National

ಅತ್ಯಾಚಾರಿ ಪಾದ್ರಿಗಳ ವಿರುದ್ಧ ಮಾತ್ರ ಬುದ್ಧಿಜೀವಿಗಳ ಸದ್ದಿಲ್ಲ!

ಮೂರು ವರ್ಷದ ಹಿಂದೆ ಕೇರಳದಲ್ಲಿ ಹೆಣ್ಣುಮಗಳೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅದರ ಮೂಲ ಹಿಡಿದು ಹೊರಟಾಗ ಇತ್ತೀಚೆಗೆ ಬೆಳಕಿಗೆ ಬಂದ ಸಂಗತಿಯೆಂದರೆ, ಆಕೆ ತಪ್ಪೊಪ್ಪಿಗೆ ಮಾಡಿಕೊಂಡಿದ್ದ ಹೇಳಿಕೆಯನ್ನು ಆ ಚರ್ಚಿನ ಪಾದ್ರಿಯೊಬ್ಬ ಬಹಿರಂಗಗೊಳಿಸಿದ್ದ. ಅವಮಾನ ತಾಳಲಾರದೇ ಆಕೆ ತನ್ನ ಬದುಕನ್ನೇ ಕೊನೆಗೊಳಿಸಿಕೊಂಡಳು.

ಕ್ರಿಶ್ಚಿಯನ್ನರು ತಾವೇನಾದರೂ ತಪ್ಪು ಮಾಡಿದ್ದಲ್ಲಿ ಚರ್ಚಿನಲ್ಲಿ ಪಾದ್ರಿಯ ಎದುರು ಆ ತಪ್ಪನ್ನು ಹೇಳಿಕೊಳ್ಳುವ ಪ್ರಕ್ರಿಯೆಯನ್ನು ತಪ್ಪೊಪ್ಪಿಗೆ ಅಥವಾ ಕನಫೆಶನ್ ಎನ್ನುತ್ತಾರೆ. ತಪ್ಪೊಪ್ಪಿಗೆ ಅವರಲ್ಲಿ ಮೊದಲಿನಿಂದಲೂ ಬಂದಿರುವ ಅಭ್ಯಾಸ. ಆದರೆ ಈ ಪದ್ಧತಿ ದುರ್ಬಳಕೆಯಾಗುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿವೆ.

ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕೇರಳದ ಮಲಂಕರ ಆರ್ಥೋಡಕ್ಸ್ ಸಿರಿಯನ್ ಚರ್ಚಿನಲ್ಲಿ ನಾಲ್ವರು ಪಾದ್ರಿಯರು ತಪ್ಪೊಪ್ಪಿಗೆ ಮಾಡಿಕೊಂಡಿದ್ದ ಮಹಿಳೆಯೋರ್ವಳಿಗೆ ಬೆದರಿಕೆ ಹಾಕಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಈ ಹಿಂದೆಯೂ ಚರ್ಚಿನ ಪಾದ್ರಿಗಳು ಮಹಿಳೆಯರ ಮೇಲೆ ಅತ್ಯಾಚಾರವೆಸಗಿರುವ ಹಲವು ಘಟನೆಗಳು ಬೆಳಕಿಗೆ ಬಂದಿವೆ. ಇತ್ತೀಚೆಗಷ್ಟೇ ಕೇರಳದ ನನ್ ಒಬ್ಬರು 2014 ರಿಂದ 2016 ರ ಅವಧಿಯಲ್ಲಿ ಕೊಟ್ಟಾಯಂನಲ್ಲಿ ಜಲಂಧರ್ ಬಿಷಪ್ ಫ್ರಾಂಕೂ ಮುಲಕ್ಕಲ್ ತನ್ನ ಮೇಲೆ ಅತ್ಯಾಚಾರವೆಸಗಿದ್ದ ಎಂದು ಕೊಟ್ಟಾಯಂ ಪೊಲೀಸರ ಬಳಿ ದೂರು ದಾಖಲಿಸಿದ್ದರು.

ಈ ಎಲ್ಲ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನ್ಯಾಷನಲ್ ಕಮಿಷನ್ ಫಾರ್ ವುಮೆನ್ ತಪ್ಪೊಪ್ಪಿಗೆ ಎಂಬ ಪದ್ಧತಿಯನ್ನು ನಿಷೇಧಿಸಬೇಕೆಂದು ಹೇಳಿಕೆ ನೀಡಿದೆ. ‘ಚರ್ಚಿನಲ್ಲಿ ಪಾದ್ರಿಗಳು ಹೆಣ್ಣುಮಕ್ಕಳಿಗೆ ತಮ್ಮ ರಹಸ್ಯ ವಿಚಾರಗಳನ್ನು ಹೇಳುವಂತೆ ಒತ್ತಡ ಹೇರುತ್ತಾರೆ ಮತ್ತು ಅತ್ಯಾಚಾರವೆಸಗುತ್ತಾರೆ. ನಮ್ಮ ಬಳಿ ಈ ರೀತಿಯ ಪ್ರಕರಣವೊಂದು ದಾಖಲಾಗಿದೆ. ಈ ರೀತಿಯ ಪ್ರಕರಣಗಳು ಹಲವು ಇರಬಹುದು’ ಎಂದು ನ್ಯಾಷನಲ್ ಕಮಿಷನ್ ಫಾರ್ ವುಮೆನ್ ನ ಮುಖ್ಯಸ್ಥೆ ರೇಖಾ ಶರ್ಮಾ ಅವರು ತಿಳಿಸಿದ್ದಾರೆ. ಇವುಗಳ ವಿಚಾರಣೆಗೆಂದೇ ಒಂದು ಕಮಿಟಿ ರಚಿಸಿ, ಅಲ್ಲಿ ದೊರೆತ ಮಾಹಿತಿಯನ್ನು ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ ಮತ್ತು ಗೃಹ ಸಚಿವರಾದ ರಾಜ್ ನಾಥ್ ಸಿಂಗ್ ರಿಗೆ ತಲುಪಿಸಲಾಗಿದೆ.

ಕೇರಳದ ಕ್ಯಾಥೋಲಿಕ್ ಬಿಷಪ್ ಕೌನ್ಸಿಲ್ (ಕೆಸಿಬಿಸಿ) ನಿಂದ ಈ ವಿಚಾರವಾಗಿ ಭಾರಿ ಪ್ರತಿರೋಧ ವ್ಯಕ್ತವಾಗಿದೆ. ಸಂವಿಧಾನದಲ್ಲಿ ಹೇಳಿರುವ ಧಾರ್ಮಿಕ ಹಕ್ಕನ್ನು ಇದು ಕಸಿದುಕೊಂಡಂತಾಗುತ್ತದೆ ಎಂಬ ಪೊಳ್ಳು ವಾದವನ್ನು ಕೆಸಿಬಿಸಿ ಮುಂದಿಟ್ಟಿದೆ.

ಶಾಂತಿ ಪಾಠ ಮಾಡುವ ಚರ್ಚುಗಳಿಂದ ಒಂದರ ನಂತರ ಒಂದು ಅತ್ಯಾಚಾರ ಪ್ರಕರಣಗಳು ಹೊರಬರುತ್ತಿವೆ. ಮಹಿಳಾ ಹೋರಾಟಗಾರರು ಇದರ ಕುರಿತು ಒಂದೂ ಮಾತನ್ನಾಡದಿರುವುದು ಹಲವರನ್ನು ಅಚ್ಚರಿಗೆ ನೂಕಿದೆ!

Click to comment

Leave a Reply

Your email address will not be published. Required fields are marked *

Most Popular

To Top