ಇತ್ತೀಚೆಗಷ್ಟೇ ಆಭರಣಗಳ ಸಾಲಿನಲ್ಲಿ ತನ್ನದೇ ಬ್ರ್ಯಾಂಡ್ ಸೃಷ್ಟಿಸಿಕೊಂಡಿದ್ದ ತನಿಷ್ಕ್ ದೊಡ್ಡ ಸುದ್ದಿ ಮಾಡಿತ್ತು. ದೇಶಾದ್ಯಂತ ಜನರು ತನಿಷ್ಕ್ ನ ವಿರುದ್ಧ ಸಿಡಿದೆದ್ದಿದ್ದಾರೆ. ಇದಕ್ಕೆ ಕಾರಣ ಆಭರಣದ ಮಾರಾಟಕ್ಕಾಗಿ ತನಿಷ್ಕ್ ಮಾಡಿದ ಜಾಹಿರಾತು. ಹಿಂದೂ ಹೆಣ್ಣುಮಗಳು ಮುಸ್ಲೀಂ ಸಮುದಾಯದ ಮನೆಗೆ ಮದುವೆಯಾಗಿ ಹೋಗುವ ಕಾನ್ಸೆಪ್ಟ್ ನ ಸುತ್ತ ಈ ಜಾಹಿರಾತು ಸುತ್ತುತ್ತದೆ. ಹಿಂದೂ ಹೆಣ್ಣುಮಕ್ಕಳನ್ನು ಮುಸಲ್ಮಾನ ಹುಡುಗರು ಮತಾಂತರಗೊಳಿಸಿ, ಮದುವೆಯಾಗಿ, ಮೋಸ ಮಾಡಿರುವ ಹಲವು ಘಟನೆಗಳು ಕಣ್ಣೆದುರಿಗೇ ಇದ್ದಾಗಲೂ ‘ಏಕತ್ವಂ’ ಹೆಸರಿನಲ್ಲಿ ಹೊರತಂದ ಈ ಜಾಹಿರಾತಿನ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದರು.
ಹಿಂದೂ ಸೊಸೆಯ ಜಾಗದಲ್ಲಿ ಮುಸ್ಲೀಂ ಸೊಸೆಯನ್ನು ತೋರಿಸುವ ಧೈರ್ಯ ತನಿಷ್ಕ್ ಗೆ ಇಲ್ಲವೆಂದು ಆಕ್ಷೇಪವನ್ನೂ ಮಾಡಿದ್ದರು. ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತಗೊಂಡ ನಂತರ ತನಿಷ್ಕ್ ಈ ಜಾಹಿರಾತನ್ನು ಹಿಂಪಡೆದುಕೊಂಡಿದೆ.
ನಾನು ಹೇಳಬೇಕೆಂದಿರುವ ವಿಷಯ ಇದಲ್ಲ. ತನಿಷ್ಕ್ ಹೀಗೆ ಏಕತ್ವದ ಹೆಸರಿನಲ್ಲಿ ಹಿಂದುಗಳನ್ನು ಅವಮಾನಿಸುವ ಜಾಹಿರಾತು ಹೊರತಂದ ಬೆನ್ನಲ್ಲೇ ಲಕ್ನೊನಲ್ಲಿ ಲವ್ ಜಿಹಾದಿನ ಘಟನೆಯೊಂದು ನಡೆದಿದೆ. ಅಂಜನಾ ತಿವಾರಿ ಎಂಬ ಹೆಣ್ಣುಮಗಳೊಬ್ಬಳು ಅಕ್ಟೋಬರ್ 13ರಂದು ಉತ್ತರ ಪ್ರದೇಶದ ವಿಧಾನಸಭೆಯ ಎದುರು ತನ್ನನ್ನು ತಾನು ಸುಟ್ಟುಕೊಂಡಿದ್ದರು. ನಂತರ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂದು ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಅಂಜನಾ ತಿವಾರಿ ಅಖಿಲೇಷ್ ತಿವಾರಿ ಎಂಬುವವರನ್ನು ಮದುವೆಯಾಗಿದ್ದರು. ಕಾರಣಾಂತರಗಳಿಂದ ವಿವಾಹ ವಿಚ್ಛೇದನವೂ ಆಗಿತ್ತು. ನಂತರದ ದಿನಗಳಲ್ಲಿ ಅಂಜನಾ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಆಕೆಗೆ ಆಸಿಫ್ ಎನ್ನುವ ಯುವಕನ ಪರಿಚಯವಾಯ್ತು. ಜೀ ಹಿಂದೂಸ್ತಾನ್ ವರದಿ ಮಾಡಿರುವ ಪ್ರಕಾರ, ಆಕೆ ಆಸಿಫ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ಅತ್ಯಾಚಾರದ ಆರೋಪದಿಂದ ತಪ್ಪಿಸಿಕೊಳ್ಳಲು ಆಸಿಫ್ ಅಂಜನಾಳನ್ನು ಮದುವೆಯಾಗಿದ್ದಾನೆ. ಮದುವೆಯಾದ ಕೆಲವೇ ದಿನಗಳಲ್ಲಿ ಆಸಿಫ್ ಆಕೆಯನ್ನು ಭಾರತದಲ್ಲಿಯೇ ಬಿಟ್ಟು ತಾನು ಗಲ್ಫ್ ಗೆ ಹೋಗಿದ್ದಾನೆ. ಅಲ್ಲಿಂದಲೇ ಅಂಜನಾಗೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹಾಕಿದ್ದಾನೆ. ಆಕೆ ಒಪ್ಪದೇ ಹೋದಾಗ ಹಣ ಕಳಿಸುವುದನ್ನೂ ನಿಲ್ಲಿಸಿದ್ದಾನೆ.
