National

ಇನ್ನೆಷ್ಟು ದಿನ ಹಿಂದುಗಳು ಸಹಿಸಬೇಕು ಹೇಳಿ?!

ಶಬರಿಮಲೆಯ ಕುರಿತಂತೆ ಸುಪ್ರೀಂಕೋಟರ್ಿನ ತೀಪರ್ು ಹಿಂದೂಗಳಲ್ಲಿ ಅಸಮಾಧಾನ ಉಂಟು ಮಾಡಿರುವುದಂತೂ ಸತ್ಯ. ದೇವಸ್ಥಾನಕ್ಕೆ ಮಹಿಳೆಯರು ಹೋಗಬೇಕೋ ಬೇಡವೋ? ಎಂಬುದು ಚಚರ್ಾಸ್ಪದ ವಿಷಯ. ಅದನ್ನು ಈ ಧರ್ಮದ ಅಧ್ವಯರ್ುಗಳಾದ ಸಂತ ಮಹಂತರುಗಳೇ ಸೇರಿ ಚಚರ್ಿಸಿ ನಿರ್ಣಯಕ್ಕೆ ಬರಬೇಕು. ಆಚರಣೆಗಳು ಆಯಾ ಕಾಲಕ್ಕೆ ತಕ್ಕಂತೆ ಬದಲಾಗುತ್ತವೆ, ಬದಲಾಗಲೇಬೇಕು. ಹಿಂದೂಧರ್ಮದ ವೈಶಿಷ್ಟ್ಯವಂತೂ ಈ ಹಿಗ್ಗುವಿಕೆ ಮತ್ತು ಆನಂತರದ ಸ್ಥಿತಿ ಸ್ಥಾಪಕತ್ವ ಗುಣ. ನಮ್ಮ ಸ್ಮೃತಿಗಳ ಕಲ್ಪನೆಯೂ ಇದಕ್ಕೆ ಹತ್ತಿರವಾದ್ದೇ. ಭಿನ್ನ ಭಿನ್ನ ಸ್ಮೃತಿಗಳು ಬೇರೆ ಬೇರೆ ಕಾಲಘಟ್ಟದಲ್ಲ ಕಾಲಮಾನಕ್ಕೆ ತಕ್ಕಂತೆ ರೂಪುಗೊಂಡಿವೆ. ಈ ಆಧಾರದ ಮೇಲೆಯೇ ಬದಲಾವಣೆಗೆ ಕಾಲ ಕೂಡಿ ಬಂದಿದೆ ಎನಿಸಿದರೆ ಧಮರ್ಾಚಾರ್ಯರುಗಳು ಅದನ್ನು ಕೈಗೆತ್ತಿಕೊಳ್ಳುವುದು ಒಳಿತೇ. ಆದರೆ ಈಗಿನ ಪ್ರಶ್ನೆ ಅದಲ್ಲ. ಸವರ್ೋಚ್ಚ ನ್ಯಾಯಾಲಯ ಹಿಂದೂಗಳ ವಿಚಾರವಾದ ಚಚರ್ೆಗಳನ್ನು ಬಲುಬೇಗ ಸ್ವೀಕರಿಸುವುದಲ್ಲದೇ ವ್ಯತಿರಿಕ್ತವಾದ ನಿರ್ಣಯಗಳನ್ನು ಅಷ್ಟೇ ವೇಗವಾಗಿ ಕೊಟ್ಟುಬಿಡುತ್ತದೆ. ದೀಪಾವಳಿ ಬಂದೊಡನೆ ನ್ಯಾಯಾಲಯಕ್ಕೆ ಪಟಾಕಿಗಳಿಂದ ಪರಿಸರ ಮಾಲಿನ್ಯವಾಗುತ್ತದೆಂಬ ಕಠೋರ ಸತ್ಯ ಅರಿವಿಗೆ ಬಂದುಬಿಡುತ್ತದೆ. ಉಳಿದಾಗ ಅದು ಈ ಕುರಿತಂತೆ ತಲೆಯೂ ಕೆಡಿಸಿಕೊಳ್ಳುವುದಿಲ್ಲ. ಹೋಳಿ ಬಂದೊಡನೆ ನೀರು ಪೋಲು ಮಾಡುವುದು ಸರಿಯಲ್ಲವೆಂಬ ಸಾಮಾಜಿಕ ಕಳಕಳಿ ಸಮಾಜಕಮರ್ಿಗಳಿಗೂ ಮತ್ತು ನ್ಯಾಯಾಧೀಶರಿಗೂ ಏಕಕಾಲಕ್ಕೆ ಹೊರಹೊಮ್ಮುತ್ತದೆ. ಶಿಂಗ್ಣಾಪುರದ ಶನಿ ಮಂದಿರಕ್ಕೆ ಹೆಣ್ಣುಮಕ್ಕಳ ಪ್ರವೇಶಕ್ಕೆ ಕೋಟರ್ು ಆದೇಶಿಸುತ್ತದೆ. ಅದನ್ನು ಆಚರಣೆಗೆ ತರದೇ ಹೋದರೆ ನ್ಯಾಯಾಲಯದ ನಿಂದನೆಯಾಗುತ್ತದೆಂಬ ಎಚ್ಚರಿಕೆಯನ್ನೂ ಕೊಡುತ್ತದೆ. ಅತ್ತ ದಗರ್ಾದ ಪ್ರವೇಶಕ್ಕೆ ಕೂಗು ಕೇಳಿ ಬಂದಾಗ ನಿರ್ಣಯ ಪಾಲಿಸಲಾಗುತ್ತಿದೆಯೋ ಇಲ್ಲವೋ ಎಂಬ ಪರೀಕ್ಷಣೆಯ ಗೋಜಿಗೂ ಹೋಗುವುದಿಲ್ಲ. ಮಸೀದಿಗಳ ಹೊರಗಿನ ಲೌಡ್ ಸ್ಪೀಕರ್ಗಳಿಗೆ ನಿಷೇಧ ಹೇರಿದ ಕೋಟರ್ು ಅದನ್ನು ಆಚರಣೆಗೆ ತರದ ಸಕರ್ಾರಗಳು ನ್ಯಾಯಾಲಯ ವಿರೋಧಿ ಎಂದು ಹೇಳುವುದೇ ಇಲ್ಲ!


