್ಸೂಚನೆಯಾಗಬಲ್ಲದಾ ಎಂದು ಕಾದುನೋಡಬೇಕಿದೆ ಅಷ್ಟೇ!

ಆದರೆ ಭಾರತದಲ್ಲಿರುವ ಎಡಪಂಥೀಯರು ಸಭ್ಯ ಚಚರ್ೆಗೆ ಎಂದೂ ಅವಕಾಶ ಮಾಡಿಕೊಟ್ಟವರೇ ಅಲ್ಲ. ಅವರನ್ನೆದುರಿಸಲೆಂದೇ ನಿಮರ್ಾಣಗೊಂಡಿರುವ ಕೆಲವು ಕಟ್ಟರ್ ಬಲಪಂಥೀಯರಿಗೆ ಅವರದ್ದೇ ಚಾಳಿ ಮೈಗೂಡಿದೆ. ಹೀಗಾಗಿ ಸದ್ಯದ ಮಟ್ಟಿಗಂತೂ ಸುಲಲಿತವಾದ ಚಚರ್ೆ ನಡೆಯವುದು ಅಸಾಧ್ಯವೇ ಸರಿ. ಅಂಥದ್ದೊಂದು ಚಚರ್ೆಗೆ ಭೂಮಿಕೆ ನಿಮರ್ಿಸಿಕೊಡಬೇಕಾದವರು ಭಿನ್ನವಾದ ಆಲೋಚನೆಯ ಅನುಸರಣೆಗೆ ನಿಂತಿದ್ದಾರೆ ಎನಿಸುತ್ತಿದೆ. ಅದು ಸತ್ಯವೂ ಹೌದು. ಸದ್ಯದ ಅವಶ್ಯಕತೆ ಭಾರತವನ್ನು ತುಂಡು ಮಾಡಲು ಕಾತರಿಸುತ್ತಿರುವ ಎಡಪಂಥೀಯ ವಿಚಾರಧಾರೆಗಳನ್ನು ಹೊತ್ತು ಮೆರೆಸುತ್ತಿರುವ ಅರ್ಬನ್ ನಕ್ಸಲರನ್ನು ಮಟ್ಟ ಹಾಕುವುದೇ ಆಗಿದೆ. ಹೀಗಾಗಿ ಕಾಲದ ಕರೆಗೆ ತಕ್ಕಂತೆ ಸಮಾಜ ಹೊರಡುತ್ತಿದ್ದರೆ ತಾಟಸ್ಥ್ಯ ತಳೆಯುವುದು ಬಲು ಒಳಿತು!


ಅಚ್ಚರಿಯೇನು ಗೊತ್ತೇ? ಮೂರು ದಿನಗಳ ಪ್ರಬುದ್ಧರ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿರುವ ಮೋಹನ್ ಭಾಗವತರು ಶಬರಿಮಲೆಯ ವಿಚಾರವಾಗಿ ಭಿನ್ನವಾದ ರಾಗವೊಂದನ್ನು ಹಾಡಿದ್ದಾರೆ. ಹಿಂದೂಗಳ ವಿಚಾರವಾಗಿ ಧಾಮರ್ಿಕ ನಿರ್ಣಯಗಳನ್ನು ಕೈಗೊಳ್ಳುವಾಗ ಅದು ನ್ಯಾಯಾಲಯದ ಹೊರಗೆ, ಸಂತರ ನಡುವೆ ಆಗಬೇಕೆಂಬ ಹೇಳಿಕೆ ನೀಡಿದ್ದಾರೆ. ಭಿನ್ನ ಭಿನ್ನ ಜಾತಿಗಳಲ್ಲಿ ಹರಿದು ಹಂಚಿರುವ, ಪೀಠಗಳ ಕಾದಾಟದಲ್ಲಿ ತೊಡಗಿರುವ, ಅಖಾಡಗಳ ನಡುವೆ ಶಕ್ತಿಯನ್ನು