National

ಆಕಾಶಕ್ಕೆ ಚಿಮ್ಮಲಿದೆ ಇಸ್ರೊದ ಮತ್ತೊಂದು ಕನಸು; ಭಾರತದ ಹೊಸ ಮೈಲಿಗಲ್ಲು!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತನ್ನ ಸಂವಹನಾ ಉಪಗ್ರಹ GSAT-7A ವನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಉಡಾವಣೆ ಮಾಡಲಿದೆ. ಮಂಗಳವಾರ ಅಂದರೆ ಇಂದು ಮಧ್ಯಾಹ್ನ 2.10 ರಿಂದ ಉಪಗ್ರಹ ಉಡಾವಣೆಗೆ 26 ಗಂಟೆಗಳ ಕೌಂಟ್ ಡೌನ್ ಶುರುವಾಗಿದೆ.

ನಾಳೆ ಮಧ್ಯಾಹ್ನ ಅಂದರೆ ಬುಧವಾರ ಮಧ್ಯಾಹ್ನ 4.10 ರ ವೇಳೆಗೆ ಎರಡನೇ ಲಾಂಚ್ ಪ್ಯಾಡ್ ನಿಂದ ಉಡಾವಣೆಯಾಗಲಿದೆ. ಇಸ್ರೊನ ಅಧಿಕಾರಿಗಳು ಮಿಷನ್ ರೆಡಿನೆಸ್ ರಿವ್ಯೂ ಕಮಿಟಿಯವರು 26 ಗಂಟೆಗಳ ಕೌಂಟ್ ಡೌನ್ ಗೆ ಒಪ್ಪಿಗೆ ನೀಡಿದೆ.

GSAT-7A ಉಪಗ್ರಹ 2250 ಕೆ.ಜಿ ಭಾರವಿದ್ದು, ಕು-ಬ್ಯಾಂಡ್ ನ ಬಳಕೆದಾರರಿಗೆ ಸಂವಹನಾ ಸಾಮರ್ಥ್ಯವನ್ನು ನೀಡುತ್ತದೆ. ಇದು ಇಸ್ರೊವಿನ 39 ನೇ ಸಂವಹನಾ ಉಪಗ್ರಹವಾಗಲಿದೆ. ಇದು ಪ್ರಮುಖವಾಗಿ ಭಾರತೀಯ ವಾಯುಸೇನೆಗೆ ಮತ್ತಷ್ಟು ವ್ಯಾಪ್ತಿಯನ್ನು ನೀಡಲಿದೆ.

ಭಾರತದ ಇಸ್ರೊ ಇನ್ನು 26 ಗಂಟೆಗಳಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಾಧಿಸಲಿದೆ. ಇಸ್ರೊವಿನ ಈ ಸಾಧನೆಗೆ ಅದಾಗಲೇ ಕೌಂಟ್ ಡೌನ್ ಶುರುವಾಗಿದೆ.

Click to comment

Leave a Reply

Your email address will not be published. Required fields are marked *

Most Popular

To Top