ಹಾಗಂತ ಇದು ನ್ಯಾಯಾಲಯದ್ದಷ್ಟೇ ಸಮಸ್ಯೆ ಅಲ್ಲ. ಒಂದಷ್ಟು ಸ್ವಯಂ ಸೇವಾ ಸಂಘಗಳು ಸುಧಾರಣೆಯ ಎಲ್ಲ ಪ್ರಯತ್ನಗಳನ್ನು ಹಿಂದೂಗಳ ಮೇಲೆಯೇ ಹೇರಲೆಂದು ಕಾಯುತ್ತ ಕುಳಿತಿರುತ್ತವೆ. ಏರ್ಟೆಲ್ ಕ್ರಿಸ್ಮಸ್ಗೆ, ಬಕ್ರೀದ್ಗೆ ಸಹಜವಾಗಿ ಶುಭಾಶಯ ಕೋರುತ್ತದೆ. ಆದರೆ ದೀಪಾವಳಿಗೆ ಮಾತ್ರ ಪಟಾಕಿಯಿಲ್ಲದ ದೀಪಾವಳಿ ಆಚರಿಸೋಣ ಎಂದು ಆದೇಶ ಕೊಡುತ್ತದೆ. ಈ ಅತಿರೇಕದ ದನಿ ಎಲ್ಲಾ ಕಡೆಯಿಂದಲೂ ಇದೆ. ಹಿಂದೂಧರ್ಮದ ವಿರುದ್ಧವಾಗಿ ಆಚರಣೆಗಳನ್ನು ಅವಹೇಳನ ಮಾಡುವ ಸಿನಿಮಾಗಳನ್ನು ಅಮೀರ್ಖಾನ್ನಂತವರು ಮಾಡುತ್ತಾರೆ ಮತ್ತು ಅದಕ್ಕೆ ಇಂಗ್ಲೀಷ್ ಪತ್ರಿಕೆಗಳು ವ್ಯಾಪಕ ಪ್ರಚಾರ ಕೊಟ್ಟು ಜಾಗತಿಕ ಮಟ್ಟದಲ್ಲಿ ಅದನ್ನು ಪ್ರಚುರ ಪಡಿಸುತ್ತವೆ. ಸ್ವಾತಂತ್ರ್ಯ ಬಂದ ಕಾಲದಿಂದಲೂ ಇದು ಸಹಜವೆಂಬಂತೆ ನಡೆದುಕೊಂಡು ಬಂದಿದೆ. ಹಿಂದೂಗಳ ವಿರೋಧದ ನಡುವೆಯೂ ಹಿಂದೂ ಕೋಡ್ ಬಿಲ್ ಅನ್ನು ಮುಲಾಜಿಲ್ಲದೇ ಜಾರಿಗೆ ತಂದ ಸಕರ್ಾರ ಮುಸಲ್ಮಾನರ ವಿಚಾರದಲ್ಲಿ ದಿವ್ಯಮೌನ ವಹಿಸಿತು. ಹೀಗಾಗಿಯೇ ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರವೂ ಮುಸ್ಲೀಂ ಹೆಣ್ಣುಮಕ್ಕಳನ್ನು ಟ್ರಿಪಲ್ ತಲಾಖಿನಿಂದ, ನಿಕಾಹ್ ಹಲಾಲಾದಿಂದ ರಕ್ಷಿಸಲು ಹೆಣಗಾಡಲಾಗುತ್ತಿದೆ. ಹಿಂದೂಗಳು ನಡೆಸುವ ಶಾಲೆಗಳ ಮೇಲೆ ಸಕರ್ಾರದ ಹಸ್ತಕ್ಷೇಪ ಜೋರಾಗಿಯೇ ಇದೆ. ಆದರೆ ಶಾಲೆಗಳು ಅಲ್ಪಸಂಖ್ಯಾತರಿಗೆ ಸೇರಿದ್ದಾದರೆ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ. ನಮ್ಮ ದೇವಸ್ಥಾನಗಳ ಆಡಳಿತ ವ್ಯವಸ್ಥೆಯನ್ನು ಸಕರ್ಾರ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಮಸೀದಿ ಮತ್ತು ಚಚರ್ುಗಳನ್ನು ಮುಟ್ಟಲೂ ಹೆದರುತ್ತದೆ. ವಿದ್ಯಾಥರ್ಿಗಳಿಗೆ ದೊರಕುವ ವಿದ್ಯಾಥರ್ಿ ವೇತನದಲ್ಲೂ ಅಪಾರ ತಾರತಮ್ಯ. ಅಲ್ಪಸಂಖ್ಯಾತರಿಗೆ ದೊರಕುವ ಸೌಲಭ್ಯದ ಹತ್ತನೇ ಒಂದು ಪಾಲು ಕೂಡ ಹಿಂದೂ ಎಂದು ಕರೆಸಿಕೊಂಡವನಿಗೆ ದೊರಕಲಾರದು. ಜಾತ್ಯತೀತತೆಯ ಆಧಾರದ ಮೇಲೆ ನಿಮರ್ಾಣಗೊಂಡಿರುವ ಸಂವಿಧಾನವನ್ನು ಅಡಿಪಾಯವಾಗಿರಿಸಿಕೊಂಡು ಬಹುಸಂಖ್ಯಾತರಿಗೆ ಇಷ್ಟೆಲ್ಲಾ ತಾರತಮ್ಯಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿಯೇ ಚುನಾವಣೆಗಳ ಹೊತ್ತಲ್ಲಿ ಸಮಾಜವೆಲ್ಲಾ ಜಾತಿ-ಜಾತಿಗಳಲ್ಲಿ ವಿಭಜನೆಗೊಳ್ಳುವುದಲ್ಲದೇ ಅಲ್ಪಸಂಖ್ಯಾತರದ್ದೊಂದು ಬಲವಾದ ಮತಬ್ಯಾಂಕ್ ನಿಮರ್ಾಣಗೊಳ್ಳಲು ಕಾರಣವಾಗಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಹಿಂದೂಧರ್ಮಕ್ಕೆ ಸೇರಿದವನು ಎಂದು ಹೇಳಿಕೊಳ್ಳಲು ಹೆಣಗಾಡಿ ಇದರೊಳಗಿನ ಪ್ರತಿಯೊಂದು ಜಾತಿಯವರೂ ತಮ್ಮದ್ದೇ ಒಂದು ಪ್ರತ್ಯೇಕ ಧರ್ಮ ಎಂದು ಕರೆದುಕೊಂಡರೆ ಅಚ್ಚರಿ ಪಡಬೇಕಿಲ್ಲ.

ಹೀಗಾಗಿಯೇ ಈಗ ಬಲವಾದ ಚಚರ್ೆ ಆರಂಭವಾಗಿದೆ. ಕಳೆದ ತಿಂಗಳು ದೆಹಲಿಯಲ್ಲಿ ಸಭೆ ಸೇರಿದ ಹಿಂದೂ ಸಮಾಜದ ಪ್ರಮುಖರೆಲ್ಲ ಸಕರ್ಾರದ ಮುಂದೆ ಹಿಂದೂ ಬೇಡಿಕೆಗಳನ್ನು ಮಂಡಿಸಿದ್ದಾರೆ. ಹಿಂದೂಸ್ತಾನದ ಜೀವನಾಡಿಯೇ ಹಿಂದೂ ಸಂಸ್ಕೃತಿಯಾದ್ದರಿಂದ ಹಿಂದೂಸ್ತಾನವನ್ನು ರಕ್ಷಿಸಲು ಈ ಸಂಸ್ಕೃತಿಯನ್ನು ಪೋಷಿಸಿ ಬೆಳೆಸುವುದು ಅತ್ಯವಶ್ಯಕ. ಹಾಗೆಂದೇ ಈ ತಂಡ ಬಲುವಿಶಿಷ್ಟವಾದ ಬೇಡಿಕೆಗಳನ್ನು ರಾಷ್ಟ್ರದ ಮುಂದಿರಿಸಿದೆ. ಸಂವಿಧಾನದಲ್ಲಿರುವ ಆಟರ್ಿಕಲ್ 26ರಿಂದ 30ರವರೆಗಿನ ನಿಯಮಾವಳಿಗಳಿಗೆ ತಿದ್ದುಪಡಿ ತಂದು ಅಲ್ಪಸಂಖ್ಯಾತರಿಗೆ ಮಾತ್ರ ದಕ್ಕುವ ಒಂದಷ್ಟು ವಿಶೇಷ ಸೌಲಭ್ಯಗಳನ್ನು ಅದರಲ್ಲೂ ಬಹುಮುಖ್ಯವಾಗಿ ಮಠ-ಮಂದಿರಗಳ ನಿರ್ವಹಣೆ, ಶೈಕ್ಷಣಿಕ ಸಂಸ್ಥೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಇವೆಲ್ಲವೂ ಸೇರಿದಂತೆ ಅನೇಕ ವಿಚಾರಗಳಲ್ಲಿ ಭೇದ ಹೋಗಲಾಡಿಸಲು ಈ ಪ್ರಯತ್ನವೇ ಮೊದಲಾಗಬೇಕೆಂದು ಬೇಡಿಕೆ ಮಂಡಿಸಲಾಗಿದೆ. ಡಾ. ಸತ್ಯಪಾಲ್ ಸಿಂಗ್ ಮತ್ತು ಸಯ್ಯದ್ ಶಹಬುದ್ದೀನರು ಬಹಳ ಹಿಂದೆಯೇ ಇಂಥದ್ದೊಂದು ಪ್ರಯತ್ನಕ್ಕೆ ವಿನಂತಿ ಮಾಡಿಕೊಂಡಿದ್ದರೂ ಈವರೆಗೂ ಇದರ ಕುರಿತಂತೆ ರಾಷ್ಟ್ರವ್ಯಾಪಿ ಚಚರ್ೆಯೂ ನಡೆದಿಲ್ಲ, ರಾಜಕೀಯ ಇಚ್ಛಾಶಕ್ತಿಯೂ ಕಂಡುಬಂದಿಲ್ಲ.


ಇನ್ನು ಲಾಭರಹಿತ ಸಂಸ್ಥೆಗಳಿಗೆ ವಿದೇಶದಿಂದ ಹಣ ಹರಿದು ಬರುತ್ತಿರುವುದರ ಕುರಿತಂತೆ ಈ ಸಂಘಟನೆ ದೇಶದ ಗಮನ ಸೆಳೆದಿದೆ. ವಿದೇಶೀ ಕೊಡುಗೆ ಕಾಯ್ದೆಯ ಮೂಲಕ ಬೇರೆ-ಬೇರೆ ರಾಷ್ಟ್ರದ ಜನರು ಈ ಸಂಸ್ಥೆಗಳಿಗೆ ದಾನ ಕೊಟ್ಟು ಅವುಗಳನ್ನು ಸಮಾಜ ಪರಿವರ್ತನೆಯ ನೆಪದಲ್ಲಿ ದೇಶ ವಿಭಜನೆಗೆ ಬಳಸುತ್ತಿರುವುದು ಕಣ್ಣೆದುರಿಗೆ ನಿಚ್ಚಳವಾಗಿ ಕಾಣುತ್ತಿದೆ. ಈ ಕಾಯ್ದೆಯ ಮುಖಾಂತರವೇ 2010-11 ರಲ್ಲಿ ಸುಮಾರು 10,000 ಕೋಟಿ ರೂಪಾಯಿ ಭಾರತಕ್ಕೆ ಹರಿದು ಬಂದಿತ್ತು. ಅಲ್ಲಿಂದಾಚೆಗೆ ಐದೇ ವರ್ಷಗಳಲ್ಲಿ ಇದು 18 ಸಾವಿರ ಕೋಟಿಯನ್ನು ದಾಟಿತ್ತು. ಈ ಹಣವನ್ನು ಪಡೆಯುವ ಸಂಸ್ಥೆಗಳು ಇಲ್ಲಿ ಭಿನ್ನ-ಭಿನ್ನ ದೇಶವಿರೋಧಿ ಚಟುವಟಿಕೆಗಳಿಗೆ ಅದನ್ನು ತಲುಪಿಸುವ ವ್ಯವಸ್ಥೆ ಮಾಡಿ ಭಾರತದ ವಿಭಜನೆಗೆ ಪರಿಪೂರ್ಣವಾದ ಯೋಜನೆ ಹಾಕಿಕೊಂಡಿದೆ. ಹೀಗಾಗಿ ವಿದೇಶದಲ್ಲಿರುವ ಭಾರತೀಯರು ಮಾತ್ರ ಹಣವನ್ನು ಕಳಿಸಬಹುದೆಂಬ ನಿಯಮ ಜಾರಿಗೆ ತರಬೇಕೆಂದು ಈ ತಂಡ ಕೇಳಿಕೊಂಡಿದೆ.

