International

ಅಮೇರಿಕಾ ಚುನಾವಣೆ – ಫಲಿತಾಂಶ ಇನ್ನೂ ನಿರ್ಧಾರವಾಗಿಲ್ಲ!

ಬಿಹಾರದ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದು ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರವೂ ಆಗಿಹೋಯ್ತು. ಈ ನಡುವೆಯೇ ಬಂಗಾಳ ಮತ್ತು ತಮಿಳುನಾಡಿನಲ್ಲಿ ಚುನಾವಣೆಗಳ ತಯಾರಿಯೂ ಆರಂಭವಾಗಿಬಿಟ್ಟಿದೆ. ಆದರೆ ಇದಕ್ಕೂ ಕೆಲವಾರು ತಿಂಗಳುಗಳ ಮುನ್ನವೇ ಶುರುವಾದ ಅಮೇರಿಕಾ ಚುನಾವಣೆಯ ನಿಖರವಾದ ಫಲಿತಾಂಶ ಮಾತ್ರ ಇನ್ನೂ ಬಂದಿಲ್ಲ. ಡೆಮಾಕ್ರಟ್ ಪಾಟರ್ಿಯ ಜೊ ಬೈಡನ್ ಗೆದ್ದಿದ್ದಾರೆಂದು ಎಲ್ಲ ಪತ್ರಿಕೆಗಳೂ ಹೇಳುತ್ತಿದ್ದರೂ ಸ್ವತಃ ಇನ್ನೂ ಅಧಿಕಾರ ಬಿಟ್ಟುಕೊಡದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ! ಜಾಜರ್ಿಯಾ, ಪೆನ್ಸಿಲ್ವೇನಿಯಾ, ಮಿಚಿಗನ್ ಮೊದಲಾದ ರಾಜ್ಯಗಳಲ್ಲಿ ಭಯಾನಕವಾದ ಮತಮೋಸ ನಡೆದಿದೆ ಎಂಬುದನ್ನು ಅವರು ಮೊದಲ ದಿನದಿಂದಲೇ ವಾದಿಸುತ್ತಾ ಬಂದಿದ್ದಾರೆ. ಫಲಿತಾಂಶದ ದಿನ ಹಿಂದೆಂದೂ ಇಲ್ಲದಷ್ಟು ಆಸಕ್ತಿಯಿಂದ ಈ ಬಾರಿ ಭಾರತೀಯರು ಟಿವಿಯ ಮುಂದೆ ಕುಳಿತಿದ್ದರು. ಬಹುಶಃ ಜಾಗತಿಕವಾಗಿ ಮೋದಿ ಭಾರತವನ್ನು ಎತ್ತರಕ್ಕೊಯ್ದುದರ ಪರಿಣಾಮವಾಗಿ ಇಂದು ನಮಗೆ ಈ ಆಸಕ್ತಿ-ಕಾಳಜಿಗಳು ಇರಬಹುದೇನೋ. ಈ ಹಿಂದಿನ ಚುನಾವಣೆಗಳನ್ನು ಇಷ್ಟು ಆಸಕ್ತಿಯಿಂದ ಭಾರತೀಯರು ಗಮನಿಸಿದ್ದು ಯಾರಿಗೂ ನೆನಪಿರಲಿಕ್ಕಿಲ್ಲ. ಫಲಿತಾಂಶವೂ ಕೂಡ ಕಳೆದ ಬಾರಿಯ ಬಿಹಾರ ಚುನಾವಣೆಯ ಫಲಿತಾಂಶಕ್ಕಿಂತಲೂ ಭಿನ್ನವಾಗೇನೂ ಇರಲಿಲ್ಲ. ಆರಂಭದಲ್ಲಿ ಮುಂದೋಡಿದ ಟ್ರಂಪ್ ಬರುಬರುತ್ತಾ ಭಯಾನಕವಾದ ಹಿನ್ನಡೆಯನ್ನು ಅನುಭವಿಸಿದರು. ರಾತ್ರಿ ಮತ ಎಣಿಕೆ ನಿಲ್ಲಿಸಿ ಬೆಳಿಗ್ಗೆ ಮತ್ತೆ ಅದನ್ನು ಆರಂಭಿಸುವ ವೇಳೆಗೆ ಚಿತ್ರಣವೇ ಬದಲಾಗಿಹೋಯ್ತು. ಬೈಡನ್ ನಿರಂತರ ಮುನ್ನಡೆಯನ್ನು ಕಾಯ್ದುಕೊಂಡು ಅಂತಿಮವಾಗಿ ಕೆಲವು ದಿನಗಳ ನಂತರ ಅವರು ವಿಜಯಶಾಲಿಯಾಗಿದ್ದಾರೆ ಎಂದು ಘೋಷಿಸಬೇಕಾಗಿ ಬಂತು! ನಮ್ಮಲ್ಲಿ ನಿರಂತರ 18 ಗಂಟೆಗಳ ಕಾಲ ಕೆಲಸ ಮಾಡಿದ ಚುನಾವಣಾ ಆಯೋಗ ಫಲಿತಾಂಶವನ್ನು ನಿಖರವಾಗಿ ಆರೋಪಕ್ಕೆಡೆಯಿಲ್ಲದಂತೆ ಕೊಟ್ಟು ಮುಗಿಸಿದರೆ, ಅಮೇರಿಕಾದಲ್ಲಿ ಒಟ್ಟಾರೆ ಮತ ಎಣಿಕೆಯ ಪ್ರಕ್ರಿಯೆಗೆ ಕಿಂಚಿತ್ತೂ ಗೌರವವಿಲ್ಲದಂತೆ ರಾತ್ರಿಯ ಬ್ರೇಕ್ ಅನ್ನು ಪಡೆಯಲಾಯ್ತು. ಈ ಖಾಲಿ ಅವಧಿಯಲ್ಲೇ ಬಲುದೊಡ್ಡ ಪ್ರಮಾಣದ ಮೋಸ ನಡೆದಿದೆ ಎನ್ನುವುದು ಟ್ರಂಪ್ ಬೆಂಬಲಿಗರ ವಾದ. ಇದುವರೆಗೂ ಟ್ರಂಪ್ ಮತ್ತವನ ಮಿತ್ರರು ಒದಗಿಸಿರುವ ದಾಖಲೆಗಳೂ ಹಾಗೆಯೇ ಇವೆ. ಮತ ಎಣಿಕೆಯ ದಿನವೂ ಅಂಚೆ ಮತಗಳು ಬಂದು ಬೀಳುತ್ತಲೇ ಇದ್ದವಲ್ಲದೇ ಬೆಳಿಗ್ಗೆ ಮತ ಎಣಿಕೆ ಮತ್ತೆ ಆರಂಭವಾಗುವ ವೇಳೆಗೆ ಬಂದ ಬಹುತೇಕ ಮತಗಳು ಜೊ ಬೈಡನ್ ಪರವಾಗಿಯೇ ಇದ್ದದ್ದು ನಿಸ್ಸಂಶಯವಾಗಿ ಅಚ್ಚರಿ ಹುಟ್ಟಿಸುವಂತೆಯೇ ಇವೆ. ಅಷ್ಟೇ ಅಲ್ಲದೇ, ಕೆಲವೆಡೆಗಳಲ್ಲಂತೂ ಜನಸಂಖ್ಯೆಗಿಂತ ಹೆಚ್ಚು ಮತಗಳು ದಾಖಲಾಗಿರುವುದು, ಆರೇಳು ವರ್ಷಗಳ ಹಿಂದೆ ತೀರಿಕೊಂಡಿರುವವರು ಮತ ಚಲಾಯಿಸಿರುವುದು, ಮತಪತ್ರ ಮನೆಗೆ ಬಂದಿದೆ ಎನ್ನುವ ದಿನಾಂಕಕ್ಕಿಂತಲೂ ಮುಂಚೆಯೇ ಅವರ ಮತ ದಾಖಲಾಗಿರುವುದು ಕಂಡು ಬಂದಿದೆ. ಮೇಲ್ನೋಟಕ್ಕೆ ಇವೆಲ್ಲವೂ ಆರೋಪಗಳೇ ಎನಿಸಿದರೂ ಅಲ್ಲಿನ ಪತ್ರಿಕೆಗಳು ಟ್ರಂಪ್ನ ವಿರುದ್ಧ ತೋಳೇರಿಸಿಕೊಂಡು ನಿಂತಿರುವುದಲ್ಲದೇ ಯಾವ ಕಾರಣಕ್ಕೂ ಅವರನ್ನು ಬೆಂಬಲಿಸಬಾರದೆಂದು