Desi

ಅಕ್ಬರನ ಸೈನ್ಯವನ್ನೇ ಹಿಮ್ಮೆಟ್ಟಿಸಿದ ಧೀರಮಾತೆ ರಾಣಿ ದುರ್ಗಾವತಿ!

ಈಗಿನ ಮಧ್ಯಪ್ರದೇಶದ ಉತ್ತರಕ್ಕೆ ಇರುವ ಒಂದು ಭಾಗ ಗೋಂಡ್ವಾನ. 16ನೇ ಶತಮಾನದಲ್ಲಿ ಅಲ್ಲಿದ್ದ ಅನೇಕ ಪಾಳೆಯಗಳಲ್ಲಿ ಚಾಂದೇಲರ ದೊರೆ ಕೀತರ್ಿಸಿಂಹ ಪ್ರಬಲನಾಗಿದ್ದ. ಕಾಲಂಜರ ದುರ್ಗ ಎನ್ನುವುದು ಅವನ ರಾಜಧಾನಿಯಾಗಿತ್ತು. ಈ ಕೀತರ್ಿಸಿಂಹನ ಮಗಳೇ ದುರ್ಗಾವತಿ. ಅಕ್ಟೋಬರ್ 5, 1524 ರಲ್ಲಿ ದುರ್ಗಾವತಿ ಜನಿಸಿದಳು. ಗಂಡು ಮಕ್ಕಳಿಲ್ಲದಿದ್ದ ಕಾರಣ ತಂದೆ ಮಗಳೇ ರಾಜ್ಯವನ್ನಾಳಲಿ ಎಂದು ರಾಜಯೋಗ್ಯವಾದ ಎಲ್ಲ ಶಿಕ್ಷಣ-ತರಬೇತಿಗಳನ್ನು ಕೊಡಿಸಲು ಏಪರ್ಾಟು ಮಾಡಿದ.


ದುಗರ್ಾಳದು ಅಸಾಧಾರಣ ಧೀಶಕ್ತಿ. ರಾಜ್ಯಶಾಸ್ತ್ರ, ಧರ್ಮಶಾಸ್ತ್ರ, ವ್ಯಾಯಾಮ, ಯೋಗಾಸನ, ಕತ್ತಿವರಸೆ, ಕುದುರೆ ಸವಾರಿ, ಈಜು ಹೀಗೆ ಎಲ್ಲ ವಿದ್ಯೆಗಳನ್ನೂ ಶ್ರದ್ಧೆಯಿಂದ ಕಲಿತು ಪಾರಂಗತಳಾದಳು. ದುಗರ್ಾವತಿಗೆ ಶಾಸ್ತ್ರಕ್ಕಿಂತ ಶಸ್ತ್ರ ವಿದ್ಯೆಯೇ ಹೆಚ್ಚು ಪ್ರಿಯವಾದದ್ದು. ಹುಲಿ, ಚಿರತೆಗಳ ಬೇಟೆಯಾಡುವುದು ಅಚ್ಚುಮೆಚ್ಚು. ಪ್ರಾಪ್ತವಯಸ್ಕಳಾದಾಗ ಗೋಂಡ್ವಾನದ ರಾಜ ಸಂಗ್ರಮ ಸಿಂಹನ ಹಿರಿಯ ಮಗ ದಳಪತಿ ಸಿಂಹನೊಂದಿಗೆ ವಿವಾಹವಾಯಿತು.
ಸಂಪದ್ಭರಿತವಾದ ಗೊಂಡ್ವಾನವನ್ನು ಗೆಲ್ಲಲು ಶೇರ್ಶಹ ಎಂಬ ಮುಸಲ್ಮಾನ ದಾಳಿ ನಡೆಸಿದ. ದುಗರ್ಾವತಿಯ ಅಸೀಮ ಸಾಹಸದ ಮುಂದೆ ಗೆಲ್ಲಲಾರದೇ ಕುಟಿಲ ತಂತ್ರಹೂಡಿ ಗೆಲ್ಲುವ ಯೋಜನೆ ಮಾಡಿದ. ದುಗರ್ಾವತಿಯ ಸಮಯಸ್ಫೂತರ್ಿ ಮಿಂಚಿನಂತೆ ಕೆಲಸ ಮಾಡಿ ದೇಶದ್ರೋಹಿಗಳ ಒಳಸಂಚನ್ನು ಬಹಿರಂಗಪಡಿಸಿದಳು. ತಾನೇ ಯುದ್ಧದ ಸೇನಾಧಿಪತ್ಯ ವಹಿಸಿ ಶತ್ರುಗಳನ್ನು ಧೂಳೀಪಟ ಮಾಡಿದಳು!!

ದುಗರ್ಾವತಿಯ ತಂದೆ ತೀರಿಕೊಂಡರು. ಕೆಲಕಾಲದಲ್ಲಿ ಪತಿಯೂ ಸ್ವರ್ಗಸ್ಥನಾದ. ದುರ್ಗಾವತಿಯ ಮಗ ವೀರ ನಾರಾಯಣ ಇನ್ನೂ ಬಾಲಕ. ರಾಜ್ಯವಾಳಲು ಆತನಿಗೆ ಸಾಧ್ಯವಿಲ್ಲ! ಎಂತಹ ಕಷ್ಟ ಸಂದರ್ಭದಲ್ಲೂ ಧೃತಿಗೆಡದ ದುರ್ಗಾವತಿ ಪ್ರಜೆಗಳನ್ನು ರಕ್ಷಿಸುವ, ರಾಜ್ಯವಾಳುವ ಅಗ್ನಿದೀಕ್ಷೆಯನ್ನು ತೊಟ್ಟಳು. ರಾಣಿಯಾಗುವುದು ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುವುದಕ್ಕಲ್ಲ ಎಂದರಿತ ದುರ್ಗಾವತಿ ಹಳ್ಳಿ-ಹಳ್ಳಿಗೂ ಭೇಟಿ ನೀಡಿ ದೀನದಲಿತರ ಕಷ್ಟಗಳನ್ನು ವಿಚಾರಿಸಿ, ಬೇಕಾದ ನೆರವನ್ನು ನೀಡುತ್ತಿದ್ದಳು. ಆಕೆಯ ರಾಜ್ಯದ 23,000 ಹಳ್ಳಿಗಳಲ್ಲಿ 12,000 ಹಳ್ಳಿಗಳನ್ನು ಸ್ವತಃ ರಾಣಿಯೇ ನೋಡಿಕೊಳ್ಳುತ್ತಿದ್ದಳು. ಶೂರರೂ ಸ್ವಾಮಿನಿಷ್ಠರೂ ಆದವರನ್ನು ಗುರುತಿಸಿ ಸೈನ್ಯಾಧಿಕಾರಿಗಳನ್ನಾಗಿ ಮಾಡಿದಳು. ಬೇಹುಗಾರಿಕೆಯನ್ನು ಬಲಪಡಿಸಿದಳು. ಜಬಲ್ಪುರ ಎಂಬಲ್ಲಿ ರಾಣಿತಲ್ ಎಂಬ ಜಲಾಶಯವನ್ನು ಕಟ್ಟಿಸಿದಳು. ಯಾವ ದೊರೆಗೂ ಕಡಿಮೆ ಇಲ್ಲದಂತೆ ರಾಜ್ಯವಾಳತೊಡಗಿದಳು; ಪ್ರಜೆಗಳ ಮೆಚ್ಚಿನ ರಾಣಿಯಾದಳು!
ಮಾಳವರ ಬಾಜ್ ಬಹಾದೂರ್ ಮತ್ತು ಫತೇಖಾನ್ರು ದಾಳಿ ಮಾಡಿದಾಗ ರಾಣಿ ದುರ್ಗಾವತಿ ಎರಡೇ ದಿನದಲ್ಲಿ ಅವರನ್ನು ಸೋಲಿಸಿ ಓಡಿಸಿದಳು. ಇದರ ಹಿಂದು-ಹಿಂದೆಯೇ ಸಾಮ್ರಾಜ್ಯ ವಿಸ್ತರಣೆಯ ದಾಹದಿಂದ ಮೊಗಲ್ ಚಕ್ರವತರ್ಿ ಅಕ್ಬರ್ ಆಕ್ರಮಣ ಮಾಡಿದ. ದುಗರ್ಾವತಿ ಧೃತಿಗೆಡದೆ ಎರಡು ಬಾರಿ ಅಕ್ಬರನ ಸೈನ್ಯವನ್ನು ಸೋಲಿಸಿ ಹಿಮ್ಮೆಟ್ಟಿಸಿದಳು.