ಈ ಹಣದ ಪರಿಣಾಮವಾಗಿಯೇ ಹಿಂದೂಧರ್ಮದೊಂದಿಗೆ ಜಾಗತಿಕವಾದ ಯುದ್ಧವನ್ನೇ ನಡೆಸಲಾಗುತ್ತಿದೆ. ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅಜರ್ಿಗಳನ್ನು ಹಿಂದೂಧರ್ಮಕ್ಕೆ ಸಂಬಂಧ ಪಡದವರೆಲ್ಲಾ ಹಾಕುತ್ತಿರುವುದು ಈ ಹಣದ ಬಲದ ಮೇಲೆಯೇ! ಇದೇ ಹಣದ ಶಕ್ತಿಯನ್ನು ಬಳಸಿ ಮತಾಂತರದ ಪ್ರಕ್ರಿಯೆಯೂ ಜೋರಾಗಿ ನಡೆಯುತ್ತಿದೆ. ಅನ್ಯಮತೀಯ ಪೂಜಾ ಕೇಂದ್ರಗಳು ಅವರ ಅನುಯಾಯಿಗಳಿಲ್ಲದೆಡೆಯಲ್ಲೂ ಆಗಸಕ್ಕೆ ಮೈಚಾಚಿ ನಿಂತುಕೊಂಡಿರುವುದಕ್ಕೆ ಈ ಹಣವೇ ಮೂಲಸ್ರೋತ. ಹೀಗಾಗಿ ಕೇಂದ್ರ ಸಕರ್ಾರ ಸಾಂಪ್ರದಾಯಿಕ, ಸಾಂಸ್ಕೃತಿಕ ಹಾಗೂ ಧಾಮರ್ಿಕ ಪದ್ಧತಿಗಳ ಸಂರಕ್ಷಣೆ ಮತ್ತು ಸಾಂಸ್ಥಿಕ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಈ ತಂಡ ಕೇಳಿಕೊಂಡಿದೆ. ಹೀಗೆ ಮಾಡುವುದರಿಂದ ಮಾತ್ರ ಭಾರತ ವಿಶ್ವಸಂಸ್ಥೆಯ ಡಿಕ್ಲರೇಶನ್ ಆನ್ ದ ರೈಟ್ಸ್ ಆಫ್ ಇಂಡಿಜೀನಸ್ ಪೀಪಲ್ ಒಪ್ಪಂದಕ್ಕೆ ಸಹಿ ಹಾಕಿದ್ದಕ್ಕೂ ಸಾರ್ಥಕತೆ ಬರುತ್ತದೆ. ಸ್ಥಳೀಯರ ಜಾನಪದ, ಧಾಮರ್ಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಪಾರಂಪರಿಕ ವ್ಯವಸ್ಥೆಗಳನ್ನು ರಕ್ಷಿಸಲು ನಾವೀಗ ಕಾನೂನನ್ನೇ ತರಬೇಕಾಗಿದೆ. ಹಾಗಾದಾಗ ಮಾತ್ರ ಹಿಂದೂಗಳ ಇಂದಿನ ಸ್ಥಿತಿಗತಿಯನ್ನು ಕಾಯ್ದುಕೊಳ್ಳುವುದು ಸಾಧ್ಯವಾಗುತ್ತದೆ. ಇನ್ನು ಸಂವಿಧಾನದ ಆಟರ್ಿಕಲ್ 370ರ ಕಾರಣದಿಂದಾಗಿ ಕಶ್ಮೀರದ ಮೂಲನಿವಾಸಿಗಳಾದ ಪಂಡಿತರು ನೆಲೆ ಕಳೆದುಕೊಂಡಿದ್ದಾರಲ್ಲದೇ ಪ್ರತ್ಯೇಕತಾವಾದದ ಮನೋಭಾವದಿಂದ ಕಾಶ್ಮೀರ ಇಂದಿಗೂ ಹೊರಬರಲಾಗಲಿಲ್ಲ. ಒಮ್ಮೆ ಆ ವಿಧಿಯನ್ನೇ ಕಿತ್ತೊಗೆದರೆ ಕಶ್ಮೀರ ತನ್ನ ಎಲ್ಲಾ ಧಿಮಾಕು ದುರಹಂಕಾರಗಳಿಂದ ದೂರವಾಗಿ ಭಾರತದೊಂದಿಗೆ ಸಮರಸತೆಯಿಂದ ಬೆರೆಯಲು ಸಾಧ್ಯವಾಗುತ್ತದೆ. ಇದಕ್ಕೆ ಪೂರಕವಾಗಿಯೇ ಜಮ್ಮು-ಕಾಶ್ಮೀರ ರಾಜ್ಯವನ್ನು ಜಮ್ಮು, ಕಾಶ್ಮೀರ ಮತ್ತು ಲಡಾಖ್ ಎಂದು ಮೂರು ಭಾಗವಾಗಿ ವಿಭಜಿಸುವುದರಿಂದ ಬಹುಸಂಖ್ಯಾತ ಹಿಂದೂಗಳ ಮಾತಿಗೆ ಶಕ್ತಿ ತುಂಬಿದಂತಾಗುತ್ತದೆ. ಹೀಗಾಗಿ ಅದನ್ನು ವಿಭಜಿಸುವುದು ಭಾರತದ ಹಿತದೃಷ್ಟಿಯಿಂದ ಬಲು ಸಮ್ಮತವಾದ್ದು. ಹಿಂದೂ ಧುರೀಣರ ಈ ಒಕ್ಕೂಟ ಭಾರತದಲ್ಲಿರುವ ಹಿಂದೂಗಳ ಕುರಿತಂತೆ ಅಷ್ಟೇ ಅಲ್ಲದೇ ಭಾರತದ ಹೊರಗೆ ನೆಲಸಿರುವ ಹಿಂದೂ, ಜೈನ, ಬೌದ,್ಧ ಸಿಖ್ಖರ ಕುರಿತಂತೆಯೂ ಸಕರ್ಾರದೆದುರಿಗೆ ಅಹವಾಲು ಮಂಡಿಸಿದೆ. ಕೆಲವು ದೇಶಗಳಲ್ಲಿ ಈ ಧಮರ್ೀಯರು ತೊಂದರೆಗೆ ಸಿಲುಕಿಕೊಂಡು ಕಣ್ಣೀರಿಡುತ್ತಿದ್ದಾರೆ. ಅನೇಕ ಬಾರಿ ಆಯಾ ರಾಷ್ಟ್ರಗಳವರು ಬಹುಸಂಖ್ಯಾತರು ಮಾಡುವ ಹಲ್ಲೆಗಳಿಂದ ತಪ್ಪಿಸಿಕೊಂಡು ಭಾರತಕ್ಕೆ ಓಡಿಯೂ ಬರುತ್ತಾರೆ. ಅಂಥವರಿಗೆ ಆಶ್ರಯಕೊಟ್ಟು ಅವರಿಗೆ ಭಾರತೀಯ ಪೌರತ್ವವನ್ನೂ ಕೊಡಬೇಕಾದ್ದು ನಮ್ಮದ್ದೇ ಕರ್ತವ್ಯವೆಂದು ಈ ಒಕ್ಕೂಟ ಅಭಿಪ್ರಾಯ ಪಟ್ಟಿದೆ. ಅಂಥವರನ್ನು ಸ್ವೀಕರಿಸಲೆಂದು ಅಗತ್ಯಬಿದ್ದರೆ ಕಾನೂನನ್ನು ಮಾರ್ಪಡಿಸಲು ಹಿಂದೆ-ಮುಂದೆ ನೋಡಬಾರದೆಂದು ಸಕರ್ಾರಕ್ಕೆ ತಾಕೀತು ಮಾಡಿದೆ. ಅದೂ ಸರಿಯೇ. ಪಕ್ಕದ ಬಾಂಗ್ಲಾದಿಂದ ನುಸುಳಿ ಬರುವ ನಿರಾಶ್ರಿತರಾಗಲಿ ಮಾಯನ್ಮಾರಿನಿಂದ ಕಣ್ತಪ್ಪಿಸಿ ಬಂದಿರುವ ರೋಹಿಂಗ್ಯಾಗಳಾಗಲೀ ಆಧಾರ್ ಕಾರ್ಡನ್ನೇ ಪಡೆದು ಹೆಮ್ಮೆಯಿಂದ ಬದುಕು ನಡೆಸುತ್ತಿರುವಾಗ ಹಿಂದೂಗಳೆನಿಸಿಕೊಂಡವರೇ ಕಣ್ಣೀರು ಹಾಕುವುದು ಎಷ್ಟು ನ್ಯಾಯ. ಜಗತ್ತಿನಲ್ಲಿ ಕ್ರೈಸ್ತರಿಗೆ, ಮುಸಲ್ಮಾನರಿಗೆ ಬೇಕಾದಷ್ಟು ರಾಷ್ಟ್ರಗಳಿವೆ ಆದರೆ ಅಧಿಕೃತವಾಗಿ ಹಿಂದೂಗಳಿಗಿರುವುದು ಒಂದೇ ನಾಡು. ಹೀಗಾಗಿ ಅವರೆಲ್ಲರಿಗೂ ಆಶ್ರಯ ಕೊಡಲು ನಾವು ಸಿದ್ಧರಾಗಲೇಬೇಕಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ.