ನಿಶ್ಚಯಿಸಿಬಿಟ್ಟಿವೆ. ಟ್ರಂಪ್ನ ಪತ್ರಿಕಾಗೋಷ್ಠಿಯ ವರದಿಗಳನ್ನು ಯಾವ ಪತ್ರಿಕೆಯೂ ಪ್ರಕಟಿಸುತ್ತಿಲ್ಲ. ವಿಪರೀತವೆಂಬಂತೆ ಟ್ರಂಪ್ನ ವಿರೋಧದ ಎಲ್ಲ ವರದಿಗಳೂ ವರ್ಣರಂಜಿತವಾಗಿಯೇ ಪ್ರಕಟವಾಗುತ್ತಿವೆ. ಸಿಎನ್ಎನ್ ಇತ್ತೀಚೆಗೆ ಟ್ರಂಪ್ ಅಂತರ್ರಾಷ್ಟ್ರೀಯ ಶೃಂಗಸಭೆಯೊಂದರಲ್ಲಿ ಪಾಲ್ಗೊಳ್ಳಲೇ ಇಲ್ಲವೆಂದು ವರದಿ ಮಾಡಿಬಿಟ್ಟಿತ್ತು. ವಾಸ್ತವವಾಗಿ ಟ್ರಂಪ್ ಪಾಲ್ಗೊಂಡಿದ್ದಲ್ಲದೇ ಭಾಷಣವನ್ನೂ ಮಾಡಿದ್ದರು. ಪತ್ರಿಕೆಗಳು ಹೇಗಾದರೂ ಮಾಡಿ ಟ್ರಂಪ್ರನ್ನು ಹೊರದಬ್ಬಿಬಿಡಬೇಕೆಂದು ಹಠ ಹಿಡಿದು ಕುಳಿತಿವೆ. ಆಸಾಮಿ ಬಡಪೆಟ್ಟಿಗೆ ಬಗ್ಗುವಂತೆ ಕಾಣುತ್ತಿಲ್ಲ. ಟ್ರಂಪ್ ಎಂದಿನಂತೆ ಬಲವಾಗಿಯೇ ಇದ್ದಾರೆ. ಅಮೇರಿಕಾದ ಪತ್ರಿಕೆಗಳೆಲ್ಲಾ ವಿರೋಧವಾಗಿ ನಿಂತು ಟ್ರಂಪ್ ಸೋಲುತ್ತಾರೆ ಎಂದು ಭವಿಷ್ಯ ನುಡಿದಾಗಲೂ, ಕರಿಯರನ್ನು ಎತ್ತಿಕಟ್ಟುವ ಬಲುದೊಡ್ಡ ಪ್ರಯತ್ನ ಮಾಡಿದಾಗಲೂ, ಟ್ರಂಪ್ ಗಳಿಸಿರುವ ಒಟ್ಟಾರೆ ವೋಟು ಎಂಥವನನ್ನೂ ಗಾಬರಿಗೀಡುಮಾಡುವಂಥದ್ದು. ಎಲ್ಲ ಬಗೆಯ ಕಾನೂನಿನ ಮಾರ್ಗಗಳನ್ನು ಅನ್ವೇಷಿಸುತ್ತಿರುವ ಟ್ರಂಪ್ ನಿಸ್ಸಂಶಯವಾಗಿ ಜೊ ಬೈಡನ್ನಿಂದ ಗೆಲುವನ್ನು ಕಸಿಯುವ ಬಲುದೊಡ್ಡ ಪ್ರಯತ್ನವನ್ನು ಮಾಡಲಿದ್ದಾರೆ! ಅದಕ್ಕೆ ಪೂರಕವಾಗಿ ರಷ್ಯಾದ ಅಧ್ಯಕ್ಷ ಪುತಿನ್ ಬೈಡನ್ರನ್ನು ಅಭಿನಂದಿಸಲು ನಿರಾಕರಿಸಿದ್ದಾರಲ್ಲದೇ ಪೂರ್ಣ ಫಲಿತಾಂಶ ಹೊರಬರುವವರೆಗೂ ಕಾಯುವೆ ಎಂದಿದ್ದಾರೆ. ಜಾಗತಿಕ ಮಟ್ಟದಲ್ಲಿ ಇದುವರೆಗೂ ಬೈಡನ್ನ ಗೆಲುವನ್ನು ಸಂಭ್ರಮಿಸಿದಂತೆ ಕಾಣುತ್ತಿಲ್ಲ. ಯಾವ ಹೊತ್ತಿನಲ್ಲಿ ಏನು ಬೇಕಾದರೂ ಆಗಬಹುದು ಎಂಬ ದೃಷ್ಟಿ ಇಟ್ಟುಕೊಂಡೇ ಪ್ರತಿಯೊಬ್ಬರೂ ಕಾಯುತ್ತಿದ್ದಾರೆ.


