National

ಅತ್ಯಾಚಾರ ಪ್ರಕರಣದಲ್ಲಿ ಮಿಷನರಿ ಶಾಲೆಯ ಫಾದರ್ ಸೇರಿದಂತೆ ಐವರು ಅಪರಾಧಿ – ನ್ಯಾಯಾಲಯ ತೀರ್ಪು!

ಕಳೆದ ವರ್ಷ ಐವರು ಬುಡಕಟ್ಟು ಜನಾಂಗಕ್ಕೆ ಸೇರಿದ ಯುವತಿಯರ ಮೇಲೆ ಗುಂಪು ಅತ್ಯಾಚಾರ ನಡೆಸಲಾಗಿತ್ತು. ಅದಕ್ಕೆ ಸಂಬಂಧಪಟ್ಟಂತೆ ಜಾರ್ಖಂಡಿನ ಖುಂತಿಯಲ್ಲಿ ನ್ಯಾಯಾಲಯ ಕ್ರಿಶ್ಚಿಯನ್ ಮಿಷನರಿ ಶಾಲೆಯ ಮುಖ್ಯಸ್ಥ ಫಾದರ್ ಅಲ್ಫೋನ್ಸೊ ಐಂದ್ ಸೇರಿದಂತೆ ಆರು ಜನರನ್ನು ಅಪರಾಧಿ ಎಂದು ತೀರ್ಪು ನೀಡಿದೆ. ಮೇ 15 ರಂದು ಶಿಕ್ಷೆಯ ಪ್ರಮಾಣವನ್ನು ನ್ಯಾಯಮೂರ್ತಿ ರಾಜೇಶ್ ಕುಮಾರ್ ಅವರು ತಿಳಿಸಲಿದ್ದಾರೆ.

ಜೂನ್ 19, 2018 ರಂದು 11 ಜನರ ಯುವತಿಯರ ತಂಡವೊಂದು ಖುಂತಿಯ ಕೊಚಂಗ್ ಎಂಬ ಹಳ್ಳಿಯಲ್ಲಿರುವ ಆರ್ ಸಿ ಮಿಷನ್ ಶಾಲೆಗೆ ಮಾನವ ಕಳ್ಳಸಾಗಾಣಿಕೆಯ ವಿರುದ್ಧ ಜಾಗೃತಿ ಮೂಡಿಸಲು ನಾಟಕ ಪ್ರದರ್ಶನಕ್ಕಾಗಿ ತೆರಳಿದ್ದರು.

ಶಾಲೆಯಿಂದ ಅವರನ್ನು ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾದ ಕೆಲವು ಸದಸ್ಯರು ಅಪಹರಿಸಿ ಅತ್ಯಾಚಾರವೆಸಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಎಫ್ ಐ ಆರ್ ಗಳನ್ನು ದಾಖಲಿಸಲಾಗಿತ್ತು. ಅತ್ಯಾಚಾರವೆಸಗಿದವರ ವಿರುದ್ಧ ಯಾವುದೇ ಸುಳಿವು ಅಲ್ಲಿನ ಪ್ರೀಸ್ಟ್ ಸಹ ನೀಡಿರಲಿಲ್ಲ.

ಇದೀಗ ನ್ಯಾಯಾಲಯದಲ್ಲಿ ಎಲ್ಲರೂ ಅಪರಾಧಿಗಳೆಂದು ಸಾಬೀತಾಗಿದೆ.

Click to comment

Leave a Reply

Your email address will not be published. Required fields are marked *

Most Popular

To Top