ಇನ್ನು ಈ ದೇಶದ ಬಹುಸಂಖ್ಯಾತರ ಆರಾಧ್ಯವಾಗಿರುವ ಗೋವನ್ನು ಕಡಿಯುವುದರ ನಿಷೇಧ ಮಾಡಬೇಕಲ್ಲದೇ ಅದರ ಮಾಂಸದ ರಫ್ತು ಮಾಡುವುದನ್ನು ಕಡ್ಡಾಯವಾಗಿ ತಡೆಯಬೇಕೆಂಬ ಬೇಡಿಕೆ ಹೊಸತೇನಲ್ಲ. ಪ್ರತಿಯೊಬ್ಬ ಶ್ರದ್ಧಾವಂತ ಹಿಂದುವೂ ಈ ಕುರಿತಂತೆ ದ್ವಂದ್ವಕ್ಕೆಡೆಯಿಲ್ಲದೇ ನಡೆದುಕೊಂಡಿದ್ದಾನೆ.
ಈ ಸಮಿತಿ ಬೇಡಿಕೆಯಿಟ್ಟಿರುವ ಒಂದು ಮಹತ್ವದ ಮತ್ತು ದೂರದೃಷ್ಟಿಯ ಅಂಶವೆಂದರೆ ಹಿಂದೂ ಸಾಂಸ್ಕೃತಿಕ ಪುನರುತ್ಥಾನ ನಿಗಮವೊಂದನ್ನು ಸ್ಥಾಪಿಸಿ ಅದಕ್ಕಾಗಿ ಹತ್ತು ಸಾವಿರ ಕೋಟಿ ರೂಪಾಯಿಯ ನಿಧಿಯನ್ನು ಪ್ರತಿ ವರ್ಷ ಮಂಜೂರು ಮಾಡುವಂತೆ ಕೇಳಿಕೊಂಡಿದೆ. ಈ ನಿಧಿಯಲ್ಲಿ ಶತಶತಮಾನಗಳಿಂದಲೂ ಅನ್ಯರ ಆಕ್ರಮಣಕ್ಕೊಳಗಾಗಿ ಪಾಳುಬಿದ್ದ ದೇವಾಲಯಗಳನ್ನು ಪುನರುಜ್ಜೀವನಗೊಳಿಸುವುದಲ್ಲದೇ ವೇದಪಾಠಶಾಲೆಗಳು, ಪಾರಂಪರಿಕ ಜಾನಪದ ಕಲೆಗಳು, ಸಾಹಿತ್ಯ, ನೃತ್ಯ, ಸಂಗೀತವೇ ಮೊದಲಾದ ಈ ಸಂಸ್ಕೃತಿಯ ವಾಹಕಗಳನ್ನು ಜೀವಂತವಾಗಿರಿಸುವ ಪ್ರಯತ್ನಕ್ಕೆ ಅದನ್ನು ಬಳಸುವುದು. ನಿಜಕ್ಕೂ ಇದೊಂದು ಮನಮೋಹಕ ಪರಿಕಲ್ಪನೆ. ಹಿಂದೂಧರ್ಮದ ಆಚರಣೆಗಳನ್ನು ಅವೈಜ್ಞಾನಿಕವೆಂದು ಟೀಕಿಸುತ್ತಾ ಮೂಢನಂಬಿಕೆಯೆಂದು ಜರಿಯುತ್ತಾ ಆಡಿಕೊಳ್ಳುವ ಲಿಬರಲ್, ಸೆಕ್ಯುಲರ್ ಅರ್ಬನ್ ನಕ್ಸಲರಿಗೆ ಕಾಲಕ್ರಮದಲ್ಲಿ ಇದೊಂದು ಮಹತ್ವದ ಪಾಠವಾಗಬಲ್ಲುದು. ಒಮ್ಮೆ ಸಾಂಸ್ಕೃತಿಕ ಪುನರುತ್ಥಾನಕ್ಕೆ ಭಾರತ ಸಿದ್ಧವಾಯಿತೆಂದರೆ ಶೈಕ್ಷಣಿಕ ರಂಗದಲ್ಲೂ ಕ್ರಾಂತಿಯಾಗುವುದು ನಿಶ್ಚಿತ. ಹಾಗಾದರೆ ಮುಂದಿನ ಪೀಳಿಗೆ ಭಾರತೀಯ ಸಂಸ್ಕೃತಿ-ಸಭ್ಯತೆಯನ್ನು ಎತ್ತಿ ಹಿಡಿದು ಜಗತ್ತಿಗೆ ತಲುಪಿಸುವಲ್ಲಿ ಬಲುದೊಡ್ಡ ಕೊಡುಗೆ ನೀಡಲಿದೆ.