ಇಷ್ಟೆಲ್ಲಾ ಏಕೆ ಹೇಳಬೇಕಾಯ್ತೆಂದರೆ ಭಾರತದ ಸಾಧನೆಗಳನ್ನು ಸದಾ ಅಮೇರಿಕಾದೊಂದಿಗೆ ತುಲನೆ ಮಾಡುವ ಇಲ್ಲಿನ ಬುದ್ಧಿಜೀವಿಗಳು ಒಮ್ಮೆ ಇವೆಲ್ಲವನ್ನೂ ಅರಿತುಕೊಳ್ಳಬೇಕಾಗಿದೆ. 130 ಕೋಟಿ ಜನರನ್ನು ಹೊಂದಿರುವ ಭಾರತ ವ್ಯವಸ್ಥಿತವಾದ ಚುನಾವಣಾ ಪ್ರಕ್ರಿಯೆಯನ್ನು ನಡೆಸುವುದಲ್ಲದೇ ಗೊಂದಲಕ್ಕೆಡೆಯಿಲ್ಲದಂತೆ ಮತ ಎಣಿಕೆಯನ್ನು ಮುಗಿಸಿ ಫಲಿತಾಂಶವನ್ನು ಘೋಷಿಸುತ್ತದೆ. ವೋಟಿಂಗ್ ಮೆಷಿನ್ಗಳನ್ನು ಜನ ಸಂದೇಹಿಸಿದಾಗ ಅವರು ಹಾಕಿದ ವೋಟು ಪಕ್ಕದ ಮೆಷಿನ್ನಲ್ಲಿ ಕಾಣುವಂತೆ ಮಾಡಿ ಚೀಟಿಯನ್ನು ಮುದ್ರಿಸಿ ಎರಡನ್ನೂ ತಾಳೆ ಮಾಡಿ ತೋರಿದ ಕೀತರ್ಿ ಚುನಾವಣಾ ಆಯೋಗದ್ದು. ಕಾಂಗ್ರೆಸ್ಸು ಮತ್ತಿತರ ಪ್ರತಿಪಕ್ಷಗಳು ತಾವು ಗೆದ್ದಾಗ ಈ ಮಾದರಿಯನ್ನು ಹೊಗಳುತ್ತಾರೆ. ಸೋತಾಗ ಎಲ್ಲ ಹೊಣೆಗಾರಿಕೆಯನ್ನು ಮೆಷಿನ್ನ ಮೇಲೆ ಹಾಕಿ ಕೈತೊಳೆದುಕೊಂಡುಬಿಡುತ್ತಾರೆ. ಈ ಎಲ್ಲ ಅರೆಪಕ್ವ ಜೀವಿಗಳನ್ನು ಬದಿಗಿಟ್ಟು ನೋಡಿದರೆ ಭಾರತೀಯ ಚುನಾವಣಾ ವ್ಯವಸ್ಥೆ ಅಮೇರಿಕನ್ನರದಕ್ಕಿಂತಲೂ ಸಾವಿರ ಪಾಲು ಉತ್ತಮವಾಗಿದೆ. ಬಹುಶಃ ಮುಂದಿನ ಬಾರಿ ಅಮೇರಿಕಾದ ಚುನಾವಣೆಯನ್ನು ನಡೆಸಿ ಫಲಿತಾಂಶ ಘೋಷಿಸುವ ಜವಾಬ್ದಾರಿಯನ್ನು ನಮ್ಮ ಚುನಾವಣಾ ಆಯೋಗವೇ ವಹಿಸಿಕೊಳ್ಳಬಹುದೇನೋ! ಭಾರತ ಬೆಳೆದು ನಿಂತಿರುವ ಪರಿ ಇದು. ಹೊಸ ಭಾರತವೆಂದರೆ ಸುಮ್ಮನೆ ಅಲ್ಲ.

ಇನ್ನಾದರೂ ನಾವು ನಮ್ಮನ್ನು ಚಿಕ್ಕವರನ್ನಾಗಿಸಿಕೊಂಡು ಎದುರಿಗಿರುವವರನ್ನು ವೈಭವೀಕರಿಸಿ ನೋಡುವುದನ್ನು ಬಿಡಬೇಕು. ಜಗತ್ತಿನ ಶ್ರೇಷ್ಠ ಸಂಗತಿಗಳನ್ನು ಪಡೆದುಕೊಳ್ಳುವ ಹೊತ್ತಲ್ಲೇ ಜಗತ್ತಿಗೆ ಶ್ರೇಷ್ಠವಾದುದನ್ನು ಕೊಡುವ ತಾಕತ್ತೂ ನಮಗಿದೆ ಎಂಬುದನ್ನು ನಾವೀಗ ಅರಿಯಬೇಕಿದೆ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top