National

ಉಪಗ್ರಹ ಉರುಳಿಸುವ ಮೂಲಕ ಜಗತ್ತಿನ ಭೂಪಟದಲ್ಲಿ ಸ್ಥಾನಪಡೆದೆವು!!

ಅಂತರಿಕ್ಷದಲ್ಲಿ ಉಪಗ್ರಹವೊಂದನ್ನು ಹೊಡೆದು ಬಿಸಾಡಿ ಭಾರತ ಮಾಡಿದ ಸಾಧನೆ ಅಪ್ರತಿಮವಾದ್ದು. ಇದು ಅನೇಕ ಕಾರಣಗಳಿಗೆ ಭಾರತದ ಪಾಲಿಗೆ ಒಂದು ಮೈಲಿಗಲ್ಲು. ವೈಜ್ಞಾನಿಕ ಔನ್ನತ್ಯದ ದೃಷ್ಟಿಯಿಂದಲಂತೂ 300 ಕಿ.ಮೀ ದೂರದ ಅಂತರಿಕ್ಷಕಾಯವೊಂದನ್ನು ಕರಾರುವಾಕ್ಕಾಗಿ ಹೊಡೆದು ಉರುಳಿಸುವುದು ಸಾಮಾನ್ಯದ ಕೆಲಸವಲ್ಲ. ಇಷ್ಟು ದಿನ ಎರಡು ನಿಮಿಷದಲ್ಲಿ ಆಗುತ್ತಿದ್ದುದು ಮ್ಯಾಗಿ ಮಾತ್ರ. ಮೂರು ನಿಮಿಷದಲ್ಲಿ ಭಾರತ ಉಪಗ್ರಹವೊಂದನ್ನೇ ಹೊಡೆದುರುಳಿಸಿದೆ ಎಂದರೆ ಅಸಾಮಾನ್ಯ ಸಾಧನೆ. ನಮ್ಮೆಲ್ಲ ವಿಜ್ಞಾನಿಗಳಿಗೂ ಅಭಿನಂದನೆ ಸಲ್ಲಿಸಲೇಬೇಕು! ಆದರೆ ಜಾಗತಿಕ ಮಟ್ಟದಲ್ಲಿ ಗಮನಿಸುವುದಾದರೆ ನಾವು ಒಂದು ಸುದೀರ್ಘ ನೆಗೆತವನ್ನೇ ಮಾಡಿದ್ದೇವೆ. ಅಂತರಿಕ್ಷವೆನ್ನುವುದು ಯಾವ ದೇಶಕ್ಕೂ ಸೇರದ ಜಾಗ. ಇಲ್ಲಿ ವಿಹರಿಸುವ ಉಪಗ್ರಹಗಳನ್ನು ಯಾರೂ ತಡೆಯೊಡ್ಡುವಂತಿಲ್ಲ. ಹಾಗೊಂದು ನಿಯಮ ಮಾಡಿಕೊಂಡಿದ್ದು ಅಮೇರಿಕಾ ಮತ್ತು ರಷ್ಯಾ. ಅದೂ ಉಪಗ್ರಹಗಳನ್ನು ಹೊಡೆಯುವ ಸಾಮಥ್ರ್ಯವನ್ನು ಈ ಎರಡೂ ರಾಷ್ಟ್ರಗಳು ಪಡೆದುಕೊಂಡ ನಂತರವೇ. ಅಂತರಿಕ್ಷಕ್ಕೆ ಸಂಬಂಧಪಟ್ಟಂತಹ ಯಾವ ನಿಯಮಗಳನ್ನು ರೂಪಿಸುವುದಿದ್ದರೂ ಈ ಎರಡೂ ರಾಷ್ಟ್ರಗಳೇ ಪದೇ-ಪದೇ ಸೇರುತ್ತಿದ್ದವು. ಅವರು ಹೇಳಿದ್ದನ್ನು ಜಗತ್ತು ಅನುಸರಿಸಬೇಕಿತ್ತು ಏಕೆಂದರೆ ಇನ್ನುಳಿದ ಯಾವ ರಾಷ್ಟ್ರಕ್ಕೂ ಈ ತಂತ್ರಜ್ಞಾನದ ಹಿಡಿತವಿರಲಿಲ್ಲ. ಸಹಜವಾಗಿಯೇ ಈ ಎರಡೂ ರಾಷ್ಟ್ರಗಳು ಅಂತರಿಕ್ಷದ ಮೇಲೆ ತಮ್ಮ ಸ್ವಾಮಿತ್ವವನ್ನು