ಇತ್ತ ಅಂಜನಾ ಆಸಿಫ್ ನ ಮನೆಯವರನ್ನು ಮಾತನಾಡಿಸಲು ಹೋದಾಗ ಆತನ ಮನೆಯವರೂ ಈಕೆಯನ್ನು ತಿರಸ್ಕರಿಸಿದ್ದಾರೆ. ಆಸಿಫ್ ನ ಪೋಷಕರೂ ಆಕೆಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾರೆ. ಆಸಿಫ್ ಮನೆಯವರ ವಿರುದ್ಧ ಮಹರಾಜ್ ಗಂಜ್ ಪೊಲೀಸ್ ಠಾಣೆಯಲ್ಲಿ ತನ್ನನ್ನು ಹಿಂಸಿಸುತ್ತಿದ್ದಾರೆಂದು ದೂರು ದಾಖಲಿಸುವ ಪ್ರಯತ್ನವನ್ನೂ ಮಾಡಿದ್ದಾಳೆ. ಯಾವುದೂ ಫಲ ಕೊಡದೇ ಹೋದಾಗ ಮುಖ್ಯಮಂತ್ರಿಯನ್ನು ಕಾಣುವ ಪ್ರಯತ್ನ ಮಾಡಿದ್ದಾಳೆ. ಹೀಗಾಗಿ ಉತ್ತರ ಪ್ರದೇಶದ ವಿಧಾನಸಭೆಯ ಎದುರು ತನ್ನನ್ನು ತಾನು ಸುಟ್ಟುಕೊಂಡಿದ್ದಾಳೆ.
ಈ ವಿಚಾರದಲ್ಲಿ ಕಾಂಗ್ರೆಸ್ಸಿನ ನೇತಾರ ಅಲೋಕ್ ಪ್ರಸಾದ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಮಹರಾಜ್ ಗಂಜ್ ಠಾಣೆಯ ಪೊಲೀಸರ ಪ್ರಕಾರ ಅಂಜನಾ ತನ್ನನ್ನು ತಾನು ಸುಟ್ಟುಕೊಳ್ಳುವಂತೆ ಅಲೋಕ್ ಭಡಕಾಯಿಸಿದ್ದರು ಎನ್ನಲಾಗಿದೆ. ಅಲೋಕ್ ಪ್ರಸಾದ್ ರಾಜಸ್ಥಾನದ ಮಾಜಿ ಗವರ್ನರ್ ಅವರ ಮಗ ಎಂಬುದು ತಿಳಿದು ಬಂದಿದೆ!
ಅಂಜನಾ ಈಗ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಹತ್ರಾಸ್ ನ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡಿದ್ದ ಕಮ್ಯುನಿಸ್ಟರು, ಬುದ್ಧಿಜೀವಿಗಳು ಅಂಜನಾ ಪ್ರಕರಣದಲ್ಲಿ ಮೌನವನ್ನು ತಾಳಿದ್ದಾರೆ. ಆರೋಪಿ ಮುಸ್ಲೀಂ ಎಂದು ತಿಳಿದಾಕ್ಷಣ ಸೋ ಕಾಲ್ಡ್ ಬುದ್ಧಿಜೀವಿಗಳು ನಾಪತ್ತೆಯಾಗುವುದು ಸಾಮಾನ್ಯ. ಇದೇ ಬುದ್ಧಿಜೀವಿಗಳು ತನಿಷ್ಕ್ ಪರ ಮಾತುಗಳನ್ನಾಡಿ ಛೀಮಾರಿಗೆ ಒಳಗಾಗಿದ್ದಾರೆ ಕೂಡ!
