National

ಅರ್ನಬ್ ಗೋಸ್ವಾಮಿಗೇ ಈ ಗತಿಯಾದರೆ…!

ಅರ್ನಬ್ ಗೋಸ್ವಾಮಿ ಕಳೆದ ಕೆಲವಾರು ತಿಂಗಳುಗಳಿಂದ ಇಡಿಯ ಭಾರತದಲ್ಲಿ ಕೇಳಿಬರುತ್ತಿರುವ ಏಕೈಕ ಪತ್ರಕರ್ತನ ಹೆಸರು. ಅದರಲ್ಲೂ ಮಹಾರಾಷ್ಟ್ರ ಸಕರ್ಾರ ವಿನಾಕಾರಣ ಗೂಂಡಾಗಳಂತೆ ಆತನನ್ನು ಬಂಧಿಸಿದ ಮೇಲಂತೂ ಅರ್ನಬ್ ರಾಷ್ಟ್ರದ ಹೀರೋ ಆಗಿ ಕಂಡು ಬರುತ್ತಿದ್ದಾನೆ. ಇತ್ತೀಚೆಗೆ ಆತನನ್ನು ಎನ್ಕೌಂಟರ್ ಸ್ಪೆಷಲಿಸ್ಟ್ ವಝೆ ಮನೆಗೆ ನುಗ್ಗಿ ಬಂಧಿಸುವುದರೊಂದಿಗೆ ಒಟ್ಟಾರೆ ಕಥನ ಕೆಟ್ಟ ಸ್ವರೂಪವನ್ನು ಪಡೆದುಕೊಂಡಿತು. ತನ್ನ ಪೌರುಷವನ್ನು ತೋರಿಸಲು ಮಹಾರಾಷ್ಟ್ರ ಸಕರ್ಾರ 40 ಪೊಲೀಸರನ್ನು ಮತ್ತು ಎಕೆ47 ಹಿಡಿದ ವಿಶೇಷ ಪೊಲೀಸರನ್ನೂ ಬಳಸಿಕೊಂಡಿತ್ತು. ಮನೆಗೆ ನುಗ್ಗಿ ಅರ್ನಬ್ನನ್ನು ಎಳದಾಡಿದ್ದಲ್ಲದೇ ಆತನ ಮಗನ ಮೇಲೆ ಕೈಮಾಡಿ ಕ್ಯಾಮೆರಾಗಳ ಮುಂದೆಯೇ ಎಳೆದೊಯ್ದು ಪೊಲೀಸ್ ವ್ಯಾನ್ ಹತ್ತಿಸಲಾಯ್ತು. ಪತ್ರಕರ್ತರೊಂದಿಗೆ ಮಾತನಾಡಲೂ ಅವಕಾಶ ಕೊಡಲಿಲ್ಲ. ಇಷ್ಟಕ್ಕೂ ಬಂಧಿಸುವ ವಿಶೇಷವಾದ ವಾರೆಂಟ್ ಕೂಡ ಅವರು ಹೊತ್ತು ತಂದಿರಲಿಲ್ಲ. ಅರ್ನಬ್ನನ್ನು ಹೀಗೆ ಎಳೆದೊಯ್ಯಲು ಪೊಲೀಸರು ಕೊಟ್ಟ ಕಾರಣ ಕಳೆದ ವರ್ಷ ಮುಚ್ಚಿಹೋದ ಅನ್ವಯ್ ನಾಯ್ಕ್ನ ಆತ್ಮಹತ್ಯಾ ಪ್ರಕರಣದ ಹಿನ್ನೆಲೆ. ವಾಸ್ತವವಾಗಿ ಮೇ 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಂತಹ ಅನ್ವಯ್ ನಾಯ್ಕ್ ಕಾನ್ಕಾಡರ್್ ಎಂಬ ಕಂಪೆನಿಯನ್ನು ನಡೆಸುತ್ತಿದ್ದು ಅದು ಒಳಾಂಗಣ ವಿನ್ಯಾಸದ ಕೆಲಸ ನಿರ್ವಹಿಸುತ್ತಿತ್ತು. ಅರ್ನಬ್ ರಿಪಬ್ಲಿಕ್ ಟಿವಿಯ ಸ್ಟುಡಿಯೊ ವಿನ್ಯಾಸಕ್ಕೆಲ್ಲ ಕಂಪೆನಿಯನ್ನು ಕೇಳಿಕೊಂಡಿದ್ದ ಎನ್ನಲಾಗುತ್ತದೆ. ಒಟ್ಟಾರೆ 83 ಲಕ್ಷದಷ್ಟು ಹಣವನ್ನು ಆತ ಬಾಕಿ ಕೊಡಬೇಕಿತ್ತಂತೆ. ಹೀಗಾಗಿಯೇ ತನ್ನ ಮೇಲೆ ಸಾಲವಾಯಿತೆಂದು ಬರೆದುಕೊಂಡ ಅನ್ವಯ್ ತನ್ನ ತಾಯಿಯೊಂದಿಗೆ ಸೇರಿ ಆತ್ಮಹತ್ಯೆ ಮಾಡಿಕೊಂಡುಬಿಟ್ಟ. ಸಾಯುವಾಗ ಬರೆದಿಟ್ಟ ಪತ್ರದಲ್ಲಿ ಅರ್ನಬ್ನ ಹೆಸರು ಬರೆದಿದ್ದಲ್ಲದೇ ನಾಲ್ಕು ಕೋಟಿ ಬಾಕಿ ಉಳಿಸಿಕೊಂಡಿದ್ದ ಫಿರೋಜ್ ಶೇಕ್ ಮತ್ತು 55 ಲಕ್ಷಕ್ಕೂ ಹೆಚ್ಚು ಬಾಕಿ ಉಳಿಸಿಕೊಂಡಿದ್ದ ನಿತೇಶ್ ಶಾರದಾನ ಹೆಸರೂ ಸೇರಿಸಿದ್ದ. ಅನ್ವಯ್ನ ಮಗಳು ಈ ಮೂವರಿಗೂ ಸಂಪರ್ಕ ಬಲವಾಗಿತ್ತೆಂದೂ ಮೂವರೂ ಮಾತನಾಡಿಕೊಂಡೇ ತನ್ನ ತಂದೆಗೆ ಮೋಸ ಮಾಡಿದ್ದಾರೆಂದು ಆರೋಪ ಮಾಡಿದ್ದಳು. ಮುಂದೆ ವಿಚಾರಣೆಯನ್ನು ತೀವ್ರಗತಿಯಲ್ಲಿ ನಡೆಸಿದ ರಾಯ್ಗಢದ ಪೊಲೀಸರು ಮೂರೂ ವ್ಯಕ್ತಿಗಳಿಗೆ ಪರಿಚಯವಿರುವುದರ ಬಗ್ಗೆ ಯಾವ ಸಾಕ್ಷಿಯೂ ಲಭ್ಯವಿಲ್ಲವೆಂದು ಹೇಳಿದರಲ್ಲದೇ ಅನ್ವಯ್ನ ಕಂಪೆನಿಯ ಬಗ್ಗೆ ವಿಶೇಷವಾದ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಮಪರ್ಿಸಿದರು. ಅದರ ಪ್ರಕಾರ ಆತನ ಕಂಪೆನಿ ಕಳೆದ ಆರೇಳು ವರ್ಷಗಳಿಂದ ಸುಮಾರು 26.5 ಕೋಟಿಯಷ್ಟು ಸಾಲವನ್ನುಳಿಸಿಕೊಂಡಿತ್ತಲ್ಲದೇ ತಮ್ಮ ಅನೇಕ ಗ್ರಾಹಕರ ಕೆಲಸವನ್ನು ಅರ್ಧಕ್ಕೇ ಬಿಟ್ಟು ಹೋಗುತ್ತಿದ್ದರು. ಈ ಕಾರಣಕ್ಕಾಗಿಯೇ ಅನೇಕರು ಅವರಿಗೆ ಹಣ ಕೊಡಲು ಸತಾಯಿಸುತ್ತಿದ್ದುದೂ ಇದೆ. ಹೀಗಾಗಿ ಈ ಸಾವಿಗೆ ಅರ್ನಬ್ ಗೋಸ್ವಾಮಿಯಾಗಲೀ ಇತರರಾಗಲೀ ಕಾರಣವಲ್ಲವೆಂದು ವರದಿ ಸ್ಪಷ್ಟವಾಗಿ ಹೇಳಿತ್ತು. ಮತ್ತು ಇಡಿಯ ಪ್ರಕರಣವನ್ನು ಕಳೆದ ವರ್ಷವೇ ಮುಚ್ಚಿ ಹಾಕಿ ಎಲ್ಲರಿಗೂ ನೆಮ್ಮದಿ ಕೊಟ್ಟಿತ್ತು. ಹೀಗೆ ಪೊಲೀಸರಿಂದಲೇ ಮುಚ್ಚಿಹಾಕಲ್ಪಟ್ಟ, ಕೋಟರ್ಿನ ಪಡಸಾಲೆಗಳಲ್ಲಿ ಇನ್ನು ಚಚರ್ೆಯ ಅಗತ್ಯವಿಲ್ಲವೆಂದು ಪಕ್ಕಕ್ಕಿಟ್ಟ ಕಡತವನ್ನು ಅದೇ ಕೋಟರ್ಿನ ಅನುಮತಿಯನ್ನೂ ಪಡೆಯದೇ ರಾಯಗಢ ಪೊಲೀಸರು ಮತ್ತೆ ಕೇಸು ತೆರೆದು ಅರ್ನಬ್ನನ್ನು ಎಳಕೊಂಡು ಹೋಗಿದ್ದಾರೆ. ಏಕಿರಬಹುದು?


