National

ಎಡಪಂಥದ ಅಂತ್ಯಸಂಸ್ಕಾರಕ್ಕೆ ಕ್ಷಣಗಣನೆ!

ಕೇರಳದ ಶಬರಿಮಲೆ ಪ್ರಕರಣ ಹೊಸದೊಂದು ದಿಕ್ಕು ಪಡೆದಿದೆ. ಕಮ್ಯುನಿಸ್ಟ್ ಸಕರ್ಾರ ಹಿಂದೂಗಳ ಭಾವನೆಯನ್ನು ಗೌರವಿಸುತ್ತದೆ ಎಂಬ ಕಲ್ಪನೆಯನ್ನಿಟ್ಟುಕೊಂಡಿದ್ದೇ ಮೂರ್ಖತನ. ಸದಾ ಕಾಲ ಆಳ್ವಿಕೆ ನಡೆಸಲು ಅವರಿಗಿದ್ದ ಏಕೈಕ ಮಾರ್ಗವೆಂದರೆ ಹಿಂದೂಗಳ ಶ್ರದ್ಧೆಯನ್ನು ನಾಶ ಮಾಡುವುದು ಮಾತ್ರ. ಈ ಮಾರ್ಗವನ್ನು ಭಾರತದ ಆಳ್ವಿಕೆಗೆಂದು ಬಂದ ಮುಸಲ್ಮಾನರೂ ಆನಂತರ ಕ್ರಿಶ್ಚಿಯನ್ನರೂ ಅನುಸರಿಸಿದ್ದರು. ಮುಸಲ್ಮಾನರು ಆಕೃತಿ ಧ್ವಂಸಗಳಿಗೆ ಕೈ ಹಾಕಿದರೆ ಕ್ರಿಶ್ಚಿಯನ್ನರು ಮಾನಸಿಕ ಪರಿವರ್ತನೆಗೆ ಪ್ರಯತ್ನ ಮಾಡಿ ಹಿಂದೂ ಶಾಸ್ತ್ರಗ್ರಂಥಗಳನ್ನೇ ಅಪದ್ಧವೆಂದು ಸಾಬೀತುಪಡಿಸುವ ಕಪಟ ನೀತಿ ಅನುಸರಿಸಿದರು. ಕಮುನಿಸ್ಟರದ್ದು ಮತ್ತೊಂದು ವಿಧಾನ. ಹಿಂದೂಗಳು ಮಾಡುವುದೆಲ್ಲವನ್ನೂ ತಪ್ಪೆಂದು ಹೇಳುತ್ತಾ ಅನ್ಯರಲ್ಲಿರುವ ಅದಕ್ಕಿಂತಲೂ ಕೆಟ್ಟದಾದ ಆಚರಣೆಗಳನ್ನು ಬಾಯ್ಮುಚ್ಚಿಕೊಂಡು ಒಪ್ಪಿಕೊಳ್ಳುವ ಠಕ್ಕ ಮನಸ್ಥಿತಿ ಅವರದ್ದು. ಈ ಕಾರಣಕ್ಕಾಗಿಯೇ ಅನೇಕ ಬಾರಿ ಕಮ್ಯುನಿಸ್ಟರ ಆಳ್ವಿಕೆಯಲ್ಲಿರುವ ಹಿಂದೂಗಳು ಆಚರಣೆಯನ್ನು ಉಳಿಸಿಕೊಳ್ಳುತ್ತಾರಾದರೂ ಆಂತರಿಕವಾಗಿ ದೇಶಭ್ರಷ್ಟರೇ ಆಗಿರುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಗಲ್ಲಿಗಲ್ಲಿಗಳಲ್ಲಿಯೂ ಕಾಳಿಮಂದಿರವಿದೆ ನಿಜ. ಆದರೆ ಹೃದಯದಲ್ಲಿರಬೇಕಾಗಿದ್ದ ಕಾಳಿ ಸ್ವರೂಪಿಣಿ ಭಾರತಮಾತೆ ಮಾತ್ರ ಅವರೊಳಗಿಲ್ಲ. ಕೇರಳದ ಕಥೆ ಭಿನ್ನವೇನಲ್ಲ. ಉತ್ತರಭಾರತೀಯರು ಕೇರಳಕ್ಕೆ ಹೋದರೆ ನಿಜವಾದ ಭಾರತವಿರುವುದು ಕೇರಳದಲ್ಲೇ ಎಂದು ಉದ್ಗರಿಸುತ್ತಾರೆ. ಅವರ ವೇಷಭೂಷಣ, ದೇವಸ್ಥಾನಗಳಲ್ಲಿ ಮಡಿವಂತಿಕೆಯ ಆಚರಣೆ ಇವೆಲ್ಲವನ್ನೂ ಕಂಡರೆ ಎಂಥವರೂ ರೋಮಾಂಚಿತರಾಗುತ್ತಾರೆ. ಆದರೆ ಪ್ರತ್ಯಕ್ಷವಾದ ರಾಷ್ಟ್ರಭಕ್ತಿಯ ವಿಚಾರಕ್ಕೆ ಬಂದಾಗ ಇದೇ ಆಚರಣೆನಿರತ ಹಿಂದೂಗಳು ಇಷ್ಟೇ ಕಟ್ಟರ್ ಆಗಿ ವ್ಯವಹರಿಸುತ್ತಾರೆಂಬ ನಂಬಿಕೆ ಖಂಡಿತ ಇಲ್ಲ. ಇದು ಕಮ್ಯುನಿಸ್ಟ್ ಆಡಳಿತದ ಪ್ರಭಾವ. ರಾಮನನ್ನು ಪ್ರಶ್ನಿಸುವ ಬುದ್ಧಿಜೀವಿ ಭಗವಾನ್ ಇತರ ಮತೀಯರನ್ನು ಮುಟ್ಟಲಾರ. ಇವರೆಲ್ಲರ ಉದ್ದೇಶವಿರುವುದು ಹಿಂದೂಗಳನ್ನು ಅವಮಾನಗೊಳಿಸುತ್ತಾ ಅವರೊಳಗೆ ಅಪರಾಧಿ ಪ್ರಜ್ಞೆಯನ್ನು ತುಂಬುವುದು ಮಾತ್ರ. ಶತಶತಮಾನಗಳಿಂದಲೂ ಹೀಗಾಗಿರುವುದರಿಂದಲೇ ಹಿಂದುವಾದವನು ತನ್ನ ತಾನು ಹಿಂದುವೆಂದು ಕರೆದುಕೊಳ್ಳಲು ಹೆಣಗಾಡುತ್ತಿದ್ದಾನಲ್ಲದೇ ಹಿಂದೂ ವಿಚಾರಧಾರೆಗಳಿಗೋಸ್ಕರ ಬಲವಾಗಿ ನಿಲ್ಲುವಾಗ ಅಳುಕಿನಿಂದ ಕೂಡಿದವನಾಗಿರುತ್ತಾನೆ.

ವಿಷಯಕ್ಕೆ ಬಂದುಬಿಡುತ್ತೇನೆ. ಶಬರಿಮಲೆ ಕೋಟ್ಯಂತರ ಜನ ದಕ್ಷಿಣ ಭಾರತೀಯ ಹಿಂದೂಗಳ ಆರಾಧ್ಯಕೇಂದ್ರ. 48 ದಿನಗಳ ಅತ್ಯಂತ ಕಟ್ಟುನಿಟ್ಟಾದ ವ್ರತವನ್ನು ಮಾಡಿ ಇರುಮುಡಿಯನ್ನು ಹೊತ್ತು ಶಬರಿಮಲೆಯ 18 ಮೆಟ್ಟಿಲುಗಳನ್ನು ಏರಿ ಅಯ್ಯಪ್ಪನ ದರ್ಶನ ಮಾಡುವಾಗ ಭಕ್ತ ಭಾವುಕನಾಗಿಬಿಟ್ಟಿರುತ್ತಾನೆ. ಅವನಿಗೆ ಅಯ್ಯಪ್ಪನೊಂದಿಗಿನ ತನ್ನ ಸಂಬಂಧ ಅತ್ಯಂತ ಪ್ರಾಚೀನವಾದ್ದು ಎನಿಸಿಬಿಟ್ಟಿರುತ್ತದೆ. ಅಯ್ಯಪ್ಪನ ಕೃಪೆಗಾಗಿ ತನ್ನೆಲ್ಲಾ ಚಟಗಳನ್ನು ಬದಿಗಿಟ್ಟು ಒಳಿತಿಗಾಗಿ ಪ್ರಾಥರ್ಿಸುವ ಅವನ ಪರಿಯೇ ಅನನ್ಯವಾದ್ದು. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಹಿಂದೂಗಳು ರೂಪಿಸಿಕೊಂಡ ಶ್ರೇಷ್ಠ ಮಾರ್ಗ ಭಗವಂತನದ್ದು. ಬರೀ ಶಬರಿಮಲೆ ಅಷ್ಟೇ ಅಲ್ಲ. ಧರ್ಮಸ್ಥಳಕ್ಕೆ ನಡೆದುಕೊಳ್ಳುವ ಅನೇಕ ಭಕ್ತರು ಮಂಜುನಾಥನ ಮೇಲೆ ಆಣೆ ಹಾಕಿದರೆ ಒಂದು ಹೆಜ್ಜೆ ಮುಂದಿಡಲಾರರು. ಅಣ್ಣಪ್ಪನ ಮೇಲಿನ ಭಯ-ಭಕ್ತಿಗಳು ಎಂಥವೆಂದರೆ ಒಂದು ಸಣ್ಣ ತಪ್ಪೂ ಕೂಡ ಅವರನ್ನು ಗಾಬರಿಗೊಳಪಡಿಸಲು ಸಾಕು. ಇದು ಪ್ರತಿಯೊಬ್ಬರೂ ತಮಗೆ ತಾವೇ ನೈತಿಕ ಚೌಕಟ್ಟನ್ನು ಹಾಕಿಕೊಳ್ಳಲು ನಾವು ಮಾಡಿಕೊಂಡಿರುವ ವ್ಯವಸ್ಥೆ. ಈ ವ್ಯವಸ್ಥೆಗೆ ಸಂಬಂಧಿಸಿದಂತೆ ಅನೇಕ ಶ್ರದ್ಧಾನಂಬಿಕೆಗಳು ಇವೆ. ಆ ನಂಬಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದಲೇ ಆ ದೇವರ ಕುರಿತಂತೆ ಭಯ-ಭಕ್ತಿಗಳು ಹಾಗೆಯೇ ಉಳಿದು ನೈತಿಕವಾಗಿ ಗಟ್ಟಿಯಾಗಿರುವಂತಹ ಸುಂದರ ಸಮಾಜ ರೂಪಿಸಲು ಸಹಾಯವಾಗುತ್ತದೆ. ಶಬರಿಮಲೆ ಅಯ್ಯಪ್ಪ ಈ ಬಗೆಯ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಒಂದು ಸಮಾನಾಂತರ ಸಕರ್ಾರ ಎಂದರೆ ತಪ್ಪಾಗಲಾರದು.

ಕೇರಳದ ಕಮ್ಯುನಿಸ್ಟರಿಗೆ ಇದೇ ಸಮಸ್ಯೆ. ಎಲ್ಲಿಯವರೆಗೂ ಶಬರಿಮಲೆ ಬಲವಾಗಿರುತ್ತದೆಯೋ ಅಲ್ಲಿಯವರೆಗೂ ಹಿಂದುತ್ವದ ಪಸೆ ಆರದೇ ಉಳಿದಿರುತ್ತದೆ. ಮತ್ತು ಶಬರಿಮಲೆ ಕೇರಳಕ್ಕೆ ಸೀಮಿತವಾದ ಮಂದಿರವಲ್ಲ, ಅದು ಇಡಿಯ ದಕ್ಷಿಣ ಭಾರತಕ್ಕೆ ಕೇಂದ್ರವಾಗಿರುವಂಥದ್ದು. ಜಾತಿ-ಮತ-ಪಂಥಗಳನ್ನು ಮರೆತು ಎಲ್ಲರೂ ಒಟ್ಟಾಗಿ ನಡೆದುಕೊಳ್ಳುವ ಮಂದಿರ ಅದು. ಅಲ್ಲಿನ ಶ್ರದ್ಧೆ ಹೆಚ್ಚಾಗುತ್ತಿದ್ದಂತೆ ದಕ್ಷಿಣಭಾರತದ ಹಿಂದೂ ಸಂಘಟನೆಯೂ ಬಲವಾಗುತ್ತಿದೆ ಎಂಬುದು ದೃಗ್ಗೋಚರವಾದ ಅಂಶ. ರಾಮಮಂದಿರ ಉತ್ತರಭಾರತವನ್ನು ಒಂದಾಗಿಸಬಲ್ಲಂತಹ ಸಾಮಥ್ರ್ಯ ಹೊಂದಿದ್ದಂತೆ ಶಬರಿಮಲೆ ದಕ್ಷಿಣದ ಹಿಂದೂಗಳನ್ನು ಒಟ್ಟಾಗಿಸಬಲ್ಲುದು. ಹೀಗಾಗಿಯೇ ಅದರ ಪಾವಿತ್ರ್ಯವನ್ನು ನಾಶಮಾಡುವ ಪ್ರಯತ್ನ ಕಮ್ಯುನಿಸ್ಟ್ ಸಕರ್ಾರದ್ದು. ನಾನು ಸುಪ್ರೀಂಕೋಟರ್್ ಕೊಟ್ಟಿರುವ ನಿರ್ಣಯದ ವಿಶ್ಲೇಷಣೆ ಮಾಡಲು ಹೊರಡುವುದಿಲ್ಲ. ಆದರೆ ಅದನ್ನು ಆಚರಣೆಗೆ ತರುವಲ್ಲಿ ಕಮ್ಯುನಿಸ್ಟ್ ಸಕರ್ಾರ ತೋರುತ್ತಿರುವ ಧಾವಂತದ ಕುರಿತಂತೆ ಖಂಡಿತವಾಗಿಯೂ ಅಚ್ಚರಿಯಿದೆ. ಮಸೀದಿಗಳ ಮೇಲಿನ ಅಜಾನ್ ಕೂಗುವುದಕ್ಕೆ ನಿಷೇಧ ಹೇರುವ ಸುಪ್ರೀಂಕೋಟರ್ಿನ ನಿರ್ಣಯಗಳೂ ಇವೆ. ಅದರ ಕುರಿತಂತೆ ಯಾರಿಗೂ ಆಸಕ್ತಿಯಿಲ್ಲ, ಆತುರವೂ ಇಲ್ಲ. ಶಬರಿಮಲೆಯ ಪಾವಿತ್ರ್ಯವನ್ನು ನಾಶಮಾಡುವುದರ ಕುರಿತಂತೆ ಮಾತ್ರ ಎಲ್ಲಿಲ್ಲದ ಉತ್ಸಾಹ. ಪೊಲೀಸರೇ ಭಕ್ತರ ವೇಷ ಹಾಕಿಕೊಂಡು ಬಿಂದು ಮತ್ತು ಕನಕ ಇಬ್ಬರನ್ನೂ ಯಾರಿಗೂ ಗೊತ್ತಾಗದಂತೆ ನಡುರಾತ್ರಿಯಲ್ಲಿ ಒಯ್ದು, ಮಂದಿರದೊಳಕ್ಕೆ ಪ್ರವೇಶ ಕೊಡಿಸಿಬಿಟ್ಟಿದ್ದೇವೆ ಎಂದು ಕೇಕೆಹಾಕುವ ವಿಕೃತ ಮನಸ್ಥಿತಿ ಇದೆಯಲ್ಲಾ ಇದು ಮತಾಂಧ ಶಕ್ತಿಗಳಿಗಿಂತಲೂ ಕೆಟ್ಟದ್ದು. ಅದಕ್ಕೆ ಮುನ್ನ ಕೇರಳದಲ್ಲಿ ಜ್ಯೋತಿ ಕೈಲಿ ಹಿಡಿದು 750 ಕಿ.