Politics

ಇಂಗ್ಲೆಂಡ್ ಪ್ರಧಾನಿ ಆಯ್ಕೆಯಲ್ಲಿ ಭಾರತದ ಪಾತ್ರವಿತ್ತಾ?!

ನರೇಂದ್ರಮೋದಿ ವಿದೇಶಪ್ರವಾಸ ಮಾಡುವಾಗಲೆಲ್ಲಾ ಭಾರತದಲ್ಲಿರುವ ಬುದ್ಧಿಜೀವಿಗಳನೇಕರು ಕಾಂಗ್ರೆಸ್ಸಿನೊಂದಿಗೆ ಸೇರಿ ಬಾಯಿ-ಬಾಯಿ ಬಡಿದುಕೊಳ್ಳುತ್ತಿದ್ದರು. ಕೋಟ್ಯಂತರ ರೂಪಾಯಿ ಹಣವನ್ನು ವಿದೇಶಪ್ರವಾಸಕ್ಕಂತಲೇ ಮೋದಿ ಖಚರ್ು ಮಾಡುತ್ತಿದ್ದಾರೆಂದು ಅಂದಿನಿಂದ ಇಂದಿನವರೆಗೂ ಆರೋಪಿಸುತ್ತಲೇ ಬಂದಿದ್ದಾರೆ. ಆದರೆ ನಾವೆಲ್ಲರೂ ಗಮನಿಸಲೇಬೇಕಾದ ಸೂಕ್ಷ್ಮಸಂಗತಿಯೊಂದಿದೆ. ಅದು ಮೋದಿಯವರಿಂದಾಗಿ ಜಾಗತಿಕ ಮಟ್ಟದಲ್ಲಿ ಏಕರಸವಾಗುತ್ತಿರುವ ಭಾರತೀಯ ಸಮಾಜದ ಕುರಿತಾದದ್ದು. ವಿಷಯವನ್ನು ವಿಸ್ತಾರಗೊಳಿಸುವ ಮುನ್ನ ಹಳೆಯದನ್ನೊಮ್ಮೆ ನೆನಪಿಸಿಬಿಡುತ್ತೇನೆ. ಮೋದಿ ಇಂಗ್ಲೆಂಡ್, ಅಮೇರಿಕಾವಲ್ಲದೇ ಗಲ್ಫ್ ರಾಷ್ಟ್ರಗಳಿಗೆ ಹೋದಾಗಲೂ ಅಲ್ಲಿನ ಭಾರತೀಯ ಸಮುದಾಯವನ್ನು ಒಟ್ಟುಗೂಡಿಸಿ ಬೃಹತ್ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಅದಕ್ಕಾಗಿ ತಿಂಗಳುಗಟ್ಟಲೆ ರಾಮ್ಮಾಧವ್ ನೇತೃತ್ವದ ತಂಡ ಕೆಲಸ ಮಾಡುತ್ತಿತ್ತು. ಒಂದೆಡೆ ಸೇರುವ ನೆಪದಲ್ಲಿ ಅಲ್ಲಿನ ಭಾರತೀಯರು ತಮ್ಮ ರಾಜ್ಯ, ಭಾಷೆ, ಜಾತಿ-ಮತ ಎಲ್ಲವನ್ನೂ ಮರೆತು ಭಾರತೀಯ ಸಮಾಜವಾಗಿ ಕೆಲಸ ಮಾಡುತ್ತಾ ಒಟ್ಟಾಗುವ ಯತ್ನ ನಡೆಸುತ್ತಿದ್ದರು. ಅದರ ಪ್ರಭಾವದಿಂದಾಗಿಯೇ ಮೋದಿಯವರ ಭಾಷಣಕ್ಕೆ ಸಾವಿರ-ಸಾವಿರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದುದು ಮತ್ತು ಆಯಾ ರಾಷ್ಟ್ರಗಳಲ್ಲಿ ಸಕರ್ಾರದ ಮೇಲೆ ಪ್ರಭಾವ ಬೀರಬಲ್ಲ ಭಾರತೀಯರು ಇಷ್ಟೊಂದಿದ್ದಾರೆ ಎಂದು ಶಕ್ತಿ ಪ್ರದರ್ಶನ ಮಾಡಲು ಮೋದಿಗೆ ಸಾಧ್ಯವಾಗುತ್ತಿದ್ದುದು! ಸೂಕ್ಷ್ಮವಾದ ಈ ರಾಜಕೀಯವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಬಾರದು. ಭಾರತೀಯರೆಂದರೆ ತಮ್ಮ-ತಮ್ಮಲ್ಲೇ ಕಿತ್ತಾಡುವ, ಜಾತಿ-ಮತ-ಪಂಥಗಳ ಕದನವಿರುವ ಜನಾಂಗವೆಂದೇ ಜಗತ್ತು ಭಾವಿಸುತ್ತದೆ. ಅವರು ಒಟ್ಟಾಗಿ ಒಂದೆಡೆ ಕೂರಬಲ್ಲರೆಂಬುದನ್ನು ಅವರಿಗೆ ಊಹಿಸಿಕೊಳ್ಳುವುದೂ ಕಷ್ಟ. ಯಾವಾಗ ಮೋದಿ ಆ ಕೆಲಸವನ್ನು ಮಾಡಿ ತೋರಿಸಿದರೋ ಅನೇಕ ರಾಷ್ಟ್ರನಾಯಕರುಗಳು ಬೆಚ್ಚಿಬಿದ್ದರು. ಇಲ್ಲವಾದರೆ ಅಮೇರಿಕಾದಲ್ಲಿ ಮೋದಿಯವರ ಕಾರ್ಯಕ್ರಮಕ್ಕೆ ಸ್ವತಃ ಟ್ರಂಪ್ ಆಗಮಿಸಿ ಭಾರತೀಯರತ್ತ ಕೈಬೀಸಿ ಹೋಗುವುದು ಸಾಧ್ಯವೇ ಇರಲಿಲ್ಲ! ಈಗ ಇಂಗ್ಲೆಂಡಿನಲ್ಲಿ ಬೋರಿಸ್ ಜಾನ್ಸನ್ ಪ್ರತಿಪಕ್ಷಗಳ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಮೋದಿಯವರ ಸಾಮಥ್ರ್ಯ ಜಗತ್ತಿನೆದುರು ಮತ್ತೊಮ್ಮೆ ಅನಾವರಣಗೊಂಡಿದೆ.


600ಕ್ಕೂ ಮಿಕ್ಕಿ ಕ್ಷೇತ್ರಗಳನ್ನು ಹೊಂದಿರುವ ಇಂಗ್ಲೆಂಡಿನಲ್ಲಿ 40ಕ್ಕೂ ಹೆಚ್ಚು ಕ್ಷೇತ್ರಗಳು ಭಾರತೀಯರ ಪ್ರಭಾವವನ್ನು ಹೊಂದಿವೆ. ಅಂದರೆ ಶೇಕಡಾ 15ರಷ್ಟು ಕ್ಷೇತ್ರಗಳು ನಿಧರ್ಾರವಾಗೋದು ಭಾರತೀಯರ ಮತಗಳಿಂದಲೇ. ಇದು ಮೊದಲೂ ಗೊತ್ತಿತ್ತಾದರೂ ಭಾರತೀಯರನ್ನು ಒಂದೆಡೆ ಗುಡ್ಡೆ ಹಾಕಿ ತೋರಿದಮೇಲಂತೂ ನಿಚ್ಚಳವಾಗಿ ಅಲ್ಲಿನ ರಾಜಕಾರಣಿಗಳಿಗೆ ಕಾಣತೊಡಗಿತು. ಬೊರಿಸ್ ಜಾನ್ಸನ್ ತನ್ನ ಚುನಾವಣೆಯ ಪ್ರಚಾರದುದ್ದಕ್ಕೂ ಭಾರತೀಯರ ಮತವನ್ನು ಸೆಳೆಯುವ ತಂತ್ರವನ್ನು ಸ್ಪಷ್ಟವಾಗಿ ಬಳಸಿಕೊಂಡ. ಅಲ್ಲಿನ ಇತರೆಲ್ಲಾ ಪಾಟರ್ಿಗಳ ನಡುವೆ ಪ್ರಣಾಳಿಕೆಯಲ್ಲಿ ಭಾರತೀಯರಿಗೆ ಒಳಿತು ಮಾಡುವ ಮಾತನ್ನಾಡಿದ್ದು ಬೊರಿಸ್ ಜಾನ್ಸನ್ ಪ್ರತಿನಿಧಿಸುತ್ತಿದ್ದ ಕನ್ಸವರ್ೇಟಿವ್ ಪಕ್ಷ ಮಾತ್ರ. ಆತ ಇದನ್ನು ತನ್ನ ಭಾಷಣವೊಂದರಲ್ಲಿ ಉಲ್ಲೇಖಿಸಿದ್ದಲ್ಲದೇ ಲಂಡನ್ನಿನ ಸ್ವಾಮಿ ನಾರಾಯಣ ಮಂದಿರಕ್ಕೆ ಹೋಗಿದ್ದಾಗ ಅಲ್ಲಿ ಮಾತನಾಡುತ್ತಾ ‘ಹೊಸ ಭಾರತದ ನಿಮರ್ಾಣಕ್ಕೆ ಶ್ರಮಿಸುತ್ತಿರುವ ನರೇಂದ್ರಭಾಯ್ ಅವರೊಂದಿಗೆ ಕೈ ಜೋಡಿಸುವೆ’ ಎಂದೂ ಹೇಳಿದ್ದ. ಆತ ಇತರೆ ಗುಜರಾತಿಗಳಂತೆ ನರೇಂದ್ರಭಾಯ್ ಎಂದು ಸಂಬೋಧಿಸಿದ್ದು ಅಲ್ಲಿನ ಜನರಿಗೆ ರೋಮಾಂಚನ ಉಂಟುಮಾಡಿರಲು ಸಾಕು! ಇಷ್ಟಕ್ಕೇ ಮುಗಿಯಲಿಲ್ಲ. ಆತ ಆಪ್ತರೊಂದಿಗೆ ಮಾತನಾಡುವಾಗ ನರೇಂದ್ರಮೋದಿಯವರೊಂದಿಗೆ ಕಳೆದ ಸಮಯವನ್ನು ಉಲ್ಲೇಖಿಸಿದ್ದ. ಹಿಂದೆಯೂ ಭಾರತೀಯರು ಕನ್ಸವರ್ೇಟಿವ್ಸ್ಗಳನ್ನು ಸಮಥರ್ಿಸಿದಂತೆ ಈ ಬಾರಿಯೂ ಸಮಥರ್ಿಸುತ್ತಿದ್ದಾರೆ ಎಂದೊಡನೆ ನಕ್ಕ ಮೋದಿ ಭಾರತೀಯರು ಯಾವಾಗಲೂ ಗೆಲ್ಲುವವರೊಂದಿಗೆ ಇರುತ್ತಾರೆ ಎಂದುಬಿಟ್ಟಿದ್ದರಂತೆ. ಸಂದೇಶ ಎಷ್ಟು ಸೂಕ್ಷ್ಮವಾಗಿ ಯಾರಿಗೆ ರವಾನೆಯಾಗಬೇಕಿತ್ತೋ ಅವರಿಗೆ ಹೋಗಿತ್ತು. ಇಂಗ್ಲೆಂಡಿನಲ್ಲಿರುವ ಭಾರತೀಯರೆಲ್ಲ ತಮ್ಮ-ತಮ್ಮೊಳಗೆ ಮಾತನಾಡಿಕೊಳ್ಳುತ್ತಾ ಬೋರಿಸ್ರನ್ನೇ ಪ್ರಧಾನಮಂತ್ರಿ ಮಾಡಬೇಕೆಂಬ ನಿರ್ಣಯಕ್ಕೆ ಬದ್ಧರಾಗತೊಡಗಿದರು. ಈ ಪಿಸುಮಾತಿನ ಪ್ರಚಾರ ಬರು-ಬರುತ್ತಾ ದೊಡ್ಡ ದನಿಯಾಗಿಯೇ ಮೇಲೆದ್ದಿತು. ಸ್ವತಃ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದೇಶದ ಅಂಗವಾದ ಹಿಂದೂ ಸ್ವಯಂಸೇವಕ ಸಂಘ ಅಖಾಡಕ್ಕೆ ಧುಮುಕಿ ಭಾರತ ವಿರೋಧಿಯಾದ ಲೇಬರ್ ಪಾಟರ್ಿಯನ್ನು ಸೋಲಿಸಲು ತನ್ನೆಲ್ಲಾ ಪ್ರಯಾಸ ಹಾಕಿತು. ಹತ್ತಾರು ಕಾರ್ಯಕರ್ತರು ಇದಕ್ಕಾಗಿ ಹಗಲು-ರಾತ್ರಿ ದುಡಿದರು. ಬೊರಿಸ್ ಮುಂದಿನ ಪ್ರಧಾನಿಯಾಗಲಿ ಎಂದು ಹೇಳುವ ವಿಡಿಯೊಗಳು ಹಿಂದಿ ಭಾಷೆಯಲ್ಲಿ ಫೇಸ್ಬುಕ್, ವಾಟ್ಸಪ್ಗಳಲ್ಲಿ ಹರಿದಾಡಲಾರಂಭಿಸಿದವು. ಸೂಕ್ತ ಸಂದರ್ಭಗಳಲ್ಲಿ ಬೊರಿಸ್ ಕೂಡ ಭಾರತದ ಕುರಿತಂತೆ, ಮೋದಿಯವರ ಕುರಿತಂತೆ ಒಳ್ಳೆಯ ಮಾತುಗಳನ್ನಾಡುತ್ತಾ ಈ ಪ್ರಚಾರ ರಂಗು ಕಳೆದುಕೊಳ್ಳದಂತೆ ನೋಡಿಕೊಳ್ಳುತ್ತಿದ್ದರು. ಹಾಗಂತ ಬೊರಿಸ್ನ ಭಾರತ ಪ್ರೇಮ ಹೊಸತೇನೂ ಅಲ್ಲ. ಆತನ ಪತ್ನಿ ಖುಷ್ವಂತ್ ಸಿಂಗರ ತಮ್ಮನ ಮಗಳು. ಆಕೆಯೊಂದಿಗೆ ವಿಚ್ಛೇದನವಾಗುವ ಮುನ್ನ ಆತ ಅನೇಕ ಬಾರಿ ಭಾರತಕ್ಕೂ ಬಂದು ಹೋಗಿದ್ದ. ಗುರುದ್ವಾರದಲ್ಲಿ ಮಾತನಾಡುತ್ತಾ ಬೊರಿಸ್ ಭಾರತಕ್ಕೆ ಬಂದಾಗಲೆಲ್ಲಾ ಅಲ್ಲಿನಿಂದ ವಿಶೇಷ ತಿನಿಸುಗಳನ್ನು ತರುತ್ತೇನೆ ಎಂದದ್ದಲ್ಲದೇ ವಿಮಾನ ನಿಲ್ದಾಣದಿಂದ ಡ್ಯೂಟಿ ಫ್ರೀ ಹೆಂಡವನ್ನು ಕೂಡ ಎಂದು ತಮಾಷೆಯನ್ನೂ ಮಾಡಿದ್ದ. ಹಾಗಂತ ಆ ಮಾತುಗಳನ್ನು ತಮಾಷೆಯಾಗಿಯಷ್ಟೇ ಉಳಿಸದೇ ‘ವಿಮಾನ ನಿಲ್ದಾಣದಲ್ಲಿ ಡ್ಯೂಟಿಫ್ರಿ ಆಗಿರೋದಕ್ಕೆ ಇಷ್ಟು ಖುಷಿ ಪಡುವ ನಾವು, ಭಾರತ-ಇಂಗ್ಲೆಂಡಿನ ನಡುವೆ ಮುಕ್ತ ವ್ಯಾಪಾರ ಆರಂಭವಾದರೆ ಎಷ್ಟು ಆನಂದಿಸಬೇಡ’ ಎಂದು ತನ್ನ ಗೆಲುವಿನ ನಂತರದ ಕನಸುಗಳನ್ನು ಕಟ್ಟಿಕೊಟ್ಟಿದ್ದರು. ಇತ್ತ ಬೊರಿಸ್ ವ್ಯವಸ್ಥಿತವಾಗಿ ಇಷ್ಟು ಪ್ರಚಾರದಲ್ಲಿ ನಿರತರಾಗಿದ್ದರೆ ಲೇಬರ್ ಪಾಟರ್ಿಯ ಕಾಬರ್ಿನ್ ತನ್ನ ಭಾರತ ವಿರೋಧಿ ಹೇಳಿಕೆಗಳಿಂದ ಅಳಿದುಳಿದ ಭಾರತೀಯರ ಕೆಂಗಣ್ಣಿಗೂ ಗುರಿಯಾಗಿಬಿಟ್ಟಿದ್ದರು. ಕಾಶ್ಮೀರದಲ್ಲಿ ಆಟರ್ಿಕಲ್ 370ನ್ನು ಭಾರತ ತೆಗೆದೊಗೆದ ನಂತರ ಈತ ಸುಮ್ಮನಿರದೇ ಭಾರತವನ್ನು ನಿಂದಿಸಿ, ಹೀಗಳೆದು, ಟ್ವೀಟ್ ಮಾಡಿ ತನ್ನ ಸೋಲಿನ ಪೆಟ್ಟಿಗೆಗೆ ತಾನೇ ಮೊಳೆ ಹೊಡೆದುಕೊಂಡ. ಹಾಗಂತ ಸೋಲಿಗೆ ಇದೊಂದೇ ಕಾರಣವೆಂದು ಹೇಳುತ್ತಿಲ್ಲ. ಇದೂ ಕೂಡ ಒಂದು ಪಾತ್ರ ಆಗಿತ್ತೆಂಬ ವಿಶ್ಲೇಷಣೆ ಅಷ್ಟೇ!


ಒಟ್ಟಾರೆ ಈ ಬಾರಿ ಚುನಾವಣೆಯ ಅಖಾಡ ನಿಮರ್ಾಣಗೊಂಡಿದ್ದು ಬ್ರೆಕ್ಸಿಟ್ನ ಚಚರ್ೆಯ ಮೇಲೆ. ಯುರೋಪಿಯನ್ ಯುನಿಯನ್ನಿಂದ ಬ್ರಿಟನ್ ಹೊರಬಂದುಬಿಡಬೇಕೆಂಬ ಕೂಗು ಅನೇಕ ವರ್ಷಗಳಿಂದ ಕೇಳಿ ಬಂದಿದೆ. ಜನಮತ ಗಣನೆಯಲ್ಲೂ ಅದೇ ಅಭಿಪ್ರಾಯ ವ್ಯಕ್ತವಾದಾಗ ಅದಕ್ಕೊಂದು ನೀತಿ ರೂಪಿಸುವುದು ಆಳುವವರಿಗೆ ಅನಿವಾರ್ಯವಾಯ್ತು. ಮಾರ್ಗರೇಟ್ ಥ್ಯಾಚರ್ ಅದರಲ್ಲಿ ಸೋತು ಹೋದರು. ಇದು ಬ್ರಿಟನ್ನಿನಲ್ಲಿ ಸಾಕಷ್ಟು ಕಿರಿಕಿರಿಗೆ ಕಾರಣವಾಗಿತ್ತು. ಇಷ್ಟಕ್ಕೂ ಬ್ರಿಟನ್ನಿಗರು ಕಟ್ಟಿದ ತೆರಿಗೆ ಹಣದಲ್ಲಿ ಅಕ್ಕ-ಪಕ್ಕದ ರಾಷ್ಟ್ರದ ಜನರು ಮಜಾ ಉಡಾಯಿಸುವುದನ್ನು ಹೇಗೆ ತಾನೇ ಸಹಿಸಿಕೊಳ್ಳೋದು ಹೇಳಿ? ಅದರಲ್ಲೂ ಬ್ರಿಟನ್ನಿಗರ ಪಾಲಿಗೆ ಹೆಮ್ಮೆಯ ಸಂಕೇತವಾಗಿರುವ ನ್ಯಾಷನಲ್ ಹೆಲ್ತ್ ಸ್ಕೀಮ್ ಈ ವಲಸಿಗರ ಕಾರಣದಿಂದಾಗಿ ಹಳ್ಳಹಿಡಿಯತೊಡಗಿದಾಗ ಮೂಲ ಬ್ರಿಟೀಷರು ಮತ್ತು ನ್ಯಾಯಯುತವಾಗಿ ವೀಸಾ ಪಡೆದು ಅಲ್ಲಿ ಬಂದು ಉಳಿದಿರುವ ಜನರು ಕೆಂಡಾಮಂಡಲವಾದರು. ಕನ್ಸವರ್ೇಟಿವ್ ಪಕ್ಷ ಈ ಆಕ್ರೋಶಕ್ಕೆ ದನಿಯಾದರೆ ಲೇಬರ್ ಪಾಟರ್ಿಯ ದಿಕ್ಕು ಬೇರೆ ಇತ್ತು. ಇದನ್ನೇ ಬಂಡವಾಳವಾಗಿಸಿಕೊಂಡ ಬೊರಿಸ್ ಜನವರಿ ಕಳೆವ ವೇಳೆಗೆ ಬ್ರೆಕ್ಸಿಟ್ ಪೂರ್ಣಗೊಳಿಸುವ ಭರವಸೆ ಕೊಟ್ಟೇ ಚುನಾವಣೆಗೆ ಹೋಗಿದ್ದು. ಜನ ಕೂಡ ಹಿಂದೆಂದಿಗಿಂತಲೂ ಹೆಚ್ಚು ಉತ್ಸಾಹದಿಂದ ಬೆಂಬಲಕ್ಕೆ ನಿಂತರು. ಈ ನಡುವೆಯೇ ಎರಡೂ ಪಕ್ಷಗಳಿಂದ 15 ಭಾರತೀಯರು ಸಾಂಸದರಾಗಿ ಆಯ್ಕೆಯಾಗಿ ಬಂದಿರುವುದು ಬಲು ವಿಶೇಷ. ಇನ್ಫೋಸಿಸ್ ನಾರಾಯಣಮೂತರ್ಿಯವರ ಅಳಿಯ ಕೂಡ ಮತ್ತೊಮ್ಮೆ ಆಯ್ಕೆಯಾಗಿದ್ದಾನೆ!

ಬ್ರೆಕ್ಸಿಟ್ ಭಾರತದ ಪಾಲಿಗೆ ವರವಾಗಲಿರೋದು ಖಾತ್ರಿ. ಅದರಲ್ಲೂ ಭಾರತವನ್ನು ಪ್ರೀತಿಸುವ ಬೊರಿಸ್ ಪ್ರಧಾನಿ ಆಗಿರುವುದರಿಂದ ಯುರೋಪಿಯನ್ ಯುನಿಯನ್ನಿಂದ ಹೊರಬಂದಾಗ ಆಗಲಿರುವ ನಷ್ಟವನ್ನು ಭಾರತದೊಂದಿಗೆ ವ್ಯಾಪಾರ ಮಾಡಿ ಸರಿದೂಗಿಸಿಕೊಳ್ಳುವ ಪ್ರಯತ್ನದಲ್ಲಂತೂ ಇಂಗ್ಲೆಂಡು ಇದ್ದಂತೆ ಕಾಣುತ್ತದೆ. ಬರೀ ಭಾರತಕ್ಕಷ್ಟೇ ಅಲ್ಲ, ಬೊರಿಸ್ನ ಗೆಲುವು ಮತ್ತು ಬ್ರೆಕ್ಸಿಟ್ನ ಕುರಿತಂತೆ ನಿರ್ಣಯ ಅಮೇರಿಕಾದಲ್ಲೂ ಟ್ರಂಪ್ರ ಗೆಲುವನ್ನು ನಿಶ್ಚಿತಗೊಳಿಸಲಿದೆ ಎಂದು ರಾಜಕೀಯ ವಿಶ್ಲೇಷಣಾಕಾರರು ಅಂದಾಜಿಸುತ್ತಿದ್ದಾರೆ. ಈ ಹಿಂದೆಯೂ ಬ್ರೆಕ್ಸಿಟ್ನ ವಿಚಾರ ಬಂದಾಗ ಟ್ರಂಪ್ ಅದರ ಕುರಿತಂತೆ ಚುನಾವಣಾ ರ್ಯಾಲಿಗಳಲ್ಲಿ ಚಚರ್ಿಸುತ್ತಾ ಇಂಗ್ಲೆಂಡಿಗೆ ಪೂರ್ಣ ಸಹಕಾರಿಯಾಗುವ ಭರವಸೆ ನೀಡಿದ್ದರು. ಚುನಾವಣೆಗಳ ಮೇಲೆ ಅದರ ಪ್ರಭಾವ ಕಂಡುಬಂದಿತ್ತು ಕೂಡ. ಹೀಗಾಗಿಯೇ ಬೊರಿಸ್ ಗೆದ್ದೊಡನೆ ಟ್ರಂಪ್ ವಿಸ್ತಾರವಾಗಿ ಮಾತನಾಡುತ್ತಾ ಇದು ಎಡ ಉದಾರವಾದಿಗಳ ಸೋಲು ಮತ್ತು ಅಮೇರಿಕಾದಲ್ಲಿ ಪ್ರತಿಪಕ್ಷಗಳಿಗೆ ನಡುಕ ಹುಟ್ಟಿಸಬಲ್ಲ ಗೆಲುವು ಎಂದು ಬಣ್ಣಿಸಿದ್ದಾರೆ! ಹಾಗೇನಾದರೂ ಲೆಕ್ಕಾಚಾರ ಅಂದುಕೊಂಡಂತೆ ಆದರೆ ಡೊನಾಲ್ಡ್ ಟ್ರಂಪ್ರ ಗೆಲುವು ನಿಸ್ಸಂಶಯವಾಗಿಯೂ ಖಾತ್ರಿಯಾದದ್ದೇ!