ಉತ್ತರ ಹುಡುಕುವುದು ಬಲು ಕಷ್ಟವಲ್ಲ. ಟೈಮ್ಸ್ ನೌ ಚಾನೆಲ್ನಿಂದ ತನ್ನ ನೇರ ನಿಷ್ಠುರತೆಯ ಕಾರಣಕ್ಕೋಸ್ಕರವೇ ಹೊರದೂಡಲ್ಪಟ್ಟಿದ್ದ ಅರ್ನಬ್ ಬೇರೆಯವರಂತೆ ಕೆಲಸ ಅರಸಿಕೊಂಡು ಮತ್ತೊಂದು ಕಂಪೆನಿಗೆ ಹೋಗಲಿಲ್ಲ. ತಾನೇ ರಿಪಬ್ಲಿಕ್ ಎನ್ನುವ ಸೌಧವನ್ನು ಕಟ್ಟಿದ್ದಲ್ಲದೇ ಬಲುಬೇಗ ಅದನ್ನು ನಂಬರ್ ಒನ್ ಕೂಡ ಆಗಿಸಿಬಿಟ್ಟ. ವ್ಯಕ್ತಿಯೊಬ್ಬನಿಗೆ ತನ್ನ ಮೇಲಿರುವ ವಿಶ್ವಾಸ ಎಂತಹ ಅದ್ಭುತವಾದ ಕೆಲಸವನ್ನು ಮಾಡಬಲ್ಲದು ಎಂಬುದಕ್ಕೆ ಅರ್ನಬ್ನಿಗಿಂತ ಸಮರ್ಥವಾದ ಉದಾಹರಣೆ ಮತ್ತೊಂದಿರಲಾರದು. ಆತನನ್ನು ಕಂಡರಾಗದು ಎನ್ನುವವರೂ ಕೂಡ ಆತ ನಡೆಸುವ ಚಚರ್ೆಯನ್ನು ಬಾಯ್ಮುಚ್ಚಿಕೊಂಡೇ ನೋಡುತ್ತಿದ್ದರು. ಅಥವಾ ಚಚರ್ೆಯುದ್ದಕ್ಕೂ ಆತ ಯಾರಿಗೂ ಬಾಯಿ ತೆಗೆಯಲು ಬಿಡುತ್ತಲೇ ಇರಲಿಲ್ಲ. ಆ ಬಗೆಯ ವಾದ ವಿವಾದಗಳು ಇಷ್ಟವಾಗದಿದ್ದರೂ ಅರ್ನಬ್ನ ವಿಚಾರಕ್ಕೆ ಬದ್ಧವಾಗಿರುವಂತಹ ಶೈಲಿ ಎಂಥವನಿಗೂ ಖುಷಿ ಕೊಡುತ್ತಿತ್ತು. ಅದರಲ್ಲೂ ಆತ ಬಲಪಂಥೀಯ ವಿಚಾರಗಳಿಗೆ ತನ್ನನ್ನು ತಾನು ತೆರೆದುಕೊಂಡು ಎಡಪಂಥೀಯರಿಗೆ ಕೊಡುತ್ತಿದ್ದ ಹೊಡೆತಗಳು ಅಸಾಮಾನ್ಯವಾಗಿರುತ್ತಿದ್ದವು. ಅವನ ಓಟದ ಭರದಲ್ಲಿ ಎನ್ಡಿಟಿವಿ ಹೆಚ್ಚು-ಕಡಿಮೆ ಮುಚ್ಚಿಯೇ ಹೋಯ್ತು. ಬಾಕರ್್ನ ರೇಟಿಂಗ್ ಪಟ್ಟಿಯಲ್ಲಿ ಎನ್ಡಿಟಿವಿ ಕೊನೆಯಿಂದ ಗಣಿಸಲ್ಪಡುತ್ತಿತ್ತು. ಇಂಡಿಯಾ ಟುಡೇ, ಇಂಡಿಯಾ ಟಿವಿ, ಟೈಮ್ಸ್ ನೌ ಇವೆಲ್ಲವೂ ಅರ್ನಬ್ನ ಖ್ಯಾತಿಯ ಎದುರು ಪತರಗುಟ್ಟಿದ್ದಂತೂ ನಿಜ. ಇಂಗ್ಲೀಷ್ ಚಾನೆಲ್ಅನ್ನೇ ನೋಡುವ, ಜನಾಭಿಪ್ರಾಯವನ್ನು ರೂಪಿಸಬಲ್ಲ ಒಂದಷ್ಟು ಪೇಜ್3 ಜನರಿದ್ದಾರಲ್ಲ, ಅವರೆಲ್ಲರನ್ನೂ ಅರ್ನಬ್ ತನ್ನ ಹಿಡಿತಕ್ಕೆ ತೆಗೆದುಕೊಂಡಾಗಿತ್ತು. ಇದು 70 ವರ್ಷಗಳ ಕಾಲ ಎಡಪಂಥೀಯರು, ಕಾಂಗ್ರೆಸ್ಸಿಗರು ಕಟ್ಟಿದ ಬಲುದೊಡ್ಡ ಸೌಧದ ಒಂದೊಂದೇ ಗೋಡೆಯನ್ನು ಉರುಳಿಸಲಾರಂಭಿಸಿತ್ತು. ಭೀಮಾ ಕೋರೆಂಗಾವ್ ಗಲಾಟೆಯಲ್ಲಿ ದಲಿತರು ಮರಾಠರನ್ನು ಕದನಕ್ಕೆ ಹಚ್ಚಿ ಸಮಾಜದ ಸ್ವಾಸ್ಥ್ಯ ಕೆಡಿಸಲೆತ್ನಿಸಿದವರನ್ನು ಸಕರ್ಾರವೇ ಬಿಟ್ಟುಬಿಟ್ಟಿತ್ತು, ಅರ್ನಬ್ ಬಿಡಲಿಲ್ಲ! ಸಾಕ್ಷಿಗಳ ಮೇಲೆ ಸಾಕ್ಷಿಗಳನ್ನು ತೆರೆದಿಡುತ್ತಾ ಅವರೆಲ್ಲ ಜೈಲಿನಲ್ಲಿ ಕೊಳೆಯುವಂತೆ ಮಾಡಿದ. ಇಷ್ಟೇ ಆಗಿದ್ದರೆ ರಾಜಕೀಯ ಧುರೀಣರು ಸುಮ್ಮನಿರುತ್ತಿದ್ದರೇನೋ, ಅರ್ನಬ್ ಜೇನುಗೂಡಿಗೇ ಕೈ ಹಾಕಿಬಿಟ್ಟ. ಪಾಲ್ಘರ್ನಲ್ಲಿ ಸಾಧುಗಳನ್ನು ಬರ್ಬರವಾಗಿ ಹತ್ಯೆ ಮಾಡಿದರಲ್ಲ, ಉದ್ಧವ್ಠಾಕ್ರೆಯ ಸಕರ್ಾರ ಅದನ್ನು ನೋಡಿಕೊಂಡು ಸುಮ್ಮನಾಗಿಬಿಟ್ಟಿತು, ಅರ್ನಬ್ ಬಿಡಲಿಲ್ಲ. ಪ್ರತಿದಿನವೂ ಉದ್ಧವ್ನ ಸಕರ್ಾರವನ್ನು ಪ್ರಶ್ನಿಸುತ್ತಿದ್ದ. ಅವನಿಗೆ ಬೆಂಬಲ ಕೊಟ್ಟ ಕಾಂಗ್ರೆಸ್ಸನ್ನು ನಗ್ನವಾಗಿ ನಿಲ್ಲಿಸುತ್ತಿದ್ದ. ಇಷ್ಟಕ್ಕೂ ಅರ್ನಬ್ನ ಮತ್ತು ಕಾಂಗ್ರೆಸ್ನ ದ್ವೇಷ ಹೊಸತೇನಲ್ಲ. ಆತನ ಚಚರ್ೆಗಳಲ್ಲಿ ಕಾಂಗ್ರೆಸ್ಸಿಗರು ಪಾಲ್ಗೊಳ್ಳುವುದನ್ನು ನಿಲ್ಲಿಸಿ ವರ್ಷಗಳೇ ಉರುಳಿಹೋಗಿವೆ. ಈಗಂತೂ ಪಾಲ್ಘರ್ನ ಗಲಾಟೆಯ ನಂತರ ಕಾಂಗ್ರೆಸ್ ಧಗಧಗ ಉರಿಯುತ್ತಿದೆ. ಏಕೆಂದರೆ ಸೋನಿಯಾಳನ್ನು ರಾಜ್ದೀಪ್ ಸರದೇಸಾಯಿಯಂತಹ ಪತ್ರಕರ್ತರು ಹೆಸರು ಹಿಡಿದು ಕರೆಯುವುದಕ್ಕೆ ಹೆದರಿ ಗೌರವ ಕೊಟ್ಟು ಸಂಬೋಂಧಿಸುವುದಲ್ಲದೇ ಸಂದರ್ಶನದಲ್ಲಿ ಪ್ರಶ್ನೆ ಕೇಳುವಾಗ ಅಡುಗೆ ಏನು ಮಾಡುತ್ತಿದ್ದೀರಿ? ಎಂಬಂತಹ ಕ್ಷುಲ್ಲಕ ಪ್ರಶ್ನೆಗಳನ್ನು ಕೇಳುವಾಗ, ಅರ್ನಬ್ ಆಕೆಯನ್ನು ಆಂಟೋನಿಯೋ ಮಾಯ್ನೋ ಎಂಬ ಆಕೆಯ ಹಳೆಯ ಹೆಸರಿನಿಂದಲೇ ಸಂಬೋಧಿಸಿದ. ಮತ್ತೆ ಮತ್ತೆ ಅದೇ ಹೆಸರಿನಿಂದ ಆಕೆಯನ್ನು ಕರೆದ. ಪರಿಣಾಮ ಪ್ರತಿಯೊಬ್ಬರೂ ಆಕೆಯನ್ನು ಅದೇ ಹೆಸರಿನಿಂದ ಕರೆಯುವ ಧೈರ್ಯ ತೋರಲಾರಂಭಿಸಿದರು. ಇದು ಕಾಂಗ್ರೆಸ್ಸಿನ ಸೌಧ ಉರುಳುವ ಮೊದಲ ಲಕ್ಷಣವಾಗಿತ್ತು. ಪಾಲ್ಘರ್ ಸಾಧುಗಳ ಕೊಲೆಗೆ ಉತ್ತರಿಸುವಂತೆ ಆತ ಸೋನಿಯಾಳನ್ನು ಪೀಡಿಸುತ್ತಿದ್ದ. ಕುದಿಯುತ್ತಿದ್ದ ಕಾಂಗ್ರೆಸ್ಸಿಗೆ ಕಾರಣವೊಂದು ಬೇಕಿತ್ತು. ಅರ್ನಬ್ ಸುಮ್ಮನಾಗಲಿಲ್ಲ. ದೇಶದೆಲ್ಲರೂ ಈ ವಿಚಾರವನ್ನು ಮರೆತೇ ಹೋಗಿದ್ದಾಗಲೂ ತಾನು ಮಾತ್ರ ಮರೆಯಲಿಲ್ಲ. ಪಾಲ್ಘರ್ ಅನ್ನು ಪದೇ-ಪದೇ ನೆನಪಿಸಿಕೊಟ್ಟ. ಇಷ್ಟೂ ಸಾಲದೆಂಬಂತೆ ಸುಷಾಂತ್ಸಿಂಗ್ ರಜಪೂತ್ನ ಆತ್ಮಹತ್ಯೆಯ ನಂತರ ಎಲ್ಲರೂ ಕೈಚೆಲ್ಲಿ ಕುಳಿತಿದ್ದಾಗ ಅದನ್ನು ಕೊಲೆ ಎಂದು ಮೊದಲು ದನಿ ಎತ್ತಿದವನೇ ಅರ್ನಬ್. ಮತ್ತು ಪೊಲೀಸರಿಗಿಂತ ಚುರುಕಾಗಿ ಈ ಕೇಸಿನಲ್ಲಿ ಪ್ರಗತಿ ಸಾಧಿಸುತ್ತಾ ಮುನ್ನುಗ್ಗಿದ ಆತ ಪೊಲೀಸರನ್ನು ಕೆಲಸಕ್ಕೆ ಬಾರದವರೆಂದು ಸಾಬೀತು ಪಡಿಸುವಲ್ಲಿ ಗೆಲುವು ಕಂಡ. ಇದು ಪೊಲೀಸರ ಕಣ್ಣು ಕೆಂಪಗಾಗಿಸಿತು. ಬಿಹಾರದ ಪೊಲೀಸರು ಈ ಕೇಸಿನ ವಿಚಾರಣೆಗೆಂದು ಬಂದಾಗ ಎರಡೂ ರಾಜ್ಯದ ಪೊಲೀಸರು ಕಿತ್ತಾಡುವಂತೆ ಆಗಿದ್ದೂ ಕೂಡ ಅರ್ನಬ್ನ ಕಾರಣಕ್ಕೆ ಎಂಬುದು ಸರ್ವವಿಧಿತ. ಇಷ್ಟೇ ಆಗಿದ್ದರೂ ಸುಮ್ಮನಿರಬಹುದಿತ್ತೇನೋ. ಆತ ಒಂದು ಹೆಜ್ಜೆ ಮುಂದೆ ಹೋಗಿ ಬಾಲಿವುಡ್ನ ಡ್ರಗ್ ಮಾಫಿಯಾವನ್ನು ಕೆಣಕಿದ. ದೀಪಿಕಾ ಪಡುಕೋಣೆಯಂತಹ ನಟಿಯರು ಈ ಸುಳಿಯಲ್ಲಿ ಸಿಲುಕಿದರು. ಇಲ್ಲಿಗೇ ನಿಲ್ಲದೇ ಇನ್ನು ಕೆಲವೇ ದಿನಗಳಲ್ಲಿ ಇದು ಶಾರುಖ್, ಸಲ್ಮಾನ್ನಂತಹ ದೊಡ್ಡ-ದೊಡ್ಡವರ ಅಂಗಳಕ್ಕೆ ತಲುಪಿಬಿಡುತ್ತಿತ್ತು. ಈ ಹೊತ್ತಿನಲ್ಲಿ ಆತಂಕಕ್ಕೊಳಗಾಗಿದ್ದು ದಾವುದ್ ಪೋಷಿತ ಮುಂಬೈನ ಅಂಡರ್ವಲ್ಡರ್್. ಹೇಗಾದರೂ ಮಾಡಿ ಅರ್ನಬ್ ಗೋಸ್ವಾಮಿಯನ್ನು ಮತ್ತವನ ರಿಪಬ್ಲಿಕ್ಅನ್ನು ಮುಗಿಸಿಬಿಡಬೇಕೆಂದು ಅವರು ಹೊಂಚು ಹಾಕುತ್ತಲೇ ಇದ್ದರು. ಅರ್ನಬ್ ಇಂಗ್ಲೀಷ್ ಮಾಧ್ಯಮವಷ್ಟೇ ಸಾಲದು ಎಂಬಂತೆ ಹಿಂದಿ ಚಾನೆಲ್ಗೂ ಕೈ ಹಾಕಿ ರಿಪಬ್ಲಿಕ್ ಭಾರತವನ್ನು ಕೆಲವೇ ತಿಂಗಳಲ್ಲಿ ಭಾರತದ ಅತ್ಯಂತ ಹೆಚ್ಚು ಟಿಆರ್ಪಿಯುಳ್ಳ ಹಿಂದಿ ಚಾನೆಲ್ ಆಗಿ ಮಾರ್ಪಡಿಸಿಬಿಟ್ಟಿದ್ದ. ಒಂದೆಡೆ ನಿರ್ಣಯ ಕೈಗೊಳ್ಳಬಲ್ಲ ಜನರ ನಡುವೆ ಆತ ನಂಬರ್ ಒನ್ ಆಗಿ ಹೊರಹೊಮ್ಮಿದರೆ ಮತ್ತೊಂದೆಡೆ ಸಾಮಾನ್ಯ ಜನರ ನಡುವೆಯೂ ಆತನ ಸುದ್ದಿ ಸುಲಭವಾಗಿ ತಲುಪುವಂತಾಗಿತ್ತು. ಉರಿಸಿಕೊಳ್ಳದಿರುತ್ತಾರೇನು?! ಮಿಡಿಯಾಗಳು ಅವನ ವಿರುದ್ಧ ಕತ್ತಿ ಮಸಿಯುತ್ತಲೇ ಇದ್ದವು. ಆತನಿಗೀಗ ವಿರೋಧಿಗಳು ಒಬ್ಬಿಬ್ಬರಲ್ಲ. ದಾವೂದ್ ಮತ್ತವನ ಗ್ಯಾಂಗು, ಇಡಿಯ ಬಾಲಿವುಡ್, ಹೆಚ್ಚು-ಕಡಿಮೆ ಬಿಜೆಪಿಯನ್ನುಳಿದು ಇತರೆಲ್ಲ ಪಕ್ಷಗಳು, ಸ್ವತಃ ಮಾಧ್ಯಮದ ಗೆಳೆಯರೂ ಕೂಡ ಅವನನ್ನು ಮಟ್ಟಹಾಕಲು ಕಾದು ನಿಂತಿದ್ದರು. ಆ ವೇಳೆಗೆ ಬಿಎಆರ್ಸಿಯ ಟಿಆರ್ಪಿ ಹಗರಣ ಹೊರಬಂತು. ಇಂಡಿಯಾ ಟುಡೆ ಮನೆ-ಮನೆಗಳಿಗೆ ಹಣಕೊಟ್ಟು ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳುವ ಹುಚ್ಚು ಸಾಹಸಕ್ಕೆ ಕೈಹಾಕಿ ಸಿಕ್ಕಿಬಿದ್ದಿತ್ತು. ಮುಂಬೈನ ಪೊಲೀಸ್ ಕಮೀಷನರ್ ಪರಮ್ವೀರ್ ರಿಪಬ್ಲಿಕ್ನ ವಿರುದ್ಧ ತನ್ನೆಲ್ಲ ಆಕ್ರೋಶವನ್ನು ಹೊರಹಾಕುವ ಅವಕಾಶವಾಗಿ ಈ ಘಟನೆಯನ್ನು ಬಳಸಿಕೊಂಡು ಇಂಡಿಯಾ ಟುಡೆಗೆ ಬದಲು ಸ್ವತಃ ರಿಪಬ್ಲಿಕ್ ಈ ಹಗರಣದಲ್ಲಿ ಸಿಲುಕಿಕೊಂಡಿದೆ ಎಂದು ಪತ್ರಿಕಾಗೋಷ್ಠಿಯಲ್ಲೇ ಹೇಳಿಬಿಟ್ಟ. ಇಂಡಿಯಾ ಟುಡೆಯು ಸೇರಿದಂತೆ ಎಲ್ಲ ಚಾನೆಲ್ಗಳು ಇದನ್ನು ಹಬ್ಬದೂಟವೆಂಬಂತೆ ವರದಿ ಮಾಡಿದವು. ಅಂದು ರಾತ್ರಿಯೇ ತಿರುಗಿಬಿದ್ದ ಅರ್ನಬ್ ಬಾಕರ್್ನ ಕಡತಗಳನ್ನೇ ಮುಂದಿರಿಸಿ ಈ ಹಗರಣದಲ್ಲಿ ನಿಜವಾದ ಪಾಲುದಾರರು ಇಂಡಿಯಾ ಟುಡೆ ಎಂಬುದನ್ನು ಹೊರಹಾಕಿದ! ಇದು ಇಡಿಯ ಮುಂಬೈ ಪೊಲೀಸರ ಮೇಲಿನ ವಿಶ್ವಾಸವನ್ನು ಧರಾಶಾಯಿಗೊಳಿಸಿತು. ಅವರು ಮುಖ ಮುಚ್ಚಿಕೊಂಡು ತಿರುಗಾಡಬೇಕಿತ್ತು. ಗೆಲುವಿನ ಕುದುರೆಯನ್ನೇರಿ ಕುಳಿತಿದ್ದ ಅರ್ನಬ್ ಪರಮವೀರ್ಸಿಂಗರನ್ನು ಕೆಣುಕುತ್ತಲೇ ಹೋದ. ಸಹಿಸಲಾಗದ ಪರಮವೀರ್ ತನ್ನ ದಾಳವನ್ನೆಲ್ಲಾ ಪ್ರಯೋಗಿಸಿ ಹಳೆಯ ಈ ಕಡತವನ್ನು ತೆರೆಸಿ ಅರ್ನಬ್ನನ್ನು ಜೈಲಿನೊಳಗೆ ಕೂಡಿಹಾಕಿಯೇಬಿಟ್ಟ. ಮೇಲ್ನೋಟಕ್ಕೆ ಅರ್ನಬ್ನ ಬಂಧನ ತಪ್ಪೆಂದು ಎಂಥವರೂ ಹೇಳಬಲ್ಲರು. ಆದರೆ ಸದಾ ಹಿಂದೂವಿರೋಧಿಯಾಗಿ ಸ್ವತಃ ಸಾಧ್ವಿ ಪ್ರಜ್ಞಾ ಸಿಂಗ್ಳನ್ನು ಅತ್ಯಂತ ಕೆಟ್ಟದಾಗಿ ಪೀಡಿಸಿದ ಪರಮವೀರ್ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿಯೇ ಅರ್ನಬ್ನನ್ನು ಎಳಕೊಂಡು ಹೊರಟಿದ್ದ!