ಮೀಗಳ ಉದ್ದಕ್ಕೂ ನಡೆಸಿದ ಮಾನವ ಸರಪಳಿ ಅಭೂತಪೂರ್ವವಾಗಿತ್ತು. ಅದಕ್ಕೆ ಪ್ರತಿಯಾಗಿ ಕೇರಳದ ಮುಖ್ಯಮಂತ್ರಿ ಇಡಿಯ ಸಕರ್ಾರವನ್ನು ಬಳಸಿ ಅನೇಕ ಸಂಘಟನೆಗಳಿಗೆ ಆಮಿಷವೊಡ್ಡಿ 650 ಕಿ.ಮೀ ಉದ್ದದ ಸ್ತ್ರೀಗೋಡೆಯನ್ನು ನಿಮರ್ಾಣ ಮಾಡುವ ಹಠಕ್ಕೆ ಬಿದ್ದರಷ್ಟೇ ಅಲ್ಲ; ಅದನ್ನು ಮಾಡಿಯೂ ತೋರಿದರು. ಆದರೆ ಕಥೆಯಲ್ಲಿ ನಿಜವಾದ ತಿರುವು ಈಗ ಬಂದಿದೆ. ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂನ ಮಹಿಳಾ ವಿಭಾಗ ಈ ಗೋಡೆ ನಿಮರ್ಾಣ ಮಾಡುವಲ್ಲಿ ಬಹುವಾಗಿ ಆಸ್ಥೆ ವಹಿಸಿತ್ತು. ಸ್ತ್ರೀ ರಕ್ಷಣೆಗೆ ತಾವಿದ್ದೇವೆ ಎನ್ನುವ ಅರ್ಥದ ಅವರ ಹೇಳಿಕೆಗಳು ಸಂಚಲನವನ್ನೂ ಉಂಟು ಮಾಡಿದ್ದವು. ನಿಜವಾದ ಸಮಸ್ಯೆ ಆಗಿದ್ದು ಬಿಂದು ಮತ್ತು ಕನಕ ಕದ್ದು ಮುಚ್ಚಿ ಮಂದಿರ ಪ್ರವೇಶಿಸಿದಾಗ ಮತ್ತು ಹಾಗೆ ಪ್ರವೇಶಿಸುವಾಗ ಕಾಲಿಗೆ ಚಪ್ಪಲಿ ಹಾಕಿಕೊಂಡು ಇರುಮುಡಿಯನ್ನು ಹೊರದೇ, ಯಾವ ವ್ರತವನ್ನೂ ಮಾಡದೇ ದೇವಸ್ಥಾನ ಹೊಕ್ಕುವ ಮುನ್ನ ಮಾಂಸಾಹಾರವನ್ನು ಸೇವಿಸಿ ಆನಂತರ ದರ್ಶನ ಪಡೆದಿದ್ದು ಪಿಣರಾಯಿ ಬೆಂಬಲಕ್ಕಿದ್ದ ಹೆಣ್ಣುಮಕ್ಕಳನ್ನು ರೊಚ್ಚಿಗೆಬ್ಬಿಸಿದೆ. ಎಸ್ಎನ್ಡಿಪಿಯ ಮಹಿಳಾ ಘಟಕದ ಅಧ್ಯಕ್ಷೆ ವನಿತಾ ಮ್ಯಾಥಿಲ್ ಉರಿದು ಬಿದ್ದಿದ್ದಾಳೆ. ಪಿಣರಾಯಿ ನಮ್ಮ ಶ್ರದ್ಧೆಯನ್ನು ಕದಡಲೆಂದೇ ಈ ಕೆಲಸ ಮಾಡುತ್ತಿದ್ದಾನೆಂದು ಕೂಗಾಡಿದ್ದಲ್ಲದೇ ತಮ್ಮೆಲ್ಲರನ್ನೂ ಮೋಸಗೊಳಿಸಿ ಆತ ಮಹಿಳಾಗೋಡೆ ನಿಮರ್ಾಣಕ್ಕೆ ಕರೆದದ್ದು ಎಂದು ರೊಚ್ಚಿಗೆದ್ದು ಕೂಗಾಡಿದ್ದಾಳೆ. ಪಿಣರಾಯಿ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತೇನೆಂದು ಹೇಳಿರುವುದರಿಂದ ನಿಜವಾದ ಆಟ ಈಗ ಶುರುವಾಗಲಿದೆ.