ಸ್ಥಾಪಿಸಿದ್ದವು. ಆಗ ಈ ಸಂಪ್ರಭುತೆಯಲ್ಲಿ ತನ್ನದ್ದೂ ಪಾತ್ರವಿರಬೇಕೆಂದು ನಿಶ್ಚಯಿಸಿದ್ದು ಚೀನಾ. ಎರಡು ಬಾರಿ ಪ್ರಯತ್ನಿಸಿ ಸೋತ ನಂತರ ಮೂರನೇ ಬಾರಿ ಈ ಪ್ರಯೋಗದಲ್ಲಿ ಯಶಸ್ವಿಯಾದ ಚೀನಾ ಜಗತ್ತಿನ ವಿರೋಧವನ್ನೆದುರಿಸಿದ್ದು ನಿಜವಾದರೂ ಈ ತಂತ್ರಜ್ಞಾನವನ್ನಂತೂ ವಶಪಡಿಸಿಕೊಂಡುಬಿಟ್ಟಿತ್ತು. ಹೀಗಾಗಿ ಅಮೇರಿಕಾ-ರಷ್ಯಾಗಳು ಅನಿವಾರ್ಯವಾಗಿ ಅಂತರಿಕ್ಷಕ್ಕೆ ಸಂಬಂಧಪಟ್ಟ ಸಭೆಗಳಿಗೆ ಚೀನಾವನ್ನು ಆಹ್ವಾನಿಸಲೇಬೇಕಾಯ್ತು. ಆಗೆಲ್ಲಾ ಚೀನಾ ನಮ್ಮನ್ನು ಗಣಿಸುತ್ತಲೂ ಇರಲಿಲ್ಲ. ನಾವು ಚೀನಾದ ಮುಂದೆ ಜಾಗತಿಕವಾಗಿ ಕುರಿಯಂತಾಗಿಬಿಟ್ಟಿದ್ದೆವು. ಚೀನಾ ಈ ಪ್ರಯೋಗ ಮಾಡಿದ ಮೂರೇ ವರ್ಷಗಳಲ್ಲಿ ಭಾರತದ ವಿಜ್ಞಾನಿಗಳು ಈ ಸಾಮಥ್ರ್ಯ ತಮಗೂ ಇದೆ ಎಂದು ತೋರುವ ಕೃತಕ ಪ್ರಯೋಗಗಳನ್ನು ಮಾಡಿದರು. ಯಶಸ್ವಿಯೂ ಆಗಿದ್ದರು. ಆದರೆ ಅದನ್ನು ಅಧಿಕೃತವಾಗಿ ಪ್ರದಶರ್ಿಸುವ ಪ್ರಯತ್ನಕ್ಕೆ ಮನಮೋಹನ್ ಸಿಂಗ್ ಒಪ್ಪಿಗೆ ಕೊಡಲೇ ಇಲ್ಲ. ಹೀಗಾಗಿ ತಾಕತ್ತು ಇರುವಾಗಲೂ ನಾವು ಅವಡುಗಚ್ಚಿಯೇ ಕುಳಿತುಕೊಂಡಿರಬೇಕಾಯ್ತು!


ಮೋದಿ ಬಂದೊಡನೆ ವಿಜ್ಞಾನಿಗಳ ಮನಸ್ಸಲ್ಲಿ ಮತ್ತೆ ಆಸೆ ಚಿಗುರೊಡೆಯಿತು. ಅವರು ಮೋದಿಯನ್ನು ಸಂಪಕರ್ಿಸಿ ಅನುಮತಿ ಕೇಳಿದರು. ಸೂಕ್ತ ಸಮಯ ನೋಡಿ ಈ ಪ್ರಯತ್ನಕ್ಕೆ ಹಸಿರು ನಿಶಾನೆ ಮೋದಿ ತೋರಿದ ನಂತರ ನೂರಕ್ಕೂ ಹೆಚ್ಚು ವಿಜ್ಞಾನಿಗಳು ಹಗಲೂ-ರಾತ್ರಿ ದುಡಿದು ಒಂದೂವರೆ ವರ್ಷಗಳ ನಂತರ ಈ ಕನಸನ್ನು ಸಾಕಾರಗೊಳಿಸಿಕೊಂಡರು. ಈ ಪ್ರಯತ್ನದಲ್ಲೂ ನಾವು ಎಚ್ಚರಿಕೆವಹಿಸಿದ್ದೆವು. ಅಂತರಿಕ್ಷದಲ್ಲಿ ನಮ್ಮ ಈ ಕದನದಿಂದ ಉಪಗ್ರಹ ಕಸ ನಿಮರ್ಾಣವಾಗದಂತೆ ಎಚ್ಚರಿಕೆ ವಹಿಸಿದ್ದೆವು ಮತ್ತು ಯಾವ ಅಂತರಿಕ್ಷ ಸಂಬಂಧಿ ಕಾನೂನುಗಳೂ ಕೂಡ ಮುರಿಯಲ್ಪಡದಂತೆ ಈ ತಂತ್ರಜ್ಞಾನವನ್ನು ನಮ್ಮದಾಗಿಸಿಕೊಂಡಿದ್ದೆವು. ಹೀಗಾಗಿ ನಮ್ಮ ವಿರುದ್ಧ ತಿರುಗಿ ಬೀಳಲು ಮಿತ್ರ ರಾಷ್ಟ್ರವಾದ ಅಮೇರಿಕಾ-ರಷ್ಯಾ ಬಿಡಿ ಶತ್ರು ರಾಷ್ಟ್ರವಾದ ಚೀನಾಕ್ಕೂ ಯಾವ ಅಂಶ ದಕ್ಕಿರಲಿಲ್ಲ. ಈ ಪ್ರಯೋಗ ಏಕೆ ಮಾಡಿದಿರೆಂದು ಕೇಳುವ ನೈತಿಕ ಪ್ರಜ್ಞೆಯೂ ಚೀನಾಕ್ಕಿರಲಿಲ್ಲ. ಮೋದಿ ಭಾರತೀಯ ವಿಜ್ಞಾನಿಗಳ ಮೂಲಕ ಈ ದೇಶವನ್ನು ಜಾಗತಿಕ ಭೂಪಟದಲ್ಲಿ ಗುರುತಿಸುವಂತೆ ಮಾಡಿಬಿಟ್ಟಿದ್ದರು. ಇದಾದ ಎರಡೇ ದಿನಗಳಲ್ಲಿ ರಷ್ಯಾ ಅಂತರಿಕ್ಷ ಕಾನೂನುಗಳಿಗೆ ಸಂಬಂಧಪಟ್ಟಂತಹ ಸಭೆಯೊಂದಕ್ಕೆ ಭಾರತವನ್ನು ಆಹ್ವಾನಿಸಿದ್ದು ಚೀನಾದ ಸಾರ್ವಭೌಮತೆಗೆ ತಂದ ಬಲುದೊಡ್ಡ ಹೊಡೆತವೇ ಸರಿ.


ಮೋದಿ ಅಷ್ಟೆಲ್ಲ ಪ್ರಯತ್ನಗಳನ್ನು ಅಲ್ಲಿ ಮಾಡುತ್ತಿದ್ದರೆ ಇಲ್ಲಿ ಪ್ರತಿಪಕ್ಷಗಳು ಮತ್ತೊಂದೇ ರಾಗ ಹಾಡುತ್ತಿವೆ. ಅವರಿಗೆ ಈ ಪ್ರಯೋಗ ನಡೆಸಿದ ಸಮಯದ ಬಗ್ಗೆ ಆಕ್ರೋಶವಿದೆ. ಚುನಾವಣೆಗೂ ಕೆಲವೇ ದಿನಗಳು ಬಾಕಿ ಇರುವಾಗ ಮೋದಿ ಈ ಪ್ರಯೋಗವನ್ನು ಮಾಡಿಸಬಾರದಿತ್ತು ಎಂಬುದು ಅವರ ಈ ಆಕ್ರೋಶಕ್ಕೆ ಕಾರಣ. ಶತ್ರು ರಾಷ್ಟ್ರಗಳು ನಮ್ಮ ಚುನಾವಣೆಯ ದಿನಾಂಕ ನೋಡಿ ಆಕ್ರಮಣ ಮಾಡುವುದಿಲ್ಲವೆಂಬ ಸಾಮಾನ್ಯಜ್ಞಾನ ಅವರಿಗಿರಬೇಕಿತ್ತು. ಅಲ್ಲದೇ ಯಾವ ಸಂದರ್ಭದಲ್ಲಾದರೂ ರಾಷ್ಟ್ರದ ಘನತೆಯನ್ನು ಔನ್ನತ್ಯಕ್ಕೇರಿಸುವ ಕೆಲಸ ಯಾರಾದರೂ ಮಾಡಲೇಬೇಕೆಂಬ ರಾಷ್ಟ್ರಪ್ರಜ್ಞೆಯಾದರೂ ಅವರಿಗಿರಬೇಕಿತ್ತು. ಹೇಳಿದೆನಲ್ಲಾ, ನರೇಂದ್ರಮೋದಿಯವರನ್ನು ವಿರೋಧಿಸುವ ಭರದಲ್ಲಿ ಇವರೆಲ್ಲಾ ದೇಶವನ್ನೇ ವಿರೋಧಿಸಲಾರಂಭಿಸಿದ್ದಾರೆ. ಇಷ್ಟಕ್ಕೂ ಈ ಒಂದು ತಂತ್ರಜ್ಞಾನ ಪಡೆಯುವ ಮೂಲಕ ಭಾರತ ಗುಟುರು ಹಾಕಿರುವುದು ಪಾಕಿಸ್ತಾನದ ವಿರುದ್ಧ ಅಲ್ಲವೇ ಅಲ್ಲ. ಉಪಗ್ರಹ ತಂತ್ರಜ್ಞಾನದಲ್ಲಿ ಸಾಮಾನ್ಯ ಹೆಜ್ಜೆಯನ್ನೂ ಬಲವಾಗಿ ಊರದಿರುವ ಪಾಕಿಸ್ತಾನ ನಮಗೊಂದು ಸವಾಲೇ ಅಲ್ಲ. ಸದ್ಯದ ಸವಾಲು ಏಷ್ಯಾದಲ್ಲಿ ಚೀನಾವೇ. ಚೀನಾವನ್ನು ನಮ್ಮೆದುರಿಗೆ ಪ್ರಭಾವಶಾಲಿಯಲ್ಲ ಎಂದು ತೋರಿಸಿದಷ್ಟು ಏಷ್ಯಾದಲ್ಲಿ ನಮ್ಮ ಸಾಮಥ್ರ್ಯ ಹೆಚ್ಚುತ್ತಲೇ ಹೋಗುತ್ತದೆ. ಮತ್ತು ಇದು ಈ ಭಾಗದ ನಿವರ್ಿವಾದಿತ ಚೌಕಿದಾರನನ್ನಾಗಿ ಭಾರತವನ್ನು ರೂಪಿಸಿಬಿಡುತ್ತದೆ. ಒಮ್ಮೆ ಭಾರತ ಈ ಸ್ಥಾನಕ್ಕೇರಿತೆಂದರೆ ವಿಶ್ವದ ಎಲ್ಲ ರಾಷ್ಟ್ರಗಳು ಅನಿವಾರ್ಯವಾಗಿ ಪ್ರತಿಯೊಂದು ವಿಚಾರಕ್ಕೂ ಭಾರತವನ್ನೇ ಅವಲಂಬಿಸಬೇಕಾದ ಸ್ಥಿತಿ ನಿಮರ್ಾಣವಾಗುತ್ತದೆ. ಅದು ಜಗತ್ತಿಗೆ ಅಚ್ಛೇದಿನ್ ಆಗಿ ರೂಪುಗೊಳ್ಳಲಿದೆ ಎಂಬುದರಲ್ಲಿ ಎಲ್ಲರಿಗೂ ನಂಬಿಕೆಯಿದೆ. ನರೇಂದ್ರಮೋದಿ ಅಂಥದ್ದೊಂದು ವಿಶ್ವಗುರು ಭಾರತವನ್ನು ರೂಪಿಸಲು ಹೆಣಗಾಡುತ್ತಿದ್ದಾರೆ. ಇತ್ತ ಪ್ರತಿಪಕ್ಷಗಳು ಹೇಗಾದರೂ ನರೇಂದ್ರಮೋದಿಯವರನ್ನು ಕೆಳಗಿಳಿಸಿ ಅಧಿಕಾರ ಕಸಿದುಬಿಡಬೇಕೆಂದು ಹಾತೊರೆಯುತ್ತಿದ್ದಾವೆ.


ಈ ಎಲ್ಲಾ ಪ್ರಯತ್ನಗಳ ಅರಿವಿದ್ದೂ ದೇಶಕ್ಕೆ ನಷ್ಟವಾದರೂ ಚಿಂತೆಯಿಲ್ಲ ನರೇಂದ್ರಮೋದಿಯವರನ್ನು ಕುಚರ್ಿಯಿಂದ ಕೆಳಗಿಳಿಸಬೇಕೆನ್ನುವ ಈ ಮಾನಸಿಕ ಸ್ಥಿತಿಯವರನ್ನು ದೇಶಭಕ್ತರೆನ್ನಬೇಕೋ ದ್ರೋಹಿಗಳೆನ್ನಬೇಕೋ ನಾವುಗಳೇ ನಿರ್ಧರಿಸಬೇಕಷ್ಟೇ!

– ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top