ಈ ಹಿಂದೂ ಚಾರ್ಟರ್ ತಂಡ ಭಾರತೀಯ ಭಾಷೆಗಳಿಗೆಲ್ಲಕ್ಕೂ ವಿಶೇಷ ಮಹತ್ವವನ್ನು ಕೊಡಬೇಕೆಂಬ ಬೇಡಿಕೆಯನ್ನೂ ಮುಂದಿರಿಸಿದೆ. ಇಂಗ್ಲೀಷಿನ ಅಬ್ಬರದ ನಡುವೆ ಕೊಚ್ಚಿ ಹೋಗುತ್ತಿರುವ ಸ್ಥಳೀಯ ಭಾಷೆಗಳು ತಮ್ಮೊಂದಿಗೆ ಆಯಾ ಪ್ರದೇಶದ ಸಂಸ್ಕೃತಿಯನ್ನು ಮುಳುಗಿಸಿಬಿಡುತ್ತಿವೆ. ಸಂಸ್ಕೃತಿಗೂ ಭಾಷೆಗೂ ಅವಿನಾಭಾವ ಸಂಬಂಧವಿರುವುದರಿಂದ ಭಾಷೆಯನ್ನುಳಿಸುವುದು ಭಾರತೀಯ ಸಂಸ್ಕೃತಿಯನ್ನು ಉಳಿಸುವಲ್ಲಿ ತನ್ಮೂಲಕ ಹಿಂದೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವಗರ್ಾಯಿಸುವಲ್ಲಿ ಬಲುದೊಡ್ಡ ಸಾಧನವಾಗಲಿದೆ.


ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸುದೀರ್ಘ ಸಂಶೋಧನೆಯಿಂದ ಹಿಂದೂ ಸಂಸ್ಕೃತಿಯ ಪುನರುಜ್ಜೀವನಕ್ಕೆಂದು ಆಲೋಚಿಸಿ ಕೈಗೆತ್ತಿಕೊಂಡ ನಿರ್ಣಯಗಳಿವು. ರಾಷ್ಟ್ರದಾದ್ಯಂತ ಕೆಲಸ ಮಾಡುತ್ತಿರುವ ಭಿನ್ನ ಭಿನ್ನ ಹಿಂದೂ ಸಂಘಟನೆಯ ಕಾರ್ಯಕರ್ತರೆಲ್ಲ ಒಟ್ಟಾಗಿ ಹೀಗೊಂದು ಬದಲಾವಣೆಯನ್ನು ಆಲೋಚಿಸಿರುವುದು ಸಕಾರಾತ್ಮಕ ಬೆಳವಣಿಗೆಯೇ. ಇತ್ತೀಚೆಗೆ ಹಿಂದೂಗಳ ಒಗ್ಗಟ್ಟು ಕಣ್ಣುಕುಕ್ಕುವಷ್ಟು ಜೋರಾಗುತ್ತಿದೆ. ಒಂದೆಡೆ ಶಬರಿಮಲೆಯಲ್ಲಿ ಕೋಟರ್ು ನೀಡಿದ ಆದೇಶವನ್ನು ಧಿಕ್ಕರಿಸಿದ ಸ್ಥಳೀಯ ಜನತೆ ಸಕರ್ಾರವನ್ನು ಎದುರು ಹಾಕಿಕೊಂಡು ನಿಂತಿದೆ. ಮತ್ತೊಂದೆಡೆ ತಾವು ಕಾಯಲು ಸಿದ್ಧ ಎನ್ನುವ ಮೂಲಕ ಅಪಾರ ಸಂಖ್ಯೆಯಲ್ಲಿ ಜಗತ್ತಿನಾದ್ಯಂತ ಬೀದಿಗೆ ಬಂದಿರುವ ಹಿಂದೂ ಹೆಣ್ಣುಮಕ್ಕಳು ಎಲ್ಲರ ಮೈ ಚಳಿ ಬಿಡಿಸಿದ್ದಾರೆ. ಎಲ್ಲಕ್ಕೂ ಕಾಲ ಕೂಡಿ ಬರಲೇಬೇಕಿತ್ತು. ಶತಶತಮಾನಗಳಿಂದಲೂ ಶೋಷಣೆಯನ್ನು ಅನುಭವಿಸುತ್ತಾ ಕಣ್ಣೀರಲ್ಲೇ ಕೈ ತೊಳೆಯುತ್ತಾ ಬಂದ ಹಿಂದೂ ಸಮಾಜ ಈಗ ಸೆಟೆದು ನಿಂತಿದೆ. ಸಹಜವಾಗಿಯೇ ಬದಲಾವಣೆಗಳಿಗೆ ಸೂಕ್ತ ಸಮಯ ಕೂಡಿಬಂದಿದೆ.

-ಚಕ್ರವರ್ತಿ ಸೂಲಿಬೆಲೆ

1 Comment

1 Comment

Leave a Reply

Your email address will not be published. Required fields are marked *

Most Popular

To Top