ಆದರೆ ದುರದೃಷ್ಟಕರ ಸಂಗತಿ ಏನು ಗೊತ್ತೇ?! ಶಬರಿಮಲೆಗೆ ಹೆಣ್ಣುಮಕ್ಕಳ ಪ್ರವೇಶಕ್ಕೆ ಅನುಮತಿ ಕೊಡಬೇಕೆಂದು ಪಿಣರಾಯಿ ಪರವಾಗಿ ದನಿಯೆತ್ತಿದ ಬುಖರ್ಾಧಾರಿ ಮುಸಲ್ಮಾನ ಹೆಣ್ಣುಮಕ್ಕಳು ಮಹಿಳಾ ಗೋಡೆಯಲ್ಲಿ ಕಂಡುಬಂದದ್ದು. ಪಾಪ, ಬುಖರ್ಾ ತೆಗೆದಿಡಲು ಅನುಮತಿಯಿಲ್ಲದ, ಮಸೀದಿಯೊಳಗೆ ಹೋಗಲು ಸಾಧ್ಯವೇ ಇಲ್ಲದ ಈ ಹೆಣ್ಣುಮಕ್ಕಳು ತಮ್ಮ ಹಕ್ಕನ್ನು ಉಳಿಸಿಕೊಳ್ಳಲು ಹೋರಾಟ ಮಾಡುವುದು ಬಿಟ್ಟು ಹಿಂದೂಹೆಣ್ಣುಮಕ್ಕಳ ವಿಚಾರಕ್ಕೆ ಬಂದಿದ್ದಾರೆ. ಇದು ಸಾಕಷ್ಟು ಚಚರ್ೆಗೆ ಒಳಗಾಗುತ್ತಿರುವುದರಿಂದ ಪಿಣರಾಯಿಗೆ ಬರಲಿರುವ ದಿನಗಳು ಕರಾಳವೇ. ಬಂಗಾಳ ಕೈತಪ್ಪಿತು, ತ್ರಿಪುರಾದಲ್ಲಿ ನಾಶವಾಯ್ತು, ಈಗ ಕೇರಳದ ಸರದಿ. ಎಡಪಂಥ ಮೋದಿಯ ಯುಗದಲ್ಲೇ ಅಂತ್ಯಕಾಣಲಿದೆ ಎನಿಸುತ್ತಿದೆ. ಇದು ರಾಷ್ಟ್ರೀಯತೆಯ ಪರ್ವ ಕಾಲ.

