International

ಇಸ್ಲಾಂ ಜಗತ್ತಿನ ಅತ್ಯಂತ ಭೀಕರ ಅತ್ಯಾಚಾರದ ಆಟ – ತಹರ್ರುಶ್!

2013 ರಲ್ಲಿ ಕೈರೊವಿನಲ್ಲಿ ಈಜಿಪ್ಟಿನ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ತಮಗಾದ ಅನ್ಯಾಯದ ವಿರುದ್ಧ ದೂರು ನೀಡಿದ್ದರು. ಇಬ್ಬರೂ ಒಂದೇ ರೀತಿಯ ಹಿಂಸೆಗೆ ಒಳಗಾಗಿದ್ದರು. ಜನಸಂದಣಿಯ ನಡುವೆಯೇ ಅವರ ಮೇಲೆ ದೈಹಿಕವಾಗಿ ದಾಳಿ ನಡೆಸಲಾಗಿತ್ತು!!

ಹೌದು! ಇದೊಂದು ಅತ್ಯಾಚಾರದ ಆಟ. ಇದರ ಹೆಸರು ತಹರ್ರುಶ್ ಎಂದು. ಈಜಿಪ್ಟ್ ಮತ್ತು ಹಲವು ಅರಬ್ ದೇಶಗಳಲ್ಲಿ ಈ ಕೆಟ್ಟ ಆಟ ಜಾರಿಯಲ್ಲಿದೆ. ಹೆಣ್ಣುಮಕ್ಕಳನ್ನು ಒಂದಷ್ಟು ಮುಸಲ್ಮಾನ ಪುರುಷರು ಸುತ್ತುವರಿದು ಅವರಿಗೆ ಚಿತ್ರಹಿಂಸೆ ನೀಡುತ್ತಾರೆ. ಲೂಟಿ, ಅತ್ಯಾಚಾರ ಎಲ್ಲವನ್ನೂ ವ್ಯವಸ್ಥಿತವಾಗಿಯೇ ಮಾಡುತ್ತಾರೆ.

ಹೆಣ್ಣುಮಗುವನ್ನು ಒಂದಷ್ಟು ಜನ ಸುತ್ತುವರೆದು ಹಿಂಸಿಸುತ್ತಾರೆ, ಎರಡನೆಯ ಸುತ್ತಿನಲ್ಲಿರುವವರು ಅದನ್ನು ನೋಡಿ‌ ಸಂತೋಷಿಸುತ್ತಾರೆ ಮತ್ತು ಕೊನೆಯ ಸುತ್ತಿನಲ್ಲಿರುವವರು ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನ ಮಾಡುತ್ತಿರುತ್ತಾರೆ!! ಮಹಿಳೆ ತಾನು ಬಿಡಿಸಿಕೊಳ್ಳಲು ಕೂಗುತ್ತಿದ್ದರೂ ಯಾರಿಗೂ ಕೇಳುವ ಅವಕಾಶವಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಪ್ಪಿಸಿಕೊಳ್ಳುವುದು ಸಾಹಸವೇ!!

ಈ ಕೆಟ್ಟ ಆಟದ ವಿರುದ್ಧ ದೂರುಗಳು ದಾಖಲಾಗಿರುವುದು ಕಡಿಮೆಯೇ! ಈ ಕೃತ್ಯಕ್ಕೆ ಗುರಿಯಾಗಿರುವ ಮಹಿಳೆಯರ ಪ್ರಕಾರ ಪುರುಷರು 20 ರಿಂದ 30 ವಯಸ್ಸಿನವರು. ಹಲವು ಪ್ರಕರಣದಲ್ಲಿ ಯೋನಿಯೊಳಗೆ ಚಾಕು, ಕೋಲು ಮುಂತಾದ ಚೂಪಾದ ವಸ್ತುಗಳನ್ನು ಹಾಕಿ ಚಿತ್ರಹಿಂಸೆ ನೀಡಿದ ಉದಾಹರಣೆಯೂ ಇದೆ. ‘ಡೋಂಟ್ ವರಿ’, ‘ನಾನು ನಿನಗೆ ಸಹಾಯ ಮಾಡುತ್ತೇನೆ’ ಎಂದು ಹೇಳುತ್ತಲೇ ಈ ಕೃತ್ಯವನ್ನು ಎಸಗಿರುವುದನ್ನು ಮಹಿಳೆಯೊಬ್ಬರು ನೆನಪಿಸಿಕೊಂಡಿದ್ದಾರೆ. ಈಜಿಪ್ಟಿನಲ್ಲಿ 2012-2014 ರ ನಡುವೆ ಸುಮಾರು 500 ಪ್ರಕರಣಗಳು ದಾಖಲಾಗಿವೆ.

2013 ರಲ್ಲಿ ಈಜಿಪ್ಟ್ ನಲ್ಲಿ ಇದರ ವಿರುದ್ಧ ದನಿ ಎತ್ತಲಾಯಿತು. ಪ್ರತಿಭಟನೆಗಳು ನಡೆದವು. ಆದರೂ ಸರ್ಕಾರ ‘ದೊಡ್ಡ ದೊಡ್ಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರೇ ಈ ಘಟನೆಗೆ ಜವಾಬ್ದಾರಿ’ ಎಂಬ ಮಾತನ್ನು ಹೇಳಿಬಿಟ್ಟಿತು! 2014 ರಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡು ಕಾನೂನು ಕ್ರಮ ಕೈಗೊಳ್ಳುವ ಕುರಿತು ಸರ್ಕಾರ ಆಶ್ವಾಸನೆ ನೀಡಿತು. ಹಲವರನ್ನು ಹಿಡಿದು ಜೈಲಿಗೆ ತಳ್ಳಲಾಯ್ತು.

ಇಸ್ಲಾಂ ಜಗತ್ತಿನ ಅತ್ಯಂತ ಕರಾಳ ಮುಖವಿದು. ಸಮಾನತೆಯ ಬಗ್ಗೆ ಮಾತನಾಡುತ್ತಲೇ ಇಂತಹ ಅಪರಾಧವನ್ನು ತನ್ನೊಡಲೊಳಗೆ ಸೇರಿಸಿಕೊಂಡಿದೆ. ಮಹಿಳಾವಾದಿಗಳು, ಒಳ್ಳೆಯ ಚಿಂತನೆಗಳನ್ನು ಹೊತ್ತವರು ಈ ಹೇಯ ಕೃತ್ಯದ ವಿರುದ್ಧ ಸೆಟೆದು ನಿಲ್ಲಬೇಕು. ಇಂತಹ ಕೆಟ್ಟ ಪದ್ಧತಿ ಭಾರತಕ್ಕೆ ಕಾಲಿಡುವ ಸಾಧ್ಯತೆಯನ್ನು ಆದಷ್ಟೂ ತಡೆಯಬೇಕು. ಜಗತ್ತಿನೆಲ್ಲೆಡೆಯಿಂದ ಇದು ದೂರವಾಗಬೇಕು.

Click to comment

Leave a Reply

Your email address will not be published. Required fields are marked *

Most Popular

To Top