ಒಂದೆಡೆ ರಷ್ಯಾದಲ್ಲಿ ಪುತಿನ್, ಮತ್ತೊಂದೆಡೆ ಭಾರತದಲ್ಲಿ ಮೋದಿ, ಅತ್ತ ಟ್ರಂಪ್, ಇತ್ತ ಬೊರಿಸ್ ಜಾನ್ಸನ್ ಇವರ ಗುಂಪಿಗೆ ಜಪಾನಿನ ಶಿಂಜéೋ ಅಬೆಯನ್ನು ಸೇರಿಸಿದರೆ ಪ್ರಖರ ರಾಷ್ಟ್ರವಾದಿ ನಾಯಕರುಗಳು ಜಗತ್ತನ್ನು ಆಳುತ್ತಿರುವುದು ಗೋಚರವಾಗುತ್ತಿದೆ. ಸ್ವಲ್ಪದರಲ್ಲಿಯೇ ಈ ಬಾರಿ ಅವಕಾಶವನ್ನು ಕಳೆದುಕೊಂಡಿದ್ದು ಇಸ್ರೇಲಿನ ನೆತನ್ಯಾಹು. ಅಲ್ಲಿನ ಅತಂತ್ರ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಅವರೂ ಮರಳಿ ಕುಳಿತರೆ ಆಶ್ಚರ್ಯ ಪಡಬೇಕಿಲ್ಲ. ತಂತಮ್ಮ ರಾಷ್ಟ್ರಗಳನ್ನು ಅಪಾರವಾಗಿ ಗೌರವಿಸುವ ಈ ನಾಯಕರುಗಳು ತಮ್ಮ ರಾಷ್ಟ್ರದ ಹಿತಾಸಕ್ತಿಯನ್ನು ಬಲಿಕೊಡಲು ಯಾವ ಕಾರಣಕ್ಕೂ ಸಿದ್ಧರಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಜಗತ್ತಿನ ಬೇರೆ-ಬೇರೆ ದಿಕ್ಕುಗಳಲ್ಲಿ ಮುಸಲ್ಮಾನರ ವಿಸ್ತಾರವನ್ನು ತಡೆಗಟ್ಟಲೆಂದೇ ಈ ನಾಯಕರು ಬಂದು ಕುಳಿತಂತಿದೆ! ಡೊನಾಲ್ಡ್ ಟ್ರಂಪ್ ವಲಸಿಗರಿಗೆ ಸ್ಪಷ್ಟ ಎಚ್ಚರಿಕೆ ನೀಡಿ, ಅವರನ್ನು ತಡೆಗಟ್ಟಲು ಬೇಕಾದ ಕೆಲಸಗಳನ್ನು ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ. ಪುತಿನ್ ಈ ವಲಸಿಗರು ಉಸಿರೆತ್ತದಂತೆ ನೋಡಿಕೊಂಡಿದ್ದಾರೆ. ಬ್ರೆಕ್ಸಿಟ್ನ ಮೂಲಕ ಇಂಥವರನ್ನು ಹೊರದಬ್ಬಬೇಕೆಂಬ ನಿಶ್ಚಯ ಬೊರಿಸ್ಗಿದೆ. ಮೋದಿಯಂತೂ ಕೇಳಲೇಬೇಡಿ. ಸಿಟಿಜೆನ್ಶಿಪ್ ಅಮೆಂಡ್ಮೆಂಟ್ ಬಿಲ್ ಅನ್ನು ಜಾರಿಗೆ ತರುವ ಮೂಲಕ ವಲಸಿಗರಾಗಿ ಬರಬೇಕೆಂದುಕೊಂಡಿರುವ ಮುಸಲ್ಮಾನರಿಗೆ ಭರ್ಜರಿಯಾಗಿಯೇ ಏಟು ಕೊಟ್ಟಿದ್ದಾರೆ. ಇದೇ ಸಾಲಿಗೆ ಉಯ್ಘುರ್ ಮುಸಲ್ಮಾನರನ್ನು ನಾಯಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಿರುವ ಷೀ ಜಿನ್ಪಿಂಗ್ನ್ನೂ ಸೇರಿಸಿಬಿಟ್ಟರೆ ಜಗತ್ತಿನ ದಿಕ್ಕು ಸಾಗುತ್ತಿರುವ ರೀತಿ ಸ್ಪಷ್ಟವಾಗಿ ಗೋಚರಿಸುತ್ತದೆ. ಕಂಡ-ಕಂಡವರನ್ನು ಧರ್ಮದ ಹೆಸರಲ್ಲಿ ಕೊಲ್ಲುತ್ತಾ ರಕ್ತಸಿಕ್ತ ಕೈಗಳಿಂದ ಭಗವಂತನ ಪ್ರಾರ್ಥನೆ ಮಾಡುತ್ತಾ ಕುಳಿತಿರುತ್ತಿದ್ದ ಮಧ್ಯ ಏಷ್ಯಾದ ಮುಸಲ್ಮಾನರು ಈಗ ಮತ್ತೆ ಮತ್ತೆ ಯೋಚಿಸಬೇಕಾದ ಪರಿಸ್ಥಿತಿ ನಿಮರ್ಾಣವಾಗಿದೆ. ಪೆಟ್ರೋಡಾಲರ್ಗಳಿಂದ ಜಗತ್ತನ್ನು ಮನಬಂದಂತೆ ಆಡಿಸಬಹುದೆಂದುಕೊಂಡ ಅವರ ಮನೋಭಾವ ಇನ್ನಂತೂ ಬದಲಾಗಲಿದೆ. ಎಲ್ಲರೊಂದಿಗೆ ಸೌಹಾರ್ದದಿಂದ ಬದುಕಲು ಕಲಿತರೆ ಮಾತ್ರ ಜಗತ್ತಿನಲ್ಲಿ ಸ್ಥಾನ. ಇಲ್ಲವಾದರೆ ಕಷ್ಟವೆಂಬುದು ಈಗ ಗುಪ್ತವಾಗಿ ಉಳಿದಿರುವ ಸಂಗತಿಯಲ್ಲ!

ನೆಮ್ಮದಿಯ ಜಗತ್ತು ಬಹಳ ದೂರವಿಲ್ಲ. ಮೋದಿಯ ಮರು ಆಯ್ಕೆ ಅದನ್ನು ಸಾಬೀತುಪಡಿಸಿದ್ದರೆ ಬೊರಿಸ್ರ ಆಯ್ಕೆ ವಿಚಾರವನ್ನು ಗಟ್ಟಿಗೊಳಿಸಿದೆ!

-ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. Adarsh

    December 17, 2019 at 10:07 pm

    Amazing Article. Awesome

Leave a Reply

Your email address will not be published. Required fields are marked *

Most Popular

To Top