-ಚಕ್ರವರ್ತಿ ಸೂಲಿಬೆಲೆ

2 Comments

2 Comments

 1. ಮದ್ದೂರು..

  January 8, 2019 at 11:39 am

  ವನಿತಾ ಮದಿಲ್ ಗೆ ನಿನ್ತವರೆಲ್ಲಾ supporters ಅಲ್ಲ. ಆದರೆ ಸರ್ಕಾರದ ಕೈ ಕೆಳಗೆ ಕೆಲಸ ಮಾಡವ್ರು ಯಾವುದೆ ಪಕ್ಷದವ್ರಾದ್ರೂ ಇಷ್ಟ ಇಲ್ಲದಿದ್ದರೂ ಭಾಗವಹಿಸಬೇಕಾಗುತ್ತದೆ. ಉದಾ! ಪಂಚಾಯತ್ ಕೆಲ್ಸದವರು, teachers, contract workers, pension ಪಡೆಯೋರು… …..

 2. Yoganad Chavan

  January 10, 2019 at 2:15 pm

  i support yuva live ….all members i am
  From BIJAPUR BASAVAN BAGEWADI…i support modi please add me any modi team.or namo again group it’s helpful me for those who are miss understood modi i support modi and nation development person

Leave a Reply

Your email address will not be published. Required fields are marked *

Most Popular

To Top