ಅಚ್ಚರಿಯೇನು ಗೊತ್ತೇ? ಇತರೆ ಪತ್ರಕರ್ತರ್ಯಾರೂ ಈ ಬಂಧನದ ಬಗ್ಗೆ ವಿಶೇಷ ಕಾರ್ಯಕ್ರಮ ಮಾಡುವುದಿರಲಿ ನಿಜವಾದ ಕಾಳಜಿಯನ್ನೂ ವ್ಯಕ್ತಪಡಿಸಲಿಲ್ಲ. ಪತ್ರಕರ್ತರ ಮೇಲಿನ ಈ ಬಗೆಯ ದೌರ್ಜನ್ಯವನ್ನು ಖಂಡಿಸಬೇಕಾಗಿರುವ ಎಡಿಟಸರ್್ ಗಿಲ್ಡ್ 348 ಪದಗಳ ಪತ್ರವೊಂದನ್ನು ಬಿಡುಗಡೆ ಮಾಡಿ ಬಂಧನವನ್ನು ಖಂಡಿಸಿತಾದರೂ ಪತ್ರದ ಮುಕ್ಕಾಲುಭಾಗವನ್ನು ರಿಪಬ್ಲಿಕ್ ಟಿವಿಯ ಪತ್ರಿಕೋದ್ಯಮದ ಶೈಲಿ ಸೂಕ್ತವಲ್ಲವೆಂಬುದನ್ನೇ ಹೇಳಿತು. ನ್ಯೂಸ್ ಬ್ರಾಡ್ಕಾಸ್ಟಸರ್್ ಅಸೋಸಿಯೇಷನ್ ಕೂಡ ಇದಕ್ಕಿಂದ ಭಿನ್ನವಾಗಿರಲಿಲ್ಲ. ಸಂಶೊಧನಾತ್ಮಕ ಪತ್ರಿಕೋದ್ಯಮದ ಬಗ್ಗೆಯೇ ಪ್ರಶ್ನೆ ಕೇಳಿ ತಮ್ಮ ಜೊತೆಗಾರರನ್ನು ಸಂಕಟಕ್ಕೆ ದೂಡುವ ಇಂತಹ ಪ್ರಯತ್ನಕ್ಕೆ ಕೈ ಹಾಕಬಾರದು ಎಂದುಬಿಟ್ಟಿತ್ತು. ಅಂದರೆ ಸುಷಾಂತ್ನ ವಿರುದ್ಧವಾಗಲೀ ಡ್ರಗ್ ಮಾಫಿಯಾದ ವಿರುದ್ಧವಾಗಲೀ ಪತ್ರಕರ್ತರು ಮಾತೇ ಆಡಬಾರದು ಎಂದರ್ಥ! ಕೆಲವು ಪತ್ರಕರ್ತರಂತೂ ಅರ್ನಬ್ನನ್ನು ನೇರವಾಗಿಯೇ ನಿಂದಿಸಿ ಆದರೂ ಬಂಧಿಸಿದ್ದು ತಪ್ಪು ಎಂದು ಹೇಳುವ ಮೂಲಕ ಈ ಅವಕಾಶವನ್ನು ಬಳಸಿಕೊಳ್ಳಲೆತ್ನಿಸಿದರು. ಇವರಿಗೆಲ್ಲ ಇರುವುದು ಒಂದೇ ಆಕ್ರೋಶ. ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಅರ್ನಬ್ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಲೇ ನಡೆದಿದ್ದಾನೆ. ಆತ ಇಂದು ಅತ್ಯಂತ ಪ್ರಖ್ಯಾತನಾಗಿ, ಅಗಾಧವಾಗಿ ಬೆಳೆದು ನಿಂತಿದ್ದಾನೆ. ಮತ್ತು ಆತನ ವಿರುದ್ಧ ಇವರು ಮಾಡಲೆತ್ನಿಸಿದ ಆರೋಪಗಳೆಲ್ಲವೂ ನಿರಾಧಾರವೆಂದು ಸಾಬೀತಾಗುತ್ತಲೇ ಇದೆ. ಅವನನ್ನು ತಡೆಯಲು ಅಥವಾ ಅವನ ವಿರುದ್ದ ಗೆಲ್ಲಲು ಇವರುಗಳಿಗಿದ್ದ ಉಪಾಯ ಇದೊಂದೇ. ಹೀಗಾಗಿ ಬಂಧಿಸಿಬಿಟ್ಟತು.


