National

ಉಗ್ರ ಮೌಲಾನಾ ಮಸೂದ್ ಅಜರ್ ಪಾಕಿಸ್ತಾನಿ ಸೈನಿಕರ ರಕ್ಷಣೆಯಲ್ಲಿ!!

ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಪಾಕಿಸ್ತಾನದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಸ್ವೀಕರಿಸುತ್ತಿರುವ ಮಾಹಿತಿ ಹೊರಬಿದ್ದಿದೆ. ಅಜರ್ ಗೆ ಮೂತ್ರಪಿಂಡದ ರೋಗವಿದೆ. ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ಆತನಿಗೆ ಡಯಾಲಿಸೀಸ್ ನಡೆಯುತ್ತಿದೆ.

ಇತ್ತೀಚೆಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮೊಹಮ್ಮದ್ ಖುರೇಷಿ ಮಸೂದ್ ಅಜರ್ ಪಾಕಿಸ್ತಾನದಲ್ಲೇ ಇರುವುದಾಗಿಯೂ ಆತನ ಆರೋಗ್ಯ ಹದಗೆಟ್ಟಿರುವುದಾಗಿಯೂ ಹೇಳಿಕೆ ನೀಡಿದ್ದರು! ಆತ ಹೊರಗೆ ನಡೆಯಲೂ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದಾನೆಂದು ಕರುಣೆಯ ಮಾತುಗಳನ್ನಾಡಿದ್ದರು.

ಉಗ್ರನೊಬ್ಬನನ್ನು ಪಾಕಿಸ್ತಾನದ ಸೇನೆ ಸುರಕ್ಷಿತವಾಗಿ ಇಡಲು ಪ್ರಯತ್ನ ಪಡುತ್ತಿರುವುದು ಪಾಕಿಸ್ತಾನದ ಕುನೀತಿಯನ್ನು ತೋರುತ್ತದೆ. ಪುಲ್ವಾಮಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ಸಂಬಂಧ ತೀರಾ ಹದಗೆಟ್ಟಿದೆ. ಒಂದೆಡೆ ಶಾಂತಿಯ ಮಾತನಾಡುತ್ತಿರುವ ಪಾಕಿಸ್ತಾನ ಮತ್ತೊಂದೆಡೆ ಪುಲ್ವಾಮಾ ದಾಳಿಯನ್ನು ನಡೆಸಿ 44 ಜನ ಯೋಧರ ಸಾವಿಗೆ ಕಾರಣನಾದ, ಮೋಸ್ಟ್ ವಾಂಟೆಡ್ ಉಗ್ರನೊಬ್ಬನನ್ನು ರಕ್ಷಿಸುತ್ತಿದೆ!

ಇಡಿಯ ಜಗತ್ತು ಪಾಕಿಸ್ತಾನಕ್ಕೆ ಭಯೋತ್ಪಾದನೆಯನ್ನು ಮಟ್ಟಹಾಕುವಲ್ಲಿ ಸಹಕರಿಸಬೇಕೆಂದು ಕೇಳುತ್ತಿದ್ದರೂ ಪಾಕಿಸ್ತಾನ ಶಾಂತಿಯ ಮುಖವಾಡ ಹಾಕಿಕೊಂಡೇ ಭಯೋತ್ಪಾದಕರನ್ನು ರಕ್ಷಿಸುವ, ಅವರಿಗೆ ಸಹಾಯ ಒದಗಿಸುವ ಕೆಲಸ ಮಾಡುತ್ತಿದೆ. ಮಸೂದ್ ಅಜರ್ ನನ್ನು, ಜೈಶ್-ಎ-ಮೊಹಮ್ಮದ್ ಅನ್ನು ನಿಷೇಧಿಸಬೇಕೆಂಬ ಕೂಗು ಜಗತ್ತಿನ ಎಲ್ಲೆಡೆಯಿಂದ ಕೇಳಿಬರುತ್ತಿದೆ!!

Click to comment

Leave a Reply

Your email address will not be published. Required fields are marked *

Most Popular

To Top