ಮೂರನೆಯ ಬಾರಿ ಅಕ್ಬರನ ಸೇನೆ ಯುದ್ಧಕ್ಕೆ ಬಂದಾಗ ರಾಣಿ ದುರ್ಗಾವತಿ ಸೇನೆ ಬಹಳ ಕಷ್ಟವನ್ನನುಭವಿಸಬೇಕಾಯಿತು. ಅಕ್ಬರನದು ಹೊಸ ಹೊಸ ಆಯುಧಗಳನ್ನುಳ್ಳ ತರಬೇತಿ ಹೊಂದಿದ ಸೇನೆ. ದುರ್ಗಾವತಿಯದು ಹಾಗಲ್ಲ, ಪುರಾತನ ಆಯುಧಗಳನ್ನು ಹಿಡಿದು ತಾಯ್ನಾಡನ್ನು ರಕ್ಷಿಸಲು ನಿಂತಿರುವ ದೇಶಭಕ್ತರ ಸೇನೆ. ಒಳಗಿನವರೇ ಶತ್ರುಗಳ ಜೊತೆಗೂಡಿ ಮಾಡಿದ ಸಂಚಿಗೆ ಸೇನೆ ಸೋತಿತು. ರಾಣಿ ದುರ್ಗಾವತಿ ವೀರಾವೇಶದಿಂದ ಹೋರಾಡಿದಳು. ಎರಡು ಬಾಣಗಳು ಬಂದು ಆಕೆಯ ಕಿವಿಯನ್ನು ಮತ್ತು ಕತ್ತುಗಳನ್ನು ಸೀಳಿತು. ಇಷ್ಟಾದರೂ ರಾಣಿ ದುರ್ಗಾವತಿ ಶರಣಾಗತಿಗೆ ಒಪ್ಪಲಿಲ್ಲ. ಪರಕೀಯರಿಗೆ ಶರಣಾಗುವುದಕ್ಕಿಂತ ಆತ್ಮಾರ್ಪಣೆ ಮಾಡಿಕೊಳ್ಳುವುದು ಲೇಸೆಂದು ಅರಿತ ರಾಣಿ, ತನ್ನ ಪತಿ ನೀಡಿದ ‘ಭವಾನಿ’ ಎಂಬ ಕಠಾರಿಯಿಂದ ಇರಿದುಕೊಂಡು ಆತ್ಮಾರ್ಪಣೆ ಮಾಡಿಕೊಂಡಳು!

ದೇಶಕ್ಕಾಗಿ ಮಾಡುವ ಯಾವ ಸೇವೆಯೂ ಕೀಳಲ್ಲ; ಯಾವ ತ್ಯಾಗವೂ ದೊಡ್ಡದಲ್ಲ ಎಂದು ರಾಣಿ ತನ್ನನ್ನು ತಾನು ರಾಜ್ಯದ ಹಿತಕ್ಕಾಗಿ ಅಪರ್ಿಸಿಕೊಂಡಳು. ಸ್ವದೇಶ, ಸ್ವಾಭಿಮಾನಗಳನ್ನು ಎಂದೂ ಬಿಟ್ಟುಕೊಡಲಿಲ್ಲ ಈ ಧೀರ ಮಾತೆ!! 1983 ರಲ್ಲಿ ಮಧ್ಯಪ್ರದೇಶದ ಸಕರ್ಾರ ರಾಣಿಯ ಜ್ಞಾಪಕಾರ್ಥ ಜಬಲ್ಪುರದ ವಿಶ್ವವಿದ್ಯಾಲಯವನ್ನು ರಾಣಿ ದುರ್ಗಾವತಿ ವಿಶ್ವವಿದ್ಯಾಲಯ ಎಂದು ಮರು ನಾಮಕರಣ ಮಾಡಿದರು.

Click to comment

Leave a Reply

Your email address will not be published. Required fields are marked *

Most Popular

To Top