ತೋರ್ಪಡಿಸಲು ಗುದ್ದಾಡುವ ಸಂತರುಗಳ ಏಕತೆಯನ್ನು ತರುವುದು ಸದ್ಯದ ಮಟ್ಟಿಗೆ ಸಾಧ್ಯವಿದೆಯೇ? ಹಾಗೇನಾದರೂ ಹಿಂದೂಗಳು ತಮ್ಮ ಧಾಮರ್ಿಕ ವಿಚಾರಗಳನ್ನು ಸಂತರ ಬಳಿ ಒಯ್ಯುವುದಾದರೆ ಮುಸಲ್ಮಾನರ ಷರಿಯಾ ಕಾನೂನನ್ನು ವಿರೋಧಿಸುವ ಅಧಿಕಾರ ನಮಗುಳಿಯುವುದೇ? ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಆದರೆ ಒಂದಂತೂ ಸತ್ಯ. ಶಬರಿಮಲೆಯ ಈ ಹೋರಾಟ ಬರಲಿರುವ ದಿನಗಳಲ್ಲಿ ಮಹತ್ವದ ಕೆಲವು ಬದಲಾವಣೆಗಳನ್ನು ತರಲಿದೆ. ಮೊದಲನೆಯದು, ಸರಸಂಘ ಚಾಲಕರ ಮಾತನ್ನೇ ಮುನ್ಸೂಚನೆಯೆಂದು ಭಾವಿಸುವುದಾದರೆ ಹಿಂದೂ ಧಾಮರ್ಿಕ ನಿರ್ಣಯಗಳನ್ನು ಕೈಗೊಳ್ಳಲು ಮಹಂತರದ್ದೇ ಒಂದು ತಂಡ ರಚನೆಯಾದೀತು. ಕುಂಭಮೇಳವೂ ಹತ್ತಿರದಲ್ಲೇ ಇರುವುದರಿಂದ ಈ ಬಾರಿಯ ಕುಂಭದಲ್ಲೇ ಇಂಥದ್ದೊಂದು ಚಚರ್ೆ ನಡೆದರೆ ಅಚ್ಚರಿ ಪಡಬೇಕಿಲ್ಲ. ಎರಡನೆಯದು, ಇನ್ನು ಮುಂದೆ ಸವರ್ೋಚ್ಚ ನ್ಯಾಯಾಲಯ ಹಿಂದೂಗಳ ವಿಚಾರವಾಗಿ ಯಾವುದಾದರೂ ನಿರ್ಣಯ ಕೊಡುವ ಮುನ್ನ ನೂರು ಬಾರಿ ಯೋಚಿಸಲಿದೆ. ಮುಸಲ್ಮಾನರು ಬೀದಿಗೆ ಬಂದುಬಿಡುತ್ತಾರೆನ್ನುವ ಕಾರಣಕ್ಕೆ ಹೆದರಿಕೊಂಡು ಅನೇಕ ಸಂಗತಿಗಳನ್ನು ಹೇಳಲು ಹಿಂದೇಟು ಹಾಕುತ್ತಿದ್ದ ನ್ಯಾಯಪೀಠವು ಇನ್ನು ಮುಂದೆ ಹಿಂದೂಗಳ ಕುರಿತಂತೆಯೂ ಅಂಥದ್ದೇ ಧೋರಣೆ ತಾಳಲಿದೆ. ಶಬರಿಮಲೆಗೆ ಉಂಟಾದ ಪ್ರತಿರೋಧ ಆ ಬಗೆಯ ಭೀತಿಯನ್ನು ಹುಟ್ಟಿಸಿರುವುದಂತೂ ಹೌದು. ಬರಿಯ ಸುಪ್ರೀಂಕೋಟರ್್ ಅಷ್ಟೇ ಅಲ್ಲ. ಮೊದಲ ಬಾರಿಗೆ ಕೇರಳದ ಮುಸಲ್ಮಾನರು ಅದೆಷ್ಟು ಭೀತಿಗೊಳಗಾಗಿದ್ದಾರೆಂದರೆ ಶಬರಿಮಲೆ ಒಳನುಸುಳಲು ಯತ್ನಿಸುತ್ತಿದ್ದ ರೆಹಾನಾಳನ್ನು ಮುಸ್ಲೀಂ ಮತದಿಂದಲೇ ಹೊರದಬ್ಬಿದ್ದೇವೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ಒಂದು ರೀತಿಯಲ್ಲಿ ಉತ್ತಮ ಬೆಳವಣಿಗೆಯೇ. ಮೂರನೆಯದಾಗಿ, ಸಾರ್ವಜನಿಕರ ಈ ಆಕ್ರೋಶದ ಅಲೆ ಕೇರಳದಲ್ಲಿ ಎಡಪಂಥೀಯ ಪಕ್ಷಗಳಿಗೆ ಸರಿಯಾದ ಪಾಠ ಕಲಿಸಲಿದೆ. ಹಿಂದೂಗಳನ್ನು ಮನಸೋ ಇಚ್ಛೆ ದಂಡಿಸುತ್ತಿದ್ದ, ನಡುರಸ್ತೆಯಲ್ಲೇ ಕೊಲೆಗೈಯ್ಯುತ್ತಿದ್ದ ಎಡಪಂಥೀಯರ ಅಟ್ಟಹಾಸ ಇನ್ನು ಮರೆಯಾಗಲಿದೆ. ಅಷ್ಟೇ ಅಲ್ಲ. ಶಬರಿಮಲೆಯ ಈ ಕಿಡಿ ಅಯ್ಯಪ್ಪ ಭಕ್ತರೇ ಹೆಚ್ಚಿರುವ ದಕ್ಷಿಣ ಭಾರತವನ್ನು ಕಾಡ್ಗಿಚ್ಚಾಗಿ ಆವರಿಸಿಕೊಳ್ಳುವಂತೆ ಮಾಡುವಲ್ಲಿ ಎಲ್ಲರೂ ಸಕ್ರಿಯರಾಗುತ್ತಿರುವುದರಿಂದ ಚುನಾವಣೆಯ ಫಲಿತಾಂಶಗಳು ಖಂಡಿತವಾಗಿಯೂ ಏರುಪೇರಾಗಲಿವೆ. ಇನ್ನು ಕೊನೆಯದಾಗಿ ಜನಿವಾರ ಹಾಕಿ, ರಾಮ-ಕೃಷ್ಣರ ನಾಮ ಜಪಿಸುತ್ತಾ ಹಿಂದೂವಾದಿ ಎಂದು ಸಾಬೀತುಪಡಿಸಿಕೊಳ್ಳಲು ಹೆಣಗಾಡುತ್ತಿದ್ದ ರಾಹುಲ್ ಮತ್ತು ಕಾಂಗ್ರೆಸ್ಸು ಶಬರಿಮಲೆಯ ವಿಚಾರದಲ್ಲಿ ಒಂದು ನಿಲುವಿಗೆ ಅಂಟಿಕೊಳ್ಳಲಾಗದೇ ದ್ವಂದ್ವದಲ್ಲಿ ಹೆಣಗಾಡುತ್ತಿದ್ದಾರೆ.

ಒಟ್ಟಾರೆ ಅಯ್ಯಪ್ಪ ದೇಗುಲ ಪ್ರವೇಶ ಎಂಬ ವಿಚಾರ ರಾಷ್ಟ್ರ ಮಟ್ಟದಲ್ಲಿ ತನ್ನದ್ದೇ ಆದ ಬದಲಾವಣೆಗಳನ್ನು ಖಂಡಿತ ತರಲಿದೆ; ಕಾದು ನೋಡೋಣ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top