ಆದರೆ ಪ್ರಶ್ನೆ ಇರುವುದು ಬಿಜೆಪಿಯ ಪ್ರತಿಕ್ರಿಯೆಯಲ್ಲಿ. ಅರ್ನಬ್ನ ಬಂಧನಕ್ಕೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸಕರ್ಾರವನ್ನು ಕಾಂಗ್ರೆಸ್ಸು ಬಳಸಬಹುದಾದರೆ, ಆತನ ಬಿಡುಗಡೆಗೆ ನ್ಯಾಯವಾದ ಮಾರ್ಗದಲ್ಲೂ ಗೆಲುವು ಪಡೆಯಲು ಯತ್ನಿಸದಿರುವ ಬಿಜೆಪಿಯ ಕುರಿತಂತೆ ಏನೆಂದು ಹೇಳುವುದು?! ಒಬ್ಬರ ಬೆನ್ನನ್ನು ಮತ್ತೊಬ್ಬರು ಕೆರೆದು ಎಡಪಂಥೀಯರು ತಮ್ಮದ್ದೇ ಆದ ಪರಿಸರವೊಂದನ್ನು ಸೃಷ್ಟಿಸಿಕೊಂಡುಬಿಟ್ಟಿದ್ದಾರಲ್ಲವೇ, ಅಂಥದ್ದರಲ್ಲಿ ರಾಷ್ಟ್ರೀಯತೆಗಾಗಿ ಒಂದು ವಾತಾವರಣ ರೂಪಿಸುತ್ತಿರುವ ಅರ್ನಬ್ನಂಥವರನ್ನು ಬೆಂಬಲಿಸದ ಕೇಂದ್ರ ಸಕರ್ಾರಕ್ಕೆ ಏನೆಂದು ಹೇಳಬೇಕು. ಆದರೆ ಒಂದಂತೂ ನೆನಪಿನಲ್ಲಿಟ್ಟುಕೊಳ್ಳಿ ಒಮ್ಮೆ ಜೈಲಿನಿಂದ ಮರಳಿ ಬಂದವರು ಹಿಂದಿಗಿಂತಲೂ ಹೆಚ್ಚು ದೃಢರಾಗುತ್ತಾರೆ, ಸಮರ್ಥರಾಗುತ್ತಾರೆ. ಗಾಂಧೀಜಿಯ ವಿಚಾರದಲ್ಲೂ ಹೀಗೆಯೇ ಆಗಿದ್ದು. ಯಡ್ಯೂರಪ್ಪ ಜೈಲಿನಿಂದ ಮರಳಿಬಂದ ಮೇಲೆ ಮುಖ್ಯಮಂತ್ರಿಯೂ ಆದರು. ಜೈಲಿಗೆ ಹೋಗಿ ಮರಳಿ ಬರುವ ದಿನವೇ ಡಿಕೆಶಿಯನ್ನು ಹಾರ-ತುರಾಯಿಗಳಿಂದ ಸಿಂಗರಿಸಿ ಸ್ವಾಗತಿಸಲಾಗಿತ್ತು. ಆನಂತರ ಅವರು ಕಾಂಗ್ರೆಸ್ಸಿನ ಅಧ್ಯಕ್ಷರೂ ಆಗಿಬಿಟ್ಟರು. ಇನ್ನೀಗ ಅರ್ನಬ್ ಜೈಲಿನಿಂದ ಹೊರಗೆ ಬರುತ್ತಾನೆ. ಕಾಂಗ್ರೆಸ್ಸಿನ ನಿದ್ದೆ ನಿಶ್ಚಯವಾಗಿ ಹಾಳುಮಾಡಲಿದ್ದಾನೆ. ಶಿವಸೇನೆಗೆ ಆತನನ್ನೆದುರಿಸುವುದು ಸುಲಭವಾಗಲಾರದು. ಇರುವ ಒಂದೇ ಆತಂಕವೇನೆಂದರೆ ಆತನನ್ನು ನ್ಯಾಯಾಂಗ ಬಂಧನದ ನಡುವೆಯೂ ದಾವೂದ್ನ ಸಹಚರರೇ ತುಂಬಿರುವ ಮತ್ತೊಂದು ಜೈಲಿಗೆ ಒಯ್ಯಲಾಗುತ್ತಿದೆ. ಶಾಶ್ವತವಾಗಿ ಅವನ ದನಿಯನ್ನು ಅಡಗಿಸಿಬಿಡುತ್ತಾರಾ? ಭಯವಾಗುತ್ತಿರುವುದಂತೂ ನಿಜ. ಅರ್ನಬ್ನಂಥವನಿಗೆ ರಕ್ಷಣೆ ಕೊಡದ ಈ ದೆಹಲಿಯ ಮಂದಿ ಇತರೆ ಸಾಮಾನ್ಯ ಬಲಪಂಥೀಯರ ಕುರಿತಂತೆ ಯೋಚಿಸುವಷ್ಟು ಪುರಸೊತ್ತಿಟ್ಟುಕೊಂಡಿದ್ದಾರಾ? ಗೊತ್ತಿಲ್ಲ..

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top